Wednesday 23 September 2015

ಭಾರತ ಸುಪುತ್ರ ಪಂಡಿತ ದೀನದಯಾಳ್ ಉಪಾಧ್ಯಾಯ


ಸೆಪ್ಟೆಂಬರ್ 25, 1916ರಂದು ಮಥುರಾ ಜಿಲ್ಲೆಯ ನಾಗ್ಲಾ ಚಂದ್ರಬಾನ್ ಎಂಬ ಹಳ್ಳಿಯಲ್ಲಿ ಜನಿಸಿದ ಪಂಡಿತ ದೀನದಯಾಳ ಉಪಾಧ್ಯಾಯರು ಅನನ್ಯ ಸಂಘಟನಾ ಶಕ್ತಿಯ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು. ಇಡೀ ದೇಶದ ಸೇವೆಗೆ ಕಂಕಣಬದ್ಧರಾಗಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ, ಗ್ರಾಮೋದ್ಧಾರಕ್ಕಾಗಿ ಸರ್ವೋದಯಕ್ಕಾಗಿ ಅವಿತರ ದುಡಿದು ಕನಸು ಕಂಡು ನನಸಾಗಿಸಲು ಕೊನೆಯ ಉಸಿರಿನ ತನಕ ದುಡಿದ ಮಹಾಪುರುಷ. ಅವರ ಕನಸು ನನಸಾಗಿಸಲು ನಾವೆಲ್ಲರೂ ಕಂಕಣ ಬದ್ಧರಾಗಿ ಶ್ರಮಿಸೋಣ.
ನಾಗ್ಲಾ ಚಂದ್ರಬಾನ್ ಕುಗ್ರಾಮದಿ ಜನುಮವತಾಳಿ
ಬಾಲ್ಯದಲೇ ಮಾತಾಪಿತೃತಾತನ ಪ್ರೀತಿಯಿಂ ವಂಚಿತನಾಗಿ
ಸೋದರತ್ತೆ ಮಾವರ ವಾತ್ಸಲ್ಯದಲ್ಲಿ ಮಿಂದು ಬೆಳೆದು
ವಿಚಾರಶೀಲ, ಅಧ್ಯಯನಶೀಲತಾನೆನಿಸಿ
ನಾನಾಜಿ ದೇಶ್ ಮುಖ್, ಭಾವ್ ಜುಗಾದೆಯ ಸಹಚರ್ಯೆಯಲಿ 
ಪಕ್ಷ ಹಾಗೂ ಪರಿವಾರದ ಹಿತಚಿಂತಕನಾಗಿ
ಅನನ್ಯ ಸಂಘಟನಾಕಾರ ತಾನೆನಿಸಿ
ಕಿರಿಯರಿಗೆ ಮಾರ್ಗದರ್ಶಕನಾಗಿ
ದೇಶದ ಸೇವೆಗೆ ಕಂಕಣಬದ್ಧರಾಗಿ
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನಾಗಿ
ರಾಷ್ಟ್ರಧರ್ಮ ಪ್ರಕಾಶನ’, ‘ರಾಷ್ಟ್ರ ಧರ್ಮ
ಪಾಂಚಜನ್ಯ’, ‘ಸ್ವದೇಶ್ಗಳ ಜನ್ಮದಾತನಾಗಿ     
ಕಾಯಾವಾಚಾ ಮನಸಾ ದೇಶಹಿತ ಬಯಸಿ
ಸರ್ವೊದಯ ಗ್ರಾಮೋದ್ಧಾರದ ಕನಸ ನನಸಾಗ ಬಯಸಿ
ಗೆದ್ದೇ ಗೆಲ್ಲುತ್ತೇವೆ ಎಂಬ ದೃಢ ನಂಬಿಕೆಯೊಂದಿಗೆ
ಕಾರ್ಯಪ್ರವೃತರಾಗಿರೆಂದು ಜನರ ಪ್ರೇರೇಪಿಸಿ
ಜನಸ್ತೋಮದ ಹೃನ್ಮನಗಳಲ್ಲಿ ಗೌರವಾನ್ವಿತನಾದಾತ
ಭಾರತ ಮಾತೆಯ ಸುಪುತ್ರ ಪಂಡಿತ ದೀನದಯಾಳ್ ಉಪಾಧ್ಯಾಯ
ಅಲ್ಪಕಾಲದಲೇ ಅಸಂಖ್ಯಾತ ದೀಪಗಳ ಬೆಳಗಿ
ತಾ ನಂದಿದರು ಇಂದಿಗೂ ಪ್ರಜ್ವಲಿಸುತಿರುವ ಜ್ಯೋತಿ
ಆತ ಬೆಳಗಿದ ದೀಪಗಳು ಅಲ್ಲಲ್ಲಿ ಪ್ರಜ್ವಲಿಸಿವೆ ಇಂದಿಗೂ  
ಆತನ ಕನಸಗಳು ನನಸು ಮಾಡಬೇಕಿದೆ ಇಂದು ನಾವು
ಭವ್ಯತೆಯ ಶ್ರದ್ಧೆಯ ಭಾರತೀಯರಾಗಿ ಅರಳಲೇ ಬೇಕಿದೆ ಇಂದು
ಪಂಡಿತ ದೀನದಯಾಳ್ ಉಪಾಧ್ಯಾಯ ಹಾದಿಯಲಿ ನಾವು ಸಾಗುವಾ
ಚೈತನ್ಯವಾ ಭಗವಂತ ನಮಗೆ ಕರುಣಿಸಲಿ. ಅವರ ಕನಸು ನನಸಾಗಲಿ.
********************

No comments:

Post a Comment