Tuesday 1 September 2015

ದ್ವಿತೀಯ ರೂಪಣಾತ್ಮಕ ಪ್ರಶ್ನೆ ಪತ್ರಿಕೆ

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಬೆಂಗಳೂರು-03.
ದ್ವಿತೀಯ ರೂಪಣಾತ್ಮಕ ಪರೀಕ್ಷೆ ಆಗಸ್ಷ್-2015
ಕನ್ನಡ ತೃತೀಯ ಭಾಷೆ
ಹತ್ತನೇ ತರಗತಿ
ಗರಿಷ್ಠ ಕಾಲಾವಧಿ : 45 ನಿಮಿಷಗಳು                                    ಗರಿಷ್ಠಾಂಕ : 20
ಭಾಗ - `
ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 13 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಒಂದೊಂದೇ ವಾಕ್ಯದ ಉತ್ತರವನ್ನು ಬರೆಯಿರಿ.          3X1=3
1)  ಕವಿರಾಜ ಮಾರ್ಗದಲ್ಲಿರುವ ಅಷ್ಟಾದಶಾಕ್ಷರೀಮಂತ್ರ ಯಾವುದು?
2) ಸ್ವಸ್ವಭಾವ ಮತ್ತು ಚಹರೆಗಳು ಬೇರೆಯಾಗಿದ್ದರೂ ಯಾವುದು ಒಂದೇ ಎಂದು ಕವಿ ನಿಸಾರ್ ಹೇಳಿದ್ದಾರೆ?
3) ಈರಪ್ಪ ಎಂ.ಕಂಬಳಿಯವರು ಯಲಬುರ್ಗಿಯಿಂದ ಮುಂಡರಗಿಗೆ ಪ್ರಯಾಣ ಮಾಡಿದ್ದೇಕೆ?
ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳ ಉತ್ತರಗಳನ್ನು ಬರೆಯಿರಿ.2X2=4
4) ಕರ್ನಾಟಕದ ವಿಶಿಷ್ಟಗುಣ ಯಾವುದು? ವಿವರಿಸಿ
5) ಎಲ್ಲಾ ಧರ್ಮದುಸಿರು ಒಂದೇ ಎಂಬ ಭಾವನೆಒಂದೇ ಎಂಬ ಕವಿತೆಯಲ್ಲಿ ಹೇಗೆ ಮೂಡಿ ಬಂದಿದೆ?
ಕೆಳಗಿನ ಹೇಳಿಕೆಯನ್ನು ಸಂದರ್ಭ ಮತ್ತು ಸ್ವಾರಸ್ಯ ಸಹಿತ ವಾಕ್ಯಗಳಲ್ಲಿ ವಿವರಿಸಿ.  1X2=2
6) “ಮಾನಭಂಗಕ್ಕಿಂತ ಮರಣವೇ ಮೇಲು.”
                       ಅಥವಾ
ಪೂರ್ವೋತ್ತರ ಪಡು ತೆಂಕಣ ಗಾಳಿ ಮುಗಿಲು ಒಂದೆ.”
7) ಜಿ.ಪಿ. ರಾಜರತ್ನಂ ಅಥವಾ ಕೆ.ಎಸ್. ನಿಸಾರ್ ಅಹಮದ್ರವರ ಸ್ಥಳ, ಕಾಲ, ಕೃತಿಗಳನ್ನು ವಾಕ್ಯಗಳಲ್ಲಿ ಬರೆಯಿರಿ                                                           1X2=2
ಕೆಳಗಿನ ಪದ್ಯಭಾಗವನ್ನು ಪೂರ್ಣಮಾಡಿರಿ.                                1X2=2
8) ನಾವು----------                                      ಬಾಣ------
-----------ಒಂದೆ                                     -------ಒಂದೆ
ಭೂಮಿ ---------              ಅಥವಾ                  ಕಂದ-------
  -----------ಇಂದೆ                                      -------ಒಂದೆ
ಭಾಗ - `ಬಿ
ಅನ್ವಯಿಕ ವ್ಯಾಕರಣ - 3 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಉತ್ತರವನ್ನು ಬರೆಯಿರಿ.                      3X1=3
9) ಕೆಳಗಿನ ಪದಗಳಲ್ಲಿ ಆಗಮ ಸಂಧಿಗೆ ಉದಾಹರಣೆ:
() ಕೊಟ್ಟಿರುವ (ಬಿ) ಗುಂಡಗಿರುವ (ಸಿ) ಉದಯವಾಗಲಿ (ಡಿ) ಮಂಡಲಾಕಾರ
10) ‘ಕರ್ನಾಟಕದಿಂದ- ಪದದಲ್ಲಿರುವ ವಿಭಕ್ತಿ ಪ್ರತ್ಯಯ:
() ಪ್ರಥಮಾ (ಬಿ) ದ್ವಿತೀಯಾ  (ಸಿ) ತೃತೀಯಾ (ಡಿ) ಚತುರ್ಥೀ
11) ‘ಮಜಭೂತಾದ ಆನೆಯಂಬಾರಿ ಏರಿ ಕೂತಂತೆ ಭಾಸವಾಯಿತು- ವಾಕ್ಯದಲ್ಲಿರುವ ಅಲಂಕಾರ:
() ರೂಪಕ (ಬಿ) ಉಪಮಾ (ಸಿ) ಉತ್ಪ್ರೇಕ್ಷಾ (ಡಿ) ದೃಷ್ಟಾಂತ
ಭಾಗ - `ಸಿ
 ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 4 ಅಂಕಗಳು
12) ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರವನ್ನು ಬರೆಯಿರಿ.2X1=2
ಶಿಶುನಾಳ ಶರೀಫರನ್ನು ಕರ್ನಾಟಕದ ಕಬೀರ್ ದಾಸ್ ಎಂದು ಕರೆಯಲಾಗುತ್ತದೆ. ಹಿಂದೂ, ಮುಸ್ಲಿಮರೆಂಬ ಭೇದವಿಲ್ಲದೆ ಎಲ್ಲರೂ ಅವರನ್ನು ಸಂತರೆಂದು ಪರಿಗಣಿಸಿದ್ದಾರೆ. ಕರ್ನಾಟಕದ ಮೊದಲನೆಯ ಮುಸ್ಲಿಂ ಕವಿ ಎಂಬ ಖ್ಯಾತಿ ಕೂಡ ಅವರಿಗಿದೆ.ಇಮಾಮ್ ಸಾಹೇಬ್ ಮತ್ತು ಹಾಜುಮಾ ಎಂಬ ದಂಪತಿಗಳ ಮಗನಾಗಿ ಜನಿಸಿದ ಶರೀಫರ ಹುಟ್ಟೂರು ಧಾರವಾಡ ಜಿಲ್ಲೆಯ ಶಿಶುನಾಳ ಎಂಬ ಚಿಕ್ಕ ಗ್ರಾಮ.
1.  ಶಿಶುನಾಳ ಶರೀಫರನ್ನು ಏನೆಂದು ಕರೆಯುತ್ತಾರೆ?
2. ಶಿಶುನಾಳ ಶರೀಫರ ತಂದೆ ತಾಯಿ ಯಾರು?
13) ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ.  1X2=2 
  ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.
  ಮಾಡಿದ್ದುಣ್ಣೋ ಮಹರಾಯ.
  ದೇಶ ಸುತ್ತಬೇಕು ಕೋಶ ಓದಬೇಕು.

*****************

2 comments: