Monday 31 August 2015

ಆಗದು

ಬಯಸಿದುದೆಲ್ಲವನು ಪಡೆಯಲಾಗದು
ಪಡೆದುದೆಲ್ಲವನು ಅನುಭವಿಸಲಾಗದು
ಅನುಭವಿಸುವುದು ಶಾಶ್ವತವಾಗಿರಲಾರದು
ಶಾಶ್ವತವಾದುದು ಸುಖನೀಡಲಾಗದು-ನನಕಂದ||

Sunday 30 August 2015

'ರಾಹುಲ್ ದ್ರಾವಿಡ್' ಗದ್ಯ ಭಾಗದ ಪ್ರಶ್ನೆಗಳು

ರಾಹುಲ್ ದ್ರಾವಿಡ್
-ಸಂಪಾದಿತ
1.  ಅಮೇರಿಕಾದ ರಾಷ್ಟ್ರೀಯ ಕ್ರೀಡೆ ಯಾವುದು?
2. ಇಂಗ್ಲೇಂಡಿನ ರಾಷ್ಟ್ರೀಯ ಕ್ರೀಡೆ ಯಾವುದು?
3. ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು?
4.ರಗ್ಬಿ ಯಾವ ದೇಶಗಳ ರಾಷ್ಟ್ರೀಯ ಕ್ರೀಡೆಯಾಗಿದೆ?
5. ಜಗತ್ತಿನಲ್ಲಿ ಜನಪ್ರಿಯತೆಯನ್ನು ಗಳಿಸಿ ಮೆರೆಯುತ್ತಿರುವ ಕ್ರೀಡೆಯಾವುದು?
6. ಕ್ರಿಕೆಟ್ ಆಟಕ್ಕಿರುವ ಅಪವಾದವೇನು? ಆ ರೀತಿಯ ಅಪವಾದಕ್ಕೆ ಕಾರಣವೇನು?
7. ಒಂದು ದಿನದ ಕ್ರಿಕೆಟ್ ರೂಢಿಗೆ ಬರಲು ಕಾರಣವೇನು?
8. ಕ್ರಿಕೆಟ್ ಆಟವನ್ನು ರೋಮಾಂಚನಗೊಳಿಸಲು ಕೈಗೊಂಡಿರುವ ಕ್ರಮ ಯಾವುದು?
9. ಕ್ರಿಕೆಟ್ ಆಟದ ಮೂರು ವಿಧಗಳಾವುವು?
10. ಕ್ಷಮತೆಯು ಯಾವಾಗಲೂ ಸ್ಥಿರವಲ್ಲವೆಂದು ಹೇಳಲು ಕಾರಣವೇನು?
11.ಕ್ಷಮತೆಯು ಹಾವು ಏಣಿ ಆಟವಿದ್ದಂತೆ ಎಂದು ಹೇಳಲು ಕಾರಣವೇನು?
12.  ಹಾವು ಏಣಿ ಆಟವೆಂದರೇನು?
13.  ‘ಕ್ಷಮತೆಯು ಹಾವು ಏಣಿ ಆಟವಿದ್ದಂತೆ’-ಇಲ್ಲಿರುವ ಅಲಂಕಾರ ಯಾವುದು?
14. ನಿಮಗೆ ಗೊತ್ತಿರುವ ಭಾರತೀಯ ಪ್ರಮುಖ ಕ್ರಿಕೆಟ್ ಸಾಧಕರನ್ನು ಹೆಸರಿಸಿ.
15.  ಭಾರತೀಯ ಕ್ರಿಕೆಟ್ ಎಂದೊಡನೆ ಕಣ್ಣಮುಂದೆ ಸುಳಿದಾಡುವ ಯಶಸ್ವಿ ಆಟಗಾರರು ಯಾರು ಯಾರು? (ಹತ್ತು ಜನರನ್ನು ಹೆಸರಿಸಿ)
16. ಕರ್ನಾಟಕದ ಪ್ರಖ್ಯಾತ ಹತ್ತು ಕ್ರಿಕೆಟ್ ಪಟುಗಳನ್ನು ಹೆಸರಿಸಿ?
17.  ‘ಗೂಗ್ಲಿ’ ಬೌಲಿಂಗ್ ನಲ್ಲಿ ಖ್ಯಾತಿಪಡೆದ ಭಾರತದ ಬೌಲರ್ ಯಾರು?
18.  ‘ಗೂಗ್ಲಿ’ ಎಂದೊಡನೆ ನೆನಪಿಗೆ ಬರುವ ಕರ್ನಾಟಕದ ಕ್ರಿಕೆಟಿಗ ಯಾರು?
19. ಬಿ. ಎಸ್ ಚಂದ್ರಶೇಖರ್ ಯಾರು? ಅವರು ಯಾವ ರೀತಿಯ ಬೌಲಿಂಗಿಗೆ ಹೆಸರಾಗಿದ್ದರು?
20.     ಲೇಟ್ ಕಟ್, ಸ್ಕ್ವೇರ್ ಕಟ್ ನಿಂದ ಹೆಸರು ಪಡೆದ ಕರ್ನಾಟಕದ ಕ್ರಿಕೆಟ್ ಪಟು ಯಾರು?
21.    ಜಿ. ಆರ್ ವಿಶ್ವನಾಥ್ ಯಾರು? ಇವರು ಎಂತಹ ಹೊಡೆತಗಳಿಗೆ ಹೆಸರಾಗಿದ್ದರು?
22. ಜಿಮ್ ಲೇಕರ್ ಯಾರು ? ಅವರ ಸಾಧನೆ ಏನು?
23. ಒಂದೇ ಇನ್ನಿಂಗ್ಸ್ ಎಲ್ಲಾ ಹತ್ತು  ವಿಕೆಟ್ ಗಳನ್ನು ಪಡೆದ ಭಾರತೀಯ ಕ್ರಿಕೆಟ್ ಆಟಗಾರ ಯಾರು?
24.     ಅನಿಲ್ ಕುಂಬ್ಳೆಯ ಸಾಧನೆಗಳೇನು?
25.   ಗೋಡೆ ಎಂದು ಕರೆಸಿಕೊಳ್ಳುವ ಕ್ರಿಕೆಟಿಗ ಯಾರು?
26.   ರಾಹುಲ್ ದ್ರಾವಿಡರು  ಯಾವ ರಾಜ್ಯದ ಪರವಾಗಿ ಆಡುತ್ತಿದ್ದರು?
27.   ರಕ್ಷಣಾತ್ಮಕ ಆಟಕ್ಕೆ ಹೆಸರಾದ ಕರ್ನಾಟಕದ ಕ್ರಿಕೆಟಿಗ ಯಾರು?
28. ರಾಹುಲ್ ದ್ರಾವಿಡರು ಕರ್ನಾಟಕ ತಂಡದ ಅನಿವಾರ್ಯ ಆಟಗಾರರೆಂದು ಖ್ಯಾತಿಯನ್ನು ಪಡೆಯಲು ಕಾರಣವೇನು?
29.ರಾಹುಲ್ ದ್ರಾವಿಡರ ತಂದೆ ತಾಯಿ ಯಾರು?
30.       ರಾಹುಲ್ ದ್ರಾವಿಡರ ಜನ್ಮ ಸ್ಥಳ ಯಾವುದು?
31.      ರಾಹುಲ್ ದ್ರಾವಿಡರ ಮನೆತನದ ಹೆಸರು ಯಾವುದು?
32.   ದ್ರಾವಿಡ್ ಎಂಬ ಹೆಸರು ರಾಹುಲ್ ದ್ರಾವಿಡರ ಮನೆತನಕ್ಕೆ ಬರಲು ಕಾರಣವೇನು?
33. ರಾಹುಲ್ ದ್ರಾವಿಡರ ಮುತ್ತಜ್ಜ ಪ್ರಧಾನ ಪುರೋಹಿತರಾಗಿದ್ದುದು ಎಲ್ಲಿ?
34.           ದಕ್ಷಿಣ ಭಾರತದಿಂದ ಬಂದವರನ್ನು ಗ್ವಾಲಿಯರ್ ನಲ್ಲಿ ಏನೆಂದು ಕರೆಯುತ್ತಿದ್ದರು?
35. ರಾಹುಲ್ ದ್ರಾವಿಡರ ಮುತ್ತಜ್ಜ ತಾಂಜಾವೂರಿನಿಂದ ಎಲ್ಲಿಗೆ ವಲಸೆ ಹೋಗಿದ್ದರು?
36.   ರಾಹುಲ್ ದ್ರಾವಿಡರ ವಿಷಯದಲ್ಲಿ ಕರ್ನಾಟಕದವರಿಗೆ ಹೆಮ್ಮೆಯ ವಿಷಯಗಳಾಗಿರುವುದು ಯಾವುವು?
37.     ರಾಹುಲ್ ದ್ರಾವಿಡರ ಮುತ್ತಜ್ಜ ದ್ರಾವಿಡರು ಎನಿಸಿ ಕೊಂಡಿದುದು ಹೇಗೆ?
38.     ಬೆಳೆಯ ಸಿರಿ ಮೊಳಕೆಯಲ್ಲಿ ಎಂಬ ಮಾತು ದ್ರಾವಿಡರಿಗೆ ಹೇಗೆ ಅನ್ವಯವಾಗುತ್ತದೆ? ತಿಳಿಸಿರಿ.
39.     ರಾಹುಲ್ ದ್ರಾವಿಡರ ಪ್ರತಿಭೆಗೆ ನೀರೆರೆದು, ದಿಕ್ಕು ತೋರಿಸಿದವರು ಯಾರು?
40.    ರಾಹುಲ್ ದ್ರಾವಿಡರು ತಮ್ಮ ಹನ್ನೆರಡನೆಯ ವಯಸ್ಸಿನಲ್ಲಯೇ ಶಾಲಾತಂಡವನ್ನು ಪ್ರತಿನಿಧಿಸುವಂತಾದುದು ಹೇಗೆ?
41.      ರಾಹುಲ್ ದ್ರಾವಿಡರು ಸತತ ಪರಿಶ್ರಮಕ್ಕೆ ಸಂದ ಸೂಕ್ತ ಸ್ಥಾನಮಾನ ಯಾವುದು?
42.     ರಾಹುಲ್ ದ್ರಾವಿಡರ ಸಾಧನೆಯು ಊರ್ಧ್ವಗಾಮಿಯಾದುದೆಂದು ಹೇಗೆ ಹೇಳುವಿರಿ?
43.     ರಾಹುಲ್ ದ್ರಾವಿಡರು ಕೇವಲ ಬ್ಯಾಟಿಂಗಿಗಷ್ಟೇ ತಮ್ಮನ್ನು ತೊಡಗಿಸಿಕೊಳ್ಳಲು ಕಾರಣವೇನು?
44.    ಬ್ಯಾಟಿಂಗಿಗಷ್ಟೇ ತೊಡಗಿಸಿಕೊಳ್ಳುವಂತೆ ರಾಹುಲ್ ದ್ರಾವಿಡರಿಗೆ ಸಲಹೆ ನೀಡಿದ ಹಿರಿಯ ಆಟಗಾರ ಯಾರು?
45.     ರಾಹುಲ್ ದ್ರಾವಿಡರ ಆಟಕ್ಕೊಂದು ಕಲಾತ್ಮಕತೆ ದೊರೆತದ್ದು ಹೇಗೆ? ಇದಕ್ಕೆ ಕಾರಣರು ಯಾರು?
46.    ರಾಹುಲ್ ದ್ರಾವಿಡರ ಆಟಕ್ಕೊಂದು ಕಲಾತ್ಮಕತೆ ದೊರಕುವಂತಾಗಲು ಜಿ. ಎಸ್. ವಿಶ್ವನಾಥ್ ಹೇಗೆ ಕಾರಣರಾದರು?
47.     ರಾಹುಲ್ ದ್ರಾವಿಡರು ಇಂಗ್ಲೆಂಡ್ ಪ್ರವಾಸದ ತಂಡಕ್ಕೆ ಆಯ್ಕೆಯಾಗಲು ಕಾರಣವೇನು?
48.     ರಾಹುಲ್ ದ್ರಾವಿಡರು ಇಂಗ್ಲೆಂಡ್ ಪ್ರವಾಸದ ತಂಡಕ್ಕೆ ಯಾವಾಗ ಆಯ್ಕೆಯಾದರು?
49.    ರಾಹುಲ್ ದ್ರಾವಿಡರ ಕ್ರಿಕೆಟ್ ಜೀವನದಲ್ಲಿ ಜಿ. ಎಸ್. ವಿಶ್ವನಾಥರ ಪಾತ್ರವೇನು?
50.     ರಾಹುಲ್ ದ್ರಾವಿಡರು ವಿದ್ಯಾಭ್ಯಾಸ ಯಾವ ಊರಿನಲ್ಲಿ ನಡೆಯಿತು?
51.      ರಾಹುಲ್ ದ್ರಾವಿಡರ ಚೊಚ್ಚಲ ಟೆಸ್ಟ್ ಯಾವುದು?
52.     ರಾಹುಲ್ ದ್ರಾವಿಡರ ಭವಿಷ್ಯಕ್ಕೆ ಮುನ್ನುಡಿಯಾದ ಟೆಸ್ಟ್ ಯಾವುದು? ಹೇಗೆ?
53.     ಮೊದಲ ಟೆಸ್ಟ್ ನಲ್ಲೇ ರಾಹುಲ್ ದ್ರಾವಿಡರ ಸಾಧನೆಯೇನು?
54.     ರಾಹುಲ್ ದ್ರಾವಿಡರು ಆಡಿದ ಟಸ್ಟ್ ಪಂದ್ಯಗಳು ಎಷ್ಟು?
55.     ರಾಹುಲ್ ದ್ರಾವಿಡರು ಗಳಿಸಿದ ರನ್ ಗಳು ಎಷ್ಟು?
56.     ರಾಹುಲ್ ದ್ರಾವಿಡರವರಿಗೆ ‘ಗೋಡೆ’ ಎಂಬ ಹೆಸರು ಅನ್ವರ್ಥವಾದುದು ಹೇಗೆ?
57.     ಟೆಸ್ಟ್ ಪ್ರವೇಶಿಸಿದ ನಾಲ್ಕನೆಯ ವರ್ಷವೇ ರಾಹುಲ್ ದ್ರಾವಿಡರಿಗೆ ಸಂದ ಪ್ರಶಸ್ತಿಯಾವುದು?
58.     ‘ವಿಸ್ಡನ್’ ಸಂಸ್ಥೆಯು ರಾಹುಲ್ ದ್ರಾವಿಡರಿಗೆ ನೀಡಿದ ಪ್ರಶಸ್ತಿಯಾವುದು?
59.     ರಾಹುಲ್ ದ್ರಾವಿಡರ ನಾಯಕತ್ವದಲ್ಲಿ ಭಾರತವು ಜಯಗಳಿಸಿದ ಎರಡು ಕ್ರಿಕೆಟ್ ಪಂದ್ಯಗಳಾವುವು?
60.     ಭಾರತ ಕ್ರಿಕೆಟ್ ತಂಡದ ನಾಯಕರಾಗಿ ರಾಹುಲ್ ದ್ರಾವಿಡರ ಸಾಧನೆಯೇನು?
61.      ಭಾರತವು 21 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಪಡೆದ ಕ್ರಿಕೆಟ್ ಸರಣಿಜಯ ಯಾವುದು? ಈ ಪಂದ್ಯದ ನಾಯಕತ್ವ ವಹಿಸಿದ್ಧವರು ಯಾರು?
62.     ರಾಹುಲ್ ದ್ರಾವಿಡರ ನಾಯಕತ್ದದಲ್ಲಿ ಜಯಗಳಿಸಿದ ಮೊದಲ ಕ್ರಿಕೆಟ್ ಪಂದ್ಯಯಾವುದು?
63.     ರಾಹುಲ್ ದ್ರಾವಿಡರ ಕ್ರಿಕೆಟ್ ಆಟದ ವೈಶಿಷ್ಟ್ಯತೆ ಏನು?
64.    ರಾಹುಲ್ ದ್ರಾವಿಡರು ಬೇರೆ ಆಟಗಾರರಿಗಿಂತ ಭಿನ್ನ ಹೇಗೆ?
65.     ದೇಶ ಮೊದಲು, ದೇಶಕ್ಕಾಗಿ ಆಟ ಎಂಬ ಮಾತಿಗೆ ರಾಹುಲ್ ದ್ರಾವಿಡರು ಬದ್ಧರಾಗಿದ್ದರೆಂದು ಹೇಗೆ ಹೇಳುವಿರಿ?
66.     ರಾಹುಲ್ ದ್ರಾವಿಡರು ಟೆಸ್ಟ್ ಮತ್ತು ಏಕದಿನ ಪಂದ್ಯಕ್ಕೆ ವಿದಾಯ ಹೇಳಿದ್ದೇಕೆ?
67.     ರಾಹುಲ್ ದ್ರಾವಿಡರು ಒಬ್ಬ ಅಪೂರ್ವ ಸಾಧಕ ಎಂದು ಹೇಗೆ ಹೇಳುವಿರಿ?
68.     ರಾಹುಲ್ ದ್ರಾವಿಡರ ಸಾಧನೆಗಳಾವುವು?
69.     ರಾಹುಲ್ ದ್ರಾವಿಡರು ಯಶಸ್ಸಿನ ಶಿಖರದಲ್ಲಿರುವಾಗಲೇ ಕ್ರಿಕೆಟ್ ಗೆ ವಿದಾಯ ಹೇಳಿದ್ದೇಕೆ?
70.     ರಾಹುಲ್ ದ್ರಾವಿಡರ ಸಾಧನೆಗಳನ್ನು ಪಟ್ಟಿ ಮಾಡಿರಿ.

*************

ಎಲ್ಲ ಬರಡಾಗುತಿದೆ

ದೊಡ್ಡವರ ಸಣ್ಣತನ ಸಾಮ್ರಾಜ್ಯವಾಳುತಿದೆ
ಕಿರಿಯರಲಿ ಹಿರಿತನದ ಹೆಡೆಯೆತ್ತಿ ಆಡುತಿದೆ
ಮುಖವಾಡ ನಿಜಮುಖವ ಮರೆಮಾಚುತಿದೆ
ಅಹಮಿನಲಿ ಎಲ್ಲ ಬರಡಾಗುತಿದೆ-ನನ ಕಂದ

Saturday 29 August 2015

ನಮ್ಮ ಹಿರಿಯರು

ಹರಿಕಥೆ, ಶಿವಕಥೆಯ ಕೇಳಿ ಗಮಕವನಾಲಿಸಿ
ದೊಡ್ಡಾಟ, ಸಣ್ಣಾಟ, ಬಯಲಾಟಗಳ ನೋಡಿ
ಸಂತೆ, ಜಾತ್ರೆ, ರಥೋತ್ಸವಗಳಲಿ ಭಾಗಿಯಾಗಿ
ಸುಸಂಸ್ಕೃತರಾದರು ನಮ್ಮರು-ನನಕಂದ|| 

ಎರಡನೆಯ ರೂಪಣಾತ್ಮಕ ಪ್ರಶ್ನೆ ಪತ್ರಿಕೆ

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಬೆಂಗಳೂರು-03.
ಎರಡನೆಯ ರೂಪಣಾತ್ಮಕ ಪರೀಕ್ಷೆ ಆಗಸ್ಷ್-2015
ಕನ್ನಡ ತೃತೀಯ ಭಾಷೆ
ಹತ್ತನೇ ತರಗತಿ
  ಗರಿಷ್ಠ ಕಾಲಾವಧಿ : 45 ನಿಮಿಷಗಳು                                          ಗರಿಷ್ಠಾಂಕ : 20
ಭಾಗ - `
ಪಠ್ಯಗಳ ಅಧ್ಯಯನ (ಗದ್ಯಪದ್ಯಪೋಷಕ ಅಧ್ಯಯನ) 13 ಅಂಕಗಳು
 ಕೆಳಗಿನ ಪ್ರಶ್ನೆಗಳಿಗೆ ಒಂದೊಂದೇ ವಾಕ್ಯದ ಉತ್ತರವನ್ನು ಬರೆಯಿರಿ.                            3X1=3
1)  ಭೂಮಿಯನ್ನು ‘ವಸುಧಾ ಎಂದು ಕರೆಯಲು ಕಾರಣವೇನು?
2) ತಾಯಿಯ ಬಸಿರು ಒಂದೇ ಆಗಿದ್ದರೂ ಬೇರೆಯಾಗಿರುವುದು ಯಾವುದು ಎಂದು ಕವಿ ನಿಸಾರ್ ಹೇಳಿದ್ದಾರೆ?
3) ‘ಹೀಗೊಂದು ಟಾಪ್ ಪ್ರಯಾಣ ಯಾವ ಸಾಹಿತ್ಯ ಪ್ರಕಾರಕ್ಕೆ ಉದಾಹರಣೆಯಾಗಿದೆ?
 ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡುಮೂರು ವಾಕ್ಯಗಳ ಉತ್ತರಗಳನ್ನು ಬರೆಯಿರಿ.              2X2=4 
4) ಕರ್ನಾಟಕತ್ವದ ಗುಣ ವಿಶೇಷಗಳಾವುವು?
5) ಕಳಸಶಿಲುಬೆಬಿಳಿ ಮಿನಾರ್ ಇವು ಯಾವ ಧರ್ಮದ ಸಂಕೇತಗಳಾಗಿವೆ?
 ಕೆಳಗಿನ ಹೇಳಿಕೆಯನ್ನು ಸಂದರ್ಭ ಮತ್ತು ಸ್ವಾರಸ್ಯ ಸಹಿತ ವಾಕ್ಯಗಳಲ್ಲಿ ವಿವರಿಸಿ.                  1X2=2
6) “ಸುಕವಿಯಶೋ ನಿರ್ಮತ್ಸರನ್.”
                       ಅಥವಾ
ರಸಕವಿತ್ವ ಒಂದೆ.”
 ಸಾಹಿತಿಗಳ ಸ್ಥಳ ಮತ್ತು ಕೃತಿಗಳನ್ನು ವಾಕ್ಯಗಳಲ್ಲಿ ಬರೆಯಿರಿ.                                  2X2=4
7) ಜಿ.ಪಿರಾಜರತ್ನಂ
8) ಕೆ.ಎಸ್ನಿಸಾರ್ ಅಹಮದ್       
ಭಾಗ - `ಬಿ
ಅನ್ವಯಿಕ ವ್ಯಾಕರಣ - 3 ಅಂಕಗಳು
 ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿಕ್ರಮಾಕ್ಷರದೊಂದಿಗೆ ಉತ್ತರವನ್ನು ಬರೆಯಿರಿ.                           3X1=3
9) ‘ಒರೆಗಲ್ಲು  ಸಂಧಿಗೆ ಉದಾಹರಣೆ:
(ಆಗಮ (ಬಿಆದೇಶ (ಸಿಲೋಪ (ಡಿಜಸ್ತ್ವ
10) ಈ ಕೆಳಗಿನ ಪದಗಳಲ್ಲಿ ದ್ವಿತೀಯಾ ವಿಭಕ್ತಿ ಪ್ರತ್ಯಯವನ್ನು ಒಳಗೊಂಡ ಪದ:
(ರಾಜ್ಯೋತ್ಸವವನ್ನು (ಬಿರಾಜ್ಯೋತ್ಸವಕ್ಕೆ (ಸಿರಾಜ್ಯೋತ್ಸವದಿಂದ (ಡಿರಾಜ್ಯೋತ್ಸವ
11) ಅಲಂಕಾರ ವಾಕ್ಯದಲ್ಲಿ ಯಾವ ವಸ್ತುವನ್ನು ವರ್ಣಿಸುತ್ತಾರೋ ಅದನ್ನು ಹೀಗೆನ್ನುತ್ತಾರೆ:
(ವಣ್ರ್ಯ (ಬಿಅವಣ್ರ್ಯ (ಸಿಉಪಮಾನ (ಡಿವರ್ಣಕ
ಭಾಗ - `ಸಿ
 ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 4 ಅಂಕಗಳು   
12) ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಯಾವುದಾದರು ಎರಡು ಪ್ರಶ್ನೆಗಳಲ್ಲಿ ಉತ್ತರವನ್ನು       ಬರೆಯಿರಿ.                                                                         2X1=2
    ವಿವೇಕಾನಂದರು ತಮ್ಮ ಗುರು ಶ್ರೀ ರಾಮಕೃಷ್ಣ ಪರಮಹಂಸರನ್ನು ನೆನೆಯುತ್ತಜಗನ್ಮಾತೆಯ  ಲೀಲಾವಿಲಾಸಗಳನ್ನು ಸ್ಮರಿಸುತ್ತಕಾಲಟಿಯಿಂದ ಭಾರತದ ದಿಗ್ವಿಜಯಕ್ಕೆ ಹೊರಟ ಶಂಕರಾಚಾರ್ಯರಂತೆ, ವಿಶ್ವವಿಜಯಕ್ಕಾಗಿ ವಿಶ್ವ ಪರ್ಯಟನೆಗೆ ಹೊರಟಿದ್ದರುಪರಿವ್ರಾಜಕ ಸನ್ಯಾಸಿಯಾಗಿ ಕೇವಲ ಒಂದು ದಂಡ. ಕಮಂಡಲಒಂದೆರಡು ಬಟ್ಟೆಹಲವಾರು ಪುಸ್ತಕ ಇವಿಷ್ಟೇ ತಮ್ಮ ಆಸ್ತಿಯಾಗಿ ಹೊಂದಿದ್ದ ವಿವೇಕಾನಂದರು ಈಗ ಸಮುದ್ರಯಾನದಲ್ಲಿ ಎಚ್ಚರದಿಂದ ಕಾಯ್ದುಕೊಳ್ಳಬೇಕಾದ ಹಾಸಿಗೆಪೆಟ್ಟಿಗೆಬಟ್ಟೆಬರೆ ಮತ್ತು ಚೀಲಗಳನ್ನು  ಅಳಸಿಂಗ ತಂದುಕೊಟ್ಟದ್ದನ್ನು ಕಂಡು ವಿಸ್ಮಿತರಾದರುಅಳಸಿಂಗ ಗುರುಗಳ ಟಿಕೆಟ್ನ್ನೂ ಜೊತೆಗೆಖರ್ಚಿಗೆ ಹಣ 187 ಪೌಂಡ್ ಗಳನ್ನೂ ಕೊಟ್ಟರು.ಅದರಲ್ಲಿ ಒಂಬತ್ತು ಪೌಂಡ್ ಚಿಲ್ಲರೆ ನಾಣ್ಯಗಳಿದ್ದವುಹರ್ಷಪುಲಕಿತರಾದ ಸ್ವಾಮಿಗಳ ಕಂಠ  ತುಂಬಿ ಬಂತು.
1.  ವಿವೇಕಾನಂದರು ಹೊಂದಿದ್ದ ಆಸ್ತಿಯಾವುದು?
2. ವಿವೇಕಾನಂದರು ವಿಶ್ವ ಪರ್ಯಟನೆಗೆ ಯಾವರೀತಿ ಹೊರಟ್ಟಿದ್ದರು?
3. ಅಳಸಿಂಗರು ಗುರುಗಳಿಗೆ ಕೊಡಲು ಏನೇನು ತಂದಿದ್ದರು?
4. ಸ್ವಾಮಿ ವಿವೇಕಾನಂದರ ಕಂಠ ತುಂಬಿ ಬರಲು ಕಾರಣವೇನು?
13) ಮೈಸೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿತ್ತಿರುವ ನೀನು ಅಂಕಿತಅರುಣ್ ಎಂದು ಭಾವಿಸಿ ಯಾದಗಿರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ನಿಮ್ಮ ಗೆಳತಿ ಮಮತಳಿಗೆ/ಗೆಳೆಯ ಮಹೇಶನಿಗೆ ನಿಮ್ಮ ರೂಪಣಾತ್ಮಕ ಚಟುವಟಿಕೆಗಳ ಬಗೆಗೆ ತಿಳಿಸುತ್ತಾ ಒಂದು ಪತ್ರ  ಬರೆಯಿರಿ                                                                                                    1X2=2                                       
****************