Tuesday 14 April 2015

ಭಾಷಾ ಆಟಿಕೆಗಳು -ಪದ ಮಾಲೆ

ಪದ ಪುಷ್ಪಮಾಲೆ
ಸೂಚನೆಗಳು:
v ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ವಿಂಗಡಿಸಿರಿ.
v ಒಂದು ನಿಮಿಷ ಕಾಲಾವಕಾಶ ಕೊಟ್ಟು ಎಷ್ಟು ಅಕ್ಷರಗಳನ್ನು ಬರೆಯಲು ಸಾಧ್ಯವೋ ಅಷ್ಟು ಅಕ್ಷರಗಳನ್ನು ಬರೆಯಲು ಸೂಚಿಸುವುದು.
v ಅವರು ಬರೆದಿರುವ ಅಕ್ಷರಗಳಲ್ಲಿ ಯಾವುದಾದರೂ ಐದು ಅಕ್ಷರವನ್ನು ಆರಿಸಿಕೊಂಡು ಅಕ್ಷರಗಳಿಂದ ಪ್ರಾರಂಭವಾಗುವ ಪದಗಳನ್ನು ಐದು ನಿಮಿಷಗಳಲ್ಲಿ ಎಷ್ಟು ಬರೆಯಲು ಸಾಧ್ಯವೋ ಅಷ್ಟು ಪದಗಳನ್ನು ಬರೆಯಲು ಸೂಚಿಸುವುದು.
v ಪ್ರೋತ್ಸಾಹ ನೀಡಲು ಪ್ರತಿಯೊಂದು ಸರಿಯಾದ ಪದಕ್ಕೆ ಒಂದು ಪಾಯಿಂಟ್ ನಂತೆ ಪಾಯಿಂಟನ್ನು ನೀಡಿರಿ.
v ವಿದ್ಯಾರ್ಥಿಗಳು ಬರೆದಿರುವ ಪದಗಳಲ್ಲಿ ಯಾವ ಅಕ್ಷರದಿಂದ ಪ್ರಾರಂಭವಾಗುವ ಪದ ಹೆಚ್ಚಾಗಿದೆ ಎಂಬುದನ್ನು ಕಪ್ಪುಹಲಗೆಯ ಮೇಲೆ ಪಟ್ಟಿಮಾಡಿರಿ.
v ಪುನಃ ಐದು ನಿಮಿಷಗಳನ್ನು ನೀಡಿ ಶಬ್ದಕೋಶದ ಸಹಾಯದಿಂದ ಪಟ್ಟಿಮಾಡಿರುವ ಪದಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಸೂಚಿಸಿರಿ.
v ಎರಡು, ಮೂರು, ನಾಲ್ಕು, ಐದಕ್ಷರದ ಪದಗಳನ್ನು ವಿಂಗಡಿಸಿ ಬರೆಯಲು ಸೂಚಿಸಿರಿ.
v ದಪ್ಪ ಕಾಗದವನ್ನು ಬಳಸಿ ಒಂದು ಸೆಂ.ಮೀ ವ್ಯಾಸವಿರುವಂತೆ ಐದು ನಿಮಿಷದಲ್ಲಿ ಎಷ್ಟು ವೃತ್ತಗಳನ್ನು ಕತ್ತರಿಸಲು ಸಾಧ್ಯವೋ ಅಷ್ಟು ವೃತ್ತಗಳನ್ನು ಕತ್ತರಿಸಲು ಸೂಚಿಸಿರಿ.
v 1ಸೆಂ.ಮೀX2ಸೆಂ.ಮೀ ಅಳತೆಯ ದಪ್ಪ ಕಾಗದವನ್ನು ಬಳಸಿ ಹತ್ತು ನಿಮಿಷದಲ್ಲಿ ಹೂವಿನ ದಳದ ಆಕಾರವನ್ನು ಕತ್ತರಿಸಲು ಸಾಧ್ಯವೋ ಅಷ್ಟನ್ನು ಕತ್ತರಿಸಲು ಸೂಚಿಸಿರಿ.
v ಒಂದೇ ಅಕ್ಷರದಿಂದ ಆರಂಭವಾಗುವ ಎಂಟ ರಿಂದ ಹತ್ತು ಪದಗಳನ್ನು ಗುರುತಿಸಿಕೊಳ್ಳಲು ಸೂಚಿಸಿರಿ.
v ಸ್ಕೆಚ್ ಪೆನ್ ಬಳಸಿ ವೃತ್ತದ ಮಧ್ಯದಲ್ಲಿ ಆರಿಸಿಕೊಂಡಿರುವ ಪ್ರಾರಂಭದ ಅಕ್ಷರ ಬರೆಯಲು ಸೂಚಿಸಿರಿ      ಉದಾಹರಣೆ :
v ಆರಿಸಿಕೊಂಡಿರುವ  ಪದಗಳ ಮೊದಲ ಅಕ್ಷರವನ್ನು ಬಿಟ್ಟು ಉಳಿದ ಅಕ್ಷರಗಳನ್ನು ಹೂವಿನ ದಳದಾಕಾರದ ಕಾಗದದ ಮೇಲೆ ಮೊದಲ ಅಕ್ಷರ ಸೇರಿ ಒಂದು ಪದವಾಗುವಂತೆ ಬರೆಯಲು ಸೂಚಿಸಿರಿ.        
 ಉದಾಹರಣೆ :



v ಮಧ್ಯದ ಅಕ್ಷರದ ಸುತ್ತಲೂ ಹೂವಿನಾಕಾರದಲ್ಲಿ ದಳಗಳನ್ನು ಜೋಡಿಸಿ ಕೆಳಕಂಡಂತೆ ಅಂಟಿಸಲು ಸೂಚಿಸಿರಿ.
v ತಯಾರಾದ ಹೂಗಳನ್ನು ಹಾರದಂತೆ ಜೋಡಿಸಿ ಅಂಟಿಸಲು ಸೂಚಿಸಿರಿ.

v ಮೊದಲನೆಯ  ಹಂತ:-

v ಎರಡನೆಯ ಹಂತ:-

v ಮೂರನೆಯ ಹಂತ:-

v ನಾಲ್ಕನೆಯ ಹಂತ:-

v ವಿದ್ಯಾರ್ಥಿಗಳ ಕಲ್ಪನೆ ಮತ್ತು ಸೃಜನಶೀಲತೆಗೆ ಅನುಗುಣವಾಗಿ ಬೇರೆ ಬೇರೆ ಅಳತೆಯ ಹಾಗೂ ಬೇರೆ ಬೇರೆ ಆಕಾರದ ಮಾಲೆಗಳನ್ನು ತಯಾರಿಸಲು ಸೂಚಿಸಿರಿ.
v ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪದ ಪುಷ್ಪಮಾಲೆಯಲ್ಲಿರುವ ಪದಗಳಿಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಮುಂದುವರಿಸಿರಿ.
v ಉದಾಹರಣೆ: ಪದಗಳ ಸಮಾನಾರ್ಥಕ, ವಿರುದ್ಧಪದ, ವಾಕ್ಯರಚನೆ, ತತ್ಸಮ-ತದ್ಭವರೂಪ, ಪದಗಳನ್ನು ಬಳಸಿ ಕತೆ ಕವನ ಬರೆಯುವುದು ಇತ್ಯಾದಿ.
v ಪ್ರತಿ ಗದ್ಯ / ಪದ್ಯದಲ್ಲಿ ಬರುವ ಕಲಿಕಾಂಶಗಳನ್ನು ಆಧರಿಸಿಇದೇ ರೀತಿ ಭಾಷಾಚಟುವಟಿಕೆಗಳನ್ನು ಕೊಡುವುದರಿಂದ ಪದ ಭಂಡಾರ ಶ್ರೀಮಂತಕೊಂಡು ಕಲಿಕಾ ಸಾಮರ್ಥ್ಯ ಹೆಚ್ಚುವುದು


No comments:

Post a Comment