Wednesday 3 June 2015

ದೋಷ ನಿದಾನ ಪರೀಕ್ಷೆ ಪ್ರಶ್ನೆ ಪತ್ರಿಕೆ-8

ದೋಷ ನಿದಾನ (ಸಾಮಥ್ರ್ಯ) ಪರೀಕ್ಷೆ
ಕನ್ನಡ ಪ್ರಥಮ ಭಾಷೆ
ಜೂನ್ ಮೊದಲವಾರ
ಒಟ್ಟು ಅಂಕಗಳು : 15                                      ಕಾಲಾವಧಿ : 40 ನಿಮಿಷಗಳು


ಕೆಳಗಿನ ಪ್ರಶ್ನೆಗಳಿಗೆ ಸೂಚನೆಗೆ ಅನುಗುಣವಾಗಿ ಉತ್ತರ ಬರೆಯಿರಿ.                         10X1=10
1.  ವ್ಯಂಜನಕ್ಕೆ ಸ್ವರಸೇರಿ ಆಗುವ ಅಕ್ಷರವನ್ನು ಏನೆಂದು ಕರೆಯುತ್ತಾರೆ? ಉದಾಹರಣೆಯೊಂದಿಗೆ ತಿಳಿಸಿ.
2. `ಒರೆಗಲ್ಲು - ಸಂಧಿ ಬಿಡಿಸಿ ಹೆಸರಿಸಿ.
3. ರೂಢ, ಅಂಕಿತ ಮತ್ತು ಅನ್ವರ್ಥನಾಮಗಳನ್ನು ಉದಾಹರಣೆಯೊಂದಿಗೆ ತಿಳಿಸಿ.
4. ದ್ವಿತೀಯಾ ವಿಭಕ್ತಿ ಪ್ರತ್ಯಯವನ್ನೊಳಗೊಂಡ ಎರಡು ಪದವನ್ನು ಬರೆಯಿರಿ.
5. ನಿಮ್ಮ ಹೆಸರನ್ನು ಬರೆದು ಸ್ವರ ವ್ಯಂಜನವನ್ನು ಬಿಡಿಸಿ ಬರೆಯಿರಿ.
6. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳನ್ನು ಬರೆಯಿರಿ.
7. ಧಾತು ಎಂದರೇನು? ಉದಾಹರಣೆಯೊಂದಿಗೆ ತಿಳಿಸಿ.
8. ಮನೆಮಠಗಳನ್ನು ಬಿಟ್ಟ ಭಯೋತ್ಪಾದಕರು ಶತ್ರುವಿನ ಗಡಿಯೊಳಗೆ ನುಸುಳಲು ಮತ್ತೆಮತ್ತೆ ಹೊಂಚು ಹಾಕುತ್ತಾರೆ. -  ವಾಕ್ಯದಲ್ಲಿ ಗೆರೆ ಎಳೆದ ಪದದ ವ್ಯಾಕರಣಾಂಶವನ್ನು ತಿಳಿಸಿರಿ.
9. ‘ನಾಕ ಪದದ ಅರ್ಥ ಮತ್ತು ವಿರುದ್ಧಾರ್ಥಕ ರೂಪವನ್ನು ಬರೆಯಿರಿ.
10. ನಿಮಗೆ ಗೊತ್ತಿರುವ ಯಾವುದಾದರೂ ಎರಡು ಗಾದೆಗಳನ್ನು ಬರೆಯಿರಿ.
11. ಸೂಕ್ತ ಕಾರಣ ತಿಳಿಸಿ ಶಾಲಾ ಮುಖ್ಯೋಪಾಧ್ಯಾಯರಿಗೆ  ಒಂದು ರಜಾ ಚೀಟಿಯನ್ನು ಬರೆಯಿರಿ.  3X1=3
12. ಗ್ರಂಥಾಲಯವನ್ನು ಕುರಿತು 7-8 ಸಾಲುಗಳಲ್ಲಿ ಬರೆಯಿರಿ.                               2X1=2

****************

No comments:

Post a Comment