Thursday 6 August 2015

'ಕರ್ನಾಟಕತ್ವ'-ಪ್ರಶ್ನೆಗಳು

ಕರ್ನಾಟಕತ್ವ (ಅಂಕಣ ಬರಹ)
                       ಜಿ.ಪಿ ರಾಜರತ್ಮಂ
1)       ತಾಯಿ ಮತ್ತು ತಾಯಿನಾಡನ್ನು ಕುರಿತು ಉಕ್ತವಾಗಿರುವ ಸೂಕ್ತಿಗಳನ್ನು ಸಂಗ್ರಹಿಸಿ ಬರೆಯಿರಿ.
2)     ಕನ್ನಡ ನಾಡು, ನುಡಿಯ ಮಹತ್ವವನ್ನು ಬಿಂಬಿಸುವ ಚಿತ್ರಗಳನ್ನು ಸಂಗ್ರಹಿಸಿ ಸೂಕ್ತ ಶೀರ್ಷಿಕೆಗಳನ್ನು ನೀಡಿರಿ.
      ಅವುಗಳ ಬಗೆಗೆ ನಿಮಗೆ ತಿಳಿದಿರುವ ಮಾಹಿತಿಗಳನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
3)     ಭಾರತೀಯರು ಆಚರಿಸುವ ಪ್ರಮುಖ ರಾಷ್ಟ್ರೀಯ ಹಬ್ಬಗಳಾವುವು? ಅವುಗಳ ಮಹತ್ವವೇನು?
4)     ಕನ್ನಡ ನಾಡಿನಲ್ಲಿ ಆಚರಿಸುವ ಪ್ರಮುಖ ನಾಡಹಬ್ಬಗಳಾವುವು? ಅವುಗಳ ಮಹತ್ವವೇನು?
5)     ಕನ್ನಡ ನಾಡಿನಲ್ಲಿ ದಸರಾ ಹಬ್ದದ ಆಚರಣೆಯ ಮಹತ್ವವೇನು? ಅದು ಬೆಳೆದು ಬಂದುದು ಹೇಗೆ?
6)     ಯಾವ ಯಾವ ವಿಚಾರಗಳಿಗೆ ನಾವು ಸದಾ ಋಣಿಯಾಗಿರಲೇ ಬೇಕು? ಏಕೆ?
7)      ಕರುಳಬಳ್ಳಿ ಸಂಬಂಧ ಎಂದರೇನು?
8)     ‘ಕರ್ನಾಟಕತ್ವ’ ಈ  ಲೇಖನದ ಆಶಯವೇನು?
9)     ‘ಕನ್ನಡವೆನಿಪ್ಪನಾಡು’ ಎಂದರೆ ಯಾವುದು?
10)    ನೃಪತುಂಗ ಯಾರು?
11)      ಕನ್ನಡದ ಪ್ರಥಮ ಕೃತಿಯಾವುದು?
12)    ‘ಕವಿರಾಜಮಾರ್ಗ’ದ ಕರ್ತೃಯಾರು?
13)    ಮಂತ್ರ ಎಂದರೇನು?
14)    ರಾಜರತ್ನಂರವರು ಹೇಳಿರುವಂತೆ ಕವಿರಾಜಮಾರ್ಗದಲ್ಲಿರುವ ಅಷ್ಟಾದಶಾಕ್ಷರೀ ಮಂತ್ರಯಾವುದು?
15)      'ವಸುಧಾವಳಯವಿಲೀನವಿಶದವಿಷಯ ವಿಶೇಷಂ’-ಎಂದರೇನು?
16)      ‘'ವಸುಧಾವಲಯವಿಲೀನವಿಶದವಿಷಯ ವಿಶೇಷಂ’’ ಎಂಬ ಮಾತು ಕನ್ನಡನಾಡಿಗೆ ಚೆನ್ನಾಗಿ ಒಪ್ಪುತ್ತದೆ ಹೇಗೆ?ನಿಮ್ಮ ಮಾತುಗಳಲ್ಲಿ ಬರೆಯಿರಿ.
17)    ಅಷ್ಟಾದಶಾಕ್ಷರಿ ಮಂತ್ರದಲ್ಲಿ ಎಷ್ಟು ಪದಗಳಿವೆ ಅವುಯಾವುವು?
18)      ವಸುಧಾ ಎಂಬ ಪದದ ಅರ್ಥವೇನು? ಈ ಅರ್ಥ ಬರಲು ಕಾರಣವೇನು?
19)      ವಳಯ ಎಂದರೇನು?
20)     ಲೇಖಕರು ವಳಯ ಪದವನ್ನು ಬಳೆಗೆ ಹೋಲಿಸಿ ವಿವರಿಸಿರುವುದರ ವೈಶಿಷ್ಟ್ಯವೇನು?
21)    ಅಖಂಡಮಂಡಲಾಕಾರ ಎಂದರೇನು?
22)   ವಿಲೀನ ಎಂದರೇನು?
23)   ವಿಶದ ಎಂದರೇನು?
24)   ‘ವಿಶದ’ ಕರ್ನಾಟಕಕ್ಕೆ ಚೆನ್ನಾಗಿ ಒಪ್ಪುತ್ತದೆ ಹೇಗೆ?
25)   ಅಷ್ಟಾದಶಾಕ್ಷರಿ ಮಂತ್ರದಲ್ಲಿ ವಿಷಯ ಎಂದರೇನು? ಆ ವಿಷಯವು ಒಳಗೊಂಡಿರುವ ವೈಶಿಷ್ಟ್ಯತೆಗಳಾವುವು?
26)   ಕರ್ನಾಟಕತ್ವ ಎಂದರೇನು?
27)   ಕರ್ನಾಟಕಕ್ಕಿಂತ ಕರ್ನಾಟಕತ್ವ ದೊಡ್ಡದು ಹೇಗೆ?
28)    ಕರ್ನಾಟಕತ್ವದ ಗುಣ ವಿಶೇಷಗಳಾವುವು?
29)    ರಾಜ್ಯೋತ್ಸವದ ಆಚರಣೆಗೆ ಬೆಲೆ ಬರುವುದು ಯಾವಾಗ?
30)    ತನ್ನ ತನದಿಂದ ಎದ್ದುಕಾಣುವ ದೇಶ ನಮ್ಮ ‘ಕರ್ನಾಟಕ’ ಎಂದು ಲೇಖಕರು ಹೇಳಲು ಕಾರಣಗಳೇನು?
31)    ಕನ್ನಡನಾಡಿನ ರಾಜಕೀಯ ಏಕೀಕರಣ ಮತ್ತು ನಾಮಕರಣ ಎರಡೂ ಬಹಳ ಕಷ್ಟದಿಂದ ಆಗಿದ್ದರೂ ಇನ್ನೂ ಆಗಬೇಕಾಗಿರುವುದು ಯಾವುದು?
32)   ಮನುಷ್ಯತ್ವಕ್ಕೆ ಒರೆಗಲ್ಲು ಯಾವುದು?
33)   ಕನ್ನಡನಾಡನ್ನು ದೊಡ್ಡದೆನಿಸುವಂತೆ ಮಾಡಿದವರು ಯಾರು? ಹೇಗೆ ಮಾಡಿದರು?
34)   ಜ್ಞಾನರಾಜ್ಯೋದಯ ಎಂದರೇನು?
35)   ಕರ್ನಾಟಕದ ಜ್ಞಾನರಾಜ್ಯೋದಯ ಆಗುವುದು ಯಾವಾಗ ಎಂದು ರಾಜರತ್ನಂರವರು ಹೇಳಿದ್ದಾರೆ?
36)   ರಾಜಕೀಯ ಏಕೀಕರಣ ಎಂದರೇನು?
37)   ವಿಶಾಲ ಮೈಸೂರು ಅಸ್ತಿತ್ವಕ್ಕೆ ಬಂದುದು ಯಾವಾಗ?
38)   ಕನ್ನಡ ನಾಡಿಗೆ ‘ಕರ್ನಾಟಕ’ ಎಂದು ನಾಮಕರಣವಾದುದು ಎಂದು?
39)   ಕನ್ನಡ ನಾಡು ಉದಯವಾದುದನ್ನು ಸಾರ್ಥಕಗೊಳಿಸುವುದರಲ್ಲಿ ನಮ್ಮ ಪಾತ್ರವೇನು?
40)   ಕರ್ನಾಟಕದಲ್ಲಿ ಅನ್ಯೋನ್ಯತೆ ಮತ್ತು ಸೋದರಿಕೆಯ ಭಾವವು ಶಾಶ್ವತವಾಗಿರುವಂತೆ ಮಾಡುವಲ್ಲಿ ನಮ್ಮ ಪಾತ್ರವೇನು? ನಿಮ್ಮ ಮಾತುಗಳಲ್ಲಿ ಬರೆಯಿರಿ.
41)    ಕನ್ನಡ ರಾಜ್ಯೋತ್ಸವವನ್ನು ಎಂದು ಆಚರಿಸುತ್ತಾರೆ? ಏಕೆ?
42)   ಹನುಮನುದಿಸಿದ ನಾಡು ಯಾವುದು?
43)   ‘ಕರ್ನಾಟಕತ್ವದಿಂದ ಕರ್ನಾಟಕ’ ಎಂಬ ಯುಕ್ತಿ ಯುಕ್ತ ಮತ್ತು ಸುಷ್ಠು ಎಂಬ ಲೇಖಕರ ಹೇಳಿಕೆಯನ್ನು ಸ್ಪಷ್ಟಪಡಿಸಿರಿ.
44)   ಸುಷ್ಠು ಪದದ ಅರ್ಥವೇನು?
45)   ಕರ್ನಾಟಕದ ಪ್ರಜೆಗಳೆಂಬ ಹೆಗ್ಗಳಿಕೆಗೆ ಪಾತ್ರರಾಗುವುದು ಯಾವಾಗ ಎಂದು ಲೇಖಕರು ಹೇಳಿದ್ದಾರೆ?
46)   ಕರ್ನಾಟಕವು ದೊಡ್ಡದೆನಿಸಿದುದು ಹೇಗೆ?
47)   ನಮ್ಮ ನಾಡಿಗೆ ಸಂಬಂಧಿಸಿದಂತೆ ನಾವು ಮರೆಯದಿರಬೇಕಾದುದು ಯಾವುದು ಎಂದು ರಾಜರತ್ನಂ ಹೇಳಿದ್ದಾರೆ?
48)   ರಾಜ್ಯೋತ್ಸವದ ದಿನ ವಿಶೇಷವಾಗಿ ಜ್ಞಾಪಿಸಿಕೊಳ್ಳ ಬೇಕಾದುದು ಯಾವುದು ಎಂದು ರಾಜರತ್ನಂ ಹೇಳಿದ್ದಾರೆ?
49)   ನಡೆವಳಿ-ನುಡಿವಳಿ ಎಂದರೇನು?
50)   ಒಡಕುಗಂಟೆ  ಎಂದರೇನು?
51)    ಲೇಖಕರು ಒಡಕುಗಂಟೆಯನ್ನು ಯಾವುದಕ್ಕೆ ಹೋಲಿಸುತ್ತಾರೆ?
52)   ಕರ್ನಾಟಕತ್ವದ ಮೊದಲನೆಯ ಗುಣ ಯಾವುದು?
53)   ಶಿಲಾನಿಕ್ಷಿಪ್ತಾಕ್ಷರ ಎಂದರೇನು?
54)   ಕಪ್ಪೆ ಅರಭಟ್ಟನ ಶಾಸನ ಎಲ್ಲಿದೆ? ಆ ಶಾಸನದ ವೈಶಿಷ್ಟ್ಯ ಏನು?
55)   ಕಪ್ಪೆ ಅರಭಟ್ದನ ಶಾಸದದಲ್ಲಿರುವ ತ್ರಿಪದಿಯನ್ನು ಬರೆದು ಅದರ ಅರ್ಥವನ್ನು ತಿಳಿಯಿರಿ.
56)   ಮರಣಕ್ಕೂ ಮಾನಭಂಗಕ್ಕೂ ಇರುವ ವ್ಯತ್ಯಾಸವೇನು?
57)   ಕಪ್ಪೆ ಅರಭಟ್ಟನ ಶಾಸನದಲ್ಲಿ ಸ್ಪಷ್ಟಪಡಿಸಿರುವ ಕನ್ನಡಿಗರ ಗುಣಯಾವುದು?
58)   ಲೇಖಕರು ತಿಳಿಸಿರುವಂತೆ ಕರ್ನಾಟಕತ್ವದ ಎರಡನೆಯ ಗುಣಯಾವುದು?
59)   ರಾಜರತ್ನಂ ಹೇಳಿರುವಂತೆ ಕರ್ನಾಟಕತ್ವದ ಮೂರನೆಯ ಗುಣಯಾವುದು?
60)   ಪಂಪನಿಗಿದ್ದ ಬಿರುದು ಯಾವುದು?
61)    ಪಂಪನ ಪತಾಕೆ ಎಂದರೇನು?
62)   ನಾಡೋಜ ಯಾರು?
63)   ‘ಸುಕವಿಯಶೋನಿರ್ಮತ್ಸರ’ ಎಂದರೇನು?
64)   ಕರ್ನಾಟಕದ ವಿಶಿಷ್ಟಗುಣ ಯಾವುದು?
65)   ‘ವಸುಧಾವಳಯ’ ಎಂಬ ಪದವು ನಮ್ಮನಾಡಿನ ಯಾವ ಗುಣಗಳನ್ನು ಸೂಚಿಸುತ್ತದೆ?
66)   ರಾಜರತ್ನರವರು ಕನ್ನಡಿಗರ ಯಾವ ಮಾರ್ಗ ಅನುಕರಣಿಯವೆಂದು ಹೇಳಿದ್ದಾರೆ?
67)   ಕನ್ನಡ ಸಾಹಿತ್ಯದ ಸರಿತ್ಸಾಗರವನ್ನು ಹೆಮ್ಮೆಯೆನಿಸುವಂತೆ ಸಮೃದ್ಧಿಗೊಳಿಸಿದವರು ಯಾರು?
68)   ಜ್ಞಾಪಿಸಿಕೊಳ್ಳುವಂತಹ ಕರ್ನಾಟಕತ್ವದ ಎಳೆಗಳಾವುವು?
69)   ಮಳೆಬಿಲ್ಲು ಎಂದರೇನು?
70)   ಮತಗಳ ಮಳೆಬಿಲ್ಲು ಎಂದರೇನು?
71)    ಕನ್ನಡ ನಾಡನ್ನು ಮತಗಳ ಮಳೆಬಿಲ್ಲೆಂದು ಲೇಖಕರು ಹೇಳಲು ಕಾರಣವೇನು?
72)   ಜಿ.ಪಿ ರಾಜರತ್ನಂ ಅವರ ಸ್ಥಳಯಾವುದು?
73)   ರಾಮನಗರಕ್ಕೆ ಹಿಂದೆ ಇದ್ದ ಹೆಸರು ಯಾವುದು?
74)   ಜಿ.ಪಿ ರಾಜರತ್ನಂ ಅವರ ಕಾಲ ಮತ್ತು ಸ್ಥಳವನ್ನು ತಿಳಿಸಿರಿ.
75)   ಜಿ.ಪಿ ರಾಜರತ್ನಂ ಅವರ ತಂದೆ ಯಾರು?
76)   ಜಿ.ಪಿ ರಾಜರತ್ನಂ ಅವರು ಶಿಶುಗೀತೆಗಳನ್ನು ರಚಿಸಲು ಕಾರಣವೇನು?
77)   ಜಿ.ಪಿ ರಾಜರತ್ನಂರವರ ಪ್ರಸಿದ್ಧ ಕೃತಿಗಳಾವುವು?
78)   ಜಿ.ಪಿ ರಾಜರತ್ನಂ ರವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದ ವಿಶ್ವವಿದ್ಯಾನಿಲಯ ಯಾವುದು?
79)   ಜಿ.ಪಿ.ರಾಜರತ್ನಂರವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳಾವುವು?
80)   ಜಿ.ಪಿ ರಾಜರತ್ನಂ ಅವರಿಗೆ ರಾಜ್ಯ ಸರ್ಕಾರದಿಂದ ಸಂದ ಪ್ರಶಸ್ತಿಯಾವುದು?
81)    50ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಎಲ್ಲಿ ನಡೆಯಿತು?
82)   50ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದವರು ಯಾರು?
83)   ಜಿ.ಪಿ.ರಾಜರತ್ನಂ ದೈವಾಧೀನರಾದುದು ಎಂದು?
84)   ಈ ಕೆಳಗಿ ಪದಗಳ ಸಂಧಿ ಬಿಡಿಸಿ ಹೆಸರಿಸಿ.
1.      ರಾಜ್ಯವನ್ನು
2.     ದಶಾಕ್ಷರಿ
3.     ಉದಯವಾಗು
4.     ಹೆಸರಿಟ್ಟರೂ
5.     ಮಂಡಲಾಕಾರ
6.     ಒಂದಾದದ್ದು
7.      ವಿಶಿಷ್ಟವಾದ
8.     ಭಾವೈಕ್ಯ
9.     ಒರೆಗಲ್ಲು
10.    ಜ್ಞಾನರಾಜ್ಯೋತ್ಸವ
11.     ರಾಜ್ಯೋತ್ಸವ
12.    ಪಿತ್ರಾರ್ಜಿತ
13.    ನಿಕ್ಷಿಪ್ತಾಕ್ಷರ
14.   ವೈಶಿಷ್ಟ್ಯವನ್ನು
15.    ನಾಡೋಜ
16.    ಮೈಗೂಡಿಸು
17.    ದೈವಾಧೀನ
18.    ಗುಂಡಗಿರುವ
85)   ಈಕೆಳಗಿನ ಪದಗಳ ಅರ್ಥವನ್ನು ತಿಳಿಸಿರಿ.
1.      ಯುಕ್ತ
2.     ಸರಿತ್
3.     ಒರೆಗಲ್ಲು
4.     ಸುಷ್ಠು
5.     ಸಾಮರಸ್ಯ
6.     ವಸುಧಾ
7.      ವಸು
8.     ಅಷ್ಟಾದಶ
9.     ಮಂತ್ರ
10.    ಪರಿಭಾವಿಸು
11.     ವಳಯ
12.    ವಿಲೀನ
13.    ನಾಮಕರಣ
14.   ಅಖಂಡ
15.    ಏಕೀಕರಣ
16.    ಅನನ್ಯ
17.    ಪಿತ್ರಾರ್ಜಿತ
18.    ಅಪಶ್ರುತಿ
19.    ನಿಕ್ಷಿಪ್ತ
20.   ಸರ್ವತ್ರ
21.    ಮಳೆಬಿಲ್ಲು
86)    ಕೆಳಗಿನ ಪದಗಳಲ್ಲಿ ‘ಗಳು’ ಪ್ರತ್ಯಯ ಸೇರಿ ಬಹುವಚನವಾಗುವ ಪದಗಳನ್ನು ಆರಿಸಿ ಬರೆಯಿರಿ. ಉಳಿದ ಪದಗಳ ಬಹುವಚನ ರೂಪವನ್ನು ಬರೆಯಿರಿ.
1.      ಸೋದರಿ
2.     ರಾಜ್ಯ
3.     ವರ್ಷ
4.     ಮಂತ್ರ
5.     ಹುಡುಗ
6.     ಶಾಲೆ
7.      ಮಗು
8.     ತಾಯಿ
9.     ಅಕ್ಕ
10.    ಜಾಣೆ
87)   ಕೆಳಗಿನ ಪದಗಳ ಅನ್ಯಲಿಂಗ ರೂಪವನ್ನು ಬರೆಯಿರಿ.
1.      ರಾಜ
2.     ತಾಯಿ
3.     ಅಕ್ಕ
4.     ಸೋದರಿ
5.     ತಾಯಿ
88)   ಕೆಳಗಿನ ಪದಗಳಿಗೆ ವಿರುದ್ಧಾರ್ಥಗಳನ್ನು ಬರೆಯಿರಿ.
1.      ಜ್ಞಾನ
2.     ದೊಡ್ಡದು
3.     ತಗ್ಗಿಸು
4.     ಅಖಂಡ
5.     ಸಾಧ್ಯ
6.     ಮತ್ಸರ
7.      ಅಸೂಯೆ
8.     ಸ್ಪಷ್ಟ
9.     ಯುಕ್ತ
10.    ಭಯ
11.     ಅರ್ಥ
12.    ಉದಯ
89)   ತತ್ಸಮಗಳ ತದ್ಭವ ರೂಪವನ್ನು ತಿಳಿಸಿರಿ.
1.      ರಾಜ
2.     ರತ್ನ
3.     ಬಣ್ಣ
4.     ಶಿಲಾ
5.     ವರ್ಣಿಸು
6.     ಅಕ್ಷರ
7.      ವರ್ಷ
8.     ವಸುಧಾ
9.     ಸ್ಥಾನ
10.    ಕ್ಷಣ
90)   ಕನಿಷ್ಠ ಮೂರು ಪದಗಳಾದರೂ ಇರುವಂತೆ ಸಮಾನಾರ್ಥಕ ಪದಗಳನ್ನು ಬರೆಯಿರಿ.(ಗರಿಷ್ಠಕ್ಕೆ ಮಿತಿಯಿಲ್ಲ)
1.     ಭೂಮಿ
2.    ನದಿ
3.    ಸಾಗರ
4.    ನೀರು
5.    ಚಿನ್ನ

No comments:

Post a Comment