Saturday 23 May 2015

ದೋಷ ನಿದಾನ ಪರೀಕ್ಷೆ ಪ್ರಶ್ನೆ ಪತ್ರಿಕೆ-6

ದೋಷ ನಿದಾನ (ಸಾಮಥ್ರ್ಯ) ಪರೀಕ್ಷೆ
ಕನ್ನಡ ಪ್ರಥಮ ಭಾಷೆ
ಜೂನ್ ಮೊದಲವಾರ
ಒಟ್ಟು ಅಂಕಗಳು : 15                                ಕಾಲಾವಧಿ : 30 ನಿಮಿಷಗಳು
  ಕೆಳಗಿನ ಪ್ರಶ್ನೆಗಳಿಗೆ ಅಥವಾ ಹೇಳಿಕೆಗಳಿಗೆ ನಾಲ್ಕು ಪರ್ಯಾಯಗಳನ್ನು ಸೂಚಿಸಲಾಗಿದೆಅತಿ ಸೂಕ್ತವಾದ ಪರ್ಯಾಯವನ್ನು ಆರಿಸಿ, ಕೊಟ್ಟಿರುವ ಜಾಗದಲ್ಲಿಯೇ ಕ್ರಮಾಕ್ಷರದೊಂದಿಗೆ ಪೂರ್ಣ ಉತ್ತರವನ್ನು ಬರೆಯಿರಿ. 1x15=15
1. ಕೀರ್ತಿ ಪದದ ತದ್ಭವರೂಪ:
   . ಕೀರುತಿ ಬಿ. ಕೀರ್ತೀ ಸಿ. ಕೀರೂತಿ ಡಿ. ಕೀರತಿ
2. ಜೀವ- ಪದದ ವಿರುದ್ಧಾರ್ಥಕರೂಪ :
   . ಸಜೀವ ಬಿ. ನಿರ್ಜೀವ ಸಿ. ಆಜೀವ ಡಿ. ಅಜೀವ
3. ನಾಮಪದದ ಮೂಲರೂಪ                                                       
   . ಧಾತು      ಬಿ. ಕ್ರಿಯಾಪ್ರಕೃತಿ   ಸಿ.ನಾಮಪ್ರಕೃತಿ   ಡಿ.ಪ್ರತ್ಯಯ                               
4. ಸರಸರ ಎಂಬುದು ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :
   . ಸಂಧಿ ಬಿ. ಸಮಾಸ ಸಿ. ಜೋಡುನುಡಿ ಡಿ. ಅನುಕರಣಾವ್ಯಯ
5. ದೇಶ ವಾವುದು ಜನರಾರು ನೀವು ಬಲ್ಲಿರಾ ವಾಕ್ಯದಲ್ಲಿ ಇರಬೇಕಾದ ಲೇಖನ ಚಿಹ್ನೆ:
   . ವಿವರಣಾತ್ಮಕ ಬಿ. ಉದ್ಧರಣ ಸಿ. ಪ್ರಶ್ನಾರ್ಥಕ ಡಿ. ಪೂರ್ಣವಿರಾಮ
6. ಅಮಾತ್ಯ- ಪದದ ಅರ್ಥ                                                        
   . ಅರಸ ಬಿ. ರಾಕ್ಷಸ ಸಿ. ಮಂತ್ರಿ ಡಿ. ಅಮೃತ
7. ಶಾಲೆಯಿಂದ - ಇಲ್ಲಿರುವ ವಿಭಕ್ತಿ :                                                   
   . ಚತುರ್ಥಿ ಬಿ. ದ್ವಿತೀಯ ಸಿ. ತೃತೀಯ ಡಿ. ಪಂಚಮಿ
8. ಭಳೆಗಾರ ಇದರ ಶುದ್ಧರೂಪ:
   . ಬಳೆಗಾರ ಬಿ. ಬಲೆಗಾರ ಸಿ. ಭಾಳೆಗಾರ ಡಿ. ಬಾಳೆಗಾರÉ
9. “ಮಗುವಿನ ಮಲ್ಲಿಗೆಯ ಮನಸ್ಸು”-ಇಲ್ಲಿ ಕಂಡು ಬರುವ ಅಲಂಕಾರ.  
   . ಉಪಮಾಲಂಕಾರ ಬಿ. ರೂಪಕಾಲಂಕಾರ ಸಿ. ಶ್ಲೇಷಾಲಂಕಾರ ಡಿ. ಉತ್ಪೇಕ್ಷಾಲಂಕಾರ
10. ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳು:                                  
   . ಹ್ರಸ್ವ ಬಿ. ದೀರ್ಘ ಸಿ. ಪ್ಲುತ ಡಿ. ಗುರು
11. ಕಾರಗಳ ಮುಂದೆ ಉಊ, ಇಈ, ಕಾರಗಳು ಪರವಾಗಿ ಬರುವ ಸಂಧಿ :            
   . ವೃದ್ಧಿ ಬಿ. ಯಣ್ ಸಿ. ಗುಣ ಡಿ. ಜಸ್ತ್ವ
12. ಕೆಳಗಿನ ಪದಗಳಲ್ಲಿ ವರ್ತಮಾನ ಕ್ರಿಯಾಪದ :
   ಎ. ಮಾಡಲಿ  ಬಿ. ಮಾಡುತ್ತಾನೆ ಸಿ. ಮಾಡಿದನು ಡಿ. ಮಾಡುವನು
13. ಕವಿ- ಪದದ ಅನ್ಯಲಿಂಗ:
   ಎ. ಕವಿಯಿತ್ರಿ ಬಿ ಕವಯಿತ್ರಿ ಸಿ. ಕವಯತ್ರಿ ಡಿ ಕವಿಯಿತ್ರಿ
14. ರಾಕ್ಷಸ - ಪದದ ಬಹುವಚನರೂಪ
   ಎ. ರಾಕ್ಷಸರು ಬಿ. ರಾಕ್ಷಸರುಗಳು ಸಿ. ರಾಕ್ಷಸಂದಿರು ಡಿ. ರಾಕ್ಷಸಗಳು
15. ಪದ್ಯರಚನಾ ಶಾಸ್ತ್ರವನ್ನು ಹೀಗೆನ್ನುತ್ತಾರೆ
   ಎ. ವ್ಯಾಕರಣ ಬಿ. ಛಂದಸ್ಸು ಸಿ. ಅಲಂಕಾರ ಡಿ. ಕಂದ   

******************

No comments:

Post a Comment