Monday 4 July 2016

ಅರಿತವರಾರಿಹರು?

ಎಂದೋ ಎಂತೋ ಹೇಗೋ ಎಲ್ಲೋ
ಎಂಬುದ ಖಚಿತದಲರಿತವರಾರಿಹರು?
ಜಾತಸ್ಯ ಮರಣಂಧ್ರುವಂ ಎಂಬರು
ವಿಧಿಯ ಲಿಖತವದೆಂತೋ ನನಕಂದ||

Sunday 3 July 2016

'ಶಬರಿ' ಪಾಠ ಪ್ರಶ್ನೆ ಪತ್ರಿಕೆಗಳು


ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆಬೆಂಗಳೂರು-03
ಶಬರಿ
ಪ್ರಶ್ನೆ ಪತ್ರಿಕೆ -1
1.  ಪು.ತಿ. ಅವರ ಜನ್ಮ ಸ್ಥಳ ಯಾವುದು?
2.  ಪು.ತಿ. ಅವರ ಪೂರ್ಣ ಹೆಸರೇನು?
3.  ಪು.ತಿ. ರವರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದು ಕೊಟ್ಟ ಕೃತಿ ಯಾವುದು?
4.  ಶ್ರೀರಂಗ ಮತ್ತು ನಾಕಸ್ತೂರಿ ಸಂಪಾದಿಸಿರುವ ಕೃತಿಯಾವುದು?
5.  ಶ್ರೀರಾಮನ ತಂದೆ ಯಾರು?
6.  ಶಬರಿಯ ಬಯಕೆಯ ಹುಚ್ಚು ಯಾವುದು?
7.  ಶ್ರೀರಾಮನು ಸೀತೆಯನ್ನು ಏನೇನೆಂದು ಸಂಬೋಧಿಸಿದ್ದಾನೆ?
8.  ತಮ್ಮೆಡೆಗೆ ಯಾವುದೋ ಮರುಳು ಬರುತಿಹುದು ಎಂಬ ಭಾವನೆ ರಾಮಲಕ್ಷ್ಮಣರಿಗೆ ಬರಲು ಕಾರಣವೇನು?
9.  ಮೇಳದವರೆಂದು ಯಾರನ್ನು ಕರೆಯುತ್ತಾರೆ?
10. ಶಬರಿಯು ರಾಮನಿಗಾಗಿ ಏನೇನನ್ನು ಸಂಗ್ರಹಿಸಿದ್ದಳು?
11. ದನುವಿನ ಹಿಂದಿನ ಜನ್ಮ ಯಾವುದು?
12. ಶಬರಿಯು ರಾಮನನ್ನು ಇರುಳಿನಪೆರೆಯೆ ಎಂದು ಕರೆಯಲು ಕಾರಣವೇನು?
13. ಶಬರಿ ನಾಟಕದಲ್ಲಿ ಹೇಳಿರುವಂತೆ ಕೆಟ್ಟ ಕನಸಿನಿರುಳನ್ನು ಕಳೆಯುವುದು ಯಾವುದು ?
14. ರಾಮನು  ದಿನ ಸುದಿನವೆಂದು ಶಬರಿಗೆ ಏಕೆ ಹೇಳಿದನು?
15. ರಾಮನು ಶಬರಿಯು ಆಡಿದ ಯಾವ ನುಡಿಯನ್ನು  ಸರಿಯಲ್ಲವೆಂದು ಹೇಳಿದನು?
16. ರಾಮನು ಶಬರಿಗೆ ನಿನ್ನಭೀಷ್ಟ ಸಿದ್ಧಿಗೆ ಪೋಗವ್ವಾ ಎಂದು ಹೇಳಿದ್ದೇಕೆ?
17. ದಶರಥನ ಮಕ್ಕಳು ಯಾರು ಯಾರು?
**********

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆಬೆಂಗಳೂರು-03
ಶಬರಿ
ಪ್ರಶ್ನೆ ಪತ್ರಿಕೆ -2

1) ಪು.ತಿ. ಅವರ ಕಾಲವನ್ನು ತಿಳಿಸಿರಿ.
2) ಮೇಲುಕೋಟೆ ಯಾವ ಜಿಲ್ಲೆಯಲ್ಲಿದೆ?
3) ಪು.ತಿ. ರವರಿಗೆ ಪಂಪ ಪ್ರಶಸ್ತಿಯನ್ನು ತಂದು ಕೊಟ್ಟ ಕೃತಿ ಯಾವುದು
4) ಶಬರಿ ಪಾಠಭಾಗದ ಆಕರ ಕೃತಿ ಯಾವುದು?
5) ಶಬರಿಯು ವಾಸಮಾಡುತ್ತಿದ್ದ ಆಶ್ರಮ ಯಾವುದು?
6) ಶಬರಿಯ ವೇಷಭೂಷಣಗಳು ಹೇಗಿದ್ದವು?
7) ಶ್ರೀರಾಮನ ತಂದೆಯ ಹೆಸರೇನು?
8) ತೇಜಸ್ಸಿಗೆ ಎಡೆಯಾರು?
9) ಶಬರಿಯು ವಾಸವಾಗಿದ್ದ ಆಶ್ರಮ ಯಾವುದು?
10) ರಾಮನ ಆತ್ಮ ಯಾವ ಸೆಳೆತಕ್ಕೆ ಸಿಲುಕಿತ್ತು?
11) ಭೂಮಿಜಾತೆ ಎಂದು ಯಾರನ್ನು ಕರೆಯುತ್ತಾರೆ?
12) ದನುವಿಗೆ ಉದರಮುಖ ಎಂಬ ಹೆಸರು ಏಕೆ ಬಂದಿದೆ?
13) ಚಿತ್ರಕೂಟ ಎಲ್ಲಿದೆ?                                                             
14) ಮತಂಗಾಶ್ರಮಕ್ಕೆ ಹೋಗುವಂತೆ ಶ್ರೀರಾಮನಿಗೆ ದನುವು ಹೇಳಲು ಕಾರಣವೇನು?
15) ಶ್ರೀರಾಮನು ಯಾವರೀತಿ ಬಿಲ್ಲನ್ನು ಹಿಡಿದು ಬರುವನೆಂದು ಶಬರಿಯು ಹೇಳಿದಳು?
16) ಸಿದ್ಧರು ಶಬರಿಗೆ ಹೇಳಿದ ಮಾತು ಯಾವುದು?
17) ದನುವು ಎಲ್ಲಿ ವಾಸವಾಗಿದ್ದನು?
*************

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆಬೆಂಗಳೂರು-03
ಶಬರಿ
ಪ್ರಶ್ನೆ ಪತ್ರಿಕೆ -3
1. ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ ಅವರ ಕಾವ್ಯನಾಮ ಯಾವುದು?
2. ಚಿಕ್ಕಮಗಳೂರಿನಲ್ಲಿ 1981ರಲ್ಲಿ ಸಮಾವೇಶಗೊಂಡ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದವರು ಯಾರು?
3.  ಹಂಸದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ ಸಂದ ಪ್ರಶಸ್ತಿ ಯಾವುದು?
4. ಸೌಮಿತ್ರಿ ಎಂದರೆ ಯಾರು?
5. ಶ್ರೀರಾಮನು ಯಾರ ಮಗ?
6.  ಮತಂಗಾಶ್ರಮದಲ್ಲಿ ವಾಸವಾಗಿದ್ದ ಶ್ರಮಣಿ ಯಾರು?
7.  ನೋಡಲು ಶಬರಿಯು ಹೇಗೆ ಕಾಣುತ್ತಿದ್ದಳು?
8.  ಶ್ರೀರಾಮನು ಶಬರಿಯನ್ನು ಕಂಡು ನಾಚುತಿರುವೆನೆಂದು ಹೇಳಲು ಕಾರಣವೇನು?
9.  ಮತಂಗಾಶ್ರಮವು ಕಲುಷಿತಗೊಳ್ಳಲು ಕಾರಣವೇನು?
10.  ಶಬರಿಯ ವೃತ್ತಾಂತವನ್ನು ರಾಮನಿಗೆ ತಿಳಿಸಿದವರಾರು?
11.  ಶಬರಿಯು ಶ್ರೀರಾಮನನ್ನು ಯಾರ ಮಿತ್ರನೆಂದು ಕರೆದಿದ್ದಾಳೆ?
12.  ದನುವು ಶ್ರೀರಾಮನಿಗೆ ನೀಡಿದ ಸಲಹೆ ಯಾವುದು?
13.  ಮತಂಗಾಶ್ರಮದ ಪರಿಸರವು ರಾಮ ಲಕ್ಷ್ಮಣರಿಗೆ ಯಾವ ಸ್ಥಳದ ನೆನಪನ್ನು ತಂದಿತು?
14.  ಶಬರಿಯು ಹೂವು ಹಣ್ಣು ತಳಿರುಗಳನ್ನು ಕುರಿತು ಆಡುತ್ತಿದ್ದ ಮಾತುಗಳಾವುವು?
15.  ಶಬರಿಯು ಸಾಧು ಜನರ ಮಿತ್ರನೆಂದು ಯಾರನ್ನು ಕರೆದಿದ್ದಾಳೆ?
16.  ಶಬರಿಯು ಶ್ರೀರಾಮನಿಗಾಗಿ ಎಂತಹ ಹಣ್ಣುಗಳನ್ನು ಸಂಗ್ರಹಿಸುತ್ತಿದ್ದಳು?
17.  ದಶರಥನ ಮಡದಿಯರು ಯಾರು ಯಾರು?
******************

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಬೆಂಗಳೂರು-03
ಶಬರಿ
ಪ್ರಶ್ನೆ ಪತ್ರಿಕೆ -4
1.   ಪು.ತಿ. ರವರ ಪ್ರಮುಖ ಕೃತಿಗಳಾವುವು?
2.   ಪು.ತಿ. ರವರಿಗೆ ಪಂಪಪ್ರಶಸ್ತಿಯನ್ನು ತಂದುಕೊಟ್ಟ ಕೃತಿ ಯಾವುದು?
3.   53ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಎಲ್ಲಿ ಸಮಾವೇಶಗೊಂಡಿತು?
4.   ಶಬರಿ ಗೀತನಾಟಕದ ಕರ್ತೃ ಯಾರು?
5.   ದಶರಥ ಯಾರು?
6.   ಲಕ್ಷ್ಮಣನ ತಾಯಿ ಹೆಸರೇನು?
7.   ರಾಮನ ಆತ್ಮ ಕಾಮಕಲ್ಪಲತೆ ಯಾರು?
8.   ಜಟಿಲಕಬರಿ ಯಾರು?
9.   ಉರಿವ ಬತ್ತಿಯ ಕರುಕ ಯಾರು ಕಾಣರೆಂದು ರಾಮನು ಹೇಳಿದನು?
10.  ವಿಶ್ವಾವಸುವು ರಾಕ್ಷಸನಾಗಿ ಜನಿಸಿದ್ದೇಕೆ?
11.  ದನುವು ಮಾತಂಗಾಶ್ರಮಕ್ಕೆ ಹೋಗುವಂತೆ ರಾಮನಿಗೆ ಏಕೆ ಹೇಳಿದನು?
12.  ಅರಸುತನವ ತೊರೆದು ತಪಸಿತನವ ಪಡೆದವನು ಯಾರು?
13.  ಕಂಬನಿ ತುಂಬಿ ಶಬರಿಯು ಆಡಿದ ಮಾತುಗಳಾವುವು?
14.  ಸಿದ್ಧರು ಹೇಳಿದ ಯಾವ ಮಾತು ಸಿದ್ಧಿಸಿತೆಂದು ಶಬರಿಯು ಹೇಳಿದಳು?
15.  ಸೀತೆಗೆ ಯಾರು ರಕ್ಷೆಯಿಡಲಿ ಎಂದು ರಾಮನು ಹೇಳಿದನು?
16.  ಶಬರಿಯು ಶ್ರೀರಾಮನಿಗಾಗಿ ಎಂತಹ ಹೂಗಳನ್ನು ಸಂಗ್ರಹಿಸುತ್ತಿದ್ದಳು?
*********************
ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಬೆಂಗಳೂರು-03
ಶಬರಿ
ಪ್ರಶ್ನೆ ಪತ್ರಿಕೆ -5
1)  17.03.1905-13.10.1998 ಅವಧಿಯಲ್ಲಿ ಜೀವಿಸಿದ್ದ ಮೇಲುಕೋಟೆಯ ಪ್ರಖ್ಯಾತ ಸಾಹಿತಿ ಯಾರು?
2)  1981ರಲ್ಲಿ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಎಲ್ಲಿ ಸಮಾವೇಶಗೊಂಡಿತು?
3)  ಶ್ರೀರಂಗ ಮತ್ತು ನಾ ಕಸ್ತೂರಿ ಸಂಪಾದಿಸಿರುವ ಏಕಾಂಕ ನಾಟಕಗಳಿಂದ ಆಯ್ದುಗೊಂಡಿರುವ ಪಾಠ ಯಾವುದು?
4)  ಶಬರಿ ಪಾಠಭಾಗವು ಯಾವ ಪ್ರಕಾರದಲ್ಲಿದೆ?
5)  ಶಬರಿ ಪಾಠಭಾಗದ ಕರ್ತೃ ಯಾರು?
6)  ಮತಂಗಾಶ್ರಮದಲ್ಲಿ ವಾಸವಾಗಿದ್ದ ತಪಸ್ವಿನಿ ಯಾರು?
7)  ಲಕ್ಷ್ಮಣನು ಪರ್ಣಕುಟಿಯೊಳಗೆ ರಾಮನನ್ನು ಮುಂದೆ ಹೋಗುವಂತೆ ಹೇಳಲು ಕಾರಣವೇನು?
8)  ಸೀತೆಯನ್ನು ಭೂಮಿಜಾತೆ ಎಂದು ಏಕೆ ಕರೆಯುತ್ತಾರೆ?
9)  ದನು ಯಾರು?
10) ಚಿತ್ರಕೂಟ ಎಲ್ಲಿದೆ?
11) ಸುಗ್ರೀವನ ಸಖ್ಯವನ್ನು ಪಡೆಯುವಂತೆ ಶ್ರೀರಾಮನಿಗೆ ತಿಳಿಸಿದವರುಯಾರು?
12) ವಿಶ್ವಾವಸು ರಾಕ್ಷಸ ಜನ್ಮವನ್ನು ತಾಳಲು ಕಾರಣವೇನು?
13) ಯಾವ ಪರಿಸರವು ರಾಮ ಲಕ್ಷ್ಮಣರಿಗೆ ಚಿತ್ರಕೂಟದ ನೆನಪನ್ನು ತಂದಿತು?
14) ಶಬರಿಯು ತಾನು ಕಾಣದ ರಾಮನನ್ನು ಮನಸಾರೆ ಹೇಗೆ ಹೊಗಳಿದಳು?
15) ರಾಮನು ಏನೆಂದು ತನ್ನನ್ನು ಹರಸಬೇಕೆಂದು ಶಬರಿಯು ಬಯಸುತ್ತಾಳೆ?
16) ಉರಿವ ಬತ್ತಿಯ ಕರುಕನ್ನು ಕಾಣದವರು ಯಾರು?
********************
ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಬೆಂಗಳೂರು-03
ಶಬರಿ
ಪ್ರಶ್ನೆ ಪತ್ರಿಕೆ -6

1.     ರಾಮ ಲಕ್ಷ್ಮಣರು ಶಬರಿಯಾಶ್ರಮವನ್ನು ಪ್ರವೇಶಿಸಿದೊಡನೆಯೇ ಕಂಡ ದೃಶ್ಯವನ್ನು ವಿವರಿಸಿರಿ.
2.   ಶ್ರೀರಾಮನು ಸೀತೆಗಾಗಿ ಹಂಬಲಿಸಿದ ಬಗೆಯನ್ನು ತಿಳಿಸಿ.
3.   ಸೀತೆಗಾಗಿ ಹಂಬಲಿಸುತ್ತಿದ್ದ ಶ್ರೀರಾಮನನ್ನು ಲಕ್ಷ್ಮಣನು ಹೇಗೆ ಸಂತೈಸಿದನು?
4.   ಶ್ರೀರಾಮನಿಗಾಗಿ ಶಬರಿಯು ಹೇಗೆ ಹಂಬಲಿಸುತ್ತಿದ್ದಳು?
5.   ರಾಮಲಕ್ಷ್ಮಣರನ್ನು ಕಂಡೊಡನೆಯೆ ಶಬರಿಯ ಸಡಗರವನ್ನು ವರ್ಣಿಸಿರಿ.
6.   ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ಪರಿಯನ್ನು ವರ್ಣಿಸಿರಿ.
7.   ಶಬರಿಯು ತನ್ನ ಅಂತಃಸುಖವನ್ನು ತೋರಲು ಯಾವ ತೆರನಾಗಿ ಹಾಡಿದಳು
8.   ನಿನಗೆಂದೆಂದಿಗು ಋಣಿ ನಾವು ಎಂದು ರಾಮನು ಶಬರಿಗೆ ಏಕೆ ಹೇಳಿದನು?
9.   ಶಬರಿಯ ಕಣ್ಣೀರು ಕಂಡು ರಾಮನು ಆಡಿದ ಮಾತುಗಳಾವುವು?
10.  ರಾಮ ಲಕ್ಷ್ಮಣರು ಶಬರಿಯನ್ನು ಅಮ್ಮನೆಂದೇ ಭಾವಿಸಿದೆವೆಂದು ಹೇಳಲು ಕಾರಣವೇನು?
11.  ನಿನ್ನನಬ್ಬೆಯೆಂದೆ ಅರಿತೆವು ಎಂಬ ರಾಮನ ನುಡಿಗೆ ಶಬರಿಯು ಹೇಗೆ ಪ್ರತಿಕ್ರಿಯಿಸಿದಳು?
12.  ಶಬರಿಯು ಶ್ರೀರಾಮನಿಗೆ ಸಮರ್ಪಿಸಲು ಹಣ್ಣುಗಳನ್ನು ಹೇಗೆ ಸಿದ್ಧಪಡಿಸುತ್ತಿದ್ದಳು?
13.  ಸುಗ್ರೀವನು ಮತಂಗಾಶ್ರಮದಲ್ಲಿ ಏಕೆ ವಾಸವಾಗಿದ್ದನು?
14.  ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
*************************

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಬೆಂಗಳೂರು-03
ಶಬರಿ
ಪ್ರಶ್ನೆ ಪತ್ರಿಕೆ -7
1. ಕೆಳಗಿನ ವಾಕ್ಯಗಳಲ್ಲಿರುವ ಅಲಂಕಾರವನ್ನು ತಿಳಿಸಿ, ಸಮನ್ವಯಗೊಳಿಸಿರಿ.
1) ಆತ್ಮ ಕಾಮಕಲ್ಪಲತೆ
2) ಶೋಕದುಲ್ಕೆ
3) ಆತ್ಮ ಸುರಭಿ
4) ಹಸುಳೆಯಂತೆ ಕಾಂಬನು
5) ಕೆಟ್ಟ ಕನಸಿನಿರುಳ ಕಳೆವ ಸುಪ್ರಭಾತದಂತೆ
6) ರಾಮನು ಕೆಟ್ಟ ಕನಸಿನಿರುಳ ಕಳೆವ ಸುಪ್ರಭಾತ
7) ಹೊಳೆ ಕಡಲಿಗೆ ಸೇರುವ ತೆರದಿ ಸುಖಿ ನಾನು
8) ನಾವೆ ರೇವಿಗೆ ಬಹ ತೆರದಿ
9) ಬಗೆ ಬಗೆ ಹಾರೈಕೆಯ ಪಟ
10) ಹಸುಳೆಯಂದದಿ ಒಲಿದಳು
2. ಸಂಧಿ ಬಿಡಿಸಿ ಹೆಸರಿಸಿ.
1) ಸನ್ಮಂಗಳ                                   2) ಮತಂಗಾಶ್ರಮ
3) ಶ್ರಮಣಿಯಂತೆ                                 4) ಕೃಷ್ಣಾಜಿನಾಂಬರೆ
5) ಹುಳುವಿಗಾಸರೆ                                6) ಎನ್ನಾತ್ಮ
7) ಕೈಯಲ್ಲಿ                                     8) ಪ್ರಾಣಾಹುತಿ
9) ಸದ್ಗುಣ                                      10) ನನ್ನಾಸೆ
11) ಅಗ್ನಿಯನ್ನು                               12) ಮದೋನ್ಮತ್ತ
13) ಕಳೇಬರವನ್ನು                             14) ಋಷ್ಯಾಶ್ರಮ
15) ಆಶ್ರಮವನ್ನು                              16) ಮತ್ತೊಂದು
3. ವಿಗ್ರಹವಾಕ್ಯವನ್ನು ಮಾಡಿ ಸಮಾಸದ ಹೆಸರನ್ನು ತಿಳಿಸಿರಿ
1) ಕಾರ್ಮೋಡ                                2) ಕಾಡುದಾರಿ
3) ತೇಜಗೆಡು                                    4) ಶೋಕದುಲ್ಕೆ
5) ಗಿರಿವನ                                      6) ಧೈರ್ಯಗೆಡೆ
7) ರಾಮಲಕ್ಷ್ಮಣ                                   8) ಪ್ರಾಣಾಹುತಿ
9) ಮದೋನ್ಮತ್ತ                               10) ಉದರಮುಖ
11) ಹೋಮಕುಂಡ
4. ತತ್ಸಮ ತದ್ಭವಗಳನ್ನು ಬರೆಯಿರಿ.
1) ಚೀರ                                         2) ದಿಟ್ಟಿ
3)ಸಕ್ಕರೆ                                         4) ತಪಸ್ವಿ
5) ಆಶ್ಚರ್ಯ                                      6) ಜನುಮ
7) ಮುಖ                                        8) ಸೂರಿಯ
9) ಅಗ್ನಿ                                         10) ಕಾವ್ಯ
11) ಪುಣ್ಯ                                       12) ಮೂರುತಿ
13) ಲೋಕ                                      14) ಬನ
15) ಆತ್ಮ                                       16) ರಾಜ
17) ಭುವಿ
5. ಕೆಳಗಿನ ಪದಗಳ ಅರ್ಥವನ್ನು ಬರೆಯಿರಿ.
1) ಬಂಬಲ                                   2)ಸುರಭಿ
3) ಪೆರೆ                                      4)ತೃಷೆ
5) ಮಧುಕರ                                  6)ಶ್ರಮಣಿ
7) ಮಧುಪರ್ಕ                                 8)ಊಣೆಯ
9) ಆನನ                                       10)ಕರ
11) ಕಬರಿ
6. ಕೆಳಗನವುಗಳಲ್ಲಿ ದ್ವಿರುಕ್ತಿ ಮತ್ತು ಜೋಡುನುಡಿಗಳನ್ನು ವಿಂಗಡಿಸಿ ಬರೆಯಿರಿ.
      ಹಣ್ಣುಹಂಪಲು, ನಮೋ ನಮೋ, ಗಿರಿವನ, ಹಿಗ್ಗಿ ಹಿಗ್ಗಿ
****************

ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ತಿಳಿಸಿರಿ