Sunday 21 June 2020

ಮುಂಜಾವು

ತಂದಾನಿ ತಾನೊ ತಾನಿ ತಂದಾನೊ…...

ರಂಗು ರಂಗೇರಿದೆ ನೋಡ|
ಮೂಡಲಿನಾಗ ಕೆಂಪ್ಹೆಂಗಿದೆ||
ಸೂರ್ಯನ ಅಂದನೋಡು
ಅಮ್ಮನ ಹಣೆ ಕುಂಕುಮದಂಗಿದೆ…. ತಂದಾನಿ ತಾನೊ ತಾನಿ ತಂದಾನೊ…...||

ಗೂಡಬಿಟ್ಟು ಹಕ್ಕಿ ಹಾರಿದೆ|
ಆಗಸದಾಗ ಚಿತ್ರ ಮೂಡಿದೆ|
ಚಿಲಿಪಿಲಿ ಅಂತ ಗಾನಗೈದಿದೆ|
ಹಕ್ಕಿಹಾಡು ಮನವ ತಣಿಸಿದೆ…. ತಂದಾನಿ ತಾನೊ ತಾನಿ ತಂದಾನೊ……..||

ಅಕ್ಕ ಅಂಗಲ್ದಾಗ ರಂಗೋಲಿ ಬಿಟ್ಯಾಳಾ|
ಅವ್ವ ರಾಗಿ‌ಮುದ್ದೆ ಬಸ್ಸಾರ್ ಮಾಡ್ಯಾಳಾ|
ಅಪ್ಪ ನೇಗಿಲ ಹೊತ್ತು ತೋಟಕ್ಹೊರ್ಟ್ಯಾನಾ|
ಜೋಡೆತ್ತಿನ್ಗಾಡಿಮೇಲೆ ಸಿದ್ದ ಹೊರ್ಟ್ಯಾನಾ……. ತಂದಾನಿ ತಾನೊ ತಾನಿ ತಂದಾನೊ……….||

ಬಾರು ಕೋಲ ಬೀಸಿ ಸಿದ್ದ ಗಾಡಿ ಹೊಡ್ದ್ಯಾನಾ|
ಎತ್ತ ಕೊಳ್ಳಗಂಟಿ ಘಣ ಘಣ ಸದ್ದಮಾಡ್ಯಾವಾ|
ಗಂಟೆ ಸದ್ದಕೇಳಿ ಹಸುಕರ ಅಂಬಯೆಂದ್ಯಾವಾ|
ಅವ್ವ ತಂಬ್ಗಿತುಂಬ ನೊರೆ ಹಾಲು ಕರೆದ್ಯಾಳಾ|
ಬಾರೆ ನಾವು ನೊರಿ ಹಾಲು ಕುಡ್ಯಾವಾ ಹಾಲು ಕುಡ್ಯಾವ…... ತಂದಾನಿ ತಾನೊ ತಾನಿ ತಂದಾನೊ……..||
******"

1 comment:

  1. ನಿಮ್ಮ ಬ್ಲಾಗ್ ತುಂಬಾ ಹಿಡಿಸಿದೆ. ಈಗಷ್ಟೆ ಯಾವ ಮೋಹನ ಮುರಳಿ ಪೋಸ್ಟ್ ವ್ಯಾಖ್ಯಾನ ಓದಿದೆ. ಧನ್ಯವಾದಗಳು.

    ReplyDelete