Monday 28 March 2016

ಅಪಠಿತ ಗದ್ಯಭಾಗದ ಚಟುವಟಿಕೆಗಳು 5

1.  ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ

ಜಗತ್ತಿನಲ್ಲಿ ಅನುಭವ, ಭಾವನೆ, ಆಲೋಚನೆ, ಜ್ಞಾನ-ವಿಜ್ಞಾನಗಳು ವಿಕಾಸಗೊಂಡಂತೆಲ್ಲ ಅವುಗಳಿಗೆ ಸಮಾನವಾಗಿ ಭಾಷೆಯೂ ಬೆಳೆಯಿತ್ತದೆ. ಹೊಸ ಪದಗಳು ಸೃಷ್ಟಿಯಾಗುತ್ತವೆ. ಹಳೆಯ ಪದಗಳು ನವೀಕರಣಗೊಳ್ಳುತ್ತವೆ. ಗೆಡ್ಡೆ-ಗೆಣಸು, ಹಣ್ಣು- ಹಂಪಲುಗಳನ್ನು, ಹಸಿಮಾಂಸವನ್ನು ತಿಂದು ಮೃಗಗಳ ಮಧ್ಯೆ ಕಾಡಿನ ಗವಿ-ಗುಹೆಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ಬೆಂಕಿ ಬೇಸಾಯಗಳನ್ನು ಕಂಡುಕೊಂಡು, ಗುಡಿಸಲು ಕಟ್ಟಿಕೊಂಡು, ಗುಂಪುಗುಂಪಾಗಿ ವಾಸಿಸಲು ತೊಡಗಿದಾಗ, ಅವನ ಜೀವನ ವಿಧಾನ ಧೋರಣೆಗಳು ಬದಲಾಗುತ್ತವೆ. ಬದಲಾದ ಈ ಜೀವನ ವಿಧಾನವನ್ನು ನಾಗರಿಕ ಎಂದು ಕರೆಯಲಾಗುತ್ತದೆ. ನಾಗರಿಕ ಜೀವನ ಸುಂದರವಾಗುತ್ತಿದ್ದಂತೆ ಬುದ್ಧಿ, ಭಾವ, ಕಲ್ಪನೆ ಮೊದಲಾದ ಅವನ ಆಂತರಿಕ ಶಕ್ತಿಗಳು ವಿಶ್ವ ಚೈತನ್ಯದ ಪ್ರತೀಕಗಳೆನ್ನುವಂತೆ ವಿಕಾಸಗೊಳ್ಳುತ್ತವೆ. ಮಾನವ ಚೇತನದ ಸಾರ ಸರ್ವಸ್ವದಂತಿರುವ ಶಾಂತಿ ಶ್ರೇಯಸ್ಸುಗಳಗೆ ಕಾರಣವಾದ ಈ ವಿಕಾಸ ಕ್ರಮವನ್ನು ಸಂಸ್ಕೃತಿ ಎಂದು ಗುರುತಿಸಲಾಗುತ್ತದೆ. ಇಂಗ್ಲೀಷಿನಲ್ಲಿ ಅದಕ್ಕೆ ‘ಕಲ್ಚರ್’ ಎಂದು ಹೆಸರು. ನೂರು ನೂರೈವತ್ತು ವರ್ಷಗಳಿಂದೀಚೆಗೆ ಆ ಪದ ಬಳಕೆಯಲ್ಲಿದ್ದರೂ ಅಂತಃಶ್ಚೇತನ ವಿಕಾಸಕ್ರಮ ಮನುಷ್ಯನೊಂದಿಗೆ ಪ್ರಾರಂಭವಾಗಿರಬೇಕು.
ಸಮ್ಯಕ್ ಕರಣ, ಸಮ್ಯಕ್ ಕೃತಿ ಸಂಸ್ಕೃತಿ. ನಮ್ಮ ಜೀವನವನ್ನು ಸಾಧುವನ್ನಾಗಿ ಮಾಡಿಕೊಳ್ಳುವ ವಿಧಾನವೇ ಸಂಸ್ಕೃತಿ. ಎಂದು ಹೇಳಬಹುದಾಗಿದೆ.
ಪ್ರಥಮ ಭಾಷೆ ಕನ್ನಡ
                                                                  2 X 2=4
1.      ಯಾವುದನ್ನು ಸಂಸ್ಕೃತಿ ಎಂದು ಗುರುತಿಸಲಾಗುತ್ತದೆ?
2.     ನಾಗರಿಕ ಜೀವನವು ಆರಂಭವಾದುದು ಹೇಗೆ?
ದ್ವಿತೀಯ ಭಾಷೆ ಕನ್ನಡ
                                                                  1 X 4=4
1.      ಭಾಷೆ ಹೇಗೆ ಬೆಳೆಯಿತ್ತದೆ?
2.     ಮೇಲಿನ ವಾಕ್ಯವೃಂದದಲ್ಲಿರುವ ಜೋಡು ನುಡಿಗಳಾವುವು?
3.     ಸಂಸ್ಕೃತಿ ಎಂದರೇನು?
4.     ಮಾನವನ ಆಂತರಿಕ ಶಕ್ತಿಗಳಾವುವು?

 ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ

ಯಾವ ಕುಶಲಕರ್ಮದಿಂದ ವಸ್ತುವಿನಲ್ಲಿ ಸೌಂದರ್ಯ ಗುಣವು ಉತ್ಪನ್ನವಾಗುವುದೋ ಅದಕ್ಕೆ ಕಲೆಯೆಂದು ಹೆಸರು. ಈ ಕಲೆಯು ಒಮ್ಮೊಮ್ಮೆ ವಸ್ತುವಿನ ಉಪಯುಕ್ತತೆಯನ್ನುಹೆಚ್ಚಿಸುತ್ತತದೆ. ಆಗ ಅದು ಉಪಯೋಗಿ ಕಲೆ ಎನಿಸುವುದು. ಇದು ಕುಂಬಾರಿಕೆ, ಕಂಬಾರಿಕೆ, ಬಡಗಿತನ ಇತ್ಯಾದಿ ಔದ್ಯೋಗಿಕ ಕಲೆಗಳಲ್ಲಿ ಸಮಾವೇಶವಾಗಿ ಹೋಗಿದೆ. ಇನ್ನೊಂದು ಲಲಿತಕಲೆ. ಇದು ಮನಸ್ಸಿಗೆ ಆನಂದವನ್ನುಂಟು ಮಾಡುವುದು. ಇದರಲ್ಲಿ ವಾಸ್ತು, ಮೂರ್ತಿ, ಚಿತ್ರ, ಸಂಗೀತ, ಲೇಖನ ಮೊದಲಾದ ಕಲೆಗಳು ಸೇರುತ್ತವೆ. ಕಲೆಯ ಈ ಎರಡು ಅಂಗಗಳು ಮಾನವನ ಉನ್ನತಿಗೂ, ವಿಕಾಸಕ್ಕೂ ಅತ್ಯವಶ್ಯಕವಾಗಿವೆ. ಒಂದು ನಮ್ಮ ಅವಶ್ಯಕತೆಗಳನ್ನು ಈಡೇರಿಸಿ, ಶಾರೀರಿಕ, ಆರ್ಥಿಕ ಉನ್ನತಿಯನ್ನು ಸಾಧಿಸುವುದು ಹಾಗೂ ಇನ್ನೊಂದು ಅಲೌಕಿಕ ಆನಂದವನ್ನು ಒದಗಿಸಿ, ಹೃದಯದ ಬೆಳವಣಿಗೆಯನ್ನುಂಟು ಮಾಡುವುದು. ಆದ್ದರಿಂದ ಇವು ಜನಾಂಗದ ಪ್ರಗತಿಯ ಪ್ರತೀಕಗಳಾಗಿವೆ. ಆದರ್ಶದ ನಿದರ್ಶನಗಳಾಗಿವೆ. ಭಾರತೀಯರ ಮನೋಧರ್ಮ ಅಧ್ಯಾತ್ಮ ಪರವಾದುದು, ಅದು ಅವರ ಕಲೆಗಳಲ್ಲಿ ವ್ಯಕ್ತವಾಗಿದೆ. ಭಾರತೀಯರ ಜೀವನ, ಧರ್ಮ, ಸಂಸ್ಕೃತಿಗಳನ್ನು ಆ ಕಲೆಗಳು ಪ್ರತಿಬಿಂಬಿಸುತ್ತವೆ.
ಪ್ರಥಮ ಭಾಷೆ ಕನ್ನಡ
                                                                                       2 X 2=4
1.      ಉಪಯೋಗಿ ಕಲೆ ಎಂದರೇನು? ಉದಾಹರಣೆಯೊಂದಿಗೆ ವಿವರಿಸಿ.
2.     ಕಲೆಗಳು ಜನಾಂಗದ ಪ್ರಗತಿಯ ಪ್ರತೀಕಗಳಾಗಿವೆ ಎನ್ನುವುದನ್ನು ವಿವರಿಸಿ.
ದ್ವಿತೀಯ ಭಾಷೆ ಕನ್ನಡ
                                                                                       1 X 4=4
1.      ಕಲೆ ಎಂದರೇನು?
2.     ಭಾರತೀಯ ಮನೋಧರ್ಮವನ್ನು ಯಾವುದು ಪ್ರತಿಬಿಂಬಿಸುತ್ತವೆ?
3.     ಔದ್ಯೋಗಿಕ ಕಲೆಗಳಾವುವು?
4.     ಅಲೌಖಿಕ ಆನಂದವನ್ನು ಒದಗಿಸುವ ಕಲೆಗಳಾವುವು?

 ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ

ದ್ವಿತೀಯ ಭಾಷೆ ಕನ್ನಡ
                                                                  1 X 4=4
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ತುಂಬ ಮಹತ್ವದ ಸ್ಥಾನ ಪಡೆದಿವೆ. ಅವು ನಮ್ಮ ಧಾರ್ಮಿಕ ಶ್ರದ್ಧೆಯ ಸಂಕೇತವಾಗಿ ಶತಮಾನಗಳಿಂದಲೂ ಉಳಿದುಕೊಂಡು ಬಂದಿವೆ. ಹಬ್ಬಗಳಿಗೆ ನಂಬಿಕೆ ಹಾಗೂ ಆಚರಣೆ ಎಂಬ ಎರಡು ಮುಖಗಳಿದ್ದು, ಅವು ಪರಸ್ಪರ ಪೂರಕ ಅಂಶಗಳಾಗಿವೆ. ನಂಬಿಕೆ ಧೃಡವಾಗಿದ್ದರೆ ಮಾತ್ರ ಆಚರಣೆ ಫಲಪ್ರದವಾಗಲು ಸಾಧ್ಯ. ಇಂಥ ನಂಬಿಕೆಯುಳ್ಳ ಭಾರತೀಯರು ಅನೇಕ ಹಬ್ಬಗಳನ್ನು ಆಚರಿಸಿಕೊಂಡು ಬಂದಿದ್ದಾರೆ.
1.     ಹಬ್ಬಗಳು ಯಾವುದರ ಸಂಕೇತವಾಗಿವೆ?
2.    ಆಚರಣೆಯು ಫಲಪ್ರದವಾಗುವುದು ಯಾವಾಗ?
3.    ಶತಮಾನಗಳಿಂದಲೂ ಉಳಿದುಕೊಂಡು ಬಂದಿರುವುದು ಯಾವುದು?

4.    ಹಬ್ಬಗಳಿಗಿರುವ ಎರಡು ಮುಖಗಳಾವುವು?

Sunday 6 March 2016

ದ್ವಾದಶ ಜ್ಯೋತಿರ್ಲಿಂಗಗಳು

   

   ಓಂ ನಮಃ ಶಿವಾಯ
   ಭಾರತದ ಸಾಂಸ್ಕøತಿಯ ಏಕತೆಯನ್ನು ಕಾಪಾಡುವಲ್ಲಿ ಈಶ್ವರ ತತ್ವ ಮಹತ್ವದ ಸ್ಥಾನವನ್ನು ಪಡೆದಿದೆ. ಅಮೃತೇಶ್ವರಅಮರನಾಥಓಂಕಾರೇಶ್ವರಏಕಾಂಬರಏಕಾಂಬ್ರನಾಥಧಾರೇಶ್ವರ,ಬ್ರಹ್ಮೇಶ್ವರವಾಕೇಶ್ವರಕಪಿಲೇಶ್ವರಶಿಶಿರೇಶ್ವರಚಂದ್ರಮೌಳೀಶ್ವರಭೀಮೇಶ್ವರತ್ರಿಲೋಕೇಶ್ವರಜಂಬುಕೇಶ್ವರಸಾರಂಗನಾಥ ಮುಂತಾದ ಹೆಸರಿನಿಂದ ಶಿವನನ್ನು ಭಾರತೀಯರು ಪೂಜಿಸುತ್ತಾ ಬಂದಿದ್ದಾರೆ. ದೇಶದ ಉದ್ದಗಲಕ್ಕೂ ಹರಡಿರುವ ಜ್ಯೋತಿರ್ಲಿಂಗಗಳು ಯಾತ್ರಾ ಸ್ಥಳಗಳಾಗಿವೆ. ಪುರಾಣರಾಮಾಯಣಮಹಾಭಾರತಪ್ರಾಚೀಣ ಧರ್ಮ ಗ್ರಂಥಗಳಲ್ಲೂ ಶಿವನ ಮಹಿಮೆಯ ವರ್ಣನೆಗಳಿವೆ.
ಹಿಮಾಲಯದಿಂದ ಕನ್ಯಾಕುಮಾರಿ ಭೂಶಿರದವರೆಗೂ ಅಸಂಖ್ಯಾತ ಶಿವಸ್ಥಾನಗಳು ಭಕ್ತರ ಇಷ್ಟಾರ್ಥಗಳನ್ನು ಇಡೇರಿಸುವಲ್ಲಿ ಕಾರ್ಯತತ್ಪರವಾಗಿವೆಯೇನೋ ಎಂಬಂತೆ ನೆಲೆನಿಂತಿವೆ. ಭಕ್ತಿ ಭಾವದಿಂದ ಭಕ್ತರು ಎಲ್ಲೆಲ್ಲಿ ಕರೆದರೋ ಅಲ್ಲಲ್ಲಿ ಭಕ್ತರ ಬಂಧುವಾದ ಶಿವ ಆವಿರ್ಭೂತನಾಗಿ ಮೂರ್ತರೂಪದಲ್ಲಿ ಶಾಶ್ವತವಾಗಿ ನಲೆಸಿದ್ದಾನೆ.
Ø      ಹಿಮಾಲಯದ ಕೇದಾರನಾಥ (ಉತ್ತರಾಂಚಲ)
Ø      ಕಾಶಿಯ ವಿಶ್ವನಾಥ (ಉತ್ತರಪ್ರದೇಶ)
Ø      ಸೌರಾಷ್ಟ್ರದ ಸೋಮನಾಥ (ಗುಜರಾತ್ )
Ø      ದಾರುಕಾವನದ ನಾಗೇಶ್ವರ (ಗುಜರಾತ್)
Ø    ಪರಳಿ  ಚಿತಾಭೂಮಿಯ ವೈದ್ಯನಾಥ (ಮಹಾರಾಷ್ಟ್ರ)
Ø      ನಾಸಿಕ್ ಗೋದಾವರಿ ತೀರದ ತ್ರ್ಯಂಬಕೇಶ್ವರ (ಮಹಾರಾಷ್ಟ್ರ)
Ø      ಎಲ್ಲೋರಾದ ಗೃಷ್ಣೇಶ್ವರ (ಶ್ರೀ ಘುಶ್ಮೇಶ್ವರ) (ಮಹಾರಾಷ್ಟ್ರ)
Ø      ಪುಣೆ ಬಳಿಯ ಢಾಕಿನಿ ಕ್ಷೇತ್ರದ ಭೀಮಶಂಕರ (ಮಹಾರಾಷ್ಟ್ರ)
Ø      ನರ್ಮದಾತೀರದ ಮಾಂಧಾತಗಿರಿ ಓಂಕಾರೇಶ್ವರ (ಅಮರೇಶ್ವರ) (ಮಧ್ಯಪ್ರದೇಶ)
Ø      ಉಜ್ಜಯಿನಿಯ ಮಹಾಕಾಳೇಶ್ವರ (ಮಧ್ಯಪ್ರದೇಶ)
Ø      ಶ್ರೀಶೈಲದ ಮಲ್ಲಕಾರ್ಜುನ (ಆಂಧ್ರಪ್ರದೇಶ)
Ø ಸೇತುಬಂಧದ ಸಮೀಪದ ರಾಮೇಶ್ವರ (ತಮಿಳುನಾಡು) 
                                                           ಇವು ದ್ವಾದಶ ಜ್ಯೋತಿರ್ಲಿಂಗಗಳು.
ಸೌರಾಷ್ಟ್ರೇ ಸೋಮನಾಥಂ ಚ , ಶ್ರೀ ಶೈಲೇ ಮಲ್ಲಿಕಾರ್ಜುನಂ,|
ಉಜ್ಜಯಿನ್ಯಾಂ ಮಹಾಕಾಳಂ, ಓಂ ಕಾರೇ ಪರಮೇಶ್ವರಂ ||
ಕೇದಾರಂ ಹಿಮವತ್ ಪೃಷ್ಠೇ, ಡಾಕೀನ್ಯಾಂ ಭೀಮ ಶಂಕರಂ||
ವಾರಾಣಾಸ್ಯಾಂ ಚ ವಿಶ್ವೇಶ್ವರಂ , ತ್ರ್ಯಂಬಕಂ ಗೌತಮೀತಟೇ ||
ವೈದ್ಯನಾಥಂ ಚಿತಾಭೂಮೇ, ನಾಗೇಶಂ ದಾರುಕಾವನೇ ||
ಸೇತುಬಂಧಂ ಚ ರಾಮೇಶಂ, ಘುಶ್ಮೇಶಂ ಚ ಶಿವಾಲಯೇ ||
ದ್ವಾದಶೈತಾನಿ ನಾಮಾನಿ ಪ್ರಾತರುತ್ಥಾಯ ಯಃ ಪಠೇತ್ |
ಸಪ್ತ ಜನ್ಮ ಕೃತಂ ಪಾಪಂ ಸ್ಮರೇಣ (ಸರ್ವೇಣ) ವಿನಶ್ಯತಿ ||
ದ್ವಾದಶ ಜ್ಯೋತಿರ್ಲಿಂಗ ಸ್ಮರಣೆಯನ್ನು ಪ್ರತಿನಿತ್ಯ ಮಾಡುವುದರಿಂದ ಏಳೇಳು ಜನ್ಮಗಳ ಸಕಲಪಾಪವೂ ಪರಿಹಾರವಾಗುವುದೆಂಬ ಭಾವನೆ ಭಕ್ತರಲ್ಲಿ ಆಳವಾಗಿ ಬೇರೂರಿದೆ. ತಮವನ್ನು ಕಳೆದು ಬೆಳಕಿನತ್ತ ಕೊಂಡೊಯ್ಯುವ ಶಕ್ತಿ ಈ ಸ್ಥಳಗಳಿಗಿದೆಯೆಂಬ ನಂಬಿಕೆಯು ಅಷ್ಟೇ ಗಾಢವಾಗಿದೆ.
ಪಂಚಭೂತಗಳಾದ ಪೃಥ್ವಿ (ಭೂಮಿ)ಅಪ್ (ನೀರು)ತೇಜ (ಅಗ್ನಿ)ವಾಯು (ಗಾಳಿ)ಆಕಾಶ (ಬಯಲು) ಇವುಗಳ ಪ್ರತೀಕವಾದ ಪಂಚಮಹಾಭೂತಾತ್ಮಕ ಲಿಂಗಗಳಿರುವ ಸ್ಥಾನಗಳು ಪುಣ್ಯ ಕ್ಷೇತ್ರಗಳೆನಿಸಿವೆ. ಶೈವ ಪಂಥದವರ ಆಳ್ವಿಕೆಗೆ ಒಳಗಾಗಿದ್ದರ ಪ್ರಭಾವದಿಂದಲೋ ಈ ಐದೂ ಶಿವಕ್ಷೇತ್ರಗಳೂ ತಮಿಳುನಾಡಿನಲ್ಲಿವೆ.
v     ಪೃಥ್ವೀಲಿಂಗ  ತಿರುವಿಡೈಮರದೂರು
v     ಆಪೋಲಿಂಗ  ತಿರುವಾಣೈಕಾವಲ್
v     ತೇಜೋಲಿಂಗ  ತಿರುವಣ್ಣಾಮಲೈ
v     ವಾಯುಲಿಂಗ  ತಿರುವಾಲಂಗಾಡು
v     ಆಕಾಶಲಿಂಗ  ಚಿದಂಬರಂ
ಈ ದೇವಾಲಯಗಳನ್ನೊಳಗೊಂಡಂತೆ ಪ್ರಪಂಚದ ಉದ್ದಗಲಕ್ಕೂ ಇರುವ ಎಲ್ಲಾ ಶಿವಮಂದಿರಗಳಲ್ಲೂ ಶಿವರಾತ್ರಿಯ ದಿನ ವಿಶೇಷ ಪೂಜೆಗಳು ಜರುಗುತ್ತವೆ. ಭಕ್ತರು ಶಿವ ಸ್ತೋತ್ರವನ್ನು ಪಠಿಸಿ, ಬಿಲ್ವಪತ್ರಾ ಪ್ರಿಯನಾದ ಶಿವನನ್ನು ಬಿಲ್ವ ಪತ್ರೆ ಸ್ತೋತ್ರದೊಂದಿಗೆ ಬಿಲ್ವ ಪತ್ರೆಯಿಂದ ಪೂಜಿಸಿ, ಲಿಂಗಾಷ್ಟಕದೊಂದಿಗೆ ಶಿವಸ್ತುತಿ ಮಾಡಿ, ಶಿವ ಪ್ರೀತಿಗೆ ಪಾತ್ರರಾಗಿ ಶಿವದರ್ಶನವನ್ನು ಪಡೆದು ಪುನೀತರಾಗುತ್ತಾರೆ.
ಶಿವ ಸ್ತೋತ್ರ
 ಓಂ ಶಿವಾಯ ನಮಃ
ಓಂ ಮಹೇಶ್ವರಾಯ ನಮಃ
ಓಂ ಶಂಭವೇ ನಮಃ
ಓಂ ಪಿನಾಕಿನೇ ನಮಃ
ಓಂ ಶಶಿಶೇಖರಾಯ ನಮಃ
ಓಂ ವಾಮದೇವಾಯ ನಮಃ
ಓಂ ವಿರೂಪಾಕ್ಷಾಯ ನಮಃ
ಓಂ ಕಪರ್ದಿನೇ ನಮಃ
ಓಂ ನೀಲಲೋಹಿತಾಯ ನಮಃ
ಓಂ ಶಂಕರಾಯ ನಮಃ (10)
ಓಂ ಶೂಲಪಾಣಯೇ ನಮಃ
ಓಂ ಖಟ್ವಾಂಗಿನೇ ನಮಃ
ಓಂ ವಿಷ್ಣುವಲ್ಲಭಾಯ ನಮಃ
ಓಂ ಶಿಪಿವಿಷ್ಟಾಯ ನಮಃ
ಓಂ ಅಂಬಿಕಾನಾಥಾಯ ನಮಃ
ಓಂ ಶ್ರೀಕಂಠಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಭವಾಯ ನಮಃ
ಓಂ ಶರ್ವಾಯ ನಮಃ
ಓಂ ತ್ರಿಲೋಕೇಶಾಯ ನಮಃ (20)
ಓಂ ಶಿತಿಕಂಠಾಯ ನಮಃ
ಓಂ ಶಿವಾಪ್ರಿಯಾಯ ನಮಃ
ಓಂ ಉಗ್ರಾಯ ನಮಃ
ಓಂ ಕಪಾಲಿನೇ ನಮಃ
ಓಂ ಕೌಮಾರಯೇ ನಮಃ
ಓಂ ಅಂಧಕಾಸುರ ಸೂದನಾಯ ನಮಃ
ಓಂ ಗಂಗಾಧರಾಯ ನಮಃ
ಓಂ ಲಲಾಟಾಕ್ಷಾಯ ನಮಃ
ಓಂ ಕಾಲಕಾಲಾಯ ನಮಃ
ಓಂ ಕೃಪಾನಿಧಯೇ ನಮಃ (30)
ಓಂ ಭೀಮಾಯ ನಮಃ
ಓಂ ಪರಶುಹಸ್ತಾಯ ನಮಃ
ಓಂ ಮೃಗಪಾಣಯೇ ನಮಃ
ಓಂ ಜಟಾಧರಾಯ ನಮಃ
ಓಂ ಕೈಲಾಸವಾಸಿನೇ ನಮಃ
ಓಂ ಕವಚಿನೇ ನಮಃ
ಓಂ ಕಠೋರಾಯ ನಮಃ
ಓಂ ತ್ರಿಪುರಾಂತಕಾಯ ನಮಃ
ಓಂ ವೃಷಾಂಕಾಯ ನಮಃ
ಓಂ ವೃಷಭಾರೂಢಾಯ ನಮಃ (40)
ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ
ಓಂ ಸಾಮಪ್ರಿಯಾಯ ನಮಃ 
ಓಂ ಸ್ವರಮಯಾಯ ನಮಃ
ಓಂ ತ್ರಯೀಮೂರ್ತಯೇ ನಮಃ
ಓಂ ಅನೀಶ್ವರಾಯ ನಮಃ
ಓಂ ಸರ್ವಜ್ಞಾಯ ನಮಃ
ಓಂ ಪರಮಾತ್ಮನೇ ನಮಃ
ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ
ಓಂ ಹವಿಷೇ ನಮಃ
ಓಂ ಯಜ್ಞಙ್ಞಮಯಾಯ ನಮಃ (50)
ಓಂ ಸೋಮಾಯ ನಮಃ
ಓಂ ಪಂಚವಕ್ತ್ರಾಯ ನಮಃ
ಓಂ ಸದಾಶಿವಾಯ ನಮಃ
ಓಂ ವಿಶ್ವೇಶ್ವರಾಯ ನಮಃ
ಓಂ ವೀರಭದ್ರಾಯ ನಮಃ
ಓಂ ಗಣನಾಥಾಯ ನಮಃ
ಓಂ ಪ್ರಜಾಪತಯೇ ನಮಃ
ಓಂ ಹಿರಣ್ಯರೇತಸೇ ನಮಃ
ಓಂ ದುರ್ಧರ್ಷಾಯ ನಮಃ
ಓಂ ಗಿರೀಶಾಯ ನಮಃ (60)
ಓಂ ಗಿರಿಶಾಯ ನಮಃ
ಓಂ ಅನಘಾಯ ನಮಃ
ಓಂ ಭುಜಂಗ ಭೂಷಣಾಯ ನಮಃ
ಓಂ ಭರ್ಗಾಯ ನಮಃ
ಓಂ ಗಿರಿಧನ್ವನೇ ನಮಃ
ಓಂ ಗಿರಿಪ್ರಿಯಾಯ ನಮಃ
ಓಂ ಕೃತ್ತಿವಾಸಸೇ ನಮಃ
ಓಂ ಪುರಾರಾತಯೇ ನಮಃ
ಓಂ ಭಗವತೇ ನಮಃ 
ಓಂ ಪ್ರಮಧಾಧಿಪಾಯ ನಮಃ (70)
ಓಂ ಮೃತ್ಯುಂಜಯಾಯ ನಮಃ
ಓಂ ಸೂಕ್ಷ್ಮತನವೇ ನಮಃ
ಓಂ ಜಗದ್ವ್ಯಾಪಿನೇ ನಮಃ
ಓಂ ಜಗದ್ಗುರವೇ ನಮಃ
ಓಂ ವ್ಯೋಮಕೇಶಾಯ ನಮಃ
ಓಂ ಮಹಾಸೇನ ಜನಕಾಯ ನಮಃ
ಓಂ ಚಾರುವಿಕ್ರಮಾಯ ನಮಃ
ಓಂ ರುದ್ರಾಯ ನಮಃ
ಓಂ ಭೂತಪತಯೇ ನಮಃ 
ಓಂ ಸ್ಥಾಣವೇ ನಮಃ (80)
ಓಂ ಅಹಿರ್ಭುಥ್ನ್ಯಾಯ ನಮಃ
ಓಂ ದಿಗಂಬರಾಯ ನಮಃ
ಓಂ ಅಷ್ಟಮೂರ್ತಯೇ ನಮಃ
ಓಂ ಅನೇಕಾತ್ಮನೇ ನಮಃ
ಓಂ ಸ್ವಾತ್ತ್ವಿಕಾಯ ನಮಃ
ಓಂ ಶುದ್ಧವಿಗ್ರಹಾಯ ನಮಃ
ಓಂ ಶಾಶ್ವತಾಯ ನಮಃ
ಓಂ ಖಂಡಪರಶವೇ ನಮಃ
ಓಂ ಅಜಾಯ ನಮಃ 
ಓಂ ಪಾಶವಿಮೋಚಕಾಯ ನಮಃ (90)
ಓಂ ಮೃಡಾಯ ನಮಃ
ಓಂ ಪಶುಪತಯೇ ನಮಃ
ಓಂ ದೇವಾಯ ನಮಃ
ಓಂ ಮಹಾದೇವಾಯ ನಮಃ
ಓಂ ಅವ್ಯಯಾಯ ನಮಃ
ಓಂ ಹರಯೇ ನಮಃ
ಓಂ ಪೂಷದಂತಭಿದೇ ನಮಃ
ಓಂ ಅವ್ಯಗ್ರಾಯ ನಮಃ
ಓಂ ದಕ್ಷಾಧ್ವರಹರಾಯ ನಮಃ
ಓಂ ಹರಾಯ ನಮಃ (100)
ಓಂ ಭಗನೇತ್ರಭಿದೇ ನಮಃ
ಓಂ ಅವ್ಯಕ್ತಾಯ ನಮಃ
ಓಂ ಸಹಸ್ರಾಕ್ಷಾಯ ನಮಃ
ಓಂ ಸಹಸ್ರಪಾದೇ ನಮಃ
ಓಂ ಅಪಪರ್ಗಪ್ರದಾಯ ನಮಃ
ಓಂ ಅನಂತಾಯ ನಮಃ
ಓಂ ತಾರಕಾಯ ನಮಃ
ಓಂ ಪರಮೇಶ್ವರಾಯ ನಮಃ (108)

ಬಿಲ್ವ ಪತ್ರೆ ಸ್ತೋತ್ರ


ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ
ತ್ರಿಜನ್ಮ ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಂ
ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಚಿದ್ರೈಃ ಕೋಮಲೈಃ ಶುಭೈಃ
ತವಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಂ
ಕೋಟಿ ಕನ್ಯಾ ಮಹಾದಾನಂ ತಿಲಪರ್ವತ ಕೋಟಯಃ
ಕಾಂಚನಂ ಕ್ಷೀಲದಾನೇನ ಏಕಬಿಲ್ವಂ ಶಿವಾರ್ಪಣಂ
ಕಾಶೀಕ್ಷೇತ್ರ ನಿವಾಸಂ ಚ ಕಾಲಭೈರವ ದರ್ಶನಂ
ಪ್ರಯಾಗೇ ಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಂ
ಇಂದುವಾರೇ ವ್ರತಂ ಸ್ಥಿತ್ವಾ ನಿರಾಹಾರೋ ಮಹೇಶ್ವರಾಃ
ನಕ್ತಂ ಹೌಷ್ಯಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಂ
ರಾಮಲಿಂಗ ಪ್ರತಿಷ್ಠಾ ಚ ವೈವಾಹಿಕ ಕೃತಂ ತಧಾ
ತಟಾಕಾನಿಚ ಸಂಧಾನಮ್ ಏಕಬಿಲ್ವಂ ಶಿವಾರ್ಪಣಂ
ಅಖಂಡ ಬಿಲ್ವಪತ್ರಂ ಚ ಆಯುತಂ ಶಿವಪೂಜನಂ
ಕೃತಂ ನಾಮ ಸಹಸ್ರೇಣ ಏಕಬಿಲ್ವಂ ಶಿವಾರ್ಪಣಂ
ಉಮಯಾ ಸಹದೇವೇಶ ನಂದಿ ವಾಹನಮೇವ ಚ
ಭಸ್ಮಲೇಪನ ಸರ್ವಾಂಗಮ್ ಏಕಬಿಲ್ವಂ ಶಿವಾರ್ಪಣಂ
ಸಾಲಗ್ರಾಮೇಷು ವಿಪ್ರಾಣಾಂ ತಟಾಕಂ ದಶಕೂಪಯೋಃ
ಯಜ್ನಕೋಟಿ ಸಹಸ್ರಸ್ಚ ಏಕಬಿಲ್ವಂ ಶಿವಾರ್ಪಣಂ
ದಂತಿ ಕೋಟಿ ಸಹಸ್ರೇಷು ಅಶ್ವಮೇಧ ಶತಕ್ರತೌ
ಕೋಟಿಕನ್ಯಾ ಮಹಾದಾನಮ್ ಏಕಬಿಲ್ವಂ ಶಿವಾರ್ಪಣಂ
ಬಿಲ್ವಾಣಾಂ ದರ್ಶನಂ ಪುಣ್ಯಂ ಸ್ಪರ್ಶನಂ ಪಾಪನಾಶನಂ
ಅಘೋರ ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಂ
ಸಹಸ್ರವೇದ ಪಾಟೇಷು ಬ್ರಹ್ಮಸ್ತಾಪನ ಮುಚ್ಯತೇ
ಅನೇಕವ್ರತ ಕೋಟೀನಾಮ್ ಏಕಬಿಲ್ವಂ ಶಿವಾರ್ಪಣಂ
ಅನ್ನದಾನ ಸಹಸ್ರೇಷು ಸಹಸ್ರೋಪ ನಯನಂ ತಧಾ
ಅನೇಕ ಜನ್ಮಪಾಪಾನಿ ಏಕಬಿಲ್ವಂ ಶಿವಾರ್ಪಣಂ
ಬಿಲ್ವಸ್ತೋತ್ರಮಿದಂ ಪುಣ್ಯಂ ಯಃ ಪಠೇಶ್ಶಿವ ಸನ್ನಿಧೌ

ಶಿವಲೋಕಮವಾಪ್ನೋತಿ ಏಕಬಿಲ್ವಂ ಶಿವಾರ್ಪಣಂ

ಲಿಂಗಾಷ್ಟಕಂ - ಶಿವ ಸ್ತುತಿ

ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ, ನಿರ್ಮಲಭಾಷಿತ ಶೋಭಿತ ಲಿಂಗಂ |

ಜನ್ಮಜದುಃಖ ವಿನಾಶಕ ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ || ೧ ||

ದೇವಮುನಿ ಪ್ರವರಾರ್ಚಿತ ಲಿಂಗಂ, ಕಾಮ ದಹನ ಕರುಣಾಕರ ಲಿಂಗಂ|

ರಾವಣ ದರ್ಪ ವಿನಾಶಕ ಲಿಂಗಂ, ತತ್ಪ್ರಣಮಾಮಿ ಸದಾಶಿವ ಲಿಂಗಂ|| ೨ ||

ಸರ್ವ ಸುಗಂಧ ಸುಲೇಪಿತ ಲಿಂಗಂ ಬುದ್ಧಿ ವಿವರ್ಧನ ಕಾರಣ ಲಿಂಗಂ|

ಸಿದ್ಧ ಸುರಾಸುರ ವಂದಿತ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ|| ೩ ||

ಕನಕ ಮಹಾಮಣಿ ಭೂಷಿತ ಲಿಂಗಂ ಪಣಿಪತಿ ವೇಷ್ಟಿತ ಶೋಭಿತ ಲಿಂಗಂ|

ದಕ್ಷ ಸುಯಜ್ಞ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಂ|| ೪ ||

ಕುಂಕುಮ ಚಂದನ ಲೇಪಿತ ಲಿಂಗಂ, ಪಂಕಜಹಾರ ಸುಶೋಭಿತ ಲಿಂಗಂ |

ಸಂಚಿತಪಾಪ ವಿನಾಶನ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೫ ||

ದೇವಗಣಾರ್ಚಿತ ಸೇವಿತ ಲಿಂಗಂ, ಭಾವೈರ್ಭಕ್ತಿಭಿರೇವಚ ಲಿಂಗಂ |

ದಿನಕರಕೋಟಿ ಪ್ರಭಾಕರ ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ || ೬ ||

ಅಷ್ಟದಳೋಪರಿ ವೇಷ್ಟಿತ ಲಿಂಗಂ ಸರ್ವಸಮುದ್ಭವ ಕಾರಣ ಲಿಂಗಂ |

ಅಷ್ಟದರಿದ್ರ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೭ ||

ಸುರಗುರು ಸುರವರ ಪೂಜಿತ ಲಿಂಗಂ ಸುರವನ ಪುಷ್ಪ ಸದಾರ್ಚಿತ ಲಿಂಗಂ |

ಪರಾತ್ಪರಂ ಪರಮಾತ್ಮಕ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೮ ||

ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇಚ್ಶಿವಸನ್ನಿಧೌ |

ಶಿವಲೋಕಮವಾಪ್ನೋತಿ ಶಿವೇನ ಸಹಮೋದತೇ  || ಫಲಶೃತಿ ||

ಇತೀ ಶ್ರೀ ಲಿಂಗಾಷ್ಟಕಂ ಸಂಪೂರ್ಣಂ

ಲ್ಲರಿಗೂ ಶಿವರಾತ್ರಿಯ ಶುಭಾಶಯಗಳು.
**********

ಚಿತ್ರ ಗೂಗಲ್ ಕೃಪೆ

Saturday 5 March 2016

ಅಪಠಿತ ಗದ್ಯಭಾಗದ ಚಟುವಟಿಕೆಗಳು 4

1.  ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
        ವಿರೋಧಪಕ್ಷದ ಸದಸ್ಯರಾಗಿದ್ದ ಕೆಂಗಲ್ ಹನುಮಂತಯ್ಯನವರು ಒಮ್ಮೆ ನ್ಯಾಯವಿಧಾಯಕ ಸಭೆಯಲ್ಲಿ ಮಂತ್ರಿಗಳು ತಮ್ಮ ಸಂಬಳ ಸವಲತ್ತುಗಳನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಮಸೂದೆಯನ್ನು ಮಂಡಿಸಿ ಸರ್ಕಾರಕ್ಕೆ ಇರುಸುಮುರುಸು ಮಾಡಿದರು. ತಮ್ಮ ವಾದಕ್ಕೆ ಪೂರಕವಾಗಿ ಕೆಂಗಲ್ಲರು ಇಂಗ್ಲೆಂಡಿನ ಸಂಸದೀಯ ಪದ್ಧತಿಯ ರೀತಿನೀತಿಗಳು, ಅಲ್ಲಿನ ಮಂತ್ರಿಗಳ ಸಂಬಳಸಾರಿಗೆ ಬಗೆಗೆ ತಿಳಿಸಿ ಸಮರ್ಥವಾಗಿ ಮಾತನಾಡಿ ಎಲ್ಲರ ಪ್ರಶಂಸೆ ಗಳಿಸಿದರು. ಆದರೆ ಮೈಸೂರಿನ ಸನ್ನಿವೇಶದಲ್ಲಿ ಇಂಥ ಕ್ರಮ ಸೂಕ್ತವಲ್ಲವೆಂದು ಸೀತಾರಾಮಶಾಸ್ತ್ರಿಗಳು ಸರ್ಕಾರದ ಪರವಾಗಿ ವಾದವನ್ನು ಮಂಡಿಸಿ ಹನುಮಂತಯ್ಯನವರ ಶ್ರಮವನ್ನು ನೀರಿನಲ್ಲಿ ಕೊಚ್ಚಿಹೋಗುವಂತೆ ಮಾಡಿದರು. ಆ ಕಲಾಪ ಮುಗಿದು ಸದಸ್ಯರೆಲ್ಲಾ ಹೊರಡುವಾಗ ಕೆ. ಚಂಗಲರಾಯ ರೆಡ್ಡಿಯವರು ಎಲ್ಲರಿಗೂ ಕೇಳಿಸುವಂತೆ “ಎಲ್ಲಾ ಹಾಳುಮಾಡಿಬಿಟ್ಟೆ!" ಎಂದು ತೆಲುಗಿನಲ್ಲಿ ಗಟ್ಟಿಯಾಗಿ ಶಾಸ್ತ್ರಿಗಳನ್ನು ಬೈದು ಹೊರಗೆ ಹೋದರು.
ಕನ್ನಡ ಪ್ರಥಮ ಭಾಷೆಗಾಗಿ
2 X 2=4

1. ಕೆಂಗಲ್ ಹನುಮಂತಯ್ಯನವರು ಎಲ್ಲರ ಪ್ರಶಂಸೆಗೆ ಒಳಗಾದ ಸನ್ನಿವೇಶವನ್ನು ಕುರಿತು ಬರೆಯಿರಿ.
2. ಕೆಂಗಲ್ ಹನುಮಂತಯ್ಯನವರು ಶಾಸ್ತ್ರೀಗಳನ್ನು ಬೈಯಲು ಕಾರಣವೇನು?


                         ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
                                                                                                            1 X 4=4

1. ಸರ್ಕಾರಕ್ಕೆ ಇರುಸುಮುರುಸಾಗಲು ಕಾರಣವೇನು ? 
2. ಕೆಂಗಲ್ ಹನುಮಂತಯ್ಯನವರು ಎಲ್ಲರ ಪ್ರಶಂಸೆ ಗಳಿಸಿದುದು ಹೇಗೆ ? 
3. ಸರ್ಕಾರದ ಪರವಾಗಿ ವಾದ ಮಾಡಿದವರು ಯಾರು ? 
4. ಕೆ. ಚಂಗಲರಾಯ ರೆಡ್ಡಿಯವರು ಏನೆಂದು ಬೈದರು?
**************

2. ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.  
   
      ಭೀಷ್ಮರ ಸೇನಾಧಿಪತ್ಯದಲ್ಲಿ ಎಂಟು ದಿನ ಭಯಂಕರ ಯುದ್ಧ ನಡೆಯಿತು. ಭೀಷ್ಮರನ್ನು ಎದುರಿಸಿ ಗೆಲ್ಲುವ ಮಾರ್ಗಕಾಣದೆ ಪಾಂಡವರು ಚಿಂತಾಕ್ರಾಂತರಾದರು. ಎಂಟು ದಿನವಾದರೂ ಭೀಷ್ಮನು ಒಬ್ಬ ಪಾಂಡವನನ್ನೂ ಬಲಿತೆಗೆದುಕೊಳ್ಳಲಿಲ್ಲವಲ್ಲ ಎಂಬ ಆತಂಕ ದುರ್ಯೋಧನನಿಗಾಯಿತು. ಕೋಪದಿಂದ ದುರ್ಯೋಧನನು ಭೀಷ್ಮರನ್ನು ನನಗಿಂತ ನಿಮಗೆ ಪಾಂಡವರೆಂದರೆ ಹೆಚ್ಚು ಪ್ರೀತಿ ಆದ್ದರಿಂದಲೇ ನೀವು ಅವರಲ್ಲಿ ಒಬ್ಬನನ್ನೂ ಕೊಲ್ಲಲಿಲ್ಲವೆಂದು ಹೀಯಾಳಿಸಿದನು. ತಕ್ಷಣವೇ ಭೀಷ್ಮನುನಾಳೆಯ ಯುದ್ಧದಲ್ಲಿ ನಾನು ಅರ್ಜುನನನ್ನು ಕೊಲ್ಲದಿದ್ದರೆ ನನ್ನ ಸೋಲನ್ನು ಒಪ್ಪಿಕೊಳ್ಳುತ್ತೇನೆಂದು ಪ್ರತಿಜ್ಞೆಮಾಡಿದರು. ಇದರಿಂದ ಕೌರವರಿಗೆ ಅತೀವ ಸಂತೋಷವೂ, ಪಾಂಡವರಿಗೆ ಅತಿಯಾದ ಭಯವೂ ಆಯಿತು. ನಮ್ಮೆಲ್ಲರ ರಕ್ಷಕನಾಗಿ ಭಗವಾನ್ ಶ್ರೀ ಕೃಷ್ಣನಿರುವಾಗ ನಮಗೇಕೆ ಯೋಚನೆ ಎಂದು ಅರ್ಜುನನು ನಿಶ್ಚಿಂತೆಯಿಂದಿದ್ದನು. ಅರ್ಜುನನು ತನ್ನ ಮೇಲೆ ಇಟ್ಟಿರುವ ದೃಢವಿಶ್ವಾಸದಿಂದ ಕೃಷ್ಣನು ಸಂತುಷ್ಟನಾದನು.
ಕನ್ನಡ ಪ್ರಥಮ ಭಾಷೆಗಾಗಿ
2 X 2=4

1. ಭೀಷ್ಮರು ಪ್ರತಿಜ್ಞೆ ಮಾಡಿದ ಸನ್ನಿವೇಶವನ್ನು ಕುರಿತು ಬರೆಯಿರಿ.
2. ಕೃಷ್ಣನು ಸಂತುಷ್ಟನಾಗಲು ಕಾರಣವೇನು?

                                           ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
                                                                                                           1 X 4=4
1. ದುರ್ಯೋಧನನ ಆತಂಕಕ್ಕೆ ಕಾರಣವೇನು?
2. ದುರ್ಯೋಧನನು ಭೀಷ್ಮರನ್ನು ಏನೆಂದು ಹೀಯಾಳಿಸಿದನು?
3. ಕೌರವರಿಗೆ ಅತೀವ ಸಂತೋಷವಾದುದೇಕೆ?

4. ಕೃಷ್ಣನು ಸಂತುಷ್ಟನಾದುದೇಕೆ?
***************
3. ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ 
ಭಾರತೀಯರ ಸ್ವಾಭಿಮಾನದ ಸಂಕೇತ ಹಾಗೂ ದೇಶ ಭಕ್ತಿಯ ದ್ಯೋತಕವೇ ಆಗಿರುವ ನಮ್ಮ ರಾಷ್ಟ್ರಧ್ವಜವು, ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿರುವ ತ್ರಿವರ್ಣಧ್ವಜ. ಧ್ವಜದ ಅಗಲ ಮತ್ತು ಉದ್ದವು 2:3 ಅನುಪಾತದಲ್ಲಿದೆ. ಮಾನ್ಯ ಪಿಂಗಾಳಿ ವೆಂಕಯ್ಯನವರು ಇದನ್ನು ವಿನ್ಯಾಸಗೊಳಿಸಿದವರು.
ತ್ರಿವರ್ಣಧ್ವಜದಲ್ಲಿರುವ ಕೇಸರಿ ಬಣ್ಣವು, ಧೈರ್ಯ, ತ್ಯಾಗ ಮತ್ತು ದೇಶಭಕ್ತಿಯ ಪ್ರತೀಕವಾಗಿದೆ. ನಡುವಿನ ಬಿಳಿಯ ಬಣ್ಣವು ಶಾಂತಿ ಮತ್ತು ಸೌಹಾರ್ದತೆಯ ಸಂಕೇತವೆನಿಸಿದೆ. ಹಸಿರು ಬಣ್ಣವು ಭೂದೇವಿಯ ಪ್ರತೀಕವಾಗಿದ್ದು, ಸಮೃದ್ಧಿ ಮತ್ತು ನಂಬಿಕೆಯನ್ನು ಪ್ರತಿನಿಧಿಸುತ್ತದೆ. ಮಧ್ಯದಲ್ಲಿರುವ ಅಶೋಕ ಚಕ್ರವು ನೀಲಿ ಬಣ್ಣದಿಂದ ಕೂಡಿದ್ದು ಪ್ರಗತಿಯ ಸಂಕೇತವೇ ಆಗಿದೆ. ದೇಶದ ಬೆಳವಣಿಗೆ, ಶಿಸ್ತು, ನ್ಯಾಯ, ನಿರಂತರತೆಯನ್ನು ಇದು ಸೂಚಿಸುತ್ತದೆ.    
ಕನ್ನಡ ಪ್ರಥಮ ಭಾಷೆಗಾಗಿ
                                                                   2 X 2=4         
ಪ್ರಶ್ನೆಗಳು:
1.      ನಮ್ಮ ರಾಷ್ಟ್ರಧ್ವಜದ ವಿನ್ಯಾಸ ಮತ್ತು ಮಹತ್ವವನ್ನು ತಿಳಿಸಿರಿ.
2.     ನಮ್ಮ ರಾಷ್ಟ್ರ ಧ್ವಜದಲ್ಲಿರುವ ಬಣ್ಣಗಳು ಏನನ್ನು ಸೂಚಿಸುತ್ತವೆ?

ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
                                                                                                           1 X 4=4
ಪ್ರಶ್ನೆಗಳು:
1. ನಮ್ಮ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?
2. ತ್ರಿವರ್ಣಧ್ವಜದ ಅಗಲ ಮತ್ತು ಉದ್ದವು ಯಾವ ಅನುಪಾತದಲ್ಲಿದೆ?
3. ನಮ್ಮ ರಾಷ್ಟ್ರಧ್ವಜದ ಮಧ್ಯದಲ್ಲಿರುವ ಚಕ್ರವು ಏನನ್ನು ಸೂಚಿಸುತ್ತದೆ?
4. ನಮ್ಮ ರಾಷ್ಟ್ರಧ್ವಜದಲ್ಲಿ ನಿಮಗೆ ಅತಿಹೆಚ್ಚು ಇಷ್ಟವಾದ ಬಣ್ಣಯಾವುದು ಏಕೆ?
*************