ಅಮ್ಮನ ಮಮತೆಯ ಕೂಸಾಗಿ
ಆಸೆಯ ಬೆಳಕಿನ ಕಣ್ಣಾಗಿ
ಇರುತಿರೆ ನಿನ್ನ ಒಡಲಲ್ಲಿ
ಈಶನ ದಯೆಯು ಇನ್ನೇಕೆ?
ಉದಯ ರವಿಕಾಂತಿಯ ಹೊಂದುತ
ಊಟವ ನೀಡಿ ಅನ್ನಪೂರ್ಣೆಶ್ವರಿಯಾಗುತ
ಋಷಿಮುನಿಗಳ ಮೀರಿದ ತಪಸ್ವಿನಿಯೆನಿಸುತ
ಎಣೆಯಿಲ್ಲದ ಪ್ರೀತಿಯ ಉಣಿಸುತ
ಏನೇ ಬಂದರು ಎಲ್ಲವ ಸಹಿಸುತ
ಐರಾವತವನೆ ಧರೆಗಿಳಿಸುತ
ಒಲವನು ಅನುಗಾಲವು ನೀಡುತ
ಓದಿಸಿ ಬರೆಸಿ ಬುದ್ಧಿಯ ಕಲಿಸುತ
ಔದಾರ್ಯವನಧಿಕದಿ ತೋರುತ
ಅಂತರಂಗವ ನೀ ಶೋಧಿಸುತ
ಅಃ ಎಂತಹ ಒಲವಿತ್ತೆ ಇದಕೆ ಸರಿಸಾಟಿಯುಂಟೆ?
ಅಮ್ಮ ನಿನಗೆ ನೀನೇ ಸಾಟಿಯಾಗಿಹೆಯಮ್ಮ
No comments:
Post a Comment