Tuesday 10 November 2015

ಹತ್ತನೆಯ ತರಗತಿ ಮಾದರಿ ಪ್ರಶ್ನೆ ಪತ್ರಿಕೆ

ಹತ್ತನೆಯ ತರಗತಿ ಮಾದರಿ ಪ್ರಶ್ನೆ ಪತ್ರಿಕೆ
ಕನ್ನಡ ತೃತೀಯ ಭಾಷೆ
ಗರಿಷ್ಠ ಅಂಕ : 80                                                                     ಪರಮಾವಧಿ : 2-30 ಗಂಟೆಗಳು
ಸೂಚನೆಗಳು :
  ಪ್ರಶ್ನೆ ಪತ್ರಿಕೆಯು , ಬಿ ಮತ್ತು ಸಿ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.
  ವಿಭಾಗ ` ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
  ವಿಭಾಗ `ಬಿ ಅನ್ವಯಿಕ ವ್ಯಾಕರಣ, ಅಲಂಕಾರ, ಛಂದಸ್ಸು 12 ಅಂಕಗಳು
  ವಿಭಾಗ `ಸಿ ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 15 ಅಂಕಗಳು
  ಉತ್ತರಗಳು ನೇರವೂ, ಸ್ಪಷ್ಟವೂ ಆಗಿದ್ದು, ಅಂಕಗಳಿಗೆ ತಕ್ಕಂತೆ ವಿಸ್ತಾರವಿರಲಿ.
  ವಸ್ತುನಿಷ್ಠ ಪ್ರಶ್ನೆಗಳಿಗೆ, ಹೊಡೆದು, ಅಳಿಸಿ, ಕೆರೆದು ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
  ಪೆನ್ಸಿಲ್ ಬಳಸಿ ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
  ಪ್ರತಿ ಪ್ರಶ್ನೆಗೂ ಉತ್ತರಕ್ಕಾಗಿ ಮೀಸಲಿಟ್ಟ ಜಾಗದಲ್ಲೇ ಉತ್ತರ ಬರೆಯುವುದು.
ಭಾಗ - `
ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಒಂದೊಂದೇ ವಾಕ್ಯದ ಉತ್ತರವನ್ನು ಬರೆಯಿರಿ.            10X1=10
1.   ರಾಜರತ್ನಂರವರು ಹೇಳಿರುವಂತೆ ಎಲ್ಲರೂ ಮೆಚ್ಚಲೇ ಬೇಕಾದ ಕನ್ನಡ ನಾಡಿನವರ ಎರಡನೆಯ ವಿಶಿಷ್ಷ ಗುಣ ಯಾವುದು?
2.  ಜಿಮ್ ಲೇಕರ್ ಅವರ ಸಾಧನೆ ಏನು?
3.  ‘ಅನಿಲ್ ಕುಂಬ್ಳೆ ವೃತ್ತ ಯಾವ ರಸ್ತೆಯಲ್ಲಿದೆ?
4.  ನಾ. ಕಸ್ತೂರಿಯವರು ಕಟ್ಟಿದ ಯಾವುದಾದರೂ ಒಂದು ನವೀನ ಗಾದೆಯನ್ನು ಬರೆಯಿರಿ.
5.  ಬಾಗ್ದಾದಿನ ದೊರೆ ಷಾ ಅವರು ಅಬ್ಬಾಸ್ ಪ್ರವಾಸಿ ಪಿತ್ರೋಗೆ ಏನೆಂದು ಹೇಳಿದ್ದರು?
6.  ಹನುಮನಂತೆ ವಿಕಾಸಗೊಳ್ಳುವುದು ಯಾವಾಗ ಎಂದು ಲಕ್ಷ್ಮಣರಾವ್ ಹೇಳಿದ್ದಾರೆ?
7.  ಅಂಬಿಗರ ಚೌಡಯ್ಯನು ತಾನು ಯಾರನ್ನು ಕಂಡಿಲ್ಲವೆಂದು ಹೇಳಿದ್ದಾನೆ?
8.  ಪರಮಾತ್ಮನು ಯಾರ ಸಂಗವನ್ನು ಮಾಡುವುದಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ?
9.  ಮಹಾಶಿಲ್ಪಿ ವಿಶುವುಇವನು ನಾನು ಬಿಟ್ಟು ಬಂದ ನನ್ನ ಮಗನಲ್ಲವೆಂದು ಯೋಚಿಸಿದ್ದೇಕೆ?
10. ಪುಲಿಗೆರೆ ಸೋಮನಾಥನು ಭಟ ಮತ್ತು ನಂಟರ ಬಗೆಗೆ ಆಡಿರುವ ಮಾತುಗಳನ್ನು ತಿಳಿಸಿರಿ.
ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳ ಉತ್ತರಗಳನ್ನು ಬರೆಯಿರಿ.  10X2=20
11.  ಕನ್ನಡನಾಡನ್ನುವಸುಧಾವಳಯ ಎಂದು ಕರೆಯಲು ಕಾರಣವೇನು?
12. ಅನಿಲ್ ಕುಂಬ್ಳೆಯವರ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಕುರಿತು ಬರೆಯಿರಿ.
13. ಭಾರತೀಯರೆಲ್ಲರೂ ಮೆಚ್ಚಲೇ ಬೇಕಾದ ತುಳಜಾಬಾಯಿಯ ಗುಣ ಸ್ವಭಾವವನ್ನು ಕುರಿತು ಬರೆಯಿರಿ.
14. ರಾಣಿ ಅಬ್ಬಕ್ಕದೇವಿಯ ಸೈನಿಕರು ಪೋರ್ಚುಗೀಸ್ ಸೇನಾಪತಿಗಳನ್ನು ಓಡಿಸಿದ್ದು ಹೇಗೆ?
15. ಕಿತ್ತೂರು ರಾಣಿ ಚೆನ್ನಮ್ಮನ ವಿರುದ್ಧ ಮಾಡಿದ ಪಿತೂರಿಯನ್ನು ಕುರಿತು ಬರೆಯಿರಿ.
16. ಚೆನ್ನವೀರ ಕಣವಿಯವರು ಕೋಗಿಲೆಯನ್ನು ಏನೆಂದು ಕೋರಿದ್ದಾರೆ?
17.  ಕೂಜನವನ್ನು ಕೇಳಿದೊಡನೆಯೇ ಆಗುವ ಬದಲಾವಣೆಗಳಾವುವು?
18. ಸ್ವಾತಿಮಳೆಯನ್ನು ಜನಪದರು ಹೇಗೆ ವರ್ಣಿಸಿದ್ದಾರೆ?
19. ಜನಪದರು ಮಳೆರಾಯನನ್ನು ಏನೆಂದು ಪ್ರಾರ್ಥಿಸುತ್ತಿದ್ದಾರೆ?
20. ಈರಪ್ಪ ಕಂಬಳಿಯವರು ವರ್ಣಿಸಿರುವ ಟಾಪ್ ಮೇಲಿನ ಪ್ರಯಾಣದ ವೇಳೆ ಹೃದಯವೇ ಕಿತ್ತು ಬಾಯಿಗೆ ಬಂದಂತಾದ ಸಂದರ್ಭವನ್ನು ವಿವರಿಸಿ.
ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಸಹಿತ ಸ್ವಾರಸ್ಯವನ್ನು ವಾಕ್ಯಗಳಲ್ಲಿ ಬರೆಯಿರಿ.     2X3=6
21. “ನಾನ್ಯಾಕೆ ಬಡವನೋ, ನಾನ್ಯಾಕೆ ಪರದೇಶಿ?”
22. “ಉಡಲಾದರೆ ಇಡುವ ಚಿಂತೆ 
ಸಾಹಿತಿಗಳ ಸ್ಥಳ, ಕಾಲ, ಕೃತಿಗಳನ್ನು ವಾಕ್ಯಗಳಲ್ಲಿ ಬರೆಯಿರಿ.                   2X3=6
23. ಶಾಮ್ ರೋಹಿಡೆ.
24. ಪುರಂದರ ದಾಸರು.
ಕೆಳಗಿನ ಪದ್ಯಭಾಗವನ್ನು ಪೂರ್ಣಮಾಡಿರಿ.                                    1X3=3
25.         ಅಕ್ಷರ__________________ 
_________ಮಾಯಾ____ ___
________________ನಿನಗೆ______
__________________ರೂಪ
ಅಥವಾ
ದೀಪ____ ____________
_________ಶಕ್ತ________
___________ನೀ ________
_________________ಸಮಸ್ತ
ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳ ಉತ್ತರಗಳನ್ನು ಬರೆಯಿರಿ.       2X4=8
26.  ಗೊರೂರರು ಮಿನಿಪೊಲೀಸ್ ನಗರದಲ್ಲಿ ಎದುರಿಸಿದ ಸಮಸ್ಯೆ ಮತ್ತು ಅದರಿಂದ ಅವರು ಪಾರಾದುದನ್ನು ನಿಮ್ಮ ಮಾತುಗಳಲ್ಲಿ ವಿವರಿಸಿರಿ.
ಅಥವಾ
ಗೊರೂರರು ಒಂದುದಿನ ರಾತ್ರಿ ಲಾಕಪ್ಪಿನಲ್ಲಿ ಕಳೆಯ ಬೇಕಾಗಿ ಬಂದ ಸನ್ನಿವೇಶವನ್ನು ನಿಮ್ಮ ಮಾತುಗಳಲ್ಲಿ ವಿವರಿಸಿರಿ.

27.  ‘ಮನುಜ ಜಾತಿ ತಾನೊಂದೆ ವಲಂ ಎಂಬ ಭಾವನೆಒಂದೇ ಕವನದಲ್ಲಿ ಹೇಗೆ ವ್ಯಕ್ತವಾಗಿದೆ? ನಿಮ್ಮ ಮಾತುಗಳಲ್ಲಿ ವರ್ಣಿಸಿರಿ.
ಅಥವಾ
ಭೂಮಿತಾಯಿಯ ಕುಡಿಗಳಾದ ನಾವೆಲ್ಲರೂ ಒಂದೇ ಎಂಬ ಭಾವನೆ ನಿಸಾರ್ ಅಹಮದ್ ರವರ ಕವನದಲ್ಲಿ ಹೇಗೆ ವ್ಯಕ್ತವಾಗಿದೆ? ನಿಮ್ಮ ಮಾತುಗಳಲ್ಲಿ ವರ್ಣಿಸಿರಿ.
ಭಾಗ - `ಬಿ
ಅನ್ವಯಿಕ ವ್ಯಾಕರಣ 12 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕೊಟ್ಟಿರುವ ಜಾಗದಲ್ಲಿಯೇ ಕ್ರಮಾಕ್ಷರದೊಂದಿಗೆ ಉತ್ತರವನ್ನು ಬರೆಯಿರಿ.      12X1=12
28.  ‘ ಅಕ್ಷರವು ಕನ್ನಡ ವರ್ಣಮಾಲೆಯಲ್ಲಿ:
() ಅವರ್ಗೀಯ ವ್ಯಂಜನ      (ಸಿ)ಯೋಗವಾಹ
(ಬಿ) ಅನುನಾಸಿಕ      (ಡಿ) ಅನುಸ್ವಾರ 
29.  ‘ಅತ್ಯಂತಇಲ್ಲಿ ಆಗಿರುವ ಸಂಧಿ:
() ಯಣ್    (ಸಿ) ಶ್ಚುತ್ವ
(ಬಿ) ವೃದ್ಧಿ     (ಡಿ) ಜಸ್ತ್ವ
30.  ನಾನು ಸಾಮಾನ್ಯವಾಗಿ ಓದುವುದು ರಾತ್ರಿ ವೇಳೆಯಲ್ಲಿ. ವಾಕ್ಯದಲ್ಲಿರುವಸರ್ವನಾಮ:
() ನಾನು   (ಸಿ) ಓದು
(ಬಿ)ಸಾಮಾನ್ಯ         (ಡಿ) ವೇಳೆ
31.   ‘ರಾಜ ಪದದ ತದ್ಭವ ರೂಪ:
() ಅರಸ   (ಸಿ) ರಾಯ
(ಬಿ) ರಾಜನ್ (ಡಿ) ದೊರೆ
32.  ‘ಶಾಲೆಯೇ ದೇವಾಲಯ-ಇಲ್ಲಿರುವ ಅಲಂಕಾರ :
() ರೂಪಕ  (ಸಿ) ದೃಷ್ಟಾಂತ
(ಬಿ) ಉಪಮಾ         (ಡಿ) ಶ್ಲೇಷ
33.  ಸತ್ಯ ಪದದ ವಿರುದ್ಧಾರ್ಥ ರೂಪ :
() ದಿಟ     (ಸಿ) ಅಸತ್ಯ
(ಬಿ) ನಿತ್ಯ     (ಡಿ) ನಿಜ
34.  ಕವಿ ಪದದ ಅನ್ಯಲಿಂಗ:
() ಕವಯಿತ್ರಿ         (ಸಿ) ಕವಿಯಿತ್ರಿ
(ಬಿ) ಕಬ್ಬಗಿತ್ತಿ (ಡಿ) ಕವಯತ್ರಿ
35.  ಸಪ್ತಮೀ ವಿಭಕ್ತಿ ಪ್ರತ್ಯಯ :
() ಇಂದ    (ಸಿ) ದೆಸೆಯಿಂದ
(ಬಿ)        (ಡಿ) ಅಲ್ಲಿ
36.  ನಗರಗಳಲ್ಲಿ ಈಚೆಗೆ ಟ್ರಾಫಿಕ್ ಜಾಮ್ ನಿರಂತರವಾಗಿ ಹೆಚ್ಚುತ್ತಿದೆ : ವಾಕ್ಯದಲ್ಲಿರುವ ಅನ್ಯದೇಶ್ಯಪದ
() ನಗರಗಳಲ್ಲಿ       (ಸಿ) ಟ್ರಾಫಿಕ್ ಜಾಮ್
(ಬಿ) ಈಚೆಗೆ   (ಡಿ) ನಿರಂತರವಾಗಿ
37.  ರಾಮಸಿಂಗ್ ಧಮನಿಧಮನಿಯಲ್ಲ್ಲೂ ದೇಶಭಕ್ತಿ ತುಂಬಿ ತುಳುಕುತ್ತಿತ್ತು: - ವಾಕ್ಯದಲ್ಲಿರುವ ದ್ವಿರುಕ್ತಿ ಪದ
() ರಾಮಸಿಂಗ್      (ಸಿ) ದೇಶಭಕ್ತಿ
(ಬಿ) ಧಮನಿಧಮನಿ    (ಡಿ) ತುಂಬಿ ತುಳುಕು
38.  ಅನುಕರಣಾವ್ಯಯಕ್ಕೆ ಉದಾಹಣೆಯಾದ ಪದ:
() ಕಣಕಣ  (ಸಿ) ಹಿಂದೆ ಮುಂದೆ ನೋಡು
(ಬಿ) ಝಳಝಳ        (ಡಿ) ಮನೆಮಠ
39.  ಕೆಳಗಿನ ಪದಗಳಲ್ಲಿಗಳು ಪ್ರತ್ಯಯ ಸೇರಿ ಬಹುವಚನವಾಗುವ ಪದ:
() ತಾಯಿ   (ಸಿ) ಹುಡುಗ
(ಬಿ) ಮಗು    (ಡಿ) ರಾಜ್ಯ
ಭಾಗ - `ಸಿ
ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 15 ಅಂಕಗಳು
40.  ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ಸ್ವಾರಸ್ಯ ಸಹಿತ ವಿಸ್ತರಿಸಿ ಬರೆಯಿರಿ.    1X3=3
    ಕತ್ತೆಗೆ ಏನು ಗೊತ್ತು ಕಸ್ತೂರಿ ಪರಿಮಳ
    ಆಡಿಉಂಡ ಮೈ ಅಟ್ಟಿ ಉಂಡೀತೇ.
    ಕಷ್ಟಪಟ್ಟರೆ ಫಲವುಂಟು.
41.   ಬೀರೂರಿನ ಖರೀದಿ ಲಿಂಗಪ್ಪ ಕಮಲಮ್ಮ ಸ್ಮಾರಕ ಪ್ರೌಢಶಾಲೆಯಲ್ಲಿ ಓದುತ್ತಿರುವ ರಮಾಮಣಿ / ದಿವಾಕರ್ ಎಂದು ಭಾವಿಸಿ, ನಿಮ್ಮ ಶಾಲೆಯಲ್ಲಿ ನಡೆದ ಶಾಲಾವಾರ್ಷಿಕೋತ್ಸವದ ವೈಭವವನ್ನು ವರ್ಣಿಸುತ್ತಾ ನಿಮ್ಮ ಗೆಳತಿ/ಗೆಳೆಯ ಚಲುವಾಂಬ/ಜಗನ್ನಾಥ್ಗೆ ಒಂದು ಪತ್ರ ಬರೆಯಿರಿ.

ಅಥವಾ
ಅರಳಿಕಟ್ಟೆ ಸರ್ಕಾರಿ ಪ್ರೌಢಶಾಲೆಯ 10ನೆಯ ತರಗತಿ ವಿಭಾಗದಲ್ಲಿ ಓದುತ್ತಿರುವ ನೀನು ಸಮನ್ಯು / ಪ್ರತೀಕ್ಷಾ ಎಂದು ಭಾವಿಸಿ ದೂರದರ್ಶನ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ಬೆಂಗಳೂರಿನ ದೂರದರ್ಶನ ಕೇಂದ್ರಕ್ಕೆ ಹೋಗಬೇಕಾಗಿರುವುದರಿಂದ ಎರಡುದಿನ ರಜೆಯನ್ನು ಕೊಡುವಂತೆ ಕೋರಿ ಮುಖ್ಯೋಪಾಧ್ಯಾಯರಿಗೆ  ಒಂದು ರಜಾ ಅರ್ಜಿಯನ್ನು ಬರೆಯಿರಿ.                                  1X4=4
42.  ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ಹತ್ತು ವಾಕ್ಯಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ.                                      1X4=4
    ನೀವು ಕೈಗೊಂಡ ಪ್ರವಾಸದ ಅನುಭವ.
    ರಾಷ್ಟ್ರೀಯ ಹಬ್ಬಗಳು
    ವಾಚನಾಲಯದಿಂದಾಗುವ ಪ್ರಯೋಜನಗಳು.
ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.        1X4=4
      ಕನ್ನಡದ ಪ್ರಖ್ಯಾತ ಕವಿಗಳಲ್ಲೊಬ್ಬರಾದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಪೂರ್ಣ ಹೆಸರು ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ. 1926 ಫೆಬ್ರವರಿ 7ನೆಯ ತಾರೀಖು ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಸಮೀಪವಿರುವ ಈಸೂರು ಗ್ರಾಮದಲ್ಲಿ ಜನಿಸಿದರು. ವಿಮರ್ಶಕರೂ, ಸಂಶೋಧಕರೂ, ನಾಟಕಕಾರರೂ, ಉತ್ತಮ ಪ್ರಾಧ್ಯಾಪಕರೂ ಮತ್ತು ಒಳ್ಳೆಯ ಆಡಳಿತಗಾರರೂ ಆಗಿದ್ದರು. ಇವರನ್ನು 2006 ನವೆಂಬರ್  1 ನೆಯ ತಾರೀಖು  ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ರಾಷ್ಟ್ರಕವಿ ಎಂದು ಘೋಷಿಸಿ ಗೌರವಿಸಲಾಯಿತು. ಗೋವಿಂದ ಪೈ ಮತ್ತು ಕುವೆಂಪುರವರ ನಂತರ ಗೌರವಕ್ಕೆ ಜಿ.ಎಸ್.ಎಸ್ರವರು ಭಾಜನರಾಗಿದ್ದಾರೆ.
ಪ್ರಶ್ನೆಗಳು:
43.  ಶಿವರುದ್ರಪ್ಪನವರ ಪೂರ್ಣ ಹೆಸರೇನು?
44.  ಶಿವರುದ್ರಪ್ಪನವರು ಎಲ್ಲಿ ಜನಿಸಿದರು?
45.  ಯಾವ ದಿನದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು?
46.  ರಾಷ್ಟ್ರಕವಿ ಎಂಬ ಕೀರ್ತಿಗೆ ಭಾಜನರಾದ ಕನ್ನಡದ ಕವಿಗಳು ಯಾರು ಯಾರು?

***************

No comments:

Post a Comment