Monday 4 May 2015

ಭಾಷಾ ಚಟುವಟಿಕೆ –ಪದಗಳ ಪರಿಚಯ


         ವಿದ್ಯಾರ್ಥಿಗಳಿಗೆ ಹೊಸ ಪದ ಮತ್ತು ಕಠಿಣ ಪದಗಳನ್ನು ವಾಕ್ಯವೃಂದದ ಮೂಲಕ ಪರಿಚಯಿಸುವ ಚಟುವಟಿಕೆ.
ಸೂಚನೆಗಳು:
v  ಪರಿಚಯಿಸಬೇಕಾದ ಪದಗಳನ್ನು ಒಳಗೊಂಡ ಒಂದು ವಾಕ್ಯವೃಂದವನ್ನು ಆಯ್ಕೆಮಾಡಿಕೊಳ್ಳಬೇಕು.
ಉದಾಹರಣೆ: ಆಯ್ಕೆಮಾಡಿಕೊಂಡಿರುವ ವಾಕ್ಯವೃಂದ
ರಾಷ್ಟ್ರಪಿತ ಮಹಾತ್ಮ ಗಾಂಧಿ
ಮಹಾತ್ಮ ಗಾಂಧೀಜಿಯವರು ಅಕ್ಟೋಬರ್ ಎರಡರಂದು ಪೋರಬಂದರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಕರಮಚಂದ ಗಾಂಧಿ. ಗಾಂಧೀಜಿಯವರು ಬ್ರಿಟಿಷರೊಡನೆ ಯುದ್ಧದಲ್ಲಿ ತೊಡಗದೆ, ಅಹಿಂಸಾತತ್ವಗಳಿಂದಲೇ ಅವರನ್ನು ಜಯಿಸಿದರು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಗುಲಾಮಗಿರಿಯಲ್ಲಿದ್ದ ಭಾರತವನ್ನು ಬಂಧ ಮುಕ್ತಗೊಳಿಸಲು ಕಾಂಗ್ರೆಸ್ಪಕ್ಷದ ಹೆಸರಿನಡಿ ಭಾರತದ ಜನರನ್ನು ಒಂದುಗೂಡಿಸಿದರು. ಗಾಂಧೀಜಿಯವರು ನಡೆಸುತ್ತಿದ್ದ ಪ್ರತಿಯೊಂದು ಕ್ರಿಯೆಗಳು ಸತ್ಯಾಗ್ರಹ ಮತ್ತು ಅಹಿಂಸಾ ಮಾರ್ಗಗಳಿಂದ ಕೂಡಿರುತ್ತಿದ್ದವು. “ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿಎಂದು ಆಗ್ರಹಿಸಿದರು
ಗಾಂಧೀಜಿಯವರು ಸತ್ಯಪ್ರಿಯರು, ಅಹಿಂಸಾವಾದಿಗಳು. ಇವರು ಬರೆದ ಆತ್ಮ ಚರಿತ್ರೆಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರೂತ್. ”  ಇದರಲ್ಲಿಸತ್ಯಕ್ಕಾಗಿ ಇವರು ಎಷ್ಟೊಂದು ಹೋರಾಟ ನಡೆಸಿದರೆಂಬುದನ್ನು ಕಾಣುತ್ತೇವೆ.
***********
v  ಪರಿಚಯಿಸ ಬೇಕಾದ ಪದಗಳನ್ನು ಪಟ್ಟಿಮಾಡಿ, ಆ ಪದಗಳ ಮಿಂಚುಪಟ್ಟಿಯನ್ನು ತಯಾರಿಸಿ.
ಉದಾಹರಣೆ:
1.       ಅಕ್ಟೋಬರ್
2.       ಅಹಿಂಸಾ,
3.       ಅಹಿಂಸಾವಾದಿ
4.       ಆತ್ಮ ಚರಿತ್ರೆ,
5.       ಒಂದುಗೂಡಿಸಿದರು,
6.       ಕರಮಚಂದ ಗಾಂಧಿ
7.       ಕಾಂಗ್ರೆಸ್‍ಪಕ್ಷದ
8.       ಪೋರಬಂದರಿನಲ್ಲಿ
9.       ಬಂಧ ಮುಕ್ತ
10.   ಭಾರತವನ್ನು ಬಿಟ್ಟು,
11.   ರಾಷ್ಟ್ರ ಪಿತ
12.   ಸ್ವಾತಂತ್ರ್ಯ,
13.   ಸತ್ಯಪ್ರಿಯರು,
14.   ಸತ್ಯಾಗ್ರಹ,
15.   ಹೋರಾಟ
v  ಮಿಂಚುಪಟ್ಟಿಯಲ್ಲಿರುವ ಪದಗಳ ಉಕ್ತಲೇಖನ ಬರೆಸಿರಿ.
v  ಮಿಂಚುಪಟ್ಟಿಯನ್ನು ಪ್ರದರ್ಶಿಸಿ ಉಕ್ತಲೇಖನ ಬರೆದಿರುವ  ಪದಗಳನ್ನು ತಿದ್ದಿಕೊಳ್ಳುವಂತೆ ತಿಳಿಸಿರಿ.
v  ಸರಿಯಾಗಿ ಬರೆದ ಪ್ರತಿಯೊಂದು ಪದಗಳಿಗೆ ಒಂದು ಅಂಕವನ್ನು ನೀಡಿ, ತಪ್ಪಾದ ಪದಗಳನ್ನು ಐದೈದು ಬಾರಿ ಬರೆಯುವಂತೆ ಸೂಚಿಸಿರಿ.
v  ಆಯ್ಕೆ ಮಾಡಿಕೊಂಡಿರುವ  ವಾಕ್ಯವೃಂದದಲ್ಲಿ ಪರಿಚಯಿಸ ಬೇಕಾದ ಪದಗಳ ಜಾಗವನ್ನು ಖಾಲಿ ಬಿಟ್ಟು ದಪ್ಪಕಾಗದದ ಮೇಲೆ ಬರೆಯಿರಿ.
ಉದಾಹರಣೆಗೆ:
-----------ಮಹಾತ್ಮ ಗಾಂಧಿ
ಮಹಾತ್ಮ ಗಾಂಧೀಜಿಯವರು ---------ಎರಡರಂದು -------------ಜನಿಸಿದರು. ಇವರ ತಂದೆಯ ಹೆಸರು-------------. ಗಾಂಧೀಜಿಯವರು ಬ್ರಿಟಿಷರೊಡನೆ ಯುದ್ಧದಲ್ಲಿ ತೊಡಗದೆ,---------ತತ್ವಗಳಿಂದಲೇ  ಅವರನ್ನು ಜಯಿಸಿದರು. ಭಾರತಕ್ಕೆ------  ತಂದುಕೊಟ್ಟರು. ಗುಲಾಮಗಿರಿಯಲ್ಲಿದ್ದ ಭಾರತವನ್ನು------------ಗೊಳಿಸಲು -------------- ಹೆಸರಿನಡಿ ಭಾರತದ ಜನರನ್ನು ---------------. ಗಾಂಧೀಜಿಯವರು ನಡೆಸುತ್ತಿದ್ದ ಪ್ರತಿಯೊಂದು ಕ್ರಿಯೆಗಳು --------------- ಮತ್ತು ಅಹಿಂಸಾ ಮಾರ್ಗಗಳಿಂದ ಕೂಡಿರುತ್ತಿದ್ದವು. “ಬ್ರಿಟಿಷರೇ -----------ಎಂದು ಆಗ್ರಹಿಸಿದರು
ಗಾಂಧೀಜಿಯವರು ------------, ----------- ಇವರು ಬರೆದ ---------- ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರೂತ್. ”  ಇದರಲ್ಲಿಸತ್ಯಕ್ಕಾಗಿ ಇವರು ಎಷ್ಟೊಂದು ------------ ನಡೆಸಿದರೆಂಬುದನ್ನು ಕಾಣುತ್ತೇವೆ.
v  ಮಿಂಚುಪಟ್ಟಿಯಲ್ಲಿರುವ ಪದಗಳನ್ನು ಬಳಸಿ ವಾಕ್ಯವೃಂದದಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಐದು ನಿಮಿಷದಲ್ಲಿ ಭರ್ತಿಮಾಡುವಂತೆ ಸೂಚನೆಗಳನ್ನು ಕೊಡಿರಿ.
v  ಖಾಲಿ ಬಿಟ್ಟಿರುವ ಸ್ಥಳಗಳು ಭರ್ತಿಯಾದಮೇಲೆ ಆ ವಾಕ್ಯವೃಂದವನ್ನು ಮನಸ್ಸಿನಲ್ಲಿ ಒಮ್ಮೆ ಓದಿಕೊಳ್ಳಲು ತಿಳಿಸಿರಿ.
v  ಸರಿ ಉತ್ತರವನ್ನು ಪ್ರದರ್ಶಿಸಿ ತಪ್ಪುಗಳನ್ನು ತಿದ್ದಿಕೊಳ್ಳಲು ಸೂಚಿಸಿರಿ.
ಉದಾಹರಣೆ:
 ರಾಷ್ಟ್ರಪಿತ ಮಹಾತ್ಮ ಗಾಂಧಿ
ಮಹಾತ್ಮ ಗಾಂಧೀಜಿಯವರು ಅಕ್ಟೋಬರ್ ಎರಡರಂದು ಪೋರಬಂದರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಕರಮಚಂದ ಗಾಂಧಿ. ಗಾಂಧೀಜಿಯವರು ಬ್ರಿಟಿಷರೊಡನೆ ಯುದ್ಧದಲ್ಲಿ ತೊಡಗದೆ, ಅಹಿಂಸಾತತ್ವಗಳಿಂದಲೇ ಅವರನ್ನು ಜಯಿಸಿದರು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಗುಲಾಮಗಿರಿಯಲ್ಲಿದ್ದ ಭಾರತವನ್ನು ಬಂಧ ಮುಕ್ತಗೊಳಿಸಲು ಕಾಂಗ್ರೆಸ್‍ಪಕ್ಷದ ಹೆಸರಿನಡಿ ಭಾರತದ ಜನರನ್ನು ಒಂದುಗೂಡಿಸಿದರು. ಗಾಂಧೀಜಿಯವರು ನಡೆಸುತ್ತಿದ್ದ ಪ್ರತಿಯೊಂದು ಕ್ರಿಯೆಗಳು ಸತ್ಯಾಗ್ರಹ ಮತ್ತು ಅಹಿಂಸಾ ಮಾರ್ಗಗಳಿಂದ ಕೂಡಿರುತ್ತಿದ್ದವು. “ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿಎಂದು ಆಗ್ರಹಿಸಿದರು
ಗಾಂಧೀಜಿಯವರು ಸತ್ಯಪ್ರಿಯರು, ಅಹಿಂಸಾವಾದಿಗಳು. ಇವರು ಬರೆದ ಆತ್ಮ ಚರಿತ್ರೆ ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರೂತ್. ”  ಇದರಲ್ಲಿ ಸತ್ಯಕ್ಕಾಗಿ ಇವರು ಎಷ್ಟೊಂದು ಹೋರಾಟ ನಡೆಸಿದರೆಂಬುದನ್ನು ಕಾಣುತ್ತೇವೆ.
v  ನಂತರ ಗಟ್ಟಿಯಾಗಿ ಓದಿಸಿ ತಪ್ಪುಗಳನ್ನು ತಿದ್ದಿರಿ.
v  ಅದೇ ವಾಕ್ಯವೃಂದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಉಕ್ತಲೇಖನವಾಗಿ ಹೇಳಿ ಉತ್ತರಿಸಲು ತಿಳಿಸಿರಿ.
ಉದಾಹರಣೆಗೆ:
1.      ರಾಷ್ಟ್ರಪಿತ ಎಂದು ಯಾರನ್ನು ಕರೆಯುತ್ತಿದ್ದರು?
2.     ಮಹಾತ್ಮಗಾಂಧೀಜಿಯವರು ಎಂದು ಜನಿಸಿದರು?
3.     ಮಹಾತ್ಮಗಾಂಧಿಯವರ ಜನ್ಮಸ್ಥಳ ಯಾವುದು?
4.    ಮಹಾತ್ಮಗಾಂಧಿಯವರ ತಂದೆಯ ಹೆಸರನ್ನು ತಿಳಿಸಿರಿ.
5.     ಮಹಾತ್ಮಗಾಂಧೀಜಿಯವರು ಬ್ರಿಟಷರನ್ನು ಯಾವ ತತ್ವಗಳಿಂದ ಜಯಿಸಿದರು?
6.     ಮಹಾತ್ಮಗಾಂಧೀಜಿಯವರು ಭಾರತಕ್ಕೆ ಸ್ವಾತಂತ್ರವನ್ನು ತಂದುಕೊಟ್ಟಳು ಅನುಸರಿಸಿದ ಮಾರ್ಗಯಾವುದು?
7.     ಮಹಾತ್ಮಗಾಂಧೀಜಿಯವರು ಭಾರತದ ಜನರನ್ನು ಏಕೆ ಒಂದುಗೂಡಿಸಿದರು?
8.     ಮಹಾತ್ಮಗಾಂಧೀಜಿಯವರು ಯಾವ ಪಕ್ಷದ ಅಡಿಯಲ್ಲಿ ಭಾರತೀಯರನ್ನು ಒಂದುಗೂಡಿಸಿದರು?
9.     ಮಹಾತ್ಮಗಾಂಧೀಜಿಯವರು ಬ್ರಿಟಿಷರನ್ನು ಯಾವುದಕ್ಕಾಗಿ ಆಗ್ರಹಿಸಿದರು?
10.   ಮಹಾತ್ಮಗಾಂಧಿಯವರ ಆತ್ಮಕಥೆ ಯಾವುದು?
v  ಪ್ರತಿ ಸರಿಉತ್ತರಕ್ಕೆ ಒಂದು ಅಂಕವನ್ನು ನೀಡಿರಿ.
v  ತಪ್ಪಾಗಿ ಬರೆದ ಉತ್ತರ ಮತ್ತು ಕಾಗುಣಿತಗಳನ್ನು ಪುನಃ ಬರೆಯುವಂತೆ ಸೂಚಿಸಿರಿ.
v  ಮಿಂಚು ಪಟ್ಟಿಯಲ್ಲಿರುವ ಬರೆದ ಪದಗಳನ್ನು ಬಳಸಿ ಸ್ವಂತವಾಗಿ ಹತ್ತು ಸಾಲುಗಳ ಪ್ರಬಂಧ ಬರೆಯಲು ತಿಳಿಸಿರಿ.
ಪ್ರಾರಂಭದ ಹಂತದಲ್ಲಿ ಈ ರೀತಿಯ ಚಟುವಟಿಕೆಗಳನ್ನು ಕೊಡುವುದು ಶಿಕ್ಷಕರಿಗೆ ಕಷ್ಟವೆನಿಸ ಬಹುದು. ತಪ್ಪಿಲ್ಲದೆ ಬರೆಯುವುದನ್ನು ವಿದ್ಯಾರ್ಥಿಗಳಿಗೆ ಕಲಿಸಲು ಈ ಚಟುವಟಿಕೆ ನಿಜಕ್ಕೂ ಉಪಯುಕ್ತವಾದುದಾಗಿದೆ.
************

No comments:

Post a Comment