Sunday 15 November 2015

'ಬಲಿಯನಿತ್ತೊಡೆ ಮುನಿವೆಂ' ಪದ್ಯಭಾಗದ ಪ್ರಶ್ನೆಗಳು

ಬಲಿಯನಿತ್ತೊಡೆ ಮುನಿವೆಂ
-ಜನ್ನ
1. ಮಾರಿದತ್ತನು ಆಳುತ್ತಿದ್ದ ಪಟ್ಟಣ ಯಾವುದು?
2. ರಾಜಪುರವನ್ನು ಆಳುತ್ತಿದ್ದ ದೊರೆಯಾರು?
3. ರಾಜಪುರದಲ್ಲಿದ್ದ ದೇವಾಲಯಯಾವುದು?
4. ಚಂಡಮಾರಿಯ ಜಾತ್ರೆಯನ್ನು ಯಾವ ಮಾಸದಲ್ಲಿ ನಡೆಸುತ್ತಿದ್ದರು?
5. ಜಾತ್ರೆಯ ಸಮಯದಲ್ಲಿ ರಾಜಪುರಕ್ಕೆ ಬಂದಿದ್ದ ಮುನಿಗಳು ಯಾರು?
6. ಸುದತ್ತಚಾರ್ಯರ ಆಣತಿಯಂತೆ ರಾಜಪುರದಲ್ಲಿ ಬಿಕ್ಷೆಗೆ ಹೊರಟ್ಟಿದ್ದವರು ಯಾರು?
7. ಮಾನವರನ್ನು ಹಿಡಿದು ತರುವಂತೆ ಮಾರಿದತ್ತನು ಯಾರಿಗೆ ಆಜ್ಞಾಪಿಸಿದನು?
8. ರಾಜಪುರದ ತಳಾರ ಯಾರು?
9. ಮಾರಿದತ್ತನು ಬೆಕ್ಕಸಬೆರಗಾದುದೇಕೆ?
10. ಮಾರಿದತ್ತನು ಯಾರ ವೃತ್ತಾಂತವನ್ನು ತಿಳಿಯ ಬಯಸಿದನು? ಏಕೆ?
11. ಯಶೋಧರ ಯಾರು?
12. ಯಶೋಧರನ ತಂದೆ ತಾಯಿ ಯಾರು?
13. ಯಶೋಧರನ ಹೆಂಡತಿ ಯಾರು?
14. ಯಶೋಧರನ ಮಗ ಯಾರು?
15. ಯಶೋಧರನು ಖಿನ್ನನಾಗಲು ಕಾರಣವೇನು?
16. ಯಶೋಧರನು ತನ್ನ ಖಿನ್ನತೆಗೆ ತಾಯಿಗೆ ಕೊಟ್ಟಕಾರಣವೇನು?
17. ಅಮೃತಮತಿಯು ಯಾರಿಗೆ ಮನಸೋತಳು?
18. ಅಮೃತಮತಿಯು ಅಷ್ಟಾವಂಕನಿಗೆ ಮನಸೋತಿದ್ದೇಕೆ?
19. ಅಮೃತಮತಿಯು ಎಸಗಿದ ಹೇಯಕೃತ್ಯ ಯಾವುದು? ಅದರ ಪರಿಣಾಮವೇನಾಯಿತು?
20. ಯಶೋಧರನ ಸ್ವಪ್ನದೋಷ ನಿವಾರಣೆಗೆ ತಾಯಿಯು ಸೂಚಿಸಿದ ಸಲಹೆ ಏನು?
21. ಹಿಟ್ಟಿನ ಕೋಳಿಯನ್ನು ಬಲಿಕೊಡಲು ಯಶೋಧರನು ಒಪ್ಪಿದ್ದೇಕೆ?
22. ಹಿಟ್ಟಿನ ಕೋಳಿಯನ್ನು ಬಲಿಕೊಡಲು ನಿರ್ಧರಿಸಲು ಕಾರಣವೇನು?
23. ಹಿಟ್ಟಿನ ಕೋಳಿಯನ್ನು ಬಲಿಕೊಟ್ಟಿದ್ದರ ಪರಿಣಾಮವೇನಾಯಿತು?
24. ಯಶೋಧರನು, ಯಶೋಮತಿಗೆ ಪಟ್ಟವನ್ನು ಕಟ್ಟಲು ಕಾರಣವೇನು?
25. ಯಶೋಧರನು ತಪಸ್ಸಿಗೆ ಹೊರಡಲು ಅನುವಾದುದೇಕೆ?
26. ಅಮೃತಮತಿಯು ಗಂಡ ಮತ್ತು ಅತ್ತೆಯನ್ನು ಕೊಲ್ಲಲು ಕಾರಣವೇನು?
27. ಯಶೋಧರ ಮತ್ತು ಚಂದ್ರಮತಿಯರು ಅನೇಕ ಜನ್ಮಗಳನ್ನೆತ್ತಲು ಕಾರಣವೇನು?
28. ಯಶೋಧರ ಮತ್ತು ಚಂದ್ರಮತಿಯರು ಎತ್ತಿದ ಜನ್ಮಗಳಾವುವು?
29. ಕೋಳಿ-ಪಿಳ್ಳೆಗಳ ಜನ್ಮದಲ್ಲಿದ್ದ ಯಶೋಧರ ಮತ್ತು ಚಂದ್ರಮತಿಯರಿಗೆ ಉಪದೇಶ ಮಾಡಿದವರು ಯಾರು?
30. ಕೋಳಿ-ಪಿಳ್ಳೆಯ ರೂಪದಲ್ಲಿದ್ದ ಯಶೋಧರ ಮತ್ತು ಚಂದ್ರಮತಿಯರು ಆಚರಿಸಿದ ವ್ರತ ಯಾವುದು?
31. ಕೋಳಿ-ಪಿಳ್ಳೆಯ ರೂಪದಲ್ಲಿದ್ದ ಯಶೋಧರ ಮತ್ತು ಚಂದ್ರಮತಿಯರು ಯಾರ ಬಾಣಕ್ಕೆ ತುತ್ತಾದರು?
32. ಯಶೋಧರ ಮತ್ತು ಚಂದ್ರಮತಿಯರು ಯಾವ ಜನ್ನದಲ್ಲಿ ಸಮಾಧಿ ಮರಣವನ್ನು ಹೊಂದಿದರು?
33. ಅಭಯರುಚಿ ಮತ್ತು ಅಭಯಮತಿಯರ ತಂದೆ ತಾಯಿಯಾರು?
34. ಅಭಯರುಚಿ ಮತ್ತು ಅಭಯಮತಿಯರು ಯಶೋಮತಿ ಮತ್ತು ಕುಸುಮಾವಳಿಯರ ಮಕ್ಕಳಾಗಿ ಹುಟ್ಟಲು ಕಾರಣವೇನು?
35. ಅಭಯರುಚಿ ಮತ್ತು ಅಭಯಮತಿಯ ಗುರುಗಳು ಯಾರು?
36. ಅಭಯರುಚಿ ತಮ್ಮ ಜನ್ಮ ವೃತ್ತಾಂತವನ್ನು ಯಾರಿಗೆ ಹೇಳಿದನು? ಏಕೆ?
37. ಅಭಯರುಚಿಯ ತಂಗಿಯಾರು?
38. ಅಭಯರುಚಿಯ ತಲ್ಲಣಕ್ಕೆ ಕಾರಣವೇನು?
39. ಅಭಯರುಚಿಯು ತಮಗೆ ಸ್ವಲ್ಪವೂ ಭಯವಿಲ್ಲವೆಂದು ಹೇಳಲು ಕೊಟ್ಟ ಕಾರಣವೇನು?
40. ಮಾರಿದತ್ತನಿಗೆ ನರಕವು ಪ್ರಾಪ್ತವಾಗುವುದರಲ್ಲಿ ಸಂಶಯವೇ ಇಲ್ಲವೆಂದು ಅಭಯರುಚಿಯು ತಿಳಿಸಲು ಕಾರಣಗಳೇನು?
41. ಮಾರಿದತ್ತನು ಉದ್ವೇಗಕ್ಕೊಳಗಾಗಲು ಕಾರಣವೇನು?
42. ಚಂಡಮಾರಿಯು ಯಾರಿಗೆ ವಂದಿಸಿದಳು? ಏಕೆ?
43. ಚಂಡಮಾರಿಯು ಪ್ರತ್ಯಕ್ಷವಾಗಿ ಏನೆಂದು ಹೇಳಿದಳು?
44. ಜನರು ತನ್ನನ್ನು ಯಾವರೀತಿ ಪೂಜಿಸ ಬೇಕೆಂದು ಚಂಡಮಾರಿ ಬಯಸಿದಳು?
45. ಬಲಿಯನಿತ್ತೊಡೆ ಮನಿವೆನೆಂದು ಹೇಳಿದವರು ಯಾರು? ಯಾಕೆ?
46. ಚಂಡಮಾರಿ ಯಾರು? ಪ್ರಜೆಗಳು ಯಾವರೀತಿ ಅವಳನ್ನು ಪೂಜಿಸಬೇಕೆಂದು ಹೇಳಿದಳು?
47. ಮಾರಿದತ್ತನು ಬಲಿಕೊಡಲು ತಂದಿದ್ದ ಜೀವರಾಶಿಗಳನ್ನೆಲ್ಲಾ ಬಿಡುಗಡೆ ಮಾಡಿದ್ದೇಕೆ?
48. ಮಾರಿದತ್ತನ ತಂಗಿಯಾರು?
49. ಮಾರಿದತ್ತನ ತಂಗಿಯ ಮಕ್ಕಳು ಯಾರು?
50. ಮಾರಿದತ್ತನು ಯಾರನ್ನು ಮುದ್ದಿಸಿದನು? ಏಕೆ?
51. ಮಾರಿದತ್ತನು ಕಣ್ಣೀರು ಸುರಿಸಲು ಕಾರಣವೇನು?
52. ಮಾರಿದತ್ತನ ಮಗ ಯಾರು?
53. ಮಾರಿದತ್ತನು ಕುಸುಮದತ್ತನಿಗೆ ರಾಜಪದವಿಯನ್ನು ಕೊಡಲು ಕಾರಣವೇನು?
54. ಮಾರಿದತ್ತನು ದೀಕ್ಷೆಯನ್ನು ಪಡೆದದ್ದೇಕೆ?
55. ಉಗ್ರ ತಪಸ್ಸಿನ ನಂತರ ಮಾರಿದತ್ತನಿಗೆ ದೊರೆತ ಪದವಿ ಯಾವುದು?
56. ಮಾರಿದತ್ತನು ಮುರನೇ ದಿವದಲ್ಲಿ ಸ್ಥಾನವನ್ನು ಪಡೆದುದು ಹೇಗೆ?
57. ಮಾರಿದತ್ತನು ಯಾರನ್ನು ಮೂದಲಿಸುವಂತೆ ದೇವನಾದನು?
58. ಮಾರಿದತ್ತನ ಮನಃಪರಿವರ್ತನೆ ಮಾಡಿದವರು ಯಾರು?
59. ಅಭಯರುಚಿಯು ಮಾರಿದತ್ತನ ಮನಸ್ಸನ್ನು ಹೇಗೆ ಪರಿವರ್ತನೆ ಮಾಡಿದನು?
60. ಅಭಯರುಚಿಯ ಸೋದರಿಯಾರು?
61. ಅಭಯರುಚಿ ಮತ್ತು ಅಭಯಮತಿಯನ್ನು ಯಾರು ಸೆರೆಹಿಡಿದರು? ಏಕೆ?
62. ಅಭಯರುಚಿ ಮತ್ತು ಅಭಯಮತಿ ಸೆರೆಯಾದುದು ಯಾವಾಗ?
63. ‘ಬಲಿಯನಿತ್ತೊಡೆ ಮುನಿವೆಂ ಪದ್ಯದ ಆಕರ ಕಾವ್ಯ ಯಾವುದು?
64. ‘ಬಲಿಯನಿತ್ತೊಡೆ ಮುನಿವೆಂ ಪದ್ಯದ ಕರ್ತೃಯಾರು?
65. ಸಂಕಲ್ಪ ಹಿಂಸೆಎಂದರೇನು?
66. ಕಲಿಪುರುಷ ಯಾರು?
67. ಯಶೋಧರ ಚರಿತೆಯು ಯಾವ ಛಂದಸ್ಸಿನಲ್ಲದೆ?
68. ಜನ್ನನಿಗೆಕವಿಚಕ್ರವರ್ತಿಯೆಂಬ ಬಿರುದನ್ನು ನೀಡಿದವರು ಯಾರು?
69. ಜನ್ನನ ಕೃತಿಗಳಾವುವು?
70. ಜನ್ನನ ಕಾಲವನ್ನು ತಿಳಿಸಿರಿ.
71. ಜನ್ನನ್ನು ಯಾರ ಆಸ್ಥಾನದಲ್ಲಿ ದಂಡಾಧಿಪತಿಯಾಗಿದ್ದನು?
72. ಜನ್ನನ್ನು ತನ್ನ ಕಾವ್ಯದಲ್ಲಿ ಯಾವ ಸಂದೇಶವನ್ನು ನೀಡಿದ್ದಾನೆ?
****************

No comments:

Post a Comment