Wednesday 2 September 2015

ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಪ್ರಶ್ನೆಗಳು

ಪಾಠದ ಶೀರ್ಷಿಕೆ : ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ (ವ್ಯಕ್ತಿ ಪರಿಚಯ)
                                                                                 -ಸಂಪಾದಿತ
1.     ನಿಮಗೆ ಗೊತ್ತಿರುವ ಜಗತ್ಪ್ರಸಿದ್ಧಿಯನ್ನು ಪಡೆದಿರುವ ಮಹನೀಯರ ಹೆಸರು ಹಾಗೂ ಅವರ ಸಾಧನೆಗಳನ್ನು ತಿಳಿಸಿರಿ.
2.    ಅಗಾದ ಪರಿಶ್ರಮದಿಂದ ಸಾಧನೆಗಳನ್ನು ಮಾಡಿದ ನಿಮಗೆ ತಿಳಿದಿರುವ ಸಾಧಕರ ಸಾಧನೆಗಳನ್ನು ತಿಳಿಸಿರಿ.
3.    ಗುರಿ ಸಾಧನೆಗೆ ಅತ್ಯಾವಶ್ಯಕವಾದುದು ಯಾವುದು?
4.    ಪರಿಶ್ರಮ, ನಿಷ್ಠೆ ಮತ್ತು ಏಕಾಗ್ರತೆಯ ಮಹತ್ವವನ್ನು ತಿಳಿಸಿರಿ.
5.    ಲೋಕಮಾನ್ಯತೆ ಪಡೆಯಲು ಅನುಷ್ಠಾನಗೊಳಿಸ ಬೇಕಾದ ಪ್ರಮುಖ ತತ್ವಗಳಾವುವು?
6.    ಕ್ರೀಡಾಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಕ್ರೀಡಾಪಟುಗಳನ್ನು ಹೆಸರಿಸಿ.
7.    ಕ್ರೀಡೆಗಳಲ್ಲಿ ಲೋಕವಿಖ್ಯಾತಿಯನ್ನು ಪಡೆದಿರುವ ಕ್ರೀಡೆಗಳಾವುವು?
8.    ಜಗತ್ತಿನಲ್ಲೇ ಜನಪ್ರಿಯವಾದ ಕ್ರೀಡೆಯಾವುದು?
9.    ವಿಶ್ವಮಟ್ಟದಲ್ಲಿ ಹೆಸರುಮಾಡಿರುವ ನಿಮಗೆ ಗೊತ್ತಿರುವ ಭಾರತೀಯ ‘ಕ್ರಿಕೆಟ್ ಆಟಗಾರರು’ ಯಾರು ಯಾರು?
10.   ವಿಶ್ವಮಟ್ಟದಲ್ಲಿ ಹೆಸರುಮಾಡಿರುವ ಕರ್ನಾಟಕದ ‘ಕ್ರಿಕೆಟ್ ಆಟಗಾರರು’ ಯಾರು ಯಾರು?
11.    ವಿಶ್ವದ ಅಗ್ರಮಾನ್ಯ ಕರ್ನಾಟಕದ ‘ಬೌಲರ್’ಗಳು ಯಾರು ಯಾರು?
12.   ಸ್ಪಿನ್ ಮಾಂತ್ರಿಕನೆಂದು ಪ್ರಖ್ಯಾತಿ ಪಡೆದ ಕ್ರಿಕೆಟಿಗ ಯಾರು?
13.   ಅನಿಲ್ ಕುಂಬ್ಳೆಯವರನ್ನು ಸ್ಪಿನ್ ಮಾಂತ್ರಿಕನೆಂದು ಕರೆಯಲು ಕಾರಣವೇನು?
14.   ಅನಿಲ್ ಕುಂಬ್ಳೆಯವರ ಯಾವ ಶೈಲಿಯನ್ನು ಕೆಲವರು ಅಸಾಂಪ್ರದಾಯಿಕವೆಂದು ಭಾವಿಸಿದ್ದಾರೆ?
15.   ಅನಿಲ್ ಕುಂಬ್ಳೆಯವರು ಭಾರತದ ಅಗ್ರಮಾನ್ಯ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದುದು ಹೇಗೆ?
16.   ಕ್ರಿಕೆಟ್ ಪಟು ಅನಿಲ್ ಕುಂಬ್ಳೆಯನ್ನು ಕುರಿತು ಡುಂಢಿರಾಜ್ ಬರೆದಿರುವ ಹನಿಗವನ ಯಾವುದು?
17.   ಅನಿಲ್ ಕುಂಬ್ಳೆ ಜನಿಸಿದ ಸ್ಥಳ ಯಾವುದು? ಜನ್ಮ ದಿನಾಂಕವನ್ನು ತಿಳಿಸಿರಿ.
18.   ಅನಿಲ್ ಕುಂಬ್ಳೆಯವರ ತಂದೆ ತಾಯಿಯ ಹೆಸರನ್ನು ತಿಳಿಸಿರಿ?
19.   ‘ಕುಂಬ್ಳೆ’ ಎಂಬ ಹೆಸರು ಅನಿಲ್ ಕುಂಬ್ಳೆಯವರಿಗೆ ಬಂದುದು ಹೇಗೆ?
20. ಕುಂಬ್ಳೆ ಎಂಬ ಹಳ್ಳಿ ಯಾವ ತಾಲ್ಲೂಕಿನಲ್ಲಿದೆ?
21.   ಅನಿಲ್ ಕುಂಬ್ಳೆಯವರ ಕ್ರಿಕೆಟ್ ಆಟ ಪ್ರಾರಂಭವಾದುದು ಎಲ್ಲಿ?
22. ಅನಿಲ್ ಕುಂಬ್ಳೆಯವರು ತಮ್ಮ ಹದಿಮೂರನೆಯ ವಯಸ್ಸಿನಲ್ಲಿ ಸೇರ್ಪಡೆಯಾದ ಕ್ರಿಕೆಟ್ ಸಂಸ್ಥೆಯಾವುದು?
23. ಅನಿಲ್ ಕುಂಬ್ಳೆಯವರು ಕ್ರಿಕೆಟ್ ಕಲಿತ ಸಂಸ್ಥೆಯಾವುದು?
24. ಅನಿಲ್ ಕುಂಬ್ಳೆಯವರ ಬಾಲ್ಯವನ್ನು ಕುರಿತು ಬರೆಯಿರಿ.
25. ಅನಿಲ್ ಕುಂಬ್ಳೆಯವರು ಓದಿದ ಪ್ರಾಥಮಿಕಶಾಲೆ ಯಾವುದು?
26. ಅನಿಲ್ ಕುಂಬ್ಳೆಯವರು ವಿದ್ಯಾಭ್ಯಾಸವನ್ನು ಮಾಡಿದ ಪ್ರೌಢಶಾಲೆ ಯಾವುದು?
27.  ಅನಿಲ್ ಕುಂಬ್ಳೆಯವರು ಪದವೀ ಪೂರ್ವ ಶಿಕ್ಷಣವನ್ನು ಪಡೆದ ಕಾಲೇಜು ಯಾವುದು?
28. ಅನಿಲ್ ಕುಂಬ್ಳೆಯವರು ವೃತ್ತಿಪರ ಶಿಕ್ಷಣವನ್ನು ಪಡೆದ ಕಾಲೇಜು ಯಾವುದು?
29. ಅನಿಲ್ ಕುಂಬ್ಳೆಯವರು ಶೈಕ್ಷಣಿಕವಾಗಿ ಪಡೆದ ಉನ್ನತ ಪದವಿಯಾವುದು?
30. ಅನಿಲ್ ಕುಂಬ್ಳೆಯವರ ವಿದ್ಯಾರ್ಥಿಜೀವನವನ್ನು ಕುರಿತು ಬರೆಯಿರಿ?
31.    ಅನಿಲ್ ಕುಂಬ್ಳೆಯವರು ಯಾವ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದರು?
32. ಅನಿಲ್ ಕುಂಬ್ಳೆಯವರು ಭಾರತದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದುದು ಯಾವಾಗ?
33. ಅನಿಲ್ ಕುಂಬ್ಳೆಯವರು ಎದುರಾಳಿಗೆ ಸಿಂಹಸ್ವಪ್ನವಾಗಿದ್ದರು ಹೇಗೆ?
34. ಅನಿಲ್ ಕುಂಬ್ಳೆಯವರಿಗೆ ಇದ್ದ ಪ್ರೀತಿಯ ಅಡ್ಡ ಹೆಸರು ಯಾವುದು? ಹಾಗೆ ಕರೆಯಲು ಕಾರಣವೇನು?
35. ಭಾರತೀಯ ಕ್ರಿಕೆಟ್ ತಂಡದ ಗೆಲುವಿಗೆ ಕುಂಬ್ಳೆಯವರು ಪ್ರಮುಖ ಅಸ್ತ್ರವಾಗಿದ್ದರು ಹೇಗೆ?
36. ‘ಜಂಬೋ’ ಎಂದು ಯಾರನ್ನು ಕರೆಯುತ್ತಿದ್ದರು? ಹಾಗೆ ಕರೆಯಲು ಕಾರಣವೇನು?
37.  ಅನಿಲ್ ಕುಂಬ್ಳೆಯವರು ಭಾರತದ ಅಗ್ರಮಾನ್ಯ ಬೌಲರ್ ಎಂಬ ಖ್ಯಾತಿಗೆ ಪಾತ್ರವಾಗಲು ಕಾರಣವೇನು?
38. ಅನಿಲ್ ಕುಂಬ್ಳೆಯವರ ವಿಶ್ವ ದಾಖಲೆಯಾವುದು?
39. 2002ರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆಯವರ ಸಾಧನೆಗಳನ್ನು ತಿಳಿಸಿರಿ.
40. ಅನಿಲ್ ಕುಂಬ್ಳೆಯವರ ನಾಯಕತ್ವದಲ್ಲಿ ಮಾಡಿದ ಕ್ರಿಕೆಟ್ ಪ್ರವಾಸ ಯಾವುದು?
41.   2007ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವ ವಹಿಸಿದವರು ಯಾರು?
42. ಅನಿಲ್ ಕುಂಬ್ಳೆಯವರು ಔಟಾಗದೆ 110 ರನ್ ಗಳಿಸಿದ ಟೆಸ್ಟ್ ಪಂದ್ಯ ಯಾವುದು?
43. ‘ಜಂಬೋ’ ಎಂಬ ಹೆಸರನ್ನು ಪಡೆದ ಕ್ರಿಕೆಟಿಗ ಯಾರು? ಈ ಹೆಸರು ಬರಲು ಕಾರಣವೇನು?
44. ಫಿರೋಜ್ ಷಾ ಕೋಟ್ಲ ಮೈದಾನ ಎಲ್ಲಿದೆ?
45. ಅನಿಲ್ ಕುಂಬ್ಳೆಯವರು ಫಿರೋಜ್ ಷಾ ಕೋಟ್ಲ ಮೈದಾನದಲ್ಲಿ ಮಾಡಿದ ಸಾಧನೆ ಯಾವುದು?
46. ಅನಿಲ್ ಕುಂಬ್ಳೆಯವರು ಒಂದೇ ಇನ್ನಿಂಗ್ಸ್ನಲ್ಲಿ ಎಲ್ಲ ಹತ್ತು ವಿಕೆಟ್ಗಳನ್ನೂ ಪಡೆದು ಪಂದ್ಯ ಯಾವುದು? ಆ ಪಂದ್ಯ ನಡೆದುದು ಎಲ್ಲಿ?
47.  ಪಾಕಿಸ್ತಾನದ ವಿರುದ್ಧ ಅನಿಲ್ ಕುಂಬ್ಳೆಯವರ ಸಾಧನೆ ಯಾವುದು?
48. ಭಾರತದ ಅಗ್ರಮಾನ್ಯ ಬೌಲರ್ ಆಗಿರುವ ಅನಿಲ್ ಕುಂಬ್ಳೆಯವರು ವಿಶ್ವದಲ್ಲಿ ಪಡೆದಿರುವ ಸ್ಥಾನ ಯಾವುದು?
49. ಅನಿಲ್ ಕುಂಬ್ಳೆಯವರಿಗೂ ಮೊದಲೆ ಒಂದೇ ಇನ್ನಿಂಗ್ಸ್ನಲ್ಲಿ ಎಲ್ಲ ಹತ್ತು ವಿಕೆಟ್ ಗಳನ್ನೂ ಪಡೆದ ಕ್ರಿಕೆಟ್ ಪಟು ಯಾರು
50. ಇಂಗ್ಲೆಂಡಿನ ಜಿಮ್ ಲೇಕರ್ ಯಾರು? ಅವರ ಸಾಧನೆ ಏನು?
51.   ಅನಿಲ್ ಕುಂಬ್ಳೆಯವರು ಅಂತಾರಾಷ್ಟ್ರೀಯ ಕ್ರಿಕೆಟ್ ಟೆಸ್ಟ್ ಪಂದ್ಯದಿಂದ ನಿವೃತ್ತಿಯನ್ನು ಪಡೆದುದು ಯಾವಾಗ?
52. ಅನಿಲ್ ಕುಂಬ್ಳೆಯವರು ಅಂತಾರಾಷ್ಟ್ರೀಯ ಕ್ರಿಕೆಟ್ ಟೆಸ್ಟ್ ಪಂದ್ಯದಿಂದ ನಿವೃತ್ತಿಯನ್ನು ಪಡೆದ ನಂತರದ ಸಾಧನೆಗಳಾವುವು? 
53. ಐಪಿಎಲ್ ಕ್ರೀಡಾಸ್ಪರ್ಧೆಯಲ್ಲಿ ಅನಿಲ್ ಕುಂಬ್ಳೆಯವರ ಸಾಧನೆಗಳೇನು?
54. ‘ಆಟಕ್ಕೂ ತಂಡಕ್ಕೂ ನೂರಕ್ಕೆ ನೂರು ಬದ್ಧತೆಯನ್ನು ಪಡೆದ ಆಟಗಾರ’ನೆಂಬ ಮಾತು ಅನಿಲ್ ಕುಂಬ್ಳೆಯವರಿ ಚೆನ್ನಾಗಿ ಅನ್ವಯಿಸುತ್ತದೆ ಹೇಗೆ ವಿವರಿಸಿ.
55. ಈಡನ್ ಗಾರ್ಡನ್ಸ್ ಮೈದಾನ ಎಲ್ಲದೆ?
56. ಕಲ್ಕತ್ತದಲ್ಲಿರುವ ಪ್ರಖ್ಯಾತ ಆಟದ ಮೈದಾನ ಯಾವುದು?
57.  ಈಡನ್ ಗಾರ್ಡನ್ಸ್ ಮೈದಾನದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಅನಿಲ್ ಕುಂಬ್ಳೆಯವರ ಸಾಧನೆಯೇನು?
58. ಅನಿಲ್ ಕುಂಬ್ಳೆಯವರು ರಿಲೆಯನ್ಸ್ ಕಪ್ ಅಂತಿಮ ಪಂದ್ಯದಲ್ಲಿ ಮಾಡಿದ ಸಾಧನೆ ಏನು?
59. ವೆಸ್ಟ್ಇಡೀಸಿನಲ್ಲಿ ಸಂಭವಿಸಿದ ಅನಿಲ್ ಕುಂಬ್ಳೆಯವರ ಜೀವನದ ಅವಿಸ್ಮರಣೀಯ ಕ್ಷಣಯಾವುದು?
60. ಅನಿಲ್ ಕುಂಬ್ಳೆಯವರು ವೆಸ್ಟ್ಇಡೀಸಿನಲ್ಲಿ ಬ್ರಯನ್ ಲಾರಾನ ವಿಕೆಟ್ ಪಡೆದುದು ಅವಿಸ್ಮರಣೀಯವಾದ ಕ್ಷಣವಾಗಿದೆ ಏಕೆ?
61.   ಅನಿಲ್ ಕುಂಬ್ಳೆಯವರ ಕ್ರೀಡಾ ಜೀವನದ ಅವಿಸ್ಮರಣೀಯ ಕ್ಷಣಗಳಾವುವು?
62. ಅನಿಲ್ ಕುಂಬ್ಳೆಯವರು ದವಡೆಗೆ ಗಾಯವಾದರೂ ಚಿಕಿತ್ಸೆ ಪಡೆದು ಆಡಿದ ಪಂದ್ಯ ಯಾವುದು? ಈ ಪದ್ಯದಲ್ಲಿ ಅವರ ಸಾಧನೆಯೇನು?
63. 10 ಓವರಿನಲ್ಲಿ ಕೇವಲ 13 ರನ್ ನೀಡಿ 6 ವಿಕೇಟ್ ಪಡೆದ ಪಂದ್ಯ ಯಾವುದು? ಆ ಪಂದ್ಯ ಎಲ್ಲಿ ನಡೆದಿತ್ತು?
64. ಕ್ರಿಕೆಟ್ ಜಗತ್ತಿನಲ್ಲಿ ಅನಿಲ್ ಕುಂಬ್ಳೆಯವರ ಸಾಧನೆಗಳಾವುವು?
65. ಅನಿಲ್ ಕುಂಬ್ಳೆಯವರಿಗೆ ಸಂದ ಗೌರವ ಹಾಗೂ ಪ್ರಶಸ್ತಿಗಳಾವುವು?
66. ಅನಿಲ್ ಕುಂಬ್ಳೆಯವರು ‘ಕ್ರಿಕೆಟ್’ನಿಂದ ನಿವೃತ್ತಿ ಹೊಂದಿದರೂ ಕ್ರಿಕೆಟ್ ನೊಂದಿಗೆ ಹೇಗೆ ಸಂಪರ್ಕವನ್ನು ಮುಂದುವರಿಸಿದರು?
67.  ಅನಿಲ್ ಕುಂಬ್ಳೆಯವರಿಗೆ 1995ರಲ್ಲಿ ಸಂದ ಪ್ರಶಸ್ತಿ ಯಾವುದು?
68. ಅನಿಲ್ ಕುಂಬ್ಳೆಯವರು ಭಾರತ ಸರ್ಕಾರದಿಂದ ಪಡೆದಿರುವ ಪ್ರಶಸ್ತಿಯಾವುದು?
69. ‘ಅನಿಲ್ ಕುಂಬ್ಳೆ ವೃತ್ತ’ವೆಂದು ನಾಮಕರಣವಾಗಿರುವ ವೃತ್ತ ಯಾವುದು?
70. ಬೆಂಗಳೂರಿನ ಯಾವ ವೃತ್ತಕ್ಕೆ ಅನಿಲ್ ಕುಂಬ್ಳೆಯವರ ಹೆಸರನ್ನು ಇಡಲಾಗಿದೆ?
71.   ಅನಿಲ್ ಕುಂಬ್ಳೆಯವರಿಗೆ ಗೌರವ ಡಾಕ್ಟರೇಡ್ ಪದವಿಯನ್ನು ನೀಡಿದ ವಿಶ್ವವಿದ್ಯಾಲಯ ಯಾವುದು?
72.  ಅನಿಲ್ ಕುಂಬ್ಳೆಯವರು ಗೌರವ ಡಾಕ್ಟರೇಡ್ ಪದವಿಯನ್ನು ಪಡೆದುದು ಯಾವಾಗ?
73.  ಅನಿಲ್ ಕುಂಬ್ಳೆಯವರಿಗೆ 1996ರಲ್ಲಿ ಸಂದ ಪ್ರಶಸ್ತಿ ಯಾವುದು?
74.  ಅನಿಲ್ ಕುಂಬ್ಳೆಯವರಿಗೆ ಹೆಸರು ತಂದುಕೊಟ್ಟಿರುವ ಹವ್ಯಾಸಗಳಾವುವು?
75.  ಸಂದರ್ಭಸಹಿತ ಸ್ವಾರಸ್ಯವನ್ನು ವಾಕ್ಯಗಳಲ್ಲಿ ವಿವರಿಸಿ
1)     ಎದುರಾಳಿ ದಾಂಡಿಗರಿಗೆ ಸಿಂಹಸ್ವಪ್ನವಂತೂ ಆಗಿರುತ್ತಿದ್ದವು”.
2)    ತಂಡವನ್ನು ದ್ವಿತೀಯ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿಯೂ ಇವರದಾಗಿದೆ”.
3)    “ವನ್ಯಜೀವಿ ಚಿತ್ರಗ್ರಾಹಕರಾಗಿಯೂ ಹೆಸರು ಮಾಡಿದ್ದಾರೆ”
76.  ಕನಿಷ್ಠ ಮೂರು ಪದಗಳಾದರೂ ಇರುವಂತೆ ಸಮಾನಾರ್ಥಕ ಪದಗಳನ್ನು ಬರೆಯಿರಿ.(ಗರಿಷ್ಠಕ್ಕೆ ಮಿತಿಯಿಲ್ಲ)
1)      ತಾಯಿ
2)     ಬೀದಿ
77.  ಈ ಕೆಳಗಿನ ಪದಗಳ ಸಂಧಿ ಬಿಡಿಸಿ ಹೆಸರಿಸಿ.
1)      ವಿದ್ಯಾಭ್ಯಾಸ
2)     ವಿದ್ಯಾಲಯ
3)     ಪದವಿಯನ್ನು
4)     ಘಟಿಕೋತ್ಸವ
78. ತತ್ಸಮ ತದ್ಭವಗಳನ್ನು ಬರೆಯಿರಿ.
1)      ವಿದ್ಯಾ
2)     ಬೀದಿ
3)     ದಿಕ್ಕು
4)     ಸಿಂಹ
5)     ಸ್ಥಾನ
6)     ವರ್ಷ
7)      ಕೀರ್ತಿ
8)     ಅದ್ಭುತ
9)     ಕ್ಷಣ

****************

No comments:

Post a Comment