Wednesday 27 September 2017

10 ನೆಯ ತರಗತಿ ತೃತೀಯ ಭಾಷೆ ಕನ್ನಡ SA 1

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಬೆಂಗಳೂರು-03
ಮೊದಲನೆಯ ಸಂಕಲನಾತ್ಮಕ ಮೌಲ್ಯಮಾಪನ ಸೆಪ್ಟೆಂಬರ್ 2017
10 ನೆಯ ತರಗತಿ ತೃತೀಯ ಭಾಷೆ ಕನ್ನಡ : 62K
ಗರಿಷ್ಠ ಅಂಕಗಳು : 80                                ಅವಧಿ : 2-30 ಗಂಟೆಗಳು
ಸೂಚನೆಗಳು :
¨    ಪ್ರಶ್ನೆ ಪತ್ರಿಕೆಯು , ಬಿ ಮತ್ತು ಸಿ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.
¨    ವಿಭಾಗ ` ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
¨    ವಿಭಾಗ `ಬಿ ಅನ್ವಯಿಕ ವ್ಯಾಕರಣ, ಅಲಂಕಾರ, ಛಂದಸ್ಸು 12 ಅಂಕಗಳು
¨    ವಿಭಾಗ `ಸಿ ವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ 15 ಅಂಕಗಳು
¨    ಉತ್ತರಗಳು ನೇರವೂ, ಸ್ಪಷ್ಟವೂ ಆಗಿದ್ದು, ಅಂಕಗಳಿಗೆ ತಕ್ಕಂತೆ ವಿಸ್ತಾರವಿರಲಿ.
¨    ವಸ್ತುನಿಷ್ಠ ಪ್ರಶ್ನೆಗಳಿಗೆ, ಹೊಡೆದು, ಅಳಿಸಿ, ಕೆರೆದು ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
¨    ಪೆನ್ಸಿಲ್ ಬಳಸಿ ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
ಭಾಗ - `
ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.                                                                     10X1=10
1. ಭಾರತದಲ್ಲಿರುವ ಅಲೆಮಾರಿಗಳು ರಾತ್ರಿವೇಳೆಯಲ್ಲಿ ತಂಗಲು ಇರುವ ಸ್ಥಳಗಳಾವುವು?
2. ಕೊಡಗಿನ ಗೌರಮ್ಮನವರು ಯಾವುದರ ಬಗೆಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು?
3. ಶರೀಫರು ಸ್ವಪ್ರಯತ್ನದಿಂದ ಏನನ್ನು ಕಲಿತರು?
4. ತತ್ವ ಬೋಧನೆಯನ್ನು ಶರೀಫರು ಹೇಗೆ ಮಾಡಿದರು?
5. ರಾಮಸಿಂಗ್ ಶಿಪಾಯಿಗಳಿಗೆ ಯಾವ ಮಾತನ್ನು ಸೆರಗಿಗೆ ಗಂಟು ಹಾಕಿಕೊಳ್ಳುವಂತೆ ಹೇಳಿದನು?
6. ಕಟ್ಟತೇವ ನಾವು ಕವಿತೆಯಲ್ಲಿನ ಕ್ರಾಂತಿಕಾರಿಗಳ ಕಾಲುಗಳು ಏಕೆ ರಕ್ತವಾಗಿವೆ?
7. ‘ಭೂಮಿತಾಯ ಕುಡಿಗಳು ಪದ್ಯದಲ್ಲಿ ಕವಿ ಯಾರು ಯಾರು ಒಂದು ಎಂದು ಹೇಳಿದ್ದಾರೆ?
8. ಬಸವಣ್ಣನವರು ಅಂತಃಶುದ್ಧಿಯನ್ನು ಹೇಗೆ ಕಾಪಾಡಿಕೊಳ್ಳ ಬೇಕೆಂದು ತಿಳಿಸಿದ್ದಾರೆ?
9. ಪುಲಿಗೆರೆ ಸೋಮನಾಥ ಹೇಳಿರುವಂತೆ ಯೋಗಿಯಾಗುವವನಿಗೆ ಇರಬೇಕಾದ ಸಾಮಥ್ರ್ಯ ಯಾವುದು?
10. ಆಚಾರವಂತ ಎಂಬ ಹೆಸರಿಗೆ ಯಾರು ಅರ್ಹರಲ್ಲವೆಂದು ಪುಲಿಗೆರೆ ಸೋಮನಾಥನು ಹೇಳಿದ್ದಾನೆ?
ಕೆಳಗಿನ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.                                                                     10X2=20
11. ಗೊರೂರರು ಒಂದು ರಾತ್ರಿಯನ್ನು ಲಾಕಪ್ಪಿನಲ್ಲಿ ಕಳೆಯಬೇಕಾಯಿತು, ಏಕೆ?
12. ಕೊಡಗಿನ ಗೌರಮ್ಮನವರ ಬರವಣಿಗೆಗೆ ಪೂರಕ ಹಾಗೂ ಪ್ರೇರಕವಾದ ವಿಚಾರಗಳು?
13. ಶರೀಫರ ಬಾಲ್ಯವು ಹಿಂದೂ ಪರಂಪರೆಯೊಂದಿಗೆ ಹೇಗೆ ಬೆರೆತುಹೋಗಿತ್ತು?
14. ಶರೀಫರು ತಮಗಾದ ದುಃಖವನ್ನು ಹೇಗೆ ಕಡಿಮೆ ಮಾಡಿಕೊಂಡರು?
15. ಮೋಹನಪುರದ ಸತ್ಯಾಗ್ರಹಿಗಳು ಮಾಡುತ್ತಿದ್ದ ಘೋಷಣೆಗಳಾವುವು??
16. ಶೋಷಣೆಯನ್ನು ವಿರೋಧಿಸುವವರು ಪಡಬೇಕಾದ ಕಷ್ಟಗಳು `ಕಟ್ಟತೇವ ನಾವು ಕವಿತೆಯಲ್ಲಿ ಹೇಗೆ ತೆರೆದಿಟ್ಟಿದ್ದಾರೆ?
17. ಬಣ್ಣ ಬೇರೆಯಾದರೂ ಜೀವರಸ ಒಂದೇ ಎಂಬ ಭಾವನೆಭೂಮಿತಾಯ ಕುಡಿಗಳು ಕವನದಲ್ಲಿ ಹೇಗೆ ವ್ಯಕ್ತವಾಗಿದೆ?
18. ಸಿ.ಪಿ.ಕೆ.ಯವರು ಗ್ರಂಥಾಲಯವನ್ನುಹಿರಿಬಾಳುಗಳ ಪಳೆಯುಳಿಕೆ, ಎಂದು ಏಕೆ ಕರೆದಿದ್ದಾರೆ?
19. ಬಸವಣ್ಣನವರ ವಚನಗಳಲ್ಲಿ ಕಂಡು ಬರುವ ಮಾನವೀಯ ಮೌಲ್ಯಗಳನ್ನು ಕುರಿತು ಬರೆಯಿರಿ.
20. ಕಾರಿನಲಿನ ಒಂದೇ ಗಂಟೆಗಳ ಪ್ರಯಾಣಮಾಡುವಷ್ಟು ದೂರವನ್ನು ಲೇಖಕರು ಇಡೀ ದಿನ ಪ್ರಯಾಣಮಾಡುವಂತಾಯಿತು ಏಕೆ?
ಕೆಳಗಿನ ಹೇಳಿಕೆಗಳಿಗೆ ಸಂದರ್ಭದೊಡನೆ ಸ್ವಾರಸ್ಯವನ್ನು ಬರೆಯಿರಿ.                                                                     2X3=6
21. “ನಾವು ತಿನ್ನುವ ಮಾವಿನ ಹಣ್ಣಿನ ಗಿಡಗಳನ್ನು ನಾವೆ ಹಚ್ಚಿಲ್ಲ
22. “ಆಚಾರವೇ ಸ್ವರ್ಗ! ಅನಾಚಾರವೇ ನರಕ
ಸಾಹಿತಿಗಳ ಸ್ಥಳ, ಕಾಲ, ಕೃತಿಗಳನ್ನು ಕುರಿತು ಬರೆಯಿರಿ                                                                     2X3=6
23. ಗೊರೂರು ರಾಮಸ್ವಾಮಿ ಅಯ್ಯಂಗಾರ್
24. ಪ್ರೊ. ಕೆ.ಎಸ್. ನಿಸಾರ್ ಅಹಮದ್
25. ಕೆಳಗಿನ ಪದ್ಯಭಾಗವನ್ನು ಪೂರ್ಣಮಾಡಿರಿ       1X3=3
ಜಾತಿ ------
----- ನಾವು
ಬಾಳ -----
--------ಕುಲವ
ನಾವು ------
------------ಕಟ್ಟತೇವ ನಾವು||
ಅಥವಾ
ಕ್ರಾಂತಿ ------
--- ಹೊತ್ತು ---
ಮುಳ್ಳು -------
----- ನಮ್ಮ -------
------------- ಕಟ್ಟತೇವ ನಾವು|| ||4||
ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.                                                                     2X4=8
26. ಗಾಂಧೀಜಿಯವರು ಕೊಡಗಿನಲ್ಲಿ ತಂಗಿದ್ದಾಗ ನಡೆದ ಸಂಗತಿಗಳನ್ನು ಕುರಿತು ಬರೆಯಿರಿ.
ಅಥವಾ
ಕೊಡಗಿನ ಗೌರಮ್ಮನವರ ಸಾಹಿತ್ಯ ಸೃಷ್ಟಿಗೆ ಪೂರಕವಾದ ವಿಚಾರಗಳನ್ನು ಕುರಿತು ಬರೆಯಿರಿ.
27. ಅಂತರಂಗ ಮತ್ತು ಬಹಿರಂಗವನ್ನು ಹೇಗೆ ಶುದ್ಧಿಯಾಗಿಡುವುದೆಂದು ಬಸವಣ್ಣನವರು ಹೇಳಿದ್ದಾರೆ? ವಿವರಿಸಿರಿ.
ಅಥವಾ
ಗ್ರಂಥರಾಶಿಯ ಮುಂದೆ ಮನುಷ್ಯನ ಅಹಂಕಾರ ನುಚ್ಚು ನೂರಾಗುತ್ತದೆ ಎಂದು ಭಾವನೆಗ್ರಂಥಾಲಯದಲ್ಲಿ ಕವನದಲ್ಲಿ ಹೇಗೆ ವ್ಯಕ್ತವಾಗಿದೆ? ವಿವರಿಸಿರಿ.
ಭಾಗ - `ಬಿ
ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಉತ್ತರಕ್ಕಾಗಿ ಕೊಟ್ಟಿರುವ ಜಾಗದಲ್ಲಿಯೇ ಕ್ರಮಾಕ್ಷರದೊಂದಿಗೆ ಬರೆಯಿರಿ.                                                                     12X1=12
28. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಮಹಾಪ್ರಾಣಾಕ್ಷರಗಳ ಸಂಖ್ಯೆ :
() ಐದು (ಬಿ) ಹತ್ತು (ಸಿ) ಒಂಬತ್ತು (ಡಿ) ಇಪ್ಪತ್ತೈದು
29. `ಪುಸ್ತಕಾಲಯ ಪದವು ಸಂಧಿಗೆ ಉದಾಹರಣೆಯಾಗಿದೆ :
() ವೃದ್ಧಿ (ಬಿ) ಗುಣ (ಸಿ) ಅನುನಾಸಿಕ (ಡಿ) ಸವರ್ಣದೀರ್ಘ
30 ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನಗಳಾಗಿರುವಂತೆ ರಚಿತವಾದ ವಾಕ್ಯಗಳನ್ನು ಹೀಗೆಂದು ಕರೆಯುತ್ತಾರೆ:
() ಮಿಶ್ರವಾಕ್ಯ (ಬಿ) ಸಂಯೋಜಿತವಾಕ್ಯ (ಸಿ) ಸರಳವಾಕಗಯ (ಡಿ) ಸಾಮಾನ್ಯವಾಕ್ಯ
31. ಕಾವ್ಯ ಪದದ ತದ್ಭವ ರೂಪ:
() ಕಬ್ಬ (ಬಿ) ಕಜ್ಜ (ಸಿ) ಕವನ (ಡಿ) ಕಾವ
32. ನಿರಾಡಂಬರ ಪದದ ವಿರುದ್ಧಾರ್ಥಕ ಪದ :
() ಬಹಿರಂಗಾಡಂಬರ (ಬಿ) ಬಾಹ್ಯಾಡಂಬರ (ಸಿ) ಆಡಂಬರ (ಡಿ) ಅನಾಡಂಬರ
33. ಅಲಂಕಾರ ವಾಕ್ಯದಲ್ಲಿ ಕವಿ ಯಾವ ವಸ್ತುವನ್ನು ವರ್ಣಿಸುತ್ತಾನೆಯೋ ಅದನ್ನು ಹೀಗೆನ್ನುತ್ತಾರೆ :
() ಉಪಮೇಯ (ಬಿ) ಅವಣ್ರ್ಯ (ಸಿ) ಉಪಮಾನ (ಡಿ) ಉಪಮಾವಾಚಕ
34 ಗುಡಿಗೇರಿ ಕುಲಕರ್ಣಿಯವರು ಹಿಂದೆಮುಂದೆ ನೋಡದೆ ಪೂಜ್ಯ ಭಾವನೆಯಿಂದ ಶರೀಫರನ್ನು ಆಗಾಗ ಕರೆದು ದವಸಧಾನ್ಯಗಳನ್ನು ಕೊಟ್ಟು ಕಳಿಸುತ್ತಿದ್ದರು. - ವಾಕ್ಯದಲ್ಲಿರುವ ಜೋಡುನುಡಿ :
() ಪೂಜ್ಯ ಭಾವನೆ (ಬಿ) ಹಿಂದೆಮುಂದೆ (ಸಿ) ಆಗಾಗ (ಡಿ) ದವಸಧಾನ್ಯಗ
35. ‘ಕಲ್ಯಾಣಮ್ಮನವರಿಗೆ ಪದದಲ್ಲಿರುವ ವಿಭಕ್ತಿ:
() ಪ್ರಥಮ (ಬಿ) ದ್ವಿತೀಯ (ಸಿ) ಚತುರ್ಥಿ (ಡಿ) ಪಂಚಮಿ
36. ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ತಿಳಿಸಲು ಬಳಸುವ ಚಿಹ್ನೆ:
() ಅಲ್ಪವಿರಾಮ (ಬಿ) ಭಾವಸೂಚಕ ಚಿಹ್ನೆ (ಸಿ) ವಿವರಣಾತ್ಮಕ ಚಿಹ್ನೆ (ಡಿ) ಅರ್ಧವಿರಾಮ
37. ‘ಹೆಗ್ಗುರಿ ಪದವು ಸಮಾಸಕ್ಕೆ ಉದಾಹರಣೆಯಾಗಿದೆ:
() ತತ್ಪುರುಷ (ಬಿ) ಕ್ರಿಯಾ (ಸಿ) ಕರ್ಮಧಾರಯ (ಡಿ) ದ್ವಂದ್ವ
38. ಮಲ್ಲಿಗೆಯ ಘಮಘಮ ಪರಿಮಳವು ಮತ್ತೆ ಮತ್ತೆ ಎಲ್ಲರ ಮನಸ್ಸನ್ನು ತನ್ನತ್ತ ಸೆಳೆಯಿತು.- ವಾಕ್ಯದಲ್ಲಿರುವ ಅನುಕರಣಾವ್ಯಯ:
() ಘಮಘಮ (ಬಿ) ಮತ್ತೆ ಮತ್ತೆ (ಸಿ) ಎಲ್ಲರ ಮನಸ್ಸನ್ನು (ಡಿ) ತನ್ನತ್ತ ಸೆಳೆಯಿತು
39. ಸಾಮಾನ್ಯ ಅಳತೆ, ಪರಿಮಾಣ, ಗಾತ್ರ -ಇತ್ಯಾದಿಗಳನ್ನು ಹೇಳುವ ಶಬ್ದಗಳನ್ನು ಹೀಗೆನ್ನುತ್ತಾರೆ.:
() ಪರಿಮಾಣವಾಚಕ (ಬಿ) ಸಂಖ್ಯೇಯವಾಚಕ (ಸಿ) ಪ್ರಕಾರವಾಚಕ (ಡಿ) ಗುಣವಾಚಕ
ಭಾಗ - `ಸಿ
ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.                                                                                                                                1X4=4
ಪಂಡಿತಾ ರಮಾಬಾಯಿ ಸರಸ್ವತಿಯವರು ಮಹಿಳೆಯರ ಸಾಮಾಜಿಕ, ಆರ್ಥಿಕ ಉನ್ನತಿಗಾಗಿ ದುಡಿದವರು. ಇವರ ತಂದೆ ಅನಂತಶಾಸ್ತ್ರಿ ಡೋಂಗ್ರೆ ಮತ್ತು ತಾಯಿ ಲಕ್ಷಿ ್ಮಬಾಯಿ ದೇಶ ಪ್ರವಾಸ ಮಾಡುತ್ತಿದ್ದಾಗ ತಲೆದೋರಿದ ಭೀಕರ ಬರಗಾಲದಿಂದ ನಿಧನರಾದರು. ಗಂಡ ಬಿಪಿನ್ ಬಿಹಾರಿ ದಾಸ್ ಕಾಲರಕ್ಕೆ ತುತ್ತಾಗಿ ಮರಣ ಹೊಂದಿದರು. ನಂತರ ರಮಾಬಾಯಿ ಅವರು ವಿದ್ಯಾಭ್ಯಾಸ ಮುಂದುವರಿಸಿ ಸಮಾಜ ಸೇವೆಗೆ ತನ್ನನ್ನು ಅಣಿಗೊಳಿಸಬೇಕೆಂದು ನಿರ್ಧರಿಸಿ ಪುಣೆಗೆ ಬಂದರು. ಪುಣೆಯಲ್ಲಿಆರ್ಯ ಮಹಿಳಾ ಸಮಾಜ ಸ್ಥಾಪಿಸಿದರು. ಶಿಕ್ಷಣ ಪಡೆದು ಜ್ಞಾನವನ್ನು ಮತ್ತು ಆತ್ಮಸ್ಥೈರ್ಯವನ್ನು ಗಳಿಸಿ ಸ್ವಾವಲಂಬಿಗಳಾಗಿ ಬದುಕುವಂತೆ ಹೆಣ್ಣು ಮಕ್ಕಳನ್ನು, ಬಾಲವಿಧವೆಯರನ್ನು ರಮಾಬಾಯಿ ಪೆÇ್ರೀತ್ಸಾಹಿಸಿದರು. ಇದಕ್ಕೆ ಪೂರಕವಾಗುವಂತೆಸ್ತ್ರೀ ಧರ್ಮ ನೀತಿ ಎನ್ನುವ ಪುಸ್ತಕವನ್ನು ಪ್ರಕಟಿಸಿದರು. ಹಂಟರ್ ಆಯೋಗದ ಎದುರು ಹಾಜರಾದ ರಮಾಬಾಯಿ ಭಾರತದಲ್ಲಿ ಮಹಿಳೆಯರಿಗೆ ಶಿಕ್ಷಣದ ಆವಶ್ಯಕತೆಯ ಕುರಿತು ಸಮರ್ಥವಾದ ರೀತಿಯಲ್ಲಿ ವಾದ ಮಂಡಿಸಿದರು. ಇದು ಇಂಗ್ಲೆಂಡಿನ ರಾಣಿಯ ಗಮನಕ್ಕೆ ಬರುವ ಮೂಲಕ ಭಾರತದಲ್ಲಿ ಮಹಿಳೆಯರ ಪಾಲಿಗೆ ಶಿಕ್ಷಣ, ವೈದ್ಯಕೀಯ ಸೇವೆ ಮುಂತಾದ ಸವಲತ್ತುಗಳು ದೊರೆಯುವಂತಾಯಿತು.
ಪ್ರಶ್ನೆಗಳು :
40. ರಮಾಬಾಯಿ ಸರಸ್ವತಿಯವರು ಪುಣೆಗೆ ಏಕೆ ಬಂದರು?
41. ರಮಾಬಾಯಿ ಸರಸ್ವತಿಯವರ ತಂದೆ ತಾಯಿ ಮತ್ತು ಪತಿಯ ಸಾವಿಗೆ ಕಾರಣವೇನು?
42. ರಮಾಬಾಯಿ ಸರಸ್ವತಿಯವರುಸ್ತ್ರೀ ಧರ್ಮ ನೀತಿ ಎನ್ನುವ ಪುಸ್ತಕವನ್ನು ಏಕೆ ಪ್ರಕಟಿಸಿದರು.?
43. ಭಾರತದ ಮಹಿಳೆಯರಿಗೆ ಶಿಕ್ಷಣ, ವೈದ್ಯಕೀಯ ಸೇವೆ ಮುಂತಾದ ಸವಲತ್ತುಗಳು ದೊರೆಯುವಂತಾದುದು ಹೇಗೆ?
44 ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ.                                                                                                                          1X3=3
¨    ಬೆಳೆಯುವ ಪೈರು ಮೊಳಕೆಯಲ್ಲಿ
¨    ಉಪ್ಪು ತಿಂದವನುನೀರು ಕುಡಿಯಲೇ ಬೇಕು
¨    ಶಕ್ತಿಗಿಂತ ಯುಕ್ತಿಮೇಲು
45. ನಿಮ್ಮನ್ನು ಮೈಸೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಗಣೇಶ್ / ಗೌರಿ ಎಂದು ಭಾವಿಸಿ ನಿಮ್ಮ ಶಾಲೆಯಲ್ಲಿ ನಡೆಯುವ ಮಕ್ಕಳದಿನಾಚರಣೆಯ ಸಮಾರಂಭಕ್ಕೆ ಆಹ್ವಾನಿಸಿ ವಿಜಯಪುರದಲ್ಲಿರುವ ನಿಮ್ಮ ಗೆಳೆಯ / ಗೆಳತಿಗೆ ಒಂದು ಪತ್ರ ಬರೆಯಿರಿ.                                                                                                              1X4=4
ಅಥವಾ
ಶ್ರೇಯಸ್/ ಶ್ರೇಯಳಾದ ನೀವು ನಿಮ್ಮ ಊರಿನಲ್ಲಿ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸುವಂತೆ ಕೋರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಒಂದು ಪತ್ರವನ್ನು ಬರೆಯಿರಿ.
46. ಕೆಳಗಿನ ಯಾವುದಾದರೂ ಒಂದು ವಿಷಯದಲ್ಲಿ ಹತ್ತು ವಾಕ್ಯಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ.                                                                                                       1X4=4
¨    ಜ್ಞಾನ ಸಂಪಾದನೆಯಲ್ಲಿ ಗ್ರಂಥಾಲಯಗಳ ಪಾತ್ರ
¨    ರಾಷ್ಟ್ರೀಯ ಹಬ್ಬಗಳು
¨    ಸ್ವಚ್ಛತೆಯ ಕಾರ್ಯದಲ್ಲಿನ ತೊಡಕುಗಳು

**********************