Friday 6 November 2015

10ನೆಯ ತರಗತಿ ಮಾದರಿ ಪತ್ರಿಕೆ

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಮಲ್ಲೇಶ್ವರಂ, ಬೆಂಗಳೂರು-03.
ಕನ್ನಡ ಪ್ರಥಮ ಭಾಷೆ
10ನೆಯ ತರಗತಿ ಮಾದರಿ ಪತ್ರಿಕೆ
ಗರಿಷ್ಟಾಂಕ : 100                                                                                  ಅವಧಿ : 3 ಗಂಟೆಗಳು
ಸೂಚನೆಗಳು :
•       ಪ್ರಶ್ನೆ ಪತ್ರಿಕೆಯು , ಬಿ ಮತ್ತು ಸಿ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.
•       ವಿಭಾಗ `ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 67 ಅಂಕಗಳು
•       ವಿಭಾಗ `ಬಿಅನ್ವಯಿಕ ವ್ಯಾಕರಣ, ಅಲಂಕಾರ, ಛಂದಸ್ಸು 20 ಅಂಕಗಳು
•       ವಿಭಾಗ `ಸಿವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 13 ಅಂಕಗಳು
•       ಸೂಚನೆಯನ್ನು ಅನುಸರಿಸಿ ಉತ್ತರಗಳನ್ನು ಬರೆಯಿರಿ.
•       ಉತ್ತರಗಳು ನೇರವೂ, ಸ್ಪಷ್ಟವೂ ಆಗಿದ್ದು, ಅಂಕಗಳಿಗೆ ತಕ್ಕಂತೆ ವಿಸ್ತಾರವಿರಲಿ.
•       ವಸ್ತುನಿಷ್ಠ ಪ್ರಶ್ನೆಗಳಿಗೆ, ಹೊಡೆದು, ಅಳಿಸಿ, ಕೆರೆದು ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
•       ಪೆನ್ಸಿಲ್ ಬಳಸಿ ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
•       ಪ್ರತಿ ಪ್ರಶ್ನೆಗೂ ಉತ್ತರಕ್ಕಾಗಿ ಮೀಸಲಿಟ್ಟ ಜಾಗದಲ್ಲೇ ಉತ್ತರ ಬರೆಯುವುದು ಖಡ್ಡಾಯ

ಭಾಗ - `
ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ ಮತ್ತು ಅಪಠಿತ ಗದ್ಯ) 67 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.                                       9X1=9
1)    ಮಕ್ಕಳಾದಿಯಾಗಿ ಪಾಶ್ಚಾತ್ಯರಿಗೆ ತಿಳಿದಿರುವ ಜ್ಞಾನಯಾವುದು?
2)    ವೀರಬುಕ್ಕರಾಯನುಧರ್ಮಸಮದೃಷ್ಟಿಶಾಸವನ್ನು ಹಾಕಿಸಿದ್ದು ಎಂದು?
3)    ಭಾರತ ಸರ್ಕಾರವು ವಿಶ್ವೇಶ್ವರಯ್ಯನವರಿಗೆ ನೀಡಿದ ಪ್ರಶಸ್ತಿಯಾವುದು?
4)    ಸಿದ್ಧಲಿಂಗಯ್ಯನವರು ದೇವನೂರು ಮಹಾದೇವರವರಿಗೆ ಹೇಳಿದ ಕತೆಯಾವುದು?
5)    ಮಧುರಾನಗರದ ಊರ ಹೊರಗಿನ ಅಶ್ವತ್ಥಮರದ ಕೆಳಗೆ ಹೊನ್ನನ್ನು ಹೂಳಿದ್ದವರು ಯಾರು?
6)    ಗಾಂಡೀವಿ ಎಂದು ಯಾರನ್ನು ಕರೆಯುತ್ತಾರೆ?
7)    ಲವನು ಯಜ್ಞಾಶ್ವವನ್ನು ಕಟ್ಟಿದ್ದನ್ನು ಕಂಡು ಹೆದರಿದವರು ಯಾರು?
8)    ಭೂಮಿಯ ಮೇಲೆ ಗೆರೆ ಎಳೆದು ಗಡಿಯನ್ನು ನಿರ್ಮಿಸಿಕೊಂಡಿದ್ದರ ಪರಿಣಾಮವೇನೆಂದು ದು. ಸರಸ್ವತಿಯವರು ಹೇಳಿದ್ದಾರೆ?
9)    ‘ಪಾರಿವಾಳಕವನದಲ್ಲಿ ವ್ಯಕ್ತವಾಗಿರುವ ನೀತಿ ಏನು?
ಕೆಳಗಿನವುಗಳಿಗೆ ಮೂರು - ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ                                10X2=20
10) ಬುಕ್ಕರಾಯನ ಶಾಸದಲ್ಲಿ ಕಂಡುಬರುವ ರಾಮಾನುಜಾಚಾರ್ಯರ ಗುಣವಿಶೇಷಗಳನ್ನು ಬರೆಯಿರಿ.
11)   ವಿಶ್ವೇಶ್ವರಯ್ಯನವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಬರೆಯಿರಿ.
12)  ಪ್ರೇಮಮತಿಯ ದುರ್ಮರಣಕ್ಕೆ ಕಾರಣವೇನು?
13)  ಕರ್ನಾಟಕದಲ್ಲಿ ಹನ್ನೆಡನೆಯ ಶತಮಾನದಲ್ಲಿ ನಡೆದ ಆಂದೋಲನದ ಬಗೆಗೆ ಮಹಾದೇವ ಅವರ ಅಭಿಪ್ರಾಯವೇನು?
14)  ಯಜ್ಞಾಶ್ವವನ್ನು ಲವನು ಏಕೆ ಕಟ್ಟಿದನು?
15)  ಇಂದುಮತಿ ಲಮಾಣಿಯವರು ‘ನನ್ನಾಸೆ’ ಕವನದಲ್ಲಿ ತಮ್ಮ ಆಸೆಗಳನ್ನು ಹೇಗೆ ಸೆರೆಹಿಡಿದಿದ್ದಾರೆ?
16)  ‘ಅಂಗಿ ಎಂಬ ಉತ್ತರ ಬರುವ ಒಗಟನ್ನು ಬರೆಯಿರಿ.
17)  ವಿಜ್ಞಾನಿಗಳ ಯೋಚನೆಯಲ್ಲಿ ಏಕಸೂತ್ರತೆ ಕಂಡುಬರುವುದಿಲ್ಲವೆಂದು ಎಚ್. ನರಸಿಂಹಯ್ಯನವರು ಏಕೆ ಹೇಳಿದ್ದಾರೆ?
18)  ಪಂಪನು ತನ್ನ ಹೆಸರನ್ನು ಬಂಡೆಯ ಮೇಲೆ ಕೆತ್ತಿಸಿಕೊಳ್ಳದಿರುವುದರ ಬಗೆಗೆ ಆರ್. ನಿರ್ಮಲರವರ ಅಭಿಪ್ರಾಯವೇನು?
19)  ಯಾವ ಸಂದರ್ಭದಲ್ಲಿ ನಿಜವಾದ ಕ್ರಿಯಾ ಸ್ವಾತಂತ್ರ್ಯವಿದೆ ಎಂದು ಹೇಳ ಬಹುದು ?
ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯಗಳನ್ನು ಬರೆಯಿರಿ.                            4X3=12
20)   “ಕೈಯಿಂದ ಇದನ್ನು ಮಾಡುವುದು ಹೇಗೋ
21)   “ ಶಾನುಭೋಗರಿಗೆ ಹುಚ್ಚು ಹಿಡಿಯಿತೋ.”
22)   “ಕೈಯಾನ ಹತಾರ ಕೊಡಬಾರದೊ, ನಾವು ನಾಲ್ಕು ಮಂದಿ ಜತ್ತ
23)   “ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?”
ಸಾಹಿತಿ/ಕವಿಗಳ ಸ್ಥಳ, ಕಾಲ, ಕೃತಿ, ಪ್ರಶಸ್ತಿ/ಬಿರುದುಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ.  2X3=6
24)   ವಿ. ಕೃ. ಗೋಕಾಕ್.
25)   ಪಂಪ
ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿರಿ                                                                      1X4=4
26)        
ಕಲುಷಿತ________________________
_____________________________
_____________________________
_______________________ಮುಟ್ಟೋಣ

ಅಥವಾ
ಮತ___________________________
______________________________
______________________________
_________________________ಬಿತ್ತೋಣ

ಕೆಳಗಿನ ಪದ್ಯಭಾಗವನ್ನು ಓದಿ ಅರ್ಥಮಾಡಿಕೊಂಡು, ಅಡಕವಾಗಿರುವ ಮೌಲ್ಯವನ್ನಾಧರಿಸಿ ಸಾರಾಂಶ ಬರೆಯಿರಿ. 1X4=4
27)      ಮರುಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ
ಹೊರೆದ ದಾತಾರಂಗೆ ಹಗೆವರ
ಶಿರವನರಿದೊಪ್ಪಿಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ
ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.                               2X4=8
28)   ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ಪರಿಯನ್ನು ನಿಮ್ಮ ಮಾತುಗಳಲ್ಲಿ ವಿವರಿಸಿರಿ.
ಅಥವಾ
ಶಬರಿಯು ರಾಮನಿಗಾಗಿ ಮಾಡಿಕೊಂಡಿದ್ದ ಸಿದ್ಧತೆಗಳನ್ನು ನಿಮ್ಮ ಮಾತುಗಳಲ್ಲಿ ವಿವರಿಸಿರಿ.
29)   ಹಕ್ಕಿಯ ರೂಪವನ್ನು ಪಡೆದಕಾಲವು ಹಾರುತಿದೆ ಎಂಬ ಬೇಂದ್ರೆಯವರ ಅದ್ಭುತವಾದ ಕಲ್ಪನೆಯನ್ನು ನಿಮ್ಮ ಮಾತುಗಳಲ್ಲಿ ವಿವರಿಸಿ.
ಅಥವಾ
ಕಾಲಗರ್ಭದಲ್ಲಿ ಎಲ್ಲವೂ ಅಡಗಿ ಹೋಗುತ್ತದೆ ಎಂಬ ಭಾವನೆಹಕ್ಕಿ ಹಾರುತಿದೆ ನೋಡಿದಿರಾ?’ ಕವನದಲ್ಲಿ ಹೇಗೆ ವ್ಯಕ್ತವಾಗಿದೆ ವಿವರಿಸಿರಿ.
30) ಕೆಳಗಿನ ಗದ್ಯಭಾಗವನ್ನು ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ        1X4=4(2+2)
ಡಾ| ಹೊ. ಶ್ರೀನಿವಾಸಯ್ಯನವರು ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಮಹತ್ಸಾಧನೆಗಳನ್ನು ಮಾಡುತ್ತಾ ಬಂದಿದ್ದಾರೆ. ಸಮಾಜದ ಉನ್ನತಿಯನ್ನು ಬಯಸುವ ಮಹನೀಯರ ಸಾಲಿಗೆ ಸೇರುವ ಇವರು ವೃತ್ತಿಯಿಂದ ಇಂಜಿನಿಯರ್, ಪ್ರವೃತ್ತಿಯಿಂದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪ್ರಚಾರಕರು. ಸಮಾಜ ಸೇವಕರಾದ ಇವರು ಸ್ವಭಾವತಃ ಹುಟ್ಟು ಹೋರಾಟಗಾರರು. ಸರಳಜೀವಿಗಳು, ನಿಸರ್ಗಪ್ರೇಮಿಗಳು. ಗಾಂಧೀ ತತ್ವ ಅನುಯಾಯಿಗಳು. ಎಳೆಯ ವಯಸ್ಸಿನಲ್ಲೇ ಗಾಂಧೀಜಿಯವರಿಂದ ಪ್ರಭಾವಿತರಾಗಿ ತಮ್ಮ ಜೀವನವನ್ನೇ ಗಾಂಧಿ ತತ್ವಗಳಿಗೆ ಮುಡುಪಾಗಿಟ್ಟವರು.
ಹಿರಿಯ ಚಿಂತಕರೂ, ಸಮಾಜಸೇವಕರೂ, ಗಾಂಧೀವಾದಿಗಳೂ, ಪ್ರಕೃತಿಚಿಕಿತ್ಸಾತಜ್ಞರೂ, ಸೇವಾದಳದ ನಾಯಕರೂ, ಖಾದಿಧಾರಿಗಳೂ, ಸಹಕಾರ ಧುರೀಣರು, ಶ್ರೇಷ್ಟ ಸಾಹಿತಿಗಳೂ, ಲೇಖಕರೂ, ರಾಜ್ಯ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರೂ, ‘ಕರ್ನಾಟಕದ ಗಾಂಧಿ-ಶಾಂತಿ ಸೇವಾಪ್ರಶಸ್ತಿ ಭಾಜನರೂ, ಬಹುಮುಖ ಪ್ರತಿಭಾವಂತರೂ ಆಗಿರುವ ಹೊ. ಶ್ರೀನಿವಾಸಯ್ಯನವರು ಮಹಾತ್ಮಗಾಂಧೀಜಿಯವರ ತತ್ವಗಳಿಗನುಸಾರವಾಗಿ ಸಹಕಾರ, ಸರ್ವೋದಯ, ಗ್ರಾಮೋದ್ಧಾರ, ಮಧ್ಯಪಾನ ನಿಷೇಧ, ಶಿಕ್ಷಣ, ಪ್ರಕೃತಿ ಚಿಕಿತ್ಸೆ, ಸಮಾಜಸೇವೆ ಮುಂತಾದ ಕ್ಷೇತ್ರಗಳಿಗೆ ಗಣನೀಯವಾದ ಕೊಡುಗೆಗಳನ್ನು ನೀಡಿದ್ದಾರೆ.
ಪ್ರಶ್ನೆಗಳು:
1.  ಡಾ| ಹೊ. ಶ್ರೀನಿವಾಸಯ್ಯನವರು ಬಹುಮುಖ ಪ್ರತಿಭಾವಂತರೆಂದು ಹೇಗೆ ಹೇಳುವಿರಿ?
2.  ಸಮಾಜದ ಉನ್ನತಿಗೆ ಡಾ| ಹೊ. ಶ್ರೀನಿವಾಸಯ್ಯನವರ ಕೊಡುಗೆಗಳೇನು?
ಭಾಗ - `ಬಿ
ಅನ್ವಯಿಕ ವ್ಯಾಕರಣ, ಅಲಂಕಾರ ಮತ್ತು ಛಂದಸ್ಸು –20 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ. ಅವುಗಳಲ್ಲಿ ಹೆಚ್ಚು
ಸೂಕ್ತವಾದ ಉತ್ತರವನ್ನು ಆರಿಸಿ, ಉತ್ತರಕ್ಕಾಗಿಯೇ ಕೊಟ್ಟಿರುವ ಜಾಗದಲ್ಲಿ ಕ್ರಮಾಕ್ಷರದೊಂದಿಗೆ ಉತ್ತರವನ್ನು ಬರೆಯಿ   10X1=10
31) ಬೇರೆ ಬೇರೆ ವಾಕ್ಯಗಳು ಅರ್ಥಸಾದೃಶ್ಯದಿಂದ ಬಿಂಬ ಪ್ರತಿ ಭಾವದಂತೆ ತೋರುವ ಅಲಂಕಾರ;
) ರೂಪಕ ) ದೃಷ್ಟಾಂತ ) ಉಪಮಾ ) ಯಮಕ.
32) ಕ್ರಿಯೆ ನಡೆಯುವ ಬಗೆಗೆ ಸಂಶಯ ಅಥವಾ ಊಹೆಯನ್ನು ವ್ಯಕ್ತಪಡಿಸುವ ಪದಗಳು-----
. ಪ್ರಶ್ನಾರ್ಥಕ ಬಿ. ನಿಷೇದಾತ್ಮಕ ಸಿ. ಸಂಭಾವನಾರ್ಥಕ  ಡಿ. ವಿಧ್ಯರ್ಥಕ.
33) ಕತ್ರ್ರರ್ಥದಲ್ಲಿ ಹಳೆಗನ್ನಡ ಪ್ರತ್ಯಯ -----        
. ಮ್ ಬಿ. ಅಂ ಸಿ. ಇಂ ಡಿ. ಗೆ
34) ಅನ್ಯಪದ ಅರ್ಥ ಪ್ರಧಾನವಾಗಿರುವ ಸಮಾಸ-----       
. ಗಮಕ ಬಿ. ಕರ್ಮಧಾರಯ ಸಿ. ತತ್ಪುರುಷ ಡಿ. ಬಹುವ್ರೀಹಿ
35) ‘ಡಾ| ರಾಧಾಕೃಷ್ಣನ್ ತತ್ವಶಾಸ್ತ್ರದಲ್ಲಿ ಎಂ.. ಪದವಿಯನ್ನು ಪಡೆದರು.’ ವಾಕ್ಯದಲ್ಲಿರುವ  ಕರ್ಮ ಪದ-
. ಡಾ| ರಾಧಾಕೃಷ್ಣನ್ ಬಿ.ತತ್ವಶಾಸ್ತ್ರದಲ್ಲಿ ಸಿ. ಎಂ. . ಪದವಿಯನ್ನು. ಡಿ ಪಡೆದರು.
36) ಸಜಾತಿಯ ಸಂಯುಕ್ತಾಕ್ಷರ ಇರುವ ಪದ-----
. ಅಜ್ಜ ಬಿ ಆರ್ಯ. ಸಿ.ಅಗಸ ಡಿ.ಅಂತ್ಯ
37) ಬರ್ತಾನೆ ಪದದ ಗ್ರಾಂಥಿಕ ರೂಪ-----         
. ಬರುತ್ತಾನೆ ಬಿ. ಬಂದನು ಸಿ. ಬರುವನೆ ಡಿ. ಬರುವನು.
38) ಮನಶ್ಶಾಸ್ತ್ರ-ಇಲ್ಲಿ ಆಗಿರುವ ಸಂದಿ:ü            
. ಶ್ಚುತ್ವ ಬಿ. ಗುಣ ಸಿ. ವೃದ್ಧಿ ಡಿ. ಯಣ್--------
39) ವಿಜ್ಞಾಪನೆ ಪದದ ತದ್ಭವ ರೂಪ----------     
. ಕೋರಿಕೆ ಬಿ. ಬಿನ್ನಪ ಸಿ. ಬಿಯದ ಡಿ. ಸಮರ್ಪಣೆ
40) ಕಂದ ಪದ್ಯದ ಆರನೇ ಮತ್ತು ಹತ್ತನೇ ಗಣ ಬರಬೇಕಾದ ಗಣ------              
. ‰‐‰ ಬಿ. ‐‰‰ ಸಿ. ‰‰‐ ಡಿ. ‐‐
ಕೆಳಗಿನ ಮೊದಲೆರಡು ಪದಗಳಿಗೆ ಇರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ಸಂಬಂಧೀ ಪದವನ್ನು ಬರೆಯಿರಿ.                                                                               4X1=4
41)   ಭಾನು : ಸೂರ್ಯ : : ಬಾನು : --------
42)   ಸತಿಪತಿ : ಜೋಡುನುಡಿ : : ಮಟ್ಟಮೊದಲು :----------
43)   ಮತ್ತೆ ಮತ್ತೆ : ದ್ವಿರುಕ್ತಿ : : ಕೈ ಚಾಚು: ___________
44)   ಹಿರಿಮೆ : ತದ್ಧಿತಾಂತ ಭಾವನಾಮ : : ಮಾಟ : ____________
ಕೆಳಗಿನ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ, ಗಣ ವಿಭಾಗ ಮಾಡಿ, ಛಂದಸ್ಸಿನ ಹೆಸರನ್ನು ಬರೆಯಿರಿ.                                                                                                                                                 1X3=3
45)         ಅತಿಕುಟಿಲಮನಂ ಧನಲು
ಬ್ಧತೆಯಿಂದಂ ದುಷ್ಟಬುದ್ಧಿ ನುಡಿದಂ ಪುಸಿಯಂ
ಅಥವಾ
ಮೇದಿನಿಯಂಕ್ರಮಕ್ರಮದೆ ಪರ್ವಿದುದಾತ್ತನಭೋವಿಭಾಗಮಾ
ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಲಕ್ಷಣ ಬರೆದು ಸಮನ್ವಯಿಸಿ.                                                                                                                                                 1X3=3
46)  ಮರನನೇರಿದ ಮರ್ಕಟನಂತೆ
ಅಥವಾ
         ಮಾರಿಗೌತಣವಾಯ್ತು ನಾಳಿನ ಭಾರತವು

ಭಾಗ - `ಸಿ
ವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ 13 ಅಂಕಗಳು
47)         ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ.            1X3=3
•   ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ.
•   ಚಿಂತೆಯೇ ಮುಪ್ಪು ಸಂತಸವೇ ಯೌವನ
•   ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
48) ಕೊಟ್ಟಿಗೆ ಪಾಳ್ಯದ ಸರ್ಕಾರಿ ಪ್ರೌಢಶಾಲೆಯ 10ನೆಯ ತರಗತಿಯಲ್ಲಿ ವ್ಯಾಸಂಗಮಾಡುತ್ತಿರುವ ಕಲಾಶ್ರೀ/ ಹೃಷೀಕೇಶ್ ಆದ ನೀವು ಕರ್ನಾಟಕದ ಪ್ರವಾಸಿ ತಾಣಗಳಿಗೆ ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸುವಂತೆ ಕೋರಿ ನಿಮ್ಮ ಮುಖ್ಯೋಪಾಧ್ಯಾಯರಿಗೆ ಒಂದು ಮನವಿಪತ್ರವನ್ನು ಬರೆಯಿರಿ.        1X5=5
ಅಥವಾ
ಮಲ್ಲೇಶ್ವರಂ ಬಡಾವಣೆಯ ಸಂಪಿಗೆ ರಸ್ತೆಯ ನಿವಾಸಿಯಾದ ನೀನು ಚಿನ್ಮಯಿ/ಚಿದಂಬರಂ ಎಂದು ಭಾವಿಸಿ ಬೆಂಗಳೂರಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಬರುವಂತೆ ಮಂಗಳೂರಿನ ಹಂಪನ ಕಟ್ಟೆಯಲ್ಲಿ ವಾಸವಾಗಿರುವ ನಿಮ್ಮ ಗೆಳತಿ/ಗೆಳೆಯ ಶುಭಶ್ರೀ/ಮುರುಳಿಗೆ ಒಂದು ಪತ್ರ ಬರೆಯಿರಿ.
49) ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕುರಿತು ಹದಿನೈದು ವಾಕ್ಯಗಳಿಗೆ ಕಡಿಮೆಯಿಲ್ಲದಂತೆ ಪ್ರಬಂಧ ಬರೆಯಿರಿ.1X5=5
•   ಮಹಿಳೆಯರ ಮೇಲಿನ ದೌರ್ಜನ್ಯ.
  ಯೋಗ ಶಿಕ್ಷಣದ ಮಹತ್ವ.
  ಆಧುನಿಕ ತಂತ್ರಜ್ಞಾನದ ಸದ್ಬಳಕೆ
*********^*^*^*^*^*^*^*^*^*********
ನಿಮ್ಮ ಸಲಹೆಗಳಿಗೆ ಸ್ವಾಗತ 



No comments:

Post a Comment