Tuesday 31 March 2015

ಅಂತರಂಗದ ನುಡಿ

96 ವರ್ಷ ತುಂಬು ಜೀವನವನ್ನು ಸಾಗಿಸಿ ನಮ್ಮೆಲ್ಲರ ಮನದಲಿ ನೆನಪುಗಳ ಅಚ್ಚು ಒತ್ತಿದ ನಮ್ಮಜ್ಜಿ ಗೌರಮ್ಮಜ್ಜಿಯನ್ನು ಕುರಿತ ಅಂತರಂಗದ ನುಡಿಗಳು.

ಚೌಪದಿ 'ನನಕಂದ'

ಕಿತ್ತು ನೆಟ್ಟ ಪೈರು ಹಸನು
ಉಂಡು ಉಟ್ಟ ದೇಹ ಹಸನು
ನೀತಿ ಮೆರೆವ ನಾಡು ಹಸನು
ಬಾಳ ಹಸನುಗೊಳಿಸು ನೀ -ನನಕಂದ

ಸಾಮರ್ಥ್ಯಕ್ಕನುಗುಣ ಕಾರ್ಯವನಾಯೋಜಿಸುತ
ಸರಿಸಮನಾಗೆಲ್ಲರಿಗೂ ಜವಾಬ್ದಾರಿಯ ವಹಿಸುತ
ಸಮಚಿತ್ತ ಸಮಭಾವದಿ ಅಧಿಕಾರವ ನಿರ್ವಹಿಸುತ
ಸಾಧನೆಯ ಗೈವವರನುಕರಣೀಯರು-ನನ ಕಂದ

ಬಡಿದಾಟ ಹೊಡೆದಾಟ ಕಡಿದಾಟ ಮಂಡಾಟ
ಭಂಡಾಟ ಮಂಗಾಟ ಮುನಿಸಾಟ ನೆಗೆದಾಟ
ಅರುಚಾಟ ಕಿರುಚಾಟ ಪರಚಾಟ ಕುಣಿದಾಟ
ಅಧಿಕಾರದೀ ಆಟ ಜನಕೆ ಪರದಾಟ-ನನಕಂದ

Sunday 29 March 2015

ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಲು ಪೂರಕ ಚಟುವಟಿಕೆ

          ವಿದ್ಯಾರ್ಥಿಗಳ ಈಗಾಗಲೇ ಕಲಿತಿರುವ ವಿಷಯಗಳನ್ನು ಆಧರಿಸಿ(ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ಇತ್ಯಾದಿ) ಚಟುವಟಿಕೆಗಳನ್ನು ರೂಪಿಸಿಕೊಳ್ಳಬಹುದು. ವಿದ್ಯಾರ್ಥಿಗಳ ಬುದ್ಧಿಮತ್ತೆ ಮತ್ತು ಪರಿಭಾಷೆಗೆ ನಿಲುಕುವಂತೆ ಪ್ರಜ್ಞಾಪೂರ್ವಕವಾಗಿ ಪರಿಕಲ್ಪನೆಗಳನ್ನು ಆಯ್ಕೆಮಾಡಿಕೊಂಡು ಅವರ ಕುತೂಹಲವನ್ನು ತಣಿಸಿ, ತಕ್ಷಣವೇ ಪ್ರೇರಣೆ ನೀಡುವಂತೆಯೂ, ಪ್ರತಿಕ್ರಿಯಿಸುವಂತೆಯೂ, ಅಭಿವ್ಯಕ್ತಿಗೆ ಅವಕಾಶವಾಗುವಂತೆಯೂ ಜಾಗೃತೆವಹಿಸಿ ಚಟುವಟಿಕೆಯನ್ನು ರೂಪಿಸುವುದರಿಂದ ಭಾಷಾಕಲಿಕೆಯ ಉದ್ದೇಶಗಳನ್ನು ಈಡೇರಿಸಬಹುದು. ಸಾಹಿತ್ಯಾಸಕ್ತಿಯನ್ನು ಬೆಳಸಿಕೊಳ್ಳಲು ಪೂರಕವಾಗುವಂತೆ ಅವರಿಗೆ ತಿಳಿದ ವಿಷಯಗಳನ್ನು ಆಧರಿಸಿ ಚಟುವಟಿಕೆಗಳನ್ನು ಕೊಡುವುದರಿಂದ ಈಗಾಗಲೇ ಕಲಿತಿರುವ ವಿಷಯವು ಗಟ್ಟಿಯಾಗುವುದರ ಜೊತೆಗೆ ಭಾಷಾ ಸಾಮಥ್ರ್ಯವೂ ವೃದ್ಧಿಯಾಗಲು ಸಹಾಯವಾಗುತ್ತದೆ. ಅವರ ಅಭಿರುಚಿ ಹಾಗು ಮನೋಲೋಕಕ್ಕೆ ಸಂಬಂಧಿಸಿದ ಸಂಗತಿಗಳನ್ನು ಆಯ್ಕೆ ಮಾಡಿಕೊಂಡರಂತು ನಮ್ಮ ಪ್ರಯತ್ನ ಯಶಸ್ವಿಯಾಗುತ್ತದೆ. ಆ ದೃಷ್ಟಿಯಿಂದ ಈ ಒಂದು ಪ್ರಯತ್ನ.
ಪೂರ್ವಸಿದ್ಧತೆ : ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಚಟುವಟಿಕೆಯನ್ನು ನೀಡಲಾಗುವುದು ಓದಿಕೊಂಡು ಬನ್ನಿ ಎಂದು ಮುಂಚಿತವಾಗಿಯೇ ತಿಳಿಸುವುದು.
ಈ ಕೆಳಗಿನ ಸಾಲುಗಳನ್ನು ಗಮನವಿಟ್ಟು ಓದಿಕೊಂಡು ಅರ್ಥಮಾಡಿಕೊಳ್ಳಿರಿ. ನಂತರ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ.
ಭಾರತದ ಸ್ವಾತಂತ್ರ್ಯ ಹೋರಾಟದ ನೋಟ
ಕಾಂಗ್ರೇಸ್ ಕಾರ್ಯಗಳಿಗೆ ಚಾಲನೆಯ ನೀಡಿ
ಡಬ್ಲ್ಯು ಸಿ ಬ್ಯಾನರ್ಜಿಯ ಅಧ್ಯಕ್ಷತೆಯಲ್ಲಿ
ಮೊದಲಾಯ್ತು ಮುಂಬೈನ ಅಧಿವೇಶನ
ಸೂರತ್‍ನ ಅಧಿವೇಶನದಿ ಒಡಕುಂಟಾಯ್ತು
ಗಾಂಧೀಜಿಗೆ ಅಸಹಕಾರ ಚಳವಳಿಯ
ನಾಯಕತ್ವವ ನೀಡಿತು ನಾಗಪುರದ ಅಧಿವೇಶನ
ಅಸಹಕಾರ ಚಳುವಳಿಗೆ ಚಾಲನೆಯು ಇದರಿಂದಾಯ್ತು
ಗಾಂಧೀಜಿಯ ಮನವ ಘಾಸಿಗೊಳಿಸಿತು ಚೌರಿಚೌರ ಘಟನೆ
ಸ್ಥಗಿತಗೊಳಿಸಿತು ಅಸಹಕಾರ ಚಳವಳಿಯ
ಸೈಮನ್ ಗಲಭೆಗೆ ಬಲಿಯಾದರು ಲಾಲಾ ಲಜಪತರಾಯ
ಸಂಪೂರ್ಣ ಸ್ವರಾಜ್ಯವ ನೆಹರು ವರದಿ ಬಯಸಿದರೇನು?
ಸಂಪೂರ್ಣ ಉಪೇಕ್ಷಿಸಿತ್ತು ಸರ್ಕಾರ ಈ ವರದಿಯ
ಸಂಪೂರ್ಣ ಸ್ವರಾಜ್ಯವನೇ ಗುರಿಯಾಗಿರಿಸಿತು
ಲಾಹೋರಿನಾ ಅಧಿವೇಶನ, ಕೊಟ್ಟಿತ್ತು ಗಾಂಧೀಜಿಗೆ
ಕಾನೂನು ಭಂಗ ಚಳವಳಿಯ ನೇತೃತ್ವವ
ಆಯ್ತಿದುವೇ ಉಪ್ಪಿನಾ ಸತ್ಯಾಗ್ರಹಕ್ಕೆ ಹಾದಿ
ತುಂಬಿ ತುಳುಕಿತ್ತು ಸೆರೆಮನೆಯ ಹಾದಿ
ದುಂಡುಮೇಜಿನ ಪರಿಷತ್ತನ್ನು ಕರೆದರೇನು? ಹೋದವರು ಯಾರು?
ಇದರಿಂದಾಯ್ತು ಗಾಂಧೀ-ಇರ್ವಿನ್ನರಾ ಒಪ್ಪಂದಕೆ ದಾರಿ
2ನೇ ದುಂಡು ಮೇಜಿನ ಪರಿಷತ್ತಿಗೆ ಗಾಂಧೀಜಿ ಹೋದರೇನಾಯ್ತು ಲಾಭ?
ಪುನರಾರಂಭವಾಯ್ತು ಕಾನೂನು ಭಂಗ ಚಳವಳಿಯು
1935ರ ಶಾಸನದಲೂ ಸಿಗಲೇ ಇಲ್ಲವಲ್ಲ ಸಂಪೂರ್ಣ ಸ್ವರಾಜ್ಯ
ವಿಷಾದದ ವಿಭಜನೆಯ ವಿಷಯವ, ದೇಶವ ಒಡೆವ ವಿಚಾರವ
1940ರ ಲಾಹೋರಿನಾ ಅಧಿವೇಶನದಿ ವಿಷದ ಪಡಿಸಿದರಲಾ ಜಿನ್ನಾ
2ನೇ ಮಹಾಯುದ್ಧದಾ ಹಿನ್ನೆಲೆಯಲೇ ಆಗಸ್ಟ್‍ನ ಕೊಡುಗೆ,
ಕರುಣಿಸಿತ್ತು ಡೊಮಿನಿಯನ್ ಸ್ಟೇಟಸ್‍ನ ಕ್ರಿಪ್ಸನಾ ಸಂಧಾನ
ಕಾಂಗ್ರೇಸ್ ಇದನು ತಿರಸ್ಕರಿಸಿದರೇನು, ಪುರಸ್ಕರಿಸಿದರಲಾ ಜಿನ್ನಾ
ಜಿನ್ನಾರ ನಿಲುವು ದೇಶದ ಸಮಗ್ರತೆಯನೇ ಒಡಯ ಹೊರಟ್ಟಿತ್ತು,
ದೇಶವನೇ ತುಂಡು ತುಂಡು ಮಾಡ ಬಯಸಿತ್ತು.
ಮುಂಬೈನ ಅಧಿವೇಶದ ಚಲೆ ಜಾವ್ ಚಳುವಳಿಯ ನಿರ್ಣಯಕೆ
ಸಹಕರಿಸಲೇ ಇಲ್ಲ ಜಿನ್ನಾ , ಕಿಂಚಿತ್ತು ವಿಚಲಿತನೂ ಆಗಲಿಲ್ಲ
ನೆಹರು ನಾಯಕತ್ವದಲಿ ಮಧ್ಯಂತರ ಸರ್ಕಾರ ರಚನೆಯಾದರೇನು ?
ಜಿನ್ನಾನ ಜಿಗುಟುತನ ಅಳಿಯಲಿಲ್ಲವಲ್ಲ, ಅಖಂಡ ಭಾರತವೂ ಉಳಿಯಲಿಲ್ಲ!
“ನೇರ ಕಾರ್ಯಾಚರಣೆದಿನ” ಹೊತ್ತಿತ್ತು ಕೋಮು ಡೊಳ್ಳುರಿ
ದೇಶದ ವಿಭಜನೆಗೆ ಇದುವೆ ದಾರಿಯಾಗಿತ್ತು !
ನೋವಿನಾ ನಡುವೆಯೂ ಸಂತಸದ ಸ್ವಾತಂತ್ರ್ಯ ದೊರಕಿತ್ತು
ಬೆನ್ನ ಹಿಂದೇ ಬಂದಿತ್ತು ಸಮಸ್ಯೆ , ಸವಾಲುಗಳ ಸರಮಾಲೆ.
ಇವನೆದುರಿಸುತಲೇ ಕಳೆದೆವಲಾ ದಶಕ ದಶಕಗಳ ಯೋಜನೆಗಳ ರೂಪಿಸುತ
ಯೋಚನೆ, ಯೋಜನೆಗಳಿಂದಲೇ ಪರಿಹಾರ ದೊರಕದು, ಬೇಕಿಂದು
ದೇಶದ ಉಳಿವು ಸಮೃದ್ಧಿಗೆ, ಪ್ರಾಮಾಣಿಕ ಪ್ರಯತ್ನ, ಜನನಾಯಕರ ಆದರ್ಶ,
ನಿಸ್ವಾರ್ಥ ಸೇವೆ, ತ್ಯಾಗಭಾವದೊಂದಿಗೆ ಶೀಘ್ರವೇ ಪುನರುತ್ಥಾನವಾಗಬೇಕು
ಕರುಣೆ, ಸತ್ಯ, ಪ್ರಾಮಾಣಿಕತೆ, ಅಹಿಂಸೆಯಾ ಮಾರ್ಗವ ಮತ್ತೊಮ್ಮೆ ಹಿಡಿಯ ಬೇಕು
ಸಹಕಾರ, ಸಹಾನುಭೂತಿ, ಸಂಯಮ, ಸಹಬಾಳ್ವೆ ಎಲ್ಲೆಡೆಯು ಮೂಡಬೇಕು.
ಎಲ್ಲರಂಗದಲು ದೇಶವನು ಉನ್ನತ್ತೋನ್ನತಿಗೆ ಕೊಂಡೊಯ್ಯ ಬೇಕು

ವಿ. ಸೂ : ವಿದ್ಯಾರ್ಥಿಗಳ ಸಮಾಥ್ರ್ಯಕ್ಕೆ ಅನುಗುಣವಾಗಿ ಪ್ರಶ್ನೆಗಳನ್ನು ಆರಿಸಿಕೊಳ್ಳುವುದು.

ಈ ಮೇಲಿನ ಸಾಲುಗಳನ್ನು ಓದಿಕೊಂಡು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ವಿಷಯಗಳನ್ನು ಆಧರಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
1. ಕಾಗ್ರೇಂಸ್‍ನ ಮೊದಲ ಅಧಿವೇಶನ ಎಲ್ಲಿ ನಡೆಯಿತು? ಅದರ ಅಧ್ಯಕ್ಷತೆ ವಹಿಸಿದವರು ಯಾರು?
2. ಕಾಂಗ್ರೇಸ್‍ನಲ್ಲಿ ಒಡಕುಂಟಾಗಲು ಕಾರಣವಾದ ಅಧಿವೇಶನ ಯಾವುದು?
3. ಸೂರತ್‍ನ ಅಧಿವೇಶನದಿ ಒಡಕುಂಟಾಗಲು ಕಾರಣವೇನು?
4. ನಾಗಪುರದ ಅಧಿವೇಶನದ ವಿಶೇಷತೆಯನ್ನು ತಿಳಿಸಿರಿ.
5. ಲಾಹೋರ್ ಅಧಿವೇಶನದ ಮಹತ್ವವನ್ನು ತಿಳಿಸಿರಿ.
6. ಅಸಹಕಾರ ಚಳುವಳಿ ಎಂದರೇನು? ಇದರ ನಾಯಕತ್ವವನ್ನು ವಹಿಸಿದವರು ಯಾರು?
7. ಗಾಂಧೀಜಿಯ ಮನಸ್ಸನ್ನು ಘಾಸಿಗೊಳಿಸಿದ ಘಟನೆಯನ್ನು ಕುರಿತು ಬರೆಯಿರಿ.
8. ಲಾಲಾ ಲಜಪತರಾಯರ ಸಾವಿಗೆ ಕಾರಣವೇನು?
9. ನೆಹರು ವರದಿ ಏನನ್ನು ಬಯಸಿತು?
10. ಸಂಪೂರ್ಣ ಸ್ವರಾಜ್ಯವನ್ನು ಗುರಿಯಾಗಿಟ್ಟುಕೊಂಡ ಅಧಿವೇಶನ ಯಾವುದು?
11. ಕಾನೂನು ಭಂಗ ಚಳವಳಿಯ ನೇತೃತ್ವವನ್ನು ವಹಿಸಿದವರು ಯಾರು?
12. ಉಪ್ಪಿನಸತ್ಯಾಗ್ರಹಕ್ಕೆ ಕಾರಣವೇನು?
13. ಉಪ್ಪಿನಸತ್ಯಾಗ್ರಹದ ಪರಿಣಾಮಗಳನ್ನು ತಿಳಿಸಿರಿ.
14. ಗಾಂಧೀ-ಇರ್ವಿನ್ನರಾ ಒಪ್ಪಂದಕ್ಕೆ ಕಾರಣವೇನು?
15. ದುಂಡು ಮೇಜಿನ ಪರಿಷತ್ತಿಗೆ ಕಾರಣವೇನು?
16. 1940ರ ಲಾಹೋರಿನಾ ಅಧಿವೇಶನದ ದುರಂತವನ್ನು ಕುರಿತು ಬರೆಯಿರಿ.
17. ‘ಆಗಸ್ಟ್‍ನ ಕೊಡುಗೆ’ಯನ್ನು ನೀಡಲು ಕಾರಣವೇನು?
18. ಕ್ರಿಪ್ಸನಾ ಸಂಧಾನ ಕಾಂಗ್ರೇಸ್ ಇದನು ತಿರಸ್ಕರಿಸಲು ಕಾರಣವೇನು?
19. ಜಿನ್ನಾರ ನಿಲುವೇನು? ಅದರ ಪರಿಣಾಮವೇನು?
20. ಮಧ್ಯಂತರ ಸರ್ಕಾರ ರಚನೆಯು ಯಾರ ನೇತೃತ್ವದಲ್ಲಿ ನಡೆಯಿತು?
21. “ನೇರ ಕಾರ್ಯಾಚರಣೆದಿನ”ಕ್ಕೆ ಕರೆನೀಡಿದವರು ಯಾರು? ಅದರ ಪರಿಣಾಮವೇನಾಯಿತು?
22. ಭಾರತದ ವಿಭಜನೆಗೆ ಕಾರಣಗಳೇನು?
23. ಸ್ವಾತಂತ್ರ್ಯ ಭಾರತದ ಸಮಸ್ಯೆ ಮತ್ತು ಸವಾಲುಗಳನ್ನು ಕುರಿತು ಬರೆಯಿರಿ.
24. ಭಾರತವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳೇನು?
25. ಭಾರತವನ್ನು ಸಮಸ್ಯೆಗಳಿದ ಮುಕ್ತಗೊಳಿಸುವಲ್ಲಿ ಭಾರತೀಯರಾದ ನಮ್ಮ ಕರ್ತವ್ಯಗಳನ್ನು ಪಟ್ಟಿಮಾಡಿರಿ.

Sunday 22 March 2015

ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ


                   ಡಾ. ಜಿ ಎಸ್ ಶಿವರುದ್ರಪ್ಪ
 
ಹಣತೆ
ಕನ್ನಡದ ಪ್ರಖ್ಯಾತ ಕವಿಗಳಲ್ಲೊಬ್ಬರಾದ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ಪೂರ್ಣ ಹೆಸರು ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹತ್ತಿರದ ಈಸೂರು ಗ್ರಾಮದಲ್ಲಿ ಫೆಬ್ರವರಿ 7, 1926ರಂದು ಜನಿಸಿದರು. ತಂದೆ ಈಸೂರು ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಶಾಂತವೀರಪ್ಪರು. ತಾಯಿ ವೀರಮ್ಮ.
ಕುವೆಂಪು ಅವರ ಮೆಚ್ಚಿನ ಶಿಷ್ಯರೂ, ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತರರೂ ಆಗಿದ್ದಾರೆ.
ನವೆಂಬರ್ 1, 2006 ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು. ಗೋವಿಂದ ಪೈ ಮತ್ತು ಕುವೆಂಪು ನಂತರ ಕನ್ನಡ ನಾಡಿನ ಮೂರನೆಯ ರಾಷ್ಟ್ರಕವಿ ಎಂಬ ಕೀರ್ತಿಗೆ ಭಾಜನರಾದರು.
  ಜೀವನ
       ಶಿವರುದ್ರಪ್ಪನವರು ಹೊನ್ನಾಳಿ, ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರುಗಳಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ, ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. 1949ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿ.. ಆನರ್ಸ್  ಪದವಿ ಪಡೆದರು.
       ದಾವಣಗೆರೆಯ ಡಿ.ಆರ್.ಎಮ್. ಕಾಲೇಜಿನಲ್ಲಿ ಕೆಲಕಾಲ ಕನ್ನಡ ಉಪನ್ಯಾಸಕರಾಗಿದರು. 1953 ರಲ್ಲಿ ಎಂ..
ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು.
       ಕುವೆಂಪುರವರ ಮೆಚ್ಚಿನ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು. ಭಾರತ ಸರಕಾರದ ಸಂಶೋಧನಾ ಶಿಷ್ಯವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ 1955ರಲ್ಲಿ ಸಂಶೋಧನೆ ನಡೆಸಿದರು.
       ಮೈಸೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ –  ಸೌಂದರ್ಯ ಸಮೀಕ್ಷೆ
       ಡಾ.ಜಿ.ಎಸ್.ಶಿವರುದ್ರಪ್ಪ ನವರು ಮೈಸೂರುವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
       1963 ನವೆಂಬರ್ನಿಂದ 2 ವರ್ಷಗಳ ಕಾಲ ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಉಪ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
       1971 ನವೆಂಬರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾದ ಅವರು, ಮುಂದೆ ಅದು "ಕನ್ನಡ ಅಧ್ಯಯನ ಕೇಂದ್ರ" ವಾಗಿ ಪರಿವರ್ತಿತವಾದಾಗ, ಅದರ ನಿರ್ದೇಶಕರೂ ಆದರು.
       ಹಸ್ತಪ್ರತಿಗಳ ಸಂಗ್ರಹಣೆ, ಅವುಗಳ ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು 1971ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ 'ಹಸ್ತಪ್ರತಿ ವಿಭಾಗ'ವನ್ನು ಪ್ರಾರಂಭಿಸಿದರು. ಕೇವಲ ವರ್ಷಗಳಲ್ಲಿ 3000ಕ್ಕೂ ಹೆಚ್ಚು ಓಲೆಗರಿಯ ಹಾಗೂ 1000ಕ್ಕೂ ಹೆಚ್ಚು ಕಾಗದದ ಹಸ್ತ ಪ್ರತಿಗಳ ಸಂಗ್ರಹಣೆಯಾಯಿತು.
       ತಾವು ಓದಿದ ಮೈಸೂರು ವಿಶ್ವವಿದ್ಯಾಲಯದಲ್ಲೇ 1949ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು.
ನಿವೃತ್ತಿಯ ನಂತರದ ಸೇವೆಗಳು
       1962ರಲ್ಲಿ ಹೈದ್ರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ 1966 ರವರೆವಿಗೂ ಸೇವೆ ಸಲ್ಲಿಸಿದರು.
       ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ 1966 ರಿಂದ 1987 ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು.
ವಿವಿ ಅಧ್ಯಕ್ಷರು ಸೇವೆ
       ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು.
       ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ ಅಧ್ಯಕ್ಷರು.
       ತುಮಕೂರಿನ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ ಅಧ್ಯಕ್ಷರು.
       ಮದರಾಸಿನ ಕನ್ನಡ ಸಮ್ಮೇಳನ ಅಧ್ಯಕ್ಷರು.
       1992ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು.

ಜಿ.ಎಸ್.ಶಿವರುದ್ರಪ್ಪ ಅವರ ಕೃತಿಗಳು

ಕವನ ಸಂಕಲನಗಳು

       ಅನಾವರಣ
       ಎದೆ ತು೦ಬಿ ಹಾಡುವೆನು
       ಕಾಡಿನ ಕತ್ತಲಲ್ಲಿ
       ಕಾರ್ತಿಕ
       ಗೋಡೆ
       ಚಕ್ರಗತಿ
       ಚೆಲುವು-ಒಲವು
       ತೀರ್ಥವಾಣಿ
       ತೆರೆದ ಬಾಗಿಲು/ತೆರೆದ ದಾರಿ
       ದೀಪದ ಹೆಜ್ಜೆ
       ದೇವಶಿಲ್ಪಿ/ಶಿಲ್ಪ
       ವ್ಯಕ್ತಮಧ್ಯ ಓರೆ ಅಕ್ಷರಗಳು

ವಿಮರ್ಶೆ/ಗದ್ಯ

       ಅನುರಣನ
       ಕನ್ನಡ ಕವಿಗಳ ಕಾವ್ಯ ಕಲ್ಪನೆ
       ಕನ್ನಡ ಸಾಹಿತ್ಯ ಸಮೀಕ್ಷೆ
       ಕಾವ್ಯಾರ್ಥ ಚಿಂತನ
       ಕುವೆಂಪು : ಪುನರವಲೋಕನ
       ಗತಿಬಿಂಬ
       ನವೋದಯ
       ಪರಿಶೀಲನ
       ಪ್ರತಿಕ್ರಿಯೆ
       ಬೆಡಗು
       ಮಹಾಕಾವ್ಯ ಸ್ವರೂಪ
       ವಿಮರ್ಶೆಯ ಪೂರ್ವ ಪಶ್ಚಿಮ
       ಸಮಗ್ರ ಗದ್ಯ ಭಾಗ 1,2  ಮತ್ತು 3
       ಸೌಂದರ್ಯ ಸಮೀಕ್ಷೆ(ಇದು ಅವರ ಪಿಹೆಚ್ಡಿ ಮಹಾ ಪ್ರಬಂಧ)
       ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ
       "Kuvempu-a Reappraisal" (ಸರ್ಕಾರಕ್ಕಾಗಿ ಬರೆದ ಗ್ರಂಥ)

ಪ್ರವಾಸ ಕಥನ

       ಅಮೆರಿಕದಲ್ಲಿ ಕನ್ನಡಿಗ
       ಇಂಗ್ಲೆಂಡಿನಲ್ಲಿ ಚತುರ್ಮಾಸ 
       ಗಂಗೆಯ ಶಿಖರಗಳಲ್ಲಿ
       ಮಾಸ್ಕೋದಲ್ಲಿ 22 ದಿನ -(ಸೋವಿಯತ್ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ)
ಜೀವನ ಚರಿತ್ರೆ
       ಕರ್ಮಯೋಗಿ (ಸಿದ್ದರಾಮನ ಜೀವನ ಚರಿತ್ರೆ)

ಪ್ರಶಸ್ತಿ/ಪುರಸ್ಕಾರಗಳು

 

   

ಕ್ರಮ ಸಂಖ್ಯೆ
ಪ್ರಶಸ್ತಿ/ಪುರಸ್ಕಾರ
ರ್ಷ
1
ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ("ಮಾಸ್ಕೋದಲ್ಲಿ 22 ದಿನ" ಪ್ರವಾಸ ಕಥನಕ್ಕೆ)
1974
2
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ
1982
3
ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಹಾಗೂ 'ಕಾವ್ಯಾರ್ಥ ಚಿಂತನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1984
4
ದಾವಣಗೆರೆಯಲ್ಲಿ ನಡೆದ 61 ನೇ ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
1992
5
.ಭೂಸನೂರ ಮಠ ಪ್ರಶಸ್ತಿ ಮತ್ತು ಗೊರೂರು ಪ್ರಶಸ್ತಿ
1997
6
ಪಂಪ ಪ್ರಶಸ್ತಿ
1998
7
ಮಾಸ್ತಿ ಪ್ರಶಸ್ತಿ
2000
8
ಹಂಪಿ ಕನ್ನಡ ವಿ.ವಿಯಿಂದ ನಾಡೋಜ ಗೌರವ ಡಾಕ್ಟರೇಟ್
2001
9
ಮೈಸೂರು ವಿ.ವಿಯಿಂದ ಗೌರವ ಡಿ.ಲಿಟ್
2004
10
ರಾಷ್ಟ್ರಕವಿ ಪುರಸ್ಕಾರ, ..ಕೃ ನಿರ್ಮಾಣ್ ಪ್ರಶಸ್ತಿ
2006
11
ಕುವೆಂಪು ವಿ.ವಿಯಿಂದ ಗೌರವ ಡಿ.ಲಿಟ್
2006
`12
ಕರ್ನಾಟಕ ಸರ್ಕಾರದಿಂದ ರಾಷ್ಟ್ರಕವಿ
2006
13
ಬೆಂಗಳೂರು ವಿ.ವಿಯಿಂದ ಗೌರವ ಡಿ.ಲಿಟ್
2007
14
ಕುವೆತ್ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ
2007
15
ನೃಪತುಂಗ ಪ್ರಶಸ್ತಿ
2010

                                                                                                                                    

ನಿಧನ:
ಅನಾರೋಗ್ಯದಿಂದ ಬಳಲುತ್ತಿದ್ದ ಜಿ.ಎಸ್. ಶಿವರುದ್ರಪ್ಪನವರು ಬನಶಂಕರಿಯ ಸ್ವಗೃಹದಲ್ಲಿ 23, ಡಿಸೆಂಬರ್ 2013ರಂದು ಸ್ವರ್ಗಸ್ಥರಾದರು. ಎಸ್.ಶಿವರುದ್ರಪ್ಪನವರ ಆಣತಿಯಂತೆಯೆ ಅವರ ದೇಹವನ್ನು ಮರಣಾನಂತರ ಮಣ್ಣು ಮಾಡದೆ ಅಗ್ನಿಸ್ಪರ್ಷಮಾಡಲಾಯಿತು. 24 ಡಿಸೆಂಬರ್ 2013ರಂದು ಬೆಂಗಳೂರು ವಿ.ವಿ. ಸಮೀಪವಿರುವ ಕಲಾಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನು ಸಕಲ ಸರ್ಕಾರಿ ಗೌರವ ಮರ್ಯಾದೆಯೊಂದಿಗೆ  ನೇರವೇರಿಸಲಾಯಿತು.


ಹೂವಿನಿಂದ ನಾರೂ ಸ್ವರ್ಗಸೇರಿತು ಎಂಬ ನುಡಿಯಂತೆ ನನ್ನ ನೆಚ್ಚಿನ ಸೋದರಿ, ಒಲವಿನ ಗೆಳತಿ ಶಾಂತಾಮಣಿಯವರ ದೆಸೆಯಿಂದ ಗುರುಪೂರ್ಣಿಮೆಯಂದು ಗುರುಗಳ ನಿವಾಸದಲ್ಲೇ ಗುರುವಿನ ದರ್ಶನಮಾಡಿ, ಆಶೀರ್ವಾದಪಡೆಯುವ ಭಾಗ್ಯ ನನ್ನದಾಯಿತು. ಅನಾರೋಗ್ಯದ ನಿಮಿತ್ತ ಹೆಚ್ಚು ಮಾತನಾಡಲು ಅವರಿಂದ ಸಾಧ್ಯವಾಗಲಿಲ್ಲ. ಅವರ ಧರ್ಮ ಪತ್ನಿ ರುದ್ರಾಣಿಯವರು ನಡೆಸುತ್ತಿರುವ ವೃದ್ಧಾಶ್ರಮ ಸಂಧ್ಯಾದೀಪದ ವಿಚಾರವನ್ನು ಕುರಿತು ನಮ್ಮೊಂದಿಗೆ ಹಂಚಿಕೊಂಡ ವಿಷಯದ ಕೆಲವು ತುಣುಕನ್ನೂ ನಿಮಗೂ ಕೇಳಿಸ ಬಯಸುತ್ತೇನೆ. ಇದರೊಂದಿಗೆ ವಿಡಿಯೋ ಆಡಿಯೋ ಫೈಲನ್ನೂ ಕಳಿಸುತ್ತಿದ್ದೇನೆ. ಕವಿಯ ಅಧ್ಯಯನ ಕೊಠಡಿ ಹಾಗೂ ಮನೆಯಂಗಳದ ದೃಶ್ಯಗಳನ್ನೂ ಕಳುಹಿಸುತ್ತಿದ್ದೇನೆ.


  D¨sÁj:
  ²ªÀgÀÄzÀæ¥Àà£ÀªÀgÀ ¥ÀĸÀÛPÀUÀ¼ÀÄ
  http:/ /www.karnataka.com/personalities/g-s-shivarudurappa/
 
ಪದ್ಮ

ಸಹಶಿಕ್ಷಕಿ
ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ.
ಮಲ್ಲೇಶ್ವರಂ.
ಬೆಂಗಳೂರು.