Monday 18 May 2015

ಭಾಷಾ ಚಟುವಟಿಕೆ ವರ್ಣಮಾಲೆಯ ನೂರಾರು ಪ್ರಶ್ನೆಗಳು

ವರ್ಣಮಾಲೆಗೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುವುದರ ಮೂಲಕ ವರ್ಣಮಾಲೆಯ ಪರಿಕಲ್ಪನೆಯನ್ನು ಸ್ಪಷ್ಟಪಡಿಸಬಹುದು.
ಈ ಕೆಳಗಿನ ಪ್ರಶ್ನೆಗಳಿಗೆ ವಾಕ್ಯದಲ್ಲೇ ಉತ್ತರಿಸಬೇಕು
 1.     ಕನ್ನಡ ವರ್ಣಮಾಲೆಯನ್ನು ಅಂದವಾಗಿ ಬರೆಯಿರಿ.
2.    ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳೆಷ್ಟು?
3.    ಕನ್ನಡ ವರ್ಣಮಾಲೆಯ ಮೂರು ವಿಧಗಳಾವುವು?
4.   ಸ್ವತಂತ್ರವಾಗಿ ಉಚ್ಚರಿಸಬಹುದಾದ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
5.    ಕನ್ನಡ ವರ್ಣಮಾಲೆಯಲ್ಲಿ ಸ್ವತಂತ್ರವಾಗಿ ಉಚ್ಚರಿಸಬಹುದಾದ ಅಕ್ಷರಗಳಾವುವು?
6.    ಕನ್ನಡ ವರ್ಣಮಾಲೆಯಲ್ಲಿ ಅ ಯಿಂದ ಔ ವರೆಗಿನ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
7.    ಸ್ವರದ ಸಹಾಯದಿಂದ ಮಾತ್ರ ಉಚ್ಚರಿಸಬಹುದಾದ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
8.    ಕನ್ನಡ ವರ್ಣಮಾಲೆಯಲ್ಲಿ ಕ ಯಿಂದ ಳ ವರೆಗಿನ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
9.    ಅಕ್ಷರದ ಸಂಬಂಧವನ್ನು ಹೊಂದಿದಾಗ ಮಾತ್ರ ಉಚ್ಚರಿಸಲಾಗುವ  A ಮತ್ತು B ಗಳನ್ನು ಒಟ್ಟಾಗಿ ಏನೆಂದು ಕರೆಯುತ್ತಾರೆ?
10.  ಯೋಗವಾಹ ಎಂದರೇನು?
11.   ಕನ್ನಡ ವರ್ಣಮಾಲೆಯಲ್ಲಿ A ’   ಏನೆಂದು ಕರೆಯುತ್ತಾರೆ?
12.  ಕನ್ನಡ ವರ್ಣಮಾಲೆಯಲ್ಲಿ ‘B’ ಏನೆಂದು ಕರೆಯುತ್ತಾರೆ?
13.  ಅನುಸ್ವಾರ ಎಂದರೇನು?
14.  ವಿಸರ್ಗ ಎಂದರೇನು?
15.  ಸ್ವರಗಳಲ್ಲಿ ಎಷ್ಟು ವಿಧ? ಅವುಯಾವುವು?
16.  ಹ್ರಸ್ವಸ್ವರ  ಎಂದರೇನು?
17.   ದೀರ್ಘಸ್ವರ ಎಂದರೇನು?
18.  ಹ್ರಸ್ವಸ್ವರಕ್ಕೂ ದೀರ್ಘಸ್ವರಕ್ಕೂ ಇರುವ ವ್ಯತ್ಯಾಸವನ್ನು ಉದಾಹರಣೆಯೊಂದಿಗೆ ತಿಳಿಸಿ.
19.  ಪ್ಲುತಸ್ವರ ಎಂದರೇನು?
20.ಮಾತ್ರೆಕಾಲ ಎಂದರೇನು?
21.  ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
22. ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?.
23. ಎರಡುಮಾತ್ರೆಗಳಿಗಿಂತ ಹೆಚ್ಚು ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?.
24.ಎರಡು ಮಾತ್ರೆ ಕಾಲಕ್ಕಿಂತ ಹೆಚ್ಚು ಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
25. ಸವರ್ಣಾಕ್ಷರಗಳಾವುವು?
26. ಸವರ್ಣದೀರ್ಘಸ್ವರಗಳಾವುವು?
27. ವೃದ್ಧ್ಯಕ್ಷರಗಳಾವುವು?
28. ಸಂಧ್ಯಕ್ಷರಗಳೆಂದು ಯಾವ ಸ್ವರಗಳನ್ನು ಕರೆಯುತ್ತಾರೆ? ಏಕೆ?
29. ಕ್ ಯಿಂದ ಳ್ ವರೆಗೆ ಎಷ್ಟು ಅಕ್ಷರಗಳಿವೆ?
30.ಕ್ ಯಿಂದ ಳ್ ವರೆಗಿನ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?ಏಕೆ?
31.  ಯ್ ಯಿಂದ ಳ್ ವರೆಗಿನ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?ಏಕೆ?
32. ವ್ಯಂಜನ ಎಂದರೇನು?
33. ವ್ಯಂಜನಗಳಲ್ಲಿ ಎಷ್ಟು ವಿಧ?ಅವುಯಾವುವು?
34.ವರ್ಗೀಯ ವ್ಯಂಜನಗಳಲ್ಲಿ ಎಷ್ಟು ವರ್ಗಗಳಿವೆ? ಅವುಯಾವುವು?
35. ಕನ್ನಡ ವರ್ಣಮಾಲೆಯಲ್ಲಿ ಬರುವ ಒಟ್ಟು ವ್ಯಂಜನಗಳೆಷ್ಟು?
36. ವರ್ಗದ ಮೊದಲ ಮತ್ತು ಮೂರನೆಯ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
37. ವರ್ಗದ ಎರಡನೆಯ ಮತ್ತು ನಾಲ್ಕನೆಯ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
38. ಪ್ರತಿ ವರ್ಗದ ಕೊನೆಯ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ? ಏಕೆ?
39. ಮಹಾಪ್ರಾಣಾಕ್ಷರ ಎಂದರೇನು? ಅವು ಯಾವುವು”
 40.ಕನ್ನಡ ವರ್ಣಮಾಲೆಯಲ್ಲಿ ಬರುವ ಮಹಾಪ್ರಾಣಾಕ್ಷರಗಳು ಎಷ್ಟು? ಅವು ಯಾವುವು?
 41. ಕನ್ನಡ ವರ್ಣಮಾಲೆಯಲ್ಲಿ ಇರುವ ಅಲ್ಪಪ್ರಾಣಾಕ್ಷರಗಳು ಎಷ್ಟು? ಅವು ಯಾವುವು?
42.ಮೂಗಿನ ಸಹಾಯದಿಂದ ಉಚ್ಚರಿಸಬಹುದಾದ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
 43.  ಅನುನಾಸಿಕಾಕ್ಷರಗಳು ಎಷ್ಟು? ಅವು ಯಾವುವು?
 44. ನಾಸಿಕ ಎಂದರೇನು? ನಾಸಿಕದ ಸಹಾಯದಿಂದ ಉಚ್ಚರಿಸಬಹುದಾದ ಅಕ್ಷರಗಳಾವುವು?
 45. ಅಮ್ಮ, ಅವರು, ಇವನು, ಉಗುರು, ಋಣ, ಎಲೆ, ಒನಕೆ - ಹ್ರಸ್ವಸ್ವರಗಳನ್ನು ಗುರುತಿಸಿ ಬರೆಯಿರಿ.
 46. ಆಲಸ್ಯ, ಆಗಸ, ಈಶ್ವರ, ಊರೂರು, ಏಲಕ್ಕಿ, ಐರಾವತ, ಓರಣ, ಔತಣ- ದೀರ್ಘಸ್ವರಗಳನ್ನು ಗುರುತಿಸಿ ಬರೆಯಿರಿ.
 47. ತಾಯಿಯೇ ಪ್ರತ್ಯಕ್ಷ ದೇವರು. ದೇವರೇ ಗತಿ ನಮಗೆ. ಗುರುಗಳೇ ಕಾಪಾಡಿ- ಪ್ಲುತಸ್ವರಗಳನ್ನು ಗುರುತಿಸಿ ಬರೆಯಿರಿ.
 48. ಹ್ರಸ್ವ, ದೀರ್ಘ, ಪ್ಲುತ ಪ್ರತಿ ಸ್ವರಕ್ಕೂ ಎರಡೆರಡು ಉದಾಹರಣೆಗಳನ್ನು ಬರೆಯಿರಿ.
 49. ಬೆಳಗಾದೊಡನೆಯೇ ‘ಕು,ಕೂ,ಕೂÆ-’ಎಂದು ಕೋಳಿ ಕೂಗಿತು. ಇವುಗಳಲ್ಲಿ ಹ್ರಸ್ವ, ದೀರ್ಘ, ಪ್ಲುತಗಳನ್ನು ಗುರುತಿಸಿ ಬರೆಯಿರಿ.
 50. ಕನ್ನಡವರ್ಣಮಾಲೆಯಲ್ಲಿರುವ ಅಕ್ಷರಗಳನ್ನು ಅಂದವಾಗಿ ಬರೆಯಿರಿ.
 51.  ನಿಮ್ಮ ಹೆಸರನ್ನು ಬರೆದು ಸ್ವರ, ವ್ಯಂಜನಗಳನ್ನು ಬಿಡಿಸಿ ಬರೆಯಿರಿ.
 52. ಅಣ್ಣಾ, ನೀನೇ, ಈ ಕೆಲಸವನ್ನು ಮಾಡಬೇಕು. ಈ ವಾಕ್ಯದಲ್ಲಿರುವ ಪ್ಲುತ ಸ್ವರವನ್ನು ಬರೆಯಿರಿ.
 53. ಸೌರಭ, ವೈಭವ-ಈ ಪದಗಳಲ್ಲಿರುವ ಹ್ರಸ್ವಸ್ವರ, ದೀರ್ಘಸ್ವರಗಳನ್ನು ಗುರುತಿಸಿ ಬರೆಯಿರಿ.
 54.‘ತೇಜಃಪುಂಜ-ಈಪದದಲ್ಲಿರುವ ಅನುಸ್ವಾರ ವಿಸರ್ಗಗಳು ಯಾವಯಾವ ಸ್ವರಗಳ ಮುಂದಿವೆ ಬಿಡಿಸಿ ಬರೆಯಿರಿ.
 55.  ಭ್‍ಆರ್‍ಅತ್‍ಈಯ್ ಅ ಸ್‍ಅಂಸ್‍ಕ್‍ಋತ್‍ಇ-ಸ್ವರ ವ್ಯಂಜನವನ್ನು ಕೂಡಿಸಿ ಬರೆಯಿರಿ.
 56.ಹಣ್ಣುತಿಂದು ಮಕ್ಕಳು ನಗುತ್ತಾ ಆಟವಾಡಲು ಉದ್ಯಾನವನಕ್ಕೆ ಹೋದರು.  - ಈ ವಾಕ್ಯದಲ್ಲಿರುವ ಅನುನಾಸಿಕಗಳನ್ನು ಗುರುತಿಸಿ ಬರೆಯಿರಿ.
 57.  ಅಯ್ಯೋ, ಅವರಿಗೆ ಹೀಗಾಗ ಬಾರದಿತ್ತು.-ಈ ವಾಕ್ಯದಲ್ಲಿರುವ ಹ್ರಸ್ವ,ದೀರ್ಘ, ಪ್ಲುತಸ್ವರಗಳನ್ನು ಗುರುತಿಸಿ ಬರೆಯಿರಿ.
58. ಈ ಕೆಳಗಿನ ಅಕ್ಷರಗಳನ್ನು ಸ್ವರ,ವ್ಯಂಜನ ಹಾಗೂ ಯೋಗವಾಹಗಳನ್ನಾಗಿ ವಿಂಗಡಿಸಿ, ಸರಿಯಾದ ಕ್ರಮದಲ್ಲಿ ಬರೆಯಿರಿ.
ಅ ಖ ಆ ಬ ವ ಜ ಈ ಣ ಭ ಉ ಥ ರ ಊ ಢ ಐ ಅಃ ಒ ಮ ಳ ಔ ಡ ಸ ಷ ಕ ಟ ತ
ಗ ಏ ಘ ದ ಙ ಧ ಇ ಝ ಋ ಹ ಠ ಓ ಅಂ ಚ ಛ ಞ ನ ಫ ಯ ಲ ಶ ಎ ಪ
59. ಸರಿಯಾದ ಕ್ರಮದಲ್ಲಿ ಜೋಡಿಸಿ ಬರೆಯಿರಿ.
ಕ ಖ ಗ ಘ ಙ
ಪ ಫ ಬ ಭ ಮ
ತ ಥ ದ ಧ ನ
ಯ ರ ಲ ವ ಶ ಷ ಸ ಹ ಳ
ಚ ಛ ಜ ಝ ಞ
ಅ ಅಂ ಅಃ
ಇ ಉ ಋ ಎ ಒ ಆ ಈ ಊ ಏ ಐ ಓ ಔ
ಟ ಠ ಡ ಢ ಣ
ಮುಂದೆ ಕೊಟ್ಟಿರುವ ಪದಗಳಿಗೆ ಅನುಸ್ವಾರ ವಿಸರ್ಗವನ್ನು ಸೇರಿಸಿ ಪೂರ್ಣಗೊಳಿಸಿರಿ.
60.     ಅ-ತ-ಶಕ್ತಿ
61.      ಅ-ತ-ಸತ್ವ
62.     ಅ-ತ-ಕರಣ
63.     ಅ-ತ-ಪುರ
64.    ಅ-ತ-ಕಲಹ
65.     ತೇಜ-ಪು-ಜ
66.     ದು-ಖ
67.     ಸ್ವತ-
68.     ಇತ-ಪರ- (ಇನ್ನು ಮುಂದಿ, ನಂತರ, ಇಲ್ಲಿಂದ ಮುಂದಕ್ಕೆ)
69.     ಓ-ನಮ-ಶಿವಾಯ.
ಬಿಟ್ಟ ಸ್ಥಳ ತುಂಬಿರಿ.
70.     ಅಕ್ಷರವನ್ನು ಎಳೆಯದಂತೆ, ಮೊಟಕುಗೊಳಿಸದಂತೆ ಉಚ್ಚಾರ ಮಾಡುವುದಕ್ಕೆ ತೆಗೆದುಕೊಳ್ಳುವ ಕಾಲಕ್ಕೆ ------------ ಎಂದು ಕರೆಯುತ್ತಾರೆ.
71.       ಎರಡು ಮಾತ್ರೆ ಕಾಲಕ್ಕಿಂತ ಹೆಚ್ಚು ಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು -------ಎಂದು ಕರೆಯುತ್ತಾರೆ..
72.     ಸ್ವತಂತ್ರವಾಗಿ ಉಚ್ಚರಿಸಬಹುದಾದ ಅಕ್ಷರಗಳನ್ನು -----------ಎಂದು ಕರೆಯುತ್ತಾರೆ.
73.     ಸ್ವರದ ಸಹಾಯದಿಂದ ಮಾತ್ರ ಉಚ್ಚರಿಸಲಾಗುವ ಅಕ್ಷರಗಳನ್ನು -------ಎಂದು ಕರೆಯುತ್ತಾರೆ.
74.     ಅಕ್ಷರದ ಸಂಬಂಧವನ್ನು ಹೊಂದಿದಾಗ ಮಾತ್ರ ಉಚ್ಚರಿಸಲಾಗುವ ಅಕ್ಷರಗಳನ್ನು----ಎಂದು ಕರೆಯುತ್ತಾರೆ.
75.      ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರಗಳನ್ನು ------------ ಕರೆಯುತ್ತಾರೆ.
76.     ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರಗಳನ್ನು ------------ ಕರೆಯುತ್ತಾರೆ.
78.     ಯಾವುದೇ ವರ್ಗಕ್ಕೆ ಸೇರದ ವ್ಯಂಜನಗಳನ್ನು -----------ಎಂದು ಕರೆಯುತ್ತಾರೆ.
79.     ಅಲ್ಪಪ್ರಾಣಗಳೆಂದರೆ ಪ್ರತಿವರ್ಗದ----ಮತ್ತು -----ವ್ಯಂಜನಗಳು.
81.      ಮಹಾಪ್ರಾಣಗಳೆಂದರೆ ಪ್ರತಿವರ್ಗದ----ಮತ್ತು -----ವ್ಯಂಜನಗಳು.
82.     ಅನುನಾಸಿಕಗಳೆಂದರೆ ಪ್ರತಿವರ್ಗದ----ವ್ಯಂಜನಗಳು.
83.     ಪ್ರತಿವರ್ಗದಲ್ಲಿರುವ ಒಟ್ಟು ವ್ಯಂಜನಗಳು ಸಂಖ್ಯೆ------
84.    ಒಟ್ಟು ವರ್ಗೀಯ ವ್ಯಂಜನಗಳ ಸಂಖ್ಯೆ-------
85.     ಕಡಿಮೆ ಉಸಿರಿನಿಂದ ಉಚ್ಚರಿಸಬಹುದಾದ ವ್ಯಂಜನಗಳನ್ನು ----ಎಂದು ಕರೆಯುತ್ತಾರೆ.
86.     ಹೆಚ್ಚು ಉಸಿರಿನಿಂದ ಉಚ್ಚರಿಸಬಹುದಾದ ವ್ಯಂಜನಗಳಿಗೆ ----ಎಂದು ಹೆಸರು.
87.     ಮೂಗಿನ ಸಹಾಯದಿಂದ ಉಚ್ಚರಿಸಬಹುದಾದ ವ್ಯಂಜನಗಳಿಗೆ------ಎನ್ನುತ್ತಾರೆ.
88.     ಅನುಸ್ವಾರ(A) ವಿಸರ್ಗ(B)ಗಳಿಗೆ--------ಎನ್ನುತ್ತಾರೆ.
ಸಂಬಂಧ ಕಲ್ಪಿಸಿ
89.     ಸ್ವರದ ಸಹಾಯದಿಂದ ಮಾತ್ರ ಉಚ್ಚರಿಸಲಾಗುವ ಅಕ್ಷರಗಳು: ವ್ಯಂಜನಗಳು :: ಅಕ್ಷರದ ಸಂಬಂಧವನ್ನು ಹೊಂದಿದಾಗ ಮಾತ್ರ ಉಚ್ಚರಿಸಲಾಗುವ ಅಕ್ಷರಗಳು:-----------------
90.    ಸ್ವರದ ಸಹಾಯದಿಂದ ಮಾತ್ರ ಉಚ್ಚರಿಸಲಾಗುವ ಅಕ್ಷರಗಳು: ವ್ಯಂಜನಗಳು :: ಸ್ವತಂತ್ರವಾಗಿ ಉಚ್ಚರಿಸಬಹುದಾದ ಅಕ್ಷರಗಳು:-----------
91.      B : ವಿಸರ್ಗ :: A ----------
92.     ಅ+ಯ್:ಐ :: ಅ+ವ್:-----------
93.     ಅಆ, ಇಈ, ಉಊ, ಋಋ: ಸವರ್ಣಾಕ್ಷರಗಳು :: ಐಔ :-----------
94.    ಅ ಕಾರ ಇ ಕಾರ ಸೇರಿ : ಐ :: ಅ ಕಾರ ಉ ಕಾರ ಸೇರಿ-----------
95.     ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರಗಳು: ಹ್ರಸ್ವಸ್ವರ :: ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರಗಳು :------------
96.     ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರಗಳು : ಹ್ರಸ್ವಸ್ವರ :: ಎರಡುಮಾತ್ರೆಗಳಿಗಿಂತ ಹೆಚ್ಚು ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರಗಳು :-----------
97.     ವರ್ಗೀಯ ವ್ಯಂಜನ: 34:: ಅವರ್ಗೀಯ ವ್ಯಂಜನ:---------
98.     ಕಂಠದಲ್ಲಿ ಹುಟ್ಟುವ ಅಕ್ಷರಗಳು : ಕಂಠ್ಯಾಕ್ಷರಗಳು :: ದವಡೆಯ ಸಹಾಯದಿಂದ ಉಚ್ಚರಿಸಬಹುದಾದ ಅಕ್ಷರಗಳು:---
99.     ನಾಲಿಗೆಯ ಮೇಲ್ಭಾಗದ ಸಹಾಯದಿಂದ ಉಚ್ಚರಿಸಬಹುದಾದ ಅಕ್ಷರಗಳು:ಮೂರ್ಧನ್ಯಾಕ್ಷರ:: ಹಲ್ಲಿನ ಸಹಾಯದಿಂದ ಉಚ್ಚರಿಸಬಹುದಾದ ಅಕ್ಷರಗಳು:---------
100.  ಓಷ್ಠ್ಯಾಕ್ಷರ: ತುಟಿಯ ಸಹಾಯದಿಂದ ಮಾತ್ರ ಉಚ್ಚರಿಸಬಹುದಾದ ಅಕ್ಷರಗಳು :: ಕಂಠೋಷ್ಠ್ಯಾಕ್ಷರ: -----------
101.    ‘ಕ’ ವರ್ಗ: ಕಂಠ್ಯಾಕ್ಷರ:: ‘ಚ’ವರ್ಗ:--------
102.   ‘ತ’ ವರ್ಗ: ದಂತ್ಯಕ್ಷರ:: ‘ಪ’ವರ್ಗ:--------
103.   ‘ಕ’ ವರ್ಗ: ಕಂಠ್ಯಾಕ್ಷರ:: ‘ಟ’ವರ್ಗ:--------
104.  ಕಡಿಮೆ ಉಸಿರನ್ನು ಬಳಸಿ ಉಚ್ಚರಿಸಬಹುದಾದ ಅಕ್ಷರ: ಅಲ್ಪಪ್ರಾಣ :: ಹೆಚ್ಚು ಉಸಿರನ್ನು ಬಳಸಿ ಉಚ್ಚರಿಸಬಹುದಾದ ಅಕ್ಷರ:-------------
105.   ‘ಢ’ : ಟ ವರ್ಗ:: ಥ:
106.   ಙ : ಕ ವರ್ಗ:: ಞ :
107.   ಝ : ಚ ವರ್ಗ :: ಠ:
108.   ಣ; ಅನುನಾಸಿಕ :: ಖ :
109.   ವ : ದಂತೋಷ್ಠ್ಯ:: A :
110.    ಒಓಔ : ಕಂಠೋಷ್ಠ್ಯ :: ಎಏಐ:
ಕೆಳಗಿನ ಪ್ರಶ್ನೆಗಳಿಗೆ ಅಥವಾ ಹೇಳಿಕೆಗಳಿಗೆ ನಾಲ್ಕು ಪರ್ಯಾಯಗಳನ್ನು ಸೂಚಿಸಲಾಗಿದೆಅತಿ ಸೂಕ್ತವಾದ ಪರ್ಯಾಯವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಪೂರ್ಣ ಉತ್ತರವನ್ನು ಬರೆಯಿರಿ.       
111. ಮೂರು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುತ್ತಾರೆ:
) ಹ್ರಸ್ವ ಆ) ದೀರ್ಘ ಇ) ವ್ಯಂಜನ ಈ) ಪ್ಲುತ
112. ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುತ್ತಾರೆ:
) ಹ್ರಸ್ವ ಆ) ದೀರ್ಘ ಇ) ವ್ಯಂಜನ ಈ) ಪ್ಲುತ
113. ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುತ್ತಾರೆ:
) ಹ್ರಸ್ವ ಆ) ದೀರ್ಘ ಇ) ವ್ಯಂಜನ ಈ) ಪ್ಲುತ
114. ಸ್ವರದ ಸಹಾಯದಿಂದ ಮಾತ್ರ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುತ್ತಾರೆ:
) ಯೋಗವಾಹ ಆ) ವರ್ಣ ಇ) ವ್ಯಂಜನ ಈ) ಪ್ಲುತ
115. ಸ್ವತಂತ್ರವಾಗಿ ಉಚ್ಚರಿಸಲಾಗದ ಅಕ್ಷರಗಳನ್ನು ಹೀಗೆನ್ನುತ್ತಾರೆ:
) ಅನುಸ್ವಾರ ಆ) ವಿಸರ್ಗ ಇ) ವ್ಯಂಜನ ಈ) ಪ್ಲುತ
116. ಕೆಳಗಿನವುಗಳಲ್ಲಿ ಅನುನಾಸಿಕಾಕ್ಷರ:
) ಆ) ಅಂ ಇ) ಈ)
117. ಪ್ರತಿ ವರ್ಗದ ಕೊನೆಯ ಅಕ್ಷರಗಳನ್ನು ಹೀಗೆನ್ನುತ್ತಾರೆ
) ಅಲ್ಪಪ್ರಾಣ ಆ) ಅನುನಾಸಿಕ ಇ) ಅನುಸ್ವಾರ ಈ) ಮಹಾಪ್ರಾಣ
118. ಅನುಸ್ವಾರ ವಿಸರ್ಗಗಳನ್ನುಹೀಗೆನ್ನುತ್ತಾರೆ
) ಯೋಗವಾಹ  ಆ) ವರ್ಗೀಯವ್ಯಂಜನ ಇ) ಹ್ರಸ್ವಸ್ವರ ಈ) ಅನುನಾಸಿಕ
119. ಯೋಗವಾಹಗಳೆಂದರೆ
) ಅನುನಾಸಿಕಗಳು ಆ) ಅಲ್ಪಪ್ರಾಣ ಮಹಾಪ್ರಾಣಗಳು ಇ) ಸ್ವರ ವ್ಯಂಜನಗಳು ಈ) ಅನುಸ್ವಾರ ವಿರ್ಗಗಳು.
120. ಕೆಳಗಿನವುಗಳಲ್ಲಿ ಅಲ್ಪಪ್ರಾಣಾಕ್ಷರ
) ಆ) ಇ) ಈ)
121. ಕೆಳಗಿನವುಗಳಲ್ಲಿ ಸಂಧ್ಯಕ್ಷರವು
) ಅಃ ಆ) ಇ) ಈ)
122. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು:
) 50 ಆ) 34 ಇ) ಈ) 49
123. ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಾಕ್ಷರಗಳಸಂಖ್ಯೆ
) 9 ಆ) 6 ಇ) 13 ಈ) 7
124. ಕನ್ನಡ ವರ್ಣಮಾಲೆಯಲ್ಲಿರುವ ದೀರ್ಘಾಕ್ಷರಗಳ ಸಂಖ್ಯೆ
) 5 ಆ) 10 ಇ) 7 ಈ) 25
125. ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ
)25 ಆ) 10 ಇ) 9 ಈ) 2
126. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವ್ಯಂಜನಾಕ್ಷರಗಳ ಸಂಖ್ಯೆ:
) 34 ಆ) 25 ಇ) 13 ಈ) 9
127. ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಗಳ ಸಂಖ್ಯೆ
) 34 ಆ) 25 ಇ) 13 ಈ) 9
128. ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳು
) 6 ಆ) 7 ಇ) 9 ಈ) 10
129. ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕಾಕ್ಷರಗಳ ಸಂಖ್ಯೆ
) 5 ಆ) 6 ಇ) 7 ಈ) 9
130. ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳ ಸಂಖ್ಯೆ
) 6 ಆ) 5 ಇ) 25 ಈ) 10
131. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಮಹಾಪ್ರಾಣಾಕ್ಷರಗಳ ಸಂಖ್ಯೆ
) 9 ಆ) 10 ಇ) 25 ಈ) 34
132. ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಕ್ಷರಗಳ ಸಂಖ್ಯೆ
) 2 ಆ) 5 ಇ) 6 ಈ) 9
133. ಕನ್ನಡ ವರ್ಣಮಾಲೆಯಲ್ಲಿರುವ ಯಣ್ ಅಕ್ಷರಗಳ ಸಂಖ್ಯೆ
) 1 ಆ) 3 ಇ) 4 ಈ) 5
134. ಕೆಳಗಿನವುಗಳಲ್ಲಿ ಸವರ್ಣಾಕ್ಷರಗಳೆಂದರೆ
) ಅಆ ಆ) ಒಓ ಇ) ಐಔ ಈ) ಅಂಅಃ
135. ಮೂರ್ಧನ್ಯ ಅಕ್ಷರಗಳಿಗೆ ಉದಾಹರಣೆ ;
) ‘ವರ್ಗ ಆ)ವರ್ಗ ಇ)ವರ್ಗ ಈ)ವರ್ಗ
136. ಅನುಸ್ವಾರ ವಿಸರ್ಗಗಳೆಂದರೆ
) ವ್ಯಂಜನ  ) ಯೋಗವಾಹ ) ಸ್ವರ ) ಸಂಯುಕ್ತಾಕ್ಷರ
137. ಯೋಗವಾಹಗಳೆಂದರೆ-
ಅ) ಅನುನಾಸಿಕಗಳು ಆ) ಅನುಸ್ವಾರ ವಿಸರ್ಗ ಇ) ಹ್ರಸ್ವ ದೀರ್ಘ ಈ) ಮಹಾಪ್ರಾಣ ಅಲ್ಪಪ್ರಾಣ
138. ವರ್ಗದ ನಾಲ್ಕನೇ ಅಕ್ಷರಗಳನ್ನು ಹೀಗೆನ್ನುತ್ತಾರೆ
ಅಲ್ಪ ಪ್ರಾಣ ಆ)  ಮಹಾ ಪ್ರಾಣ ಇ)  ಅನುನಾಸಿಕ ಈ) ಅನುಸ್ವಾರ
139. ವರ್ಗದ ಕೊನೆಯ ಅಕ್ಷರಗಳು   

ಅ) ಅನುನಾಸಿಕ  ಆ) ಮಹಾಪ್ರಾಣ  ಇ) ಅಲ್ಪಪ್ರಾಣ ಈ) ವಿಸರ್ಗ
140.  ಕೊಟ್ಟಿರುವ ಸ್ವರಗಳನ್ನು ಹ್ರಸ್ವಸ್ವರಗಳು, ದೀರ್ಘಸ್ವರಗಳೆಂದು ಎರಡು ಪಟ್ಟಿಮಾಡಿರಿ.
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ಹ್ರಸ್ವಸ್ವರಗಳು
ದೀರ್ಘಸ್ವರಗಳು






ವರ್ಗೀಯಗಳು
ಅವರ್ಗೀಯಗಳು


.    


141 ವರ್ಗೀಯಗಳು ಅವರ್ಗೀಯವ್ಯಂಜನಗಳನ್ನು ಮೇಲಿನ ಪಟ್ಟಿಯಲ್ಲಿ ಬರೆಯಿರಿ.

142.    ವರ್ಗೀಯ ವ್ಯಂಜನಗಳಿಂದ ಈ ಕೆಳಗಿನ ಪಟ್ಟಿಯನ್ನು ಭರ್ತಿಮಾಡಿರಿ.
ವರ್ಗದ ಹೆಸರು
ಅಲ್ಪಪ್ರಾಣ
ಮಹಾಪ್ರಾಣ
ಅಲ್ಪಪ್ರಾಣ
ಮಹಾಪ್ರಾಣ
ಅನುನಾಸಿಕ



































143.    ಕನ್ನಡ ಅಕ್ಷರಗಳ ಉತ್ಪತ್ತಿ ಸ್ಥಾನಕ್ಕೆ ಅನುಗುಣವಾಗಿ ಈ ಕೆಳಗಿನ ಪಟ್ಟಿಯನ್ನು ಭರ್ತಿಮಾಡಿರಿ.
ಕಂಠ್ಯ
ತಾಲ್ವ
ಮೂರ್ಧನ್ಯ
ದಂತ್ಯ
ಓಷ್ಠ್ಯ
ಕಂಠತಾಲು
ಕಂಠೋಷ್ಠ್ಯ
ದಂತೋಷ್ಠ್ಯ
ಅನುನಾಸಿಕ
ಕಂಠನಾಸಿಕ











144.   ಕನ್ನಡ ಅಕ್ಷರಗಳ ಉತ್ಪತ್ತಿ ಸ್ಥಾನಕ್ಕೆ ಅನುಗುಣವಾಗಿ ಈ ಕೆಳಗಿನ ಪಟ್ಟಿಯನ್ನು ಭರ್ತಿಮಾಡಿರಿ.
ಕ್ರಮ ಸಂ
ಉತ್ಪತ್ತಿಯ ಸ್ಥಾನ
ಉತ್ಪತ್ತಿಯ ಸ್ಥಾನಕ್ಕನುಗುಣವಾಗಿ ವರ್ಣದ ಹೆಸರು
ಸ್ವರ
ಯೋಗವಾಹ
ವ್ಯಂಜನ
ಹ್ರಸ್ವ
ದೀರ್ಘ
ಅನುಸ್ವಾರ
ವಿಸರ್ಗ
ವರ್ಗೀಯ
ಅವರ್ಗೀಯ
1
ಕಂಠ
ಕಂಠ್ಯವರ್ಣ






2
ತಾಲ್ವ
ತಾಲ್ವಕ್ಷರ (ತಾಲವ್ಯ)






3
ಮೂರ್ಧನ್ಯ
ಮೂರ್ಧನ್ಯ






4
ದಂತ
ದಂತ್ಯವರ್ಣ






5
ಓಷ್ಠ್ಯ
ಓಷ್ಠ್ಯವರ್ಣ






6
ಕಂಠ ತಾಲ್ವ
ಕಂಠತಾಲ್ವಕ್ಷರ (ಕಂಠತಾಲವ್ಯ)






7
ಕಂಠೋಷ್ಠ್ಯ
ಕಂಠೋಷ್ಠ್ಯವರ್ಣ






8
ದಂತೋಷ್ಠ್ಯ
ದಂತೋಷ್ಠ್ಯವರ್ಣ






9
ನಾಸಿಕ
ಅನುನಾಸಿಕ






10
ಕಂಠನಾಸಿಕ
ಕಂಠನಾಸಿಕ







5 comments: