ಕೈಗಳ ಕಟ್ಟಿ
ಕಾಲ್ಗಳ ಮುದುಡಿ
ಅಮ್ಮ ನಿನ್ನಂಗೈಯಲಿ ನಾ ಮಲಗಿರುವೆ
ಕಣ್ಗಳ ಮುಚ್ಚಿ
ಮೈಯನು ಮುದುರಿ
ಅಮ್ಮ ನಿನ್ನಂಗೈಯಲಿ ನಾ ಮಲಗಿರುವೆ
ಕಿರುನಗೆ ಸೂಸಿ
ಮುದವನು ನೀಡಿ
ಅಮ್ಮ ನಿನ್ನಂಗೈಯಲಿ ನಾ ಮಲಗಿರುವೆ
ಮನವನು ತಣಿಸಿ
ಹರ್ಷವ ನುಣಿಸಿ
ಅಮ್ಮ ನಿನ್ನಂಗೈಯಲಿ ನಾ ಮಲಗಿರುವೆ
ಮೆತ್ತನೆ ಕರದಲಿ
ಅಕ್ಕರೆ ಕೈಯಲಿ
ಅಮ್ಮ ನಿನ್ನಂಗೈಯಲಿ ಸಕ್ಕರೆ ನಿದ್ರೆಯ ಮಾಡಿರುವೆ
ಚಿಂತೆಯಿಲ್ಲದೆ
ಸಂತಸದಿಂದ
ಅಮ್ಮ ನಿನ್ನಂಗೈಯಲಿ ನಾ ಮಲಗಿರುವೆ
ಸಗ್ಗದ ಸುಖವ
ಹಿಗ್ಗುತ ನಾನು
ಅಮ್ಮ ನಿನ್ನಂಗೈಯಲಿ ನಾ ಮಲಗಿರುವೆ
No comments:
Post a Comment