Wednesday 18 November 2015

ಜನಪ್ರಿಯ ಗಾದೆಗಳು

1)     ಅಟ್ಟಕ್ಕೆ ಹಾರದವ ಬೆಟ್ಟಕ್ಕೆ ಹಾರುವನೇ?
2)   ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
3)   ಅತಿಯಾಸೆ ಗತಿಗೇಡು
4)   ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.
5)   ಅಲ್ಪರ ಸಂಗ; ಅಭಿಮಾನ ಭಂಗ
6)   ಆಕಳು ಕಪ್ಪಾದರೆ ಹಾಲು ಕಪ್ಪೆ.
7)   ಆಚಾರವೇ ಸ್ವರ್ಗ; ಅನಾಚಾರವೇ ನರಕ
8)   ಆಡಿ ಉಂಡ ಮೈ ಅಟ್ಟಿ ಉಂಡೀತೇ
9)   ಆತುರಗಾರನಿಗೆ ಬುದ್ಧಿ ಮಟ್ಟ.
10)  ಆಪತ್ತಿಗಾದವನೇ ನೆ೦ಟ.
11)    ಆಳಾಗ ಬಲ್ಲವನು ಅರಸಾಗಿ ಆಳಬಲ್ಲ.
12)  ಆಳಾಗಿ ದುಡಿಯುವವ ಅರಸಾಗಿ ಉಣ್ಣುವನು
13)  ಇಬ್ಬರ ಜಗಳ ಮೂರನೆಯವರಿಗೆ ಲಾಭ
14)  ಇರುಳು ಕ೦ಡ ಭಾವೀಲಿ ಹಗಲು ಬಿದ್ದರ೦ತೆ.
15)  ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?
16)  ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.
17)  ಉಪ್ಪು ತಿಂದವ ನೀರು ಕುಡಿಯಲೇ ಬೇಕು
18)  ಉಪ್ಪು ತಿ೦ದ ಮನೆಗೆ ಎರಡು ಬಗೆಯ ಬೇಡ.
19)  ಊಟಬಲ್ಲವನಿಗೆ ರೋಗವಿಲ್ಲ , ಮಾತು ಬಲ್ಲವನಿಗೆ ಜಗಳವಿಲ್ಲ.
20)ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಎಳೆದರ೦ತೆ.
21)  ಐದು ಬೆರಳು ಒ೦ದೇ ಸಮ ಇದುವುದಿಲ್ಲ.
22)ಒ೦ದು ಕಣ್ಣಿಗೆ ಬೆಣ್ಣೆ, ಇನ್ನೊ೦ದು ಕಣ್ಣಿಗೆ ಸುಣ್ಣ.
23)ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.
24)ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.
25)ಕಟ್ಟುವುದು ಕಠಿಣ ಕೆಡವುವುದು ಸುಲಭ
26)ಕಣ್ಣರಿಯದಿದ್ದರೂ ಕರುಳರಿಯುತ್ತದೆ.
27) ಕತ್ತೆಗೆ ಏನು ಗೊತ್ತು ಕಸ್ತೂರಿ ಪರಿಮಳ.
28)ಕನ್ನಡಿ ಒಳಗಿನ ಗ೦ಟು ಕೈಗೆ ದಕ್ಕೀತೆ ?
29)ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
30)ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ.
31)  ಕಷ್ಟಪಟ್ಟರೆ ಫಲವುಂಟು.
32)ಕಾಯಕವೇ ಕೈಲಾಸ.
33)ಕಾಸಿಗೆ ತಕ್ಕ ಕಜ್ಜಾಯ
34)ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
35)ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.
36)ಕೂಸು ಹುಟ್ಟುವ ಮು೦ಚೆ ಕುಲಾವಿ
37) ಕೆಟ್ಟ ಮೇಲೆ ಬುದ್ಧಿ ಬ೦ತು,ಅಟ್ಟ ಮೇಲೆ ಒಲೆ ಉರಿಯಿತು.
38)ಕೈ ಕೆಸರಾದರೆ ಬಾಯಿ ಮೊಸರು
39)ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದಯ ಪರರಿಗೆ.
40)ಕೋಪದಲ್ಲಿ ಕೊಯ್ದಮೂಗು ಮತ್ತೆ ಹತ್ತೀತೆ?
41)  ಗಾಳಿ ಬ೦ದಾಗ ತೂರಿಕೋ.
42)ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
43)ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.
44)ಗೆದ್ದೆತ್ತಿನ ಬಾಲ ಹಿಡಿದ ಹಾಗೆ.
45)ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ
46)ಚಿಂತೆಯೇ ಮುಪ್ಪು; ಸಂತೋಷವೇ ಯೌವ್ವನ
47) ಜಾಣನಿಗೆ ಮಾತಿನ ಪೆಟ್ಟು ; ದಡ್ಡನಿಗೆ ದೊಣ್ಣೆಯ ಪೆಟ್ಟು
48)ತಾಯಿಗಿಂತ ಬಂಧುವಿಲ್ಲ; ರುಪ್ಪಿಗಿಂತ ರುಚಿಯಿಲ್ಲ
49)ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.
50)ತಾಳಿದವನು ಬಾಳಿಯಾನು
51)  ತು೦ಬಿದ ಕೊಡ ತುಳುಕುವುದಿಲ್ಲ.
52)ತೋಳ ಬಿದ್ದರೆ ಆಳಿಗೊ೦ದು ಕಲ್ಲು.
53)ದುಡ್ಡಿದ್ದವನೇ ದೊಡ್ಡಪ್ಪ
54)ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
55)ದೇಶ ಸುತ್ತಿ ನೋಡು ಕೋಶ ಓದಿ ನೋಡು
56)ನಾಯಿ ಬಾಲ ಎ೦ದಿಗೂ ಡೊ೦ಕು.
57) ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು.
58)ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.
59)ಬರಗಾಲದಲ್ಲಿ ಅಧಿಕ ಮಾಸ.
60)ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು
61)  ಬೆಕ್ಕಿಗೆ ಚೆಲ್ಲಾಟ; ಇಲಿಗೆ ಪ್ರಾಣ ಸಂಕಟ
62)ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
63)ಬೆಳ್ಳಗಿರುವುದೆಲ್ಲಾ ಹಾಲಲ್ಲ; ಹೊಳೆಯುವುದೆಲ್ಲಾ ಚಿನ್ನವಲ್ಲ.
64)ಬೆಳೆಯುವ ಸಿರಿ ಮೊಳಕೆಯಲ್ಲಿ
65)ಮನಸ್ಸಿದ್ದರೆ ಮಾರ್ಗ
66)ಮನೆಗೆ ಮಾರಿ; ಪರರಿಗೆ ಉಪಕಾರಿ.
67) ಮಾಡಿದ್ದುಣ್ಣೋ ಮಹರಾಯ
68)ಮಾತು ಬೆಳ್ಳಿ ; ಮೌನ ಬಂಗಾರ
69)ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು
70) ಮಾತೇ ಮುತ್ತು; ಮಾತೇ ಮೃತ್ಯು.
71)  ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
72) ಶಕ್ತಿಗಿಂತ ಯುಕ್ತಿ ಮೇಲು
73) ಸ೦ಕಟ ಬ೦ದಾಗ ವೆ೦ಕಟರಮಣ.\
74) ಸಜ್ದನರ ಸಂಘವು ಹೆಜ್ಜೇನು ಸವಿದಂತೆ
75) ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ.
76) ಹನಿಹನಿಗೂಡಿದರೆ ಹಳ್ಳ; ತೆನೆತೆನೆಗೂಡಿದರೆ ಬಳ್ಳ
77) ಹಾಸಿಗೆ ಇದ್ದಷ್ಟು ಕಾಲು ಚಾಚು
78) ಹುಟ್ಟುತ್ತಾ ಅಣ್ಣ ತಮ್ಮಂದಿರು; ಬೆಳೆಯುತ್ತಾ ದಾಯಾದಿಗಳು
79) ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲು

2 comments:

  1. give even explaination also not only
    ಗಾದೆ

    ReplyDelete
  2. Give the explanation for all so that it is more helpful

    ReplyDelete