Sunday 20 September 2015

ಸಂಕಲನಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆ-3

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಮಲ್ಲೇಶ್ವರಂ, ಬೆಂಗಳೂರು-03
ಸಂಕಲನಾತ್ಮಕ ಪರೀಕ್ಷೆ
ಹತ್ತನೆಯ ತರಗತಿ
ವಿಷಯ ಕನ್ನಡ ತೃತೀಯ ಭಾಷೆ
ಗರಿಷ್ಠ ಅಂಕ : 80                                                  ಸಮಯ : 2-30 ಗಂಟೆಗಳು
ಸೂಚನೆಗಳು :                
ಪ್ರಶ್ನೆ ಪತ್ರಿಕೆಯು , ಬಿ ಮತ್ತು ಸಿ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.
ವಿಭಾಗ `ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
ವಿಭಾಗ `ಬಿಅನ್ವಯಿಕ ವ್ಯಾಕರಣ, ಅಲಂಕಾರ, ಛಂದಸ್ಸು 12 ಅಂಕಗಳು
ವಿಭಾಗ `ಸಿವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 15 ಅಂಕಗಳು
ಉತ್ತರಗಳು ನೇರವೂ, ಸ್ಪಷ್ಟವೂ ಆಗಿರಬೇಕು
ವಸ್ತುನಿಷ್ಠ ಪ್ರಶ್ನೆಗಳಿಗೆ, ಹೊಡೆದು, ಅಳಿಸಿ, ಕೆರೆದು ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
ಪೆನ್ಸಿಲ್ ಬಳಸಿ ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
ಭಾಗ - `
ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಒಂದೊಂದೇ ವಾಕ್ಯದ ಉತ್ತರವನ್ನು ಬರೆಯಿರಿ.        10X1=10
1.  ಗೊರೂರರು ಮಿನಿ ಪೊಲೀಸ್ ನಗರಕ್ಕೆ ಏಕೆ ಹೋಗಿದ್ದರು?
2. ಗೊರೂರರು ಮಿನಿ ಪೊಲೀಸ್ ನಗರಲ್ಲಿ ತಮ್ಮ ಸಮಸ್ಯೆಯನ್ನು ಯಾರಲ್ಲಿ ಹೇಳಿಕೊಂಡರು?
3.ಮನುಜ ಲೋಕ ದಿವಿಜ ನಾಕವಾದುದು ಹೇಗೆ?
4 ಸುಧೆಯನ್ನು ಹೇಗೆ ನೀಡ ಬೇಕೆಂದು ಕವಿ ಕೋಗಿಲೆಯನ್ನು ಕೋರಿದ್ದಾರೆ?
5.ಕೋಗಿಲೆಯು ಎಲ್ಲಿ ಕುಳಿತು ಉಲಿಯುತ್ತಿದೆ?
6. ಯಾರು ಯಾರು ಒಂದೇ ಎಂದು ನಿಸಾರ್ ಅಹಮದ್ ಹೇಳಿದ್ದಾರೆ?
7.’ಕುಂಬ್ಳೆ’ ಎಂಬ ಹೆಸರು ಅನಿಲ್ ಕುಂಬ್ಳೆಯವರಿಗೆ ಹೇಗೆ ಬಂದಿತು?
8.ಅನಿಲ್ ಕುಂಬ್ಳೆಯವರು ಬಾಲ್ಯದಲ್ಲಿ ಅಭ್ಯಾಸ ಮಾಡಿದ ಕ್ರಿಕೆಟ್ ಸಂಸ್ಥೆ ಯಾವುದು?
9.ಕಂಬಳಿಯವರಿಗೆ ಆನೆಯಂಬಾರಿ ಏರಿ ಕೂತಂತೆ ಭಾಸವಾದದ್ದೇಕೆ?
10. ಕಂಬಳಿಯವರು ಬೇಂದ್ರೆಯವರ ಹಾಡನ್ನು ತಿರುಚಿ ಗೊಣಗಿಕೊಂಡ ಸಾಲುಗಳಾವುವು?.
ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳ ಉತ್ತರಗಳನ್ನು ಬರೆಯಿರಿ.10X2=20
11 ಪೊಲೀಸರು ಗೊರೂರರನ್ನು ಹೇಗೆ ಉಪಚರಿಸಿದರು?
12 ಕೋಗಿಲೆಯ ಗಾನವನ್ನು ಆಲಿಸಿದ ಚಣಮಾತ್ರದಲ್ಲಿ ಆಗುವ ಬದಲಾವಣೆಗಳಾವುದೆಂದು ಕವಿ ಹೇಳಿದ್ದಾರೆ?
13 ‘ವಸುಧಾವಳಯ’ ಎಂಬ ಮಾತು ನಮ್ಮ ನಾಡಿಗೆ ಹೇಗೆ ಒಪ್ಪುತ್ತದೆ?
14.ಬಣ್ಣ ಬೇರೆ ಬೇರೆಯಾದರು ಜೀವರಸ ಒಂದೇ ಎನ್ನುವುದಕ್ಕೆ ನಿಸಾರರು ನೀಡಿರುವ ನಿದರ್ಶನಗಳಾವುವು?
        15.ಬೆಳಕಿನ ಸತ್ವ ಹೇಗೆ ಒಂದೇ ಆಗಿದೆಯೋ ಹಾಗೆಯೆ ರಸಕವಿತ್ವವೂ ಒಂದೇ ಆಗಿದೆ ಎಂದು ಹೇಗೆ ಹೇಳಿದ್ದಾರೆ? .
        16. ಅನಿಲ್ ಕುಂಬ್ಳೆಯವರ ಕಾಲೇಜು ಶಿಕ್ಷಣವನ್ನು ಕುರಿತು ಬರೆಯಿರಿ?
        17. ಅನಿಲ್ ಕುಂಬ್ಳೆಯವರನ್ನು ಸ್ಪನ್ ಮಾಂತ್ರಿಕ ಎಂದು ಕರೆಯಲು ಕಾರಣವೇನು?
        18. “ಅನಿಲ್ ಕುಂಬ್ಳೆಯವರು ಆಟಕ್ಕೂ, ತಂಡಕ್ಕೂ ನೂರಕ್ಕೆ ನೂರು ಬದ್ಧರು” ಎಂದು ಹೇಳಲು ಕಾರಣವೇನು?
        19. ಅಕ್ಷರವು ಮಾನವನಿಗೆ ಹೊಸ ಜೀವನ ಮತ್ತು ಹೊಸ ರೂಪವನ್ನು ಹೇಗೆ ಕೊಡುತ್ತದೆ?
20. ವೀರ, ಮಂತ್ರಿ, ದೊರೆ ಮತ್ತು ಯೋಗಿಯಾಗಲು ಯಾವ ಯಾವ ಸಾಮರ್ಥ್ಯವಿರು ಬೇಕೆಂದು ಸೋಮ ಕವಿ ಹೇಳಿದ್ದಾನೆ?
ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಸಹಿತ ಸ್ವಾರಸ್ಯವನ್ನು ವಾಕ್ಯಗಳಲ್ಲಿ ಬರೆಯಿರಿ.2X3=6
21. “ಬರಿಯ ಒಡಕುಗಂಟೆ ಅಳ್ಳಾಡಿಸಿದರೆ ಅಪಶ್ರುತಿಯೊಂದೇ ಲಾಭ”.
22. “ಜಗದ ಬಿನದ ನಿನ್ನ ಮುದದ ಗಾನವಾಯ್ತೆ ಒಮ್ಮೆಲೆ?”   
ಸಾಹಿತಿಗಳ ಸ್ಥಳ, ಕಾಲ, ಕೃತಿಗಳನ್ನು ವಾಕ್ಯಗಳಲ್ಲಿ ಬರೆಯಿರಿ.              2X3=6
23. ಜಿ.ಪಿ ರಾಜರತ್ನಂ
24. ಕೆ. ಎಸ್. ನಿಸಾರ್ ಅಹಮದ್
ಕೆಳಗಿನ ಪದ್ಯಭಾಗವನ್ನು ಪೂರ್ಣಮಾಡಿರಿ.                              1X3=3
25.ದೀಪ __________________  
_______________________ 
_______________________
__________________ಸಮಸ್ತ
              ಅಥವಾ                                      
ಕರ್ನಾಟಕ________________
_______________________                                                            _______________________                                                         ____________________ಒಂದೆ               
                                                                                
                                                                   
ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳ ಉತ್ತರಗಳನ್ನು ಬರೆಯಿರಿ2X4=8
26. ಮಿನಿಪೊಲೀಸ್ ನಗರದಲ್ಲಿ ಗೊರೂರರಿಗೆ ಆದ ಅನುಭವನನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಅಥವಾ
  ಜಿ.ಪಿ. ರಾಜರತ್ನಂ ಅವರ ಲೇಖನವನ್ನು ಆಧರಿಸಿ ಕರ್ನಾಟಕ ಮತ್ತು ಕರ್ನಾಟಕತ್ವದ ಗುಣ ವಿಶೇಷಗಳನ್ನು ವಿವರಿಸಿ..
27. ಅಕ್ಷರ ಜ್ಞಾನದ ಮಹತ್ವವು ಬಿ. ಆರ್ ಲಕ್ಷ್ಮಣರಾವ್ ಅವರ ಕವನದಲ್ಲಿ ಹೇಗೆ ವರ್ಣಿತವಾಗಿದೆ? ವಿವರಿಸಿರಿ.
ಅಥವಾ
  ಕೋಗಿಲೆಯ ಕಂಠ ಮಾಧುರ್ಯದ ಸೊಬಗನ್ನು ಚೆನ್ನವೀರಕಣವಿಯವರು ಹೇಗೆ ಬಣ್ಣಿಸಿದ್ದಾರೆ? ನಿಮ್ಮ ಮಾತುಗಳಲ್ಲಿ ವರ್ಣಿಸಿರಿ.
.ಭಾಗ - `ಬಿ
ಅನ್ವಯಿಕ ವ್ಯಾಕರಣ 12 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕೊಟ್ಟಿರುವ ಜಾಗದಲ್ಲಿಯೇ ಕ್ರಮಾಕ್ಷರದೊಂದಿಗೆ ಉತ್ತರವನ್ನು ಬರೆಯಿರಿ.12X1=12
28. ಇವುಗಳಲ್ಲಿ ಪ್ರಥಮ ವಿಭಕ್ತಿ :
() ಕ್ಕೆ  (ಬಿ(ಸಿ) ಅಲ್ಲಿ (ಡಿ) ಇಂದ.
29. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಗಳ ಸಂಖ್ಯೆ :
() ಹದಿನಾಲ್ಕು (ಸಿ) ಐದು (ಬಿ) ಹತ್ತು (ಡಿ) ಇಪ್ಪತ್ತೈದು.
30. ಅವನು ತಂದ ಪುಸ್ತಕವು ತುಂಬಾ ಚೆನ್ನಾಗಿತ್ತು- ಈ ವಾಕ್ಯದಲ್ಲಿರುವ ಸರ್ವನಾಮ ಪದ
       () ಅವನು (ಸಿಪುಸ್ತಕ  (ಬಿ) ತುಂಬಾ (ಡಿ) ಚೆನ್ನಾಗಿ.
31. ಬೆಳೆಸಿದವನು – ಈ ಪದವನ್ನು ಬಿಡಿಸಿದ ರೂಪ  :
() ಬೆಳೆಸು+ಅವನು (ಸಿ) ಬೆಳೆಸಿ+ಅವನು  (ಬಿ) ಬೆಳೆಸಿದ+ಅವನು (ಡಿ) ಬೆಳೆಸಿ+ದವನು
32. ‘ಅಕ್ಷರವೆಂಬುದು ಅಲ್ಲಾದೀನನ ಅದ್ಭುತ ಮಾಯಾದೀಪ’ -. ವಾಕ್ಯದಲ್ಲಿರುವ ಅಲಂಕಾರ :
() ಉಪಮಾ  (ಸಿ) ಶ್ಲೇಷ (ಬಿ) ರೂಪಕ (ಡಿ) ದೃಷ್ಟಾಂತ
33.’ಹೊಸ ಹೊಸ’- ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ:
() ದ್ವಿರುಕ್ತಿ (ಸಿ) ಅನುಕರಣಾವ್ಯಯ (ಬಿ) ಜೋಡುನುಡಿ (ಡಿ) ನುಡಿಗಟ್ಟು
34. ‘ನೆತ್ತರುಎಂಬ ಪದದ ಅರ್ಥ:
() ನೆತ್ತಿ (ಸಿ) ಹಸಿರು  (ಬಿ) ರಕ್ತ (ಡಿ) ರಕ್ಷಿಸು
35.’ಧರ್ಮಪದದ ವಿರುದ್ಧಾರ್ಥ ಪದ    :
() ಸುಧರ್ಮ (ಸಿಅಧರ್ಮ  (ಬಿ) ಸ್ವಧರ್ಮ (ಡಿ) ಅನ್ಯಧರ್ಮ
36. ಅಕ್ಷರ ಗಣದ ನಾಲ್ಕು ಸಾಲಿನ ಪದ್ಯವನ್ನು ಹೀಗೆಂದು ಕರೆಯುತ್ತಾರೆ:
() ತ್ರಿಪದಿ (ಸಿ) ಸಾಂಗತ್ಯ (ಬಿ) ಕಂದ (ಡಿ) ವೃತ್ತ
37 ‘ಚಣ’ – ಇದರ ತತ್ಸಮರೂಪ:
 () ಚನ (ಸಿ) ಚರಣ (ಬಿ) ಕ್ಷಣ  (ಡಿ) ಛಣ
38. ಅಲಂಕಾರ ವಾಕ್ಯದಲ್ಲಿ ‘ವರ್ಣ್ಯ’ ಎಂದರೆ :    
 () ವರ್ಣಕ (ಸಿ) ಉಪಮೇಯ (ಬಿ) ಉಪಮಾನ (ಡಿ) ವಾಚಕಪದ
39. ನಾಮಪ್ರಕೃತಿಯನ್ನು ಹೀಗೆನ್ನುತ್ತಾರೆ:
 () ಧಾತು (ಸಿ) ಪ್ರತಿಪದಿಕ (ಬಿ) ಪ್ರಾತಿಪದಿಕ (ಡಿ) ನಾಮಪದ.
ಭಾಗ - `ಸಿ
ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 15 ಅಂಕಗಳು
40. ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ಸ್ವಾರಸ್ಯ ಸಹಿತ ವಿಸ್ತರಿಸಿ ಬರೆಯಿರಿ1X3=3
  ಕಾಯಕವೇ ಕೈಲಾಸ.
  ಮೂರ್ತಿ ಚಿಕ್ಕದಾದರು ಕೀರ್ತಿದೊಡ್ಡದು.
  ಕತ್ತೆಗೇನು ಗೊತ್ತು ಕಸ್ತೂರಿಪರಿಮಳ.
ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. 1X4=4
          ಕನ್ನಡ ಕಾವ್ಯಲೋಕಕ್ಕೆ ವಿಶಿಷ್ಟ ಶೈಲಿ ಮತ್ತು ಲಯಗಳ ಮೂಲಕ ನಾದದ ಗುಂಗು ಹಿಡಿಸಿದಶಬ್ದ ಗಾರುಡಿಗ’, ‘ವರಕವಿ’, ‘ಸಾಧನಕೇರಿಯ ಅನರ್ಘ್ಯರತ್ನ’, ‘ಕನ್ನಡದ ಠಾಗೋರ್’,  ‘ಸಹಜ ಕವಿ’, ‘ರಸ ಋಷಿಎಂದೆಲ್ಲಾ ಪ್ರಖ್ಯಾತರಾಗಿರುವ ಶ್ರೇಷ್ಠ ಕವಿ. ರಾ. ಬೇಂದ್ರೆ’. ಜಾನಪದ ಧಾಟಿಯಿಂದ ಪ್ರೇರೇಪಿತರಾಗಿ ಜಾನಪದ ಸೊಗಡಿನ ಆಡುಭಾಷೆಯ ದೇಶೀ ಶೈಲಿಯನ್ನು ಸಮರ್ಥವಾಗಿ ಬಳಸಿಕೊಂಡ ದೇಸೀಯ ಕವಿ. ಸುಶ್ರಾವ್ಯವಾಗಿ ಹಾಡಲು ಪೂರಕವಾಗುವಂತಹ ನಾದಮಾಧುರ್ಯವನ್ನು ತಮ್ಮ ರಚನೆಗಳಲ್ಲಿ ತುಂಬಿದ ರಸಕವಿ. ‘ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ’ ಎಂದು ಜೀವನವನ್ನು ಸರಳವಾಗಿ ವ್ಯಾಖ್ಯಾನಿಸಿದ ಧೀಮಂತ ಕವಿ.
ಇವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಕಾವ್ಯನಾಮ ಅಂಬಿಕಾತನಯದತ್ತ. ಜನಿಸಿದ್ದು ಮಾಘಶುದ್ಧ 'ಗುರುಪ್ರತಿಪದಾ' ಮನ್ಮಥನಾಮ ಸಂವತ್ಸರ 1896 ಜನವರಿ 31 ಧಾರವಾಡದ ಮಂಗಳವಾರಪೇಟೆಯ ಪೋತನೀಸ್ ಗಲ್ಲಿಯಲ್ಲಿದ್ದ ಗುಣಾರಿಯವರ ಮನೆಯಲ್ಲಿ. ಅರ್ಥಾತ್ ಅಜ್ಜಿ ಗಂಗೂಬಾಯಿ ಮನೆಯಲ್ಲಿ. ತಂದೆ ರಾಮಚಂದ್ರ ಪಂತರು, ತಾಯಿ ಅಂಬೂತಾಯಿ ಅಂಬಿಕೆ(ಅಂಬವ್ವ).
ಪ್ರಶ್ನೆಗಳು:
41 ಬೇಂದ್ರೆಯವರು ಯಾವ ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ?
42. ಬೇಂದ್ರೆಯವರನ್ನು ದೇಸೀಯ ಕವಿ ಎಂದು ಏಕೆ ಕರೆಯುತ್ತಾರೆ?
43. ಬೇಂದ್ರೆಯವರು ಹುಟ್ಟಿದ್ದು ಎಂದು?
44. ಬೇಂದ್ರೆಯವರು ಜೀವನವನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ?
45. ನಿಮ್ಮ ಶಾಲೆಯಲ್ಲಿ ಆಚರಿಸುವ ಗಾಂಧೀಜಯಂತಿಯಂದು ಭಜನೆಯನ್ನು ಮಾಡಲು ಬರುವಂತೆ ಕೋರಿ ನಿಮ್ಮ ಊರಿನ ‘ಶ್ರೀರಾಮ ಭಜನಾ ಮಂಡಲಿಯವರಿಗೆ ಒಂದು ಪತ್ರ ಬರೆಯಿರಿ.
ಅಥವಾ
ಚಿಕ್ಕೋಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಪ್ರಿಯಾಂಕ/ಸೌರಭ್ ಎಂದು ಭಾವಿಸಿ ಚಿಂತಾಮಣಿಯಲ್ಲಿರುವ ನಿಮ್ಮ ಅಣ್ಣ ಮಹೇಂದ್ರರವರಿಗೆ ಒಂದು ಪತ್ರವನ್ನು ಬರೆಯಿರಿ.            1X4=4
46. ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ಹತ್ತು ವಾಕ್ಯಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ.                                                 1X4=4
      ಪ್ರಧಾನ ಮಂತ್ರಿಯವರ ಮನ್ ಕಿ ಬಾತ್ ಕಾರ್ಯಕ್ರಮ.
      ನಿಮ್ಮ ಮೆಚ್ಚಿನ ಪುಸ್ತಕ
      ಹೆಣ್ಣು ಮಕ್ಕಳ ಶೋಷಣೆ.

*******************

No comments:

Post a Comment