Saturday 29 August 2015

ಎರಡನೆಯ ರೂಪಣಾತ್ಮಕ ಪ್ರಶ್ನೆ ಪತ್ರಿಕೆ

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಬೆಂಗಳೂರು-03.
ಎರಡನೆಯ ರೂಪಣಾತ್ಮಕ ಪರೀಕ್ಷೆ ಆಗಸ್ಷ್-2015
ಕನ್ನಡ ತೃತೀಯ ಭಾಷೆ
ಹತ್ತನೇ ತರಗತಿ
  ಗರಿಷ್ಠ ಕಾಲಾವಧಿ : 45 ನಿಮಿಷಗಳು                                          ಗರಿಷ್ಠಾಂಕ : 20
ಭಾಗ - `
ಪಠ್ಯಗಳ ಅಧ್ಯಯನ (ಗದ್ಯಪದ್ಯಪೋಷಕ ಅಧ್ಯಯನ) 13 ಅಂಕಗಳು
 ಕೆಳಗಿನ ಪ್ರಶ್ನೆಗಳಿಗೆ ಒಂದೊಂದೇ ವಾಕ್ಯದ ಉತ್ತರವನ್ನು ಬರೆಯಿರಿ.                            3X1=3
1)  ಭೂಮಿಯನ್ನು ‘ವಸುಧಾ ಎಂದು ಕರೆಯಲು ಕಾರಣವೇನು?
2) ತಾಯಿಯ ಬಸಿರು ಒಂದೇ ಆಗಿದ್ದರೂ ಬೇರೆಯಾಗಿರುವುದು ಯಾವುದು ಎಂದು ಕವಿ ನಿಸಾರ್ ಹೇಳಿದ್ದಾರೆ?
3) ‘ಹೀಗೊಂದು ಟಾಪ್ ಪ್ರಯಾಣ ಯಾವ ಸಾಹಿತ್ಯ ಪ್ರಕಾರಕ್ಕೆ ಉದಾಹರಣೆಯಾಗಿದೆ?
 ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡುಮೂರು ವಾಕ್ಯಗಳ ಉತ್ತರಗಳನ್ನು ಬರೆಯಿರಿ.              2X2=4 
4) ಕರ್ನಾಟಕತ್ವದ ಗುಣ ವಿಶೇಷಗಳಾವುವು?
5) ಕಳಸಶಿಲುಬೆಬಿಳಿ ಮಿನಾರ್ ಇವು ಯಾವ ಧರ್ಮದ ಸಂಕೇತಗಳಾಗಿವೆ?
 ಕೆಳಗಿನ ಹೇಳಿಕೆಯನ್ನು ಸಂದರ್ಭ ಮತ್ತು ಸ್ವಾರಸ್ಯ ಸಹಿತ ವಾಕ್ಯಗಳಲ್ಲಿ ವಿವರಿಸಿ.                  1X2=2
6) “ಸುಕವಿಯಶೋ ನಿರ್ಮತ್ಸರನ್.”
                       ಅಥವಾ
ರಸಕವಿತ್ವ ಒಂದೆ.”
 ಸಾಹಿತಿಗಳ ಸ್ಥಳ ಮತ್ತು ಕೃತಿಗಳನ್ನು ವಾಕ್ಯಗಳಲ್ಲಿ ಬರೆಯಿರಿ.                                  2X2=4
7) ಜಿ.ಪಿರಾಜರತ್ನಂ
8) ಕೆ.ಎಸ್ನಿಸಾರ್ ಅಹಮದ್       
ಭಾಗ - `ಬಿ
ಅನ್ವಯಿಕ ವ್ಯಾಕರಣ - 3 ಅಂಕಗಳು
 ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿಕ್ರಮಾಕ್ಷರದೊಂದಿಗೆ ಉತ್ತರವನ್ನು ಬರೆಯಿರಿ.                           3X1=3
9) ‘ಒರೆಗಲ್ಲು  ಸಂಧಿಗೆ ಉದಾಹರಣೆ:
(ಆಗಮ (ಬಿಆದೇಶ (ಸಿಲೋಪ (ಡಿಜಸ್ತ್ವ
10) ಈ ಕೆಳಗಿನ ಪದಗಳಲ್ಲಿ ದ್ವಿತೀಯಾ ವಿಭಕ್ತಿ ಪ್ರತ್ಯಯವನ್ನು ಒಳಗೊಂಡ ಪದ:
(ರಾಜ್ಯೋತ್ಸವವನ್ನು (ಬಿರಾಜ್ಯೋತ್ಸವಕ್ಕೆ (ಸಿರಾಜ್ಯೋತ್ಸವದಿಂದ (ಡಿರಾಜ್ಯೋತ್ಸವ
11) ಅಲಂಕಾರ ವಾಕ್ಯದಲ್ಲಿ ಯಾವ ವಸ್ತುವನ್ನು ವರ್ಣಿಸುತ್ತಾರೋ ಅದನ್ನು ಹೀಗೆನ್ನುತ್ತಾರೆ:
(ವಣ್ರ್ಯ (ಬಿಅವಣ್ರ್ಯ (ಸಿಉಪಮಾನ (ಡಿವರ್ಣಕ
ಭಾಗ - `ಸಿ
 ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 4 ಅಂಕಗಳು   
12) ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಯಾವುದಾದರು ಎರಡು ಪ್ರಶ್ನೆಗಳಲ್ಲಿ ಉತ್ತರವನ್ನು       ಬರೆಯಿರಿ.                                                                         2X1=2
    ವಿವೇಕಾನಂದರು ತಮ್ಮ ಗುರು ಶ್ರೀ ರಾಮಕೃಷ್ಣ ಪರಮಹಂಸರನ್ನು ನೆನೆಯುತ್ತಜಗನ್ಮಾತೆಯ  ಲೀಲಾವಿಲಾಸಗಳನ್ನು ಸ್ಮರಿಸುತ್ತಕಾಲಟಿಯಿಂದ ಭಾರತದ ದಿಗ್ವಿಜಯಕ್ಕೆ ಹೊರಟ ಶಂಕರಾಚಾರ್ಯರಂತೆ, ವಿಶ್ವವಿಜಯಕ್ಕಾಗಿ ವಿಶ್ವ ಪರ್ಯಟನೆಗೆ ಹೊರಟಿದ್ದರುಪರಿವ್ರಾಜಕ ಸನ್ಯಾಸಿಯಾಗಿ ಕೇವಲ ಒಂದು ದಂಡ. ಕಮಂಡಲಒಂದೆರಡು ಬಟ್ಟೆಹಲವಾರು ಪುಸ್ತಕ ಇವಿಷ್ಟೇ ತಮ್ಮ ಆಸ್ತಿಯಾಗಿ ಹೊಂದಿದ್ದ ವಿವೇಕಾನಂದರು ಈಗ ಸಮುದ್ರಯಾನದಲ್ಲಿ ಎಚ್ಚರದಿಂದ ಕಾಯ್ದುಕೊಳ್ಳಬೇಕಾದ ಹಾಸಿಗೆಪೆಟ್ಟಿಗೆಬಟ್ಟೆಬರೆ ಮತ್ತು ಚೀಲಗಳನ್ನು  ಅಳಸಿಂಗ ತಂದುಕೊಟ್ಟದ್ದನ್ನು ಕಂಡು ವಿಸ್ಮಿತರಾದರುಅಳಸಿಂಗ ಗುರುಗಳ ಟಿಕೆಟ್ನ್ನೂ ಜೊತೆಗೆಖರ್ಚಿಗೆ ಹಣ 187 ಪೌಂಡ್ ಗಳನ್ನೂ ಕೊಟ್ಟರು.ಅದರಲ್ಲಿ ಒಂಬತ್ತು ಪೌಂಡ್ ಚಿಲ್ಲರೆ ನಾಣ್ಯಗಳಿದ್ದವುಹರ್ಷಪುಲಕಿತರಾದ ಸ್ವಾಮಿಗಳ ಕಂಠ  ತುಂಬಿ ಬಂತು.
1.  ವಿವೇಕಾನಂದರು ಹೊಂದಿದ್ದ ಆಸ್ತಿಯಾವುದು?
2. ವಿವೇಕಾನಂದರು ವಿಶ್ವ ಪರ್ಯಟನೆಗೆ ಯಾವರೀತಿ ಹೊರಟ್ಟಿದ್ದರು?
3. ಅಳಸಿಂಗರು ಗುರುಗಳಿಗೆ ಕೊಡಲು ಏನೇನು ತಂದಿದ್ದರು?
4. ಸ್ವಾಮಿ ವಿವೇಕಾನಂದರ ಕಂಠ ತುಂಬಿ ಬರಲು ಕಾರಣವೇನು?
13) ಮೈಸೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿತ್ತಿರುವ ನೀನು ಅಂಕಿತಅರುಣ್ ಎಂದು ಭಾವಿಸಿ ಯಾದಗಿರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ನಿಮ್ಮ ಗೆಳತಿ ಮಮತಳಿಗೆ/ಗೆಳೆಯ ಮಹೇಶನಿಗೆ ನಿಮ್ಮ ರೂಪಣಾತ್ಮಕ ಚಟುವಟಿಕೆಗಳ ಬಗೆಗೆ ತಿಳಿಸುತ್ತಾ ಒಂದು ಪತ್ರ  ಬರೆಯಿರಿ                                                                                                    1X2=2                                       
****************

No comments:

Post a Comment