Tuesday 13 October 2015

ಅಪಠಿತ ಗದ್ಯ ಭಾಗದ ಚಟುವಟಿಕೆ-2

ಅಪಠಿತ ಗದ್ಯಭಾಗ
1)  ‘ಅಧ್ಯಯನಎಂದರೆ ತನಗೆ ತಿಳಿಯದ್ದನ್ನು ಸ್ವಂತ ಪರಿಶ್ರಮದಿಂದ ಚೆನ್ನಾಗಿ ತಿಳಿದುಕೊಳ್ಳುವುದು. ‘ಅಧ್ಯಾಪನವೆಂದರೆ ಪರಿಶ್ರಮದಿಂದ ತಾನು ತಿಳಿದದ್ದನ್ನು ಪುನಃ ಪರಿಶ್ರಮಪೂರ್ವಕವಾಗಿ ತಿಳಿಯದವರಿಗೆ ತಿಳಿಯಪಡಿಸುವುದು. ಎರಡುಕಾರ್ಯಗಳನ್ನೂ ಯಾವನು ಸಮರ್ಪಕವಾಗಿ, ಸಾರ್ಥಕವಾಗಿ, ಸಫಲವಾಗಿ ಮಾಡುತ್ತಾನೋ ಅವನುಅಧ್ಯಾಪಕ’. ಅಂಥವನ ಅಧ್ಯಯನ ಮತ್ತು ಅಧ್ಯಾಪನ ಎರಡೂ ಒಂದೇ ನಾಣ್ಯದ ಎರಡು ಮುಖ ಇದ್ದ ಹಾಗೆ. ಇದರಲ್ಲಿ ಯಾವ ಒಂದು ಸವಕಲು ಆದರೂ ಅವನ ನಾಣ್ಯ ಚಲಾವಣೆ ಆಗುವುದಿಲ್ಲ.
ಪ್ರಶ್ನೆಗಳು:
ಕನ್ನಡ ಪ್ರಥಮ ಭಾಷೆ
1.           ‘ಅಧ್ಯಯನಕ್ಕೂಅಧ್ಯಾಪನಕ್ಕೂ ಇರುವ ವ್ಯತಯಾಸವೇನು?
2.           ಯಾರ ನಾಣ್ಯ ಚಲಾವಣೆ ಯಾಗುವುದಿಲ್ಲ?ಏಕೆ?
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆ 
1.           ‘ಅಧ್ಯಯನಎಂದರೆ?
2.           ‘ಅಧ್ಯಾಪನಎಂದರೆ?
3.           ‘ಅಧ್ಯಾಪಕಎಂದರೆ ಯಾರು?
4.           ಒಂದೇ ನಾಣ್ಯದ ಎರಡು ಮುಖ ಇದ್ದ ಹಾಗೆ ಇರುವುದು ಯಾವುದು?

****************
2)   ರಾಷ್ಟ್ರಕವಿ, ಯುಗದಕವಿ, ಜಗದಕವಿ ಕುವೆಂಪುರವರು  ಭಾರತಜನನಿಯ ತನುಜಾತೆ ಎಂದು ಸಂಬೋಧಿಸಿರುವ ಕನ್ನಡಮ್ಮನಿಗೆ ವಿಶಿಷ್ಟವಾದ ಸಾಂಸ್ಕೃತಿಕ ಮಹತ್ವವಿದೆ. ನಾಡು ನುಡಿಯ ಪರಂಪರೆಯಿದೆ. ಸಂಗೀತ ಸಾಹಿತ್ಯ, ಕಲೆಗಳ ವೈಭವವಿದೆ. ಎಲ್ಲರ ಮನಸ್ಸನ್ನು ಸೂರೆಗೊಳ್ಳುವ ನಯನ ಮನೋಹರವಾದ ನೈಸರ್ಗಿಕ ಪ್ರದೇಶಗಳೂ, ಗತವೈಭವವನ್ನು ಬಿಂಬಿಸುವ ಐತಿಹಾಸಿಕ ಸ್ಥಳಗಳೂ ಕನ್ನಡತಾಯಿಯ ಸೊಬಗನ್ನು ಇಮ್ಮಡಿಗೊಳಿಸುವಂತಿವೆ.
ಶ್ರೀಸಾಮಾನ್ಯರು, ರಾಜ ಮಹಾರಾಜರು, ಕವಿಗಳು, ಸಾಧು ಸಂತರು, ಆಚಾರ್ಯವರ್ಯರು, ಗುರುವರೇಣ್ಯರು, ಚಿಂತಕರು, ಕಲಾವಿಧರು, ಶಿಲ್ಪಿಗಳು, ಗಾಯಕರು ಹೀಗೆ ಅನೇಕರು ಅಧ್ಯಾತ್ಮ, ಸಂಗೀತ, ಸಾಹಿತ್ಯ, ಕಲೆ, ವಾಸ್ತುಶಿಲ್ಪವನ್ನೊಳಗೊಂಡಂತೆ ವಿವಿಧ ಕ್ಷೇತ್ರಗಳಿಗೆ ಮಹತ್ವವಾದ ಕೊಡುಗೆಗಳನ್ನು ನೀಡಿದ್ದಾರೆ. ಸಾಂಸ್ಕೃತಿಕವಾಗಿ ಬೆಳೆಸಿದ್ದಾರೆ. ಇವೆಲ್ಲವೂ ಕನ್ನಡನಾಡಿಗೆ ಅನನ್ಯತೆಯನ್ನು ತಂದುಕೊಟ್ಟಿದೆ. ಈ ಅನನ್ಯತೆಯೇ ಕನ್ನಡದ ಮೊಟ್ಟಮೊದಲ ಕೃತಿಯ ಕವಿರಾಜಮಾರ್ಗಕಾರರಿಂದ ಇಂದಿನವರೆಗೂ ಎಲ್ಲ ಕವಿಗಳ ಮನಸ್ಸನ್ನು ಸೂರೆಗೊಂಡಿದೆ.
ಪ್ರಶ್ನೆಗಳು:
ಕನ್ನಡ ಪ್ರಥಮ ಭಾಷೆ
1.      ಕನ್ನಡತಾ ನಾಡಿನ ಸಾಂಸ್ಕತಿಕ ಮಹತ್ವಕ್ಕೆ ಕಾರಣಗಳೇನು?
2.     ಕನ್ನಡನಾಡಿಗೆ ಅನನ್ಯತೆಯನ್ನು ತಂದುಕೊಟ್ಟಿರುವ ಅಂಶಗಳಾವುವು?
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆ 
1.         ಕುವೆಂಪುರವರು ಕನ್ನಡಮ್ಮನನ್ನು ಏನೆಂದು ಸಂಬೋಧಿಸಿದ್ದಾರೆ?
2.        ಕನ್ನಡಮ್ಮನ ಸೊಬಗನ್ನು ಯಾವುವು ಇಮ್ಮಡಿಗೊಳಿಸಿದೆ?
3.        ಕನ್ನಡದ ಮೊಟ್ಟಮೊದಲ ಕೃತಿಯ ಯಾವುದು?
4.        ವಿವಿಧ ಕ್ಷೇತ್ರಗಳಿಗೆ ಮಹತ್ವವಾದ ಕೊಡುಗೆಗಳನ್ನು ನೀಡಿರುವವರು ಯಾರು ಯಾರು?
*********************
3)  ಮಾನವನು ಸಮಾಜದ ಪುರೋಭಿವೃದ್ಧಿಗಾಗಿ ಅನೇಕಾನೇಕ ಕಟ್ಟುಪಾಡುಗಳನ್ನು, ವಿಧಿ ವಿಧಾನಗಳನ್ನು, ನೀತಿ ನಿಯಮಗಳನ್ನು ರೂಪಿಸಿಕೊಳ್ಳತ್ತಾ ಬಂದನು. ತನ್ನ ಮೇಧಾಶಕ್ತಿಯಿಂದ ಜೀವನವು ಸುಲಲಿತವೂ ಸುಂದರವೂ ಆಗುವಂತೆ ಸಾಧನೆಗಳ ಸರಮಾಲೆಯನ್ನೇ ನಿರ್ಮಿಸಿದನು. ಈ ಎಲ್ಲವನ್ನೂ ಅನೇಕಾನೇಕ ಮಾಧ್ಯಮಗಳ ಮೂಲಕ ದಾಖಲಿಸುತ್ತಾ ಬಂದನು. ಆ ದಾಖಲೆಗಳಲ್ಲಿ ಪ್ರಾಥಮಿಕವೂ ಅಧಿಕೃತವೂ ಆದ ದಾಖಲೆಗಳೇ ಶಾಸನಗಳು. ನಾಡಿನ ಸಾಂಸ್ಕೃತಿಕ, ಐತಿಹಾಸಿಕ, ಸಾಮಾಜಿಕ, ಸಾಹಿತ್ಯಿಕ, ಮಹತ್ವಗಳನ್ನು ಸಾರುವ ಅಧಿಕೃತ ದಾಖಲೆಗಳೆಂದರೆ ಶಾಸನಗಳು.
ಶ್ರೇಷ್ಟ ಕವಿಗಳೂ ಹಲವು ಶಾಸನಗಳನ್ನು ಬರೆದಿದ್ದಾರೆ. ಕವಿಚಕ್ರವರ್ತಿ ರನ್ನನ ಸ್ವಹಸ್ತಾಕ್ಷರವು ಶ್ರವಣಬೆಳ್ಗೊಳದ ಚಿಕ್ಕ ಬೆಟ್ಟದ ಮೇಲೆ ಇಂದಿಗೂ ಇದೆ. ಹಂಪಿಯಲ್ಲಿ ದೊರೆತಿರುವ ಒಂದು ಶಾಸನ ಚಾಮರಸ ಕವಿ 1430 ಸುಮಾರಿನಲ್ಲಿ ವಾಸವಾಗಿದ್ದ ಪ್ರದೇಶವನ್ನು ಗುರುತಿಸಲು ಸಹಾಯಕವಾಗಿದೆ. ಹೊಯ್ಸಳರ ಕಾಲದಲ್ಲಿ ಜಕಣಾಚಾರಿ, ಡಕಣಾಚಾರಿ, ಮಲ್ಲಿತಮ್ಮರಂತ ಶಿಲ್ಪಿಗಳು ಇದ್ದರೆಂದು ಅವರು ಕೆತ್ತಿದ ವಿಗ್ರಹಗಳ ಪಾದ ಪೀಠಗಳ ಮೇಲೆ ದೊರೆತಿರುವ ಹೆಸರುಗಳಿಂದ ತಿಳಿದು ಬರುತ್ತದೆ. ಜಿನವಲ್ಲಭನು ತನ್ನ ಅಣ್ಣನ ಹೆಸರಿನ್ನು ಕಟ್ಟಿಸಿದ ಕವಿತಾಗುಣಾರ್ಣವ ತಟಾಕ ಎಂಬ ಕೆರೆ ಇಂದಿಗೂ ಇದೆ. ಈ ವಿಚಾರವನ್ನು ಹೇಳುವ ಆಂಧ್ರದ ಕರೀಂನಗರ ಜಿಲ್ಲೆಯ ಕುರಿಕ್ಯಾಲು ಶಾಸನ ಪಂಪನ ಇತಿವೃತ್ತಾಂತದ ಬಗೆಗೂ ಮಾಹಿತಿಯನ್ನು ನೀಡುತ್ತದೆ.
ಪ್ರಶ್ನೆಗಳು:
ಕನ್ನಡ ಪ್ರಥಮ ಭಾಷೆ
1.  ಶಾಸನಗಳನ್ನು ಮಾನವನ ಸಾಧನೆಗಳನ್ನು ಸಾರುವ ಅಧಿಕೃತ ದಾಖಲೆಗಳೆಂದು ಕರೆಯಲು ಕಾರಣಗಳೇನು?
2. ಯಾವ ಯಾವ ಶಾಸನಗಳು ಯಾವ ಯಾವ ವಿಚಾರಗಳನ್ನು ತಿಳಿಸುತ್ತವೆ?
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆ 
1.  ರನ್ನನ ಸ್ವಹಸ್ತಾಕ್ಷರ ಇಂದಿಗೂ ಎಲ್ಲಿ ಕಂಡುಬರುತ್ತದೆ?
2. ಹೊಯ್ಸಳರ ಕಾಲದ ಶಿಲ್ಪಿಗಳು ಯಾರು?
3. ಪಂಪನ ಇತಿವೃತ್ತಾಂತವನ್ನು ತಿಳಿಸುವ ಶಾಸನ ಯಾವುದು?
4.  ಜಿನವಲ್ಲಭನು ತನ್ನ ಅಣ್ಣನ ಹೆಸರಿನಲ್ಲಿ ಕಟ್ಟಿಸಿದ ಕೆರೆ ಯಾವುದು?
*******************

No comments:

Post a Comment