Thursday 13 August 2015

ಒಣಮರದ ಗಿಳಿ-ಪ್ರಶ್ನೆಗಳು

1.       ಬೇಟೆಗಾಗಿ ಕಾಶಿ ಬೇಡನು ಏನನ್ನು ಸಿದ್ಧಪಡಿಸಿಕೊಂಡನು?
2.       ವಿಷದ ಬಾಣವನ್ನು  ಕಾಶಿ ಬೇಡನು ಏಕೆ ಸಿದ್ಧಪಡಿಸಿಕೊಂಡನು?
3.       ಪ್ರಾಣಿಗಳನ್ನು ಕೊಲ್ಲಲು ಬೇಡನು ಮಾಡಿದ ಉಪಾಯವೇನು?
4.       ಬೇಟೆಗಾರನು ಯಾವ ಪ್ರಾಣಿಯನ್ನು ಬೆನ್ನಟ್ಟಿದನು?
5.       ಬೇಟೆಗಾರನ ಬಾಣವು ತಗುಲಿದ ಕೂಡಲೇ ಜಿಂಕೆ ಸಾಯುತ್ತಿತ್ತು ಏಕೆ?
6.       ಬಾಣ ತಗಲುವ ಮುಂಚೆ ಮರದ ಸ್ವರೂಪ ಹೇಗಿದ್ದಿತು?
7.       ಬೇಟೆಗಾರನ ಬಾಣದ ಗುರಿ ತಪ್ಪಿದ್ದರ ಪರಿಣಾಮವೇನಾಯಿತು?
8.       ಬೇಟೆಗಾರನು ಬಿಟ್ಟ ಬಾಣವು ಮರಕ್ಕೆ ತಾಕಿದ್ದರ ಪರಿಣಾಮವೇನಾಯಿತು?
9.       ಗಿಳಿಯು ಮರದ ಪೊಟರೆಯನ್ನು ಬಿಟ್ಟುಹೋಗಲಿಲ್ಲವೇಕೆ?
10.   ಮರದ ಹಸಿರಿನ ಸಿರಿಯು ಮಾಯವಾಗಲು ಕಾರಣವೇನು?
11.   ಇಂದ್ರನಿಗೆ ಆಶ್ಚರ್ಯವಾಗಲು ಕಾರಣವಏನು?
12.   ಒಣಮರದಲ್ಲಿ ಏಕೆ ವಾಸ ಮಾಡುತ್ತಿದ್ದೀ ಎಂದು ಗಿಳಿಯನ್ನು ಕೇಳದವರು ಯಾರು? ಏಕೆ?
13.   ಒಣಮರದಲ್ಲಿ ಏಕೆ ವಾಸ ಮಾಡುತ್ತಿದ್ದೀ ಎಂದು ಇಂದ್ರನು ಯಾರನ್ನು ಕೇಳಿದನು? ಏಕೆ?
14.   ಇಂದ್ರನು ಗಿಣಿಯನ್ನು ಏನೆಂದು ಕೇಳಿದನು?ಏಕೆ?
15.   ತಾನು ವಾಸವಾಗಿದ್ದ ಮರಕ್ಕೆ ಗಿಳಿಯು ಕೃತಜ್ಞತೆಯನ್ನು ಹೇಗೆ ತೋರಿಸಿತು?
16.   ಇಂದ್ರನ ಪ್ರಶ್ನೆಗೆ ಗಿಳಿಯುಕೊಟ್ಟ ಉತ್ತರವೇನು?
17.   ಇಂದ್ರನಿಗೆ ಸಂತೋಷವಾಗಲು ಕಾರಣವೇನು?
18.   ಗಿಳಿಯು ಮರಕ್ಕೆ ಏನೆಂದು ಹಾರೈಸ ಬೇಕೆಂದು ಹೇಳಿತು? ಏಕೆ?
19.   ಗಿಣಿಯ ನಡತೆಯು ಲೋಕವರ್ತನೆಗೆ ಹೇಗೆ ವಿರುದ್ಧವಾಗಿತ್ತು?
20.   ಗಿಳಿಯ ನಡತೆ ಲೋಕವರ್ತನೆಗೆ ವಿರುದ್ಧವಾದುದು ಎಂದು ಕೊಂಡವನು ಯಾರು? ಏಕೆ?
21.   ಗಿಳಿ ತತ್ತ್ವನಿಷ್ಠೆಯನ್ನು ತಿಳಿಸಿರಿ?
22.   ಲೋಕವಾರ್ತೆ ಎಂದರೇನು?
23.   ಸಾಮಾನ್ಯರ ಲೋಕವಾರ್ತೆಯಾವುದು?
24.   ಇಂದ್ರನಿಗೆ ಮೆಚ್ಚುಗೆಯಾದ ಗಿಳಿಯ ತತ್ತ್ವನಿಷ್ಠೆಯಾವುದು?
25.   ಮನುಷ್ಯನ ಬದುಕಿಗೆ ಮಾದರಿಯಾಗಬಲ್ಲ ಗಿಳಿಯ ಸೂತ್ರ ಯಾವುದು?
26.   ಗಿಳಿಯು ಪರಹಿತಾಕಾಂಕ್ಷಿ ಎಂದು ಹೇಗೆ ಹೇಳುವಿರಿ?
27.   ಇಂದ್ರನ ಮೆಚ್ಚುಗೆಗೆ ಪಾತ್ರವಾದ ಗಿಳಿಯ ಶ್ರದ್ಧೆಯಾವುದು?
28.   ಗಿಣಿಯು ಎಂತಹ ಜನ್ಮ ಬಯಸಿದರೂ, ಎಂತಹ ಭೋಗವನ್ನು ಬಯಸಿದರೂ ಕೊಡಲು ಇಂದ್ರನು ಸಿದ್ಧವಾಗಲು ಕಾರಣವೇನು?
29.   ಗಿಳಿರಾಯನಿಗೆ ಇಂದ್ರನು ವರವನ್ನು ಕೊಡಲು ತೀರ್ಮಾನಿಸಿದ್ದೇಕೆ?
30.   ಗಿಳಿಗೆ ಎಂಥ ವರಗಳನ್ನು ಕೊಡಲು ಇಂದ್ರನು ಸಿದ್ಧವಾಗಿದ್ದನು? ಏಕೆ?
31.   ಗಿಳಿಯು ಬೇಡಿದ ವರಯಾವುದು?ಏಕೆ?
32.   ಗಿಳಿಯು ಯಾರ? ಯಾವ? ಅವಸ್ಥೆಯನ್ನು ನೋಡಲಾರೆನೆಂದು ಹೇಳಿತು?
33.   ನಮ್ಮ ಬೆಳವಣಿಗೆಗೆ ಕಾರಣರಾದ ಎಲ್ಲರನ್ನೂ, ಎಲ್ಲವನ್ನೂ ಕೃತಜ್ಞತೆಯಿಂದ ಗೌರವಿಸ ಬೇಕೆಂಬ ಭಾವನೆ ಒಣಮರದ ಗಿಳಿ ಗದ್ಯಭಾಗದಲ್ಲಿ ಹೇಗೆ ವ್ಯಕ್ತವಾಗಿದೆ? ನಿಮ್ಮ ಮಾತುಗಳಲ್ಲಿ ವಿವರಿಸಿ.
34.   ‘ಒಣಮರದ ಗಿಳಿ’ ಈ ಗದ್ಯ ಭಾಗದ ಸಂದೇಶವನ್ನು ನಿಮ್ಮ ಮಾತುಗಳಲ್ಲಿ ವರ್ಣಿಸಿರಿ.
35.   ಗಿಳಿಯಲ್ಲಿ ಕಂಡುಬರುವ ಮಾನವೀಯ ಗುಣಗಳಾವುವು?
36.   ಮಣಮರದಲ್ಲಿ ವಾಸವಾಗಿದ್ದ ಗಿಳಿಯಿಂದ ನಾವು ಕಲಿಯಬೇಕಾದ ಗುಣಗಳಾವುವು?
37.   ‘ಗಿಳಿಯ ನಡವಳಿಕೆ ನಮಗೆಲ್ಲಾ ಆದರ್ಶವಾಗಿದೆ’ – ನಿಮ್ಮ ಮಾತುಗಳಲ್ಲಿ ವಿವರಿಸಿರಿ.
38.   ಒಣಮರದ ಗಿಳಿ ಗದ್ಯಭಾಗದಲ್ಲಿರುವ ಸುಂದರ ಚಿತ್ರಣಯಾವುದು?
ಈ ಕೆಳಗಿನ ಪದಗಳ ಸಂಧಿ ಬಿಡಿಸಿ ಹೆಸರಿಸಿ.
1)      ಪರಹಿತಾಕಾಂಕ್ಷಿ
2)      ಗುರಿಯಾಗು
3)      ಕಾಶಿಯಲ್ಲಿ
4)      ಬೆನ್ನಟ್ಟಿ
5)      ಪೊಟರೆಯನ್ನು
6)      ಆಶ್ಚರ್ಯವಾಯಿತು
7)      ಗಿಳಿಯನ್ನು
8)      ಆಹಾರವನ್ನು
9)      ತತ್ತ್ವನಿಷ್ಟೆಯನ್ನು
10)   ಅವಸ್ಥೆಯನ್ನು
39.   ಈ ಕೆಳಗಿನ ಪದಗಳ ಅರ್ಥವನ್ನು ತಿಳಿಸಿರಿ
1)      ಪುಷ್ಪ
2)     ಪೊಟರೆ
3)     ಕೃತಘ್ನ
4)     ಕೃತಜ್ಞ
5)     ದುರ್ಭರ
6)     ಲೋಕವಾರ್ತೆ
7)      ಭೋಗ
8)     ಕಲಕಲಿಸು
9)     ಬೀಗು
10)    ಮುದ
40. ಕೆಳಗಿನ ಪದಗಳಿಗೆ ವಿರುದ್ಧಾರ್ಥಗಳನ್ನು ಬರೆಯಿರಿ.
1)     ಕೃತಜ್ಞ
2)    ಸಂತೋಷ
3)    ಬಡತನ
4)    ಸುಖ
5)    ಒಳ್ಳೆಯ
6)    ಶ್ರದ್ಧೆ
41.   ತತ್ಸಮಗಳಿಗೆ ತದ್ಭವ, ತದ್ಭವಗಳಿಗೆ ತತ್ಸಮ ರೂಪವನ್ನು ಬರೆಯಿರಿ.
1)     ಸಿರಿ
2)    ಆಶ್ರಯ
3)    ಗಳಿಗೆ
4)    ಸಂತಸ
5)    ಆಶ್ಚರ್ಯ
6)    ವರ್ಷ
7)    ಬಣ್ಣ
8)    ಸುಖ
9)    ಜನುಮ
10)  ಶ್ರದ್ಧೆ
11)    ಇಚ್ಛಾ
42.   ಅ.ರಾ. ಮಿತ್ರ ಇವರು ಜನಿಸಿದ ಇಸವಿ ಯಾವುದು?
43.   ಅ.ರಾ.ಮಿತ್ರರ ವೃತ್ತಿ ಹಾಗೂ ಪ್ರವೃತ್ತಿಗಳನ್ನು ತಿಳಿಸಿರಿ.
44.   ಅ.ರಾ ಮಿತ್ರರವರ ಪ್ರಮುಖ ಕತಿಗಳಾವುವು?
45.   ಅ.ರಾ. ಮಿತ್ರರವರು ಬರೆದಿರುವ ಲಲಿತ ಪ್ರಬಂಧಯಾವುದು?
46.   ಕನ್ನಡ ಛಂದಸ್ಸನ್ನು ಕುರಿತಾದ ಅ.ರಾ. ಮಿತ್ರರ ಕೃತಿಯಾವುದು?
47.   ಸುಮಾರು 235 ಪಾತ್ರ ಪ್ರಸಂಗಗಳ ಉಲ್ಲೇಖವಿರುವ ಅ.ರಾ.ಮಿತ್ರರ ಕೃತಿಯಾವುದು?

48.   ‘ಒಣಮರದಗಿಳಿ’ ಈ ಗದ್ಯಭಾಗದ ಆಕರಕೃತಿಯಾವುದು?
*************************

No comments:

Post a Comment