Monday 11 May 2015

ದೃಕ್ ಶ್ರವಣ ಮಾಧ್ಯಮ ಬಳಸಿ ಭಾಷಾ ಚಟುವಟಿಕೆ-4

ಭಾಷಾಬೋಧನೆ ಇತ್ತೀಚಿನ ದಿನಗಳಲ್ಲಿ ಸವಾಲಾಗಿ ಪರಿಣಮಿಸುತ್ತಿದೆ. ಪ್ರಾಥಮಿಕ ಹಂತದಲ್ಲೇ ಕಲಿಯಬೇಕಾದ ಪ್ರಧಾನ ಕೌಶಲಗಳಾದ ಆಲಿಸುವುದು, ಮಾತನಾಡುವುದು, ಓದುವುದು, ಬರೆಯುವುದನ್ನು ಪ್ರೌಢಶಾಲಾ ಹಂತವನ್ನು ದಾಟಿದರೂ ಕಲಿಯುವುದರಲ್ಲಿ ವಿಫಲರಾಗುತ್ತಿರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಅಧಿಕವಾಗುತ್ತಿದೆ ಎನ್ನುವುದು ಕಟು ಸತ್ಯವೇ ಆಗಿದೆ. ಪರಿಣಾಮಕಾರಿಯಾಗಿ ಭಾಷಾಬೋಧನೆಯನ್ನು ಮಾಡುವ ಹೊಸ ಹೊಸ ವಿಧಾನಗಳನ್ನು ಶಿಕ್ಷಣದಲ್ಲಿ ಅಳವಡಿಸುತ್ತಾ ಬಂದಿದೆಯಾದರೂ ನಿರೀಕ್ಷಿತ ಫಲ ದೊರೆಯುತ್ತಿಲ್ಲ.
ಶ್ರವಣ ಮಾಧ್ಯಮಕ್ಕಿಂತ ದೃಶ್ಯಮಾಧ್ಯಮ ಹೆಚ್ಚು ಪರಿಣಾಮಕಾರಿಯಾದುದು ಎನ್ನುವುದರಲ್ಲಿ ಎರಡುಮಾತಿಲ್ಲ. ಕಪ್ಪು ಬಿಳುಪಿಗಿಂತ ವರ್ಣರಂಜಿತವಾದ ದೃಶ್ಯಗಳು ಅಕ್ಷರಗಳು ಹೆಚ್ಚಿನ ಪರಿಣಾಮ ಬೀರುತ್ತದೆ. ದೃಕ್ ಶ್ರವಣ ಮಾಧ್ಯಮದ ಮೂಲಕ ವಿಷಯಗಳನ್ನು ಪರಿಚಯಿಸುವುದರಿಂದ ಬೋಧನೆಯನ್ನು ಪರಿಣಾಮಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಒಂದು ಪ್ರಯತ್ನ. 


No comments:

Post a Comment