ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು|
ಲಿಂಗದಾ ನೆನಹು ಘನವಾಗೆ ಶಿವಲಿಂಗ|
ಹಿಂಗಿರದು ಅವನ ಸರ್ವಜ್ಞ||
ಅಂತಕ್ಕು ಇಂತಕ್ಕು | ಎಂತಕ್ಕು ಎನಬೇಡ
ಚಿಂತಿಸಿ ಸುಯ್ವುತಿರಬೇಡ ಶಿವನಿರಿಸಿ
ದಂತಿಹುದೆ ಲೇಸು ಸರ್ವಜ್ಞ
ಅಡವಿಯಲಿ ತಪದಲ್ಲಿ | ದೃಢತನದೊಳಿದ್ದರೂ|
ನುಡಿಯಲ್ಲಿ ಶಿವನ ಮರೆಯುವಡೆ ಗುಡವಿಲ್ಲ |
ದಡಗೆಯುಂಡಂತೆ ಸರ್ವಜ್ಞ ||
ಆವಾವ ಜೀವವನು | ಹೇವವಿಲ್ಲದೆ ಕೊಂದು |
ಸಾವಾಗ ಶಿವನ ನೆನೆಯುವಡೆ | ಅವ ಬಂದು |
ಕಾವನೇ ಹೇಳು ಸರ್ವಜ್ಞ ||
ಅರ್ಪಿತದ ಭೇದವನು ತಪ್ಪದೆಲೆ ತಿಳಿದಾತ
ಸರ್ಪಭುಷಣನ ಸಮನಹನು ನಿಜಸುಖದೋ
ಳೊಪ್ಪುತ್ತಲಿಹನು ಸರ್ವಜ್ಞ
ಅಲಸದಾ ಶಿವಪೂಜೆ ಹುಲುಸುಂಟು ಕೇಳಯ್ಯ
ಬಲುಕವಲು ಒಡೆದು ಬೇರಿಂದ ತುದಿತನಕ
ಹಲಸು ಕಾತಂತೆ ಸರ್ವಜ್ಞ
ಆಗಿಲ್ಲ ಹೋಗಿಲ್ಲ, ಮೇಗಿಲ್ಲ ಕೆಳಗಿಲ್ಲ|
ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕ್ಕೆ|
ದೇಗುಲವೆ ಇಲ್ಲ ಸರ್ವಜ್ಞ||
ಆಗುಹೋಗುಗಳ ನೆರೆ | ರಾಗ ಭೋಗಗಳು |
ಸ-ರಾಗವಾಗಿಕ್ಕು ಶಿವನೊಲಿದೊಡಲ್ಲದಿರೆ |
ಹೋಗಿಕ್ಕು ಕಾಣೊ ಸರ್ವಜ್ಞ ||
ಆತುಮದ ಲಿಂಗವನು
ಪ್ರೀತಿಯಲಿ ಪೂಜಿಪಗೆ
ಆತಂಕವಿಲ್ಲ ಭಯವಿಲ್ಲ
ದಶವಿಧದ
ಪಾತಕಗಳಿಲ್ಲ ಸರ್ವಜ್ಞ||
ಆನೆ ಕನ್ನಡಿಯಲ್ಲಿ | ತಾನಡಗಿ ಇಪ್ಪಂತೆ |
ಜ್ಞಾನವುಳ್ಳವರ ಹೃದಯದಲಿ ಪರಶಿವನು |
ತಾನಡಗಿ ಇಹನು ಸರ್ವಜ್ಞ ||
ಇಂದ್ರನಾನೆಯನೇರಿ ಒಂದನೂ ಕೊಡಲರಿಯ|
ಚಂದ್ರಶೇಖರನು ಮುದಿಯೆತ್ತನೇರಿ|
ಬೇಕೆಂದುದನು ಕೊಡುವ ಸರ್ವಜ್ಞ||
ಇಷ್ಟಲಿಂಗದಿ ಮನವ ನೆಟ್ಟನೆಯ ನಿಲಿಸದಲೆ|
ಕಷ್ಟಭ್ರಮೆಗಳಲಿ ಮುಳುಗಿದನು ಕರ್ಮದಾ|
ಬಟ್ಟೆಗೆ ಹೋಹ ಸರ್ವಜ್ಞ||
ಉಂಡುಂಡು ತಿರುಗುವಾ ಭಂಡರಾ ಕಳೆ ಬೇಡ|
ಕಂಡು ಲಿಂಗವನು ಪೂಜಿಸಿದವಗೆ ಯಮ|
ದಂಡ ಕಾಣಯ್ಯ ಸರ್ವಜ್ಞ||
ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ?
ಶಂಭುವಿರಲಿಕ್ಕೆ ಮತ್ತೊಂದು ದೈವವ|
ನಂಬುವನೇ ಹೆಡ್ಡ ಸರ್ವಜ್ಞ||
ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ|
ಉಣದಿಪ್ಪ ಲಿಂಗಕುಣಬಡಿಸಿ ಕೈಮುಗಿವ|
ಬಣಗುಗಳ ನೋಡ ಸರ್ವಜ್ಞ||
ಎಂಜಲೂ ಅಶೌಚ
ಸಂಜೆಯೆಂದೆನಬೇಡ
ಕುಂಜರವು ವನವ ನೆನವಂತೆ ಬಿಡದೆ
ನಿರಂಜನನ ನೆನೆಯೊ ಸರ್ವಜ್ಞ||
ಎಲ್ಲವರು
ಬಯ್ದರೂ | ಕಲ್ಲು ಕೊಂಡೊಗೆದರೂ |
ಅಲ್ಲದಾ ಮಾತು ನುಡಿದರೂ ಶಿವನಲ್ಲಿ |
ತಲ್ಲಣಿಸು ಬೇಡ ಸರ್ವಜ್ಞ ||
ಎಲ್ಲರನು
ಬೇಡಿ | ಹಲ್ಲು ಬಾಯಾರುವು ದೆ
ಬಲ್ಲಂತೆ ಶಿವನ ಭಜಿಸಿದೊಡೆ –
ಶಿವ ದಾನಿ ಇಲ್ಲನ್ನಲರೆಯ ಸರ್ವಜ್ಞ
ಎಲ್ಲರನು ನೆರೆ ಬೇಡಿ, ಹಲ್ಲು ಬಾಯ್ದೆರೆಯುವರೇ?
ಬಲ್ಲಿದಾ ಶಿವನ
ಭಜಿಸಿದರೆ ಶಿವ ತಾನು|
ಇಲ್ಲೆನ್ನಲರಿಯನು ಸರ್ವಜ್ಞ||
ಎಲ್ಲರೂ
ಶಿವನೆಂದ | ರೆಲ್ಲಿಹುದು ಭಯವಯ್ಯಾ |
ಎಲ್ಲರೂ ಶಿವನ ನೆನೆಯುವಡೆ ಕೈಲಾಸ |
ಎಲ್ಲಿಯೇ ಇಹುದು ಸರ್ವಜ್ಞ ||
ಎಲ್ಲರೂ
ಶಿವನೆಂದಿರಿಲ್ಲಿಯೇ ಹಾಳಕ್ಕು |
ಎಲ್ಲರೂ ಶಿವನ ಮರೆದಿಹರೆ ಕೈಲಾಸ |
ದಲ್ಲಿ ಹಾಳಕ್ಕು ಸರ್ವಜ್ಞ ||
ಎಷ್ಟು
ಬಗೆಯಾರತಿಯ ಮುಟ್ಟಿಸಿದ ಫಲವೇನು?
ನಿಷ್ಠೆಯಿಲ್ಲದವನ
ಶಿವಪೂಜೆ ಹಾಳೂರ
ಕೊಟ್ಟಗುರಿದಂತೆ
ಸರ್ವಜ್ಞ
ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ?
ಅರ್ಪಿತನ ಗೊಡವೆ ತನಗೇಕೆ?
ಲಿಂಗದ ನೆಪ್ಪನರಿದವಗೆ ಸರ್ವಜ್ಞ||
ಒಮ್ಮನದ ಶಿವಪೂಜೆ ಗಮ್ಮನೆ ಮಾಡುವದು|
ಇಮ್ಮನವ ಪಿಡಿದು ಕೆಡಬೇಡ ವಿಧಿವಶವು|
ಸರಿಮ್ಮನೇ ಕೆಡಗು ಸರ್ವಜ್ಞ||
ಓದುವಾದಗಳೇಕೆ
? ಗಾದೆಯ ಮಾತೇಕೆ?
ವೇದ ಪುರಾಣ ನಿನಗೇಕೆ? ಲಿಂಗದಾ
ಹಾದಿಯರಿಯದಲೆ ಸರ್ವಜ್ಞ||
ಕಂಡವರ ಕಂಡು ತಾ ಕೊಂಡ ಲಿಂಗವ ಕಟ್ಟಿ|
ಕೊಂಡಾಡಲರಿಯದಧಮಂಗೆ ಲಿಂಗವದು|
ಕೆಂಡದಂತಿಹುದು ಸರ್ವಜ್ಞ||
ಕಂಡವರು
ಕೆರಳುವರು | ಹೆಂಡತಿಯು ಕನಲುವಳು |
ಖಂಡಿತದ ಲಕ್ಶ್ಮಿ ತೊಲಗುವಳು ಶಿವನೊಲುಮೆ |
ಕಂಡಕೊಳ್ದಿರಕು ಸರ್ವಜ್ಞ||
ಕಂಗಳಿಚ್ಛೆಗೆ
ಪರಿದು | ಭಂಗಗೊಳದಿರು ಮನುಜ
ಲಿಂಗದಲಿ ಮನವ ನಿಲ್ಲಿಸಿ - ಸತ್ಯದಿ ನಿಲೆ
ಲಿಂಗವೇಯಹೆಯೊ ಸರ್ವಜ್ಞ
ಕಟ್ಟಲೂ ಬಿಡಲು ಶಿವ ಬಟ್ಟಲವ ಕದ್ದನೇ|
ಕಟ್ಟಲೂ ಬೇಡ ಬಿಡಲೂ ಬೇಡ|
ಕಣ್ಣು
ಮನ ನಟ್ಟರೆ ಸಾಕು ಸರ್ವಜ್ಞ||
ಕಲ್ಲಿನಲಿ
ಮಣ್ಣಿನಲಿ | ಮುಳ್ಳಿನಾ ಮೊನಯಲಿ
ಎಲ್ಲ ನೆನೆದಲ್ಲಿ ಶಿವನಿರ್ಪ ಅವನೀ |
ನಿದ್ದಲ್ಲಿಯೇ ಇರ್ಪ ಸರ್ವಜ್ಞ ||
ಕಳ್ಳಿಯೊಳು ಹಾಲು, ಮುಳುಗಳ್ಳಿಯೊಳು ಹೆಜ್ಜೇನು|
ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ|
ಸುಳ್ಳೆನ್ನಬಹುದೆ? ಸರ್ವಜ್ಞ||
ಕಾಯ ಕಮಲದ ಸಜ್ಜೆ, ಜೀವರತನುವೆ ಲಿಂಗ|
ಭವ ಪುಶ್ಪದಿಂ ಶಿವಪೂಜೆ ಮಾಡುವರ|
ದೇವರೆಂದೆಂಬೆ ಸರ್ವಜ್ಞ||
ಕುಲಗೆಟ್ಟವರು
ಚಿಂತೆ ಯೊಳಗಿಪ್ಪರಂತಲ್ಲ
ಕುಲಗೆಟ್ಟು
ಶಿವನ ಮರೆಹೊಕ್ಕ ಋಷಿಗಳಿಗೆ
ಕುಲಗೋತ್ರವುಂಟೆ?
ಸರ್ವಜ್ಞ
ಕೊಡುವಾತನೇ
ಮೃಢನು | ಪಡೆವಾತನೇ ನರನು
ಒಡಲು-ಒಡವೆಗಳು
ಕೆಡೆದು ಹೋಗದ ಮುನ್ನ
ಕೊಡು
ಪಾತ್ರವನರಿದು ಸರ್ವಜ್ಞ
ಕೊಟ್ಟು
ಹುಟ್ಟಲಿಲ್ಲ | ಮುಟ್ಟಿ ಪೂಜಿಸಲಿಲ್ಲ
ಸಿಟ್ಟಿನಲಿ
ಶಿವನ ಬೈದರೆ - ಶಿವ ತಾನು
ರೊಟ್ಟಿ
ಕೊಡುವನೆ ಸರ್ವಜ್ಞ||.
ಕ್ಷೀರದಲಿ ಘ್ರತ, ವಿಮಲ | ನೀರಿನೊಳು
ಶಿಖಿಯಿರ್ದು
ಅರಿಗೂ ತೋರದಿರದಂತೆ ಎನ್ನೊಳಗೆ |
ಸೇರಿಹನು ಶಿವನು ಸರ್ವಜ್ಞ ||
ಗಂಗೆ
ಗೋದಾವರಿಯು, ತುಂಗಭದ್ರೆಯು ಮತ್ತೆ
ಹಿಂಗದೆ
ಮುಳುಗಿ ಫಲವೇನು? ನಿನ್ನಲ್ಲೆ
ಲಿಂಗದರುವಿಲ್ಲ
ಸರ್ವಜ್ಞ
ಜಂಗಮಕೆ
ವಂಚಿಸನು | ಹಿಂಗಿರಲು ಲಿಂಗವನು |
ಭಕ್ತರೊಳು ಪರಸತಿಗೆ ಒಲೆಯದಗೆ |
ಭಂಗವೇ ಇಲ್ಲ ಸರ್ವಜ್ಞ ||
ಜಂಗಮನು
ಭಕ್ತತಾ | ಲಿಂಗದಂತಿರಬೇಕು |
ಭಂಸುತ ಪರರ ನಳಿವ ಜಂಗಮನೊಂದು |
ಮಂಗನೆಂದರಿಗು ಸರ್ವಜ್ಞ ||
ಜ್ವರ
ಬನ್ದ ಮನುಜಂಗೆ | ನೊರೆವಾಲು ವಿಷಕ್ಕು |
ನರಕದಲಿ ಬೀಳ್ವ ಅಧಮಂಗ ಶಿವಭಕ್ತಿ |
ಹಿರಿದು ವಿಷಪಕ್ಕು ಸರ್ವಜ್ಞ ||
ಜ್ಯೋತಿಯಿಂದವೆ
ನೇತ್ರ | ರಾತ್ರಿಯಲಿ ಕಾಂಬಂತೆ
ಸೂತ್ರದಲಿ
ಧಾತನರಿವಂತೆ - ಶಿವನ ಗುರು
ನಾಥನಿಂದರಿಗು
ಸರ್ವಜ್ಞ
ತತ್ವದಾ
ಜ್ಞಾನತಾ | ನುತ್ತಮವು ಎನಬೇಕು |
ಮತ್ತೆ ಶಿವಧ್ಯಾನ ಬೆರೆದರದು | ಶಿವಗಿರಿಂ |
ದತ್ತಲೆನಬೇಕು ಸರ್ವಜ್ಞ ||
ತನ್ನಲಿಹ ಲಿಂಗವನು ಮನ್ನಿ ಸಲಿಕರಿಯದಲೆ|
ಬಿನ್ನಣದಿ ಕಟಿದ ಪ್ರತಿಮೆಗಳಿಗೆರಗುವಾ|
ಅನ್ಯಾಯ ನೋಡು ಸರ್ವಜ್ಞ||
ತೆರೆದ
ಹಸ್ತವು ಲೇಸು | ಹರಿಯ ಪೂಜ್ಯವು ಲೇಸು |
ಅರ ಸೊಲಿಮೇ ಲೇಸು ಸರ್ವಕ್ಕೂ ಶಿವನಿಗೆ |
ಶರಣನೇ ಲೇಸು ಸರ್ವಜ್ಞ ||
ದೇಶಕ್ಕೆ
ಸಜ್ಜನನು, ಹಾಸ್ಯಕ್ಕೆ ಹನುಮಂತ
ಕೇಶವನು
ಭಕ್ತರೊಳಗೆಲ್ಲ ಮೂರು ಕ
ಣ್ಣೇಶನೆ
ದೈವ ಸರ್ವಜ್ಞ||
ದೇಹ ದೇವಾಲಯವು
| ಜೀವವೇ ಶಿವಲಿಂಗ |
ಬಾಹ್ಯಾಂಗಳಳಿದು ಭಜಿಪಂಗೆ ಮುಕ್ತಿಸಂ
ದೇಹವಿಲ್ಲೆಂದು ಸರ್ವಜ್ಞ ||
ದೇಹಿಯನಬೇಡ,
ನಿರ್ದೇಹಿ ಜಂಗಮಲಿಂಗ
ದೇಹ ಗುಣದಾಸೆಯಳಿದೊಡೆ
ಆತ ನೀರ್ದೇಹಿ
ಕಾಣಯ್ಯ
ಸರ್ವಜ್ಞ||
ಧಾರುಣಿ
ನಡುಗುವುದು | ಮೇರುವಲ್ಲಾಡುವುದು
ವಾರಿಧಿ
ಬತ್ತಿ ಬರೆವುದು – ಶಿವಭಕ್ತಿ
ಯೋರೆಯಾದಂದು
ಸರ್ವಜ್ಞ||
ನಂದಿಯನು
ಏರಿದನ ಚಂದಿರನ ಮುಡಿದವನ
ಕಂದನಂ
ಬೇಡಿ ನೆನೆವುತ್ತ ಮುಂದೆ
ಹೇಳುವೆನು
ಸರ್ವಜ್ಞ||
ನರರ ಬೇಡುವ
ದೈವ | ವರವೀಯ ಬಲ್ಲುದೇ
ತಿರಿವವರನಡರಿ
ತಿರಿವಂತೆ – ಅದನರಿ
ಹರನನೆ
ಬೇಡು ಸರ್ವಜ್ಞ
ನಾಟ ರಾಗವು
ಲೇಸು | ತೋಟ ಮಲ್ಲಿಗೆ ಲೇಸು |
ಕೂಟವದು ಲೇಸು ಹಿರಿಯರೊಳು ಶಿವನ ಅರಿ |
ದಾಟವೇ ಲೇಸು ಸರ್ವಜ್ಞ ||
ನಾನು-ನೀನುಗಳಿದು, ತಾನು ಲಿಂಗದಿ ಉಳಿದು|
ನಾನಾ ಭ್ರಮೆಗಳ ಅತಿಗಳೆದು ನಿಂದಾತ|
ತಾನೈಕ್ಯ ನೋಡು ಸರ್ವಜ್ಞ||
ನಿತ್ಯವೂ
ಶಿವನ ತಾ | ಹೊತ್ತಾರೆ ನೆನೆದಿಹರೆ |
ಉತ್ತಮದ ಗತಿಯು ಆದಿಲ್ಲದಿಹಪರದಿ |
ಮೃತ್ಯುಕಾಣಯ್ಯ ಸರ್ವಜ್ಞ ||
ನಿಷ್ಠೆ
ಇದ್ದಡೆ ಶಿವನು, ಗಟ್ಟಿಗೊಂಡೊಳಗಿರ್ಪ|
ನಿಷ್ಠೆಯಿಲ್ಲದಲೆ ಭಜಿಸಿದೊಡೆ ಶಿವನವನ|
ಬಿಟ್ಟು ಬಯಲಪ್ಪ ಸರ್ವಜ್ಞ||
ನಿಶ್ಚಯವ
ಬಿಡದೊಬ್ಬ|ರಿಚ್ಛೆಯಲಿ ನುಡಿಯದಿರು |
ನೆಚ್ಚಿ ಒಂದೊರೊಳಗಿರದಿರು ಶಿವ ನಿನ್ನ
ಇಚ್ಛೆಯೊಳಗಿಹನು ಸರ್ವಜ್ಞ ||
ನೋಟ ಶಿವಲಿಂಗದಲಿ
| ಕೂಟ ಜಂಗಮದಲ್ಲಿ
ನಾಟಿ
ತನು ಗುರುವಿನಲಿ ಕೂಡೆ - ಭಕ್ತನ ಸ
ಘಾಟವದು
ನೋಡ ಸರ್ವಜ್ಞ
ಪವನಪರಿಯರಿದಂಗೆ
| ಶಿವನ ಸಾಧಿಸಲಕ್ಕು |
ಭವಮಾಲೆ ಹರಿದು ಸುಖಿಸುವೊಡೆ ಅವ
ಸದಾಶಿವನು ತಾನಕ್ಕು ಸರ್ವಜ್ಞ ||
ಬಸವ ಗುರುವಿನ
ಹೆಸರ | ಬಲ್ಲವರಾರಿಲ್ಲ
ಪುಸಿಮಾತನಾಡಿ
ಕೆಡದಿರಿ – ಲೋಕಕ್ಕೆ
ಬಸವನೇ
ಕರ್ತ ಸರ್ವಜ್ಞ
ಭೋಗಿಸುವ
ವಸ್ತುಗಳ ಭೋಗಿಸು ಶಿವಗಿತ್ತು
ರಾಗದಿಂ
ಸತ್ಯವೆರಸಿಹ ಪ್ರಸಾದಿಯ
ಶ್ರಿ
ಗುರುವು ಎಂಬೆ ಸರ್ವಜ್ಞ ||
ಭೂತೇಶಗೆರಗುವನು
ಜಾತಿ ಮಾದಿಗನಲ್ಲ
ಜಾತಿಯಲಿ
ಹುಟ್ಟಿ ಶಿವನಿಗೆ ಶರಣೆನ್ನ
ದಾತ ಮಾದಿಗನು
ಸರ್ವಜ್ಞ||
ಮನೆಯೇನು
ವನವೇನು | ನೆನಹು ಇದ್ದರೆ ಸಾಕು |
ಮನಮುಟ್ಟಿ ಶಿವನ ನೆನೆಯದವನು ಬೆಟ್ಟದಾ |
ಕೊನೆಯಿಲ್ಲಿದ್ದೇನು ಸರ್ವಜ್ಞ ||
ಮಲಯಜದ
ಮರದೊಳಗೆ ಸಲೆ ಗಂಧವಿಪ್ಪಂತೆ
ಸುಲಲಿತವು
ಆದ ಶರಣರಾಹೃದಯದಲಿ
ನೆಲಸಿಹನು
ಶಿವನು ಸರ್ವಜ್ಞ
ಮುನಿವಂಗೆ
ಮುನಿಯದಿರು | ಕನೆವಂಗೆ ಕನೆಯದಿರು
ಮನಸಿಜಾರಿಯನು
ಮರೆಯದಿರು - ಶಿವನ ಕೃಪೆ
ಘನಕೆ
ಘನವಕ್ಕು ಸರ್ವಜ್ಞ.
ಮೂರುಕಣ್ಣೀಶ್ವರನ
| ತೋರಿಕೊಡಬಲ್ಲ
ಗುರು ಬೇರರಿವುದೊಂದು ತೆರನಿಲ್ಲ – ಗುರು
ಕರಣ ತೋರಿಸುಗು ಶಿವನ ಸರ್ವಜ್ಞ
ಮೆಟ್ಟಿದಾ
ಕಲ್ಲಿಂಗೆ, ಮೊಟ್ಟೆ ಪತ್ರಿಯ ಹಾಕಿ
ಕಟ್ಟಿದಾ
ಲಿಂಗ ಅಡಿಮಾಡಿ ಶರಣೆಂಬ
ಭ್ರಷ್ಟನ
ಕಂಡ್ಯಾ ? ಸರ್ವಜ್ಞ||
ಮೆಟ್ಟಿಪ್ಪುದಾಶೆಯನು
| ಕಟ್ಟಿಪ್ಪುದಿಂದ್ರಿಯವ
ತೊಟ್ಟಿಪ್ಪುದುಳ್ಳ
ಸಮತೆಯನು – ಶಿವಪದವ
ಮುಟ್ಟಿಪ್ಪುದಯ್ಯ
ಸರ್ವಜ್ಞ||
ಯಾತರ
ಹೂವಾದರು | ನಾತರೆ ಸಾಲದೆ
ಜಾತಿ ವಿಜಾತಿಯೆನಬೇಡ - ಶಿವನೊಲಿ
ದಾತನೇ ಜಾತಿ ಸರ್ವಜ್ಞ||
ರಾತ್ರಿಯೊಳು
ಶಿವರಾತ್ರಿ | ಜಾತ್ರೆಯೊಳು ಶ್ರೀಶೈಲ |
ಕ್ಷೇತ್ರದೊಳಗಧಿಕ ಶ್ರೀಕಾಶಿ ಶಿವತತ್ವ |
ಸ್ತೋತ್ರದೊಳಗಧಿಕ ಸರ್ವಜ್ಞ||
ಲಿಂಗಕ್ಕೆ
ಕಡೆ ಎಲ್ಲಿ, ಲಿಂಗದೆಡೆ ಎಲ್ಲಿ|
ಲಿಂಗದೊಳು ಜಗವು ಅಡಗಿಹುದು ಲಿಂಗವನು|
ಹಿಂಗಿದವರುಂಟೆ? ಸರ್ವಜ್ಞ||
.
ಲಿಂಗದ
ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೆ
ಜಗವು ಅಡಗಿಹುದು – ಲಿಂಗವನು
ಹಿಂಗಿ
ಪರ ಉಂಟೆ ಸರ್ವಜ್ಞ||
ಲಿಂಗದಾ
ಗುಡಿ ಲೇಸು | ಗಂಗೆಯಾ ತಡಿ ಲೇಸು |
ಲಿಂಗ ಸಂಗಿಗಳ ನುಡಿ ಲೇಸು ಭಕ್ತರಾ |
ಸಂಗವೇ ಲೇಸು ಸರ್ವಜ್ಞ ||
ಲಿಂಗದಿಂ
ಘನವಿಲ್ಲ | ಗಂಗೆಯಿಂ ಶುಚಿಯಿಲ್ಲ |
ಕಂಗಳಿಂದಧಿಕ ಹಿತರಿಲ್ಲ ಭಕ್ತ ತಾ |
ಜಂಗಮನಿಂದಿಲ್ಲ ಸರ್ವಜ್ಞ ||
ಲಿಂಗಕ್ಕೆ
ತೋರಿಸುತ ನುಂಗುವಾತನೇ ಕೇಳು|
ಲಿಂಗವುಂಬುವದೆ? ಇದನರಿದು ಕಪಿಯೆ ನೀ|
ಗಮಕೆ ನೀಡು ಸರ್ವಜ್ಞ||
ಲಿಂಗದಲಿ
ಮನವಾಗಿ, ಲಿಂಗದಲಿ ನೆನಹಾಗಿ|
ಲಿಂಗದಲಿ ನೋಟ, ನುಡಿಕೂಟವಾದವನು|
ಲಿಂಗವೇ ಅಕ್ಕು ಸರ್ವಜ್ಞ||
ಲಿಂಗಪ್ರಸಾದವನು
ಅಂಗಕ್ಕೆ ಕೊಂಬುವರು|
ಗಂಗಾಳದೊಳಗೆ ಕೈ ತೊಳೆದು ಚಲ್ಲುವಾ
ಮಂಗಗಳ ನೋಡು ಸರ್ವಜ್ಞ||
ಲಿಂಗಪೂಜಿಸುವಾತ
ಜಂಗಮಕ್ಕೆ ನೀಡಿದೊಡೆ|
ಲಿಂಗದಾ ಕ್ಷೇಮ ಘನವಾಗಿ ಆ ಲಿಂಗ|
ಹಿಂಗದಿರುತಿಹುದು ಸರ್ವಜ್ಞ||
ಅಂಗವನು
ಲಿಂಗವನು ಸಂಗೊಳಿಸಲೆಂತಕ್ಕು
ಲಿಂಗದಾ
ನೆನಹು ಘನವಾಗೆ ಆ ಅಂಗ
ಲಿಂಗವಾಗಿಕ್ಕು
ಸರ್ವಜ್ಞ||
ಲಿಂಗಯಲ್ಲಿ
| ಸಂಗಿಸಿ ಚರಿಸಲು
ಜಂಘೆಯಲಿ ನಡವ ಸರ್ವ ಜೀವಂಗಳು
ಲಿಂಗದಿಂ ಜನನ ಸರ್ವಜ್ಞ||
ಲಿಂಗವಿರಹಿತನಾಗಿ
ನುಂಗದಿರು ಏನುವನು
ತಿಂಗಳಲಿ
ಸತ್ತ ಕೊಳೆ ನಾಯಿ ಮಾಂಸವನು
ನುಂಗಿದೆಂತಕ್ಕು
ಸರ್ವಜ್ಞ||
ಲಿಂಗವನು
ಅಂದವನ ಅಂಗ ಹಿಂಗಿರಬೇಕು
ತೆಂಗಿನಕಾಯಿ
ಪರಿಪೂರ್ಣ ಬಲಿದು ಜಲ
ಹಿಂಗಿದಪ್ಪಂದ
ಸರ್ವಜ್ಞ||
ಶಿವಪೂಜೆ
ಮಾಡಿದಡೆ, ಶಿವನ ಕೊಂಡಾಡಿದಡೆ |
ಶಿವನಲ್ಲಿ ನೆನೆಹ ನಿಲಿಸಿದಡೆ ಶಿವಲೋಕ|
ವವಗೆ ಕಾಣಯ್ಯ ಸರ್ವಜ್ಞ||
ಶಿವಭಕ್ತಿಯುಳ್ಳಾತ
| ಭವಮುಕ್ತನಾದಾತ |
ಶಿವಭಕ್ತಿಯಿರದ ಭಕ್ತಿಂಗೆ ಎಂದೆಂದು |
ಭವಮುಕ್ತಿಯಿಲ್ಲ ಸರ್ವಜ್ಞ ||
ಸಂಗದಿಂ
ಕೆಳೆಯಿಲ್ಲಿ | ಭಂಗದಿಂ ವ್ಯಥೆಯಿಲ್ಲ |
ಗಂಗೆಯಿಂದಧಿಕ ನದಿಯಲ್ಲಿ ಪರದೈವ |
ಲಿಂಗದಿಂದಿಲ್ಲ ಸರ್ವಜ್ಞ ||
ಸಣ್ಣನೆಯ
ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣೆಸಿಬರೆದ
ಪಟದೊಳಗೆಯಿರುವಾತ
ತಣ್ಣೊಳಗೆ
ಇರನೇ ಸರ್ವಜ್ಞ||
ಸಾರವನು
ಬಯಸುವರೆ, ಕ್ಷಾರವನು ಬೆರಿಸುವುದು
ಮಾರಸಂಹರನ
ನೆನೆದರೆ ಮೃತ್ಯುವು
ದೂರಕ್ಕೆ
ದೂರ ಸರ್ವಜ್ಞ||
ಸಿರಿಯು
ಬಂದರೆ ಲೇಸು, ತೀರದ ಜವ್ವನ ಲೇಸು
ಮರಣವಿಲ್ಲದಾ
ಮಗಲೇಸು ಲಿಂಗಕ್ಕೆ
ಶರಣುವೆ
ಲೇಸು ಸರ್ವಜ್ಞ||
ಸೋಕಿಡಾ
ಸುಖಂಗಳ ನೇಕವನು ಶಿವಗಿತ್ತು
ತಾ ಕಿಂಕರತೆಯ
ಕೈಕೊಂಡ ಮನುಜನೇ
ಲೋಕಕ್ಕೆ ಶರಣ ಸರ್ವಜ್ಞ||
ಹರನಾವ
ಕರೆಯದಲೆ | ಪರಿಶಿವನ ನೆನೆಯದಲೆ |
ಸ್ಮರಹರನ ಕರುಣವಿಲ್ಲದೆಯೆ ಜಗದೊಳಗೆ
ಇರುವದೇ ಕಷ್ಟ ಸರ್ವಜ್ಞ ||
ಹರಿ ಬೊಮ್ಮನೆಂಬವರು,
ಹರನಿಂದಲಾದವರು |
ಅರಸಿಗೆ ಆಳು ಸರಿಯಹನೆ ಶಿವನಿಂದ|
ಮೆರೆವರಿನ್ನಾರು ಸರ್ವಜ್ಞ ||
ಹಲವನೋದಿದಡೇನು?
ಚೆಲುವನಾದದಡೇನು ?
ಕುಲವೀರನೆನೆಸಿ ಫಲವೇನು? ಲಿಂಗದಾ|
ಒಲುಮೆ ಇಲ್ಲದಲೆ ಸರ್ವಜ್ಞ||
No comments:
Post a Comment