Sunday 27 September 2015

ಅಪಠಿತ ಗದ್ಯ ಭಾಗದ ಚಟುವಟಿಕೆ-1

ನೀಲ ನಕ್ಷೆಗೆ ಅನುಗುಣವಾಗಿ ಅಪಠಿತ ಗದ್ಯಭಾಗವನ್ನು ಓದಿ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ಎಂಬ ಪ್ರಶ್ನೆಯು 8, 9, ಮತ್ತು 10ನೆಯ  ಕನ್ನಡ ಪ್ರಥಮ, ದ್ವಿತೀಯ ಮತ್ತು ತೃತಿಯ ಭಾಷೆಯ ಮೂರು ಪ್ರಶ್ನೆಪತ್ರಿಕೆಯಲ್ಲೂ ನಾಲ್ಕು ಅಂಕಗಳಿಗೆ ಇದೆ. ಆ ನಾಲ್ಕೂ ಅಂಕಗಳನ್ನು ಎಲ್ಲಾ ವಿದ್ಯಾರ್ಥಿಗಳೂ ಸುಲಭವಾಗಿ ಗಳಿಸುವಂತೆ ಮಾಡಲು ಅಭ್ಯಾಸಕ್ಕಾಗಿ ಈ ಕೆಳಗಿನ ಚಟುವಟಿಕೆಗಳು.
ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ನನ್ನ ಹೆಸರು ಅಬ್ದುಲ್ ಕಲಾಂ. ನನ್ನ ಬಾಲ್ಯ ಜೀವನ ಕಳೆದ ರಾಮೇಶ್ವರವು ಒಂದು ಸಣ್ಣ ದ್ವೀಪ. ಅಲ್ಲಿನ ಅತಿ ಎತ್ತರದ ಭೂಭಾಗವೆಂದರೆ ಗಂಧಮಾದನ ಪರ್ವತ. ಎಲ್ಲೆಡೆ ತಲೆದೂಗುತ್ತಿರುವ ಹಸಿರು-ಹಸಿರಾದ ತೆಂಗಿನ ತೋಟಗಳು. ದೂರದಲ್ಲಿ ಸಮುದ್ರ, ಇವುಗಳ ನಡುವೆ ಆಕಾಶವನ್ನು ಆಳುತ್ತಿರುವೆನೋ ಎಂಬಂತೆ ತಲೆ ಎತ್ತಿ ನಿಂತಿರುವ ರಾಮನಾಥ ಸ್ವಾಮಿ ದೇವಸ್ಥಾನದ ಗೋಪುರ. ಆಗ ರಾಮೇಶ್ವರ ಒಂದು ಶಾಂತವಾದ ಪುಟ್ಟ ಪಟ್ಟಣವಾಗಿತ್ತು. ದೇವಸ್ಥಾನ ಹಾಗೂ ಅಕ್ಕಪಕ್ಕದ ಬೀದಿಗಳು ಸದಾ ಯಾತ್ರಾರ್ಥಿಗಳಿಂದ ತುಂಬಿರುತ್ತಿದ್ದವು.
ರಾಮೇಶ್ವರದ ನಾಗರಿಕರಲ್ಲಿ ಹೆಚ್ಚಿನವರು ಹಿಂದುಗಳು. ಕೆಲವು ಮಂದಿ ನಮ್ಮಂತಹ ಮುಸ್ಲಿಮರು. ಅಂತೆಯೇ ಕೆಲವು ಜನ ಕ್ರೈಸ್ತರೂ ಇದ್ದಾರೆ. ಪ್ರತಿ ಸಮುದಾಯವೂ ಇತರ ಸಮುದಾಯಗಳ ಜತೆ ಸ್ನೇಹದಿಂದಲೂ ನೆಮ್ಮದಿಯಿಂದಲೂ ಜೀವನ ಮಾಡುತ್ತಿದ್ದವು. ಹೊರ ಜಗತ್ತಿನ ಒಡಕುಗಳು ರಾಮೇಶ್ವರದ ಒಳಕ್ಕೆ ಬಂದದ್ದೇ ಇಲ್ಲ. ಸದ್ದುಗದ್ದಲವಿಲ್ಲದ ಈ ಸೌಹಾರ್ದ ಅನೇಕ ತಲೆಮಾರುಗಳಿಂದ ನಡೆದು ಬಂದಿದೆ.
ಕನ್ನಡ ಪ್ರಥಮ ಭಾಷೆಗಾಗಿ
I                                                                                          2X2=4
1.      ರಾಮೇಶ್ವರವು ಪ್ರಶಾಂತವಾದ ಪುಟ್ಟ ಪಟ್ಟಣವಾಗಿತ್ತೆಂದು ಹೇಳಲು ಕಾರಣವೇನು?
2.     ರಾಮೇಶ್ವರವು ಸೌಹಾರ್ದ ಜೀವನಕ್ಕೆ ಹೇಗೆ ಹೆಸರಾಗಿತ್ತು?
II                                                                                         2X2=4                                                                                                                            
1.     ರಾಮೇಶ್ಚರದ ಪ್ರಾಕೃತಿಕ ಸನ್ನಿವೇಶವನ್ನು ವರ್ಣಿಸಿರಿ.
2.    ರಾಮೇಶ್ದರದಲ್ಲಿದ್ದ ಕೋಮು ಸೌಹಾರ್ದತೆಯನ್ನು ಕುರಿತು ಬರೆಯಿರಿ.
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
I                                                                                         1X4=4
1.     ಅಬ್ದುಲ್ ಕಲಾಂ ತಮ್ಮ ಬಾಲ್ಯವನ್ನು ಎಲ್ಲಿ ಕಳೆದರು?
2.    ರಾಮೇಶ್ವರದಲ್ಲಿರುವ ಅತಿ ಎತ್ತರದ ಭೂಭಾಗ ಯಾವುದು?
3.    ಆಕಾಶವನ್ನು ಆಳುತ್ತಿರುವೆನೋ ಎಂಬಂತೆ ತಲೆ ಎತ್ತಿನಿಂತಿರುವುದು ಯಾವುದು?
4.    ರಾಮೇಶ್ವರದಲ್ಲಿ ಯಾವ ಯಾವ ಸಮುದಾಯದವರಿದ್ದಾರೆ?
II                                                                                        1X4=4
1.     ರಾಮೇಶ್ವರದಲ್ಲಿರುವ ದೇವಾಲಯ ಯಾವುದು?
2.    ಗಂಧಮಾದನ ಪರ್ವತದ ವಿಶೇಷತೆ ಏನು?
3.    ರಾಮೇಶ್ವರದ ಜನ ಯಾವ ರೀತಿ ಜೀವನ ಮಾಡುತ್ತಿದ್ದಾರೆ?
4.    ದೇವಾಲಯದ ಅಕ್ಕ ಪಕ್ಕದ ಬೀದಿ ಯಾವರೀತಿ ಇರುತ್ತಿತ್ತು?
**************************

ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ನನ್ನ ಹೆಸರು ಅಬ್ದುಲ್ ಕಲಾಂ. ನಾನು ಬೆಳೆದ ರಾಮೇಶ್ವರ ಕೋಮು ಸಾಮರಸ್ಯಯಿಂದ ಪ್ರಶಾಂತವಾಗಿತ್ತು. ನಮ್ಮ ಮುತ್ತಾತ ರಾಮನಾಥ ಸ್ವಾಮಿ ದೇವಾಲಯದ ವಿಗ್ರಹ ಕಾಪಾಡಿದ ಘಟನೆಯನ್ನು ನಮ್ಮ ತಂದೆ ಹೇಳುತ್ತಿದ್ದರು. ಉತ್ಸವಗಳ ಸಂದರ್ಭ ದೇವಸ್ಥಾನದ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಿ ದೇವಾಲಯದ ಪ್ರದಕ್ಷಿಣೆಯಲ್ಲಿ ಒಯ್ಯುತ್ತಾರೆ. ರಾಮೇಶ್ವರದ ಎಲ್ಲರೂ ಜಾತಿ-ಧರ್ಮ ಭೇದವಿಲ್ಲದೆ ಇದರಲ್ಲಿ ಭಾಗವಹಿಸುತ್ತಾರೆ. ಅಂಥ ಒಂದು ಮೆರವಣಿಗೆ ಸಂದರ್ಭ ಉತ್ಸವ ಮೂರ್ತಿ ಆಕಸ್ಮಿಕವಾಗಿ ಕೆರೆಗೆ ಬಿತ್ತು. ಅಲ್ಲಿದ್ದವರೆಲ್ಲ ದಿಗ್ಭ್ರಾಂತರಾದರು. ಅದೊಂದು ಅಪಶಕುನ, ಏನು ಗಂಡಾಂತರ ಕಾದಿದೆಯೋ ಎಂದು ಅರ್ಚಕರೂ ಜನರೂ ಭಯಪಟ್ಟರು. ನನ್ನ ಮುತ್ತಾತ ಧೈರ್ಯ ಕಳೆದುಕೊಳ್ಳಲಿಲ್ಲ. ತಕ್ಷಣ ಕೆರೆಗೆ ಜಿಗಿದು ಜಾಲಾಡಿ ವಿಗ್ರಹ ಎತ್ತಿಕೊಂಡು ಮೇಲೆ ಬಂದರು. ಮುಸ್ಲಿಮನೊಬ್ಬ ಹಿಂದೂ ವಿಗ್ರಹವನ್ನು ಮುಟ್ಟಿದನೆಂಬ ಮಾತನ್ನು ಯಾರೂ ಆಡಲಿಲ್ಲ. ಅರ್ಚಕರು ತುಂಬಾ ಸಂತೋಷಗೊಂಡು ಭಾವುಕರಾಗಿ ನನ್ನ ಮುತ್ತಾತನಿಗೆ ಕೃತಜ್ಞತೆ ಹೇಳಿದರು. ಉತ್ಸವ ಸಾಂಗವಾಗಿ ನಡೆಯಿತು. ನನ್ನ ಮುತ್ತಾತ ರಾಮೇಶ್ವರದ ಜನರಿಗೆ ಹೀರೋ ಆದರು. ಆ ಉತ್ಸವದಲ್ಲಿ ಪ್ರತಿವರ್ಷದ ಮೊದಲ ಮರ್ಯಾದೆ ನನ್ನ ಮುತ್ತಾತನಿಗೆ ಸಲ್ಲತಕ್ಕದ್ದು ಎಂದು ದೇವಸ್ಥಾನದ ಆಡಳಿತದವರು ಘೋಷಿಸಿದರು. ನಂತರ, ಇದು ನಮ್ಮ ಕುಟುಂಬದ ಮುಂದಿನ ಪೀಳಿಗೆಗೂ ಮುಂದುವರೆಯಿತು.
ಕನ್ನಡ ಪ್ರಥಮ ಭಾಷೆಗಾಗಿ
I                                                                                           2X2=4
1.      ರಾಮೇಶ್ವರದ ಅರ್ಚಕರು  ಭಯಭೀತರಾಗಲು ಕಾರಣವೇನು?ವಿವರಿಸಿ.
2.     ಅಬ್ದುಲ್ ಕಲಾಂ ಮುತ್ತಾತ ರಾಮೇಶ್ವರದ ಜನರಿಗೆ ಹೀರೋ ಆದುದು ಹೇಗೆ?
II                                                                                           2X2=4
1.      ಉತ್ಸವದ ಸಂದರ್ಭದಲ್ಲಿ ರಾಮೇಶ್ವರದಲ್ಲಿ ನಡೆದ ಆಕಸ್ಮಕ ಘಟನೆಯನ್ನು ಕುರಿತಿ ಬರೆಯಿರಿ.
2.     ರಾಮೇಶ್ವರದ ಒಂದು ಉತ್ಸವದಲ್ಲಿ ಮೊದಲ ಮರ್ಯಾದೆ ಅಬ್ದುಲ್ ಕಲಾಂ ಮನೆಯವರಿಗೆ ಸಲ್ಲುತ್ತದೆ ಏಕೆ?
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
I                                                                                              1X4=4
1.      ಅಬ್ದುಲ್ ಕಲಾಂ ತಂದೆ ಯಾವ ಘಟನೆಯನ್ನು ಹೇಳುತ್ತಿದ್ದರು?
2.     ಉತ್ಸವದ ಸಮಯದಲ್ಲಿ ಆಕಸ್ಮಿಕವಾಗಿ ನಡೆದ ಘಟನೆ ಯಾವುದು?
3.     ಕೆರೆಯಿಂದ ವಿಗ್ರಹವನ್ನು ಮೇಲೆತ್ತಿ ತಂದವರು ಯಾರು?
4.    ದೇವಸ್ಥಾನದ ಆಡಳಿತದವರು ಏನೆಂದು ಘೋಷಿಸಿದರು?
II                                                                                        1X4=4
1.      ಉತ್ಸವದ ಸಂದರ್ಭದಲ್ಲಿ ಜನರು ದಿಗ್ಬ್ರಾಂತರಾಗಲು ಕಾರಣವೇನು
2.     ರಾಮೇಶ್ವರದ ಜನರಿಗೆ ಹೀರೋ ಆದವರು ಯಾರು?
3.     ಅರ್ಚಕರು ಭಾವುಕರಾಗಲು ಕಾರಣವೇನು?
4.    ರಾಮೇಶ್ವರದಲ್ಲಿ ನಡೆಯುವ ಉತ್ಸವದ ಮೊದಲ ಮರ್ಯಾದೆ ಯಾರಿಗೆ ಸಲ್ಲುತ್ತದೆ?
**********************
ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಭಗತ್ ಸಿಂಗ್ ವರ್ಷದ ಬಾಲಕನಾಗಿದ್ದಾಗ ಅವನ ತಂದೆ ತಮ್ಮ ಮಿತ್ರರೊಡನೆ ಸುತ್ತಾಡಲು ಹೊರಟರು. ಭಗತ್ ಸಿಂಗ್ ಸಹ ಅವರೊಂದಿಗೆ ಹೊರಟನು. ಹಿರಿಯರು ಮಾತಾಡುತ್ತ ಮುಂದೆ ಮುಂದೆ ಹೋಗಿದರು. ಊರಿನಾಚೆ ಹೊಲ ಗದ್ದೆಗಳನ್ನು ದಾಟಿ  ಹೋಗುತ್ತಿದ್ದ  ಹಿರಿಯರಿಗೆ ಬಾಲಕನ ನೆನಪಾಗಿ ತಿರುಗಿ ನೋಡಿದರು. ಅವನು ಗದ್ದೆಯೊಂದರಲ್ಲಿ ಕುಳಿತು ಏನೋ ಮಾಡುತ್ತಿದುದು ಕಂಡು ಬಂದಿತು. ಕುತೂಹಲದಿಂದ ಅವನ ಬಳಿಗೆ ಬಂದು 'ಏನು ಮಾಡುತ್ತಿದ್ದೀಯಾ?' ಎಂದು ಅವರು ಕೇಳಿದರು. ಆಗ ಬಾಲಕ ಭಗತ್ ಸಿಂಗ್ ' ಹೊಲದ ತುಂಬಾ ನಾನು ಬಂದೂಕುಗಳನ್ನು ಬೆಳೆಯಲು ಸಿದ್ಧಮಾಡುತ್ತಿದ್ದೇನೆ' ಎಂದು ಮುಗ್ಧವಾಗಿ ಉತ್ತರಿಸಿದನು. ಮಾತು ಹೇಳುವಾಗ ಅವನ ಕಣ್ಣಿನಲ್ಲಿ 'ನೆಡುವ ಬಂದೂಕುಗಳು ಹೊಲದ ತುಂಬಾ ಬೆಳೆಯಲಿವೆ' ಎಂಬ ಬಲವಾದ ನಂಬಿಕೆ ಕಾಣುತ್ತಿತ್ತು! ಬಂದೂಕುಗಳನ್ನು ಏಕೆ ಬೆಳೆಯುವೆ ಎಂದು ಪ್ರಶ್ನಿಸಿದಕ್ಕೆ ' ಬಂದೂಕುಗಳಿಂದ ನಾವು ಆಂಗ್ಲರನ್ನು ನಮ್ಮ ದೇಶದಿಂದ ಹೊರಗೆ ಓಡಿಸುತ್ತೇನೆ' ಎಂದು ಉತ್ತರ ಕೊಟ್ಟನು! ಇದನ್ನು ಕೇಳುತ್ತಿದ್ದ ಹಿರಿಯರು ಬಾಲಕನ ದೇಶಭಕ್ತಿಯ ಬಗ್ಗೆ ಆಶ್ಚರ್ಯಚಕಿತರಾದರು.
ಭಗತ್ ಸಿಂಗ್ ಶಾಲೆಯಲ್ಲಿ ಕಲಿಯುತ್ತಿರುವಾಗಲೂ ತನ್ನ ಸಹಪಾಠಿಗಳಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡುತ್ತಿದ್ದರು. ಒಮ್ಮೆ ತರಗತಿಯಲ್ಲಿ ಎಲ್ಲರನ್ನು ಸಂಬೋಧಿಸಿ 'ದೊಡ್ಡವರಾದ ಮೇಲೆ ಏನು ಆಗಲು ಇಚ್ಚಿಸುವಿರಿ?' ಎಂದು ಕೇಳಿದನು. ಪ್ರತಿಯೊಬ್ಬರು ತಮ್ಮ ಇಚ್ಚೆಯನ್ನು ವ್ಯಕ್ತಪಡಿಸಿದರು. ಒಬ್ಬನಂತು ನಾನು 'ಮದುವೆ ಯಾಗುತ್ತೇನೆ' ಎಂದು ಹೇಳಿದನು! ಅದನ್ನು ಕೇಳಿದ ಬಾಲಕ ಭಗತ್, 'ಮದುವೆ ಮಾಡಿಕೊಳ್ಳುವುದು ಒಂದು ಸಾಧನೆಯೇ? ನಾನು ಆಂಗ್ಲರನ್ನು ನಮ್ಮ ದೇಶದಿಂದ ಒದ್ದು ಓಡಿಸುತ್ತೇನೆ' ಎಂದು ಉದ್ಗರಿಸಿದನು!

ಕನ್ನಡ ಪ್ರಥಮ ಭಾಷೆಗಾಗಿ
I                                                                                           2X2=4
1.      ಹಿರಿಯರ ಜೊತೆ ಹೊರಗೆ ಹೊರಟ ಭಗತ್ ಸಿಂಗ್ ಹಿಂದೆ ಉಳಿಯಲು ಕಾರಣವೇನು?
2.     ಭಗತ್ ಸಿಂಗ್ ಮತ್ತು ಆತನ ಸ್ನೇಹಿತರ ನಡುವೆ ಶಾಲೆಯಲ್ಲಿ ನಡೆದ ಸಂಭಾಷಣೆಯನ್ನು ಬರೆಯಿರಿ.
II                                                                                           2X2=4
1.  ಬಾಲಕ ಭಗತ್ ಸಿಂಗ್ ಗದ್ದೆಯಲ್ಲಿ ಕುಳಿತು ಏನು ಮಾಡಿತ್ತಿದ್ದನು? ಏಕೆ?
2. ಆಂಗ್ಲರನ್ನು ನಮ್ಮ ದೇಶದಿಂದ ಒದ್ದು ಓಡಿಸುತ್ತೇನೆ' ಎಂದು ಬಾಲಕ ಭಗತ್ ಸಿಂಗ್ ಉದ್ಗರಿಸಿದ ಸನ್ನಿವೇಶವನ್ನು ವಿವರಿಸಿರಿ.
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
I                                                                                             1X4=4
1.      ಭಗತ್ ಸಿಂಗ್ ಗದ್ದೆಯಲ್ಲಿ ಕುಳಿತು ಏನು ಮಾಡುತ್ತಿರುವುದಾಗಿ ಹೇಳಿದನು?
2.     ಹಿರಿಯರು ಆಶ್ಚರ್ಯಚಕಿತರಾದುದೇಕೆ?
3.     ಭಗತ್ ಸಿಂಗನ ಕಣ್ಣಿನಲ್ಲಿ ಯಾವ ನಂಬಿಕೆ ಕಾಣುತ್ತಿತ್ತು?
4.    ದೊಡ್ಡವನಾದ ಮೇಲೆ ತಾನು ಏನು ಮಾಡುತ್ತೇನೆಂದು ಭಗತ್ ಸಿಂಗ್ ಹೇಳಿದನು
II                                                                                       1X4=4
1.      ಬಾಲಕ ಭಗತ್ ಸಿಂಗ್ ಯಾರೊಡನೆ ಹೊರಟನು?
2.     ಹಿರಿಯರು ಕುತೂಹಲದಿಂದ ಬಾಲಕನ ಬಳಿಗೆ ಬಂದುದೇಕೆ?
3.     ಬಂದೂಕುಗಳನ್ನು ಏಕೆ ಬೆಳೆಯುತ್ತಿರುವೆ ಎಂಬ ಪ್ರಶ್ನೆಗೆ ಭಗತ್ ಸಿಂಗ್ ಕೊಟ್ಟ ಉತ್ತರವೇನು?
4.    ಭಗತ್ ಸಿಂಗ್ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಏನು ಮಾಡುತ್ತಿದ್ದನು?
**********************
ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಏಪ್ರಿಲ್ 13, 1919ರಂದು ನಡೆದ ಜಲಿಯನ್ ವಾಲಾ ಬಾಗ್ ದುರಂತ ನಡೆದ ಸ್ಥಳಕ್ಕೆ ಶಾಲೆಯಿಂದ ತಪ್ಪಿಸಿಕೊಂಡ ಹೋದ ಬಾಲಕ ಭಗತ್ ಸಿಂಗ್ ಖಾಲಿ ಬಾಟಲಿಯಲ್ಲಿ ರಕ್ತಸಿಕ್ತವಾಗಿದ್ದ ಮಣ್ಣನ್ನು ತುಂಬಿಕೊಂಡು ಪ್ರತಿದಿನವೂ ಪೂಜಿಸುತ್ತಿದ್ದನು. ಮಣ್ಣು ರಕ್ತಸಿಕ್ತವಾಗಲು ಕಾರಣರಾದರ ವಿರುದ್ಧ ಸೇಡು ತೀರಿಸಿಕೊಳ್ಳದ ಹೊರತು ವಿಶ್ರಮಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು. ಸ್ವದೇಶಿ ಚಳುವಳಿಯ ವೇಳೆ ತಮ್ಮ ಮತ್ತು ತಮ್ಮ ವಠಾರದ ಎಲ್ಲಾ ಮನೆಗಳಲ್ಲಿದ್ದ ವಿದೇಶಿ ಬಟ್ಟೆ ಮತ್ತು ವಸ್ತುಗಳನ್ನು ತಂದು ಬೆಂಕಿಗೆ ಆಹುತಿ ನೀಡುತ್ತಿದ್ದರು! ಕೊನೆಯ ಉಸಿರಿರುವವರೆಗೂ ಬ್ರಿಟಿಷರನ್ನು ದೇಶದಿಂದ ಹೊಡೆದೋಡಿಸುವ ಕಾರ್ಯದಲ್ಲೇ ನಿರತರಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣಾರ್ಪಣೆಮಾಡಿದರು.
ಕನ್ನಡ ಪ್ರಥಮ ಭಾಷೆಗಾಗಿ
1.      ಜಲಿಯನ್ ವಾಲಾ ಬಾಗ್ ದುರಂತಕ್ಕೆ ಭಗತ್ ಸಿಂಗ್ ಹೇಗೆ ಪ್ರತಿಕ್ರಿಯಿಸಿದನು?
2.     ಸ್ವದೇಶಿ ಚಳುಚಳಿಯಲ್ಲಿ ಭಗತ್ ಸಿಂಗ್ ಹೇಗೆ ಭಾಗವಹಿಸಿದನು?
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
                                                                                             1X4=4
1.      ಏಪ್ರಿಲ್ 13, 1919ರಂದು ನಡೆದ ಘಟನೆಯಾವುದು?
2.     ಬಾಲಕ ಭಗತ್ ಸಿಂಗ್ ಶಾಲೆಯಿಂದ ತಪ್ಪಿಸಿಕೊಂಡು ಹೋಗಲು ಕಾರಣವೇನು?
3.     ಬಾಲಕ ಭಗತ್ ಸಿಂಗ್ ಏನೆಂದು ಪ್ರತಿಜ್ಞೆ ಮಾಡಿದನು?
4.    ಸ್ವದೇಶೀ ಚಳುವಳಿಯಲ್ಲಿ ಭಗತ್ ಸಿಂಗ್ ಮಾಡಿದ ಕೆಲಸವೇನು?

************************

Saturday 26 September 2015

ಕನ್ನಡ ಜನಕೆ ಸಗ್ಗÎ

ಮತ್ತೂರ ಭಾರತ, ಕಣ್ಣನ್ನರ ನುಡಿಯಗ್ಗ
ಬನ್ನಂಜೆ ರಾಮಾಯಣ, ಭಟ್ಟರಾ ಕಗ್ಗ
ಕನ್ನಡ ಸಾರಸ್ವತಲೋಕದಾ ಜನಕೆ ಸಗ್ಗÎ
ಈ ನಾಕದಲಿ ನಲಿದುಬೆಳೆ ನೀ -ನನ ಕಂದ|| 

ಸಹಜ ಪ್ರತಿಭೆ

ಸಹಜ ಪ್ರತಿಭೆಯದು ಸ್ವಪ್ರಕಾಶಿತ ತಾರೆಯಂತೆ
ಯಾವುದರ ಹಂಗಿರದೆ ತಾ ಹೊಳೆವಂತೆ
ಅಂಧಕಾರವ ಕಳೆದು ಜಗವ ಬೆಳಗುವಂತೆ
ಸರ್ವರಾ ಬಾಳಿನ ದೀವಿಗೆಯಂತೆ-ನನ ಕಂದ||

Friday 25 September 2015

ಪ್ರತಿಭೆ

ಪ್ರತಿಭೆಯನು ಗುರುತಿಸಲು ಬೇಕು ಪ್ರತಿಭೆ
ಪ್ರತಿಭೆಯನು ಮನ್ನಿಸಿ ಗೌರವಿಸುವುದು ಪ್ರತಿಭೆ
ಸಂದ ಪುರಸ್ಕಾರಕ್ಕೆ ಬೆಲೆಯತರುವುದು ಪ್ರತಿಭೆ
ಪ್ರತಿಭೆಯನು ಬೆಳಗಿಸಲಿ ಪ್ರತಿಭೆ -ನನ ಕಂದ ||

Thursday 24 September 2015

ಸಂಕಲನಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆ-4

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಮಲ್ಲೇಶ್ವರಂ, ಬೆಂಗಳೂರು-03
ಸಂಕಲನಾತ್ಮಕ ಪರೀಕ್ಷೆ
ಹತ್ತನೆಯ ತರಗತಿ
ವಿಷಯ : ಕನ್ನಡ ತೃತೀಯ ಭಾಷೆ
ಗರಿಷ್ಠ ಅಂಕ : 80                                                                                              ಪರಮಾವಧಿ : 2-30 ಗಂಟೆಗಳು
ಸೂಚನೆಗಳು :
ಪ್ರಶ್ನೆ ಪತ್ರಿಕೆಯು ಎ, ಬಿ ಮತ್ತು ಸಿ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.
•ವಿಭಾಗ `ಎ’ ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
•ವಿಭಾಗ `ಬಿ’ ಅನ್ವಯಿಕ ವ್ಯಾಕರಣ, ಅಲಂಕಾರ, ಛಂದಸ್ಸು 12 ಅಂಕಗಳು
•ವಿಭಾಗ `ಸಿ’ ವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ 15 ಅಂಕಗಳು
•ಉತ್ತರಗಳು ನೇರವೂ, ಸ್ಪಷ್ಟವೂ ಆಗಿರಬೇಕು
•ವಸ್ತುನಿಷ್ಠ ಪ್ರಶ್ನೆಗಳಿಗೆ, ಹೊಡೆದು, ಅಳಿಸಿ, ಕೆರೆದು ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
•ಪೆನ್ಸಿಲ್ ಬಳಸಿ ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
ಭಾಗ - `ಎ’
ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದೇ ವಾಕ್ಯದ ಉತ್ತರವನ್ನು ಬರೆಯಿರಿ.                        10X1=10
1. ಗೊರೂರರು ಮಿನಿಪೊಲೀಸ್ ನಗರಕ್ಕೆ ಹೋಗಲು ಕಾರಣವೇನು?
2. ಸುಧೆಯನ್ನು ಹೇಗೆ ನೀಡಬೇಕೆಂದು ಚೆನ್ನವೀರ ಕಣವಿಯವರು ಕೋಗಿಲೆಯನ್ನು ಕೋರಿದ್ದಾರೆ?
3. ಅಖಂಡಮಂಡಲಾಕಾರ ಎಂದರೇನು?
4. ಅನಿಲ್ ಕುಂಬ್ಳೆಯವರಿಗೆ ಬಾಲ್ಯದಲ್ಲಿ ಕ್ರಿಕೆಟ್ ತರಬೇತಿ ನೀಡಿದ ಸಂಸ್ಥೆಯಾವುದು?
5. ಕಳಸ, ಶಿಲುಬೆ, ಬಿಳಿ ಮಿನಾರು ಇವು ಯಾವ ಧರ್ಮದ ಸಂಕೇತಗಳಾಗಿವೆ?
6. ಅನಿಲ್ ಕುಂಬ್ಳೆಯವರಿಗೆ ಭಾರತ ಸರ್ಕಾರವು ನೀಡಿರುವ ಪ್ರಶಸ್ತಿಗಳಾವುವು?
7. ಈಡನ್ ಗಾರ್ಡನ್ಸ್ ಮೈದಾನದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಅನಿಲ್ ಕುಂಬ್ಳೆಯವರ ಸಾಧನೆಯೇನು?
8. ಹೊಸ ಜೀವನ ಮತ್ತು ಹೊಸರೂಪವನ್ನು ಕೊಡುವುದು ಯಾವುದೆಂದು ಬಿ. ಆರ್. ಲಕ್ಷ್ಮಣರಾವ್ ಅವರು ಹೇಳಿದ್ದಾರೆ?
9. ಪುಲಿಗೆರೆ ಸೋಮನಾಥನು ಹೇಳಿರುವಂತೆ ಯೋಗಿಯಾಗಲು ಅರ್ಹರಾದವರು ಯಾರು?
10. ಭಟ ಮತ್ತು ನಂಟರ ಬಗೆಗೆ ಪುಲಿಗೆರೆ ಸೋಮನಾಥನು ಆಡಿರುವ ಮಾತುಗಳನ್ನು ತಿಳಿಸಿರಿ.
ಈ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳ ಉತ್ತರಗಳನ್ನು ಬರೆಯಿರಿ.       10X2=20
11. ಗೊರೂರು ರಾಮಸ್ವಾಮಿ ಅಯ್ಯಂಗಾರರು ಮಿನಿಪೊಲೀಸ್ ನಗರದಲ್ಲಿ  ಗೊತ್ತುಪಡಿಸಿದ ಸ್ಥಳದಿಂದ ತಪ್ಪಸಿಕೊಳ್ಳಲು ಕಾರಣವೇನು?
12. ಪೊಲೀಸರು ಗೊರೂರು ರಾಮಸ್ವಾಮಿ ಅಯ್ಯಂಗಾರರಿಗೆ ಆಶ್ರಯ ನೀಡಲು ಕಾರಣವೇನು?
13. ಕ್ರಿಕೆಟ್ ಪಟು ಅನಿಲ್ ಕುಂಬ್ಳೆಯನ್ನು ಕುರಿತು ಡುಂಢಿರಾಜ್ ಬರೆದಿರುವ ಹನಿಗವನ ಯಾವುದು?
14. ಕೋಗಿಲೆಯ ಕೂಜನದಿಂದಾಗುವ ಬದಲಾವಣೆಗಳನ್ನು ಚೆನ್ನವೀರ ಕಣವಿಯವರ ಕವನದಲ್ಲಿ ಹೇಗೆ ವ್ಯಕ್ತವಾಗಿದೆ?
       15. ಕವಿಯು ಕೋಗಿಲೆಯನ್ನು ಏನೆಂದು ಕೋರಿದ್ದಾರೆ?
16. ಹೊಸ ಮನುಷ್ಯನನ್ನಾಗಿ ಮಾಡುವುದು ಯಾವುದು? ಹೇಗೆ ? ಎಂದು ಕವಿಯ ಹೇಳಿದ್ದಾರೆ.
17. ಬಿ. ಆರ್.ಲಕ್ಷ್ಮಣರಾವ್ ಅವರ ಹೇಳಿರುವಂತೆ ಈ ದೇಶದ ಪ್ರಗತಿಗೆ ಯಾವುದು ಕಾರಣವಾಗುತ್ತದೆ? ಹೇಗೆ?
18. ಅನಿಲ್ ಕುಂಬ್ಳೆಯವರು ಎದುರಾಳಿಗೆ ಸಿಂಹಸ್ವಪ್ನವಾಗಿದ್ದರು ಹೇಗೆ?
19. ಐಪಿಎಲ್ ಕ್ರೀಡಾಸ್ಪರ್ಧೆಯಲ್ಲಿ ಅನಿಲ್ ಕುಂಬ್ಳೆಯವರ ಸಾಧನೆಗಳೇನು?
20. ಕಂಬಳಿಯವರು ವರ್ಣಿಸಿರುವ ಪ್ರಯಾಣದ ವೇಳೆ ಹೃದಯವೇ ಕಿತ್ತು ಬಾಯಿಗೆ ಬಂದಂತಾಗುತ್ತಿದ್ದ ಸಂದರ್ಭವನ್ನು ವಿವರಿಸಿರಿ?
ಈ ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಸಹಿತ ಸ್ವಾರಸ್ಯವನ್ನು ವಾಕ್ಯಗಳಲ್ಲಿ ಬರೆಯಿರಿ.    2X3=6
21. “ಇಲ್ಲಿ ಎಲ್ಲ ಪೊಲೀಸರೂ ಹಾಗೆಯೇ”.
22. “ಎಲ್ಲ ಮರೆತು ಉಲಿಯುತಿರುವೆ ಸುಮಧುರಾ”.   
ಈ ಸಾಹಿತಿಗಳ ಸ್ಥಳ, ಕಾಲ, ಕೃತಿಗಳನ್ನು ವಾಕ್ಯಗಳಲ್ಲಿ ಬರೆಯಿರಿ.                       2X3=6
23. ಜಿ. ಪಿ. ರಾಜರತ್ನಂ
24. ಕೆ. ಎಸ್ . ನಿಸಾರ್ ಅಹಮದ್
ಈ ಕೆಳಗಿನ ಪದ್ಯಭಾಗವನ್ನು ಪೂರ್ಣಮಾಡಿರಿ.                                            1X3=3
25. ಅಕ್ಷರ  __________________                                                                    
          _______________________                                                                                                          _______________________
          __________________ರೂಪ 
ಅಥವಾ  
      ಕರ್ನಾಟಕ  ________________                                                                          _________________________  
     ________________________                                                                     _______ಮುಗಿಲು__________ 
ಈ ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳ ಉತ್ತರಗಳನ್ನು ಬರೆಯಿರಿ.              2X4=8
26. ರಾಜರತ್ನಂರವರು ‘ಅಷ್ಟಾದಶಾಕ್ಷರೀಮಂತ್ರ’ದಲ್ಲಿ ಅಡಗಿರುವ ಕನ್ನಡನಾಡಿನ ಹಿರಿಮೆಯನ್ನು ಹೇಗೆ ವರ್ಣಿಸಿದ್ದಾರೆ? ವಿವರಿಸಿರಿ.
ಅಥವಾ
ಅನಿಲ್ ಕುಂಬ್ಳೆಯವರ ಸಾಧನೆಗಳನ್ನು ವಿವರಿಸಿರಿ.
27. ಭೂಮಿತಾಯಿಯ ಮಕ್ಕಳಾದ ನಾವೆಲ್ಲರೂ ಒಂದಾಗಬೇಕೆಂಬ ಭಾವನೆ ‘ಒಂದೇ’ ಎಂಬ ಕವನದಲ್ಲಿ ಹೇಗೆ ವ್ಯಕ್ತವಾಗಿದೆ? ವರ್ಣಿಸಿರಿ.
ಅಥವಾ
ಚೆನ್ನವೀರ ಕಣವಿಯವರು ಮಾಡಿರುವ ‘ಕೋಗಿಲೆ’ಯ ಕೂಜನದ ಸೊಗಸಾದ ವರ್ಣನೆಯನ್ನು ನಿಮ್ಮ ಮಾತುಗಳಲ್ಲಿ ವರ್ಣಿಸಿರಿ.
ಭಾಗ - `ಬಿ’
ಅನ್ವಯಿಕ ವ್ಯಾಕರಣ – 12 ಅಂಕಗಳು
ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕೊಟ್ಟಿರುವ ಜಾಗದಲ್ಲಿಯೇ ಕ್ರಮಾಕ್ಷರದೊಂದಿಗೆ ಉತ್ತರವನ್ನು ಬರೆಯಿರಿ.12X1=12
28. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳು:
(ಎ) ಆರು (ಸಿ)  ಏಳು  (ಬಿ) ಹದಿಮೂರು (ಡಿ) ಇಪ್ಪತ್ತೈದು
29. ಕ,ತ,ಪ ಗಳಿಗೆ ಗ,ದ,ಬ ಅಕ್ಷರಗಳು ಆದೇಶವಾಗಿ ಬರುವ ಸಂಸ್ಕೃತ ಸಂಧಿ :
(ಎ) ಆಗಮ (ಸಿ) ಆದೇಶ (ಬಿ) ಶ್ಚುತ್ವ (ಡಿ) ಜಸ್ತ್ವ
30. ‘ಕವಿ’ ಪದದ ಅನ್ಯಲಿಂಗ ರೂಪ
       (ಎ) ಕವಯಿತ್ರಿ  (ಸಿ)  ಕವಯತ್ರಿ  (ಬಿ) ಕವಿಯಿತ್ರಿ (ಡಿ) ಕವಿಯತ್ರಿ
31. ಸಪ್ತಮೀ ವಿಭಕ್ತಿ ಪ್ರತ್ಯಯ :
(ಎ) ಉ  (ಸಿ) ಅನ್ನು  (ಬಿ) ಅ (ಡಿ) ಅಲ್ಲಿ
32. ವಿಜ್ಞಾನಿಗಳು ತಮ್ಮ ಸಂಶೋಧನೆಗಳಿಂದ ದೇಶವನ್ನು ಬೆಳೆಸುತ್ತಿದ್ದಾರೆ. ಈ ವಾಕ್ಯದಲ್ಲಿರುವ ಅನ್ವರ್ಥನಾಮ ಪದ :
(ಎ) ವಿಜ್ಞಾನಿಗಳು  (ಸಿ) ತಮ್ಮ (ಬಿ) ಸಂಶೋಧನೆ (ಡಿ) ದೇಶವನ್ನು
33. ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆಯಾಗಿರುವುದು:
(ಎ) ನಾನು (ಸಿ) ನಾವು (ಬಿ) ತಾವು (ಡಿ) ನೀವು
34. ‘ಬಿನದ’ - ಪದದ ತತ್ಸಮ ರೂಪ:
(ಎ) ವಿನೋದ (ಸಿ) ಆನಂದ  (ಬಿ) ಬಿನ್ನಣ (ಡಿ) ಬಿಯದ
35. ನಾಕ ಪದದ ವಿರುದ್ಧಾರ್ಥ ಪದ     :
(ಎ) ಸ್ವರ್ಗ (ಸಿ)  ನರಕ  (ಬಿ) ಸಗ್ಗ  (ಡಿ) ನಾಯಕ
36. ‘ಗೌರಿಯ ಮುಖ ಮಗುವಿನಂತಿದೆ’. –ಈ ಅಲಂಕಾರ ವಾಕ್ಯದಲ್ಲಿರುವ ಉಪಮೇಯ  :
(ಎ) ಗೌರಿ (ಸಿ) ಮುಖ (ಬಿ) ಮಗು (ಡಿ) ಅಂತಿದೆ.
37. ‘ಸ್ಪಿನ್ ಮಾಂತ್ರಿಕನ ಚೆಂಡುಗಳು ಎದುರಾಳಿ ದಾಂಡಿಗರಿಗೆ ಸಿಂಹಸ್ವಪ್ನವಾಗಿರುತ್ತಿತ್ತು’- ಈ ವಾಕ್ಯದಲ್ಲಿರುವ ನುಡಿಗಟ್ಟು:
 (ಎ) ಚೆಂಡುಗಳು (ಸಿ) ಎದುರಾಳಿ (ಬಿ) ಸಿಂಹಸ್ವಪ್ನ (ಡಿ) ದಾಂಡಿಗ
38. ಈ ಕೆಳಗಿನವುಗಳಲ್ಲಿ ದ್ವಿರುಕ್ತಿ ಪದ :
 (ಎ) ಮತ್ತೆ ಮತ್ತೆ (ಸಿ) ಸರ ಸರ (ಬಿ) ದಬದಬ    (ಡಿ) ಕೈಚಾಚು
39.‘ನನ್ನನ್ನು ಮೋಟಾರಿನಲ್ಲಿ ಕೂರಿಸಿಕೊಂಡು ತಮ್ಮ ಕೆಲಸದ ಮೇಲೆ ಹೊರಟರು’. – ಈ ವಾಕ್ಯದಲ್ಲಿರುವ ಅನ್ಯದೇಶ್ಯಪದ:
 (ಎ) ನನ್ನನ್ನು (ಸಿ) ಮೋಟಾರಿನಲ್ಲಿ (ಬಿ) ಕೂರಿಸಿಕೊಂಡು (ಡಿ) ಕೆಲಸದ ಮೇಲೆ
ಭಾಗ - `ಸಿ’
ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 15 ಅಂಕಗಳು
40. ಈ ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ಸ್ವಾರಸ್ಯ ಸಹಿತ ವಿಸ್ತರಿಸಿ ಬರೆಯಿರಿ.  1X3=3
•  ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದಯ ಪರರಿಗೆ.
•  ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.
•  ಉಪ್ಪು ತಿಂದವನು ನೀರು ಕುಡಿಯಲೇ ಬೇಕು.
ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.                 1X4=4
     ನಮ್ಮ ಪರಂಪರೆಯಲ್ಲಿ ಗುರುವಿಗೆ ಭಗವಂತನ ಸ್ಥಾನವನ್ನು ನೀಡಿದ್ದೇವೆ. ಮನುಷ್ಯನ ಬದುಕನ್ನು ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಪಶುತ್ವದಿಂದ ದೈವತ್ವದೆಡೆಗೆ ನಡೆಸುವವನೆ ಗುರು. ಅದಕ್ಕೆಂದೇ ಗುರುನಾನಕರು ’ನನ್ನ ಮುಂದೆ ಗುರು ಮತ್ತು ಗೋವಿಂದ (ಭಗವಂತ) ಇಬ್ಬರೂ ಒಮ್ಮೆಗೆ ಬಂದರೆ ನನ್ನ ಗುರುವಿಗೆ ಮೊದಲು ವಂದಿಸುತ್ತೇನೆ ನಂತರ ಭಗವಂತನಿಗೆ ನಮಸ್ಕರಿಸುತ್ತೇನೆ, ಏಕೆಂದರೆ ಗುರುವಿಂದಲೇ ಅರಿವು, ಅರಿವಿನಿಂದಲೇ ಭಗವಂತನ ಪ್ರಾಪ್ತಿ’ ಎಂದು ಹಾಡಿದ್ದಾರೆ. ಯೋಗ್ಯ ಗುರು ಮತ್ತು ಸ್ಪಷ್ಟ ಗುರಿಯುಳ್ಳ ವ್ಯಕ್ತಿ ನಿಸ್ಸಂದೇಹವಾಗಿ ಪರಿಪೂರ್ಣತೆಯೆಡೆಗೆ ಸಾಗಬಲ್ಲರು.            
ಪ್ರಶ್ನೆಗಳು:
41 ನಮ್ಮ ಪರಂಪರೆಯಲ್ಲಿ ಗುರುವಿಗೆ ಯಾವ ಸ್ಥಾನವನ್ನು ನೀಡಿದೆ?
42. ಗುರು ಎಂದರೆ ಯಾರು?
43. ಗುರುನಾನಕರು ಗುರುವಿಗೆ ಮೊದಲು ವಂದಿಸುತ್ತೇನೆಂದು ಹೇಳಿರುವುದೇಕೆ?
44. ಪರಿಪೂರ್ಣತೆಯೆಡೆಗೆ ಸಾಗಬಲ್ಲವರು ಯಾರು?
45. ರಜೆಗೆ ಬೆಂಗಳೂರಿಗೆ ಬರುವಂತೆ ಆಹ್ವಾನಿಸಿ ಭದ್ರಾವತಿಯ ನ್ಯೂ ಟೌನ್ ನಲ್ಲಿರುವ ನಿಮ್ಮ ಗೆಳತಿ ಆಶಾಗೆ ಒಂದು ಪತ್ರ ಬರೆಯಿರಿ.
ಅಥವಾ
ಸರ್ಕಾರಿ ಪ್ರೌಢಶಾಲೆ, ಕುವೆಂಪು ನಗರ, ಮೈಸೂರಿನಲ್ಲಿ ಓದುತ್ತಿರುವ ಅನಿತಳಾದ ನೀವು ಸೂಕ್ತ ಕಾರಣ ತಿಳಿಸಿ ರಜೆಯನ್ನು ಕೊಡಬೇಕೆಂದು ಕೋರಿ ಶಾಲಾ ಮುಖ್ಯೋಪಾಧ್ಯಾಯರಿಗೆ ರಜಾ ಚೀಟಿಯನ್ನು ಬರೆಯಿರಿ.            1 X4=4
46. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ಹತ್ತು ವಾಕ್ಯಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ.                                                                                        1 X4=4
•       ಸೊಳ್ಳೆ ನಿರ್ಮೂಲನ ಆಂದೋಳನ.
•       ಗ್ರಂಥಾಲಯ.
•       ಮಕ್ಕಳ ಶೋಷಣೆ.

*******************