Tuesday 31 March 2020

ವರ್ಣಮಾಲೆಯ ಕೋವಿಡ್ 19

ಯ್ಯಯ್ಯೋ ಎಂಥ ಸ್ಥಿತಿ ಬಂತು ಎಲ್ಲ ಜನಕೆ
ವರಿಸಿದೆ ಭಯಾನಕ ರೋಗದ ಭೀತಿ ಜಗಕೆ
ರಲಿಲ್ಲ ಹಿಂದೆಂದು ಕಸಿವಿಸಿ ಈ ಪರಿ ಮನಕೆ
ಗ ಗೃಹಬಂಧನ ಒಂದೇ ಮದ್ದಂತೆ ಇದಕೆ
ಳಿಯುವೆವೇ ಅಳಿಯದಂತೆಂಬ ಪ್ರಶ್ನೆಯೆದ್ದಿದೆ
ಹಿಸಲಾಗದ ಸಂಕಟವನಿದು ತಂದೊಡ್ಡಿದೆ
ಣಾತ್ಮಕ ಚಿಂತನೆಯ ಮಾಡದಂತಿರ ಬೇಕಿದೆ
ಲ್ಲರೂ ಶಾಂತಿಯಿಂದಲೇ ಸಹಕರಿಸ ಬೇಕಿದೆ
ನು ಕರೋನದ ಮರ್ಮವೆಂದರಿಯ ಬೇಕಿದೆ
ಕ್ಯತೆಯಿಂದೆಲ್ಲವನೆದುರಿಸಲಣಿಯಾಗ ಬೇಕಿದೆ
ಬ್ಬೊಬ್ಬರನು ಒಂದೊಂದು ಪರಿಯಲಿ ಕಾಡುತಿದೆ
ದಲಿಲ್ಲ ಪರೀಕ್ಷೆಗಾಗಿ ಬರೆಯಲಿಲ್ಲ ಪಾಸಾಗಿದೆ
ಷಧವೆ ಇಲ್ಲದ ರೋಗವಿದೆಂದರಿಯ ಬೇಕಿದೆ
ಅಂತಸ್ತಿನ ಹಂಗುತೊರೆದು ಒಂದಾಗ ಬೇಕಿದೆ
ಆಃ ಇಂಥ ರೋಗದಿಂದ ಜಗಕೆ ಮುಕ್ತಿಬೇಕಿದೆ
ನಿಕರವಿಲ್ಲದೆ ಎಲ್ಲ ದೇಶಗಳೊಳಗೆ ನುಗ್ಗಿದೆ
ಗದ ವೇಗಕ್ಕಿಂತ ವೇಗವಾಗಿದು ಚಲಿಸುತ್ತಿದೆ
ಡಿಯ ಭದ್ರಗೊಳಿಸಿಕೊಳ್ಳುವ ಕಾಲಬಂದಿದೆ
ರ್ಷಣೆಯ ಮಾಡಿಕೊಳ್ಳದೆ ಒಂದಾಗಬೇಕಿದೆ
ಲಿಸದಂತೆ ಎಲ್ಲಿಯು ಇರುವಲ್ಲೇ ಇರಬೇಕಿದೆ
ತ್ರದಲ್ಲಿ ಸಭೆ ಸಮಾರಂಭ ನಡೆಯದಂತಾಗಿದೆ
ನತೆಯ ಕೈಯಲ್ಲೆ ಅಳಿವು ಉಳಿವು ಸೇರಿಕೊಂಡಿದೆ
ಳುಪಿಸಿ ಕಾನೂನು ಖಡ್ಗವ ಜನರ ಕಾಯಬೇಕಿದೆ
ಕ್ಕಳಕಿಯ ದೇಗುಲಗಳಲ್ಲಿ ಸಂಭ್ರಮವಿಲ್ಲದಂತಾಗಿದೆ
ಕ್ಕತನದಿ ಮಹಾಮಾರಿ ಕರೋನ ನುಸುಳಲನುವಾಗಿದೆ
ಕಾಯಿತನಂತೆಲ್ಲರ ಪ್ರಾಣವನ್ನು ತೆಗೆಯಲನುವಾಗಿದೆ     
ವಢವ ಎನುತೆಲ್ಲರೆದೆಯನು ಬಿಡದೆ ಹೊಡೆಯುತ್ತಿದೆ
ಕರಾರುಮಾಡದೆಲ್ಲರೂ ಸ್ವಚ್ಛತೆಯ ಕಾಪಾಡಬೇಕಿದೆ
ಳಿಸಿ ಮಣಿಸಿ ಶೇಷವಿಲ್ಲದಂತೆ ಹೊಡೆದೊಡಿಸಬೇಕಿದೆ
ಡ್ಡರಂತೆ ನಡೆಯದೆ ಜವಾಬ್ದಾರಿಯಿಂದ ನಡೆಯಬೇಕಿದೆ
ರಣಿಯೇ ಹತ್ತಿ ಉರಿಯುತ್ತಿರಲು ನಿಲಲು ಜಾಗವೆಲ್ಲಿದೆ
ಯವಂಚಕರ ಕುತಂತ್ರವ ಬಯಲಿಗೆಳೆಯಲೇ ಬೇಕಿದೆ
ರೀಕ್ಷೆಯೊಡ್ಡಿ ಪ್ರಕೃತಿ ಮನುಜರ ಎಚ್ವರಿಸುವಂತಿದೆ
ಲಕಾರಿಯಾಗದಂತೆ 'ಕೋವಿಡ್19' ತಡೆಯ ಬೇಕಿದೆ
ಯಕೆಗಳಿಗೆ ಮಿತಿಯ ಹೇರಿ ತಗ್ಗಿಬಗ್ಗಿ ಬಾಳ ಬೇಕಿದೆ
ಯವ ಪಡದೆ ಬಂದುದೆಲ್ಲವ ಸ್ವೀಕರಿಸುವಂತಾಗಿದೆ 
ನೆಯಿಂದಲೇ ಎಲ್ಲವನ್ನು ನಿರ್ವಹಿಸುವಂತಾಗಿದೆ
ಮಪುರಿಗೆಯೆಲ್ಲರನಟ್ಟಿ ವೈರಾಣು ತಂತ್ರವೆಸಗಿದೆ
ಜೆಯಿದ್ದರೂ ಆತಂಕದಿಂದ ದಿನವ ನೂಕಬೇಕಿದೆ
ವಲವಿಕೆ ಇಲ್ಲದೆ ಎಲ್ಲರ ಮನವು ಜಡ್ಡುಹಿಡಿದಿದೆ
ರಸಿದ್ಧಿವಿನಾಯಕನ ದಯೆ ಲೋಕಕ್ಕೆ ಬೇಕಾಗಿದೆ
ರವೇಗದಿಂದ ಪರಿಹಾರವನೆಲ್ಲ ಹುಡುಕ ಬೇಕಿದೆ
ಡ್ಯಂತರವ ಮಾಡುವವರ ಬಗ್ಗುಬಡಿಯ ಬೇಕಿದೆ
'ಸರ್ವೇ ಜನಾಃ ಸುಖಿನೋ ಭವಂತು' ಪಠಿಸಬೇಕಿದೆ
ದುಳದಿ ಹದವರಿತು ಸಹಕರಿಸುತೊಂದಾಗ ಬೇಕಿದೆ
'ಳ'ಗಳ ಬಳಸುವಂತೆ ಎಲ್ಲತಂತ್ರ ಬಳಸಬೇಕಿದೆ

No comments:

Post a Comment