Friday 28 August 2015

ಹೀಗೊಂದು ಟಾಪ್ ಪ್ರಯಾಣ ಪ್ರಶ್ನೆಗಳು

ಹೀಗೊಂದು ಟಾಪ್ ಪ್ರಯಾಣ
(ಲಲಿತ ಪ್ರಬಂಧ)
-ಈರಪ್ಪ ಎಂ ಕಂಬಳಿ
1.    ‘ಹೀಗೊಂದು ಟಾಪ್ ಪ್ರಯಾಣ’ ಈ ಲೇಖನದ ಕರ್ತೃಯಾರು?
2.  ‘ಹೀಗೊಂದು ಟಾಪ್ ಪ್ರಯಾಣ’ ಯಾವ ಸಾಹಿತ್ಯ ಪ್ರಕಾರಕ್ಕೆ ಉದಾಹರಣೆಯಾಗಿದೆ?
3.  ಈರಪ್ಪ ಎಂ. ಕಂಬಳಿಯವರ ತಂಗಿಯೊಬ್ಬರು ಯಾವ ಊರಿನಲ್ಲಿ ನೆಲೆಸಿದ್ದರು?
4.  ಈರಪ್ಪ ಎಂ. ಕಂಬಳಿಯವರು ತಮ್ಮ ತಂಗಿಯನ್ನು ಮಾತನಾಡಿಸಿಕೊಂಡು ಬರಲು ಯಾವ ಊರಿಂದ ಯಾವ ಊರಿಗೆ ಹೊರಟಿದ್ದರು?
5.  ಮುಂಡರಗಿಗೆ ಈರಪ್ಪ ಎಂ. ಕಂಬಳಿಯವರು ಹೊರಟ್ಟಿದ್ದೇಕೆ?
6.  ಯಲಬುರ್ಗಿಯಿಂದ ಮುಂಡರಗಿಗೆ ಒಳದಾರಿಯಲ್ಲಿ ಎಷ್ಟು ದೂರವಿದೆ?
7.  ಯಲಬುರ್ಗಿಯಿಂದ ಮುಂಡರಗಿಗೆ ಬಸ್ಸಿನಲ್ಲಿ ಹೋಗುವುದಾದರೆ ಯಾವ ನಗರಗಳ ಮೂಲಕ ಪ್ರಯಾಣ ಮಾಡಬೇಕು?
8.  ಯಲಬುರ್ಗಿಯಿಂದ ಮುಂಡರಗಿಗೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಗದಗ ಅಥವಾ ಕೊಪ್ಪಳ ಮೂಲಕವೇ ಪ್ರಯಾಣಿಸುವುದು ಅನಿವಾರ್ಯ ಏಕೆ?
9.  ಕೊಪ್ಪಳದ ಮೂಲಕವೇ ಮುಂಡರಗಿಗೆ ಹೋಗಲು ಈರಪ್ಪ ಎಂ. ಕಂಬಳಿಯವರು ನಿರ್ಧರಿಸಿದ್ದೇಕೆ?
10. ಈರಪ್ಪ ಎಂ. ಕಂಬಳಿಯವರು ಕೊಪ್ಪಳ ತಲುಪುವ ಹೊತ್ತಿಗೆ ದಳದಳ ಬೆವರು ಹರಿಯಲಾರಂಭಿಸಿತ್ತು ಏಕೆ?
11.  ಮುಂಡರಿಗಿಗೆ ಹೋಗ ಬೇಕಾಗಿದ್ದ ಈರಪ್ಪ ಎಂ. ಕಂಬಳಿಯವರು ಕೊಪ್ಪಳಕ್ಕೆ ಹೋಗಿದ್ದೇಕೆ?
12. ಕೊಪ್ಪಳದಿಂದ ಹೊರಟ ಬಸ್ಸ್ ಗಬ್ಬದ ಹಂದಿಯಂತೆ ವಾಲಾಡುತ್ತಾ ಹೊರಡಲು ಕಾರಣವೇನು?
13. ಕೊಪ್ಪಳದಿಂದ ಹೊರಟ ಬಸ್ಸನ್ನು ಈರಪ್ಪ ಎಂ. ಕಂಬಳಿಯವರು ಯಾವುದಕ್ಕೆ ಹೋಲಿಸಿದ್ದಾರೆ? ಏಕೆ?
14. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಲೇಖಕರಿಗೆ ಭಯ ಮತ್ತು ನಾಚಿಕೆಯಾಗಲು ಕಾರಣವೇನು?
15. ಲೇಖಕರಿಗೆ ತಾವು ಆನೆಯಂಬರಿ ಏರಿದಂತೆ ಭಾಸವಾಗಲು ಕಾರಣವೇನು?
16. ಬಸ್ಸು ಊರು ದಾಟುವವರೆಗೂ ಈರಪ್ಪ ಎಂ. ಕಂಬಳಿಯವರು ತಲೆ ಕೆಳಗೆ ಹಾಕಿ ಕುಳಿತಿದ್ದೇಕೆ?
17. ಬಸ್ಸ್ ಪ್ರಯಾಣದ ವೇಳೆ ಲೇಖಕರಿಗೆ ತುಸು ಕಕವಕವಾಗಲು ಕಾರಣವೇನು?
18. ಬಸ್ಸ್ ಪ್ರಯಾಣದ ವೇಳೆ ಲೇಖಕರಿಗೆ ನೆನಪಿಗೆ ಬಂದ ಕಾವ್ಯಾನಂದರ ಪದ್ಯದ ಸಾಲುಗಳಾವುವು?
19. ಬಸ್ಸ್ ಪ್ರಯಾಣದ ವೇಳೆ ಲೇಖಕರಿಗೆ ತಾವೇ ಜಂಗಮನೆಂಬ ಭಾವನೆಯುಂಟಾಗಿದ್ದೇಕೆ?
20. ಕೊಪ್ಪಳದಿಂದ ಮುಂಡರಿಗಿಗೆ ಹೋಗುವ ಬಸ್ಸ್ ಯಾವ ಯಾವ ಊರುಗಳನ್ನು ದಾಟಿ ಹೋಗಬೇಕಿತ್ತು?
21.   ಬಸ್ಸ್ ಪ್ರಯಾಣದ ವೇಳೆ ಲೇಖಕರಿಗೆ ಅಸಲಿ ಸಮಸ್ಯೆ ಶುರುವಾದುದು ಯಾವಾಗ? ಏಕೆ?
22.   ಈರಪ್ಪ ಎಂ. ಕಂಬಳಿಯವರು ಪ್ರಯಾಣಿಸುತ್ತಿದ್ದ ಬಸ್ಸಿನ ಹಿಂದೆ ದಟ್ಟ ದೂಳು ಎದ್ದು ಬರಲು ಕಾರಣವೇನು?
23. ಈರಪ್ಪ ಎಂ. ಕಂಬಳಿಯವರ ಮುಖ ಮತ್ತು ಕುತ್ತಿಗೆ ಥೇಟ್ ಗುಡಿಯೊಳಗಿನ ಕರಿ ಹನುಮನ ಮೈಯಿಂದ ಹೊರಡುವ ಜಿಡ್ಡು ಮ್ಯಾಣದಂತಾಗಿತ್ತು ಏಕೆ?
24. ಈರಪ್ಪ ಎಂ. ಕಂಬಳಿಯವರು ಬೇಂದ್ರೆಯವರ ಹಾಡನ್ನು ತುಸು ತಿರುಚಿ ಗೊಣಗಿಕೊಂಡಿದ್ದೇಕೆ?
25. ಈರಪ್ಪ ಎಂ. ಕಂಬಳಿಯವರು ಬೇಂದ್ರೆಯವರ ಹಾಡನ್ನು ತಿರುಚಿ ಗೊಣಗಿಕೊಂಡ ನುಡಿಗಳಾವುವು? ಹಾಗೆ ಗೊಣಗಿಕೊಳ್ಳಲು ಕಾರಣವೇನು?
26. ಈರಪ್ಪ ಎಂ. ಕಂಬಳಿಯವರನ್ನು ಕಂಡು ಸಹ ಪ್ರಯಾಣಿಕರು ಪಕಪಕ ನಕ್ಕಿದ್ದೇಕೆ?
27.  ಬಸ್ಸ್ ಪ್ರಯಾಣದ ವೇಳೆ ಹುಡುಗನೊಬ್ಬ ಸತ್ತು ಹೋದುದೇಕೆ?
28. ಸಾವೇ ಭುಜ ಸವರಿಕೊಂಡು ಹೋದಂತೆ ಲೇಖಕರಿಗೆ ಭಾಸವಾದುದೇಕೆ?
29. ಸಹ ಪ್ರಯಾಣಿಕರು ಲೇಖಕರಿಗೆ ಏನೆಂದು ಧೈರ್ಯ ಹೇಳಿದರು? ಏಕೆ?
30. ಕೊಪ್ಪಳಾದಿಂದ ಮುಂಡರಗಿಯ ಕಡೆಗೆ ಬಸ್ಸಿನಲ್ಲಿ ಪ್ರಯಾಣಿಕರೆಲ್ಲಾ ದಬದಬನೆ ಬೋರಲು ಬೀಳಲಾರಂಭಿಸಿದ್ದೇಕೆ?
31.   ಪ್ರಯಾಣದ ವೇಳೆ ಲೇಖಕರಿಗೆ ಅಚ್ಚರಿ ಮೂಡಿಸಿದ ಸಂಗತಿ ಯಾವುದು?
32. ಪ್ರಯಾಣದವೇಳೆ ಹೃದಯವೇ ಕಿತ್ತು ಬಾಯಿಗೆ ಬಂದಂತಾಗುತ್ತಿದ್ದ ಸಂದರ್ಭ ಯಾವುದು ಎಂದು ಕಂಬಳಿಯವರು ಹೇಳಿದ್ದಾರೆ?
33. ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದು ಉಚಿತವೆ ಎಂಬ ಆಲೋಚನೆ ಲೇಖಕರಿಗೆ ಬರಲು ಕಾರಣವೇನು?
34. ಈರಪ್ಪ ಎಂ. ಕಂಬಳಿಯವರ ಬಿಳಿಯ ಶರ್ಟು ಕೆಂಪು ಬಣ್ಣಕ್ಕೆ ತಿರುಗಲು ಕಾರಣವೇನು?
35. ಈರಪ್ಪ ಎಂ. ಕಂಬಳಿಯವರ ಮಾತಿಗೆ ಹುಬ್ಬೇರಿಸಿದವರು ಯಾರು?ಏಕೆ?
36. ಈರಪ್ಪ ಎಂ. ಕಂಬಳಿಯವರ ಯಾವ ಮಾತಿಗೆ ಸಹ ಪ್ರಯಾಣಿಕರು ಹುಬ್ಬೇರಿಸಿದರು?
37.  ಬೆಂಗಳೂರಿನಲ್ಲಿ ಹೀಗೆಲ್ಲ ಬಸ್ಸಿನ ಮೇಲೆ ಹತ್ತಲಾಗುವುದಿಲ್ಲ ಎಂಬ ಈರಪ್ಪ ಎಂ. ಕಂಬಳಿಯವರ ಮಾತಿಗೆ ಸಹ ಪ್ರಯಾಣಿಕರ ಪ್ರತಿಕ್ರಿಯೆ ಏನು?
38. ಈರಪ್ಪ ಎಂ. ಕಂಬಳಿಯವರು ನಿರುಮ್ಮಳಾಗಿ ಉಸಿರಾಡಿದ್ದೇಕೆ?
39. ಬಸ್ಸು ಅಳವಂಡಿ ತಲುಪಿದ ಮೇಲೆ ಈರಪ್ಪ ಎಂ. ಕಂಬಳಿಯವರ ಮನಸ್ಸು ಹಗುರಾಗಲು ಕಾರಣಗಳೇನು?
40. ಈರಪ್ಪ ಎಂ. ಕಂಬಳಿಯವರು ಅಳವಂಡಿಯಲ್ಲಿ ಬಸ್ಸಿನಿಂದಿಳಿದಾಗ ಕಿವಿಗೆ ಬಿದ್ದ ಸಂಗೀತದ ಸಾಲುಗಳಾವುವು?
41.   ಕೇವಲ ಒಂದು ಗಂಟೆಯ ಪ್ರಯಾಣಕ್ಕೆ ಇಡೀ ದಿನವನ್ನು ಈರಪ್ಪ ಎಂ. ಕಂಬಳಿಯವರು ವ್ಯಯಿಸಿದ್ದೇಕೆ?
42. ಈರಪ್ಪ ಎಂ. ಕಂಬಳಿಯವರ ಟಾಪ್ ಪ್ರಯಾಣದ ಅನುಭವವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
43. ಯಲಬುರ್ಗಿಯಿಂದ ಕೇವಲ ಐವತ್ತು ಕಿಲೋ ಮೀಟರು ದೂರದ ಮುಂಡರಗಿಯನ್ನು ತಲುಪಲು ದಿನಗಟ್ಟಲೆ ಪ್ರಯಾಣಮಾಡಿದ್ದೇಕೆ?
44. ಬಿಸಿಲು ಸೀಮೆಯ ಜನರು ಸ್ವಭಾವತಃ ಎಂತಹವರೆಂದು ಈರಪ್ಪ ಎಂ. ಕಂಬಳಿಯವರು ಹೇಳಿದ್ದಾರೆ?
45. ಈರಪ್ಪ ಎಂ. ಕಂಬಳಿಯವರಿಗೆ ಬಿಸಿಲು ಸೀಮೆಯ ಜನ ಸ್ವಭಾವತಃ ಕಷ್ಟಸಹಿಷ್ಣುಗಳೂ, ಸಾಹಸ ಪ್ರಿಯರು ಆಗಿರುವುದಕ್ಕೆ ಯಾವುದ ಕಾರಣವಿರಬಹುದೆನಿಸಿತು?
46. ‘ಬಾದಲೋಂ ಕಾ ರೂಪ ಲೇಕರ್ ಬರಸೇ ಹಲಕೆ ಹಲಕೆ’ ಈ ಸಾಲುಗಳ ಅರ್ಥವೇನು?
47.  ಗ್ರಾಮೀಣ ಪ್ರದೇಶಗಳ ನಡುವಿನ ಬಸ್ಸ್ ಪ್ರಯಾಣದ ಅನುಭವವನ್ನು ತಮ್ಮ ಲೇಖಕದ ಮೂಲಕ ಈರಪ್ಪ ಎಂ. ಕಂಬಳಿಯವರು ಹೇಗೆ ವಿಡಂಬನೆ ಮಾಡಿದ್ದಾರೆ?
48. ಈ ಕೆಳಗಿನ ಸಾಲುಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿ.
1)      “ ಈಗ ಹೋತಲ್ರೀ ಸಾಯೇಬ್ರ, ಯಾಡು ಮಿನಿಟು ಆಗಿಲ್ಲ”
2)     “ಹಾರುವ ರಾಕೆಟ್ಟಿನಂತೆ ನಮ್ಮ ಬಸ್ಸಿನ ಹಿಂದೆ ದಟ್ಟ ದೂಳು ಎದ್ದು ಬರುತ್ತಿತ್ತು”
3)     “ನೋಡುಗರ ಮೊಗದಲ್ಲಿ ಸಹಜ ಮಂದಹಾಸ”
4)     “ಸಾಯೇಬ್ರಾ ಹೆದ್ರಿದ್ರಿ ಅಂತಾ ಕಾಣ್ಸುತ್ತ”
5)     “ ಇನ್ನೂ ಮುಂದ ಐತಿ ನಾವೆಲ್ಲ ಹೇಳ್ತೀವಿ”
6)     “ಸಂಬಂಧಪಟ್ಟ ಇಲಾಖೆಗಳು ಜನರ ಪ್ರಾಣದ ಜತೆ ಚೆಲ್ಲಾಟವಾಡುವುದು ಉಚಿತವೆ”?
7)      “ಮೇಲೆ ಹತ್ತಂಗಿಲ್ಲದಿದ್ದ ಮ್ಯಾಲ ಅವೆಂಥಾ ಬಸ್ ರೀ”
8)     “ಕೆಲವರು ಒಳಗೊಳಗೇ ನಕ್ಕಂತಾಯಿತು”
9)     “ಕೆಂಪು ಬಸ್ಸುಗಳನ್ನು ನೆಚ್ಚಿ ಇಡೀ ದಿನ ವ್ಯಯಿಸಿದೆ”
10)    “ಯಾವುದರಲ್ಲಿ ರಿಸ್ಕ್ ಇಲ್ಲ ಹೇಳಿರಿ”!
49. ಆಧುನಿಕ ಜಗತ್ತನ್ನು ಕ್ರೀಡಾಮನೋಭಾವದಿಂದ ಎದುರಿಸುವುದು ಅನಿವಾರ್ಯವೆಂಬಂತೆ ಲೇಖಕರು ಹೇಳಲು ಕಾರಣವೇನು?
50. ಈರಪ್ಪ ಎಂ. ಕಂಬಳಿಯವರ ಪ್ರಯಾಣದ ಅನುಭವವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
51.   ನೀವು ಮಾಡಿದ ಪ್ರಯಾಣದ ಅನುಭವಗಳನ್ನು ಬರೆಯಿರಿ.
52. ನಿಮ್ಮ ಜೀವನದ ಮರೆಯಲಾಗದ ಅನುಭವಗಳನ್ನು ಲೇಖನ ರೂಪದಲ್ಲಿ ಬರೆಯಿರಿ.
53. ಯಾವುದಾದರೂ ಒಂದು ಸನ್ನಿವೇಶವನ್ನು ಕುರಿತು ಒಂದು ಲಲಿತ ಪ್ರಬಂಧವನ್ನು ಬರೆಯಿರಿ.
54. ‘ಹೀಗೊಂದು ಟಾಪ್ ಪ್ರಯಾಣ’ ಲೇಖನದಲ್ಲಿ ಬಂದಿರುವ ಅಲಂಕಾರ ವಾಕ್ಯಗಳನ್ನು ಪಟ್ಟಿ ಮಾಡಿರಿ.
55. ‘ಹೀಗೊಂದು ಟಾಪ್ ಪ್ರಯಾಣ’ ಲೇಖನದಲ್ಲಿ ಬಂದಿರುವ ದ್ವಿರುಕ್ತಿ ಮತ್ತು ಅನುಕರಣಾವ್ಯಯಗಳನ್ನು ಪಟ್ಟಿ ಮಾಡಿರಿ.
56. ಈರಪ್ಪ ಎಂ. ಕಂಬಳಿಯವರ ಕಾಲ ಮತ್ತು ಸ್ಥಳವನ್ನು ತಿಳಿಸಿರಿ.
57.  ಈರಪ್ಪ ಎಂ. ಕಂಬಳಿಯವರ ತಂದೆ ತಾಯಿಯ ಹೆಸರನ್ನು ತಿಳಿಸಿರಿ.
58. ಈರಪ್ಪ ಎಂ. ಕಂಬಳಿಯವರ ಮೊದಲ ಕವನ ಸಂಗ್ರಹ ಯಾವುದು?
59. ಈರಪ್ಪ ಎಂ. ಕಂಬಳಿಯವರ ಲಲಿತ ಪ್ರಬಂಧ ಸಂಕಲನಗಳಾವುವು?
60. ಈರಪ್ಪ ಎಂ. ಕಂಬಳಿಯವರ ಪ್ರವಾಸ ಕಥನ ಯಾವುದು?

************

No comments:

Post a Comment