Sunday 3 June 2018

ನೈದಾನಿಕ ಪರೀಕ್ಷೆ


ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಬೆಂಗಳೂರು-03.
ನೈದಾನಿಕ ಪರೀಕ್ಷೆ : 2018-19ಜೂನ್ ಮೊದಲವಾರ
ಹತ್ತನೆಯ ತರಗತಿ, ಪ್ರಥಮ ಭಾಷೆ ಕನ್ನಡ
                       ಕಾಲಾವಧಿ : 45 ನಿಮಿಷಗಳು
1.  ಸಾಮರ್ಥ್ಯ: ಉಕ್ತಲೇಖನ ಬರೆಯುವುದು (ಹತ್ತು ಪದಗಳು)
1.  ಶಾನುಭೋಗರು, 2. ವಿವೇಕಾನಂದ, 3. ಸಂಕಲ್ಪಗೀತೆ 4. ವಿಶ್ವೇಶ್ವರಯ್ಯ 5. ಮೋಕ್ಷಗೊಂಡಂ      6. ಲಕ್ಷ್ಮೀಶ 7. ವೃಕ್ಷಸಾಕ್ಷಿ  8. ಶಿವಕೋಟ್ಯಾಚಾರ್ಯ 9. ದುರ್ಗಸಿಂಹ 10. ಬ್ರಹ್ಮಾಂಡ.
2.  ಸಾಮಥ್ರ್ಯ: ಗದ್ಯಭಾಗವನ್ನು ಓದಿಕೊಂಡು ಪ್ರಶ್ನೆಗಳಿಗೆ ಉತ್ತರಿಸುವುದು.
  ಕೆಳಗಿನ ಲೇಖನ ಓದಿ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
ಪಾಂಚಾಲ ದೇಶದ ಅರಸು ದ್ರುಪದರಾಜ ಹಾಗೂ ಪಾಂಡವರು ಕೌರವರಿಗೆ ಶಸ್ತ್ರಾಭ್ಯಾಸವನ್ನು ಕಲಿಸಿದ ಗುರುಗಳಾದ ದ್ರೋಣಾಚಾರ್ಯರು ಒಂದೇ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದರು. ಸಹಪಾಠಿಗಳಾಗಿದ್ದ ಇಬ್ಬರ ನಡುವೆ ಗಾಢವಾದ ಸ್ನೇಹ ಬೆಳೆದಿತ್ತು. ವಿದ್ಯಾಭ್ಯಾಸ ಮುಗಿಸಿ ಪಾಂಚಾಲದೇಶಕ್ಕೆ ದೊರೆಯಾಗಿ ತಾನು ನೇಮಕವಾದಾಗ ಅರ್ಧರಾಜ್ಯವನ್ನು ಸಖನಾದ ದ್ರೋಣನಿಗೆ ಕೊಡುವುದಾಗಿ ಆಶ್ವಾಸನೆ ನೀಡಿದನು.  ಈರ್ವರೂ ವಿದ್ಯಾಭ್ಯಾಸ ಮುಗಿಸಿ ತಮ್ಮ ತಮ್ಮ ಗೃಹಗಳಿಗೆ ಹಿಂದಿರುಗಿದರು. ಬಡತನದಿಂದ ಸಂಸಾರ ಭಾರವನ್ನು ತೂಗಿಸುವುದು ದ್ರೋಣಾಚಾರ್ಯರಿಗೆ ಕಷ್ಟವಾಗುವುದು. ದ್ರುಪದನು ರಾಜ್ಯಭಾರವನ್ನು ವಹಿಸಿಕೊಂಡ ಮೇಲೆ ಗೆಳೆಯನನ್ನು ನೋಡಿ ಒಂದಿಷ್ಟು ಸಹಾಯವನ್ನು ಪಡೆಯಲು ದ್ರೋಣಾಚಾರ್ಯರು ಪಾಂಚಾಲದೇಶಕ್ಕೆ ಹೋಗುವರು. ಚಕ್ರವರ್ತಿಯಾಗಿದ್ದ ದ್ರುಪದನು ಅಧಿಕಾರ, ಅಂತಸ್ತು, ಐಶ್ವರ್ಯದ ಮದದಿಂದ ಆಪ್ತಮಿತ್ರನಾದ ದ್ರೋಣಚಾರ್ಯರಿಗೆ ಅವಮಾನವನ್ನು ಮಾಡುವನು.
ಪ್ರಶ್ನೆಗಳು :
1.  ಮೇಲಿನ ವಾಕ್ಯವೃಂದದಲ್ಲಿ ಸ್ನೇಹಿತ ಮತ್ತು ಭೂಪಾಲ ಎಂಬ ಅರ್ಥಬರುವ ಪದಗಳನ್ನು ಆರಿಸಿ ಬರೆಯಿರಿ.
2.  ದ್ರೋಣಾಚಾರ್ಯರು ದ್ರುಪದನ ಆಸ್ಥಾನಕ್ಕೆ ಏಕೆ ಹೋದರು?
3.  ಮೇಲಿನ ವಾಕ್ಯವೃಂದಲ್ಲಿ ಬಂದಿರುವ ಆಗಮ ಮತ್ತು ಸವರ್ಣದೀರ್ಘಸಂಧಿ ಪದಗಳನ್ನು ಆರಿಸಿ ಬಿಡಿಸಿ ಬರೆಯಿರಿ.
4.  ದ್ರೋಣಾಚಾರ್ಯರು ಶಸ್ತ್ರಾಭ್ಯಾಸವನ್ನು ಯಾರಿಗೆ ಮಾಡಿಸಿದರು?
3.  ಸಾಮರ್ಥ್ಯ: ಪದ್ಯಭಾಗವನ್ನು ಓದಿಕೊಂಡು ಸಾರಾಂಶ ಬರೆಯುವುದು
ಸುತ್ತಲು  ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ
4.  ಸಾಮರ್ಥ್ಯ: ವ್ಯಾಕರಣಾಂಶಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದು.
1)  ಕನ್ನಡ ವರ್ಣಮಾಲೆಯಲ್ಲಿ ಬರುವ ಮೂರ್ಧನ್ಯಾಕ್ಷರಗಳನ್ನು ಬರೆಯಿರಿ.
2)  , ಅಕ್ಷರಗಳು ಯಾವಾಗ ಆದೇಶವಾಗಿ ಬರುತ್ತವೆ?       
3)  ಗಳನ್ನು ಏನೆಂದು ಕರೆಯುತ್ತಾರೆ?       
4)  ಅಷ್ಟದಿಕ್ಪಾಲಕರುಪದದಲ್ಲಿರುವ ಸ್ವರ ಮತ್ತು ವ್ಯಂಜನವನ್ನು ಬಿಡಿಸಿ ಬರೆಯಿರಿ.
5)  ಕಂದ ಪದ್ಯದ ನಿಯಮಗಳನ್ನು ಬರೆಯಿರಿ.
6)  ದ್ವಿರುಕ್ತಿ ಮತ್ತು ನುಡಿಗಟ್ಟನ್ನು ಒಳಗೊಂಡ ಒಂದು ವಾಕ್ಯವನ್ನು ಬರೆಯಿರಿ.
7)  ಹಸಾದ, ದಿಟ್ಟಿ, ಕೋಗಿಲೆ ಪದಗಳ ತತ್ಸಮರೂಪವನ್ನು ಬರೆಯಿರಿ.
8)  ಉಪಮಾಲಂಕಾರಕ್ಕೂ ರೂಪಕಾಲಂಕಾರಕ್ಕೂ ಇರುವ ವ್ಯತ್ಯಾಸವೇನು? ಉದಾಹರಣೆಯೊಂದಿಗೆ ತಿಳಿಸಿರಿ.
5.  ಸಾಮರ್ಥ್ಯ: ಹೊಂದಿಸಿ ಬರೆಯುವುದು     
1. ಸಾಕ್ಷಿಮಾಡಿ              . ಸೂರ್ಯ
2. ಪುಣ್ಯ                       . ಆಕಾಶ
3. ಝಣಝಣ              . ತತ್ಪುರುಷ ಸಮಾಸ
4. ಬಾನು                      . ಕ್ರಿಯಾ ಸಮಾಸ
. ಅನುಕರಣಾವ್ಯ
) ಪಾಪ    
6. ಸಾಮರ್ಥ್ಯ: ಸೂಕ್ತ ಉತ್ತರಗಳನ್ನು ಕಂಡುಹಿಡಿಯುವುದು       
ಕೆಳಗಿನ ಪ್ರತಿಯೊಂದು ಹೇಳಿಕೆಗೂ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ ಅದರ ಕ್ರಮಾಕ್ಷರದೊಂದಿಗೆ ಸೂಚಿಸಿರುವ ಸ್ಥಳದಲ್ಲಿ ಬರೆಯಿರಿ.
1.  ತ್ರಿಪದಿಯಲ್ಲಿರುವ ಸಾಲುಗಳ ಸಂಖ್ಯೆ
) ಒಂದು ) ಎರಡು ) ಮೂರು ) ನಾಲ್ಕು
2.  ಪಡುವಣಎಂದರೆ ದಿಕ್ಕು.
) ಪೂರ್ವ ) ದಕ್ಷಿಣ ) ಉತ್ತರ ) ದಕ್ಷಿಣ
3.  ಪಾರಿಭಾಷಿಕ ಪದಗಳನ್ನು ಬಳಸುವಾಗ ಬಳಸುವ ಚಿಹ್ನೆ ___________
) ಉದ್ಧರಣ ) ಆವರಣ ) ವಿವರಣಾತ್ಮಕ ) ವಾಕ್ಯವೇಷ್ಠನ
4.  ದ್ವಿತೀಯಾ ವಿಭಕ್ತಿಯ ಕಾರಕಾರ್ಥ __________
) ಕತ್ರ್ರಾರ್ಥ ) ಕರ್ಮಾರ್ಥಕ ) ಕರಣಾರ್ಥಕ ) ಅಧಿಕರಣ
5.  ಅವನು ಹೆಚ್ಚಾಗಿ ಸಮಾಜದ ಮಧ್ಯದಲ್ಲಿಯೇ ಬಾಳುವನು. ವಾಕ್ಯದಲ್ಲಿರುವ ಕ್ರಿಯಾಪದದ ಕಾಲ ರೂಪ.
) ಭೂತಕಾಲ ) ವರ್ತಮಾನಕಾಲ ) ಭವಷ್ಯತ್ ಕಾಲ ) ಸಾಮಾನ್ಯ ಕಾಲ.
6.  ವಿದ್ಯಾರ್ಥಿಎಂಬ ಪದವೂ ವ್ಯಾಕರಣಾಂಶಕ್ಕೆ ಉದಾಹರಣೆ.
) ಸರ್ವನಾಮ   )  ರೂಢನಾಮ    ) ಅಂಕಿತನಾಮ                )  ಅನ್ವರ್ಥಕನಾಮ
7.  ಸಾಮಥ್ರ್ಯ: ವಾಕ್ಯರಚನೆ
1)  ಯಾವುದಾದರು ಒಂದು ಗಾದೆಯನ್ನು ವಿಸ್ತರಿಸಿ ಬರೆಯಿರಿ.
2)  ಸೂಕ್ತಕಾರಣವನ್ನು ತಿಳಿಸುತ್ತಾ ನಿಮ್ಮ ಮುಖ್ಯೋಪಾಧ್ಯಾಯಿನಿಯವರಿಗೆ ಒಂದು ರಜಪತ್ರವನ್ನು ಬರೆಯಿರಿ.
3)  ಕೆಳಗಿನ ಯಾವುದಾದರೂ ಒಂದು ವಿಷಯವನ್ನು ಕುರಿತು ಕಿರು ಪ್ರಬಂಧ ಬರೆಯಿರಿ. 
1)  ಗ್ರಂಥಾಲಯ  2) ಪರಿಸರ ಮಾಲಿನ್ಯ  3) ಸಾಮಾಜಿಕ ಪಿಡುಗುಗಳು
************

No comments:

Post a Comment