Thursday 26 November 2015

ವೈಜ್ಞಾನಿಕ ಸಾಧನಗಳ ಹೆಸರುಗಳು

 ಸಾಧನಗಳ ಹೆಸರು     :             ಉಪಕರಣಗಳ ಉಪಯೋಗಗಳು
ಅನಿಮಾಮೀಟರ್         :          ಗಾಳಿಯ ವೇಗವನ್ನು ಅಳೆಯುವ ಸಾಧನ.
ಅಲ್ಟಿಮೀಟರ್              :           ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ.
ಆಡಿಯೋಮೀಟರ್        :           ಶಬ್ದದ ತೀವ್ರತೆಯನ್ನು ಅಳೆಯುವ ಸಾಧನ.
ಓಡೋಮೀಟರ್           :           ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ.
ಕಂಪಾಸ್                   :           ಹಡಗಿನ ದಿಕ್ಕನ್ನು ಸೂಚಿಸುವ ಸಾಧನ.
ಕ್ಯಾಲೋರಿ                  :          ಶಾಖವನ್ನು ಅಳೆಯುವ ಸಾಧನ.
ಕ್ರೋನೋಮೀಟರ್        :          ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ.
ಗ್ಯಾಲ್ವನೋಮೀಟರ್      :          ಕಡಿಮೆ ವಿದ್ಯುತ್ ಅಳೆಯುವ ಸಾಧನ.
ಗ್ರಾಫಿಮೀಟರ್             :          ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ.
ಥರ್ಮೋಕೊಪಲ್          :          ಸಣ್ಣ ಉಷ್ಣತೆಯನ್ನು ಅಳೆಯುವ ಸಾಧನ.
ಪ್ಯಾಥೋಮೀಟರ್         :          ಸಮುದ್ರದ ಆಳವನ್ನು ಅಳೆಯುವ ಸಾಧನ.
ಪೈರೋಮೀಟರ್          :          ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ.
ಬ್ಯಾರೋಮೀಟರ್         :          ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ.
ಬೈನಾಕ್ಯೂಲರ್            :          ದೂರದಲ್ಲಿರುವ ವಸ್ತುಗಳನ್ನು ಹತ್ತಿರದಲ್ಲಿ ನೋಡಲು ಬಳಸುವ ಸಾಧನ.
ಬ್ಯಾರೋಗ್ರಾಫ್            :          ನಿರಂತರ ವಾಯುವಿನ ಒತ್ತಡವನ್ನು ಅಳೆಯುವ ಸಾಧನ.
ಮೈಕ್ರೋಮೀಟರ್         :          ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ.
ಮೈಕ್ರೋಸ್ಕೋಪ್         :          ಸಣ್ಣ ವಸ್ತುಗಳನ್ನು ದೊಡ್ಡದಾಗಿ ಅವಲೋಕಿಸುವ ಸಾಧನ
ಮೋನೋಮೀಟರ್        :          ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ.
ರಿಕ್ಟರ್ ಮಾಪಕ            :          ಭೂಕಂಪನದ ತೀವ್ರತೆಯನ್ನು ಅಳೆಯುವ ಸಾಧನ.
ರೆಡಿಯೋಮೀಟರ್        :          ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ.
ರೇಡಾರ್                   :          ರೇಡಿಯೊ ತರಂಗಗಳನ್ನು ಉಪಯೋಗಿಸಿ ದೂರದ ವಸ್ತುಗಳನ್ನು ಪತ್ತೆ ಮಾಡುವ
                       ಮತ್ತು ಅದರ ದೂರವನ್ನು ನಿಖರವಾಗಿ ಕಂಡು ಹಿಡಿಯಲು ಉಪಯೋಗಿಸುವ ಸಾಧನ.
ರೈನ್ ಗೇಜ್                :         ಬಿದ್ದ ಮಳೆಯನ್ನು ಅಳೆಯುವ ಸಾಧನ.
ಲ್ಯಾಕ್ಟೊಮೀಟರ್          :          ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ.
ವೋಲ್ಟಾಮೀಟರ್          :         ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ.
ಸ್ಪೀಡೋಮೀಟರ್         :          ವಾಹನಗಳ ವೇಗವನ್ನು ಅಳೆಯುವ ಸಾಧನ.
ಸ್ಟೆತೋಸ್ಕೋಪ್           :          ಹೃದಯ ಬಡಿತವನ್ನು ಅಳೆಯುವ ಸಾಧನ.
ಸೋನಾರ್                 :          ಶೃವಣಾತೀತ ಧ್ವನಿಯನ್ನು ಉಪಯೋಗಿಸಿ ನೀರಿನೊಳಗಿನ ವಸ್ತುಗಳನ್ನು
                                      ಪತ್ತೆ ಹಚ್ಚಲು ಬಳಸುವ ಸಾಧನ.
ಹೈಡ್ರೋಮೀಟರ್         :          ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ.

No comments:

Post a Comment