ಅಮ್ಮನ ನೆಲೆಯೇ ದೇಗುಲ, ಅವಳೇ ದೇವರು
ಆರಾಧಿಪ ನಿಜ ಭಕ್ತರು ನಾವೆಲ್ಲಾ
ದೇಶ ಕಾಲದ ಎಲ್ಲೆಯ ಮೀರಿದ ಭಾವ
ಅಮ್ಮನ ಪ್ರೀತಿಯು ಅತಿ ಮಧುರ
ಅಮ್ಮನ ಪ್ರೀತಿಗೆ ವಯಸಿನ
ಅಂತರವಿಲ್ಲ
ಬಡತನ ಸಿರಿತನವೆಂಬ
ಸೀಮೆಗಳಿಲ್ಲ
ಸ್ವಾರ್ಥದ ಲವಲೇಶವು ಇಲ್ಲವೆ
ಇಲ್ಲ
ಸಮತೆಯ ಮಮತೆಯ ಮೃದುಗಾನ
ಅಮ್ಮನ ಪ್ರೀತಿಯು ಅತಿ ಮಧುರ
ಅಮ್ಮನ ಪ್ರೀತಿಯ ಬಂಧನ
ಭಾವ ತರಂಗದ ಸ್ಪಂದನ
ಒಲವಿನ ನಲಿವು ಪ್ರೀತಿಯ ಚೆಲುವು
ಜಗದಲಿ ಸವಿಯದ ಜನವೆಲ್ಲಿ
ಅಮ್ಮನ ಪ್ರೀತಿಯು ಅತಿ ಮಧುರ
ಅವಳ ಪ್ರೀತಿಯೆ ಎಂದಿಗೂ ಅಮರ
No comments:
Post a Comment