Wednesday 25 September 2019

ಮೊದಲನೆಯ ಸಂಕಲನಾತ್ಮಕ ಮೌಲ್ಯಮಾಪನ ತೃತೀಯ ಭಾಷೆ ಕನ್ನಡ


ಮೊದಲನೆಯ ಸಂಕಲನಾತ್ಮಕ ಮೌಲ್ಯಮಾಪನ
ಹತ್ತನೆಯ ತರಗತಿ

ವಿಷಯ: ತೃತೀಯ ಭಾಷೆ ಕನ್ನಡ                                                                   ವಿಷಯ ಸಂಕೇತ: 62K
ಅವಧಿ : 2-30 ಗಂಟೆಗಳು                                                             ಗರಿಷ್ಠ ಅಂಕಗಳು:80                      
ಸೂಚನೆಗಳು :  
ಉತ್ತರಗಳು ನೇರವೂ, ಸ್ಪಷ್ಟವೂ ಆಗಿದ್ದು, ಅಂಕಗಳಿಗೆ ತಕ್ಕಂತೆ ವಿಸ್ತಾರವಿರಲಿ.
ವಸ್ತುನಿಷ್ಠ ಪ್ರಶ್ನೆಗಳಿಗೆ, ಹೊಡೆದು, ಅಳಿಸಿ, ಕೆರೆದು ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
ಪೆನ್ಸಿಲ್ ಬಳಸಿ ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
 I. ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ.                                          08X1=08
1. ಅನುನಾಸಿಕಾಕ್ಷರಗಳಿಂದ ಮಾತ್ರ ಕೂಡಿರುವ ಪದ :     
(ಎ)  ಮದನ                                   (ಬಿ) ಕವನ                  
(ಸಿ)  ನಯನ                                  (ಡಿ) ಮನನ
2. ಉಪಮಾನವೇ ಉಪಮೇಯವೆಂದು ರೂಪಿಸಿ, ಅವೆರಡೂ ಒಂದೇ ಎಂದು ಹೇಳುವ ಅಲಂಕಾರ :
 (ಎ) ಯಮಕ                                  (ಬಿ) ರೂಪಕ
 (ಸಿ) ಉಪಮ                                  (ಡಿ) ಶಬ್ದಾಲಂಕಾರ
3.ಅಭಿಪ್ರಾಯದ ವಿವರಣೆ ಇಂತಿದೆ ಎನ್ನುವುದನ್ನು ತಿಳಿಸುವ ಸಂದರ್ಭದಲ್ಲಿ ಬಳಸುವ ಚಿಹ್ನೆ :   
(ಎ) ವಿವರಣಾತ್ಮಕ                            (ಬಿ) ಅಲ್ಪವಿರಾಮ                 
(ಸಿ) ವಾಕ್ಯವೇಷ್ಟನ                            (ಡಿ) ಆವರಣ
4.ತೃತೀಯಾ ವಿಭಕ್ತಿ ಪ್ರತ್ಯಯ :        
 (ಎ)                                           (ಬಿ) ಅನ್ನು
 (ಸಿ)  ಇಂದ                                   (ಡಿ) ದೆಸೆಯಿಂದ
5. ಮಿಶ್ರವಾಕ್ಯ ವಾಕ್ಯಕ್ಕೆ ಉದಾಹರಣೆ :
(ಎ) ಮಕ್ಕಳಿಗೆ ಆಟವಾಡಲು ಮೈದಾನವಿಲ್ಲ.      
(ಬಿ) ಶಾಲೆಗೆ ಹೊಸಪುಸ್ತಕಗಳನ್ನು ತಂದಿರುವುದನ್ನು ತಿಳಿದು ವಿದ್ಯಾರ್ಥಿಗಳು ಸಂತಸಪಟ್ಟರು
(ಸಿ) ಮಕ್ಕಳು ಆಡಲು ಬಯಸುತ್ತಾರೆ, ಆದರೆ ಆಡಲು ಮೈದಾನವಿಲ್ಲ.
(ಡಿ) ವಿದ್ಯಾರ್ಥಿಗಳು ಓದಲು ಬಯಸಿದರೂ ಸಾಕಷ್ಟು ಅವಕಾಶಗಳಿಲ್ಲ.
6. ಕೊಡಗಿನ ಗೌರಮ್ಮನವರ ಪತಿಯ ಹೆಸರು :
(ಎ) ಬಿ. ಟಿ. ಗೋಪಾಲಕೃಷ್ಣಯ್ಯ         (ಬಿ) ಜಿ. ಎಂ ಮಂಜುನಾಥಯ್ಯ
(ಸಿ) ಎನ್. ಎಸ್. ರಾಮಯ್ಯ                (ಡಿ) ಗುಡಿಗೇರಿ ಕುಲಕರ್ಣಿ
7. ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾಗಿರು :   
(ಎ) ಶರೀಫರು                                 (ಬಿ) ಸಿಪಿಕೆ
(ಸಿ) ಕುವೆಂಪು                                 (ಡಿ) ನಿಸಾರ್ ಅಹಮದ್
8.‘ತಾನುಎನ್ನುವ ಸರ್ವನಾಮವು :
ಎ) ಆತ್ಮಾರ್ಥಕ                                (ಬಿ) ಪ್ರಶ್ನಾರ್ಥಕ
(ಸಿ) ಪುರುಷಾರ್ಥಕ                            (ಡಿ) ವಸ್ತುವಾಚಕ
II. ಕೆಳಗಿನ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ಸಂಬಂಧೀ ಪದವನ್ನು ಬರೆಯಿರಿ.                                                                     04X1=04
 9. ಶಿಶುನಾಳದ ಸಂತ : ಶರೀಫರು : : ಹುಲಗೂರಿನ ಸಂತ : ----
10. ವ್ಯವಸಾಯ : ಬೇಸಾಯ : : ವರ್ಷ : ----
11. ಚರ್ಚ್ : ಶಿಲುಬೆ : : ದೇವಾಲಯ : ----
12. ಮಗು : ಮಕ್ಕಳು : : ಕವಿ : ----
III.  ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.                                      04X 01=04
13. ಮಿನಿ ಪೊಲೀಸ್ ನಗದಲ್ಲಿ ದಾರಿ ತಪ್ಪಿ ಅಲೆಯುತ್ತಿದ್ದ ಲೇಖಕರ ಕಣ್ಣಿಗೆ ಕಂಡವರು ಯಾರು?
14. ವಿಶ್ವರೂಪಾವಲೋಕನಕ್ಕೆ ತತ್ತರಿಸಿದವರು ಯಾರು?
15. ‘ಸೋಮೇಶ್ವರ ಶತಕದಲ್ಲಿ ಹೇಳಿರುವಂತೆ ಮಗನಲ್ಲಿ ಇರಬೇಕಾದ ಗುಣಯಾವುದು?
16. ಪುಲಿಗೆರೆ ಸೋಮನಾಥನು ಹೇಳಿರುವಂತೆ ರಾಜನಾಗುವವನಿಗೆ ಯಾವ ಗುಣವಿರಬೇಕು?
IV. ಕೆಳಗಿನ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.                             08X 02=16
17. ಗೊರೂರರು ಒಂದು ರಾತ್ರಿಯನ್ನು ಲಾಕಪ್ಪಿನಲ್ಲಿ ಕಳೆಯ ಬೇಕಾಯಿತು ಏಕೆ?
18. ಶರೀಫರು ತಮಗಾದ ದುಃಖವನ್ನು ಹೇಗೆ ಕಡಿಮೆ ಮಾಡಿಕೊಂಡರು?
19. ಕೊಡಗಿನ ಗೌರಮ್ಮನವರ ಕೌಟುಂಬಿಕ ಜೀವನವನ್ನು ಕುರಿತು ಬರೆಯಿರಿ.
20. ಕೊಡಗಿನ ಗೌರಮ್ಮನವರು ಕಲಿತ ವಿದ್ಯೆಯೇ ಅವರ ಮರಣಕ್ಕೆ ಹೇಗೆ ಕಾರಣವಾಯಿತು?
21. ಮನುಷ್ಯರ ನಡುವಿನ ವೈಮನಸ್ಸನ್ನು ತೊಡೆದು ಹಾಕುವ ಕನಸು `ಕಟ್ಟತೇವ ನಾವುಕವಿತೆಯಲ್ಲಿ ಹೇಗೆ ವ್ಯಕ್ತವಾಗಿದೆ?
22. ‘ಹಿರಿಬಾಳುಗಳ ಪಳೆಯುಳಿಕೆಎಂದು ಕವಿಯು ಯಾವುದನ್ನು ಕರೆದಿದ್ದಾರೆ ಏಕೆ?
23. ತಮ್ಮ ಅಹಂಕಾರವನ್ನು ನುಚ್ಚು ನೂರಾಗಿಸಿದÀ ಸನ್ನಿವೇಶವನ್ನು ಕವಿಯು ಹೇಗೆ ವ್ಯಕ್ತಪಡಿಸಿದ್ದಾರೆ?
24. ಈರಪ್ಪ. ಎಂ. ಕಂಬಳಿಯವರು ಕೆಂಪುಬಸ್ಸನ್ನು ನೆಚ್ಚಿದ್ದರಿಂದ ಇಡೀದಿನವನ್ನು ವ್ಯಯಿಸಬೇಕಾಯಿತು ಏಕೆÉ?
V. ಕೆಳಗಿನ ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭದೊಡನೆ ಸ್ವಾರಸ್ಯವನ್ನು ಬರೆಯಿರಿ.             02X03=06
25. “ಶರಣರ ಸಾವು ಮರಣದಲ್ಲಿ ನೋಡು
26. “ಕಂಡ ಕನಸುಗಳ ಕಟ್ಟೇ ಕಟ್ಟತೇವ    
VI. ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.                                   04X03=12
27. ಮಿನಿಪೆÇಲೀಸ್ ನಗರದಲ್ಲಿ ಗೊರೂರರು ತಪ್ಪಿಸಿಕೊಂಡ ಪ್ರಕರಣವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
28. ಗೋವಿಂದಭಟ್ಟರ ಗುಣ ಸ್ವಭಾವಗಳನ್ನು ವಿವರಿಸಿರಿ.
29.  ಗ್ರಂಥಾಲಯದ ಬಗ್ಗೆ ಸಿಪಿಕೆಯವರು ವ್ಯಕ್ತಪಡಿಸಿರುವ ಭಾವನೆಗಳನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
30. “ನಾವೆಲ್ಲರೂ ಒಂದೇ ಎಂಬ ಕವಿಯ ಆಶಯವನ್ನು ಎಲ್ಲರೂ ಏಕೆ ಮೆಚ್ಚುವಂತಹದುಈ ಮಾತನ್ನು ವಿವರಿಸಿರಿ.
VII.  ಕೆಳಗಿನ ಕವಿ/ಸಾಹಿತಿಗಳ ಸ್ಥಳ, ಕಾಲ, ಕೃತಿಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ.        02X03=06
31. ಗೊರೂರು ರಾಮಸ್ವಾಮಿ ಅಯ್ಯಂಗಾರ್.
32. ಸತೀಶ ಕುಲಕರ್ಣಿ ಸಿ. ಪಿ.
VIII. ಕೆಳಗಿನ ಗಾದೆಯನ್ನು ವಿಸ್ತರಿಸಿ ಬರೆಯಿರಿ.                                                        01X03=03
33. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
                       ಅಥವಾ
   ಉಪ್ಪು ತಿಂದವನು ನೀರು ಕುಡಿಯಲೇ ಬೇಕು
IX. ಕೆಳಗಿನ ಪ್ರಶ್ನೆಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.                                      01X 04=04
34. ಕೊಡಗಿನ ಗೌರಮ್ಮನವರ ಸಾಹಿತ್ಯ ಸೃಷ್ಟಿಗೆ ಪೂರಕ ಮತ್ತು ಪ್ರೇರಕವಾದ ವಿಚಾರಗಳಾವುವು? ವಿವರಿಸಿರಿ.
ಅಥವಾ
   ಗಾಂಧೀಜಿಯವರು ಕೊಡಗಿನ ಗೌರಮ್ಮನವರನ್ನು ಮೆಚ್ಚಿಕೊಂಡ ಸನ್ನಿವೇಶವನ್ನು ಕುರಿತು ಬರೆಯಿರಿ.
X.  ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ ಬರೆಯಿರಿ.                                                 01X 04=04
35.        ನಾವು-------------ಇವರು
-------------------
ಭೂಮಿ -------------
---------------ಇಂದೆ
ಅಥವಾ
ಆಂಗ್ಲ ---------------
-------------------
------ರಾಗಿ----------
--------------- ಒಂದೆ
XI. ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.                  01X 04=04
ಮಹೇಶ ಮತ್ತು ಸುರೇಶ ಎಂಬ ಇಬ್ಬರು ವಿದ್ಯಾರ್ಥಿಗಳು ಜಗದ್ಗುರುವಿನ ಬಳಿಗೆ ಬಂದು 'ಗುರುಗಳೇ, ನಮಗೆ ನಿಮ್ಮ ಆಶೀರ್ವಾದ ಬೇಕು' ಎಂದು ಹೇಳಿ ತಲೆ ಬಾಗಿದರು. ಜಗದ್ಗುರು ಅವರಿಬ್ಬರನ್ನೂ ಒಂದು ಕ್ಷಣ ತದೇಕ ಚಿತ್ತದಿಂದ ನೋಡಿ ಮಹೇಶನಿಗೆ 'ನೀನು ಅತ್ಯಂತ ಬುದ್ಧಿವಂತ ಒಳ್ಳೆಯ ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿಪಾಸಾಗುವೆ' ಎಂದು ಮಹೇಶನಿಗೂ, ‘ಬುದ್ಧಿವಂತಿಕೆ ಕಡಿಮೆ ಇರುವ ನೀನು ಪರೀಕ್ಷೆಯಲ್ಲಿಫೇಲಾಗುವೆ' ಎಂದು ಸುರೇಶನಿಗೂ ಹೇಳಿದರು. ಇದರಿಂದ ಖುಷಿಗೊಂಡ ಮಹೇಶ ಓದುವುದನ್ನು ಬಿಟ್ಟ. ಗುರುಗಳ ಮಾತನ್ನೇ ನಂಬಿ ಆರಾಮವಾಗಿ ಆಟವಾಡಿಕೊಂಡು ಓದುವುದನ್ನು ಮರೆತು ಸೋಮಾರಿಯಾದನು. ಸುರೇಶ ಜಗದ್ಗುರುವಿನ ಮಾತನ್ನು ಸುಳ್ಳು ಮಾಡಲು ನಿರ್ಧರಿಸಿದನು. ತನ್ನ ಓದಿನ ಮೇಲೆ ನಂಬಿಕೆಯಿಟ್ಟು ಸತತವಾಗಿ ಹಗಲು ರಾತ್ರಿಯೆನ್ನದೆ ಏಕಾಗ್ರತೆಯಿಂದ ಚೆನ್ನಾಗಿ ಓದಿದನು. ಮಹೇಶನು ಅತ್ಯಂತ ಕಡಿಮೆ ಅಂಕ ಪಡೆದು ಫೇಲಾಗಿದ್ದನು. ಸುರೇಶನು ಅತ್ಯಂತ ಹೆಚ್ಚು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದನು.
ಕುಪಿತಗೊಂಡ ಮಹೇಶ ಸರಸರನೆ ಆಶ್ರಮಕ್ಕೆ ಹೋಗಿ ಜಗದ್ಗುರುವಿಗೆ ನಿಮ್ಮ ಮಾತನ್ನು ನಂಬಿ ನಾನು ಕೆಟ್ಟೆ. ನಮ್ಮಿಬ್ಬರ ವಿಷಯದಲ್ಲಿ ನೀವು ಹೇಳಿದ ಮಾತು ಸುಳ್ಳಾಯಿತು. ಏಕೆ ಹೀಗಾಯಿತು?' ಎಂದು ಬೇಸರ ವ್ಯಕ್ತಪಡಿಸಿದನು.
ಆಗ ಜಗದ್ಗುರು ಸಾವಧಾನದಿಂದ 'ನೀನು ನನ್ನ ಮಾತನ್ನು ಮಾತ್ರ ನಂಬಿ ನಿನ್ನ ಪ್ರಯತ್ನ ಮಾಡಲೇ ಇಲ್ಲ. ಶಕ್ತಿಯಿದ್ದೂ ಶಕ್ತಿಹೀನನಾದೆ. ಪ್ರಯತ್ನವಿಲ್ಲದೆ ಎಂದೂ ಫಲ ದೊರೆಯದು. ಸುರೇಶ ತನ್ನ ಪ್ರಯತ್ನದ ಮೇಲೆ ನಂಬಿಕೆಯಿಟ್ಟು ಸತತವಾಗಿ ಕಷ್ಟಪಟ್ಟು ಓದಿದನು. ಅವನು ನಿನ್ನಷ್ಟು ಬುದ್ಧಿವಂತನಲ್ಲದಿದ್ದರೂ ಪ್ರಯತ್ನಪಟ್ಟು ಅಧ್ಯಯನ ಮಾಡಿದ್ದನು ಉತ್ತಮ ಫಲಿತಾಂಶ ಬಂತು. ಕಷ್ಟಪಟ್ಟರೆ ಫಲ ಸಿಕ್ಕೇ ಸಿಗುತ್ತದೆಂಬ ಮಾತನ್ನು ಆತ ನಿಜ ಮಾಡಿದ್ದಾನೆ' ಎಂದರು. ಯಾರ ಆಶೀರ್ವಾದ ಎಷ್ಟೇ ದೊಡ್ಡದಿದ್ದರೂ ನಮ್ಮ ಪ್ರಯತ್ನವಿಲ್ಲದಿದ್ದರೆ ಅದರಿಂದ ಏನೂ ಪ್ರಯೋಜನವಾಗದು. ದೇವರೇ ನಮ್ಮ ಪರವಾಗಿದ್ದರೂ ಪ್ರಯತ್ನವಿಲ್ಲದೆ ಫಲ ಸಿಗದು.  
36. ಪ್ರಶ್ನೆಗಳು :
1. ಮಹೇಶ ಮತ್ತು ಸುರೇಶನಿಗೆ ಗುರುಗಳು ಏನೆಂದು ಹೇಳಿದರು?
2. ಸುರೇಶನು ಗುರುಗಳ ಮಾತನ್ನು ಹೇಗೆ ಹುಸಿಗೊಳಿಸಿದನು?
3. ಮಹೇಶನು ಏಕೆ ಬೇಸರಗೊಂಡನು?
4. ಈ ಕತೆಯಿಂದ ತಿಳಿದು ಬರುವ ನೀತಿ ಏನು?
XII. ಕೆಳಗಿನ ವಿಷಯವನ್ನು ಕುರಿತು ಹತ್ತು ವಾಕ್ಯಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ.                          01X 04=04
37. ಭ್ರಷ್ಟಾಚಾರ ನಿರ್ಮೂಲನೆ
           ಅಥವಾ
       ಕ್ರೀಡೆಗಳ ಮಹತ್ವ
XIII. ಕೆಳಗಿನ ಸೂಚನೆಗೆ ಅನುಗುಣವಾಗಿ ಪತ್ರವನ್ನು ಬರೆಯಿರಿ.                                                                              01X 05=05
38.ನಿಮ್ಮನ್ನು ಸದಾಶಿವ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಪೂಜಾ ಎಂದು ಭಾವಿಸಿಕೊಂಡು ಪ್ರತಿಭಾ ಕಾರಂಜಿಯಬಗೆಗೆ ತಿಳಿಸುತ್ತಾ ಶಿವಮೊಗ್ಗದ ವಿನೋಬ ನಗರ ನಿವಾಸಿಯಾದ ನಿಮ್ಮ ತಂದೆಯವರಿಗೆ ಒಂದು ಪತ್ರ ಬರೆಯಿರಿ.    
ಅಥವಾ
ನಿಮ್ಮನ್ನು ಹೊಸನಗರದ ನಿವಾಸಿ ಶ್ರೇಯ ಎಂದು ಭಾವಿಸಿಕೊಂಡು, ನಿಮ್ಮ ಬಡಾವಣೆಯಲ್ಲಿ ಗ್ರಂಥಾಲಯವನ್ನು ತೆರೆಯುವಂತೆ ಪುರಸಭಾ ಅಧ್ಯಕ್ಷರಿಗೆ ಒಂದು ಪತ್ರವನ್ನು ಬರೆಯಿರಿ.
**********************