Saturday 4 July 2015

ಮಹಾತ್ಮ ಗಾಂಧೀಜಿ ವಿಚಾರಧಾರೆಗಳ ಸಾಕಾರರೂಪ ಡಾ. ಹೊ. ಶ್ರೀನಿವಾಸಯ್ಯ




     
    ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಮಹತ್ಸಾಧನೆಗಳನ್ನು ಮಾಡುತ್ತಾ ಬಂದಿರುವ ಮಹನೀಯರ ಸಾಲಿನಲ್ಲಿ ಅಗ್ರಸಾಲಿನಲ್ಲಿ ಕಂಗೊಳಿಸುತ್ತಾರೆ ಮಹಾತ್ಮ ಗಾಂಧೀಜಿ ವಿಚಾರಧಾರೆಗಳ ಸಾಕಾರರೂಪದಂತಿರುವ ಡಾ. ಹೊ. ಶ್ರೀನಿವಾಸಯ್ಯ
    ತೊಂಬತ್ತು ವರ್ಷದ ಹರೆಯದ  ಡಾ| ಹೊ. ಶ್ರೀನಿವಾಸಯ್ಯನವರು ಸರಿಸುಮಾರು ಮೂವತ್ತು ವರ್ಷಗಳಿಂದ ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇಂದಿಗೂ ಗಾಂಧೀಜಿಯವರ ವಿಚಾರಧಾರೆಗಳಿಗೆ ಬದ್ಧರಾಗಿ ತಮ್ಮ ನಡೆ ನುಡಿ, ವೇಷಭೂಷಣ, ಕಾರ್ಯವೈಖರಿಯ ಮೂಲಕ ಸಮಾಜದ ಮೇಲೆ ಗುರುತರವಾದ ಪ್ರಭಾವವನ್ನು ಬೀರುತ್ತಾ ಬಂದಿದ್ದಾರೆ. ಪ್ರತಿ ನಿತ್ಯ ಅನೇಕ ಸಭೆಸಮಾರಂಭಗಳಲ್ಲಿ ನುಡಿಯುವ ಅವರ ನುಡಿಗಳೇ ಇದಕ್ಕೆ ಸಾಕ್ಷಿಯಾಗಿವೆ. ಭಾರತ ಸರ್ಕಾರದ ಪ್ರಚಾರ ಇಲಾಖೆಯು ಪ್ರಕಟಿಸಿರುವಫ್ರೀಡಂ ಫೈಟರ್ಸ್ ರಿಮೆಂಬರೆನ್ಸ್ಎಂಬ ಕೃತಿಯಲ್ಲಿ  ಹೆಚ್. ಶ್ರೀನಿವಾಸಯ್ಯ ಡಿಓಟೆಡ್ ಡಿಸಿಪಲ್ಸ್ ಆಫ್ ಗಾಂಧೀಜಿಎಂಬ ಲೇಖನವನ್ನು ಕಾಣಬಹುದು.
    ಚೌದರೀ ಕೊಪ್ಪಲು, ದೇವಲಾಪುರ ಹೋಬಳಿ ನಾಗಮಂಗಲ ತಾಲ್ಲೂಕು ಮಂಡ್ಯ ಜಿಲ್ಲೆಯವರಾದ ಇವರು 4/01/1925ರಲ್ಲಿ ಜನಿಸಿದರು. ತಂದೆ ಹೊನ್ನಪ್ಪ, ತಾಯಿ ತಿಮ್ಮಮ್ಮ. ಬಿ., ಎಫ್..., ಎಂ.ಎಸ್..., ಚಾರ್ಟರ್ ಇಂಜಿನಿಯರಿಂಗ್(ಇಂಡಿಯ) ಎನ್.ಡಿ. ಪದವೀಧರರಾದ ಇವರು ವೃತ್ತಿಯಿಂದ ಇಂಜಿನಿಯರ್, ಪ್ರವೃತ್ತಿಯಿಂದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪ್ರಚಾರಕರು. ಸಮಾಜ ಸೇವಕರಾದ ಇವರು ಸ್ವಭಾವತಃ ಹುಟ್ಟು ಹೋರಾಟಗಾರರು. ಸರಳಜೀವಿಗಳು, ನಿಸರ್ಗಪ್ರೇಮಿಗಳು. ಗಾಂಧೀ ತತ್ವ ಅನುಯಾಯಿಗಳು. ಎಳೆಯ ವಯಸ್ಸಿನಲ್ಲೇ ಗಾಂಧೀಜಿಯವರಿಂದ ಪ್ರಭಾವಿತರಾಗಿ ತಮ್ಮ ಜೀವನವನ್ನೇ ಗಾಂಧಿ ತತ್ವಗಳಿಗೆ ಮುಡುಪಾಗಿಟ್ಟವರು.
     ಹಿರಿಯ ಚಿಂತಕರೂ, ಸಮಾಜಸೇವಕರೂ, ಗಾಂಧೀವಾದಿಗಳೂ, ಪ್ರಕೃತಿಚಿಕಿತ್ಸಾತಜ್ಞರೂ, ಸೇವಾದಳದ ನಾಯಕರೂ, ಖಾದಿಧಾರಿಗಳೂ, ಸಹಕಾರ ಧುರೀಣರು, ಶ್ರೇಷ್ಟ ಸಾಹಿತಿಗಳೂ, ಲೇಖಕರೂ, ರಾಜ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರೂ, ಬಹುಮುಖ ಪ್ರತಿಭಾವಂತರೂ  ಆಗಿರುವ ಹೊ. ಶ್ರೀನಿವಾಸಯ್ಯನವರು ಮಹಾತ್ಮಗಾಂಧೀಜಿಯವರ ತತ್ವಗಳಿಗನುಸಾರವಾಗಿ ಸಹಕಾರ, ಸರ್ವೋದಯ, ಗ್ರಾಮೋದ್ಧಾರ, ಮಧ್ಯಪಾನ ನಿಷೇಧ, ಶಿಕ್ಷಣ, ಪ್ರಕೃತಿ ಚಿಕಿತ್ಸೆ, ಸಮಾಜಸೇವೆ ಮುಂತಾದ ಕ್ಷೇತ್ರಗಳಿಗೆ ಗಣನೀಯವಾದ ಕೊಡುಗೆಗಳನ್ನು ನೀಡಿದ್ದಾರೆ.
  200ರಕ್ಕೂ ಹೆಚ್ಚು ಸಂಘ ಸಂಸ್ಥೆಗಳು ವಿವಿಧ ಸ್ಥಳಗಳಲ್ಲಿ, ವಿವಿಧ ಸಂದರ್ಭಗಳಲ್ಲಿ ಹೊ. ಶ್ರೀನಿವಾಸಯ್ಯನವರನ್ನು ಸನ್ಮಾನಿಸಿವೆ. ರಾಜ್ಯ ಮಟ್ಟದ ಸನ್ಮಾನ ಸಮಿತಿಯೊಂದು ನಿರ್ಮಾಣಗೊಂಡು 1982ರಲ್ಲಿ ರಾಜ್ಯಮಟ್ಟದಲ್ಲಿ ಸನ್ಮಾನ ಸಮಾರಂಭವನ್ನು ಏರ್ಪಡಿಸಿತು. ಇದೇ ವೇಳೆಸೇವಾಶ್ರೀಎಂಬ ಸ್ಮರಣ ಸಂಚಿಕೆಯನ್ನು ಮತ್ತುಜಯಶ್ರೀಎಂಬ ಪುಸ್ತಕವನ್ನು ಹೊರತಂದಿತು. ಇವರ ಎಪ್ಪತ್ತು ವಸಂತಗಳ ಸಾರ್ಥಕ ಬದುಕನ್ನು ಗೌರವಿಸಿ 9.1.2000 ದಿನದಂದು ನಿಟ್ಟೂರು ಶ್ರೀನಿವಾಸರಾವ್ ಅಧ್ಯಕ್ಷತೆಯಲ್ಲಿ ಗಣ್ಯಾತಿಗಣ್ಯರೂ ಗಾಂಧೀವಾದಿಗಳೂ ಆದ ಜಿ. ನಾರಾಯಣ, ಮತ್ತೂರು ಕೃಷ್ಣಮೂರ್ತಿ, ನೀಲತ್ತಹಳ್ಳಿ ಕಸ್ತೂರಿ ಡಾ. ಎಂ. ಸಿ ಮೋದಿ, ಡಿ. ಎಂ ಚಂದ್ರಶೇಖರ್, ಮಲ್ಲೇಪುರ ಜಿ. ವೆಂಕಟೇಶ್, ಆರ್. ಚಂದ್ರಶೇಖರ್ ಮುಂತಾದ ಹಿರಿಯರು ಮುಂತಾಳತ್ವವಹಿಸಿ ಸನ್ಮಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದುಧವಳಶ್ರೀಎಂಬ ಅಭಿನಂದನಾ ಗ್ರಂಥವನ್ನು ಬಿಡುಗಡೆಮಾಡಲಾಗಿದೆ. ಸ್ಮರಣಸಂಚಿಕೆಯು ಹೊ. ಶ್ರೀ. ಅವರ ಬಾಳಹಾದಿ, ನಡೆಹಾದಿ, ನುಡಿಹಾದಿಗಳನ್ನು ಪರಿಚಯಿಸುವುದರೊಂದಿಗೆ ಅವರ ಸಮಗ್ರ ಬದುಕಿನ ಕನ್ನಡಿಯೇ ಆಗಿದೆ 

  (90ನೆಯ ಹುಟ್ಟುಹಬ್ಬದ ಸಡಗರದ ಸಮಾರಂಭದಲ್ಲಿ ಪತ್ನಿ ಜಯಲಕ್ಷ್ಮಿ ಶ್ರೀನಿವಾಸಯ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ್   ನಾಡೋಜ ಡಾ. ಪಾಟೀಲ್ ಪುಟ್ಟಪ್ಪ, ಡಾ. ವೂಡೆ ಪಿ. ಕೃಷ್ಣ, ದೀನೇಶ್ ಮುಂತಾದ ಗಣ್ಯರೊಡನೆ ಡಾ. ಹೊ. ಶ್ರೀನಿವಾಸಯ್ಯ)

1942 ಕ್ವಿಟ್ ಇಂಡಿಯಾ ಚಳುವಳಿಯು ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಂದ ಆರಂಭವಾದಾಗ ವಿದ್ಯಾರ್ಥಿ ಮುಖಂಡರಲ್ಲಿ ಒಬ್ಬರಾಗಿ ಯುವನೇತಾರ ಹೊ. ಶ್ರೀನಿವಾಸಯ್ಯನವರು ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಜೊತೆಗೆ ಶ್ರೀಯುತ ಕೆ. ಶ್ರೀನಿವಾಸರಾಯರು, ಬಿ. ರಾಮಚಂದ್ರ ಅವರೊಡನೆ ಸೇರಿ ಕೈ ಬರೆಹದ, ಸೈಕ್ಲೊಸ್ಟೈಲ್ ಬುಲೆಟನ್ ಹೊರಡಿಸುತ್ತಿದ್ದರು. ಎಲ್ಲಕಡೆ ನಡೆಯುತ್ತಿದ್ದ ಚಳುವಳಿಯ ಸುದ್ದಿಗಳನ್ನು ಸಂಗ್ರಹಿಸಿ ಪ್ರತಿದಿನ ಕಲ್ಲಚ್ಚು ಮಾಡಿದ ಕರಪತ್ರಗಳನ್ನು ವ್ಯಾಪಕವಾಗಿ ಬೆಂಗಳೂರಿನಲ್ಲಿ ಹಂಚುತ್ತಿದ್ದರು. ಪೊಲೀಸರು ಇದನ್ನು ಪತ್ತೆ ಹಚ್ಚಿದ್ದರಿಂದ ಬಂಧಿತರಾಗಿ ವಿದ್ಯಾರ್ಥಿ ದೆಸೆಯಲ್ಲೇ ಜೈಲು ಸೇರಿದ್ದರು
ಋಣವ ತೀರಿಸಬೇಕು, ಋಣವ ತೀರಿಸಬೇಕು
ಋಣವ ತೀರಿಸುತ ಜಗದಾದಿ ಸತ್ವವನು
ಜನದಿ ಕಾಣುತ್ತದರೊಳ್ ಒಂದುಗೂಡಲು ಬೇಕು
ಮನೆಯೊಳಗೆ ಮಠ ನಿನಗೆ-ಮಂಕುತಿಮ್ಮ|
ಉಪಕಾರ ಸ್ಮರಣೆ, ಕೃತಜ್ಞತೆಯ ಸಲ್ಲಿಕೆ, ಋಣ ತೀರಿಸುವಿಕೆಯೇ ಸಮಾಜದ ಋಣ ಎಂಬುದನ್ನು ಅರಿತ ಹೊ.ಶ್ರೀ.ಯವರು ಸಮಾಜಸೇವೆಯಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ‘ಸಮಾಜ ಸೇವೆಮನುಕುಲದ ಒಂದು ಲಕ್ಷಣ ಹಾಗೂ ಅವಶ್ಯ, ಸೇವೆ ಕೇವಲ ಯಾಂತ್ರಿಕಕಾರ್ಯವಾಗದೆ, ಒಂದು ಆಧ್ಯಾತ್ಮಿಕ ಸಾಧನೆ ಆಗಬೇಕು. ಸೇವೆ ಒಂದು ಉಪಕಾರವಲ್ಲ, ಒಂದು ಕರ್ತವ್ಯ, ಒಂದು ಋಣ ತೀರಿಸುವಿಕೆ ಹಾಗೂ ಸಮಾಜರೂಪಿ ಭಗವಂತನ ಕೈಂಕರ್ಯ, ಸೇವೆ ನಿಸ್ವಾರ್ಥವಾಗಿರಬೇಕು. ವೈಯಕ್ತಿಕ ಆಸೆ ಆಕಾಂಕ್ಷೆಗಳ ಆಟ ಆಗಬಾರದು, ಸೇವೆಯಿಂದ ಯಾವುದೇ ಲೌಕಿಕ ಪ್ರತಿಫಲವನ್ನು ಆಶಿಸಬಾರದು, ಸ್ಥಾನ, ಮಾನ, ಪ್ರಶಸ್ತಿ, ಪುರಸ್ಕಾರ ತಾನಾಗಿಯೇ ಒದಗಿಬಂದರೆ, ಅದನ್ನು ಇನ್ನೊಂದು ಋಣ ಎಂದೇ ಭಾವಿಸಬೇಕು, ಹೆಚ್ಚಿನ ಸೇವೆ ಮಾಡಿ ಋಣ ತೀರಿಸಬೇಕು, ಸೇವೆ ಪರಿಶುದ್ಧಮನಸ್ಸಿನಿಂದ, ಕೈಂಕರ್ಯ ಭಾವದಿಂದ, ಅದು ಒಂದು ವ್ರತವಾಗಬೇಕೆಂಬ ವಿಚಾರಧಾರೆಗೆ ಬದ್ಧರಾಗಿ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸೇವಾವ್ರತಿಗಳಾದ ಹೊ.ಶ್ರೀ.ಯವರು ಸೇವೆಯ ಹಿರಿಮೆಗೆ ಪರಿಶುದ್ಧತೆಗೆ ಧಕ್ಕೆ ಬಾರದಂತೆ ಆತ್ಮಶುದ್ಧಿ, ಆತ್ಮಸ್ಥೈರ್ಯ, ಆತ್ಮನಿಷ್ಠೆಯಿಂದ ಸೇವೆಗೆ ಪ್ರತಿಫಲ ಸೇವೆಯೇ ಎಂಬ ಗಾಂಧೀಜಿಯವರ ತತ್ವಕ್ಕೆ ಅನುಗುಣವಾಗಿ, ಸೇವಾ ಹಿ ಪರಮೋ ಧರ್ಮಃ ಎಂಬ ಸೂಕ್ತಿಗೆ ಅನುಗುಣವಾಗಿ ಸೇವೆಸಲ್ಲಸುತ್ತಾ ಬಂದಿದ್ದಾರೆ.
ಸಹಕಾರಿ ಪ್ರತಿಭೆ, ಸಹಕಾರಿ ಧುರೀಣರಾದ ಹೊ. ಶ್ರೀನಿವಾಸಯ್ಯನವರು ಸಹಕಾರ ಕ್ಷೇತ್ರಕ್ಕೂ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ. ಅಬಲರನ್ನು ಸಬಲರನ್ನಾಗಿ ಮಾಡುವುದು ಹೇಗೆ? ಜನಸಾಮಾನ್ಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಪ್ರಬಲರನ್ನಾಗಿ ಮಾಡುವುದು ಹೇಗೆ? ಸಬಲರ ವಜ್ರಾಯುಧದಂತಿರುವ ಸಹಕಾರವನ್ನು ಅಬಲರ, ದುರ್ಬಲರ ರಕ್ಷಾಕವಚವನ್ನಾಗಿ ಮಾಡುವುದು ಹೇಗೆ? ಎಂದು ಶ್ರೀನಿವಾಸರ ಮನಸ್ಸು ತುಡಿಯತೊಡಗಿತು. ಸಹಕಾರ ಮಂತ್ರವಾದ ಸರ್ವರಿಗೆ ಸಮಾನತೆ, ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎನ್ನುವುದನ್ನು ಸಾಕಾರಗೊಳಿಸಲು ಮುಂತಾಯಿತು. ಅದರ ಫಲವೆನ್ನುವಂತೆ ಇವರ ಗುರುಗಳಂತ್ತಿದ್ದ ಅಪ್ಪಟ ಗಾಂಧೀವಾದಿ ದಿವಂಗತ ಶ್ರೀಯುತ ಸಿದ್ಧವನಹಳ್ಳಿ ಕೃಷ್ಣಶರ್ಮರ ಮಾರ್ಗದರ್ಶನದಲ್ಲಿ ಶ್ರೀರಾಮ ಕೋ ಆಪರೇಟಿವ್ ಬ್ಯಾಂಕ್ ಮಲ್ಲೇಶ್ವರದಲ್ಲಿ ಸ್ಥಾಪನೆಯಾಗಿ, ಮಲ್ಲೇಶ್ವರಂ ಸುತ್ತಲಿನ ಬಡಾವಣೆಗಳ ಬಡಜನರ, ಕಾರ್ಮಿಕರ, ನೌಕರರ, ವ್ಯಾಪಾರಿಗಳ, ಇತರ ಕೂಲಿಗಳ ಆರ್ಥಿಕ ಜೀವನ ಸುಧಾರಣೆಗೆ ಸಹಾಯಕವಾಯಿತು. ಇಂದು ಬ್ಯಾಂಕ್ ಬೃಹದಾಕಾರವಾಗಿ ಬೆಳೆದು ನಿಂತಿದೆ. ಶ್ರೀನಿವಾಸಯ್ಯನವರ ಬ್ಯಾಂಕ್ ಎಂಬ ಪರ್ಯಾಯ ಹೆಸರಿನ್ನೂ ಪಡೆದಿದೆ
ಸಹಕಾರವೆಂಬುದು ಒಂದು ತತ್ವ, ಸಿದ್ಧಾಂತಮಾತ್ರವಲ್ಲ ಅದೊಂದು ಜೀವನ ಮಾರ್ಗ, ಅದರ ಆಚರಣೆ ವ್ರತವಾದಗಲೇ ಯಶಸ್ಸು ಸಾಧ್ಯವೆಂದು, ಪರಿಪೂರ್ಣ ಫಲಕಾರಿಯಾಗಬೇಕು. ಸಾಲ, ಬ್ಯಾಂಕಿಂಗ್, ಉತ್ಪಾದನೆ, ಗೃಹನಿರ್ಮಾಣ, ಉಗ್ರಾಣ, ಸಾರಿಗೆ, ಕ್ಷೀರೋತ್ಪಾದನೆ, ವ್ಯವಸಾಯ, ಕಾರ್ಖಾನೆ ಹೀಗೆ ಹತ್ತು ಹಲವು ರಂಗಗಳಲ್ಲಿ ಕೆಲಸಮಾಡಬೇಕು. ಲಾಭವನ್ನು ಆಶಿಸದೆ ನೈತಿಕ ತಳಹದಿಯ ಮೇಲೆ ಪ್ರಜಾಪ್ರಭುತ್ವದ ತತ್ತ್ವಗಳನ್ನಾಧರಿಸಿ ಸ್ವಯಂಪ್ರೇರಣೆಯಿಂದ ಸಂಘಟಿಸಬೇಕೆಂಬ ಧ್ಯೇಯೋದ್ದೇಶವನ್ನು ಹೊಂದಿರುವ ಹೊ. ಶ್ರೀನಿವಾಸಯ್ಯನವರು ಶ್ರೀರಾಮ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಅನೇಕ ವರ್ಷಗಳು ಯಾವ ಸಂಭಾವನೆಯನ್ನೂ ಪಡೆಯದೆ ಸೇವಕನಂತೆ, ಗುಮಾಸ್ತನಂತೆ ದುಡಿದರು. ಸಹಕಾರ ಸಂಘದ ಸದಸ್ಯರು ಮೃತರಾದರೆ ಶವಸಂಸ್ಕಾರ ಮತ್ತು ಪುಣ್ಯದಿನದ ಖರ್ಚಿಗೆ ಸಹಕಾರ ಸಂಘದ ಹಣದಿಂದ ಪಾವತಿಸುವ ಸೌಲಭ್ಯವನ್ನು ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಜಾರಿಗೆ ತಂದ ಹೆಗ್ಗಳಿಕೆಗೆ ಪಾತ್ರರಾದರು. ಇವರ ಸೇವೆಯ ಫಲದಿಂದಾಗಿ ಶ್ರೀರಾಮ ಕೋ ಆಪರೇಟಿವ್ ಬ್ಯಾಂಕ್ ಮೈಸೂರು ಸರ್ಕಾರದಿಂದ ಅತ್ಯುತ್ಯುತ್ತಮಬ್ಯಾಂಕ್ ಎಂಬ ಪ್ರಶಸ್ತಿಯನ್ನು ಪಡೆಯಿತು
ಇವರ ಮಾರ್ಗದರ್ಶನದಲ್ಲೇ ಶ್ರೀ ಆಂಜನೇಯ ಕೋ ಆಪರೇಟಿವ್ ಬ್ಯಾಂಕ್, ಭಾರತ್ ಅರ್ಥ ಮೂವರ್ಸ್ ಎಂಪ್ಲಾಯಿಸ್ ಕೋ ಆಪರೇಟಿವ್ ಸೊಸ್ಶೆಟಿಗಳು ಸ್ಥಾಪನೆಯಾದವು. ಈಗಲೂ ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್, ಮಲ್ಲೇಶ್ವರಂ ಕೋ ಆಪರೇಟಿವ್ ಸೊಸೈಟಿ, ವಿನಾಯಕ ಕೋ ಆಪರೇಟಿವ್ ಸೊಸೈಟಿ, ಪ್ರಗತಿ ಕೋ ಆಪರೇಟಿವ್ ಬ್ಯಾಂಕ್ ಮೊದಲಾದ ಸಹಕಾರ ಬ್ಯಾಂಕ್ ಮತ್ತು ಸೊಸೈಟಿಗಳಲ್ಲಿ ಸಕ್ರಿಯ ಪಾತ್ರ ವಹಿಸಿ ಸಹಕಾರದ ಬೆಳವಣಿಗೆ, ಜನಸಾಮಾನ್ಯರ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ.
1956ರಲ್ಲಿ ಸ್ಥಾಪಿತವಾದ ಅಖಲಭಾರತ ಪ್ರಕೃತಿ ಚಿಕಿತ್ಸಾ ಪರಿಷತ್ತಿನ ಉಪಾಧ್ಯಕ್ಷರಾಗಿ ಹಲವಾರು ವರ್ಷ ಹೊ. ಶ್ರೀನಿವಾಸಯ್ಯನವರು ಸೇವೆ ಸಲ್ಲಿಸಿದ್ದ್ದಾರೆ. ‘ಪ್ರಕೃತಿ ಜೀವನತ್ರೈಮಾಸಿಕ ಪತ್ರಿಕೆಯನ್ನು ನಡೆಸಲು ಮೊದಲಿನಿಂದಲೂ ಶ್ರಮಿಸಿದ್ದಾರೆ. ಈಗ ಪತ್ರಿಕೆಯ ಸಂಪಾದಕರೂ ಪ್ರಕಾಶಕರೂ ಆಗಿ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಗಾಂಧೀಜಿಯವರ ಗ್ರಾಮೋದ್ದಾರ, ಸರ್ವೋದಯ ತತ್ವಗಳಿಗೆ ಬದ್ಧರಾಗಿ, ಗ್ರ್ರಾಮೀಣ ಜನರ ಸೇವೆಗಾಗಿ ಪಟ್ಟಣದ ಜನರ ಸಹಾಯಕಾರವನ್ನು ಪಡೆದು ಚೌದರೀ ಕೊಪ್ಪಲು ಶ್ರೀರಾಮ ಯುವಜನ ಸೇವಾ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ದೊಡ್ಡಬಳ್ಳಾಪುರದ ರಸ್ತೆಯಲ್ಲಿರುವ ಹಳ್ಳಿಗಳ ಸೇವೆಗಾಗಿ ಪೀಪಲ್ಸ್ ಟ್ರಸ್ಟ್ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಜನರಿಗೆ ತಾಂತ್ರಿಕ ಶಿಕ್ಷಣವನ್ನು ಕೊಡಿಸುವ ಸಲುವಾಗಿ ಸ್ಥಾಪಿತವಾಗಿರುವ ಟ್ರಸ್ಟ್ವತಿಯಿಂದ ಮೇಲುಕೋಟೆ ಮತ್ತು ಸೋಮನಹಳ್ಳಿಗಳಲ್ಲಿ .ಟಿ. ಮತ್ತು ಬೊಮ್ಮಸಂದ್ರದಲ್ಲಿ ಕಾಲೇಜು ಮತ್ತುಪಾಲಿಟೆಕ್ನಿಕನ ಸ್ಥಾಪನೆಗಳಿಗೆ ಕಾರಣರಾಗಿದ್ದಾರೆ. ಶ್ರೀ ಆದಿಚುಂಚನ ಗಿರಿ ಶಿಕ್ಷಣ ಟ್ರಸ್ಟ್ ಧರ್ಮದರ್ಶಿಗಳಾಗಿ ನೆಲಮಂಗಲ ಮತ್ತು ಜವರನಹಳ್ಳಿಗಳಲ್ಲಿ .ಟಿ.ಐಗಳನ್ನು ಸ್ಥಾಪಿಸಿ ಹಳ್ಳಿಯವರಿಗೆ ಉದ್ಯೋಗ ಒದಗಿಸುವ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ.
1969ರಲ್ಲಿ ಗಾಂಧೀಜಿಯವರ ಶತಾಬ್ದಿಯ ಅಂಗವಾಗಿಪ್ರಕೃತಿ ಜೀವನ ಕೇಂದ್ರವನ್ನು ಪ್ರಾರಂಭಿಸಿದರು.  ಅಂದಿನಿಂದ ಪ್ರಕೃತಿ ಚಿಕಿತ್ಸೆಯನ್ನು ಜನಪ್ರಿಯಗೊಳಿಸುವುದರಲ್ಲಿ ನಿರತರಾಗಿದ್ದಾರೆ. ಡಾ|| ವೆಂಕಟರಾವ್ ಅವರ ಮಾರ್ಗದರ್ಶನದಲ್ಲಿ 1972ರಲ್ಲಿ ಸ್ಥಾಪಿತವಾದ ಕರ್ನಾಟಕ ಪ್ರದೇಶ ಪ್ರಾಕೃತಿಕ ಪರಿಷತ್ ಕಾರ್ಯದರ್ಶಿಗಳಾಗಿ ಹೊ.ಶ್ರೀನಿವಾಸಯ್ಯನವರು ಉತ್ತಮ ಕೆಲಸಗಳನ್ನು ಮಾಡಿದರು. 1973ರಲ್ಲಿ ಲಕ್ನೋದಲ್ಲಿ ನಡೆದ ಅಖಿಲ ಭಾರತ ಪ್ರಕೃತಿ ಚಿಕಿತ್ಸಾ ಸಮ್ಮೇಳನದಲ್ಲಿ ಡಾ| ಹೊ. ಶ್ರೀನಿವಾಸಯ್ಯನವರು ಕರ್ನಾಟಕದ ಪ್ರತಿನಿಧಿಗಳಲ್ಲಿ ಒಬ್ಬರಾಗಿ ಪಾಲ್ಗೊಂಡಿದ್ದರು. ಅದೇ ವರ್ಷ ಶ್ರೀವೆಂಕಟೇಶಮೂರ್ತಿರವರು ಬೆಂಗಳೂರು ಖಾದಿ ಗ್ರಾಮೋದ್ಯೋಗ ಸಂಘದ ಆಶ್ರಯದಲ್ಲಿ ಸ್ಥಾಪಿಸಿದ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಪ್ರಥಮ ಸರ್ಕಾರಿ ವೈದ್ಯರಾಗಿ ಹೊ.ಶ್ರೀ. ಕಾರ್ಯ ನಿರ್ವಹಿಸಿದರು. ಪ್ರಕೃತಿ ಕೇಂದ್ರದ ಬೆಳ್ಳಿಹಬ್ಬದ ಸಲುವಾಗಿ 1994ರಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಪ್ರಕೃತಿ ಚಿಕಿತ್ಸಾ ಸಮ್ಮೇಳನವು ಇವರ ಉಪಾಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಅಖಿಲಭಾರತ ಪ್ರಕೃತಿ ಚಿಕಿತ್ಸಾ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿ, ಎಲ್ಲರ ಮೆಚ್ಚುಗೆ ಪಡೆದರು. ರಾಜ್ಯಾದ್ಯಂತ ಶಾಲಾ ಕಾಲೇಜು, ರೋಟರಿ, ಲಯನ್ ಮುಂತಾದ ಸಂಘ ಸಂಸ್ಥೆಗಳಲ್ಲಿ ಉಪನ್ಯಾಸ ನೀಡುತ್ತಾಬಂದಿದ್ದಾರೆ. ‘ಗಾಂಧೀ ಪೀಸ್ ಪೌಂಡೇಷನ್’, ‘ಗಾಂಧೀ ಸ್ಮಾರಕನಿಧಿಮುಂತಾದುವುಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ.
ಅಸಂಖ್ಯಾತ ಅಭಿಮಾನಿಗಳು ಇವರ ಎಂಬತ್ತೈದನೇ ವರ್ಷದ ಸಂಭ್ರಮ ಸಮಾರಂಭವನ್ನು ಏರ್ಪಡಿಸಿ, ಡಾ. ಹೊ. ಶ್ರೀ ಸಮಗ್ರ ಸಾಹಿತ್ಯವನ್ನು ಹೊರತರುವುದರಮೂಲಕ ಗೌರವ ಸಲ್ಲಿಸಿರುವುದು ಇವರ ಜನಪ್ರಿಯತೆಯ ದ್ಯೋತಕವಾಗಿದೆ. ಪ್ರವಾಸ ಸಾಹಿತ್ಯ ಸಂಪುಟ, ಜ್ಞಾನ-ವಿಜ್ಞಾನ ಸಂಪುಟ, ಸಂಕೀರ್ಣ ಸಂಪುಟವೆಂಬ ಮೂರು ಸಂಪುಟಗಳ ಅಗಾಧವಾದ ಇವರ ಕೃತಿಗಳು ಸಾಹಿತ್ಯ ಕೃಷಿಗೆ ಸಾಕ್ಷಿಯಾಗಿವೆ. ಸಾಂಪ್ರದಾಯಿಕಬುದ್ಧಿಮತ್ತೆ, ಜ್ಞಾನ, ಚಿಕಿತ್ಸಕ ದೃಷ್ಟಿ, ತಿಳಿಹಾಸ್ಯ, ಕೀಟಲೆ, ನಗು ಮುಂತಾದವು ಓದುಗರ ಮೇಲೆ ಮೋಡಿಮಾಡುತ್ತವೆ. ಹೃದಯ ಶುದ್ಧತೆಯ ಅಭಿವ್ಯಕ್ತಿ, ಕಥನಾತ್ಮಕ ಶೈಲಿ, ಆಶ್ಚರ್ಯಕರ ಘಟನೆಗಳ ಚಿತ್ರಣ, ಸರಳ ನಿರೂಪಣೆ, ಅಂದವಾದ ಚಿಕ್ಕ ವಾಕ್ಯಗಳ ಓಟ ಮುಂತಾದವು ಇವರ ಸಾಹಿತ್ಯದ ವೈಶಿಷ್ಟ್ಯಗಳು
ಎಂ.ಕೆ.ಗಾಂಧಿಯವರ ಹಿಂದ್ ಸ್ವರಾಜ್ ಸಾರ ಸಂಗ್ರಹ’, ‘ಗಾಂಧೀ ಮತ್ತು ಆಧ್ಯಾತ್ಮಿಕ ಜೀವನ’, ‘ಗಣ್ಯರು ಕಂಡ ಗಾಂಧೀಜಿ’, ‘ನಮ್ಮ ಗಾಂಧೀ ತಾತ’, ‘ಮದ್ಯಪಾನ ವಿರುದ್ಧ ಮಹಾತ್ಮ ಗಾಂಧಿ’ ‘ದಂಡಿಯಾತ್ರೆ ಉಪ್ಪಿನ ಸತ್ಯಾಗ್ರಹ’, ‘ಭಾರತದ ಸ್ವಾತಂತ್ರ್ಯ ಚಳುವಳಿ’, ಮುಂತಾದ ಗಾಂಧೀಜಿಯವರ ತತ್ವಗಳನ್ನು, ವಿಚಾರಧಾರೆಯನ್ನು ಬಿಂಬಿಸುವ ಕೃತಿಗಳು ಸೇರಿದಂತೆ 80ಕ್ಕೂ ಹೆಚ್ಚು ಮೌಲ್ಯಯುತ ಗ್ರಂಥಗಳನ್ನು ರಚಿಸಿದ್ದಾರೆ. ಇವರ ಹಲವು ಕೃತಿಗಳು ಇಂಗ್ಲಿಷ್ ಭಾಷೆಗೆ ಭಾಷಾಂತರವಾಗಿವೆ. ತಮಿಳು ಮತ್ತು ಮಲೆಯಾಳಂ ಭಾಷೆಗೂ ಇವರ ಸಾಹಿತ್ಯ ಸೇವೆ ಸಂದಿದೆ.
ಸತ್ವಪೂರ್ಣ ಕೃತಿಗಳಲ್ಲಿ ಕಂಡುಬರುವ ವಾಸ್ತವ ನಿರೂಪಣೆ, ಮಾಹಿತಿ ವಿವರ, ಪ್ರತ್ಯಕ್ಷಾನುಭವಗಳು, ಸ್ವಾನುಭವ, ಲೋಕಚಿಂತನೆ, ಜೀವೋಲ್ಲಾಸ, ಮುಕ್ತ ಚಿಂತನೆ, ಸಮುದಾಯ ತತ್ತ್ವವಿಚಾರಗಳು ಓದುಗರಿಗೆ ತವನಿಧಿಯಂತಿದ್ದು ಅಚ್ಚರಿಯನ್ನು ಮೂಡಿಸುತ್ತವೆ. ಗಾಂಧೀವಿಚಾರ ಧಾರೆಗಳು ಇವರ ಹೆಚ್ಚಿನ ಕೃತಿಗಳಲ್ಲಿ ಹಾಸುಹೊಕ್ಕಾಗಿವೆ. ಸಾಹಿತ್ಯದ ಮೂಲಕ ಮಹಾತ್ಮರ ಅಭಿಪ್ರಾಯಗಳನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಸ್ವಾಗತಾರ್ಹವಾಗಿದೆ
ಗಾಂಧೀಜಿಯರ ಪಥದಲ್ಲಿ ಸಾಗುತ್ತಿರುವ ಇವರು ಗಾಂಧೀಜಿಯವರ ಬದುಕು ಹಾಗೂ ಸಾಧನೆಗಳ ವಿಚಾರಗಳನ್ನು ತಮ್ಮ ಕೃತಿಗಳ ಮೂಲಕ ಜನರಿಗೆ ತಲುಪಿಸುವಲ್ಲಿ ಸಫಲವಾಗಿದ್ದಾರೆ. ಸರಳವಾಗಿ, ಸ್ಫುಟವಾಗಿ, ಸ್ಪಷ್ಟವಾಗಿ, ಯಾವ ಮೌಲ್ಯಗಳು ಮುಖ್ಯವೋ ಮೌಲ್ಯಗಳು ಮನಸ್ಸಿನ ಮೇಲೆ ಅಚ್ಚೊತ್ತುವಂತೆ ಕೃತಿಗಳನ್ನು ರಚಿಸಿದ್ದಾರೆ.
ತಮ್ಮ ವಿದೇಶಿ ಪ್ರವಾಸಗಳಲ್ಲಿ ವಿದೇಶಿಯರು ಭಾರತ ಸಂಸ್ಕøತಿಯಿಂದ ಪ್ರಭಾವಿತರಾಗುವಂತೆ ಮಾಡಿದ್ದಾರೆ. ಭಾರತ ಸಂಸ್ಕøತಿ ಸಾಧನೆಗಳ ಬಗೆಗೆ ವಿದೇಶಿಯರಲ್ಲಿ ಕಂಡು ಬಂದ ತಪ್ಪು ಅಭಿಪ್ರಾಯಗಳನ್ನು ಖಂಡಿಸಿ ಸರಿಪಡಿಸಿದ್ದಾರೆ. ಬರಹಗಳ ಮೂಲಕ ಸ್ವದೇಶ-ವಿದೇಶದ ಜನರ ವರ್ತನೆ ಕುರಿತು ತೌಲನಿಕ ವಿವರಣೆ ನೀಡಿದ್ದಾರೆ. ವಿವೇಕವನ್ನು ಜಾಗೃತಗೊಳಿಸಿದ್ದಾರೆ. ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ
ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿಯೇ ಆಗಿರುವ ಹೊ. ಶ್ರೀನಿವಾಸಯ್ಯನವರು ಒಬ್ಬ ವ್ಯಕ್ತಿಯಲ್ಲ ಶಕ್ತಿ. ಎಲ್ಲರನ್ನೂ ಜಾಗೃತಗೊಳಿಸುವ ಚೇತನವಾಗಿದ್ದಾರೆ. ಭಾರತೀಯ ಸಂಸ್ಕೃತಿಯ ಉನ್ನತ ಮೌಲ್ಯಗಳ ಸಂಕೇತವೇ ಆಗಿದ್ದಾರೆ. ಕರ್ನಾಟಕ ತಂತ್ರಜ್ಞಾನ ಕ್ಷೇತ್ರದ ತಂತ್ರಜ್ಞರೂ, ನಮ್ಮ ದೇಶದ ಪ್ರಕೃತಿ ಚಿಕಿತ್ಸೆಯ ಗಣ್ಯರೂ, ಇವೆಲ್ಲವನ್ನೂ ಮೀರಿ ಮಹಾತ್ಮ ಗಾಂಧೀಜಿ ಅವರ ಆದರ್ಶಗಳನ್ನು ಬದುಕಿನ ಮೌಲ್ಯಗಳನ್ನಾಗಿ ಸ್ವೀಕರಿಸಿದವರೂ ಆಗಿದ್ದಾರೆ. ನಾಡಿನ ಹತ್ತಾರು ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ಟ್ರಸ್ಟಿಗಳಾಗಿ, ನಾಡಿನ ಸಾಂಸ್ಕøತಿಕ ಸಾಮಾಜಿಕ ಸಂಪನ್ಮೂಲವೇ ಆಗಿದ್ದಾರೆ. ಅವರ ಪರಮಸಿದ್ಧಿಯ ಪ್ರತೀಕವೆಂಬಂತೆ ಎಣಿಕೆ ಇಲ್ಲದಷ್ಟು ಪದವಿ, ಪ್ರಶಸ್ತಿ, ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ಇವರು ಮಾಡಿರುವ ಮಾಡುತ್ತಿರುವ ಸತ್ಕಾರ್ಯಗಳಿಗೆ ಎಣೆಯೇ ಇಲ್ಲ.
ಮಲ್ಲೇಶ್ವರದ ಗಾಂಧೀಸಾಹಿತ್ಯ ಸಂಘದ ಸಂಸ್ಥಾಪಕ ಕಾರ್ಯದರ್ಶಿಗಳು, ಪ್ರಕೃತಿ ಜೀವನ ಕೇಂದ್ರದ ಅಧ್ಯಕ್ಷರು, ಪ್ರಾಕೃತಿಕ ಪರಿಷತ್ತಿನ ಅಧ್ಯಕ್ಷರು, ಗಾಂಧೀಸ್ಮಾರಕ ನಿಧಿಯ ಅಧ್ಯಕ್ಷರು, ಅನೇಕ ಸಹಕಾರ ಸಂಘಗಳ ಸಂಸ್ಥಾಪಕರು, ದೇವಾಲಯಗಳ ಧರ್ಮದರ್ಶಿಗಳು ಆಗಿ ಸೇವೆಸಲ್ಲಿಸುತ್ತಾ ಬಂದಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
1934 ಮತ್ತು 1946ರಲ್ಲಿ ಮಹಾತ್ಮಗಾಂಧೀಜಿಯವರ ದರ್ಶನದಿಂದ ಸ್ಫೂರ್ತಿ
1942-47ರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ. ರಹಸ್ಯ ಪತ್ರಿಕೆಗಳ ಪ್ರಕಟಣೆ. ಆರುತಿಂಗಳು ಜೈಲುವಾಸ.
1942ರಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಪೂಜ್ಯ ಗುರುಗಳಾದ ಸಿದ್ಧವನಹಳ್ಳಿ ಕೃಷ್ಣಶರ್ಮರ ನೇತೃತ್ವದಲ್ಲಿ ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘ ಸ್ಥಾಪನೆ.
ಗಾಂಧೀ ವಿಚಾರ ಪ್ರಚಾರ ಸೇವೆಗಾಗಿ ಗ್ರಂಥ ಭಂಡಾರ ಸ್ಥಾಪನೆ.
ಸಮಾಜ ಸೇವೆಗಾಗಿ ಸ್ಥಾಪಿತವಾದ ಸಂಸ್ಥೆಯ ಧರ್ಮದರ್ಶಿ ಮತ್ತು ಗೌರವ ಕಾರ್ಯದರ್ಶಿಯಾಗಿ ಸೇವೆ.
1943ರಲ್ಲಿ ಚರಕಾ ಕೇಂದ್ರ ಸ್ಥಾಪನೆ ಮತ್ತು ವಯಸ್ಕರ ಶಿಕ್ಷಣ ಕೇಂದ್ರಗಳ ಸ್ಥಾಪನೆ.
1943-44ರಲ್ಲಿ ವಿದ್ಯಾರ್ಥಿ ಸ್ವಯಂಸೇವಕರಾಗಿ ಆಹಾರ ಹಂಚಿಕೆ ಸೇವೆ (ಫುಡ್ವಾಲೆಂಟಿರ್ಸ್).
ವಿದ್ಯಾರ್ಥಿ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಗ್ರಾಮ ಸೇವಾ ಶಿಬಿರಗಳನ್ನು ಏರ್ಪಡಿಸಿದುದು
1946 ವಿದ್ಯಾರ್ಥಿಗಳ ವಂದೇ ಮಾತರಂ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ.
1949ರಲ್ಲಿ 200 ವಿದ್ಯಾರ್ಥಿಗಳ ಒಂದು ತಿಂಗಳ ಶ್ರಮದಾನ
ಭಾರತ ಸರ್ಕಾರದ ಪ್ರಚಾರ ಇಲಾಖೆಯು ಸ್ವಾತಂತ್ರ್ಯ ಹೋರಾಟಗಾರರ ಬಗೆಗೆ ಹೊರತಂದಫ್ರೀಡಂ ಫೈಟರ್ಸ್ ರಿಮೆಂಬರೆನ್ಸ್ಎಂಬ ಕೃತಿಯು ಹೆಚ್. ಶ್ರೀನಿವಾಸಯ್ಯ ಡಿಓಟೆಡ್ ಡಿಸಿಪಲ್ ಆಫ್ ಗಾಂಧೀಜಿಎಂಬ ಲೇಖನ ಪ್ರಕಟಣೆ.
ದಕ್ಷಿಣ ಭಾರತ ಗೋ ಸೇವಾ ಸಂಘದ ಧರ್ಮದರ್ಶಿ ಮತ್ತು ಗೌರವ ಅಧ್ಯಕ್ಷ.
ಬಡಮಕ್ಕಳ ವಿದ್ಯಾಭ್ಯಾಸ ಸಹಾಯ ಮಾಡುವ ಸಲುವಾಗಿಜಯಶ್ರೀ ಟ್ರಸ್ಟ್ ಸ್ಥಾಪಕ ಧರ್ಮದರ್ಶಿಗಳು
ಸಾಮಾಜಿಕ ಕಳಕಳಿ, ಅವಿರತವಾದ ಸಮಾಜಸೇವೆ ಹಾಗೂ ಪ್ರಕೃತಿ ಚಿಕಿತ್ಸೆ ಸೇವೆಗಾಗಿ ಈಗಾಗಲೆ ತಿಳಿಸಿರುವಂತೆ ರಾಜ್ಯ ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಮೆಚ್ಚುಗೆ ಗಳಿಸಿ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 1976ರಲ್ಲಿಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’.
1984ರಲ್ಲಿ ಕರ್ನಾಟಕ ಸರ್ಕಾರದಿಂದರಾಜ್ಯ ಪ್ರಶಸ್ತಿ’.
1988ರಲ್ಲಿ ದೆಹಲಿ ಪ್ರಕೃತಿ ಚಿಕಿತ್ಸಾ ಪರಿಷತ್ ಇವರಿಂದಗೌರವ ಡಾಕ್ಟರೇಟ್ ಪ್ರಶಸ್ತಿ
1988-89ರಲ್ಲಿ ಕರ್ನಾಟಕ ಸರ್ಕಾರದಿಂದ ಪತಂಜಲಿ ಸುವರ್ಣಪದಕ.
1994ರಲ್ಲಿ ಬೆಂಗಳೂರು ಯೋಗ ಸೆಂಟರ್ ಅವರಿಂದಯೋಗಶ್ರೀಪ್ರಶಸ್ತಿ.
ಸ್ವಾತಂತ್ರ್ಯ ಹೋರಾಟ ಮತ್ತು ಪ್ರಕೃತಿ ಚಿಕಿತ್ಸೆ ಪರಿಣತಿಗಾಗಿಆರ್ಯಭಟಪ್ರಶಸ್ತಿ
1998ರಲ್ಲಿ ಆದರ್ಶದಂಪತಿಗಳು ಪ್ರಶಸ್ತಿ.
2001ರಲ್ಲಿ ನಡೆದ ಬೆಂಗಳೂರು ನಗರ ಜಿಲ್ಲಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
ಕನ್ನಡಶ್ರೀ
ಕರ್ನಾಟಕಶ್ರೀ
ಸಮಾಜ ಸೇವಾ ಭೂಷಣ
ಚುಂಚಶ್ರೀ
ಮಾಸ್ಟರ್ ಆಫ್ ಮಿಲೆನಿಯಮ್
ಗೊರೂರು ಸಾಹಿತ್ಯ ಪ್ರಶಸ್ತಿ
ಕರ್ಮಯೋಗಿ ಎಂ.ಎಸ್.ರಾಮಯ್ಯ ಪ್ರಶಸ್ತಿ.
ವೂಡೆ ಪ್ರಶಸ್ತಿ
ಡಾ| .ಪಿ.ಜೆ.ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ
ಹಂಸರತ್ನ ಪ್ರಶಸ್ತಿ
ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ.
 2015£ÉAiÀÄ ¸Á°£À ‘UÁA¢ü-±ÁAw ¸ÉêÁ PÀ£ÁðlPÀ’ ¥Àæ±À¹Û


ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು
ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು
ಜಗದ ಜೀವಿತದಿ ನಿಜ ಜೀವಿತದ ಮೂರ್ತಿಯನು
 ಬಗೆಯರಿಸುವನೆ ಸುಖಿ-ಮಂಕುತಿಮ್ಮ|
ಸಮಾಜದ ಸೇವೆ ಅಥವಾ ದೇಶದ ಸೇವೆಯೇ ದೇವರ ಸೇವೆ, ಅದು ದೇವಕಾರ್ಯಕ್ಕೆ ಮಾಡುವ ಸಹಯೋಗ, ಅದೇ ಆತ್ಮ ಸಂಸ್ಕರಣದ ದಾರಿ, ಅದ್ದರಿಂದಲೇ ಸುಖವೆಂಬ ಡಿವಿಜಿಯವರ ಚಿಂತನೆಗೆ ಅನುಗುಣವಾಗಿ ನಡೆಯುತ್ತಾ ಬಂದಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರೂ, ಗಾಂಧೀಜಿಯವರ ಅನುಯಾಯಿಗಳೂ, ಖಾದಿಧಾರಿಗಳೂ, ಸಾಹಿತಿಗಳೂ, ವಿಚಾರವಂತರೂ, ಮೇಧಾವಿಗಳೂ, ತಾಂತ್ರಿಕ ತಜ್ಞರೂ, ಸಮಾಜ ಸೇವಾ ಧುರೀಣರೂ, ಸಮಾಜಮುಖಿ ಚಿಂತಕರೂ, ಪ್ರಕೃತಿ ಚಿಕಿತ್ಸಾ ಪ್ರತಿಪಾದಕರೂ, ಸಹಕಾರ ತಜ್ಞರೂ, ಪರೋಪಕಾರಿಗಳೂ, ಸ್ನೇಹಪರರೂ, ಸಹೃದಯರೂ, ಸಾಂಸ್ಕೃತಿಕ ರಾಯಭಾರಿಗಳೂ, ಪತ್ರಿಕೋಧ್ಯಮಿಗಳೂ, ಬಹುಮುಖ ಪ್ರತಿಭಾವಂತರೂ ಆಗಿರುವ ಡಾ|| ಹೊ. ಶ್ರೀನಿವಾಸಯ್ಯನವರು ನಿಸ್ಸಂದೇಹವಾಗಿ ಎಲ್ಲಾ ವಯೋಮಾನದವರಿಗೂ ಆದರ್ಶಪ್ರಾಯರಾಗಿದ್ದಾರೆ.
ಬಹುಮುಖ ಪ್ರತಿಭೆಯ ಡಾ| ಹೊ. ಶ್ರೀನಿವಾಸಯ್ಯನವರ ಸಾಧನೆಗಳನ್ನು ತಿಳಿಸಲು ಒಂದು ಬೃಹತ್ ಹೊತ್ತಿಗೆಯನ್ನೇ ಬರೆಯ ಬೇಕಾಗುತ್ತದೆ. ಡಾ| ಹೊ. ಶ್ರೀನಿವಾಸಯ್ಯನವರ ಅಭಿಮಾನಿಗಳ ಬಳಗ ಹೊರತಂದಿರುವ 'ಡಾ| ಹೊ. ಶ್ರೀನಿವಾಸಯ್ಯ ಒಂದು ಪರಿಚಯ' ಎಂಬ ಕಿರು ಹೊತ್ತಿಗೆಯು ಇವರ ಬಗೆಗೆ ಸ್ಥೂಲ ಮಾಹಿತಿಯನ್ನು ನೀಡುತ್ತದೆ.
******************* 

No comments:

Post a Comment