Monday 28 March 2016

ಅಪಠಿತ ಗದ್ಯಭಾಗದ ಚಟುವಟಿಕೆಗಳು 5

1.  ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ

ಜಗತ್ತಿನಲ್ಲಿ ಅನುಭವ, ಭಾವನೆ, ಆಲೋಚನೆ, ಜ್ಞಾನ-ವಿಜ್ಞಾನಗಳು ವಿಕಾಸಗೊಂಡಂತೆಲ್ಲ ಅವುಗಳಿಗೆ ಸಮಾನವಾಗಿ ಭಾಷೆಯೂ ಬೆಳೆಯಿತ್ತದೆ. ಹೊಸ ಪದಗಳು ಸೃಷ್ಟಿಯಾಗುತ್ತವೆ. ಹಳೆಯ ಪದಗಳು ನವೀಕರಣಗೊಳ್ಳುತ್ತವೆ. ಗೆಡ್ಡೆ-ಗೆಣಸು, ಹಣ್ಣು- ಹಂಪಲುಗಳನ್ನು, ಹಸಿಮಾಂಸವನ್ನು ತಿಂದು ಮೃಗಗಳ ಮಧ್ಯೆ ಕಾಡಿನ ಗವಿ-ಗುಹೆಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ಬೆಂಕಿ ಬೇಸಾಯಗಳನ್ನು ಕಂಡುಕೊಂಡು, ಗುಡಿಸಲು ಕಟ್ಟಿಕೊಂಡು, ಗುಂಪುಗುಂಪಾಗಿ ವಾಸಿಸಲು ತೊಡಗಿದಾಗ, ಅವನ ಜೀವನ ವಿಧಾನ ಧೋರಣೆಗಳು ಬದಲಾಗುತ್ತವೆ. ಬದಲಾದ ಈ ಜೀವನ ವಿಧಾನವನ್ನು ನಾಗರಿಕ ಎಂದು ಕರೆಯಲಾಗುತ್ತದೆ. ನಾಗರಿಕ ಜೀವನ ಸುಂದರವಾಗುತ್ತಿದ್ದಂತೆ ಬುದ್ಧಿ, ಭಾವ, ಕಲ್ಪನೆ ಮೊದಲಾದ ಅವನ ಆಂತರಿಕ ಶಕ್ತಿಗಳು ವಿಶ್ವ ಚೈತನ್ಯದ ಪ್ರತೀಕಗಳೆನ್ನುವಂತೆ ವಿಕಾಸಗೊಳ್ಳುತ್ತವೆ. ಮಾನವ ಚೇತನದ ಸಾರ ಸರ್ವಸ್ವದಂತಿರುವ ಶಾಂತಿ ಶ್ರೇಯಸ್ಸುಗಳಗೆ ಕಾರಣವಾದ ಈ ವಿಕಾಸ ಕ್ರಮವನ್ನು ಸಂಸ್ಕೃತಿ ಎಂದು ಗುರುತಿಸಲಾಗುತ್ತದೆ. ಇಂಗ್ಲೀಷಿನಲ್ಲಿ ಅದಕ್ಕೆ ‘ಕಲ್ಚರ್’ ಎಂದು ಹೆಸರು. ನೂರು ನೂರೈವತ್ತು ವರ್ಷಗಳಿಂದೀಚೆಗೆ ಆ ಪದ ಬಳಕೆಯಲ್ಲಿದ್ದರೂ ಅಂತಃಶ್ಚೇತನ ವಿಕಾಸಕ್ರಮ ಮನುಷ್ಯನೊಂದಿಗೆ ಪ್ರಾರಂಭವಾಗಿರಬೇಕು.
ಸಮ್ಯಕ್ ಕರಣ, ಸಮ್ಯಕ್ ಕೃತಿ ಸಂಸ್ಕೃತಿ. ನಮ್ಮ ಜೀವನವನ್ನು ಸಾಧುವನ್ನಾಗಿ ಮಾಡಿಕೊಳ್ಳುವ ವಿಧಾನವೇ ಸಂಸ್ಕೃತಿ. ಎಂದು ಹೇಳಬಹುದಾಗಿದೆ.
ಪ್ರಥಮ ಭಾಷೆ ಕನ್ನಡ
                                                                  2 X 2=4
1.      ಯಾವುದನ್ನು ಸಂಸ್ಕೃತಿ ಎಂದು ಗುರುತಿಸಲಾಗುತ್ತದೆ?
2.     ನಾಗರಿಕ ಜೀವನವು ಆರಂಭವಾದುದು ಹೇಗೆ?
ದ್ವಿತೀಯ ಭಾಷೆ ಕನ್ನಡ
                                                                  1 X 4=4
1.      ಭಾಷೆ ಹೇಗೆ ಬೆಳೆಯಿತ್ತದೆ?
2.     ಮೇಲಿನ ವಾಕ್ಯವೃಂದದಲ್ಲಿರುವ ಜೋಡು ನುಡಿಗಳಾವುವು?
3.     ಸಂಸ್ಕೃತಿ ಎಂದರೇನು?
4.     ಮಾನವನ ಆಂತರಿಕ ಶಕ್ತಿಗಳಾವುವು?

 ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ

ಯಾವ ಕುಶಲಕರ್ಮದಿಂದ ವಸ್ತುವಿನಲ್ಲಿ ಸೌಂದರ್ಯ ಗುಣವು ಉತ್ಪನ್ನವಾಗುವುದೋ ಅದಕ್ಕೆ ಕಲೆಯೆಂದು ಹೆಸರು. ಈ ಕಲೆಯು ಒಮ್ಮೊಮ್ಮೆ ವಸ್ತುವಿನ ಉಪಯುಕ್ತತೆಯನ್ನುಹೆಚ್ಚಿಸುತ್ತತದೆ. ಆಗ ಅದು ಉಪಯೋಗಿ ಕಲೆ ಎನಿಸುವುದು. ಇದು ಕುಂಬಾರಿಕೆ, ಕಂಬಾರಿಕೆ, ಬಡಗಿತನ ಇತ್ಯಾದಿ ಔದ್ಯೋಗಿಕ ಕಲೆಗಳಲ್ಲಿ ಸಮಾವೇಶವಾಗಿ ಹೋಗಿದೆ. ಇನ್ನೊಂದು ಲಲಿತಕಲೆ. ಇದು ಮನಸ್ಸಿಗೆ ಆನಂದವನ್ನುಂಟು ಮಾಡುವುದು. ಇದರಲ್ಲಿ ವಾಸ್ತು, ಮೂರ್ತಿ, ಚಿತ್ರ, ಸಂಗೀತ, ಲೇಖನ ಮೊದಲಾದ ಕಲೆಗಳು ಸೇರುತ್ತವೆ. ಕಲೆಯ ಈ ಎರಡು ಅಂಗಗಳು ಮಾನವನ ಉನ್ನತಿಗೂ, ವಿಕಾಸಕ್ಕೂ ಅತ್ಯವಶ್ಯಕವಾಗಿವೆ. ಒಂದು ನಮ್ಮ ಅವಶ್ಯಕತೆಗಳನ್ನು ಈಡೇರಿಸಿ, ಶಾರೀರಿಕ, ಆರ್ಥಿಕ ಉನ್ನತಿಯನ್ನು ಸಾಧಿಸುವುದು ಹಾಗೂ ಇನ್ನೊಂದು ಅಲೌಕಿಕ ಆನಂದವನ್ನು ಒದಗಿಸಿ, ಹೃದಯದ ಬೆಳವಣಿಗೆಯನ್ನುಂಟು ಮಾಡುವುದು. ಆದ್ದರಿಂದ ಇವು ಜನಾಂಗದ ಪ್ರಗತಿಯ ಪ್ರತೀಕಗಳಾಗಿವೆ. ಆದರ್ಶದ ನಿದರ್ಶನಗಳಾಗಿವೆ. ಭಾರತೀಯರ ಮನೋಧರ್ಮ ಅಧ್ಯಾತ್ಮ ಪರವಾದುದು, ಅದು ಅವರ ಕಲೆಗಳಲ್ಲಿ ವ್ಯಕ್ತವಾಗಿದೆ. ಭಾರತೀಯರ ಜೀವನ, ಧರ್ಮ, ಸಂಸ್ಕೃತಿಗಳನ್ನು ಆ ಕಲೆಗಳು ಪ್ರತಿಬಿಂಬಿಸುತ್ತವೆ.
ಪ್ರಥಮ ಭಾಷೆ ಕನ್ನಡ
                                                                                       2 X 2=4
1.      ಉಪಯೋಗಿ ಕಲೆ ಎಂದರೇನು? ಉದಾಹರಣೆಯೊಂದಿಗೆ ವಿವರಿಸಿ.
2.     ಕಲೆಗಳು ಜನಾಂಗದ ಪ್ರಗತಿಯ ಪ್ರತೀಕಗಳಾಗಿವೆ ಎನ್ನುವುದನ್ನು ವಿವರಿಸಿ.
ದ್ವಿತೀಯ ಭಾಷೆ ಕನ್ನಡ
                                                                                       1 X 4=4
1.      ಕಲೆ ಎಂದರೇನು?
2.     ಭಾರತೀಯ ಮನೋಧರ್ಮವನ್ನು ಯಾವುದು ಪ್ರತಿಬಿಂಬಿಸುತ್ತವೆ?
3.     ಔದ್ಯೋಗಿಕ ಕಲೆಗಳಾವುವು?
4.     ಅಲೌಖಿಕ ಆನಂದವನ್ನು ಒದಗಿಸುವ ಕಲೆಗಳಾವುವು?

 ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ

ದ್ವಿತೀಯ ಭಾಷೆ ಕನ್ನಡ
                                                                  1 X 4=4
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ತುಂಬ ಮಹತ್ವದ ಸ್ಥಾನ ಪಡೆದಿವೆ. ಅವು ನಮ್ಮ ಧಾರ್ಮಿಕ ಶ್ರದ್ಧೆಯ ಸಂಕೇತವಾಗಿ ಶತಮಾನಗಳಿಂದಲೂ ಉಳಿದುಕೊಂಡು ಬಂದಿವೆ. ಹಬ್ಬಗಳಿಗೆ ನಂಬಿಕೆ ಹಾಗೂ ಆಚರಣೆ ಎಂಬ ಎರಡು ಮುಖಗಳಿದ್ದು, ಅವು ಪರಸ್ಪರ ಪೂರಕ ಅಂಶಗಳಾಗಿವೆ. ನಂಬಿಕೆ ಧೃಡವಾಗಿದ್ದರೆ ಮಾತ್ರ ಆಚರಣೆ ಫಲಪ್ರದವಾಗಲು ಸಾಧ್ಯ. ಇಂಥ ನಂಬಿಕೆಯುಳ್ಳ ಭಾರತೀಯರು ಅನೇಕ ಹಬ್ಬಗಳನ್ನು ಆಚರಿಸಿಕೊಂಡು ಬಂದಿದ್ದಾರೆ.
1.     ಹಬ್ಬಗಳು ಯಾವುದರ ಸಂಕೇತವಾಗಿವೆ?
2.    ಆಚರಣೆಯು ಫಲಪ್ರದವಾಗುವುದು ಯಾವಾಗ?
3.    ಶತಮಾನಗಳಿಂದಲೂ ಉಳಿದುಕೊಂಡು ಬಂದಿರುವುದು ಯಾವುದು?

4.    ಹಬ್ಬಗಳಿಗಿರುವ ಎರಡು ಮುಖಗಳಾವುವು?

No comments:

Post a Comment