Thursday 17 September 2015

ಸಂಕಲನಾತ್ಮಕ ಪ್ರಶ್ನೆ ಪತ್ರಿಕೆ-2

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಮಲ್ಲೇಶ್ವರಂ, ಬೆಂಗಳೂರು-03
ಸಂಕಲನಾತ್ಮಕ ಪರೀಕ್ಷೆ
ಹತ್ತನೆಯ ತರಗತಿ
ವಿಷಯ : ಕನ್ನಡ ತೃತೀಯ ಭಾಷೆ
ಗರಿಷ್ಠ ಅಂಕ : 80                                                   ಸಮಯ : 2-30 ಗಂಟೆಗಳು
ಸೂಚನೆಗಳು :                
ಪ್ರಶ್ನೆ ಪತ್ರಿಕೆಯು , ಬಿ ಮತ್ತು ಸಿ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.
ವಿಭಾಗ `ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
ವಿಭಾಗ `ಬಿಅನ್ವಯಿಕ ವ್ಯಾಕರಣ, ಅಲಂಕಾರ, ಛಂದಸ್ಸು 12 ಅಂಕಗಳು
ವಿಭಾಗ `ಸಿವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ 15 ಅಂಕಗಳು
ಉತ್ತರಗಳು ನೇರವೂ, ಸ್ಪಷ್ಟವೂ ಆಗಿರಬೇಕು
ವಸ್ತುನಿಷ್ಠ ಪ್ರಶ್ನೆಗಳಿಗೆ, ಹೊಡೆದು, ಅಳಿಸಿ, ಕೆರೆದು ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
ಪೆನ್ಸಿಲ್ ಬಳಸಿ ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
ಭಾಗ - `
ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಒಂದೊಂದೇ ವಾಕ್ಯದ ಉತ್ತರವನ್ನು ಬರೆಯಿರಿ.                       10X1=10
1.  ಪೊಲೀಸರು ಗೊರೂರರಿಗೆ ಎಲ್ಲಿ ಮಲಗಲು ಹೇಳಿದರು?
2. ಕವಿರಾಜ ಮಾರ್ಗದಲ್ಲಿರುವ ‘ಅಷ್ಟಾದಶಾಕ್ಷರೀಮಂತ್ರ’ ಯಾವುದು?
3.ಕನ್ನಡಿಗರು ಅಭಿಮಾನಧನರೆಂಬುದನ್ನು ಎತ್ತಿಹಿಡಿದಿರುವ ಶಾಸನಯಾವುದು?
4 ಅನಿಲ್ ಕುಂಬ್ಳೆಯವರ ಪ್ರಾಥಮಿಕ ವಿದ್ಯಾಭ್ಯಾಸವು ಯಾವ ಶಾಲೆಯಲ್ಲಿ ನಡೆಯಿತು?
5. ಅನಿಲ್ ಕುಂಬ್ಳೆಯವರ ಹೆಸರಿನ ವೃತ್ತ ಎಲ್ಲಿದೆ?
6. ಮನುಜ ಲೋಕವನ್ನು ದಿವಿಜ ನಾಕವಾಗಿಸಿದುದು ಯಾವುದು?
7.ನಿಸಾರ್ ಅಹಮದ್ ಅವರು ಇಂದೇ ಏನೆಂದು ಪಣತೊಡಬೇಕೆಂದು ಕರೆನೀಡಿದ್ದಾರೆ?
8.ಸ್ವಸ್ವಭಾವ ಮತ್ತು ಚಹರೆ ಬೇರೆಯಾಗಿದ್ದರೂ ಒಂದೇ ಆಗಿರುವುದು ಯಾವುದೆಂದು ಕವಿ ಹೇಳಿದ್ದಾರೆ?
9.ಯಾರು ಮಾನ್ಯರಲ್ಲವೆಂದು ಪುಲಿಗೆರೆ ಸೋಮ ಕವಿ ಹೇಳಿದ್ದಾನೆ?
10. ಮಂತ್ರಿಯಾಗಲು ಯಾವ ಸಾಮರ್ಥ್ಯವಿರಬೇಕೆಂದು ಸೋಮೇಶ್ವರ ಶತಕದಲ್ಲಿ ಹೇಳಿದೆ?.
ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳ ಉತ್ತರಗಳನ್ನು ಬರೆಯಿರಿ10X2=20
11 ಭಾರತದಂತೆ ಅಮೇರಿಕಾದಲ್ಲಿ ಎಲ್ಲೆಂದರಲ್ಲಿ ಉಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆ?
12 ಗೊರೂರರು ಪೊಲೀಸರ ಬಳಿ ವಿವರಿಸಿದ ಸಮಸ್ಯೆಯಾವುದು?
13 ‘ಕರ್ನಾಟಕತ್ವ’ ಗದ್ಯಭಾಗದಲ್ಲಿ ಪ್ರಸ್ತಾಪಿಸಿರುವ ಕರ್ನಾಟಕದ ವಿಶಿಷ್ಟಗುಣ ಗುಣಯಾವುದು?
14. ನಾವು ಕರ್ನಾಟಕದ ಪ್ರಜೆಗಳೆಂಬ ಹೆಸರಿಗೆ ಯಾವಾಗ ಪಾತ್ರರಾಗುತ್ತೇವೆಂದು ರಾಜರತ್ನಂರವರು ಹೇಳಿದ್ದಾರೆ?
        15. ಕುಂಬ್ಳೆಯವರ ಯಾವುದಾದರು ಎರಡು ಪ್ರಮುಖ ಸಾಧನೆಯನ್ನು ತಿಳಿಸಿರಿ.
        16. ಕೋಗಿಲೆಯಲ್ಲಿ ಕವಿಯ ಕೋರಿಕೆ ಏನು?
        17. ಕೋಗಿಲೆಯು ಎಲ್ಲಿ ಕುಳಿತು ಹೇಗೆ ಹಾಡುತ್ತಿದೆ?
        18. ನಿಸಾರ್ ಅಹಮದ್ ಅವರು ಎಲ್ಲಾ ಧರ್ಮಗಳ ಸಾರವೂ ಒಂದೇ ಎಂದು ಹೇಗೆ ವ್ಯಕ್ತಪಡಿಸಿದ್ದಾರೆ?
        19. ಸಮಸ್ತ ಬ್ರಹ್ಮಾಂಡದಲ್ಲಿ ಸಂಚರಿಸಲು ಏನು ಮಾಡಬೇಕೆಂದು ಕವಿ ಹೇಳಿದ್ದಾರೆ?
20. ಸಂಬಂಧಪಟ್ಟ ಇಲಾಖೆಗಳು ಜನರ ಪ್ರಾಣಗಳ ಜತೆ ಚೆಲ್ಲಾಟವಾಡುವುದು ಉಚಿತವೇ ಎಂಬ ಆಲೋಚನೆ ಲೇಖಕರ ಮನಸ್ಸಿನಲ್ಲಿ ಮೂಡಲು ಕಾರಣವೇನು?
ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಸಹಿತ ಸ್ವಾರಸ್ಯವನ್ನು ವಾಕ್ಯಗಳಲ್ಲಿ ಬರೆಯಿರಿ.                2X3=6
21. “ಅಸೂಯೆಯಿಲ್ಲದವನಿಗೆ ಸರ್ವತ್ರ ಅಭಯ”.
22. “ನೀ ಬಲವಾದರೆ ಈ ದೇಶದ ಪ್ರಗತಿ”.   
ಸಾಹಿತಿಗಳ ಸ್ಥಳ, ಕಾಲ, ಕೃತಿಗಳನ್ನು ವಾಕ್ಯಗಳಲ್ಲಿ ಬರೆಯಿರಿ.                             2X3=6
23. ಗೊರೂರು ರಾಮಸ್ವಾಮಿ ಅಯ್ಯಂಗಾರ್
24. ಚೆನ್ನವೀರ ಕಣವಿ
ಕೆಳಗಿನ ಪದ್ಯಭಾಗವನ್ನು ಪೂರ್ಣಮಾಡಿರಿ.                                            1X3=3
25.ಅಕ್ಷರ  __________________                                         ____________________
  _____________________
  __________________ರೂಪ                        
                                 ಅಥವಾ 
 ಈಗ_________________
   ______________________
   _________ಕಂಠ_______
    ಜಗದ_________________
   _____________________ 
   ________________ಒಮ್ಮೆಲೆ                                                                
ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳ ಉತ್ತರಗಳನ್ನು ಬರೆಯಿರಿ. 2X4=8
26. ನಿವೃತ್ತಿಯ ನಂತರದ ಅನಿಲ್ ಕುಂಬ್ಳೆಯವರ ಸಾಧನೆಗಳನ್ನು ವಿವರಿಸಿರಿ.
ಅಥವಾ
  ಮಿನಿ ಪೊಲೀಸ್ ನಗರದಲ್ಲಿ ಗೊರೂರರು ದಾರಿ ತಪ್ಪಸಿಕೊಂಡ ಸನ್ನಿವೇಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
27. ಭೂಮಿತಾಯಿಯ ಮಕ್ಕಳಾದ ನಾವೆಲ್ಲರೂ ಒಂದಾಗಿರಬೇಕೆಂಬ ಭಾವನೆ ‘ಒಂದೇ’ ಎಂಬ ಪದ್ಯದಲ್ಲಿ ಹೇಗೆ ವರ್ಣಿತವಾಗಿದೆ? ವಿವರಿಸಿ .
                                                        ಅಥವಾ
  ಕೋಗಿಲೆಯ ಗಾನವನ್ನು ಚೆನ್ನವೀರ ಕಣವಿಯವರು ಹೇಗೆ ಬಣ್ಣಿಸಿದ್ದಾರೆ? ನಿಮ್ಮ ಮಾತುಗಳಲ್ಲಿ ವರ್ಣಿಸಿರಿ.
.
ಭಾಗ - `ಬಿ
ಅನ್ವಯಿಕ ವ್ಯಾಕರಣ 12 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕೊಟ್ಟಿರುವ ಜಾಗದಲ್ಲಿಯೇ ಕ್ರಮಾಕ್ಷರದೊಂದಿಗೆ ಉತ್ತರವನ್ನು ಬರೆಯಿರಿ.12X1=12
28. ಮಿನಿಪೊಲೀಸ್ ನಗರಕ್ಕೆ ಹೋಗಿದ್ದ ಗೊರೂರರು ದಾರಿಯಲ್ಲಿ ಕಾರಿನಿಂದ ಇಳಿದರು.- ಈ ವಾಕ್ಯದಲ್ಲಿರುವ ಪ್ರಥಮ ವಿಭಕ್ತಿಯನ್ನೊಳಗೊಂಡ ಪದ:
() ಮಿನಿಪೊಲೀಸ್ ನಗರಕ್ಕೆ  (ಬಿ)  ಗೊರೂರರು (ಸಿ) ದಾರಿಯಲ್ಲಿ (ಡಿ) ಕಾರಿನಿಂದ
29. ಈ ಕೆಳಗಿನವುಗಳಲ್ಲಿ ಅವರ್ಗೀಯ ವ್ಯಂಜನಗಳು :
() ಆ ಈ ಊ (ಸಿ) ಕ ತ ಪ (ಬಿ) ಙ ಞ ಣ (ಡಿ) ಯ ರ ವ.
30. “ತೆಂಕಣದ ತಂಪಾದಗಾಳಿ ಬೀಸಿದರೂ ಬನವಾಸಿದೇಶವನ್ನು ಮರೆಯಲಾರೆನೆಂದು ಪಂಪನು ಅಭಿಮಾನದಿಂದ ನುಡಿದಿರುವನು”. ವಾಕ್ಯದಲ್ಲಿರುವ ದಿಗ್ವಾಚಕ ಪದ
       () ತೆಂಕಣ (ಸಿತಂಪಾದಗಾಳಿ  (ಬಿ) ಬನವಾಸಿದೇಶ (ಡಿ) ಅಭಿಮಾನ
31.’ನಾನುಎಂಬುದು ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ  :
() ಪ್ರಥಮ ಪುರುಷ (ಸಿ) ದ್ವಿತೀಯ ಪುರುಷ  (ಬಿ) ಮಧ್ಯಮ ಪುರುಷ (ಡಿ) ಉತ್ತಮ ಪುರುಷ
32. ‘ಹನುಮನಂತೆ ನೀ ವಿಕಾಸಗೊಳ್ಳುವೆ’ -. ವಾಕ್ಯದಲ್ಲಿರುವ ಅಲಂಕಾರ :
() ಉಪಮಾ  (ಸಿ) ಯಮಕ (ಬಿ) ರೂಪಕ (ಡಿ) ಚಿತ್ರಕವಿತ್ವ
33.’ಒರೆಗಲ್ಲು’- ಈ ಸಂಧಿಗೆ ಉದಾಹರಣೆಯಾಗಿದೆ:
() ಲೋಪ (ಸಿ) ಆಗಮ (ಬಿ) ಆದೇಶ (ಡಿ) ಜಸ್ತ್ವ
34. ‘ಕೂಜನಎಂದರೆ:
() ಕೋಗಿಲೆಯ ಧ್ವನಿ (ಸಿ) ಕೆಟ್ಟ ಜನ  (ಬಿ) ಕುಖ್ಯಾತರು (ಡಿ) ಜನರ ಕೂಗು
35.’ಮಧುರಪದದ ವಿರುದ್ಧಾರ್ಥ ಪದ          :
() ಸುಮಧುರ (ಸಿಕರ್ಕಶ  (ಬಿ) ಕಠೋರ (ಡಿ) ಕಠಿಣ
36. ಮೂರು ಸಾಲಿನ ಪದ್ಯವನ್ನು ಹೀಗೆಂದು ಕರೆಯುತ್ತಾರೆ:
() ತ್ರಿಪದಿ (ಸಿ) ಚೌಪದಿ (ಬಿ) ಕಂದ (ಡಿ) ವೃತ್ತ
37 ‘ಬಣ್ಣ’ – ಇದರ ತತ್ಸಮರೂಪ:
 () ವರ್ಣ (ಸಿ) ಬಣ್ಣನೆ (ಬಿ) ವರಣ  (ಡಿ) ಬಣ
38. ‘ಕಷ್ಟ ಕಾರ್ಪಣ್ಯ’- ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :       
 () ದ್ವಿರುಕ್ತಿ (ಸಿ) ಜೋಡುನುಡಿ (ಬಿ) ನುಡಿಗಟ್ಟು (ಡಿ) ಅನುಕರಣಾವ್ಯಯ
39. ಈ ಕೆಳಗಿನವುಗಳಲ್ಲಿ ‘ಗಳು’ ಪ್ರತ್ಯಯ ಸೇರಿ ಬಹುವಚನವಾಗವುದು:
 () ತಾಯಿ (ಸಿ) ಹಣತೆ (ಬಿ) ಮನುಷ್ಯ (ಡಿ) ಮಗು.
ಭಾಗ - `ಸಿ
ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 15 ಅಂಕಗಳು
40. ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ಸ್ವಾರಸ್ಯ ಸಹಿತ ವಿಸ್ತರಿಸಿ ಬರೆಯಿರಿ.1X3=3
  ಕಷ್ಟಪಟ್ಟರೆ ಫಲವುಂಟು.
  ಶಕ್ತಿಗಿಂತ ಯುಕ್ತಿ ಮೇಲು.
  ಆಡಿಉಂಡ ಮೈ ಅಟ್ಟಿ ಉಂಡೀತೇ.
ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. 1X4=4
ಕನ್ನಡದ ಪ್ರಖ್ಯಾತ ಕವಿಗಳಲ್ಲೊಬ್ಬರಾದ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ಪೂರ್ಣ ಹೆಸರು ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ.  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹತ್ತಿರದ ಈಸೂರು ಗ್ರಾಮದಲ್ಲಿ ಫೆಬ್ರವರಿ 7, 1926ರಂದು ಜನಿಸಿದರು. ತಂದೆ ಈಸೂರು ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಶಾಂತವೀರಪ್ಪರು. ತಾಯಿ ವೀರಮ್ಮ. ಕುವೆಂಪು ಅವರ ಮೆಚ್ಚಿನ ಶಿಷ್ಯರೂ, ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತರರೂ ಆಗಿದ್ದರು.
ನವೆಂಬರ್ 1, 2006ರ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು. ಗೋವಿಂದ ಪೈ ಮತ್ತು ಕುವೆಂಪು ನಂತರ ಕನ್ನಡ ನಾಡಿನ ಮೂರನೆಯ ರಾಷ್ಟ್ರಕವಿ ಎಂಬ ಕೀರ್ತಿಗೆ ಭಾಜನರಾದರು.
ಪ್ರಶ್ನೆಗಳು:
41 ಶಿವರುದ್ರಪ್ಪನವರ ಪೂರ್ಣ ಹೆಸರೇನು?
42. ಶಿವರುದ್ರಪ್ಪನವರು ಎಲ್ಲಿ ಜನಿಸಿದರು?
43. ಶಿವರುದ್ರಪ್ಪನವರು ರಾಷ್ಟ್ರಕವಿ ಎಂಬ ಕೀರ್ತಿಗೆ ಭಾಜನರಾದುದು ಎಂದು?
44. ರಾಷ್ಟ್ರಕವಿ ಎಂಬ ಕೀರ್ತಿಗೆ ಭಾಜನರಾದ ಕನ್ನಡದ ಕವಿಗಳು ಯಾರು ಯಾರು?
45. ನಿಮ್ಮ ಶಾಲೆಯಲ್ಲಿ ಆಚರಿಸುವ ಗಣೇಶೋತ್ಸವಕ್ಕೆ ಬರುವಂತೆ ಆಹ್ವಾನಿಸಿ ಶಿಕಾರಿಪುರದಲ್ಲಿರುವ  ನಿಮ್ಮ ಗೆಳತಿ ಅಮೋಘ / ಗೆಳೆಯ ಅಕಾಶ್ ಗೆ ಒಂದು ಪತ್ರ ಬರೆಯಿರಿ.
ಅಥವಾ
ಜಮಖಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಸವಿತ/ಸತೀಶ್ ಎಂದು ಭಾವಿಸಿ ಸೂಕ್ತ ಕಾರಣ ನೀಡಿ ಎರಡು ದಿನ ರಜೆಯನ್ನು ಕೊಡುವಂತೆ ಕೋರಿ ನಿಮ್ಮಶಾಲೆಯ ಮುಖ್ಯೋಪಾಧ್ಯಾಯರಿಗೆ ಒಂದು ರಜಾ ಚೀಟಿಯನ್ನು ಬರೆಯಿರಿ. 1X4=4
46. ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ಹತ್ತು ವಾಕ್ಯಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ. 1X4=4
      ನಿಮ್ಮ ಮೆಚ್ಚಿನ ದೂರದರ್ಶನದ ಕಾರ್ಯಕ್ರಮ.
      ನೀವು ಕೈಗೊಂಡ ಪ್ರವಾಸದ ಅನುಭವ
      ಭಾರತವು ಎದುರಿಸುತ್ತಿರುವ ಸಮಸ್ಯೆಗಳು.

*******************

No comments:

Post a Comment