ಅಜ್ಜಿಯ ಮುದ್ದು ಅಮ್ಮನ ಗುದ್ದು
ಅಜ್ಜನ ಪ್ರೀತಿ ಅಪ್ಪನ ಭೀತಿ
ಅತ್ತೆ ಮಾವನ ಮಮತೆಯಲಿ
ನಲಿವ ನಾವು ಭಾರತೀಯರು
ಲೇಸು, ಕುರ್
ಕುರೆ ಬಿಟ್ಟು
ಚಕ್ಕುಲಿ ಗೋಡು ಬಳೆ ಮೆದ್ದು
ಲಾಲಿ ಪಪ್ಪು ಉಂಡೆ ತಿನ್ನುತ
ನಲಿವ ನಾವು ಭಾರತೀಯರು
ಫಿಸ್ಜಾ ಬಗ್ರರ್ ಬಿಟ್ಟು
ರೊಟ್ಟಿ ದೋಸೆ ಚಪಾತಿ
ಇಡ್ಲಿ ಚಟ್ನಿ ಬೆಣ್ಣೆ ತಿಂದು
ನಲಿವ ನಾವು ಭಾರತೀಯರು
ಥಂಬ್ಸ್ ಅಪ್, ಫಾಂಟ, ಕೊಕಾ ಕೋಲಬಿಟ್ಟು
ಎಳನೀರು, ಪಾಯಸ, ಪಾನಕ, ಕುಡಿದು
ಕೆನೆ ಹಾಲು ಮೊಸರನು ಮೆದ್ದು
ನಲಿವ ನಾವು ಭಾರತೀಯರು
ಕ್ಯಾಟ್ಬರಿಸ್ ಕಿಟ್ಕ್ಯಾಟ್ ಬಗೆಬಗೆ ಚಾಕ್ಲೇಟ್ಸ್,
ವಿಧ ವಿಧ ರುಚಿಯ ಐಸ್ಕೀಮ್ಗಳ ಬಿಟ್ಟು
ಕಜ್ಜಾಯ, ಕಡುಬು, ತಂಬಿಟ್ಟು ಹುರಿಟ್ಟು ಸವಿದು
ನಲಿವ ನಾವು ಭಾರತೀಯರು
ಪೇಟ, ಗಾಂಧಿ
ಟೋಪಿ, ಧರಿಸಿ
ಪೈಜಾಮ, ಜುಬ್ಬ, ತೊಟ್ಟು
ವಿಧ ವಿಧ ರೀತಿಯ ಪಂಚೆಯನುಟ್ಟು
ನಲಿವ ನಾವು ಭಾರತೀಯರು
ಅಜ್ಜಿ ತಿಂಡಿ, ಖಾದಿ ಉಳಿಸಿ
ಗ್ರಾಮೀಣ ಸೊಗಡನು ಬೆಳಸಿ
ದೇಸಿಯತೆಯ ಮೆರೆಸುತ
ನಲಿವ
ನಾವು ಭಾರತೀಯರು
*****************
No comments:
Post a Comment