Sunday 9 August 2015

'ಕೋಗಿಲೆ'- ಪ್ರಶ್ನೆಗಳು

ಪದ್ಯ : ಕೋಗಿಲೆ (ನವೋದಯ, ಪ್ರಕೃತಿ ಗೀತೆ)
                                                            ಚೆನ್ನವೀರ ಕಣವಿ.
1.      1.      ನಗರ ಮತ್ತು ಪಟ್ಟಣಗಳಲ್ಲಿ ವಾಸಿಸುವವರು ಶಾಂತಿಯನ್ನು ಅರಸಿ ಎಲ್ಲಿಗೆ ಹೋಗಲು ಬಯಸುತ್ತಾರೆ? ಏಕೆ?
2.     ರಜಾ ದಿನಗಳಲ್ಲಿ ಜನರು ಪ್ರಕೃತಿಯ ನಡುವೆ ಕಾಲಕಳೆಯಲು ಬಯಸುತ್ತಾರೆ ಏಕೆ?
3.     ಪ್ರಕೃತಿಯು ನಮ್ಮನ್ನು ಹೇಗೆ ಹುರಿದುಂಬಿಸುತ್ತದೆ?
4.    ಪ್ರಕೃತಿಯ ಎಲ್ಲೆಡೆಯೂ ಸಂಗೀತವನ್ನು ಕಾಣುತ್ತೇವೆ ಹೇಗೆ ವಿವರಿಸಿರಿ?
ಅಥವಾ
5.      ಪ್ರಕೃತಿಯ ಎಲ್ಲೆಡೆಯೂ ಸಂಗೀತವೇ ಕೇಳಿಬರುತ್ತದೆ’ ಈ ಹೇಳಿಕೆಯನ್ನು ಉದಾಹರಣೆಗಳೊಂದಿಗೆ ಸಮರ್ಥಿಸಿ.
6.     ಸಿದ್ಧಯ್ಯ ಪುರಾಣಿಕರ ‘ಸಾರುತಿದೆ ಸೃಷ್ಟಿ’ ಕವನವನ್ನು ಓದಿ ಅರ್ಥಮಾಡಿಕೊಂಡು ರಾಗವಾಗಿ ಹಾಡಿರಿ.
ಹಣ್ಣಿನಲಿ ಬೆಣ್ಣೆಯಲಿ ಕೆನೆ ಮೊಸರು ಹಾಲಿನಲಿ
ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ
ಎಳನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ
ಸಾರುತಿದೆ ಸೃಷ್ಟಿಯಿದು ಸವಿಯಾಗು ಎಂದು
ಸವಿಯಾಗು ಸವಿಯಾಗು ಸವಿಯಾಗು ಎಂದು !
ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ
ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ
ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ
ಸಾರುತಿದೆ ಸೃಷ್ಟಿಯಿದು ಛವಿಯಾಗು ಎಂದು
ಛವಿಯಾಗು ಛವಿಯಾಗು ಛವಿಯಾಗು ಎಂದು !
ಶಬ್ದದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ
ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ
ಬಾಳುವೆಯ ಸವಿ ಬೆಳಕ ಬರೆಯುವವ ಬೇಕಾಗಿ
ಸಾರುತಿದೆ ಸೃಷ್ಟಿ ಸವಿಛವಿಯಾಗಿ ನಿಂದು
ಕವಿಯಾಗು ಕವಿಯಾಗು ಕವಿಯಾಗು ಎಂದು !!
                                                                                          (ಕವಿ : ಕಾವ್ಯಾನಂದ )
7.      ಪ್ರಕೃತಿಗೀತೆಗಳನ್ನು ಸಂಗ್ರಹಿಸಿ ಬರೆಯಿರಿ.
8.     ಪ್ರಕೃತಿಯಲ್ಲಿ ಲೀನವಾಗಿರುವ ಸುಮಧುರ ಧ್ವನಿಗಳನ್ನು ಪಟ್ಟಿಮಾಡಿರಿ.
ದುಮ್ಮಿಕ್ಕಿ ನೀರನಿರಿಗೆಯ ಚಿಮ್ಮಿಸುತ ಸರಗೈವ ಜಲಪಾತ
ಮೈದುಂಬಿ ಹರಿದು ಜುಳುಜುಳು ನಾದಗೈವ ಜಲಸುಂದರಿ
ಬೋರ್ಗರೆದು ಅಲೆಗಳಿಂದಾಟವಾಡುತ ಧ್ವನಿಗೈವ ಜಲಧಿ
ನಿತ್ಯ ನಿರಂತರ ಗಾನಗೈವ ಶ್ರೇಷ್ಠಗಾಯಕರು-ನನ ಕಂದ||
ಈ ರೀತಿಯ ಧ್ವನಿಗಳನ್ನು ಗುರುತಿಸಿರಿ
9.     ಬೇಂದ್ರೆಯವರ ‘ಬೆಳಗು’ ಕವನದ ಭಾವಾರ್ಥವನ್ನು ತಿಳಿದುಕೊಂಡು ರಾಗವಾಗಿ ಹಾಡಿರಿ.
ಗಿಡಗಂಟೆಯಾ ಕೊರಳೊಳಗಿಂದ
ಹಕ್ಕಿಗಳಾ ಹಾಡು
ಹೊರಟಿತು - ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು - ಕಾಡಿನಾ ನಾಡು.
ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ - ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ - ದೀ ಮನಸಿನ ಗೇಹಾ
ಅರಿಯದು ಅಳವು ತಿಳಿಯದು ಮನವು
ಕಾಣದೋ ಬಣ್ಣ
ಕಣ್ಣಿಗೆ - ಕಾಣದೋ ಬಣ್ಣ
10.    ಇಂಪಾದ ಧ್ವನಿಯನ್ನು ಹೊಂದಿರುವ ಹಕ್ಕಿಗಳಾವುವು?
11.     ಅತ್ಯಂತ ಇಂಪಾದ ಗಾನಕ್ಕೆ ಹೆಸರಾದ ಹಕ್ಕಿ ಯಾವುದು?
12.    ಎಲ್ಲಾ ಭಾಷೆಗಳ ಕವಿಗಳ ಮನಸ್ಸನ್ನು ತನ್ನ ಗಾನ ಮಾಧುರ್ಯದಿಂದ ಸೂರೆಗೊಂಡಿರುವ ಹಕ್ಕಿ ಯಾವುದು?
13.    ಕೋಗಿಲೆಯನ್ನು ಕುರಿತು ಕನ್ನಡದಲ್ಲಿ ರಚನೆಯಾಗಿರುವ ಕವನಗಳನ್ನು ಸಂಗ್ರಹಿಸಿರಿ.
14.   ಕೆ.ಎಸ್.ಎನ್ ಅವರ ‘ಕೋಗಿಲೆ’ ಕವನವನ್ನು ಭಾವಪೂರ್ಣವಾಗಿ ಹಾಡಿರಿ.
ಕೋಗಿಲೆ!

ತುಂಬುತಿಂಗಳಿನ ಮಲ್ಲಿಗೆ ಹಂಬಿನ
ನಂಬದ ಬೆಳಕಿನ ಸೆರಗಿನಲಿ.
ತುಂಬಿ ತುಂಬಿಬಹ ನಾಡಿನ ಪಾಡಿನ
ತುಂಬದಾಸೆಗಳ ಕೊರಗಿನಲಿ-
ಅಕ್ಕ ಓ ಕೋಗಿಲೆ!
ಚಿಕ್ಕ ಹೂ ಕೋಗಿಲೆ,

ಮರದ ಮೇಲೆ ತೂಗಾಡುವ ಹಾಡಿಗೆ
ಹೆಸರು ಬಂದಿತೆ ಕೋಗಿಲೆ?
ಸೊಕ್ಕಿಬರುವ ಸುಮ್ಮಾನದ ಕೂಗಿಗೆ
ಸುಖದ ಊರ ಹೆಬ್ಬಾಗಿಲೆ
ತೆರೆದುದೇ, ಈಗಲೆ?
-ಕಾಣದೇ ಕೋಗಿಲೆ!

ಅಲ್ಲೆ ಇರು ನೀನಿಲ್ಲೆ ಇರು ನೀ
ನೆಲ್ಲೆ ಇರು ನೀ ಬರಿಯದನಿ!
ಎಲ್ಲೂ ನಾದದ ತುಷಾರ ವಾಹಿನಿ;
ಎತ್ತರದುತ್ತರ ನಿನ್ನ ದನಿ!
-ಬಾನಹೂ ಕೋಗಿಲೆ:
ಮುಗಿಲ ಮುತ್ತಾಗಲೆ!

ಹೂವು ಅಲ್ಲದ ಎಲೆಯೂ ಅಲ್ಲದ
ಬನದ ಹುಟ್ಟು ಈ ಕೋಗಿಲೆ;
ಎದೆಯ ಗಾಯನದಲಿ ಮೆಲ್ಲಗೆ ಸುಳಿಯುವ
ದನಿ ನೇಗಿಲೆ ಕೋಗಿಲೆ?
-ಹಾಡಿತೆ, ಕೋಗಿಲೆ;
ಇಲ್ಲವೆ, ಹಸುರೆಲೆ.
                                          - ಕೆ. ಎಸ್. ನರಸಿಂಹಸ್ವಾಮಿ
                                             ' ಉಂಗುರ '
15.    ಕವಿಯು ಕೋಗಿಲೆಯನ್ನು ಏನೆಂದು ಪ್ರಶ್ನಿಸುತ್ತಿದ್ದಾರೆ?
16.    ಮಧುರ ಕಂಠ ಈಗ ತಾನೆ ಬಂದಿತೇ, ಎಂದು ಕವಿಯು ಯಾರನ್ನು ಕೇಳುತ್ತಿದ್ದಾರೆ?
17.    ಜಗತ್ತಿನ ಸಂತಸವು ಯಾರ ಮುದದ ಗಾನವಾಗಿ ಪರಿಣಮಿಸಿದೆ ಎಂದು ಕವಿ ಭಾವಿಸಿದ್ದಾರೆ?
18.    ಕವಿಯು ಕೋಗಿಲೆ ಪದ್ಯದಲ್ಲಿ ಮಾಮರವನ್ನು ಹೇಗೆ ವರ್ಣಿಸಿದ್ದಾರೆ?
19.    ಕೋಗಿಲೆಯು ಕುಳಿತ್ತಿದ್ದ ಮಾಮರವು ಹೇಗಿದೆ ಎಂದು ಕವಿ ಹೇಳಿದ್ದಾರೆ?
20.   ಕೋಗಿಲೆಯು ಎಲ್ಲಿ ಕುಳಿತು ಹಾಡುತ್ತಿತ್ತು?
21.    ಕೋಗಿಲೆಯು ಮಾಮರದಲ್ಲಿ ಕುಳಿತು ಹೇಗೆ ಹಾಡುತ್ತಿತ್ತು?
22.   ಮಾಮರದಲ್ಲಿ ಕುಳಿತು ಮೈಮರೆತು ಸುಮಧುರವಾಗಿ ಹಾಡುತ್ತಿದ್ದವರು ಯಾರು?
23.   ಕವಿಯ ಭಾವನೆಯು ಮೂಕವಾಗಲು ಕಾರಣವೇನು?
24.  ಕೂಜನವು ಮನುಜಲೋಕವನ್ನು ಏನನ್ನಾಗಿ ಪರಿವರ್ತಿಸಿದೆ?
25.   ಮನುಜ ಲೋಕ ದಿವಿಜಲೋಕವಾದುದು ಹೇಗೆ?
26.   ಮನುಜ ಲೋಕವನ್ನು ದಿವಿಜಲೋಕವನ್ನಾಗಿ ಮಾಡಿದವರು ಯಾರು? ಹೇಗೆ?
27.   ಕೂಜನ ಎಂದರೇನು?
28.   ಕೂಜನವು ಮನುಜ ಲೋಕವನ್ನು ಏನನ್ನಾಗಿ ಮಾಡಿದೆ?
29.   ಕೋಗಿಲೆಯ ಗಾನವನ್ನು ಕೇಳಿ ಕವಿಯಲ್ಲಾದ ಬದಲಾವಣೆಗಳಾವುವು?
30.   ಕವಿಯು ಮೌನತಾಳಲು ಕಾರಣವೇನು?
31.    ಕೋಗಿಲೆಯ ಕೂಜನವನ್ನು ಕೇಳಿದೊಡನೆಯೇ ಆಗುವ ಬದಲಾವಣೆಗಳಾವುವು?
32.   ಕ್ಷಣಮಾತ್ರದಲ್ಲಿ ಎದೆಯನ್ನು ಮಿಡಿದು ತಾಳವನ್ನು ಹಿಡಿದು ಕುಣಿಯುವಂತೆ ಮಾಡುವುದು ಯಾವುದು?
33.  ಎದೆ ಮಿಡಿಯುವುದು ಎಂದರೇನು?
34.  ರಸದ ಕಡಲು ಎಂದರೇನು?
35.   ರಸದ ಕಡಲು ಹಿಗ್ಗಿನೊಡಲಾದುದು ಹೇಗೆ?
36.   ಸಾಮರಸ್ಯದಿಂದ ವಿವಿಧ ರಾಗಗಳ ನಾದದ ಅಲೆಗಳುಂಟಾದುದು ಎಲ್ಲಿ? ಏಕೆ?
37.   ಕವಿಯು ಕೋಗಿಲೆಯನ್ನು ಏನೆಂದು ಪ್ರಾರ್ಥಿಸಿದ್ದಾರೆ?
38.   ಸುಧೆಯನ್ನು ಹೇಗೆ ನೀಡಬೇಕೆಂದು ಕವಿ ಕೋಗಿಲೆಯನ್ನು ಕೋರಿದ್ದಾರೆ?
39.   ಕೋಗಿಲೆಯು ಅಮೃತವನ್ನು ಹೇಗೆ ನೀಡಬೇಕೆನ್ನುವುದು ಕವಿಯ ಅಪೇಕ್ಷೆಯಾಗಿದೆ?
40.  ಯಾವುದು ಕೋಗಿಲೆಯ ಸ್ವಾಭಾವಕ್ಕೆ ಹೊಂದುವುದಿಲ್ಲವೆಂದು ಕವಿ ಹೇಳಿದ್ದಾರೆ?
41.   ಮೌನವಾಗಿರಬೇಡವೆಂದು ಕವಿ ಕೋಗಿಲೆಯನ್ನು ಕೇಳಿಕೊಳ್ಳಲು ಕಾರಣವೇನು?
42.  ಮೌನ ಧ್ಯಾನ ಯಾರಿಗೆ ಊನವೆಂದು ಕವಿ ಹೇಳಿದ್ದಾರೆ?
43.  ಕೋಗಿಲೆಯ ರಾಗ ಮಾಧುರ್ಯದ ಸೊಬಗನ್ನು ಚೆನ್ನವೀರ ಕಣಿವಿಯವರು ಹೇಗೆ ವರ್ಣಿಸಿದ್ದಾರೆ?
44.  ‘ಕೋಗಿಲೆ’ ಕವನದ ಸಾರಾಂಶವನ್ನು ಬರೆಯಿರಿ.
45.  ಚೆನ್ನವೀರ ಕಣವಿಯವರು ಮಾಡಿರುವ ‘ಕೋಗಿಲೆ’ಯ ಕೂಜನದ ಸೊಗಸಾದ ವರ್ಣನೆಯನ್ನು ನಿಮ್ಮ ಮಾತುಗಳಲ್ಲಿ ವರ್ಣಿಸಿರಿ.
46.  ಕೋಗಿಲೆ ಪದ್ಯದಲ್ಲಿ ಬಂದಿರುವ ಅಂತ್ಯಪ್ರಾಸ ಪದಗಳನ್ನು ಪಟ್ಟಿಮಾಡಿರಿ.
47.   ಚೆನ್ನವೀರ ಕಣವಿಯವರ ಕಾಲ ಮತ್ತು ಸ್ಥಳವನ್ನು ತಿಳಿಸಿ.
48.  ಚೆನ್ನವೀರ ಕಣವಿಯವರ ತಂದೆ ಮತ್ತು ತಾಯಿಯ ಹೆಸರನ್ನು ತಿಳಿಸಿರಿ.
49.  ಚೆನ್ನವೀರ ಕಣವಿಯವರ ವೃತ್ತಿ ಮತ್ತು ಪ್ರವೃತ್ತಿಯನ್ನು ತಿಳಿಸಿರಿ.
50.   ಚೆನ್ನವೀರ ಕಣವಿಯವರು ವಿಶ್ರಾಂತ ಜೀವನವನ್ನು ಎಲ್ಲಿ ನಡೆಸುತ್ತಿದ್ದಾರೆ?
51.    ಚೆನ್ನವೀರ ಕಣವಿಯವರ ಪ್ರಮುಖ ಕೃತಿಗಳಾವುವು?
52.   ಚೆನ್ನವೀರ ಕಣವಿಯವರ  ವಿಮರ್ಶಾ ಕೃತಿಗಳಾವುದು?
53.   ಚೆನ್ನವೀರ ಕಣವಿಯವರ ‘ನೆಲಮುಗಿಲು’ ಕೃತಿಗೆ ಸಂದ ಪ್ರಶಸ್ತಿಯಾವುದು?
54.  ಚೆನ್ನವೀರ ಕಣವಿಯವರ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿಯಾವುದು?
55.   ಚೆನ್ನವೀರ ಕಣವಿಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದು ಕೊಟ್ಟ ಕೃತಿಯಾವುದು?
56.   ‘ಆಕಾಶಬುಟ್ಟಿ’ ಕವನ ಸಂಗ್ರಹಕ್ಕೆ ಸಂದ ಪ್ರಶಸ್ತಿಯಾವುದು?
57.   1999ರಲ್ಲಿ ಚೆನ್ನವೀರ ಕಣವಿಯವರಿಗೆ ಸಂದ ಪ್ರಶಸ್ತಿಯಾವುದು?
58.   65ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಎಲ್ಲಿ ನಡೆಯಿತು?
59.   1966ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದವರು ಯಾರು?
60.  ‘ಕೋಗಿಲೆ’ ಪದ್ಯದ ಆಕರ ಕೃತಿ ಯಾವುದು?
61.    ಈ ಕೆಳಗಿನ ಪದಗಳ ಸಂಧಿ ಬಿಡಿಸಿ ಹೆಸರಿಸಿ.
1.  ಗಾನವಾಯ್ತೆ
2. ಸೂಸುತಿಹುದು
3. ಕಂಪಿನಲರು
4.ಉಲಿಯುತಿರುವೆ
5. ಮೂಕವಾಯ್ತು
6. ಕುಣಿಯುತಿಹುದು
7. ಹಿಗ್ಗಿನೊಡಲು
8. ಎಲ್ಲೆಲ್ಲೂ
9. ಶಾಂತಿಯನ್ನು
10. ಮುದವನ್ನು
11.ಆನಂದವನ್ನು
12. ಉಲ್ಲಾಸವನ್ನು
13.  ಕಿವಿಯನ್ನು
14. ಕಣ್ಣನ್ನು
15.  ಕಲರವವನ್ನು
16. ದನಿಯನ್ನು
17.  ಕೋಗಿಲೆಯನ್ನು
18. ಕೆಲವನ್ನು
62.   ಈ ಕೆಳಗಿನ ಪದಗಳ ಅರ್ಥವನ್ನು ತಿಳಿಸಿರಿ.
1.      ಅರಸು
2.     ಇಂಪು
3.     ಉಲ್ಲಾಸ
4.     ಉಲಿ
5.     ಊನ
6.     ಒಡಲು
7.      ಒಲುಮೆ
8.     ಕಂಠ
9.     ಕಂಪು
10.   ಕಡಲು
11.     ಕುಕಿಲು
12.    ಕೂಜನ
13.    ಚಣ
14.   ಜಾವ
15.    ತರಂಗ
16.    ತರತರಂಗ
17.    ತಳಿರು
18.    ದಿವಿಜ
19.    ದಿವಿಜಲೋಕ
20.  ನಾಕ
21.    ಬಾಜನ
22.  ಬಿನದ
23.   ಭಾವನ
24.  ಮಧುರ
25.   ಮನುಜ 
26.  ಮನುಜಲೋಕ
27.   ಮರ್ಮರ
28.  ಮಾಮರ
29.  ಮಿಡಿ
30.  ಮುದ
31.    ರಸ
32.   ರಸದ ಕಡಲು
33.   ವಿಹಾರ
34.  ಸುಧೆ
35.   ಸೂಸು
36.   ಹಿಗ್ಗಿನೊಡಲು
37.   ಹಿಗ್ಗು
38.   ಹುರಿಗೊಳಿಸು
63. ಕೆಳಗಿನ ಪದಗಳಿಗೆ ವಿರುದ್ಧಾರ್ಥಗಳನ್ನು ಬರೆಯಿರಿ.
1.    ಜಾಣ
2.   ನಾಕ
3.   ಸುಧೆ
4.   ಹಿಗ್ಗು
64. ತತ್ಸಮಗಳ ತದ್ಭವ ರೂಪವನ್ನು ತಿಳಿಸಿರಿ.
1.    ಬಿನದ
2.   ಲೋಗ
3.   ಚಣ
4.   ಸುಧೆ
5.   ಮೋನ
65. ಕನಿಷ್ಠ ಮೂರು ಪದಗಳಾದರೂ ಇರುವಂತೆ ಸಮಾನಾರ್ಥಕ ಪದಗಳನ್ನು ಬರೆಯಿರಿ.(ಗರಿಷ್ಠಕ್ಕೆ ಮಿತಿಯಿಲ್ಲ)
1.    ಕೋಗಿಲೆ
2.   ಸುಧೆ
3.   ಕಡಲು
4.   ಮನುಜ
5.   ಉಲಿ
*********************

No comments:

Post a Comment