Tuesday, 21 April 2015

ಭೇದವಿನ್ನೆಲ್ಲಿ

ಅನುಬಂಧ ಅನುರಾಗವಾಗಿ
ನಾನು ನೀನೊಂದಾಗಿ
ನಾ ನೀನಾಗಿ ನೀ ನಾನಾಗಿ
ನನ್ನಲಿ ನೀನಾಗಿ ನಿನ್ನಲ್ಲಿ ನಾನಾಗಿ
ನಮ್ಮಿಬ್ಬರಲಿ ಭೇದವಿನ್ನೆಲ್ಲಿ
ನಾನು ನೀನುಗಳಳಿದು
ನಾ ನಾನಾಗಿ, ನೀ ನೀನಾಗಿರದೆ
ನಾವಿಬ್ಬರೊಂದಾಗಿರಲು
ನಮ್ಮಿಬ್ಬರಲಿ ಬೇರೆ ಮಾತೆಲ್ಲಿ
ನಮ್ಮಿಬ್ಬರಲಿ ಭೇದವಿನ್ನೆಲ್ಲಿ

No comments:

Post a Comment