Monday 25 May 2015

ಕೃಷಿ ಮಹತ್ವ ಸಾರುವ ಸರ್ವಜ್ಞನ ವಚನಗಳು

ಕೋಟಿ ವಿದ್ಯೆಗಳಲ್ಲಿ | ಮೇಟಿ ವಿದ್ಯೆಯೇ ಮೇಲು |
ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ |
ದಾಟವೇ ಕೆಡಕು | ಸರ್ವಜ್ಞ ||

ಎತ್ತೆಮ್ಮೆ ಹೂಡುವದು | ಉತ್ತೊಮ್ಮೆ ಹರಗುವದು |
ಬಿತ್ತೊಮ್ಮೆ ಹರಗಿ, ಕಳೆತೆಗೆದರಾ ಬೆಳೆಯು
ಎತ್ತುಗೈಯುದ್ದ ಸರ್ವಜ್ಞ ||

ಉತ್ತೊಮ್ಮೆ ಹರಗದಲೆ | ಬಿತ್ತೊಮ್ಮೆ ನೋಡದಲೆ|
ಹೊತ್ತೇರಿ ಹೊಲಕೆ ಹೋಗಿಹರೆ ಅವ ತನ್ನ |
ನೆತ್ತರವ ಸುಡುವ ಸರ್ವಜ್ಞ ||

ನಲ್ಲೆತ್ತು ಬಂಡಿ ಬಲ | ವಿಲ್ಲದಾ ಆರಂಭ |
ಕಲ್ಲು ಕಳೆಗಳನು ಬಿಟ್ಟವನು ಹೊಲದೊಳಗೆ |
ಹುಲ್ಲನೇ ಬೆಳೆವ ಸರ್ವಜ್ಞ ||

ಹರಗದ ಎತ್ತಾಗಿ | ಬರಡದ ಹಯನಾಗಿ |
ಹರಟೆ ಹೊಡೆಯುವಾ ಮಗನಾಗಿ ಹೊಲದಲ್ಲಿ |
ಕರಡವೇ ಬೆಳಗು ಸರ್ವಜ್ಞ ||

ದಂಡು ಇಲ್ಲದ ಅರಸು | ಕುಂಡವಿಲ್ಲದ ಹೋಮ |
ಬಂಡಿಯಿಲ್ಲದನ ಬೇಸಾಯ ತಲೆಹೋದ |
ಮುಡದಂತಿಕ್ಕು ಸರ್ವಜ್ಞ ||

ಹದ ಬೆದೆಯಲಾರಂಭ | ಕದನಲಿ ಕೂರಂಬ |
ನದಿ ಹಾಯುವಲಿ ಹರಗೋಲ ಮರೆತು |
ವಿಧಿಯ ಬೈದರೇನು ಫಲ ಸರ್ವಜ್ಞ ||

ಬೆಕ್ಕು ಮನೆಯೊಳು ಲೇಸು | ಮುಕ್ಕು ಕಲ್ಲಿಗೆ ಲೇಸು |
ನಕ್ಕು ನಗಿಸುವಾ ನುಡಿಲೇಸು ಊರಿಂಗೆ |
ಒಕ್ಕಲಿಗ ಲೇಸು ಸರ್ವಜ್ಞ ||

ತರುಕರವು ಇರದೂರು | ನರಕಭಾಜನಮಕ್ಕು |
ತರುಕರುಂಟಾದರುಣಲುಂಟುಜಗವೆಲ್ಲ |
ತರುಕರವೇ ದೈವ ಸರ್ವಜ್ಞ ||

Sunday 24 May 2015

ಬಹುಆಯ್ಕೆಯ ಪ್ರಶ್ನೆಗಳು

ಕೆಳಗಿನ ಪ್ರಶ್ನೆಗಳಿಗೆ ಅಥವಾ ಹೇಳಿಕೆಗಳಿಗೆ ನಾಲ್ಕು ಪರ್ಯಾಯಗಳನ್ನು ಸೂಚಿಸಲಾಗಿದೆಅತಿ ಸೂಕ್ತವಾದ ಪರ್ಯಾಯವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಪೂರ್ಣ ಉತ್ತರವನ್ನು ಬರೆಯಿರಿ.      
 1.‘ಕಳ್ಳನ ಮನಸ್ಸು ನನಗಿಲ್ಲವೆಂದು ಆತನು ನಿಷ್ಠುರವಾಗಿ ಉತ್ತರಿಸಿದನು. - ವಾಕ್ಯದಲ್ಲಿರುವ ವಿಜಾತೀಯ ಸಂಯುಕ್ತಾಕ್ಷರ
) ಕಳ್ಳನ ಆ) ನನಗಿಲ್ಲ ಇ) ನಿಷ್ಠುರವಾಗಿ ಈ) ಉತ್ತರಿಸಿದನು.
2. ಪದಗಳ ಅರ್ಥಪೂರ್ಣ ಸಮೂಹ ಒಂದು ನಿರ್ದಿಷ್ಟ ರೀತಿಯಲ್ಲಿ ಜೋಡಣೆಯಾದಾಗ ಹೀಗೆನ್ನುತ್ತಾರೆ:
) ವ್ಯಾಕರಣ ಆ) ವಾಕ್ಯ ಇ) ಅಕ್ಷರಮಾಲೆ ಈ) ಗದ್ಯ
3.ಸಂಸ್ಕø ಪದಕ್ಕೆ ಕನ್ನಡ, ಕನ್ನಡ ಪದಕ್ಕೆ ಸಂಸ್ಕø ಪದಗಳು ಸೇರಿ ಸಮಾಸವಾದರೆ ಹೀಗೆನ್ನುತ್ತೇವೆ;
) ವಿಗ್ರಹವಾಕ್ಯ ಆ) ಅರಿಸಮಾಸ ಇ) ಸಮಗ್ರಪದ ಈ) ಪೂರ್ವಪದ
4.ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಚಮತ್ಕಾರದ ಮಾತುಗಳನ್ನು ಹೀಗೆನ್ನುತ್ತಾರೆ;
) ಛಂದಸ್ಸು ಆ) ಅಲಂಕಾರ ಇ) ರಗಳೆ ಈ) ವಚನ.
5.ಸಂತೋಷ ಪದದ ತದ್ಭವರೂಪ:
ಅ) ಸಂತಸ ಆ) ಸಂಭ್ರಮ ಇ) ಹರ್ಷ ಈ) ಆನಂದ
6.ಜೀವ- ಪದದ ವಿರುದ್ಧಾರ್ಥಕರೂಪ        
ಅ) ಸಜೀವ ಆ) ನಿರ್ಜೀವ ಇ) ಆಜೀವ ಈ) ಜೀವಂತ
7.ಪ್ರಾತಿಪದಿಕವೆಂದರೆ :    
ಅ) ಧಾತು ಆ) ಕ್ರಿಯಾಪ್ರಕೃತಿ ಇ) ನಾಮಪ್ರಕೃತಿ ಈ) ಪ್ರತ್ಯಯ   
8.ಪರಪರ ಎಂಬುದು ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :
ಅ) ಸಂಧಿ ಆ) ಸಮಾಸ ಇ) ಜೋಡುನುಡಿ ಈ) ಅನುಕರಣಾವ್ಯಯ
9. ಶಾಲೆಯಾವುದು ವಿದ್ಯಾರ್ಥಿಗಳಾರು ಶಿಕ್ಷಕರಾರು ನೀವು ಬಲ್ಲಿರಾ - ಇಲ್ಲಿರ ಬೇಕಾದ ಲೇಖನ ಚಿಹ್ನೆ:
ಅ) ವಿವರಣಾತ್ಮಕ ಆ) ಉದ್ಧರಣ ಇ) ಪ್ರಶ್ನಾರ್ಥಕ ಈ) ಪೂರ್ಣವಿರಾಮ
10. ಕೆಳಗಿನವುಗಳಲ್ಲಿ ವರ್ತಮಾನ ಕಾಲ ಕ್ರಿಯಾಪದ
ಅ) ನೋಡಲಿ  ಆ) ನೋಡುತ್ತಾನೆ ಇ) ನೋಡಿದನು ಈ) ನೋಡುವನು
11. ಕವಿ- ಪದದ ಅನ್ಯಲಿಂಗ:
ಅ) ಕವಿಯಿತ್ರಿ ಬಿ ಕವಯಿತ್ರಿ ಇ) ಕವಯತ್ರಿ ಡಿ ಕವಿಯಿತ್ರಿ
12. ರಾಕ್ಷಸ - ಪದದ ಬಹುವಚನರೂಪ
ಅ) ರಾಕ್ಷಸರು ಆ) ರಾಕ್ಷಸರುಗಳು ಇ) ರಾಕ್ಷಸಂದಿರು ಈ) ರಾಕ್ಷಸಗಳು
13. ಪದ್ಯರಚನಾ ಶಾಸ್ತ್ರವನ್ನು ಹೀಗೆನ್ನುತ್ತಾರೆ
ಅ) ವ್ಯಾಕರಣ ಆ) ಛಂದಸ್ಸು ಇ) ಅಲಂಕಾರ ಈ) ಕಂದ
14. ಮುಂಗಾಣ್ಕೆ  - ಪದದ ಅರ್ಥ
ಅ) ಮುನ್ನೋಟ ಆ) ಮುಂದಿನಕಾಣಿಕೆ ಇ) ಮುಂದೆ ನುಗ್ಗುವುದು ಈ) ಹಿನ್ನೋಟ
15. ಉದ್ಯಾನವನವನ್ನುಇಲ್ಲಿರುವ ವಿಭಕ್ತಿ ಪ್ರತ್ಯಯ  
ಅ) ಚತುರ್ಥಿ ಆ) ದ್ವಿತೀಯ ಇ) ತೃತೀಯ ಈ) ಪಂಚಮಿ
16. ಪೂರ್ಣಾಹುತಿಇದು ಸಂಧಿಗೆ ಉದಾಹರಣೆ  
ಅ) ಗುಣ ಆ) ಸವರ್ಣ ಇ) ಯಣ್ ಈ) ವೃದ್ಧಿ
17. ಮೂಡಣವೆಂದರೆ      
ಅ) ಉತ್ತರ ಆ) ದಕ್ಷಿಣ ಇ) ಪೂರ್ವ ಈ) ಪಶ್ಚಿಮ
18. ಮಾಡನು ಎಂಬುದರ ವಿಧ್ಯರ್ಥಕರೂಪ
 ಅ) ಮಾಡಲಿ ಆ) ಮಾಡಿಯಾನು ಇ) ಮಾಡುತ್ತಾನೆ ಈ) ಮಾಡುತ್ತೇನೆ
19. ನಾಮಪದದ ಮೂಲರೂಪ      
ಅ) ಧಾತು ಆ) ಪ್ರಕೃತಿ ಇ) ಪ್ರಾತಿಪದಿಕ ಈ) ಪ್ರತ್ಯಯ   
20. ಕಂದ ಪದ್ಯದಲ್ಲಿರುವ ಗಣಗಳ ಸಂಖ್ಯೆ
ಅ) ನಾಲ್ಕು ಆ) ಎಂಟು ಇ) ಹದಿನಾರು ಈ) ಹನ್ನೆರಡು
21. ಮನೆಮಠ ಎಂಬುದು ಇದಕ್ಕೆ ಉದಾಹರಣೆ
ಅ) ಸಂಧಿ ಆ) ಸಮಾಸ ಇ) ಜೋಡುನುಡಿ ಈ) ಅನುಕರಣಾವ್ಯಯ
22. ಒಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಹೇಳುವಾಗ ಬಳಸುವ ಲೇಖನ ಚಿಹ್ನೆ
ಅ) ವಿವರಣಾತ್ಮಕ ಆ) ಉದ್ಧರಣ ಇ) ಪ್ರಶ್ನಾರ್ಥಕ ಈ) ಪೂರ್ಣವಿರಾಮ
23. ನೀನು ಎಲ್ಲಿಗೆ ಹೋಗುವೆ- ಇಲ್ಲಿ ಇರಬೇಕಾದ ಲೇಖನ ಚಿಹ್ನೆ
) ಅರ್ಧವಿರಾಮ ಆ) ಪೂರ್ಣವಿರಾಮ ಇ) ಅಲ್ಪವಿರಾಮ ಈ) ಪ್ರಶ್ನಾರ್ಧಕ
24. ದೇಶ ಸುತ್ತಿ ನೋಡು ನಾಣ್ನುಡಿಯ ಉತ್ತರಾರ್ಧ
ಅ) ಕೋಶ ಓದಿ ನೋಡು ಆ) ವೇಶ ಹಾಕಿ ನೋಡು ಇ) ಊಟ ಮಾಡಿ ನೋಡು ಈ) ಕೆಲಸ ಮಾಡಿ ನೋಡು
25. ಆಶ್ಚರ್ಯ- ಇದರ ತದ್ಭವರೂಪ
ಅ) ಅಚ್ಚರಿ ಆ) ಆಶಚರ್ಯ ಇ) ಆಚ್ಚರಿ ಈ) ಅಶ್ಚರ್ಯ
26. ದುರ್ಗುಣ-ವಿರುದ್ಧಾರ್ಥರೂಪ   
ಅ) ಗುಣ ಆ) ಸುಗುಣ ಇ) ಸದ್ಗುಣ ಈ) ನಿರ್ಗುಣ
27. ಕೆಂಪಾದ ತಾವರೆಇದರ ಸಮಗ್ರ ರೂಪ          
ಅ) ಕೆಂದಾವರೆ ಆ) ಕೆಂಪುತಾವರೆ ಇ) ತಾವರೆಕೆಂಪು ಈ) ತಾವರೆಗೆಂಪು
28. ಭಳೆಗಾರ ಇದರ ಶುದ್ಧರೂಪ    
ಅ) ಬಳೆಗಾರ ಆ) ಬಲೆಗಾರ ಇ) ಭಾಳೆಗಾರ ಈ) ಬಾಳೆಗಾರÉ
29. “ಬಂಗಾರದ ಮೋರೆ”- ಇಲ್ಲಿ ಕಂಡು ಬರುವ ಅಲಂಕಾರ-
ಅ) ಉಪಮಾಲಂಕಾರ ಆ) ರೂಪಕಾಲಂಕಾರ ಇ) ಶ್ಲೇಷಾಲಂಕಾರ ಈ) ಉತ್ಪೇಕ್ಷಾಲಂಕಾರ
30. ಅಕ್ಷರಗಣ ಪದ್ಯಗಳು ಛಂದಸ್ಸಿನಲ್ಲಿವೆ 
ಅ) ತ್ರಿಪದಿ ಆ) ಷಟ್ಪದಿ ಇ) ಕಂದ ಈ) ವೃತ್ತ
31. ಕಾರಗಳ ಮುಂದೆ ಉಊ, ಇಈ, ಕಾರಗಳು ಪರವಾಗಿ ಬರುವ ಸಂಧಿ-          
ಅ) ವೃದ್ಧಿ ಆ) ಯಣ್ ಇ) ಗುಣ ಈ) ಜಸ್ತ್ವ
32. ಕೇಳುತ್ತಾನೆ ಎಂಬುದರ ಸಂಭವನಾರ್ಥಕ ರೂಪ
ಅ) ಕೇಳಲಿ ಆ) ಕೇಳನು ಇ) ಕೇಳಯಾನು ಈ) ಕೇಳುವನು
33. ಕ್ರಿಯಾಪದದ ಮೂಲರೂಪ     
ಅ) ಧಾತು ಆ) ಪ್ರಕೃತಿ ಇ) ಪ್ರಾತಿಪದಿಕ ಈ) ಪ್ರತ್ಯಯ
34. ಕಂದ ಪದ್ಯದಲ್ಲಿರುವ ಸಾಲುಗಳ ಸಂಖ್ಯೆ
ಅ) ನಾಲ್ಕು ಆ) ಆರು ಇ) ಮೂರು ಈ) ಸಾಲಿನ ನಿಯಮವಿಲ್ಲ
35. ಸ್ವಾವಲಂಬನೆ ಪದದ ವಿರುದ್ದಾರ್ಥ
ನಿರಾವಲಂಬನೆ ಆ)  ಪರಾವಲಂಬನೆ ಇ)  ಅವಲಂಬನೆ ಈ) ಅಸ್ವಾವಲಂಬನೆ
36.ಸೂರ್ಯೋದಯ-ಇಲ್ಲಿ ಆಗಿರುವ ಸಂಧಿ
) ಸವರ್ಣ ಆ) ಗುಣ ಇ) ಜಸ್ತ್ವ ಈ) ವೃದ್ಧಿ
37. ಶ್ರೀ ಪದದ ತದ್ಭವ ರೂಪ        
) ಐಶ್ವರ್ಯ ಆ) ಐಸಿರಿ ಇ) ಸ್ತ್ರೀ ಈ) ಸಿರಿ
38. “ಬೆಹನ್ಜೀ,ವೋದೇಕೋ,ಕೇದಾರ್ಜೀ ಕಾ ಮಂದಿರ್ಎಂದು ಹೇಳಿದನು.ಇಲ್ಲಿರುವ ಲೇಖನ ಚಿಹ್ನೆ
) ವಿವರಣಾತ್ಮಕ ಆ)  ಉದ್ಧರಣ ಇ) ಪ್ರಶ್ನಾರ್ಥಕ ಈ) ವಿಶೇಷ
39. ಸಹಸ್ರ ಇದರ ತದ್ಭವರೂಪ
) ಶತಕ  ಆ) ಸಾವಿರ ಇ) ಸಾಸಿರ ಈ) ದಶಕ
40. ಕೇದಾರವನ್ನು - ಇಲ್ಲಿರುವ ವಿಭಕ್ತಿ ಪ್ರತ್ಯಯ          
ಚತುರ್ಥಿ ಆ) ದ್ವಿತೀಯ ಇ)  ತೃತೀಯ ಈ) ಪಂಚಮಿ
41. ಹರಿದ್ವಾರ- ಈ ಪದಕ್ಕೆ ಪ್ರಸ್ತಾರ ಹಾಕಿದ ಸರಿಯಾದ ರೂಪ:           
–  –  ಆ)    – –    ಇ)   – – ಈ)  – –
42. ತಾಯಿಗೆ ಪತ್ರ ಬರೆಯುವಾಗ ಬಳಸುವ ಒಕ್ಕಣೆ    
) ಪ್ರೀತಿಯ ಮಾತೃ  ಆ)  ಮಾತೃ ಶ್ರೀ ಇ)  ಮಾತೃರೂಪು  ಈ) ನಲ್ಮೆಯ ಅಮ್ಮ
43. ಮದುವೆಯಾಗು - ಅರ್ಥಬರುವ ನುಡಿಗಟ್ಟು
) ಕೈಹಿಡಿ ಆ) ಕೈಕೊಡು ಇ) ಕೈಮಾಡು ಈ) ಕೈಕಟ್ಟು
44. ಇವುಗಳಲ್ಲಿ ರೂಪಕಾಲಂಕಾರವಲ್ಲದ್ದು     
ಅ) ಕರುಣೆ ಕಡಗೋಲಿಟ್ಟು ಮಥಿಸುತಿಹೆ ಆ) ಶಾಂತಿ ಶಶಿ ಇ) ಹಿಮಗೌರಿ ಈ) ಕುಲಗಿರಿ ಕೆಡೆವಂದದೆ
45. ಆದಿಯಲ್ಲಿ ಲಘು ದ್ವಯ ಗುರು ದ್ವಯ ಬರುವ ವೃತ್ತ ಪದ್ಯ     
ಅ) ಶಾರ್ದೂಲ ವಿಕ್ರೀಡಿತ ಆ0 ಮತ್ತೇಭ ವಿಕ್ರೀಡಿತ  ಇ) ಚಂಪಕಮಾಲ  ಈ) ಉತ್ಪಲಮಾಲಾ 
46. ಇವುಗಳಲ್ಲಿ ಗುಂಪಿಗೆ ಸೇರದ ಪದ         
ಅ) ಲಲಿತ ಆ) ಉತ್ಸಾಹ ಇ) ಕುಸುಮ ಈ) ಮಂದಾನಿಲ
47. ಸಂಧ್ಯಾ ಪದದ ತದ್ಭವ ರೂಪ  
ಅ) ಸಂಜಿ ಆ) ಸಂಜೆ ಇ) ಸಂಧ್ಯ ಈ) ಸಾಯಂಕಾಲ
48. ಹೊಟ್ಟೆ ತಣ್ಣಗಿರಲಿ ಎಂಬುದು    
ಅ) ನುಡಿಗಟ್ಟು ಆ) ಜೋಡು ನುಡಿ ಇ) ಅವ್ಯಯ ಈ) ದ್ವಿರುಕ್ತಿ
49. ಸಜ್ಜನ- ಸಂಧಿಗೆ ಉದಾಹರಣೆ         
ಅ) ಜಸ್ತ್ವ ಆ) ಶ್ಚುತ್ವ ಇ) ಆದೇಶ ಈ) ಅನುನಾಸಿಕ
50. ಧಾತ್ರಿಯಳ್ ಇಲ್ಲಿರುವ ವಿಭಕ್ತಿ ಪ್ರತ್ಯಯ  
ಅ) ಸಪ್ತಮೀ ಆ) ದ್ವಿತೀಯಾ ಇ) ಷಷ್ಠೀ ಈ) ಪಂಚಮೀ
51. ಉರಗ-ಎಂದರೆ
ಅ) ಹಾವು ಆ) ಕಪ್ಪೆ ಇ) ಎದೆ ಈ) ಹಕ್ಕಿ
52. ಪೂರ್ವ ಪದದಲ್ಲಿ ಕೃದಂತವಿರುವ ಸಮಾಸವೆಂದರೆ
ಅ) ದ್ವಂದ್ವ ಆ) ದ್ವಿಗು ಇ) ಗಮಕ ಈ) ಅಂಶಿ
53. ಚಂದ್ರನವೊಲ್ ಎಂಬುದು       
ಅ) ತದ್ಧಿತಾಂತಾವ್ಯಯ ಆ) ತದ್ಧಿತಾಂತನಾಮ ಇ) ತದ್ಧಿತಾಂತ ಭಾವನಾಮ ಈ) ಅವಧಾರಣಾರ್ಥಕಾವ್ಯಯ
54. ಕಂದ ಪದ್ಯದಲ್ಲಿ ವಿಷಮ ಗಣಗಳೆಂದರೆ
ಅ)1,3,5,7ನೇಗಣಗಳು ಆ) 2,4,6,8ನೇಗಣಗಳು ಇ) 3,6,4,8ನೇಗಣಗಳು ಈ) 8,3,4,6ನೇಗಣಗಳು
55. ಇವುಗಳಲ್ಲಿಗಣಕ್ಕೆ ಉದಾಹಣೆ
ಅ) ಗಣಪ ಆ) ವಿಘೇಶ ಇ) ಭಾಸ್ಕರ ಈ) ಹೇರಂಭ
56. ಉಪಮಾನ ಉಪಮೇಯಗಳನ್ನು ಅಭೇದವಾಗಿ ಹೇಳುವ ಅಲಂಕಾರ
ಅ) ರೂಪಕ ಆ) ಶ್ಲೇಷ ಇ) ಉಪಮಾ ಈ) ದೃಷ್ಟಾಂತ
57. ‘ಆಫೀಸು’ –ಇದರ ಮೂಲರೂಪ                                   
ಅ) ಆಪೀಸ್ ಆ) ಅಫೀಸ್ ಇ) ಆಪಿಸ್ ಈ) ಆಫೀಸ್
58. ಕೆಳಗಿನ ವಾಕ್ಯಗಳಲ್ಲಿ ಮಿಶ್ರವಾಕ್ಯಕ್ಕೆ ಉದಾಹರಣೆಯಾಗಿರುವುದು.          
ಅ) ಅವರು ಪುಸ್ತಕವನ್ನು ಓದಿದರು.
ಆ) ಅವರು ಪುಸ್ತಕವನ್ನು ಓದಿದರು ಆದರೆ ಅರ್ಥ ಮಾಡಿಕೊಳ್ಳಲಿಲ್ಲ.
ಇ) ಅವರು ಪುಸ್ತಕವನ್ನು ಓದುತ್ತಿದ್ದಾರೆಂಬ ತಿಳಿದು ಬೇರೆಯ ಮಕ್ಕಳೂ ಬಂದರು
ಈ) ಅವರು ಪುಸ್ತಕವನ್ನು ಓದಲಿ.
59. ಊಟಬಲ್ಲವನಿಗೆ ರೋಗವಿಲ್ಲ ; ಗಾದೆಯ ಪೂರ್ವಾರ್ಧ   
ಅ) ಜಗಳ ಬಲ್ಲವನಿಗೆ ಊಟವಿಲ್ಲ  ಆ) ಮಾತು ಬಲ್ಲವನಿಗೂ ರೋಗವಿಲ್ಲ    
ಇ) ಮಾತು ಬಲ್ಲವನಿಗೆ ಊಟವಿಲ್ಲ ಈ) ಮಾತು ಬಲ್ಲವನಿಗೆ ಜಗಳವಿಲ್ಲ      
60. ಬರವಣಿಗೆಯಲ್ಲಿ ಪ್ರಧಾನ ಅಥವಾ ವಿಶಿಷ್ಟ ಪದಗಳನ್ನು ಬಳಸಿದಾಗ ಉಪಯೋಗಿಸುವ ಲೇಖನ ಚಿಹ್ನೆ
ಅ) ಭಾವ ಸೂಚಕ ಆ) ಉದ್ಧರಣ ಇ) ವಾಕ್ಯವೇಷ್ಟನ ಈ) ಆವರಣ
61. ಶ್ರೀ ಹನುಮಂತಯ್ಯನವರು ಕಟ್ಟಡದ ವಿನ್ಯಾಸವನ್ನು ಅಂತಿಮವಾಗಿ ಗೊತ್ತು ಮಾಡಿದರು. ಇಲ್ಲಿರುವ ಕರ್ಮಪದ
ಅ) ಶ್ರೀ ಹನುಮಂತಯ್ಯನವರು ಆ) ಕಟ್ಟಡದ ವಿನ್ಯಾಸವನ್ನು ಇ) ಅಂತಿಮವಾಗಿ ಈ) ಗೊತ್ತು ಮಾಡಿದರು.
62.ಕಾಣುತ್ತಿದ್ದನುಈ ಕ್ರಿಯಾಪದದ ಧಾತುರೂಪ.    
ಅ) ಕಾಣು ಆ) ಕಾಣುತಾ ಇ) ಕಂಡು ಈ) ಕಣ್
63. ಅಲ್ಲದೆ ಎಂಬುದು      
ಅ) ಸಂಬಂಧಾರ್ಥಕಾವ್ಯಯ ಆ) ಭಾವಸೂಚಕಾವ್ಯಯ  ಇ) ನಿಪಾತಾವ್ಯಯ ಈ) ಸಾಮಾನ್ಯಾವ್ಯಯ
64. ಅಲಂಕಾರ ವಾಕ್ಯದಲ್ಲಿ ವರ್ಣಿಸುತ್ತಿರುವ ವಸ್ತು ಇದಾಗಿರುತ್ತದೆ          
ಅ) ಉಪಮೇಯ ಆ) ಉಪಮಾನ ಇ) ಉಪಮಾವಾಚಕ ಈ) ಸಮಾನಧರ್ಮ
65. ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ
ಅ) ಯತಿ ಆ) ಶ್ರುತಿ ಇ) ಪ್ರಾಸ ಈ) ಚರಣ
66. ಇವುಗಳಲ್ಲಿ ಆದೇಶ ಸಂಧಿಗೆ ಉದಾಹರಣೆಯಲ್ಲದ್ದು
) ಬಂಡೆಗಲ್ಲು ಆ) ಕಂಬನಿ ಇ) ಬೃಹದ್ಭಾರತ ಈ) ಕಳೆಗುಂದು
67. ಉಪಮೇಯ ಉಪಮಾನಗಳಿಗೆ ಹೋಲಿಕೆಯಿರುವ ಅಲಂಕಾರವೆಂದರೆ
) ಉತ್ಪ್ರೇಕಾ ಆ) ರೂಪಕ ಇ) ಉಪಮಾ ಈ) ಯಮಕ
68. ಪರರಿಗಿಕ್ಕದ-ಸಂಧಿಬಿಡಿಸಿದ ರೂಪ
) ಪರರಿ + ಗಿಕ್ಕದ ಆ) ಪರರಿಗಿ + ಇಕ್ಕದ ಇ) ಪರರ + ಇಕ್ಕದ ಈ) ಪರರಿಗೆ + ಇಕ್ಕದ
69. ಕನ್ನಡದಲ್ಲಿರುವ ವೃತ್ತಗಳ ಸಂಖ್ಯೆ
) 3 ಆ) 6 ಇ) 9 ಈ) 12
70. ಪೂರ್ವಪದದಲ್ಲಿ ಗುಣವಾಚಕವಿರುವ ಸಮಾಸ
) ತತ್ಪುರುಷ ಆ) ಗಮಕ ಇ) ದ್ವಿಗು ಈ) ಕರ್ಮಧಾರಯ
71. ಉತ್ಪಲಮಾಲಾವೃತ್ತದಲ್ಲಿ ಬರುವ ಒಟ್ಟು ಅಕ್ಷರಗಳ ಸಂಖ್ಯೆ
) 19 ಆ) 20 ಇ) 21 ಈ) 22
72. ಚಂಪೂಕಾವ್ಯವೆಂದರೆ
 ಅ) ಗದ್ಯಕಾವ್ಯ ಆ) ಗದ್ಯ ಪದ್ಯಮಿಶ್ರಿತಕಾವ್ಯ ಇ) ಪದ್ಯಕಾವ್ಯ ಈ) ಹಳೆÀಗನ್ನಡಕಾವ್ಯ
73. ಕಣ್ಣೋಟ- ಸಮಾಸಕ್ಕೆ ಉದಾಹರಣೆ-
 ಅ) ಬಹುವ್ರೀಹಿ ಆ) ತತ್ಪುರುಷÀ ಇ) ಕರ್ಮಧಾರಯ ಈ) ಅಂಶಿ
74. ಕಂದಪದ್ಯದಲ್ಲಿ ಬರುವ ಒಟ್ಟು ಗಣಗಳ ಸಂಖ್ಯೆ      
ಅ) ಎಂಟು ಆ) ಹನ್ನೆರಡು ಇ) ಹದಿನಾರು ಈ) ಹದಿನೆಂಟು
75. ‘ನಾನೇ’- ಎಂಬುದು  
 ಅ) ಅವಧಾರಣಾರ್ಥಕಾವ್ಯಯ ಆ) ಸಂಬಂಧಾರ್ಥಕಾವ್ಯಯ ಇ) ಸಾಮಾನ್ಯಾವ್ಯಯ ಈ) ಭಾವಸೂಚಕಾವ್ಯಯ
76. ಸಿಂಹ ಪದದ ತದ್ಭವರೂಪ
ಅ) ಸಿಂಗ ಆ) ಸಿಂಹಿಣಿ ಇ) ಮೃಗರಾಜ ಈ) ಸಿಂಹಾ
77. ನೀನಿನಿತು ಪೋಲ್ತಾರ ಬಲದೊಳ್ ತಡೆದೆ - ವಾಕ್ಯದಲ್ಲಿ ಇರಬೇಕಾದ ಲೇಖನ ಚಿಹ್ನೆ
ಅ) ಭಾವಸೂಚಕ ಆ) ಆಶ್ಚರ್ಯಸೂಚಕ ಇ) ಪ್ರಶ್ನಾರ್ಥಕ  ಈ) ಪೂರ್ಣವಿರಾಮ
78. ಯರವ ಅಕ್ಷರಗಳು ಆದೇಶವಾಗುವ ಸಂಧಿಎಂದರೆ           
ಅ) ಗುಣ ಆ) ಸವರ್ಣ ಇ) ಯಣ್ ಈ) ವೃದ್ಧಿ     
79. ಕಟ್ಟಕಡೆ ಎಂಬುದು    
ಅ) ದ್ವಿರುಕ್ತಿ ಆ) ಜೋಡುನುಡಿ ಇ) ಪಡೆನುಡಿ ಈ) ಅವ್ಯಯ
80. ‘ಹೊಳೆಕ್ರಿಯಾಪದವಾಗಿ ಬಳಸಿದಾಗ ಬರುವ ಅರ್ಥ           
ಅ) ಪ್ರಕಾಶಿಸು ಆ) ಗೋಚರಿಸು  ಇ) ವರ್ಷಧಾರೆ ಈ) ಹರಿಯುವ ನೀರು
81. ಬೆಮರ್ತನ್ ಪದದ ಹೊಸಗನ್ನಡ ರೂಪ
ಅ) ಬೆವರಿದನು ಆ) ಬೆದರಿದನು ಇ) ಬೆವರಿಸಿದನು ಈ) ಬೆಚ್ಚಿದನು
82. ವಾರ್ಧಕ ಎಂಬುದು ಇದಕ್ಕೆ ಉದಾಹರಣೆಯಾಗಿದೆ           
ಅ) ರಗಳೆ ಆ) ವೃತ್ತ ಇ) ಷಟ್ಪದಿ ಈ) ಅಲಂಕಾರ
83. ಅವನು ಎಂಬುದು     
ಅ) ಅಂಕಿನಾಮ ಆ) ರೂಢನಾಮ ಇ) ಅನ್ವರ್ಥನಾಮ ಈ) ಸರ್ವನಾಮ
84. ತಂದೆಗೆ ಪತ್ರ ಬರೆಯುವಾಗ ಬಳಸುವ ಒಕ್ಕಣೆ     
ಅ) ಪಿತೃಶ್ರೀಸಮಾನರಾದ ಆ) ತೀರ್ಥರೂಪು ಸಮಾನರಾದ ಇ) ತೀರ್ಥರೂಪು ಈ) ಪೂಜ್ಯತಂದೆಯವರಿಗೆ
85. ದ್ವಿತೀಯಾ ವಿಭಕ್ತಿ ಹಳೆಗನ್ನಡ ಪ್ರತ್ಯಯ
ಅ) ಒಳ್ ಆ) ಅನ್ನು ಇ) ಇಂದಂ  ಈ) ಅಂ
86. ಅಂಘ್ರಿ ಪಲ್ಲವಇಲ್ಲಿರುವ ಅಲಂಕಾರ
ಅ) ರೂಪಕ ಆ) ಉಪಮಾ ಇ) ಶ್ಲೇಷ ಈ) ಅನುಪ್ರಾಸ
87. ‘ಮತ್ತೇಭವಿಕ್ರೀಡಿತವೃತ್ತದಲ್ಲಿರುವ ಗಣಗಳು -
ಅ) ಭರನಭಭರ ಒಂದುಲಘು ಒಂದುಗುರು     ಆ) ನಜಭಜಜಜರ
ಇ) ಸತತನಸರರ ಒಂದುಗುರು       ಈ) ಸಭರನಮಯ ಒಂದುಲಘು ಒಂದುಗುರು
88. ಒಂದು ಕ್ರಿಯಾಪದದೊಂದಿಗೆ ಖಚಿತ ಅರ್ಧ ಕೊಡುವ ಸ್ವತಂತ್ರ ವಾಕ್ಯ
ಅ) ಮಿಶ್ರ ವಾಕ್ಯ ಆ) ಸಾಮಾನ್ಯ ವಾಕ್ಯ ಇ) ಸಂಯೋಜಿತ ವಾಕ್ಯ ಈ) ಸ್ವತಂತ್ರ ವಾಕ್ಯ
89. ಒಂದೇ ಪದ ಬೇರೆ ಬೇರೆ ಅರ್ಥಕೊಡುವಂತೆ ವರ್ಣಿಸುವ ಅಲಂಕಾರ-
ಅ) ಉಪಮಾಲಂಕಾರ ಆ) ಶ್ಲೇಷಾಲಂಕಾರ ಇ) ರೂಪಕಾಲಂಕಾರ ಈ) ಉತ್ಪೇಕ್ಷಾಲಂಕಾರ
90. ಅನ್ಯಪದ ಅರ್ಥ ಪ್ರಧಾನವಾಗರುವ ಸಮಾಸ      
ಅ) ಬಹುವ್ರೀಹಿ ಆ) ತತ್ಪುರುಷ ಇ) ದ್ವಿಗು  ಈ) ಗಮಕ
91. ಇವುಗಳಲ್ಲಿ ನಾಲ್ಕು ಸಾಲಿನ ಅಕ್ಷರ ಗಣ ಛಂದಸ್ಸು-
ಅ) ಕಂದ ಆ) ಕುಸುಮ ಇ) ಲಲಿತ ಈ) ಚಂಪಕ
92. ಮಂಕೊಂದು - ಸಂಧಿ ಬಿಡಿಸಿದಾಗ        
ಅ)ಮಂಕು + ಕೊಂದು ಆ) ಮಂಕು + ಒಂದು ಇ) ಮಂಕೊ + ಒಂದು ಈ) ಮಂ + ಕೊಂದು
93. ದಿಗ್ವಿಜಯ - ಸಂಧಿಗೆ ಉದಾಹರಣೆ-
ಅ) ಜಸ್ತ್ವ ಆ) ಶ್ಚುತ್ವ ಇ) ಅನುನಾಸಿಕ ಈ) ಆದೇಶ
94. ಇವುಗಳಲ್ಲಿ ವಿರೋಧಾರ್ಥ ಕೊಡದ ಜೋಡು ನುಡಿ
ಅ) ಸುಖ ದುಃಖ ಆ) ನೋವು ನಲಿವು ಇ) ಕಷ್ಟ ಸುಖ ಈ) ಹಣ ಕಾಸು
95. ‘ಅನ್ನುಎಂಬುದು ವಿಭಕ್ತಿ ಪ್ರತ್ಯಯ   
ಅ) ಸಪ್ತಮೀ ಆ) ಪ್ರಥಮಾ ಇ) ದ್ವಿತೀಯಾ ಈ) ಪಂಚಮೀ
96. ಸಿಂಚಿಸು ಎಂಬ ಪದದ ಅರ್ಥ   
ಅ) ಚುಮುಕಿಸು  ಆ) ಸಂಚರಿಸು ಇ) ಸಿಂಗಾರಮಾಡು ಈ) ಸೂಚಿಸು
97. ಸವರ್ಣವಲ್ಲದ ಅಕ್ಷರಗಳೆಂದರೆ 
ಅ) ಅಅ ಆ) ಇಇ ಇ) ಎಏ ಈ) ಉಊ
98. ಅಬ್ಧಿ ಇದರ ತದ್ಭವರೂಪ-       
ಅ) ಅಬುಧಿ ಆ) ಅಭುದಿ  ಇ) ಅಬುದಿ ಈ) ಅಭುಧಿ
99. ಭೂತಕಾಲಸೂಚಕ ಪ್ರತ್ಯಯ   
ಅ) ಉತ್ತ ಆ) ಇ) ಈ) ಅನು
100. ತಿರಸ್ಕಾರ, ಆಶ್ಚರ್ಯ, ದುಃಖ ಮುಂತಾದವನ್ನು ವ್ಯಕ್ತಪಡಿಸುವಾಗ ಬಳಸುವ ಚಿಹ್ನೆ
ಅ) ! ಆ) “ “ ಇ) ? ಈ) :-
101. ಕಾವ್ಯದ ಪ್ರತಿಸಾಲಿನ ಒಂದು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ  
ಅ) ಅಂತ್ಯ ಪ್ರಾಸ ಆ) ಆದಿ ಪ್ರಾಸ ಇ) ಮಧ್ಯ ಪ್ರಾಸ ಈ) ಕಾವ್ಯ ಪ್ರಾಸ      
102. ಮೂರೂ ಅಕ್ಷರಗಳೂ ಲಘು ಬರುವ ಗಣ           
ಅ) ನಗಣ ಆ) ಮಗಣ ಇ) ತಗಣ ಈ) ಸಗಣ
103. ಹಿಮಾಚಲ ಇದನ್ನು ಬಿಡಿಸಿ ಬರೆದಾಗ
ಅ) ಹಿಮ + ಚಲ ಆ) ಹಿಮ + ಆಚಲ ಈ) ಹಿಮ + ಅಚಲ ಈ) ಹಿಮ + ಮಾಚಲ
104. ಇವುಗಳಲ್ಲಿ ಷಟ್ಪದಿಗಳೆಂದರೆ
ಅ) ಶರ, ಕುಸುಮ. ಭೋಗ, ಭಾಮಿನಿ, ಆ) ಕುಸುಮ, ಚಂಪಕ, ಉತ್ಸಾಹ, ಲಲಿತ.
ಇ) ಮಂದಾನಿಲ, ಉಪಮಾ, ಶ್ಲೇಷ, ಪರಿವರ್ಧಿನಿ ಈ) ಯಮಕ, ಭಾಮಿನಿ, ಕಂದ, ರಗಳೆ
105. ಇವುಗಳಲ್ಲಿ ಗುಂಪಿಗೆ ಸೇರದ ಪದ
ಅ) ಮುಡಿಕಟ್ಟು ಆ) ಉಡಿತುಂಬು ಇ) ತಲೆದೂಗು ಈ) ಪ್ರಜಾಮಾತೆ
106. ಇವುಗಳಲ್ಲಿ ಸಂಭಾವನಾರ್ಥಕ
ಅ) ತೋರುತ್ತಾನೆ ಆ) ತೋರಲಿ ಇ) ತೋರಿಯಾನು ಈ) ತೋರನು
107. ‘ಕಂಬನಿ ಪದವನ್ನ ಬಿಡಿಸಿದ ರೂಪ 
ಅ) ಕಂ + ಬನಿ ಆ) ಕಣ್ + ಪನಿ ಇ) ಕಣ್ + ಬನಿ ಈ) ಕಣ್ಣು + ಹನಿ
108. ಕೆಳಗಿನ ಪದಗಳಲ್ಲಿ ಉರ್ದು ಪದವಲ್ಲದ್ದು
ಅ) ವಜಾ ಆ) ಜುಲ್ಮಾನೆ ಇ) ದಾಖಲೆ ಈ) ಮುನಷಿ
109. ಇವುಗಳಲ್ಲಿ ವಾಕ್ಯವೇಷ್ಟ ಚಿಹ್ನೆಯೆಂದರೆ
ಅ)  “” ಆ) ! ಇ) ‘’ ಈ) : -
110. ಸಕಲರಿಗೂ ಬೇಡಿಕೆಗಳನ್ನೂ ದೇವರು ಇಡೇರಿಸಲಿ.- ವಾಕ್ಯದಲ್ಲಿರುವ ಕ್ರಿಯಾರೂಪ
ಅ) ಪ್ರಶ್ನಾರ್ಥಕ ಆ) ನಿಷೇದಾರ್ಥಕ ಇ) ವಿದ್ಯರ್ಥಕ  ಈ) ಸಂಭಾವನಾರ್ಥಕ
111. “ಇದು ಲಾಕ್ಷಾಗೇಹದಾಹಕ್ಕಿದು ವಿಷಮವಿಷಾನ್ನಕ್ಕಿದಾ ನಾಡ ಜೂದಿಂ”- ಇಲ್ಲಿರುವ ಛಂದಸ್ಸು
ಅ)ಚಂಪಕ ಮಾಲಾವೃತ್ತ ಆ)ಉತ್ಪಲಮಾಲಾವೃತ್ತ
ಇ)ಮಹಾಸ್ರಗ್ಧರಾವೃತ್ತ’    ಈ)ಸ್ರಗ್ಧರಾವೃತ್ತ
112. ಇವುಗಳಲ್ಲಿ ಗುಂಪಿಗೆ ಸೇರದ ಪದ       
ಅ) ಪೆರ್ಬಂಡೆ ಆ) ತಲೆಯತ್ತು ಇ) ಕೈಮುಗಿ ಈ) ಕಾಲ್ತೊಳೆ
113. ವಿಶೇಷಣ ಮತ್ತು ವಿಶೇಷ್ಯ ಸಂಬಂಧವನ್ನು ಹೊಂದಿರುವ ಸಮಾಸ  
 ಅ) ತತ್ಪುರುಷ ಆ) ದ್ವಿಗು  ಇ)  ಕರ್ಮಧಾರಯ ಈ) ಗಮಕ
114. ಬ್ಯಾಸಗಿ -ಪದದ ಗ್ರಾಂಥಿಕ ರೂಪ
ಅ) ಬೇಸಾಯ ಆ) ಬೇಸಗೆ ಇ) ಬೇಸರ ಈ) ಬೇಯಿಸಿ 
115. ‘ಅನಲ’ -ಪದದ ಅರ್ಥ         
ಅ) ಬೆಂಕಿ ಆ) ಅನಿಲ ಇ) ಸೂರ್ಯ ಈ) ಹೂವು
116. ಬೃಹದ್ಭಾರತ ಪದದ ವ್ಯಾಕರಣಾಂಶ    
ಅ) ವೃದ್ಧಿಸಂಧಿ ಆ) ಯಣ್ಸಂಧಿ ಇ) ಜಸ್ತ್ವಸಂಧಿ ಈ) ಶ್ಚುತ್ವ ಸಂಧಿ
117. ಶಕ್ತಿಗಿಂತ ------ ಗಾದೆಯ ಉತ್ತರ ಭಾಗ.      
ಅ) ಶಕ್ತಿಯಿಲ್ಲದಿರುವುದೇ ಮೇಲು ಆ) ಯುಕ್ತಿ ಮೇಲು ಇ) ಬುದ್ದಿಮೇಲು ಈ) ಪರಾಕ್ರಮ ಮೇಲು  
118. ಇದು ಪದ್ಯವನ್ನು ರಚಿಸುವ ಶಾಸ್ತ್ರ       
 ಅ) ವ್ಯಾಕರಣ ಆ) ಅಲಂಕಾರ ಇ) ಛಂದಸ್ಸು ಈ) ಪ್ರಾಸ
119. “ಗೌರಿಯಲ್ಲಿಎಂಬ ಪದದಲ್ಲಿರುವ ವಿಭಕ್ತಿ          
ಅ) ಸಪ್ತಮೀ ಆ) ಪ್ರಥಮಾ ಇ) ಷಷ್ವೀ ಈ) ಪಂಚಮೀ
120. ಇವುಗಳಲ್ಲಿ ಸವರ್ಣಾಕ್ಷರಗಳೆಂದರೆ      
 ಅ) ಅಂಅಃ ಆ) ಒಓ ಇ) ಏ ಈ) ಉಊ
121. ಲಕ್ಷೋಪಲಕ್ಷ ಇಲ್ಲಿ ಆಗಿರುವ ಸಂಧಿ:
) ಲೋಪ ಆ) ಗುಣ ಇ) ವೃದ್ಧಿ ಈ) ಸವರ್ಣದೀರ್ಘ
122. ಕರ್ಮಣಿ ಪ್ರಯೋಗದಲ್ಲಿ ಸೇರುವ ಪ್ರತ್ಯಯ:
) ಅಲ್ಪಡು ಆ) ಕೃದಂತ ಇ) ಆಖ್ಯಾತ ಈ) ಕಾಲಸೂಚಕ
123. ಬೇರೆ ಬೇರೆ ವಾಕ್ಯಗಳು ಅರ್ಥಸಾದೃಶ್ಯದಿಂದ ಬಿಂಬ ಪ್ರತಿ ಭಾವದಂತೆ ತೋರುವ ಅಲಂಕಾರ;
) ರೂಪಕ ಆ) ದೃಷ್ಟಾಂತ ಇ) ಉಪಮಾ ಈ) ಯಮಇ)
124. ಭಾನು ಪದದ ಅರ್ಥ
ಆಕಾಶ ಆ)  ಸೂರ್ಯ ಇ) ಭೂಮಿ ಈ) ವಾಯು
125. ವೃತ್ತ ಪದ್ಯದ ಸಾಲುಗಳ ಸಂಖ್ಯೆ         
 ಅ) ನಾಲ್ಕು ಆ) ಎಂಟು ಇ) ಹನ್ನೆರಡು ಈ) ಹದಿನಾರು
126. ‘ಅತ್ತಣಿಮ್’-ಎಂಬುದು         
ಅ) ಪಂಚಮೀ ವಿಭಕ್ತಿ ಪ್ರತ್ಯಯ ಆ) ಪ್ರಥಮಾ ವಿಭಕ್ತಿ ಪ್ರತ್ಯಯ ಇ) ತೃತೀಯಾ ವಿಭಕ್ತಿ ಪ್ರತ್ಯಯ ಈ) ಷಷ್ಠೀವಿಭಕ್ತಿ ಪ್ರತ್ಯಯ
127. ‘ಕಟ್ಟಕಡೆಇದರಲ್ಲಿರುವ ವ್ಯಾಕರಣಾಂಶ
ಅ) ನುಡಿಗಟ್ಟು ಆ) ಜೋಡುನುಡಿ ಇ) ದ್ವಿರುಕ್ತಿ ಈ) ಅವ್ಯಯ
128. ಬರೆಯುತ ಎಂಬುದು           
ಅ) ಕೃದಂತಾವ್ಯಯ ಆ) ಕೃದಂತ ಭಾವ ನಾವ ಇ) ಕೃದಂತ ನಾಮ ಈ) ನಿಷೇಶ ಕೃದಂತ
129. ಉಪಮೇಯವನ್ನು ಹೀಗೆಂದೂ ಕರೆಯುತ್ತಾರೆ     
 ಅ) ವರ್ಣ ಆ) ವಣ್ರ್ಯ ಇ) ಅವಣ್ರ್ಯ ಈ) ವಾಚಕ
130. ಮೂರೂ ಅಕ್ಷರಗಳೂ ಲಘು ಬರುವ ಗಣ           
ಅ) ನಗಣ ಆ) ಮಗಣ ಇ) ತಗಣ ಈ) ಸಗಣ
131. ‘ಇಂದಯಾವ ವಿಭಕ್ತಿ ಪ್ರತ್ಯಯಗಳು :
) ದ್ವಿತೀಯಾ ಆ) ತೃತೀಯಾ ಇ) ಪಂಚಮೀ ಈ)  ಷಷ್ಠೀ
132. ಕರ್ಮಪದವನ್ನು ಅಪೇಕ್ಷಿಸುವ ಧಾತುಗಳು :
ಸಕರ್ಮಕ ಆ) ಅಕರ್ಮಕ ಇ) ಸಾಧಿತ  ಈ) ನಿಷ್ಪನ್ನ
133. ಮಾತ್ರಾಗಣ ಆಧಾರಿತ ಚೌಪದಿ :
) ಚಂಪೂ ಆ) ರಗಳೆ ಇ) ವೃತ್ತ ಈ) ಕಂದ.
134. ‘ವಿಫಲ’- ಪದದ ವಿರುದ್ದಾರ್ಥಕ ರೂಪ.
ಸಫಲ  ಆ) ನಿಷ್ಫಲ ಇ) ಅಫಲ ಈ) ಫಲ
135. ಇವುಗಳಲ್ಲಿ ಇದು ಸಜಾತೀಯ ಸಂಯುಕ್ತಾಕ್ಷರವಾಗಿದೆ.
) ದಟ್ಟ ) ಪರ್ಣ ಇ) ಸ್ಥಳ ಈ) ಜಾಸ್ತಿ
136. ‘ಗೋಣು ಎಂಬುದಕ್ಕೆ ಇದು ಸಮಾನಾರ್ಥಕವಾಗಿದೆ.
) ನೇಣು ಆ) ಗೋಣಿಚೀಲ ಇ) ಕುತ್ತಿಗೆ ಈ) ಸುತ್ತಿಗೆ.
137. ಇವುಗಳಲ್ಲಿ ಗುಂಪಿಗೆ ಸೇರದ ಪದ
) ಯೋಧ ಆ) ಸಚಿವ ) ಸಿಪಾಯಿ ಈ)ಸೈನಿಕ
138. ತ್ರಿಪದಿಯಲ್ಲಿರುವ ಸಾಲುಗಳ ಸಂಖ್ಯೆ
) ಒಂದುಆ) ಎರಡು ಇ) ಮೂರು ) ನಾಲ್ಕು
139. ‘ಪಡುವಣಎಂದರೆ ದಿಕ್ಕು.
) ಪೂರ್ವ         ) ದಕ್ಷಿಣ           ) ಉತ್ತರ          ) ದಕ್ಷಿಣ
140. ‘ತಲೆಮಾರು ಪದವು ಸಮಾಸಕ್ಕೆ ಉದಾಹರಣೆ ___________
) ಕ್ರಿಯಾ ಆ) ಗಮಕ  ) ಕರ್ಮಧಾರೆಯ    ) ತತ್ಪುರುಷ
141. ‘ಅನುಚರ ಪದದ ಅರ್ಥ _____________
) ಸಂಚಾಲಕ    ) ಹಿಂಬಾಲಕ    ) ನಿರ್ವಾಹಕ     ) ಕೃಪಾಲಕ
142. ಚಂದ್ರ + ಉದಯ ಇದನ್ನು ಕೂಡಿಸಿಬರೆದಾಗ _____________
) ಚಂದ್ರನ ಉದಯ                                            ) ಚಂದ್ರೋದಯ
) ಚಂದ್ರಉದಯ                                               ) ಚಂದಿರನ ಉದಯ
143. “ಗೌರಿಯ ಮುಖಕಮಲ ಅರಳಿತು ವಾಕ್ಯವು ಅಲಂಕಾರಕ್ಕೆ ಉದಾಹರಣೆಯಾಗಿದೆ
) ರೂಪಕ                     ) ಶಬ್ದಾ                        ) ಉಪಮಾ                  ) ಶ್ಲೇಷಾ
144. ‘ಮಾತಾರಾ ಶಬ್ದವು ಅಕ್ಷರ ಗಣಕ್ಕೆ ಉದಾಹರಣೆ _____________
) ‘ಗಣ                  ) ‘ಗಣ                  ) ‘ಗಣ                    )‘ಗಣ
145. ‘ಗಾವುದಪದದ ಅರ್ಥ _________
) ಸುಮಾರು 12 ಮೈಲಿ                           ) ಸುಮಾರು 19 ಮೈಲಿ  
) ಸುಮಾರು 20 ಮೈಲಿ                           ) ಸುಮಾರು 4 ಮೈಲಿ
146. ‘ಋಷ್ಯಾಶ್ರಮಪದವನ್ನು ಬಿಡಿಸಿ ಬರೆದಾಗ ___________
) ಋಷಿ+ಆಶ್ರಮ                                                ) ಋಷಿಯರ+ಆಶ್ರಮ    
) ಋಷಿಯ+ಆಶ್ರಮ                                            ) +ಆಶ್ರಮ
147. ‘ವಿಘ್ನಪದಕ್ಕೆ ಸವiನಾರ್ಥಕ ಪದ __________
) ದುಟಿಘ್ನ                     ) ಆನಂದ                     ) ತೊಂದರೆ                  )ಸಂತೋಷ
148. ‘ಪುಸ್ತಕಪದದ ತದ್ಭವ ಪದ ___________
) ಹೊತ್ತು                      ) ಸುತ್ತಿಗೆ                      ) ಹೊತ್ತಿಗೆ                    ) ಕುತ್ತಿಗೆ
149. ‘ಹುಬ್ಬಳ್ಳಿಯಗೆರೆ ಎಳೆದ ಅಕ್ಷರದ ವಿಭಕ್ತಿ ಪ್ರತ್ಯಯ ರೂಪ __________
) ಪ್ರಥಮ                     ) ದ್ವಿತೀಯ                   ) ಸಪ್ತಮಿ                      )ಷಷ್ಠಿ
150. `¿ಅಕ್ಷರದ ಹೊಸಗನ್ನಡ ರೂಪ-       
ಅ) `ಆ) `ಇ) `ಈ) `ಲಿ
151. ‘ಮರಇದು-         
ಅ) ರೂಢನಾಮ ಆ) ಅಂಕಿತನಾಮ ಇ) ಅನ್ವರ್ಥನಾಮ ಈ) ಸರ್ವನಾಮ
152. `ಮಲಗುಧಾತುವು-
ಅ) ಅಕರ್ಮಕ ಆ) ಸಕರ್ಮಕ ಇ) ಸಾಧಿತ ಈ) ನಿಷ್ಪನ್ನ
153. ಸಂಶಯ ಅಥವಾ ಊಹೆಯನ್ನು ವ್ಯಕ್ತಪಡಿಸುವ ಕ್ರಿಯಾಪದಗಳೇ-  
ಅ) ವಿಧ್ಯರ್ಥಕ ಆ) ಸಂಭಾವನಾರ್ಥಕ ಇ) ನಿಷೇಧಾರ್ಥಕ ಈ) ಕಾಲಸೂಚಕ
154. ರಾಣಿಯರು ಸ್ವಲ್ಪವೂ ದುಃಖವಿಲ್ಲದೆ ಸುಖವಾಗಿ ಅಂತಃಪುರದಲ್ಲಿ ಸಂತೋಷದಿಂದಿದ್ದರು.- ವಾಕ್ಯದಲ್ಲಿರುವ ಅನುನಾಸಿಕ ವಿಸರ್ಗಗಳೆರಡನ್ನೂ ಹೊಂದಿರುವ ಪದ-       
ಅ) ರಾಣಿಯರು ಆ) ಸ್ವಲ್ಪವೂ ದುಃಖವಿಲ್ಲದೆ ಇ) ಅಂತಃಪುರದಲಿ ಈ) ಸಂತೋಷದಿಂದಿದ್ದರು
155. ‘ತಿನ್ನುವೆನುಎನ್ನುವುದು -    
ಅ) ಉತ್ತಮ ಪುರುಷ ಭವಿಷತ್ಕಾಲ      ಆ) ಉತ್ತಮ ಪುರುಷ ವರ್ತಮಾನಕಾಲ.
ಇ) ಮಧ್ಯಮ ಪುರುಷ ಭವಿಷತ್ಕಾಲ     ಈ) ಮಧ್ಯಮ ಪುರುಷ ವರ್ತಮಾನಕಾಲ.
156. ಪಂಚಮೀ ವಿಭಕ್ತಿ ಹಳೆಗನ್ನಡ ಪ್ರತ್ಯಯ-
ಅ) ಇಂ ಆ) ಅತ್ತಣಿಂ ಇ) ಒಳ್ ಈ) ದೆಸೆಯಿಂದ.
157. ದ್ವಿತೀಯಾ ವಿಭಕ್ತಿಯ ಕಾರಕಾರ್ಥ-      
ಅ) ಅಪಾದಾನ ಆ) ಸಂಪ್ರದಾನ ಇ) ಕತ್ರ್ರರ್ಥ ಈ) ಕರ್ಮಾರ್ಥ
158. ಷಟ್ಪದಿ ಛಂದಸ್ಸು ಉದಾಹರಣೆಯಾಗಿರುವುದು
ಅ)ಮಾತ್ರಗಣಕ್ಕೆ ಆ) ಅಕ್ಷರಗಣಕ್ಕೆ ಇ) ಅಂಶಿಗಣಕ್ಕೆ ಈ) ವೃತ್ತಕ್ಕೆ
159. ಶಾಲೆಯೇ ದೇವಾಲಯ-ಇಲ್ಲಿರುವ ಅಲಂಕಾರ-  
ಅ) ರೂಪಕ ಆ) ಉಪಮಾ ಇ) ದೃಷ್ಟಾಂತ ಈ) ಶ್ಲೇಷ
160. ‘ಕುಂತವಳೆಈಪದದ ಗ್ರಾಂಥಿಕ ರೂಪ
ಅ) ಕುಳಿತುಕೊಂಡಳು ಆ) ಕುಳಿತಿರುವಳು ಇ) ಕುಂತಿದ್ದಾಳೆ  ಈ) ಕೂತವಳೆ
161. ಉರಗ ಎಂದರೆ-
ಅ)  ಹಾವು ಆ) ಎದೆ  ಇ) ದುರ್ಯೋಧನ ಈ) ಪತಾಕೆ
162. ಸಪ್ತರ್ಷಿ ಬಿಡಿಸಿ ಬರೆದ ರೂಪ-
ಅ) ಸಪ್ತ+ ಅರ್ಷಿ ಆ) ಸಪ್ತ+ ಋಷಿ  ಇ) ಸತ್ + ಋಷಿ  ಈ) ಸಪ್ತ+ರುಷಿ
163. ‘ಸಂಜ್ಞಾಶಬ್ದದ ತದ್ಭವ ರೂಪ-
ಅ) ಸಂಜೆ ಬಿ ಸನ್ನೆ ಇ) ಸಂಧ್ಯಾ  ಈ) ಸೊನ್ನೆ
164. ‘ದಿವಾನಪದವು ಭಾಷೆಯಿಂದ ಬಂದಿದೆ
ಅ) ಪರ್ಷಿಯನ್ ಆ) ಪೋರ್ಚುಗೀಸ್  ಇ) ಸಂಸ್ಕø ಈ) ಉರ್ದು
165. ‘ಇರ್ಪೊಡೆಈಪದದ ಹೊಸಗನ್ನಡ ರೂಪ-
ಅ) ಇರುವುದೆಂದರೆ ಆ) ಇದ್ದಪಡೆ ಇ) ಇದ್ದರೆ ಈ) ಎರಡುಪಡೆ
166. ನಿನಗೆ ಇಷ್ಟ ಬಂದ್ಹಂಗೆ ಮಾಡು ವಾಕ್ಯದಲ್ಲಿರುವ ಗ್ರಾಮ್ಯ ಪದ-
ಅ) ಮಾಡು  ಆ) ಬಂದ್ಹಂಗೆ ಇ) ನಿನಗೆ ಈ) ಇಷ್ಟ
167. ತಮ್ಮ ಗ್ರಾಮ್ಯಕ್ಕೆ ಹೆಚ್ಚು ಬಸ್ಸು ಬರುವುದೆಂದು ತಿಳಿದು ಗ್ರಾಮಸ್ಥರು ಸಂತಸಪಟ್ಟರು- ಇದು
ಅ)  ಸಾಮಾನ್ಯ ವಾಕ್ಯ ಆ) ಸಂಯೋಚಿತ ವಾಕ್ಯ  ಸಿ ಮಿಶ್ರವಾಕ್ಯಈ) ಪ್ರಶ್ನಾರ್ಥಕ ವಾಕ್ಯ.
168. ‘ಚೋದಿಸುಶಬ್ದದ ಅರ್ಥ
ಅ) ಹುರಿದುಂಬಿಸು ಆ) ಮೂದಲಿಸು ಇ) ಹುಡುಕು ಈ) ಸಿಂಚಿಸು
169. ‘ಮೊತ್ತಮೊದಲುಇದರಲ್ಲಿರುವ ವ್ಯಾಕರಣಾಂಶ-
ಅ)  ಜೋಡುನುಡಿ ಆ)  ದ್ವಿರುಕ್ತಿ ಇ) ಅನುಕರಣಾವ್ಯಯ  ಈ) ನುಡಿಗಟ್ಟು
170. ಕಣ್ಕಟ್ಟು ಎನ್ನುವುದು ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ-
ಅ)  ನುಡಿಗಟ್ಟು ಆ) ಜೋಡುನುಡಿ  ಇ)  ಪಡೆನುಡಿ ಈ) ನಾಣ್ನುಈ)
171. ಇವುಗಳಲ್ಲಿ ಕರ್ಮಕಾರಕ-
ಅ)  ಪ್ರಥಮಾ ವಿಭಕ್ತಿ ಆ) ದ್ವಿತೀಯಾ ವಿಭಕ್ತಿ ಇ) ತೃತೀಯಾ ವಿಭಕ್ತಿ ಈ) ಚತುರ್ಥೀ ವಿಭಕ್ತಿ
172. ಇವುಗಳಲ್ಲಿ ಸರ್ವನಾಮ ಪದ-
ಅ) ಕಮಲ ಆ) ನಾವು ಇ) ಎರಡು  ಈ) ಸರ್ವಜ್ಞ
173. ಮರುದಿನ ಅಂಜಿಕೆಯಿಂದಲೇ ಅವರ ಕೊಠಡಿಗೆ ಹೋದರು ವಾಕ್ಯದಲ್ಲಿರುವ ಕೃದಂತ ಭಾವನಾಮ ಪದ-
ಅ) ಹೋದರು ಆ) ಕೊಠಡಿ  ಇ) ಅವರ  ಈ) ಅಂಜಿಕೆ.
174. ‘ಕಂಬನಿಪದವು ಸಂಧಿಗೆ ಉದಾಹರಣೆಯಾಗಿದೆ
ಅ)  ಆದೇಶ ಆ)  ಜಸ್ತ್ವ ಇ) ಲೋಪ  ಈ) ಅನುನಾಸಿಕ
175. ಹಳಗನ್ನಡ ಸಪ್ರಮೀ ವಿಭಕ್ತಿ ಪ್ರತ್ಯಯ-
ಅ)  ಇಂ ಆ) ಮ್ ಸಿ ಒಳ್ ಈ) ಅತ್ತಣಿಂ
176. ‘ಅಥವಾಎಂಬುದು
ಅ) ಅನುಕರಣಾವ್ಯಯ ಆ)  ಸಾಮಾನ್ಯಾವ್ಯಯ ಇ) ಸಂಬಂಧಾರ್ಥಕಾವ್ಯಯ ಈ) ಭಾವಸೂಚಕಾವ್ಯಯ
177. ಇವುಗಳಲ್ಲಿ ಕ್ರಿಯಾಸಮಾಸದ ಪದ
ಅ) ಪೆರ್ಬಂಡೆ ಆ) ಉಡಿತುಂಬಿ ಇ) ಪ್ರಜಾಮಾತೆ ಈ) ನಾಲ್ಮೊಗ
178. ‘ಭಾರತ ದೇಗುಲಇಲ್ಲಿರುವ ಅಲಂಕಾರ
ಅ)  ಉಪಮಾ ಆ) ಅರ್ಥಾಂತರನ್ಯಾಸ ಇ) ದೃಷ್ಟಾಂತ ಈ) ರೂಪಕ
179. ‘ಖ್ಯಾತಕರ್ನಾಟಕಗಳೆಂದು ಪ್ರಸಿದ್ಧವಾಗಿರುವ ಒಟ್ಟು ಅಕ್ಷರ ವೃತ್ತಗಳು
ಅ)  ನಾಲ್ಕು ಆ) ಆರು ಇ) ಇಪ್ಪತ್ತೊಂದು ಈ) ಎಂಟು
180. ಇದು ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಚಿಹ್ನೆ-
ಅ) ಆವರಣ ಆ) ಉದ್ಧರಣ ಇ)  ವಾಕ್ಯವೇಷ್ಠನ ಈ) ವಿವರಣಾತ್ಮಕ
181. `ಕಣ್ಣಿಗೆ ಕತ್ತಲು ಕಟ್ಟು’- ಇದರ ಅರ್ಥ
ಅ) ಕಣ್ಣಿಗೆ ಬಟ್ಟೆಕಟ್ಟು ಆ) ಕಣ್ಣು ಮುಚ್ಚು ಇ) ಕಣ್ಣು ಕುರುಡಾಗು ಈ) ದಿಕ್ಕು ತೋಚದಾಗು
182. ಅನ್ವರ್ಥನಾಮಪದಕ್ಕೆ ಉದಾಹರಣೆ-
ಅ) ಮರ ಆ) ಕುರುಡ  ಇ) ರಹೀಮ ಈ) ಅದು
183. ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅದು-
ಅ) ಸಾಮಾನ್ಯ ವಾಕ್ಯ  ಆ) ಸ್ವತಂತ್ರ ವಾಕ್ಯ ಇ) ಸಂಯೋಚಿತ ವಾಕ್ಯ ಈ) ಮಿಶ್ರ ವಾಕ್ಯ.
184. ವೈದ್ಯರು ರಶ್ಮಿಯನ್ನು ಪರೀಕ್ಷಿಸಿದರು, ಆದರೆ ಅವರು ಔಷಧಿಯನ್ನು ಕೊಡಲಿಲ್ಲ. – ವಾಕ್ಯವು
ಅ) ಸಾಮಾನ್ಯ ವಾಕ್ಯ  ಆ) ಸ್ವತಂತ್ರ ವಾಕ್ಯ ಇ) ಸಂಯೋಚಿತ ವಾಕ್ಯ ಈ) ಮಿಶ್ರ ವಾಕ್ಯ.
185. ಹಾಡುತ್ತಾಳೆ ಪದದ ನಿಷೇಧಾರ್ಥಕರೂಪ-
ಅ) ಹಾಡಲಿ  ಆ) ಹಾಡಿಯಾಳು ಇ) ಹಾಡಳು ಈ) ಹಾಡುವಳು.
186. ಷಷ್ಠೀ ವಿಭಕ್ತಿಯ ಕಾರಕಾರ್ಥ-
ಅ)  ಕರ್ತೃ ಆ)  ಕರ್ಮ ಇ)  ಅಧಿಕರಣ ಈ) ಸಂಬಂಧ.
187. ‘ದಿಙ್ಮೂಡಪದದಲ್ಲಿ ನಡೆದಿರುವ ಸಂಧಿಕಾರ್ಯ-
ಅ) ಆದೇಶ ಆ)  ಅನುನಾಸಿಕ ಇ)  ಶ್ಚುತ್ವ ಈ) ಜಸ್ತ್ವ.
188. ‘ಸಿರಿಗನ್ನಡಪದವನ್ನು ಬಿಡಿಸಿ ಬರೆದಾಗ ಪಡೆಯುವ ರೂಪ-
ಅ) ಸಿರಿ+ಕನ್ನಡ ಆ) ಶ್ರೀ+ಕನ್ನಡ ಇ) ಸಿರಿ+ಗನ್ನಡ ಈ) ಸಿರಿಗ+ನ್ನಡ
189. ‘ಬ್ರಹ್ಮಪದದ ತದ್ಭವರೂಪ-
ಅ) ಬರಮ ಆ) ಬೊಮ್ಮ ಇ) ಬ್ರಾಮ ಈ) ಬ್ರಹಮ
190. ‘ಜುಲ್ಮಾನೆಪದವು ಭಾಷೆಯ ಪದ-
ಅ)  ಕನ್ನಡ ಆ) ಸಂಸ್ಕø ಇ) ಇಂಗ್ಲಿಷ್  ಈ) ಉರ್ದು
191. ‘ಬೆಮರ್ತನ್ಪದದ ಹೊಸಗನ್ನಡ ರೂಪ
ಅ)  ಬೆವರಿದನು ಆ) ಬೆದರಿದನು ಇ)  ಬೇಸರಗೊಂಡನು ಈ) ಬಾಯಾರಿದನು.
192. ‘ ಏಸೊಂದು’-ಪದದ ಗ್ರಾಂಥಿಕರೂಪ
 ಅ) ಎಷ್ಟೆಂದು ಆ) ಏನೊಂದು ಇ) ಎಷ್ಟೊಂದು ಈ) ಏನು ಎಂದು.
193. ‘ಅಬ್ಬಾ’-ಎಂಬುದು
ಅ) ಸಾಮಾನ್ಯಾವ್ಯಯ ಆ) ಅನುಕರಣಾವ್ಯಯ ಇ)  ಸಂಬಂಧಾರ್ಥಕಾವ್ಯಯ ಈ) ಭಾವಸೂಚಕಾವ್ಯಯ.
194. ಬಹುವ್ರೀಹಿ ಸಮಾಸಕ್ಕೆ ಉದಾಹರಣೆ-
ಅ) ಚಕ್ರಪಾಣಿ  ಆ) ದೀನಾನಾಥರು  ಇ) ತಲೆಗೊಡವಿ ಈ) ಪೆರ್ಬಯಕೆ
195. ಮಗುವಿನ ಮುಖವು ಚಂದ್ರನ ಮುಖದಂತೆ ಮನೋಹರವಾಗಿದೆ.- ಸಾಲಿನಲ್ಲಿರುವ ಅಲಂಕಾರ
ಅ)  ರೂಪಕ ಆ) ದೃಷ್ಟಾಂತ ಇ) ಉಪಮಾ  ಈ) ಶ್ಲೇಷ.
196. ಭಾಮಿನಿ ಷಟ್ಪದಿಯ ಆರು ಸಾಲುಗಳಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ-
ಅ) 144 ಆ) 102  ಇ) 64  ಈ) 51.
197. ಆಹಾ ತುಬಾ ಮುದ್ದಾಗಿದೆ- ಈವಾಕ್ಯದಲ್ಲಿ ಇರಬೇಕಾದ ಲೇಖನ ಚಿಹ್ನೆ-
ಅ)  ಭಾವಸೂಚಕ ಆ) ಪ್ರಶ್ನಾರ್ಥಕ ಇ) ಆವರಣ  ಈ) ಅರ್ಧವಿರಾಮ.
198. ಪರ್ಯವಸಾನ ಪದದ ಅರ್ಥ-
ಅ)  ಪ್ರಾರಂಭ ಆ) ಪರಿಪರಿಯಾಗಿ  ಇ) ಪ್ರತಿಯಾಗಿ ಈ) ಮುಕ್ತಾಯ
199. ದ್ವಿರುಕ್ತಿ ಪದಕ್ಕೆ ಉದಾಹರಣೆ-
ಅ) ಹಾಗೇಕೆ ಆ) ಕಟ್ಟಕಡೆ ಇ)  ಆರೆಂಟು ಈ) ಮನೆಮಠ
200. ‘ದೇವರು ಅವರ ಹೊಟ್ಟೆ ತಣ್ಣಗಿಟ್ಟಿರಲಿ ಸ್ವಾಮಿ1’- ವಾಕ್ಯದಲ್ಲಿರುವ ನುಡಿಗಟ್ಟು-
ಅ)  ದೇವರು ಆ)  ಸ್ವಾಮಿ ಇ) ಹೊಟ್ಟೆತಣ್ಣಗಿಟ್ಟಿರಲಿ ಈ) ಅದರ
201. ನಿರ್ಮಾಣ- ಪದದ ಅರ್ಥ-
ಅ)  ಮೋಕ್ಷ ಆ) ದಾಸ್ಯ ಇ) ಬಂಧನ  ಈ) ಮೋಹ
202. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ದೀರ್ಘ ಸ್ವರಗಳ ಸಂಖ್ಯೆ-
ಅ) 13 ಆ)ಇ)ಈ) 2
203. ಇವುಗಳಲ್ಲಿ ಸರ್ವನಾಮ ಪದ-
ಅ)  ಏಕಾಕ್ಷ ಆ) ಕೂಡಲಸಂಗಮ ಇ) ನಾನು ಈ) ಮೂರು.
204. ಹಳಗನ್ನಡ ದ್ವಿತೀಯ ವಿಭಕ್ತಿ ಪ್ರತ್ಯಯ
ಅ) ಇಂ ಆ) ಅಂ ಇ) ಮ್ ಡಿ ಅತ್ತಣಿಂ.
205. ಮಕ್ಕಳು ಹಾಲನ್ನು ಕುಡಿಯುತ್ತಾರೆ ಆದರೆ ಅವರಿಗೆ ಕೊಡಲು ಹಾಲಿಲ್ಲ.  –ಇದು
ಅ) ಸಾಮಾನ್ಯ ವಾಕ್ಯ ಆ)ಸಂಯೋಜಿತ ವಾಕ್ಯ  ಇ) ಮಿಶ್ರವಾಕ್ಯ ಈ) ಪರಿವರ್ತಿತ ವಾಕ್ಯ.
206. “ ”-ಇದು ಯಾವ ಲೇಖನ ಚಿಹ್ನೆ-
ಅ) ಉದ್ಧರಣ ಆ) ಪ್ರಶ್ನಾರ್ಥಕ  ಇ) ಅರ್ಧವಿರಾಮ  ಈ) ಆವರಣ
207. ‘ಅಂಜಿಕೆಎನ್ನುವುದು -
ಅ) ತದ್ದಿತಾಂತ ಭಾವನಾಮ ಆ) ಕೃದಂತ ಭಾವನಾಮ ಇ) ಕೃದಂತಾವ್ಯಯ ಈ) ಕೃದಂತನಾಮ
208. ಚಂಪಕಮಾಲಾ ವೃತ್ತದಲ್ಲಿರುವ ಗಣಗಳ ಸಂಖ್ಯೆ-
ಅ) 7 ಆ) 6 ಇ) 5 ಈ) 4
209. ಕಜ್ಜ ಪದದ ತದ್ಭವ ರೂಪ-
ಅ) ಕಾರ್ಯ ಆ)  ಕಾವ್ಯ ಇ) ಕವಿ  ಈ) ಉದ್ಯೋಗ
210. ಅರಮನೆ ಇದು ಸಮಾಸಕ್ಕೆ ಉದಾಹರಣೆಯಾಗಿದೆ
ಅ) ತತ್ಪುರುಷ ಆ)  ದ್ವಿಗು ಇ) ಕರ್ಮಧಾರೆಯ ಈ) ಕ್ರಿಯಾ
211. ಬ್ಯಾಸರ ಪದದ ಗ್ರಂಥ ರೂಪ
ಅ) ಬೇಸರ ಆ) ವ್ಯಸನ ಇ) ಬೇಸಿಗೆ  ಈ) ಬೇಡ
212. ಬಟಾಟೆ ಪದವು ಭಾಷೆಯಿಂದ ಬಂದಿದೆ
ಅ)  ಪೋರ್ಚುಗೀಸ್ ಆ) ಪರ್ಷಿಯನ್  ಇ) ಸಂಸ್ಕø ಈ) ಕನ್ನಡ
213. ಛಲದಂಕನೊಳ್ ಪದದ ಹೊಸಗನ್ನಡ ರೂಪ
ಅ)  ಛಲದಮಕನಲ್ಲಿ ಆ)  ಛಲದಂಕನಿಂದ ಇ) ಛಲದಂಕನು ಈ) ಛಲದಂಕನ
214. ಕರ್ನಾಟಕ ಭಾರತ ಕಥಾಮಂಜರಿ ಕಾವ್ಯ ಛಂದಸ್ಸಿನಲ್ಲಿದೆ
ಅ)  ಭಾಮಿನಿ ಆ) ಭೋಗ ಇ) ವಾರ್ಧಕ ಈ) ಪರಿವರ್ಧಿನಿ
215. ಹೃದಯ ಶಾರದೆ ಇಲ್ಲಿರುವ ಅಲಂಕಾರ-
ಅ) ಉಪಮಾ ಆ) ರೂಪಕ ಇ) ಶ್ಲೇಷ ಈ) ದೃಷ್ಟಾಂತ
216. ಹೇಳು ಹೇಳು ಇದು ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
ಅ) ಜೋಡುನುಡಿ ಆ) ದ್ವಿರುಕ್ತಿ ಇ) ಅನುಕರಣಾವ್ಯಯ  ಈ) ಪಡೆನುಈ)
217. ತದ್ಧಿತಾಂತ ನಾಮಕ್ಕೆ ಉದಾಹರಣೆ
ಅ)  ಕನ್ನಡಿಗ ಆ)  ಚಿಕ್ಕದು ಇ) ಚಿಕ್ಕವಳು ಈ) ಜಾಣ
218. ಅನ್ವರ್ಥ ನಾಮಕ್ಕೆ ಉದಾಹರಣೆ-
ಅ)  ರಾಮ ಆ) ಕುಂಟ  ಇ) ನದಿ ಈ) ಪುಸ್ತಕ
219. ವೃತ್ತದಲಿರುವ ಪಾದಗಳು
ಅ) ಒಂದು ಆ) ಮೂರು ಇ) ನಾಲ್ಕು ಈ) ಆರು
220. ಸೋಮನು  ಮರವನ್ನು ಕಡಿದನು ಇಲ್ಲಿ ಗೆರೆ ಎಳೆದ ಪದವು
ಅ) ಅಂಕಿತನಾಮ  ಆ) ರೂಢನಾಮ  ಇ) ಅನ್ವರ್ಥನಾಮ ಈ) ಸರ್ವನಾಮ
221. ಪೊಯ್ದ ಪದದ ಹೊಸಗನ್ನಡ ರೂಪ
ಅ) ಹೊಡೆದ ಆ) ಹಾಡಿದ ಇ) ಹಾಕಿದ ಈ) ಹಾರಿದ
222. ಹೋಯ್ತಾದೆ ಪದದ ಗ್ರಾಂಥಕ ರೂಪ
ಅ)  ಹೋಯಿತು ಆ) ಹೋಗುವುದಿಲ್ಲಾ  ಇ) ಹೋದೀತು  ಈ) ಹೋಗುತ್ತದೆ.
223. ‘ಬಾಲಕಇದು ಗಣ ಮರರೆ ಇರು
ಅ)  ಗಣ ಆ) ಗಣ ಇ)  ಗಣ ಈ) ಗಣ
224. ಮಕ್ಕಳು ಶಾಲೆಗೆ ಹೋದರು-ಇಲ್ಲಿ ಗೆರೆ ಎಳೆದ ಪದದ ವರ್ತಮಾನ ಕಾಲಕ್ಕೆ ಪರಿವರ್ತಿಸಿದಾಗ ಆಗುವ ಶಬ್ದ-
ಅ) ಹೋಗುವರು ಆ) ಹೋಗಬಹುದು ಇ) ಹೋಗಲಿ  ಈ) ಹೋಗುತ್ತಿದ್ದಾರೆ.
225.‘ಬಂಗಾರ ಮೋರೆ ತೊಳೆದೇನಇಲ್ಲಿರುವ ಅಲಂಕಾರ
ಅ) ಉಪಮಾ  ಆ)  ರೂಪಕ ಇ) ದೃಷ್ಟಾಂತ ಈ) ಶಬ್ದಾಲಂಕಾರ
226.ಕಾಲಿಗೆ ಬುದ್ಧಿ ಹೇಳು ಎನ್ನುವುದು ವ್ಯಾಕರಣಾಂಶಕ್ಕೆ ಉದಾಹರಣೆ ಯಾಗಿದೆ
ಅ) ನುಡಿಗಟ್ಟು  ಆ)  ಜೋಡುನುಡಿ ಇ)  ಪಡೆನುಡಿ ಈ) ನಾಣ್ಣುಈ)
227.‘ಉಭಯ’- ಪದದ ಅರ್ಥ
ಅ) ಭಯವಿಲ್ಲ ಆ) ಹಾವು  ಇ) ತುಂಬಾ ಭಯ ಈ) ಎರಡು ಕಡೆ
228.‘ಉಪಹಾರ’ – ಪದದದಲ್ಲಿರುವ ಸಂಧಿ
ಅ) ಆಗಮ ಆ) ಗುಣ ಇ) ಸುವರ್ಣ ಈ) ಲೋಪ
229.‘ಮಹಾಶಯನಿಗೆ’- ಪದದಲ್ಲಿರುವ ವಿಭಕ್ತಿ ಪ್ರತ್ಯಯ
ಅ) ಪ್ರಥಮ ಆ) ತೃತೀಯ  ಇ) ಚತುರ್ಥಿ ಈ) ದ್ವತೀಂiÀi
230.ತೋರುವನು - ಪದದ ನಿಷೇಧರೂಪ
ಅ) ತೋರನು ಆ) ತೋರಿದ  ಇ) ತೋರುತ್ತಾನೆ ಈ) ತೋರಿಸಿದ
231.ಕಳಂಕ-ಪದದ ವಿರುದ್ಧ ಪದ
ಅ) ವಿಕಳಂಕ  ಆ) ಅಕಳಂಕ ಇ) ನಿಕಳಂಕ ಈ) ಸಕಳಂಕ
232.ಸಜ್ಜನ-ಪದ ಬಿಡಿಸಿದಾಗ
ಅ) ಸಜ್ಜ+ಜನ ಆ) ಸಜ್+ಜನ ಇ) ಸಜ+ಜನ ಈ) ಸತ್+ಜನ
233.‘ನಾನುಎಂಬುದು ಯಾವ ಸರ್ವನಾಮ
ಅ) ಉತ್ತಮ ಪುರುಷ ಆ) ಪ್ರಶ್ನಾರ್ಥಕ ಇ) ಪ್ರಥಮ ಪುರುಷ ಈ) ಆತ್ಮಾರ್ಥಕ
234.ಹೋದರು -ಪದದ ಸಂಭಾವನಾರ್ಥಕ
ಅ) ಹೋಗರು ಆ) ಹೋಗುವರು ಇ) ಹೋಗುತ್ತಾರೆ  ಈ) ಹೋದಾರು.
235.ಕಛೇರಿ- ಪದದ ಮೂಲ
ಅ) ಪರ್ಷಿಯನ್ ಆ) ಉರ್ದು ಇ) ಪೋರ್ಚುಗೀಸ್ ಈ) ಇಂಗ್ಲೀಷ್
236.ನಿಚ್ಚಣಿಕೆ- ಪದದ ಅರ್ಥ
ಅ) ಏಣಿ ಆ) ಮುಚ್ಚಳಿಕೆ ಇ) ಬಾಚಣಿಗೆ  ಈ) ನಿಶ್ಚಯ
237.ಸ್ವರ್ಗ ಪದದ ತದ್ಭವ ರೂಪ
ಅ) ನರಕ ಆ) ಸಗ್ಗ ಇ) ಸರ್ಗ ಈ) ನಾಕ
238.ಚತುರೋಕ್ತಿ- ಇದು ಸಂಧಿಗೆ ಉದಾಹರಣೆಯಾಗಿದೆ
ಅ) ಆಗಮ ಆ)  ಸವರ್ಣ ಇ) ಗುಣ ಈ) ಲೋಪ
239. ಸಭೆಯಲ್ಲಿ ಅರ್ಧದಷ್ಟು ಜನರು ಕತ್ತೆಗಳಿದ್ದಾರೆ- ವಾಕ್ಯದಲ್ಲಿರ ಬೇಕಾದ ಲೇಖನ ಚಿಹ್ನೆ.
ಅ) ಪ್ರಶ್ನಾರ್ಥಕ ಆ) ಪೂರ್ಣವಿರಾಮ ಇ) ಆಶ್ಚರ್ಯಸೂಚಕ ಈ) ಉದ್ಧಾರಣ
240.ಮಗಳಿಗೆ ಪದದಲ್ಲಿರುವ ವಿಭಕ್ತಿ
ಅ) ಪ್ರಥಮ ಆ) ಚತಿರ್ಥಿ ಇ) ದ್ವಿತೀಯ  ಈ) ತೃತೀಯ
241.ಕ್ಲಕ್-ಕ್ಲಕ್ ಪದವು
ಅ) ದ್ವಿರುಕ್ತಿ ಆ) ಜೋಡು ಪದ ಇ) ಅನುಕರಣಾವ್ಯಯ ಈ) ಪಡೆನುಡಿ
242.ಕೈಹಾಕು-ಈಪದ ಯಾವ ಸಮಾಸಕ್ಕೆ ಉದಾಹರಣೆ
ಅ) ತತ್ಪುರುಷ ಆ) ಕರ್ಮಧಾರೆಯ ಇ) ದ್ವಿಗು ಈ) ಕ್ರಿಯಾ
243.ಜೋಡುಪದಕ್ಕೆ ಉದಾಹರಣೆ
ಅ) ಸುಖ-ದುಃಖ ಆ) ಕಣ್ಣಿಡು ಇ) ಗುಳುಗುಳು ಈ) ಅಲ್ಲಲ್ಲಿ
244.ಹಲ್ಲಿಲ್ಲದ ಬಾಯಿ ಇಲಿಯ ಬಿಲದಂತೆ-ಇಲ್ಲಿರುವ ಅಲಂಕಾರ
ಅ) ರೂಪಕ ಆ) ಉಪಮಾ ಇ) ಉತ್ಪ್ರೇಕ್ಷೆ ಈ) ಯಮಕ
245.ಪ್ರತ್ಯಕ್ಷ-ಪದದ ವಿರುದ್ಧ ಪದ
ಅ) ಪರೋಕ್ಷ ಆ) ಅಪರೋಕ್ಷ ಇ) ಎದುರು ಈ) ಹಿಂದೆ
246.ನಾಟಕಕಾರ- ಪದವು ಯಾವುದಕ್ಕೆ ಉದಾಹರಣೆ
ಅ) ಧಾತು ಆ) ಕೃದಂತ ಇ) ತದ್ಧಿತಾಂತ ಈ) ಕ್ರಿಯಾಪದ.
247.ಗತಿಗೆಟ್ಟು- ಪದದಲ್ಲಿರುವ ಸಂಧಿ.
ಅ) ಆಗಮ ಆ) ಲೋಪ ಇ) ಜಸ್ತ್ರ ಈ) ಆದೇಶ
248.ಮನಶ್ಶಾಸ್ತ್ರ-ಇಲ್ಲಿ ಆಗಿರುವ ಸಂಧಿ        
ಅ) ಶ್ಚುತ್ವ ಆ) ಗುಣ ಇ) ವೃದ್ಧಿ ಈ) ಯಣ್.
249.ಸತ್ಯ ಪದದ ವಿರುದ್ಧಾರ್ಥ ರೂಪ-         
ಅ) ದಿಟ ಆ) ನಿತ್ಯ ಇ) ಅಸತ್ಯ ಈ) ನಿಜ
250.ವಿಜ್ಞಾಪನೆ ಪದದ ತದ್ಭವ ರೂಪ-          
ಅ) ಕೋರಿಕೆ ಆ) ಬಿನ್ನಪ ಇ) ಬಿಯದ ಈ) ಸಮರ್ಪಣೆ
251.ಕಂದ ಪದ್ಯದ ಆರನೇ ಗಣದಲ್ಲಿ ಬರಬೇಕಾದ ಗಣ-           
ಅ) ಆ) ‰‰ ಇ) ‰‰ ಈ) ‐‐
252.ವಿದ್ಯುನ್ಮಾನ-ಇಲ್ಲಿ ಆಗಿರವ ಸಂಧಿ
ಅ) ಶ್ಚುತ್ವ ಆ) ಗುಣ ಇ) ಅನುನಾಸಿಕ ಈ) ಯಣ್