Sunday 12 August 2018

ಮೆರೆಯುತಿಹರು

ಬುದ್ಧಿಜೀವಿಯ ಮುಖವಾಡ ಧರಿಸಿ
ಮುಗ್ಧಮನಸ್ಸುಗಳ ದಿಕ್ಕನೇ ಕೆಡೆಸಿ
ವ್ಯವಸ್ಥೆಯನೇ ಬುಡಮೇಲುಗೊಳಿಸಿ
ಸ್ವಾರ್ಥದಿಂ ಮೆರೆಯುತಿಹರು ನನಕಂದ||

ಭೇದವೆತ್ತಣದೊ

ಭೂಮಿತಾಯ ಕುಡಿಗಳಾಗಿ ಜನಿಸಿ               
ವಾಯುವಿನನುಗ್ರದಿಂ ಉಸಿರಾಡಿ               
ಜಲದೇವಿಯ ಕೃಪೆಯಿಂ ಬಾಳುತಿಹ                     
ನರರಲಿ ಭೇದವೆತ್ತಣದೊ ನನಕಂದ||

Friday 10 August 2018

ರೂಪಣಾತ್ಮಕ – 1 ನೀಲ ನಕಾಶೆ, ಪ್ರಶ್ನೆ ಪತ್ರಿಕೆ

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಮಲ್ಲೇಶ್ವರಂ, ಬೆಂಗಳೂರು-03
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ರೂಪಣಾತ್ಮಕ ಮೌಲ್ಯಮಾಪನ - 1
10 ನೆಯ ತರಗತಿ ಪ್ರಥಮ ಭಾಷೆ ಕನ್ನಡ - ಲಿಖಿತ ಪರೀಕ್ಷೆ- ಪ್ರಶ್ನೆ ಪತ್ರಿಕೆ
ಸಮಯ : 45 ನಿಮಿಷಗಳು                                                      ಗರಿಷ್ಠ ಅಂಕಗಳು : 20
ಸೂಚನೆಗಳು :
ಪ್ರಶ್ನೆ ಪತ್ರಿಕೆಯು ಎ, ಬಿ ಮತ್ತು ಸಿ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.
ವಿಭಾಗ ` ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 15 ಅಂಕಗಳು.
ವಿಭಾಗ `ಬಿ ಆನ್ವಯಿಕ ವ್ಯಾಕರಣ 03 ಅಂಕಗಳು.
ವಿಭಾಗ `ಸಿ ವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ್ಯ 02 ಅಂಕಗಳು.
ಭಾಗ - `
(ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 15 ಅಂಕಗಳು)
ಕೊಟ್ಟಿರುವ ಪ್ರತಿಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.                          3 X 1=3
1. ‘ಬ್ಲಾಕ್ ಔಟ್ ನಿಯಮವೆಂದರೇನು?
2. ಕವಿ ಶಿವರುದ್ರಪ್ಪನವರು ಯಾವುದನ್ನು ಎಚ್ಚರದಲಿ ಮುನ್ನಡೆಸೋಣವೆಂದಿದ್ದಾರೆ?
3. ವಿವೇಕಾನಂದರು ಯಾವುದರ ರೂಪಕವಾಗಿದ್ದಾರೆ?
ಕೊಟ್ಟಿರುವ ಪ್ರತಿಪ್ರಶ್ನೆಗೂ ಮೂರು / ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.                  2 X 2=4
4. ಬೇಂದ್ರೆಯವರು ಕಾಲಪಕ್ಷಿಯ ಬೃಹತ್ ರೂಪವನ್ನು ಹೇಗೆ ನಿರೂಪಿಸಿದ್ದಾರೆ?
5. ಸೈನಿಕರ ಉಡುಪಿನಲ್ಲಿ ಬಂದವರು ಮುದುಕಿಯ ಮನೆಯಿಂದ ನಿಶ್ಶಬ್ದವಾಗಿ ಹೊರನಡೆದರೇಕೆ?
ಕೊಟ್ಟಿರುವ ಪ್ರತಿಹೇಳಿಕೆಯನ್ನೂ ಸಂದರ್ಭದೊಡನೆ ವಿವರಿಸಿರಿ.                            1 X 2=2
6. “ತಾಯಿ, ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ?”
                          ಅಥವಾ
         ಮುಂಗಾರಿನ ಮಳೆಯಾಗೋಣ.
ಕೊಟ್ಟಿರುವ ಲೇಖಕರ / ಕವಿಗಳ ಕಾಲ, ಸ್ಥಳ ಮತ್ತು ಕೃತಿಯನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ.         1 X 2=2
7. ದ.ರಾ ಬೇಂದ್ರೆ  ಅಥವಾ  ಪು.ತಿ.ನ.
ಕೊಟ್ಟಿರುವ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.                       1 X 2=2 
8.       ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
        ಮಂಡಲ-ಗಿಂಡಲಗಳ ಗಡ ಮುಕ್ಕಿ
        ತೇಲಿಸಿ ಮುಳುಗಿಸಿ ಖಂಡ-ಖಂಡಗಳ
        ಸಾರ್ವಭೌಮರಾ ನೆತ್ತಿಯ ಕುಕ್ಕಿ
            ಹಕ್ಕಿ ಹಾರುತಿದೆ ನೋಡಿದಿರಾ?
ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿರಿ.                                              1 X 2=2
9.      ಕಲುಷಿತವಾದೀ ______________________       
       _________________________________
       _________________________________
       ________________________ ಮುಟ್ಟೋಣ                
                               ಅಥವಾ
        ಮತಗಳೆಲ್ಲವೂ _______________________       
       __________________________________                                   
        __________________________________
       _____________________________ ಬಿತ್ತೋಣ
ಭಾಗ - `ಬಿ
(ಆನ್ವಯಿಕ ವ್ಯಾಕರಣ  03 ಅಂಕಗಳು)
ಕೊಟ್ಟಿರುವ ಪ್ರತಿಪ್ರಶ್ನೆಗೂ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಸರಿಯಾದ ಆಯ್ಕೆಯನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ. 3X=3     
10. ‘ಮನ್ವಂತರ À ಸಂಧಿಗೆ ಉದಾಹರಣೆಯಾಗಿದೆ:                       
(ಎ)ವೃದ್ಧಿ                    (ಬಿ) ಯಣ್              (ಸಿ) ಗುಣ                      (ಡಿ) ಜಸ್ತ್ವ
11. ‘ಬಟ್ಟಬಯಲು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ:
(ಎ) ದ್ವಿರುಕ್ತಿ                (ಬಿ) ಜೋಡುನುಡಿ      (ಸಿ) ನುಡಿಗಟ್ಟು                  (ಡಿ) ಅನುಕರಣಾವ್ಯಯ
12. ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿದಾಗ ಆಗುವುದು:
(ಎ) ಪ್ಲುತಾಕ್ಷರ             (ಬಿ) ಗುಣಿತಾಕ್ಷರ        (ಸಿ) ಸಂಯುಕ್ತಾಕ್ಷರ             (ಡಿ) ವರ್ಣಮಾಲೆ
ಭಾಗ - `ಸಿ
(ವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ್ಯ  02 ಅಂಕಗಳು)
13. ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ.                       1 X 2=2
·       ಮನಸಿದ್ದರೆ ಮಾರ್ಗ.
·       ತಾಳಿದವನು ಬಾಳಿಯಾನು.
ಅಥವಾ
ನಿಮ್ಮನ್ನು ದಾವಣಗೆರೆಯ ಹರಿಹರೇಶ್ವರ ಪ್ರೌಢಶಾಲೆಯ ಕವಿತ/ಕಾರ್ತಿಕ್ ಎಂದು ಭಾವಿಸಿಕೊಂಡು, ನಿಮ್ಮ ಶಾಲೆಯಲ್ಲಿ ಆಚರಿಸಿದ ಪ್ರತಿಭಾ ಪುರಸ್ಕಾರ ಸಮಾರಂಭದ ವರದಿಯನ್ನು ಪ್ರಕಟಿಸುವಂತೆ ಕೋರಿ ವಿಜಯವಾಣಿ ದಿನಪತ್ರಿಕೆಯ ಸಂಪಾದಕರಿಗೆ ಒಂದು ಮನವಿ ಪತ್ರ ಬರೆಯಿರಿ.
***************