ಕನಸ ಕಟ್ಟಿ ನನಸುಗೈವ ದೇಶ ಭಕ್ತರು
ದುಷ್ಟ ಶಕ್ತಿಯಾ ಮೆಟ್ಟಿ ದೇಶ ಬೆಳಗುವ
ದೇಶ ಭಕ್ತರು ನಾವು ದೇಶ ಭಕ್ತರು
ಇಹುದು ನಮಗೆ ಭಗತ್ ಸಿಂಗ್
ಆಜಾóದರ ಆದರ್ಶವು
ಅವರ ಹಾದಿಯಲ್ಲಿ ನಡೆದು
ಕಿಚ್ಚ ತಡೆದು ಕೆಚ್ಚಿನಿಂದ
ಹಗೆಯ ಮೆಟ್ಟಿ ಹೊಗೆಯನಳಿ
ಪ್ರೀತಿ ಪ್ರೇಮದಿಂದ ಕಲೆತು
ದೇಶ ಬೆಳೆಸುವ ಛಲವ ಹೊತ್ತ
ದೇಶ ಭಕ್ತರು ನಾವು ದೇಶ ಭಕ್ತರು
ದೇಶ ಭಕ್ತರು ನಾವು ದೇಶ ಭಕ್ತರು
ವಿದೇಶಿಯ ಮೋಹ ತೊರೆದು
ದೇಸೀಯರಾಗಿ ನಾವು ನಾಡ ಬೆಳೆಸುತ
ನಮ್ಮತನವ ನಾವು ಬಿಡದೆ
ನಮ್ಮ ನೆಲ ಜಲವ ಉಳಿಸುತ
ಸತ್ಯ ಧರ್ಮ ಶಾಂತಿ ಪಥದಿ ನಡೆದು
ಸಹನೆಯಿಂದ ದೇಶ ಉಳಿಸುವ
ದೇಶ ಭಕ್ತರು ನಾವು ದೇಶ ಭಕ್ತರು
ಅಹಂಕಾರ ದರ್ಪಬಿಟ್ಟು ,
ಅಹಂಭಾವ ಈರ್ಷೆ ತೊರೆದು
ರಾಗ ದ್ವೇಷಗಳನು ಮೆಟ್ಟಿ,
ಮಮತೆಯಿಂದ ಎಲ್ಲರೊಳಗೊಂದಾಗಿ
ದೇಶ ಉಳಿಸಿ, ದೇಶ ಬೆಳಸಿ,
ದೇಶ ಬೆಳಗುತ ಮುಂದೆ ಮುಂದೆ ಸಾಗುವ
ದೇಶ ಬೆಳಗುತ ಮುಂದೆ ಮುಂದೆ ಸಾಗುವ
ದೇಶ ಭಕ್ತರು ನಾವು ದೇಶ ಭಕ್ತರು
No comments:
Post a Comment