Tuesday 26 June 2018

ಮನವ ಕೆಣಕಿಕದಡದಿರು


ಕ್ಷಮಯಾ ಧರಿತ್ರಿಯ ಗರ್ಭದಲಡಗಿದೆಅಗ್ನಿಕುಂಡ    
ತಿಳಿಗೊಳದ ತಳದಲಿ ತುಂಬಿಹುದು ರಾಡಿ ಬಗ್ಗಡ 
ಕ್ಷೀರಸಾಗರದೊಡಲಲಿ ಸೊದೆಯೊಡನೆ ಹಾಲಹಲ
ಮನುಜನ ಮನವಂತೆ ಕೆಣಕಿದರೆ ಕೋಲಾಹಲ-ನನಕಂದ||

Saturday 23 June 2018

ಸಾಫಲ್ಯ ಪರೀಕ್ಷೆ


ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಬೆಂಗಳೂರು-03.
ಸಾಫಲ್ಯ ಪರೀಕ್ಷೆ : 2018-19ಜೂನ್ ಮೂರನೆಯ ವಾರ
ಹತ್ತನೆಯ ತರಗತಿ, ಪ್ರಥಮ ಭಾಷೆ ಕನ್ನಡ
                                                           ಕಾಲಾವಧಿ : 45 ನಿಮಿಷಗಳು
1. ಸಾಮರ್ಥ್ಯ: ಉಕ್ತಲೇಖನ ಬರೆಯುವುದು (ಹತ್ತು ಪದಗಳು)

1. ವ್ಯಾವಹಾರಿಕ ಪತ್ರ 2. ಸಾಹಸಭೀಮ ವಿಜಯಂ 3. ಕರ್ನಾಟಕ ರಾಜ್ಯ  4. ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕ 5. ಘಟೋತ್ಕಚ 6. ಪಕ್ಷಿಕಾಶಿ 7. ರೂಪಕಸಾಮ್ರಾಜ್ಯಚಕ್ರವರ್ತಿ 8. ಕರ್ಣಾಟಭಾರತ ಕಥಾಮಂಜರಿ. 9. ಪ್ರಕೃತಿಗೀತೆ 10. ಜೈಮಿನಿಭಾರತ.

2.ಸಾಮರ್ಥ್ಯ: ಗದ್ಯಭಾಗವನ್ನು ಓದಿಕೊಂಡು ಪ್ರಶ್ನೆಗಳಿಗೆ ಉತ್ತರಿಸುವುದು.


  ಕೆಳಗಿನ ಲೇಖನ ಓದಿ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
ಪೂಜನೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಕೃತಿಗಳು ಶ್ರವ್ಯ ಪರಂಪರೆಯಲ್ಲೂ ಉಳಿದು ಬೆಳೆದುಬಂದಿವೆ. ಸಂಸ್ಕøತದಲ್ಲಿರುವ ರಾಮಾಯಣ ಮತ್ತು ಮಹಾಭಾರತವನ್ನು ಎಲ್ಲಾ ಭಾಷೆಗಳಲ್ಲೂ ರಚಿಸಿದ್ದಾರೆ. ವೇದವ್ಯಾಸರು ಸಂಸ್ಕøತದಲ್ಲಿ ರಚಿಸಿದ ಮಹಾಭಾರತವನ್ನು ಆಧಾರವಾಗಿರಿಸಿಕೊಂಡು ಪಂಪ, ರನ್ನ, ಕುಮಾರವ್ಯಾಸ ಮೊದಲಾದವರು ಕನ್ನಡದಲ್ಲಿ ಕಾವ್ಯ ರಚಿಸಿದರು. ರಾಮಾಯಣ ಮಹಾಭಾರತ ಕಾವ್ಯಗಳು ಉತ್ತಮಗುಣ, ಸ್ವಭಾವಗಳನ್ನು ರೂಢಿಸಿಕೊಳ್ಳದ ವ್ಯಕ್ತಿ μÉ್ಟೀ ರೂಪ ಲಾವಣ್ಯ, ಸಂಪತ್ತು, ಶೌರ್ಯ, ಸಾಹಸ, ವೀರತನವನ್ನು ಪಡೆದಿದ್ದರೂ ಸ್ವತಃ ಆತನಿಗಾಗಲಿ, ಆತನ ಹಿರಿಯರಿಗಾಗಲಿ ಯಾವುದೇ ಉಪಯೋಗವಿಲ್ಲ. ಇಂಥವರಿಂದ ಇಡೀ ವಂಶವನ್ನೇ ನಾಶಮಾಡುತ್ತವೆ ಎಂಬ ಸಂದೇಶವನ್ನು ಸಾರುತ್ತವೆ.    
ನಮ್ಮವರೊಳಗಿನ ದ್ವೇμÁಸೂಯೆಗಳು ನಮ್ಮ ಮನವನ್ನೂ ಮನೆಯನ್ನೂ ನಾಶಪಡಿಸುತ್ತವೆ ಎಂಬುದಕ್ಕೆಮಹಾಭಾರತಒಂದು ನಿದರ್ಶನವಾಗಿದೆÀ. ದುರ್ಯೋಧನನ ಹಠದಿಂದ ಕೃಷ್ಣಸಂಧಾನವು ಮುರಿದುಬೀಳುತ್ತದೆ. ಯುದ್ಧ ಅನಿವಾರ್ಯವಾದಾಗ ಧರ್ಮಪಕ್ಷಪಾತಿಯಾದ ಕೃಷ್ಣನು ಭೇದತಂತ್ರವನ್ನು ಬಳಸಿ ಕರ್ಣನಿಗೆ ಜನ್ಮರಹಸ್ಯವನ್ನು ತಿಳಿಸುತ್ತಾನೆ. ಸಾಮಾನ್ಯನಿಗೆ ಅತಿಯಾದ ಸಂತೋಷವನ್ನು ನೀಡಬಹುದಾದ ಸಂಗತಿ, ಅಸಾಮಾನ್ಯನೂ ಶೌರ್ಯಕ್ಕೆ, ದಾನಕ್ಕೆ, ಉದಾತ್ತತೆಗೆ, ಕರುಣೆಗೆ ಹೆಸರಾಗಿದ್ದ ಕರ್ಣನಿಗೆ ಅತೀವವಾದ ಸಂಕಟವನ್ನು ಉಂಟುಮಾಡುತ್ತದೆ. ಅವನ ಸ್ವಾಮಿನಿμÉ್ಠಯ ಮುಂದೆ ಶ್ರೀಕೃಷ್ಣನೊಡ್ಡಿದ ಪ್ರಲೋಭನೆ ವ್ಯರ್ಥವಾಗುತ್ತದೆ.
ಪ್ರಶ್ನೆಗಳು :
1. ಮೇಲಿನ ವಾಕ್ಯವೃಂದದಲ್ಲಿ ಇರುವ ಕನ್ನಡ ಕವಿಗಳ ಹೆಸರನ್ನು ಬರೆಯಿರಿ.
2. ಕೃಷ್ಣನು ಕರ್ಣನಿಗೆ ಜನ್ಮರಹಸ್ಯವನ್ನು ಏಕೆ ತಿಳಿಸಿದನು?
3. ಕೃಷ್ಣನ ತಂತ್ರ ಏಕೆ ವ್ಯರ್ಥವಾಯಿತು?
4. ಮಹಾಕಾವ್ಯಗಳು ಯಾವ ಸಂದೇಶವನ್ನು ಸಾರುತ್ತವೆ?
5. ಮೇಲಿನ ವಾಕ್ಯವೃಂದದಲ್ಲಿ ಇರುವ ಯಾವುದಾದರೂ ನಾಲ್ಕು ಆಗಮ ಸಂಧಿಯನ್ನು ಬಿಡಿಸಿ ಬರೆಯಿರಿ.

3. ಸಾಮರ್ಥ್ಯ:ಪದ್ಯಭಾಗವನ್ನು ಓದಿಕೊಂಡು ಸಾರಾಂಶ ಬರೆಯುವುದು

ಎಲ್ಲ ನೀತಿಯ ಬಿಟ್ಟ
ಜನದ ಜಾತ್ರೆಯಲಿಂದು
ಯಾವ ಶೀಲವ ನಾವು ಹುಡಕಬೇಕು ?
ಬುದ್ಧಿ ಭ್ರಮೆಯಲಿ ನಡೆವ
ಹೃದಯಗಳ ಆಳದಲಿ
ಯಾವ ಸೋಬಗಿನ ಸೊದೆಯ ಕಾಣಬೇಕು !

4. ಸಾಮರ್ಥ್ಯ: ವ್ಯಾಕರಣಾಂಶಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದು.

1)ಕನ್ನಡ ವರ್ಣಮಾಲೆಯಲ್ಲಿ ಬರುವ ಮಹಾಪ್ರಾಣಾಕ್ಷರಗಳನ್ನು ಬರೆಯಿರಿ.
2)ಯರವ ಅಕ್ಷರಗಳು ಯಾವಾಗ ಆದೇಶವಾಗಿ ಬರುತ್ತವೆ?   
3)ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ಸೇರಿ ಆಗುವ ಅಕ್ಷರವನ್ನು ಏನೆಂದು ಕರೆಯುತ್ತಾರೆ?      
4)ಸಜಾತೀಯ ಮತ್ತು ವಿಜಾತೀಯ ಸಂಯುಕ್ತಾಕ್ಷರಗಳಿಗೆ ಇರುವ ವ್ಯತ್ಯಾಸವನ್ನು ಉದಾಹರಣೆಯೊಂದಿಗೆ ತಿಳಿಸಿರಿ.

5.ಸಾಮರ್ಥ್ಯ: ವ್ಯಾಕರಣಾಂಶಗಳನ್ನು ಹೊಂದಿಸಿ ಬರೆಯುವುದು

1. ದ್ರವ್ಯಾರ್ಥಿ                           . ದ್ವಿರುಕ್ತಿ
2. ಚುರುಚುರು                          . ಜೋಡುನುಡಿ
3. ಬಟ್ಟಬಯಲು                        . ಯಣ್
4. ಕೆನೆಮೊಸರು                         . ಸವರ್ಣದೀರ್ಘ
                                     . ಅನುಕರಣಾವ್ಯ
                                     . ತತ್ಸಮ
6. ಸಾಮರ್ಥ್ಯ: ಅಲಂಕಾರವನ್ನು ಗುರುತಿಸಿ ಸಮನ್ವಯಗೊಳಿಸುವುದು.

ಪ್ರೀತಿಯ ಹಣತೆಯ ಹಚ್ಚೋಣ’ - ಅಲಂಕಾರವನ್ನು ಗುರುತಿಸಿ ಸಮನ್ವಯಗೊಳಿಸಿರಿ.

7. ಸಾಮರ್ಥ್ಯ: ಪ್ರಸ್ತಾರ ಹಾಕಿ, ಗಣವಿಭಾಗ ಮಾಡಿ, ಛಂದಸ್ಸನ್ನು ಗುರುತಿಸುವುದು.

ಕೆಳಗಿನ ಸಾಲುಗಳಿಗೆ ಪ್ರಸ್ತಾರ ಹಾಕಿಗಣವಿಭಾಗ ಮಾಡಿಛಂದಸ್ಸನ್ನು ಹೆಸರಿಸಿ ಲಕ್ಷಣ ಬರೆಯಿರಿ

         ಪುಟ್ಟಿದ ನೂರ್ವರುಮೆನ್ನೊಡ|

         ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ||

8. ಸಾಮರ್ಥ್ಯ: ಸೂಕ್ತ ಉತ್ತರವನ್ನು ಆಯ್ಕೆಮಾಡುವುದು.

ಕೆಳಗಿನ ಪ್ರತಿಯೊಂದು ಹೇಳಿಕೆಗೂ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ ಅವುಗಳಲ್ಲಿ
ಸೂಕ್ತವಾದ ಉತ್ತರವನ್ನು ಆರಿಸಿ ಅದರ ಕ್ರಮಾಕ್ಷರದೊಂದಿಗೆ ಸೂಚಿಸಿರುವ ಸ್ಥಳದಲ್ಲಿ
ಬರೆಯಿರಿ.                                                                                                                                      1.ಪ್ರಾಸಾಕ್ಷರದ ಹಿಂದೆ ಅನುಸ್ವಾರವಿದ್ದರೆ ಪ್ರಾಸವನ್ನು ಹೀಗೆಂದು ಕರೆಯುತ್ತಾರೆ------
) ಸಿಂಹಪ್ರಾಸ ) ಗಜಪ್ರಾಸ ) ವೃಷಭಪ್ರಾಸ  ) ಅಜಪ್ರಾಸ
2.‘ಬಡಗಣಎಂದರೆ ದಿಕ್ಕು.
) ಪೂರ್ವ ) ದಕ್ಷಿಣ ) ಉತ್ತರ ) ದಕ್ಷಿಣ
3.ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಹೇಳುವಾಗ ಬಳಸುವ ಚಿಹ್ನೆ ___________
) ಉದ್ಧರಣ ) ಆವರಣ ) ವಿವರಣಾತ್ಮಕ ) ವಾಕ್ಯವೇಷ್ಠನ
4.ಕರಣಾರ್ಥವನ್ನು ಹೊಂದಿರಿವ ವಿಭಕ್ತಿಯ ಹೆಸರು __________
) ಕರ್ತ್ರರ್ಥ ) ಕರ್ಮಾರ್ಥಕ ) ಕರಣಾರ್ಥಕ ) ಅಧಿಕರಣ
5.‘ಮುಟ್ಟೋಣಪದದ ಕ್ರಿಯಾರೂಪ-------
) ವಿಧ್ಯರ್ಥಕ ) ಸಂಭಾವನಾರ್ಥಕ ) ನಿಷೇಧಾರ್ಥಕ ) ಭವಿಷ್ಯಾರ್ಥಕ
6.ಯಾರು? ಏನು? ಎನ್ನುವುದು ಸರ್ವನಾಮಕ್ಕೆ ಉದಾಹರಣೆಯಾಗಿದೆ--------
) ಪುರುμÁರ್ಥಕ ಪ್ರಶ್ನಾರ್ಥಕ ) ಆತ್ಮಾರ್ಥಕ ಅನ್ವರ್ಥಕ
7.  ಕಾವ್ಯವನ್ನು ಓದುವಾಗ ಉಸಿರು ತೆಗೆದುಕೊಳ್ಳುವ ಸಲುವಾಗಿ ನಿಲ್ಲಿಸುವ ಸ್ಥಳ----
) ಯತಿ ) ಗಣ ) ಪ್ರಾಸ ) ಪಾದ
8.  ಉತ್ತರ ಪದದ ಅರ್ಥ ಪ್ರಧಾನವಾಗಿದ್ದು ವಿಶೇಷಣ ವಿಶೇಷ ಸಂಬಂಧವನ್ನು ಹೊಂದಿರುವ ಸಮಾಸ-
) ತತ್ಪುರುಷ  ) ಕರ್ಮಧಾರೆಯ ) ದ್ವಿಗು ) ಗಮಕ

9.ಸಾಮಥ್ರ್ಯ: ಮೂರನೆಯ ಪದಕ್ಕೆ ಸಂಬಂಧ ಕಲ್ಪಿಸುವುದು

1,         :                    ::


10. ಸಾಮರ್ಥ್ಯ: ವಾಕ್ಯರಚನೆ

1) ಯಾವುದಾದರು ಒಂದು ಗಾದೆಯನ್ನು ವಿಸ್ತರಿಸಿ ಬರೆಯಿರಿ.
1. ತಾಳಿದವನು ಬಾಳಿಯಾನು. 2. ಮನಸಿದ್ದರೆ ಮಾರ್ಗ. 3. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ.
2. ನಿಮ್ಮ ಶಾಲೆಯಲ್ಲಿ ನಡೆದ ಚುನಾನಣೆಯ ವರದಿಯನ್ನು ಪ್ರಕಟಿಸುವಂತೆ ಕೋರಿ ಸೂಕ್ತ ಮಾಹಿತಿಯೊಂದಿಗೆ ಪತ್ರಿಕೆಯೊಂದಕ್ಕೆ ಪತ್ರವನ್ನು ಬರೆಯಿರಿ.
3.  ಕೆಳಗಿನ ಯಾವುದಾದರೂ ಒಂದು ವಿಷಯವನ್ನು ಕುರಿತು ಕಿರು ಪ್ರಬಂಧ ಬರೆಯಿರಿ.    
1. ರಾಷ್ಟ್ರೀಯ ಹಬ್ಬಗಳ ಮಹತ್ತ್ವ 2) ಸ್ವಚ್ಛಭಾರತ ಅಭಿಯಾನ 3) ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ

***