Friday 12 June 2020

ನಾ ಕಸ್ತೂರಿಯವರ ನೆನಪು

ಹಾಸ್ಯ ಎಂದೊಡನೆ ನೆನಪಿಗೆ ಬರುವುದು ಬೀಚಿ, ನಾ ಕಸ್ತೂರಿ, ರಾ.ಶಿ ಕೊರವಂಚಿ ಅಪರಂಜಿ ಇತ್ತೀಚಿನ ನಗೆಮುಗುಳು ಮುಂತಾದವು ನಗೆಗಡಲಿನಲ್ಲಿ ತೇಲಿಸುತ್ತವೆ.
ತಮ್ಮನ್ನೇ ಗೇಲಿ ಮಾಡಿಕೊಂಡು ಪರಿಶುದ್ಧ ಹಾಸ್ಯವನ್ನು ಮಾಡುವ ಎಷ್ಟೋ ಪ್ರಕರಣಗಳನ್ನು ಕೇಳಿದ್ದೇವೆ. ನೋಡಿದ್ದೇವೆ. ಓದಿದ್ದೇವೆ. ತಕ್ಷಣಕ್ಕೆ ನೆನಪಾಗುವುದು ನಾ ಕಸ್ತೂರಿಯವರು "ನನಗೆ ತುಂಬಾ ಸಂಕಟವನ್ಬುಂಟುಮಾಡಿದ ಪ್ರಸಂಗ"ವೆಂದು ತಮ್ಮ ಬಗೆಗೆ ಹೇಳಿ ಕೊಂಡಿರುವ ಪ್ರಕರಣಗಳು. 
ಒಮ್ಮೆ ಕಸ್ತೂರಿಯವರು ಅನಾರೋಗ್ಯ ನಿಮೆತ್ತ  ವೈದ್ಯರ ಬಳಿಗೆ ಹೋಗಬೇಕಾದ ಪ್ರಸಂಗ ಬಂದಿತು. ಮಲ, ಮೂತ್ರ. ರಕ್ತವನ್ನು ಪರೀಕ್ಷೆ ಮಾಡಿಸಲು ವೈದ್ಯರು ಸಲಹೆ ಮಾಡಿದರು. 
ಬೆಳಗ್ಗೆ ಎದ್ದೊಡನೆ ಪರೀಕ್ಷೆಯ ಸಲುವಾಗಿ ಡಬ್ಬಿಯಲ್ಲಿ ಮಲವನ್ನು ಸಂಗ್ರಹಿಸಿ ಅದರ ಮೇಲೆ 'ಕಸ್ತೂರಿ' ತಮ್ಮ ಹೆಸರನ್ನು ಬರೆಯ ಬೇಕಾಗಿ ಬಂದ ಸನ್ನಿವೇಶ. 
ಮತ್ತೊಂದು ಪ್ರಕರಣ ಒಂದು ದಿನ ಕಸ್ತೂರಿಯವರು ಬಹಳ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಇಂಗ್ಲಿಷ್ ನೋಟ್ಸ್ ಅನ್ನು ತರಗತಿಯಲ್ಲಿ ವಿದ್ಯಾರ್ಥಿಗಳು ಲಪಟಾಯಿಸಿದ್ದು. ನೋಟ್ಸನ್ನು ವಿದ್ಯಾರ್ಥಿಗಳು ಕದ್ದಿರುವುದನ್ನು ತಿಳಿದ ಸಹೋದ್ಯೋಗಿಗಳು ಕಸ್ತೂರಿಯವರಿಗೆ ಸಾಂತ್ವಾನದ ನುಡಿಗಳನ್ನು ಹೇಳಲು ಮುಂದಾದರು. ಕಸ್ತೂರಿಯವರು ಒಂದು ಮುಗುಳ್ನಗೆ ಬೀರಿ "ವಿದ್ಯಾರ್ಥಿಗಳು ಹಿಂದೆಯೇ ನನಗೆ ಬುದ್ದಿಕಲಿಸಿದ್ದಾರೆ. ಚಿಂತಿಯಿಲ್ಲ ನಾಳೆ ಬೆಳಗಾಗುವುದರೊಳಗೆ ಅದು ನನ್ನ ಮೇಜಿನ ಮೇಲಿರುತ್ತದೆ" ಎಂದರು. ಅವರ ಮಾತು ಹುಸಿಯಾಗಲಿಲ್ಲ. ಎಲ್ಲರಿಗೂ ಆಶ್ಚರ್ಯ ಕುತೂಹಲದಿಂದ ತೆಗೆದು ನೋಡಿದರೆ ಕಸ್ತೂರಿಯವರು ಇಂಗ್ಲಿಷ್ ನೋಟ್ಸನ್ನು ಮಲಯಾಳಿಯಲ್ಲಿ ಬರೆದಿಟ್ಟಿದ್ದರು. ಇಡೀ ಕೋಠಡಿಯೇ ನಗೆಗಡಲಿನಲ್ಲಿ ತೇಲಿಹೋಯಿತು.

1 comment:

  1. ಪದ್ಮ ಮೇಡಂ ತುಂಬ ಚೆನ್ನಾಗಿದೆ ಹಾಗೂ ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿದೆ.
    ಕೆಲವನ್ನು ನಾನು ನನ್ನ ತರಗತಿಯಲ್ಲಿ ಬಳಸಬಹುದೇ?
    ನಾನು ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ

    ReplyDelete