Saturday 23 May 2015

ದೋಷ ನಿದಾನ ಪರೀಕ್ಷೆ ಪ್ರಶ್ನೆ ಪತ್ರಿಕೆ-5

ದೋಷ ನಿದಾನ (ಸಾಮಥ್ರ್ಯ) ಪರೀಕ್ಷೆ
ಕನ್ನಡ ಪ್ರಥಮ ಭಾಷೆ
ಜೂನ್ ಮೊದಲವಾರ
ಒಟ್ಟು ಅಂಕಗಳು : 15                                      ಕಾಲಾವಧಿ : 45 ನಿಮಿಷಗಳು
1.  ಪಟ್ಟಿಯಲ್ಲಿರುವ ವ್ಯಾಕರಣಾಂಶಗಳನ್ನು  ಪಟ್ಟಿಯಲ್ಲಿರುವ ಉದಾಹರಣೆಗಳೊಂದಿಗೆ ಹೊಂದಿಸಿ ಅವುಗಳ ಕ್ರಮಾಕ್ಷರ ಸಹಿತ ಬರೆಯಿರಿ.                                                            3

                      ’                            
1) ಜೋಡುನುಡಿ                   )ಮಸಿಹಚ್ಚು
2) ಸರ್ವನಾಮ                     ) ಘಮಘಮ
3) ದ್ವಿರುಕ್ತಿ                         ) ಸರ್ಕಾರ
4)ನುಡಿಗಟ್ಟು                     ) ಸುತ್ತಣ ಲೋಕ                                       5) ಅನುಕರಣಾವ್ಯಯ                ) ಹಣ್ಣು ಹಂಪಲು
6) ಅನ್ಯದೇಶ್ಯ                    ) ಕೆಮ್ಮತ್ತ ಕೆಮ್ಮುತ್ತ
                              ) ಇವು
2.  ಕೆಳಗೆಕೊಟ್ಟಿರುವ ವಾಕ್ಯದಲ್ಲಿರುವ ಅಲಂಕಾರದ ಹೆಸರನ್ನು ತಿಳಿಸಿ ಸಮನ್ವಯಗೊಳಿಸಿರಿ.               2
 “ಕನ್ನಡನಾಡು ಭೂಮಿಗೆ ಇಳಿದು ಬಂದ ಸ್ವರ್ಗದಂತಿದೆ.”
3.  ಕೆಳಗೆಕೊಟ್ಟಿರುವ ಪದ್ಯ ಭಾಗಕ್ಕೆ ಪ್ರಸ್ಥಾರ ಹಾಕಿ ಗಣವಿಭಾಗ ಮಾಡಿ ಛಂದಸ್ಸಿನ ಹೆಸರನ್ನು ತಿಳಿಸಿರಿ.     2
ಪ್ರತಿನಿತ್ಯ ಕಲಿತ ಪಾಠವ
  ತಪ್ಪದೆ ಓದುತ ಒಲವಿನಲಿ ಗುರುಗಳುಪದೇ|
4.  ಕೆಳಗೆಕೊಟ್ಟಿರುವ ಗಾದೆಗಳಲ್ಲಿ ಒಂದನ್ನು  ಐದಾರು ವಾಕ್ಯಗಳಲ್ಲಿ ವಿಸ್ತರಿಸಿರಿ.                     2
ಮಾಡಿದ್ದುಣ್ಣೋ ಮಹರಾಯ
          ಹಾಸಿಗೆ ಇದ್ದಷ್ಟು ಕಾಲು ಚಾಚು.
5. ಬಾಗಲಕೋಟೆಯ ಸರ್ಕಾರಿ ಪ್ರೌಢಶಾಲೆಯ 10ನೆ ತರಗತಿಯ  ವಿಭಾಗದಲ್ಲಿ ಓದುತ್ತಿರುವ ಸಂಧ್ಯಾ/ ದಿವಾಕರ್ ಎಂದು ಭಾವಿಸಿ ಸೂಕ್ತಕಾರಣ ತಿಳಿಸಿ ಮುಖ್ಯೋಪಾಧ್ಯಾಯರಿಗೆ ರಜಾ ಪತ್ರ ಬರೆಯಿರಿ.                   3
ಅಥವಾ
ನೀವು ತಿಪಟೂರಿನ ಗಾಂಧೀನಗರದ ಸರಸ್ವತಿ /ನಾಗೇಶ್ ಎಂದು ಭಾವಿಸಿ ಮೈಸೂರಿನ ವಾಣಿವಿಲಾಸರಸ್ತೆಯಲ್ಲಿ ವಾಸವಾಗಿರುವ ತಂದೆ ರಾಮಯ್ಯನವರಿಗೆ ಪರೀಕ್ಷಾ ಸಿದ್ಧತೆಯನ್ನು ಕುರಿತು ಒಂದು ಪತ್ರ ಬರೆಯಿರಿ.
6. ಕೆಳಗೆ ಕೊಟ್ಟಿರುವ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕುರಿತು 8-10 ವಾಕ್ಯಗಳಿಗೆ ಮೀರದಂತೆ ಒಂದು ಕಿರು ಪ್ರಬಂಧ ಬರೆಯಿರಿ.                               3

                    -ಪುಸ್ತಕದ ಮಹತ್ವ.
                    -ಕಲೆಯ ಬೀಡು ಕರ್ನಾಟಕ
                    -ಸ್ವಾತಂತ್ರ್ಯ ದಿನಾಚರಣೆ
****************

No comments:

Post a Comment