Friday 25 November 2016

ವರ್ಷಕಾಲದ ಹರ್ಷ

ವರ್ಷವೈದರವರಗಕ್ಕರೆಯ ಸಕ್ಕರೆಯ ನುಡಿಗಳಿಂ ರಮಿಸು
ವರ್ಷ ಹದಿನೈದರವರಗೆ ಶಿಸ್ತಿನಲಿ ತಪ್ಪತಿದ್ದಿ ಬುದ್ದಿಕಲಿಸು
ವರ್ಷ ಹದಿನಾರುದಾಟೆ ಮಿತ್ರನಂದದಿ ಒಲವಿನಲಾದರಿಸು
ವರ್ಷಕಾಲದ ಹರ್ಷ ಮಕ್ಕಳೊಡನಾಗ ನಿನಗೆ ನನ ಕಂದ||                                                        

ಇತಿ ಮಿತಿ

ಇದೆಯಿತಿಮಿತಿಗಳೆಲ್ಲರೊಳೆಲ್ಲದರೊಳು
ಇದನರಿತು ನಡದರದುವೆ ಜಯದ ಹಾದಿ
ಇದನರಿಯದೊಡೆ ಕಾರ್ಪಣ್ಯ ಬಿಡದಲಾ
ಇದನೇ ಸಾರುತಿದೆ ಸೃಷ್ಟಿ ನನ ಕಂದ||