Saturday 31 October 2015

ಹತ್ತನೇ ತರಗತಿ ಮಾದರಿ ಪ್ರಶ್ನೆ ಪತ್ರಿಕೆ

ಹತ್ತನೇ ತರಗತಿ ಮಾದರಿ ಪ್ರಶ್ನೆ ಪತ್ರಿಕೆ
ಕನ್ನಡ ದ್ವಿತೀಯ ಭಾಷೆ
ಗರಿಷ್ಠ ಅಂಕ : 80                                     ಅವಧಿ : 2-30 ಗಂಟೆಗಳು
ಸೂಚನೆಗಳು :
ಪ್ರಶ್ನೆ ಪತ್ರಿಕೆಯು , ಬಿ ಮತ್ತು ಸಿ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.
ವಿಭಾಗ ` ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
ವಿಭಾಗ `ಬಿ ಅನ್ವಯಿಕ ವ್ಯಾಕರಣ, ಅಲಂಕಾರ, ಛಂದಸ್ಸು 12 ಅಂಕಗಳು
ವಿಭಾಗ `ಸಿ ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 15 ಅಂಕಗಳು
ಉತ್ತರಗಳು ನೇರವೂ, ಸ್ಪಷ್ಟವೂ ಆಗಿದ್ದು, ಅಂಕಗಳಿಗೆ ತಕ್ಕಂತೆ ವಿಸ್ತಾರವಿರಲಿ.
ವಸ್ತುನಿಷ್ಠ ಪ್ರಶ್ನೆಗಳಿಗೆ, ಹೊಡೆದು, ಅಳಿಸಿ, ಕೆರೆದು ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
ಪೆನ್ಸಿಲ್ ಬಳಸಿ ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
ಪ್ರತಿ ಪ್ರಶ್ನೆಗೂ ಉತ್ತರಕ್ಕಾಗಿ ಮೀಸಲಿಟ್ಟ ಜಾಗದಲ್ಲೇ ಉತ್ತರ ಬರೆಯುವುದು.
ಭಾಗ - `
ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಒಂದೊಂದೇ ವಾಕ್ಯದ ಉತ್ತರವನ್ನು ಬರೆಯಿರಿ.                 8X1=8
1. ಕಾಶಿಯಲ್ಲಿದ್ದ ಬೇಟೆಗಾರನು ಪ್ರಾಣಿಗಳನ್ನು ಕೊಲ್ಲಲು ಮಾಡಿದ ಉಪಾಯವೇನು?
2. ಹೆಚ್ಚು ಕಾಫಿ ಬೆಳೆಯುವ ಕರ್ನಾಟಕದ ಪ್ರದೇಶ ಯಾವುದು?
3. ಸರಕಾರವೇ ಪಶ್ಚಿಮ ಘಟ್ಟಕ್ಕೆ ಲಗ್ಗೆ ಹಾಕಿದ್ದೇಕೆ?
4. ಶಿಷ್ಯ ಪಿಷಾರೊದಿಯನ್ನು ಹುರಿದುಂಬಿಸಿದ ರಾಮನ್ ಮಾತು ಯಾವುದು?
5. ಬಾಹುಬಲಿಯು ತಾನು ಗೆದ್ದರಾಜ್ಯವನ್ನು ಅಣ್ಣನಿಗೆ ಮರಳಿಸುತ್ತಾ ಆಡಿದ ಮಾತು ಯಾವುದು?
6. ಬರಡು ಜೀವಕ್ಕೆ ಹೊಸ ಚೈತನ್ಯವು ಹೇಗೆ ಬರುವುದೆಂದು ಬಸವರಾಜ ಸಾದರ ಅವರು ಹೇಳಿದ್ದಾರೆ?
7. ಸಾವಿರಾರು ಮಳೆಬಿಲ್ಲುಗಳು ಸೇರಿ ಕುಣಿದಂತೆ ಗೋಪಾಲನಿಗೆ ತೋರುತ್ತಿದ್ದುದು ಯಾವುದು?
8. ಯಾವುದು ಹೇಡಿತನವೆಂದುಗುರಿಪದ್ಯದಲ್ಲಿ ಕವಿ ತಿಳಿಸಿದ್ದಾರೆ?
ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳ ಉತ್ತರಗಳನ್ನು ಬರೆಯಿರಿ.  11X2=22
9. ಇಂದ್ರನು ಗಿಳಿಯ ನಡತೆ ಲೋಕವರ್ತನೆಗೆ ವಿರುದ್ಧವಾದುದು ಎಂದು ಕೊಳ್ಳಲು ಕಾರಣವೇನು?
10. ಮರಗಳು ಕಡಿಮೆಯಾದುದರಿಂದ ಆಗುತ್ತಿರುವ ದುಷ್ಪರಿಣಾಮಗಳಾವುವು?
11. ರೈಲ್ವೆ ನಿಲ್ದಾಣದ ಹೊರಗೆ ಅಜ್ಜನು ಕುಸಿದು ಹೋದದ್ದೇಕೆ?
12.  ನನ್ನ ಮೈಮ್ಯಾಲಿನ ಚರ್ಮಾ ಸುಲಿದು ನಿಮ್ಮ ಕಾಲಿಗೆ ಚಪ್ಪಲೀ ಮಾಡಿದ್ರೂ ನನ್ನ ಋಣ ತೀರೋದಿಲ್ಲವೆಂದು ಪೋಲೀಸ್ ಅಧಿಕಾರಿ ಅಜ್ಜನಿಗೆ ಹೇಳಿದ್ದೇಕೆ?
13.  ‘ರಾಮನ್-ನಾಥ್ ಸಿದ್ಧಾಂತವು ರೂಪುಗೊಂಡಿದ್ದು ಹೇಗೆ?
14.  ಅಜ್ಜನು ಬಾಹುಬಲಿಯನ್ನು ಕುರಿತು ಪುಟ್ಟ ಮಗುವಿಗೆ ಹೇಳಿದ ಮಾತುಗಳಾವುವು?
15.  ಚೈತ್ರದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನುಸವಿ ಚೈತ್ರಕವನವನ್ನಾಧರಿಸಿ ವಿವರಿಸಿ?
16.  ಕರ್ತವ್ಯವನ್ನು ಯಾವ ರೀತಿ ಮುಗಿಸಬೇಕೆಂದು ಸಿ.ಪಿ.ಕೆಯವರು ಹೇಳಿದ್ದಾರೆ?
17.  ಬಾಗಿಲಿನಲ್ಲಾಡುವ ಮಗನ ಆಟವನ್ನು ಜನಪದರು ಯಾವುದಕ್ಕೆ ಹೋಲಿಸಿದ್ದಾರೆ?
18.  ಅಪರಿಚಿತ ಹೆಣ್ಣು ಮಗಳು ಜೋಯಿಸರ ಭಾವಮೈದುನನನ್ನುನನ್ನ ಪಾಲಿನ ದೇವರು ನೀವುಎಂದು ಹೇಳಲು ಕಾರಣವೇನು?
19. ಸಾವಿತ್ರಿಯು ಊಟಕ್ಕೆ ಸಿದ್ಧಪಡಿಸಿದ ತಿನಿಸುಗಳಾವುವು?
ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಸಹಿತ ಸ್ವಾರಸ್ಯವನ್ನು ವಾಕ್ಯಗಳಲ್ಲಿ ಬರೆಯಿರಿ.        2X3=6
20. “ದೇಶ ಮೊದಲು, ದೇಶಕ್ಕಾಗಿ ಆಡು
21. “ಆನಂದದಿಂದ ಕಣ್ಮುಚ್ಚಿದಾಗ ನನ್ನ ಇರುವಿಕೆಯ ಅರಿವಾಗುತ್ತದೆ.” 
ಸಾಹಿತಿಗಳ ಸ್ಥಳ, ಕಾಲ, ಕೃತಿಗಳನ್ನು ವಾಕ್ಯಗಳಲ್ಲಿ ಬರೆಯಿರಿ.                      2X3=6
22.  ಕುವೆಂಪು.
23.  ಎಂ.ಗೋಪಾಲಕೃಷ್ಣ ಅಡಿಗರು.
ಕೆಳಗಿನ ಪದ್ಯಭಾಗವನ್ನು ಪೂರ್ಣಮಾಡಿರಿ.                                     1X3=3
24.          ನೀರ___________________
_____ಕಂಡ_____________
____________ಒಣಗುವ____
       __________________ಸಂಗಮದೇವ
ಅಥವಾ
ಹಸು_________________
____________ಗುಣ______
ಅಗಲಿದ್ದು__________________
________________ಮಲ್ಲಿಕಾರ್ಜುನ
ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳ ಉತ್ತರಗಳನ್ನು ಬರೆಯಿರಿ.      2X4=8
25. ಅಂಗ ವಿಕಲತೆ ಸಾಧನೆಗೆ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಪುಟ್ಟರಾಜ ಗವಾಯಿಯವರು ಉತ್ತಮ ನಿದರ್ಶನರಾಗಿದ್ದಾರೆ ಎಂಬುದನ್ನು ನಿಮ್ಮ ಮಾತುಗಳಲ್ಲಿ ಸಮರ್ಥಿಸಿರಿ.
ಅಥವಾ
ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಪುಟ್ಟರಾಜ ಗವಾಯಿಯವರ ಕೊಡುಗೆ ಅಪಾರವದುದು ಎನ್ನುವುದನ್ನು ನಿಮ್ಮ ಮಾತುಗಳಲ್ಲಿ ವಿವರಿಸಿ.
26.‘ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ಪದ್ಯವನ್ನಾಧರಿಸಿ ಅರ್ಜುನನ ಗುಣ ಸ್ವಭಾವಗಳನ್ನು ನಿಮ್ಮ ಮಾತುಗಳಲ್ಲಿ ವರ್ಣಿಸಿರಿ.
ಅಥವಾ
ಉತ್ತರಕುಮಾರನ ಹೇಡಿತನವನ್ನು ಕುಮಾರವ್ಯಾಸನು ಹೇಗೆ ಬಣ್ಣಿಸಿದ್ದಾನೆ ನಿಮ್ಮ ಮಾತುಗಳಲ್ಲಿ ವರ್ಣಿಸಿರಿ?
ಭಾಗ - `ಬಿ
ಅನ್ವಯಿಕ ವ್ಯಾಕರಣ 12 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕೊಟ್ಟಿರುವ ಜಾಗದಲ್ಲಿಯೇ ಕ್ರಮಾಕ್ಷರದೊಂದಿಗೆ ಉತ್ತರವನ್ನು ಬರೆಯಿರಿ. 12X1=12
27. ‘ಆಶ್ಚರ್ಯ ಪದದ ತದ್ಭವ ರೂಪ:
() ಬೆರಗು    (ಸಿ) ಅಚ್ಚರಿ
(ಬಿ) ಆಚ್ಚರಿ    (ಡಿ) ಕೌತುಕ
28. ‘ಕೃತಜ್ಞತೆ ಪದದ ವಿರುದ್ಧಾರ್ಥ ಪದ:
() ಸಾರ್ಥಕತೆ    (ಸಿ) ಕೃತಕತೆ
(ಬಿ) ಕೃತಘ್ನತೆ     (ಡಿ) ಕೃಪಣತೆ
29. ಕರತಲಾಮಲಕ ಬಿಡಿಸಿ ಬರೆದ ರೂಪ:
() ಕರ+ತಲಾಮಲಕ        (ಸಿ) ಕರತಲ+ಆಮಲಕ
(ಬಿ) ಕರತಲಾ+ಅಮಲಕ      (ಡಿ) ಕರತಲಾ+ಮಲಕ
30. ಮತ್ತು ಅಕ್ಷರಗಳು ಆದೇಶವಾಗುವ ಸಂಧಿ:
() ವೃದ್ಧಿ     (ಸಿ) ಗುಣ
(ಬಿ) ಯಣ್    (ಡಿ) ಲೋಪ
31.  ಪುಟ್ಟರಾಜ ಗವಾಯಿಯವರ ಪ್ರಾರ್ಥನೆಯ ಹಿಂದೆ ಕಣ್ಣಿಲ್ಲದೇ ಇರುವವರ ಬಗೆಗೆ ಇದ್ದ ತಾಯ್ತನದ ಕಾಳಜಿಯನ್ನು ನಾವು ಮತ್ತೆ ಮತ್ತೆ ನೆನೆಯಲೇ ಬೇಕು.- ವಾಕ್ಯದಲ್ಲಿರುವ ದ್ವಿರುಕ್ತಿ ಪದ:
() ಪ್ರಾರ್ಥನೆಯ ಹಿಂದೆ     (ಸಿ) ಕಣ್ಣಿಲ್ಲದೇ ಇರುವವರ ಬಗೆಗೆ
(ಬಿ) ತಾಯ್ತನದ ಕಾಳಜಿ      (ಡಿ) ಮತ್ತೆ ಮತೆ
32. ಕೆಳಗಿನವುಗಳಲ್ಲಿ ಕರ್ತೃಕಾರಕ ವಿಭಕ್ತಿ ಪ್ರತ್ಯಯ:
() ‘    (ಸಿ) ‘
(ಬಿ) ‘ಅನ್ನು  (ಡಿ) ‘ಅಲ್ಲಿ
33. ಹೌದು ಹೌದು ನಾವೆಲ್ಲರೂ ಹಿಂದೆ ಮುಂದೆ ನೋಡದೆ ಮನೆಮಠಗಳನ್ನು ತೊರೆದು ದೇಶಕ್ಕಾಗಿ ಹೋರಾಡಲೇ ಬೇಕು.- ವಾಕ್ಯದಲ್ಲಿರುವ ನುಡಿಗಟ್ಟು:
() ಮನೆಮಠ              (ಸಿ) ಹೋರಾಡಲೇ ಬೇಕು
(ಬಿ)ಹಿಂದೆ ಮುಂದೆ ನೋಡದೆ   (ಡಿ) ಹೌದು ಹೌದು
34. ಧಾತು ಎಂದರೆ:
() ಕ್ರಿಯಾ ಪದದ ಮೂಲರೂಪ    (ಸಿ) ನಾಮಪದದ ಮೂಲರೂಪ
(ಬಿ) ಪ್ರಾತಿಪದಿಕ                 (ಡಿ) ನಾಮಪ್ರಕೃತಿ
35. ಕೈ ಕೆಸರಾದರೆ ಗಾದೆಯ ಉತ್ತರಾರ್ಧ:
() ಬಾಯಿ ಮೊಸರು  (ಸಿ) ಬಾಯಿಗೆ ಮಣ್ಣು
(ಬಿ) ಬಾಯಿ ತುಪ್ಪ    (ಡಿ) ಬಾಯಿಗೂ ಕೆಸರು
36. ‘ನೆಲದಮ್ಮ ನವವಧು- ಇಲ್ಲಿ ಇರುವ ಅಲಂಕಾರ:
() ರೂಪಕ     (ಸಿ) ಶ್ಲೇಷ
(ಬಿ) ಉಪಮಾ   (ಡಿ) ಉತ್ಪ್ರೇಕ್ಷಾ
37. ಅನುಕರಣಾವ್ಯಯಕ್ಕೆ ಪದವು ಉದಾಹರಣೆಯಾಗಿದೆ :
() ಬೇವುಬೆಲ್ಲ       (ಸಿ) ಲಗುಬಗೆ
(ಬಿ) ಬಗೆಬಗೆ         (ಡಿ) ಚಿಲಿಪಿಲಿ
38. ಮೈಕೊಡವಿ ಸಮಾಸಕ್ಕೆ ಉದಾಹರಣೆಯಾಗಿದೆ:
() ಕ್ರಿಯಾ          (ಸಿ) ದ್ವಂದ್ವ
(ಬಿ) ಕರ್ಮಧಾರೆಯ    (ಡಿ) ಗಮಕ
ಭಾಗ - `ಸಿ
ವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ 15 ಅಂಕಗಳು
39. ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ.              1X3=3
ದೇಶ ಸುತ್ತ ಬೇಕು ಕೋಶ ಓದ ಬೇಕು
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ಮಾಡಿದ್ದುಣ್ಣೋ ಮಹರಾಯ
40.   ಉಡುಪಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ನೀನು ಮಂಜುಳಾ ದೇವಿ / ಅರವಿಂದ್ ಎಂದು ಭಾವಿಸಿ ಮೂರೂರು ಪ್ರೌಢಶಾಲೆಯಲ್ಲಿ ಓದುತ್ತಿರುವ ನಿಮ್ಮ ಗೆಳತಿ ಸವಿತ/ಗೆಳೆಯ ಪ್ರಖ್ಯಾತ್ನಿಗೆ ನಿಮ್ಮ ರೂಪಣಾತ್ಮಕ ಚಟುವಟಿಕೆಗಳ ಬಗೆಗೆ ತಿಳಿಸುತ್ತಾ ಒಂದು ಪತ್ರ ಬರೆಯಿರಿ
                                                ಅಥವಾ
ಸರ್ಕಾರಿ ಪ್ರೌಢಶಾಲೆ, ಜಯಲಕ್ಷ್ಮೀ ಪುರಂ, ಮೈಸೂರಿನಲ್ಲಿ ಓದುತ್ತಿರುವ ಅನಿಕೇತನ/ಆಶೀರ್ವಾದ್ ಆದ ನೀನು ಸೂಕ್ತ ಕಾರಣ ತಿಳಿಸಿ ಎರಡುದಿನ ರಜೆಯನ್ನು ಕೊಡಬೇಕೆಂದು ಕೋರಿ ಶಾಲಾ ಮುಖ್ಯೋಪಾಧ್ಯಾಯರಿಗೆ ರಜಾ ಚೀಟಿಯನ್ನು ಬರೆಯಿರಿ.                                                                  1X4=4
41.    ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ಹತ್ತು ವಾಕ್ಯಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ.                                                                  1X4=4
ಪರಿಸರ ಮಾಲಿನ್ಯ.
ಸೊಳ್ಳೆ ನಿರ್ಮೂಲನ ಆಂದೋಳನ
ಗ್ರಂಥಾಲಯದ ಮಹತ್ವ.

ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.           1X4=4
ಹಿರಿಯ ಚಿಂತಕರೂ, ಸಮಾಜಸೇವಕರೂ, ಗಾಂಧೀವಾದಿಗಳೂ, ಪ್ರಕೃತಿಚಿಕಿತ್ಸಾತಜ್ಞರೂ, ಸೇವಾದಳದ ನಾಯಕರೂ, ಖಾದಿಧಾರಿಗಳೂ, ಸಹಕಾರ ಧುರೀಣರು, ಶ್ರೇಷ್ಟ ಸಾಹಿತಿಗಳೂ, ಲೇಖಕರೂ, ರಾಜ್ಯ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರೂ, ‘ಕರ್ನಾಟಕದ ಗಾಂಧಿ-ಶಾಂತಿ ಸೇವಾ ಪ್ರಶಸ್ತಿ ಭಾಜನರೂ, ಬಹುಮುಖ ಪ್ರತಿಭಾವಂತರೂ  ಆಗಿರುವ ಹೊ. ಶ್ರೀನಿವಾಸಯ್ಯನವರು ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಮಹತ್ಸಾಧನೆಗಳನ್ನು ಮಾಡುತ್ತಾ ಬಂದಿರುವ ಮಹನೀಯರು. ಇವರು ವೃತ್ತಿಯಿಂದ ಇಂಜಿನಿಯರ್, ಪ್ರವೃತ್ತಿಯಿಂದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪ್ರಚಾರಕರು. ಸಮಾಜ ಸೇವಕರಾದ ಇವರು ಸ್ವಭಾವತಃ ಹುಟ್ಟು ಹೋರಾಟಗಾರರು. ಸರಳಜೀವಿಗಳು, ನಿಸರ್ಗಪ್ರೇಮಿಗಳು. ಗಾಂಧೀ ತತ್ವ ಅನುಯಾಯಿಗಳು. ಎಳೆಯ ವಯಸ್ಸಿನಲ್ಲೇ ಗಾಂಧೀಜಿಯವರಿಂದ ಪ್ರಭಾವಿತರಾಗಿ ತಮ್ಮ ಜೀವನವನ್ನೇ ಗಾಂಧಿ ತತ್ವಗಳಿಗೆ ಮುಡುಪಾಗಿಟ್ಟವರು..        
ಪ್ರಶ್ನೆಗಳು:
42.   ಹೊ ಶ್ರೀಯವರಿಗೆ ಸಂದ ಪ್ರಶಸ್ತಿಗಳಾವುವು?
43.   ಹೊ. ಶ್ರೀನಿವಾಸಯ್ಯನವರು ಯಾವುದನ್ನು ಮೈಗೂಡಿಸಿಕೊಂಡಿದ್ದರು?
44.   ಹೊ. ಶ್ರೀನಿವಾಸಯ್ಯನವರ ಪ್ರವೃತ್ತಿ ಏನು?
45.   ಹೊ. ಶ್ರೀನಿವಾಸಯ್ಯನವರು ತಮ್ಮ ಜೀವನವನ್ನು ಯಾವುದಕ್ಕೆ ಮುಡುಪಾಗಿಟ್ಟಿದ್ದಾರೆ?

***********************