Sunday 26 July 2015

ಮೊದಲ ರೂಪಣಾತ್ಮಕ ಪ್ರಶ್ನೆ ಪತ್ರಿಕೆ

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಬೆಂಗಳೂರು-03.
ಪ್ರಥಮ ರೂಪಣಾತ್ಮಕ ಪರೀಕ್ಷೆ ಜುಲೈ-2015
ಕನ್ನಡ ತೃತೀಯ ಭಾಷೆ
ಹತ್ತನೇ ತರಗತಿ
ಗರಿಷ್ಠ ಕಾಲಾವಧಿ : 45 ನಿಮಿಷಗಳು                                                 ಗರಿಷ್ಠಾಂಕ : 20
ಭಾಗ - `
ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 11 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಒಂದೊಂದೇ ವಾಕ್ಯದ ಉತ್ತರವನ್ನು ಬರೆಯಿರಿ.                                                        3X1=3
1)  ಗೊರೂರರು ತಮ್ಮ ಮಿತ್ರರನ್ನು ನೋಡಲು ಅಮೇರಿಕಾದಲ್ಲಿ ಯಾವ ನಗರಕ್ಕೆ ಹೋದರು?
2) ಕೋಗಿಲೆಯ ಗಾನವಾದುದು ಹೇಗೆ ಎಂದು ಚೆನ್ನವೀರ ಕಣವಿಯವರು ಹೇಳಿದ್ದಾರೆ?
3) ರಾಮಸ್ವಾಮಿ ಅಯ್ಯಂಗಾರರು ಹೋಟಲಿನಲ್ಲಿ ಉಳಿದುಕೊಳ್ಳಲಾಗಲಿಲ್ಲ ಏಕೆ?
ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳ ಉತ್ತರಗಳನ್ನು ಬರೆಯಿರಿ.                                          2X2=4
4)  ಟ್ರಾಫಿಕ್ ಪೊಲೀಸ್ನವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ರವರನ್ನು ಹೇಗೆ ಸತ್ಕರಿಸಿದರು?
5)  ಕೋಗಿಲೆಯಲ್ಲಿ ಕವಿಯ ಕೋರಿಕೆ ಏನು?
ಕೆಳಗಿನ ಹೇಳಿಕೆಯನ್ನು ಸಂದರ್ಭ ಮತ್ತು ಸ್ವಾರಸ್ಯ ಸಹಿತ ವಾಕ್ಯಗಳಲ್ಲಿ ವಿವರಿಸಿ.                                               1X2=2
6)  “ನನ್ನ ಖೈದಿಯ ರಕ್ಷಣೆಯನ್ನು ನಾನು ಸರಿಯಾಗಿ ಮಾಡಬೇಕಷ್ಟೆ” 
ಅಥವಾ
      “ಎದೆಯು ಮಿಡಿದು ತಾಳಹಿಡಿದು ಕುಣಿಯುತಿಹುದು ಚಣಾ
ಕೆಳಗಿನ ಪದ್ಯಭಾಗವನ್ನು ಪೂರ್ಣಮಾಡಿರಿ.                                                                            1X2=2
7)  ಕೆಂಪು----                                          ಗಾನ
-------                                              -------
------------ ಮಾಮರಾ               ಅಥವಾ                 ಮೂಕ---------
ಅಲ್ಲಿ-----                                             ----ಲೋಕ
ಎಲ್ಲ-----                                                     ದಿವಿಜ----
--------------ಮಧುರಾ                                      -----------ಕೂಜನಾ
ಭಾಗ - `ಬಿ
ಅನ್ವಯಿಕ ವ್ಯಾಕರಣ - 3 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿಕ್ರಮಾಕ್ಷರದೊಂದಿಗೆ ಉತ್ತರವನ್ನು ಬರೆಯಿರಿ.                                                                     3X1=3
8)  ದೇವಾಲಯ ಇಲ್ಲಿ ಆಗಿರುವ ಸಂಧಿ:
() ಸವರ್ಣದೀರ್ಘ (ಬಿ) ಆದೇಶ (ಸಿ) ಗುಣ (ಡಿ) ಲೋಪ
9) ನನ್ನ ಮಿತ್ರರ ಮನೆಯಲ್ಲಿ ನಾನು ಸೊಗಸಾಗಿ ನಿದ್ದೆ ಮಾಡಲಾಗಲಿಲ್ಲ.” ವಾಕ್ಯದಲ್ಲಿರುವ ವಿಜಾತೀಯ ಸಂಯುಕ್ತಾಕ್ಷರ ಪದ:
() ನನ್ನ (ಬಿ) ಮಿತ್ರರ (ಸಿ) ಮನೆಯಲ್ಲಿ (ಡಿ) ನಾನು
10) ನಾಕ ಪದದ ವಿರುದ್ಧಾರ್ಥ ರೂಪ
() ಸಗ್ಗ (ಬಿ) ಸ್ವರ್ಗ (ಸಿ) ನರಕ (ಡಿ) ಅನಾಕ
ಭಾಗ - `ಸಿ
ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 6 ಅಂಕಗಳು
ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ.                                              1X2=2
11)  ದೇಶ ಸುತ್ತ ಬೇಕು ಕೋಶ ಓದ ಬೇಕು
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.                                            2X½=1
12) ಪ್ರವಾಸ ಸಾಹಿತ್ಯದ ಒಳಮೈ ಲಕ್ಷಣಗಳನ್ನು ಗದ್ಯ ನಿರೂಪಣ, ಕಥಾನಾತ್ಮಕ ಶೈಲಿ, ಆತ್ಮ ಕಥನದ ನಿವೇದನೆ ಮತ್ತು ಪ್ರವಾಸ ಕಥನದ ವಸ್ತುದ್ರವ್ಯವೆಂದು ನಾಲ್ಕು ನೆಲೆಯಲ್ಲಿ ಗುರುತಿಸಬಹುದು. ಕನ್ನಡದಲ್ಲಿ ಬಂದಿರುವ ಎಲ್ಲ ಪ್ರವಾಸ ಕೃತಿಗಳೂ ಗದ್ಯ ರೂಪದಲ್ಲೇ ಇವೆ. ಅವು ಕಥನಾತ್ಮಕ ನೆಲೆಯನ್ನು ಪಡೆದಿವೆ. ವಿ.ಸೀ ಅವರಪಂಪಾಯಾತ್ರೆ' ಇದಕ್ಕೆ ಉತ್ತಮ ಉದಾಹಣೆ ಎನ್ನಬಹುದು.
1.   ಕನ್ನಡದಲ್ಲಿ ಬಂದಿರುವ ಪ್ರವಾಸ ಕೃತಿಗಳು ಯಾವರೂಪದಲ್ಲಿವೆ?
2.  ವಿ. ಸೀ ಅವರ ಪ್ರವಾಸ ಕಥನ ಯಾವುದು?
13) ಸೂಕ್ತ ಕಾರಣ ತಿಳಿಸಿ ಎರಡುದಿನ ರಜವನ್ನು ಕೊಡುವಂತೆ ಕೋರಿ ನಿಮ್ಮ ಮುಖ್ಯೋಪಾಧ್ಯಾಯರಿಗೆ ಒಂದು ಪತ್ರ ಬರೆಯಿರಿ.             1X3=3

*****************

No comments:

Post a Comment