Thursday 9 April 2015

ಭಾಷಾ ಚಟುವಟಿಕೆಗಳು-ಭಾಷಾಸಾಮರ್ಥ್ಯ ಹೆಚ್ಚಿಸುವುದು

   ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಜ್ಜಾಗಲು ಸಹಾಯವಾಗವಂತೆ ರಜಾ ದಿನಗಳಲ್ಲಿ ವಿದ್ಯಾರ್ಥಿಗಳು ಆಟವಾಡಿಕೊಂಡು ಮಾಡಬಹುದಾದ ಭಾಷಾ ಚಟುವಟಿಕೆಗಳು. 
   ರಜೆಯ ಸದುಪಯೋಗದ ಜೊತೆಗೆ ಭಾಷಾಕೌಶಲಗಳನ್ನು ಬೆಳೆಸಿಕೊಳ್ಳಲು ಪೂರಕವಾಗುವುದರ ಜೊತೆಗೆ ರಂಜನೆಯನ್ನೂ ನೀಡುತ್ತವೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಂದ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿ ಮಾಡಿಸಲು ಶಿಕ್ಷಕರಿಗೆ ನೆರವೂ ಆಗುತ್ತದೆ
1.  ಚಂದ್ರ, 
   ಸೂರ್ಯ, 
   ಹೂವು, 
   ಮಗು, 
   ತಾಯಿ, 
   ತಂದೆ, 
   ಕನ್ನಡ 
   ನಾಡು ನುಡಿ. – ಈ ವಿಷಯಗಳಿಗೆ ಸಂಬಂಧಿಸಿದಂತೆ ರಚನೆಯಾಗಿರುವ ಕವನ (ಪದ್ಯ)ಗಳನ್ನು ಸಂಗ್ರಹಿಸಿ ಬರೆಯಿರಿ. 
·       ಕನಿಷ್ಠ ನಾಲ್ಕು ವಿಷಯಗಳನ್ನಾದರೂ ಆಯ್ಕೆಮಾಡಿಕೊಳ್ಳಬೇಕು. 
·        ಪ್ರತಿ ವಿಷಯಕ್ಕೂ ನಾಲ್ಕು ರಚನೆಯನ್ನಾದರೂ ಸಂಗ್ರಹಿಸಲೇ ಬೇಕು.
·        ಸಾಧ್ಯವಾದರೆ ನೀವೇ ಸ್ವಂತವಾಗಿ ಕವನವನ್ನು ರಚಿಸಲು ಪ್ರಯತ್ನ ಮಾಡಿರಿ.
2.     ಮೊದಲ ಮತ್ತು ಕೊನೆಯ ಅಕ್ಷರ ಒಂದೇ ಇರುವಂತೆ ಮೂರು ಅಕ್ಷರದ ಪದಗಳನ್ನು ಪಟ್ಟಿಮಾಡಿ ಬರೆಯಿರಿ.
·        ಉದಾಹರಣೆಗೆ :

                      .

                     

·        ಹತ್ತು ಪದಗಳಿಗೆ ಕಡಿಮೆ ಇಲ್ಲದಂತೆ ಬರೆಯಬೇಕು.
3.     ಮಧ್ಯದ ಅಕ್ಷರ ಒಂದೇ ಇರುವಂತೆ ಮೂರು, ಐದು, ಏಳು, ಒಂಬತ್ತು ಅಕ್ಷರಗಳ ಪದಗಳನ್ನು ರಚಿಸಲು ಪ್ರಯತ್ನಿಸಿರಿ.
·        ಉದಾಹರಣೆ:
                  ಕನ್ನ

                    ಬಿನ್ನ, 
                    ಕಿನ್ನರಿ,
                    ನ್ನಡಿ, 
                    ನ್ನಣೆ, 
                    ನ್ನತಿ
 4.     ಬೇರೆ ಬೇರೆ ಅರ್ಥವನ್ನು ಕೊಡುವ ಪದಗಳನ್ನು ಸ್ಮರಿಸಿ ವಾಕ್ಯಗಳನ್ನು ರಚಿಸಿರಿ.
·        ಉದಾಹರಣೆ: ಹೊಳೆ, ಕಾಡು

  • ವಾಕ್ಯರಚನೆ ಹೊಳೆ : ಹರಿಯವ ಹೊಳೆಯಲ್ಲಿ ಹೊಳೆವ ನಕ್ಷತ್ರಗಳನ್ನು ನೋಡುತ್ತಿದ್ದ ಕವಿಯ ಮನಸ್ಸಿನಲ್ಲಿ ಅನೇಕಾನೇಕ ವಿಚಾರಗಳು ಹೊಳೆದವು.
  • ಹೊಳೆಯಲ್ಲಿ ಈಜಿವುದೆಂದರೆ ನನಗೆ ಎಲ್ಲಿಲ್ಲದ ಸಂತಸ. 
  • ನೀರಿನ ತೊಟ್ಟಿಗೆ ಇಳಿದಾಗ ಆರ್ಕಿಮಿಡೀಸ್ ಗೆ ರಾಜನ ಸಮಸ್ಯೆಗೆ ಪರಿಹಾರ ಹೊಳೆಯಿತು.
  •  ಹೊಳೆಯುವ ಮಿಂಚು ಕಣ್ಣನ್ನು ಕೋರೈ
  •  ವಾಕ್ಯರಚನೆ ಕಾಡು : ಕಾಡಿನಲ್ಲೇ ವಿಹರಿಸುತ್ತಿರಬೇಕೆಂಬ ಭಾವನೆ  ಸದಾ ಕುವೆಂಪುರವರ ಮನವನ್ನು ಕಾಡುತ್ತಿತ್ತು.
  •  ಮುಂದಿನ ತರಗತಿಗೆ ಪ್ರವೇಶ ಪಡೆಯುವ ಮುನ್ನ ಆ ಹಂತಕ್ಕೆ ಅಗತ್ಯವಾದ ಸಾಮರ್ಥ್ಯವನ್ನು ನಾನು ಬೆಳೆಸಿಕೊಳ್ಳಲೇ ಬೇಕೆಂಬ ಭಾವನೆ ವಿದ್ಯಾರ್ಥಿಗಳ ಮನಸ್ಸನ್ನು ಕಾಡುವುದು ಮುಂದಿನ ಸಾಧನೆಗೆ ಸೋಪಾನ.
  •  ಕಾಡು ಉಳಿದರೆ ಮಾತ್ರವೇ ನಾಡು ಉಳಿಯಲು ಸಾಧ್ಯ.
5.     ಥಟ್ ಅಂತ ಹೇಳಿ ದೂರದರ್ಶನ ಕಾರ್ಯಕ್ರಮಗಳನ್ನು ನೋಡಿ. ಆ ಕಾರ್ಯಕ್ರಮದಲ್ಲಿ ಕೇಳುವ ಕನಿಷ್ಠ 25 ಪ್ರಶ್ನೆಗಳನ್ನು ಉತ್ತರ ಸಹಿತ ಬರೆಯಿರಿ
6.     25ಕ್ಕೆ ಕಡಿಮೆ ಇಲ್ಲದಂತೆ ಕನ್ನಡಲ್ಲಿರುವ ಜಾಹೀರಾತುಗಳನ್ನು ಸಂಗ್ರಹಿಸಿ. ಅವುಗಳಲ್ಲಿರು ಪದ ಮತ್ತು ವಾಕ್ಯಗಳನ್ನು ಅಂದವಾಗಿ ಬರೆಯಿರಿ.
7.     ದಿನ ಪತ್ರಿಕೆ ವಾರಪತ್ರಿಕೆಯಲ್ಲಿ ಬರುವ ಜಾನಪದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸಿ. ಆ ಚಿತ್ರಗಳಿಗೆ ಸೂಕ್ತ ಶೀರ್ಷಿಕೆಗಳನ್ನು ಕೊಡಿರಿ.
8.     ದಿನ ಪತ್ರಿಕೆ ವಾರಪತ್ರಿಕೆಗಳಲ್ಲಿ ಬರುವ ಪದರಂಗಗಳನ್ನು (10ಕ್ಕೆ ಕಡಿಮೆ ಇಲ್ಲದಂತೆ) ಸಂಗ್ರಹಿಸಿರಿ.  
9.     ಹತ್ತು ಗಾದೆ ಮತ್ತು ಇಪ್ಪತ್ತೈದು ಒಗಟುಗಳನ್ನು ಸಂಗ್ರಹಿಸಿ ಚಿತ್ರಸಹಿತ ವಿವರಿಸಿರಿ.
10. ಮೂರು, ನಾಲ್ಕು, ಐದು, ಆರು ಪದಗಳ ಸೋಪಾನವನ್ನು ರಚಿಸಿರಿ.

·         ಉದಾಹರಣೆ :







No comments:

Post a Comment